ವಿದೇಶಿಯರು ಐಪಿಎಲ್ ಆಡಬೇಕು, ಭಾರತೀಯರು ಯಾಕೆ ವಿದೇಶಿ ಕೂಟಗಳಲ್ಲಿ ಆಡಬಾರದು?


ಕೀರ್ತನ್ ಶೆಟ್ಟಿ ಬೋಳ, May 15, 2020, 6:00 PM IST

ವಿದೇಶಿಯರು ಐಪಿಎಲ್ ಆಡಬೇಕು, ಭಾರತೀಯರು ಯಾಕೆ ವಿದೇಶಿ ಕೂಟಗಳಲ್ಲಿ ಆಡಬಾರದು?

ವಿಶ್ವದಾದ್ಯಂತ ಕೋವಿಡ್-19 ವೈರಸ್ ತನ್ನ ಅಟ್ಟಹಾಸ ಆರಂಭಿಸಿದ ಬಳಿಕ ಎಲ್ಲ ಕ್ರೀಡಾ ಚಟುವಟಕೆಗಳು ಸ್ಥಗಿತವಾಗಿದೆ. ವಿಶ್ವಕ್ರಿಕೆಟ್ ಎದುರು ನೋಡುತ್ತಿದ್ದ ಐಪಿಎಲ್ ಸೀಸನ್ 13 ಕೂಡಾ ಕೋವಿಡ್ ಸೋಂಕಿನ ಕಾರಣ ಮುಂದೂಡಿಕೆಯಾಗಿದೆ. ಮುಂದೆ ಈ ವರ್ಷ ನಡೆಯುವ ಭರವಸೆಯೂ ಇಲ್ಲ. ನಿರಂತರ ಮೈದಾನದಲ್ಲಿ ಬೆವರು ಹರಿಸುತ್ತಿದ್ದ ಕ್ರೀಡಾಪಟುಗಳು ಸದ್ಯ ಮನೆಯಲ್ಲಿದ್ದಾರೆ. ಈ ಸಮಯದಲ್ಲಿ ಸಾಮಾಜಿಕ ಜಾಲತಾಣಗಳ ಮೂಲಕ ಲೈವ್ ಬಂದು ಹಲವಷ್ಟು ವಿಚಾರಗಳನ್ನು ಹಂಚಿಕೊಳ್ಳುತ್ತಿದ್ದಾರೆ.

ಈ ಮಧ್ಯೆ ಸುರೇಶ್ ರೈನಾ ಮತ್ತು ಇರ್ಫಾನ್ ಪಠಾಣ್ ಲೈವ್ ನಲ್ಲಿ ಭಾರತೀಯ ಆಟಗಾರರು ವಿದೇಶಿ ಕೂಟಗಳಲ್ಲಿ ಆಡುವ ಕುರಿತು ಚರ್ಚೆ ನಡೆಸಿದ್ದರು. ಭಾರತೀಯರಿಗೆ ವಿದೇಶದಲ್ಲಿ ಹೋಗಿ ಟಿ20 ಕೂಟ ಆಡಲು ಅವಕಾಶ ನೀಡಬೇಕೆಂದು ರೈನಾ ಹೇಳಿದ್ದರು. ಇದು ಈಗ ಚರ್ಚೆಗೆ ಗ್ರಾಸವಾಗಿದೆ.

ಬಿಸಿಸಿಐ ಅಡಿ ಬರುವ ಯಾವುದೇ ಭಾರತೀಯ ಆಟಗಾರ ವಿದೇಶಿ ಕೂಟಗಳಲ್ಲಿ ಭಾಗವಹಿಸುವಂತಿಲ್ಲ. ಒಂದು ವೇಳೆ ಭಾಗವಹಿಸಿದರೆ ಮತ್ತೆ ಬಿಸಿಸಿಐ ಅಡಿ ಆಡಲು ಅವಕಾಶವಿಲ್ಲ. ಇಂಗ್ಲೀಷ್ ಕೌಂಟಿಗಳಲ್ಲಿ ಆಡಲು ಅವಕಾಶವಿದೆ. (ಟೆಸ್ಟ್ ಕ್ರಿಕೆಟ್- ಬಿಸಿಸಿಐ ಅನುಮತಿ ಬೇಕು) ಇತರ ಯಾವುದೇ ಟಿ20 ಕೂಟಗಳಲ್ಲಿ ಭಾರತೀಯರು ಆಡುವಂತಿಲ್ಲ. ಒಂದು ವೇಳೆ ಆಡಲೇ ಬೇಕಾದರೆ ಬಿಸಿಸಿಐ ಗೆ ರಾಜೀನಾಮೆ ನೀಡಬೇಕು. ಅಂದರೆ ಬಿಸಿಸಿಐ ಅಡಿ ಯಾವುದೇ ಐಪಿಎಲ್, ಟೀಂ ಇಂಡಿಯಾ, ರಣಜಿ ಆಡುವಂತಿಲ್ಲ. ಯುವರಾಜ್ ಸಿಂಗ್ ಬಿಸಿಸಿಐಗೆ ಅನುಮತಿ ನೀಡಿ ಕೆನಡಾ ದ ಕೂಟದಲ್ಲಿ ಆಡಿದ್ದನ್ನು ಇಲ್ಲಿ ನೆನಪಿಸಬಹುದು.

ಸುರೇಶ್ ರೈನಾ ಹೇಳುವ ಪ್ರಕಾರ ಬಿಸಿಸಿಐ ಗುತ್ತಿಗೆಯಲ್ಲಿ ಇರದ ಆಟಗಾರರಿಗೆ ವಿದೇಶಿ ಕೂಟಗಳಲ್ಲಿ ಆಡುವ ಅವಕಾಶ ನೀಡಬೇಕು. (ಪ್ರಸ್ತುತ ಟೀಂ ಇಂಡಿಯಾದಲ್ಲಿ ಆಡುತ್ತಿರುವ 25-30 ಮಂದಿ ಆಟಗಾರರು ಗುತ್ತಿಗೆಯಲ್ಲಿ ಇರುತ್ತಾರೆ)

ಸುರೇಶ್ ರೈನಾ, ರಾಬಿನ್ ಉತ್ತಪ್ಪ ಮುಂತಾದ ಆಟಗಾರರು ಒಂದು ಕಾಲದಲ್ಲಿ ಟೀಂ ಇಂಡಿಯಾದಲ್ಲಿ ಮಿಂಚಿದವರು. ಆದರೆ ಈಗ ಅವಕಾಶಕ್ಕಾಗಿ ಕಾಯುತ್ತಿದ್ದಾರೆ. ಇಂತಹ ಆಟಗಾರರಿಗೆ ಟೀಂ ಇಂಡಿಯಾದಲ್ಲಿ ಸ್ಥಾನ ಸಿಗುತ್ತಿಲ್ಲ. ರಾಜ್ಯ ಮಂಡಳಿಗಳಲ್ಲೂ ಬಹಳಷ್ಟು ಪೈಪೋಟಿಯಿದೆ. ಯುವ ಆಟಗಾರರೇ ತುಂಬಿದ್ದಾರೆ. ರಣಜಿ ತಂಡಗಳಲ್ಲೂ ಸರಿಯಾದ ಸ್ಥಾನಮಾನ ಈ ಹಿರಿಯರಿಗೆ ಸಿಗುತ್ತಿಲ್ಲ. ಹಾಗಾಗಿ ಕೆಲವರು ರಾಜ್ಯ ತಂಡವನ್ನೇ ಬದಲಾವಣೆ ಮಾಡಿಕೊಳ್ಳುತ್ತಿದ್ದಾರೆ.

ಟೀಂ ಇಂಡಿಯಾ ಹೊರತು ಪಡಿಸಿ ಬೇರೆ ಎಲ್ಲೂ ಇಂತಹ ಸಂಪ್ರದಾಯವಿಲ್ಲ. ಇತರ ಎಲ್ಲಾ ದೇಶಗಳ ಆಟಗಾರರು ನಮ್ಮ ಐಪಿಎಲ್ ನಲ್ಲಿ ಆಡುತ್ತಾರೆ. ಇಲ್ಲಿನ ಸ್ಪರ್ಧಾತ್ಮಕತೆ ಹೆಚ್ಚಾಗಿರುವ ಕಾರಣ ಉತ್ತಮ ಕ್ರಿಕೆಟ್ ಆಡುತ್ತಾರೆ. ಉಪಖಂಡದ ಪಿಚ್ ಗಳ ಬಗ್ಗೆ, ಹವಾಗುಣದ ಬಗ್ಗೆ ತಿಳಿದುಕೊಳ್ಳುತ್ತಾರೆ. ಅದು ಅವರಿಗೆ ರಾಷ್ಟ್ರೀಯ ತಂಡದಲ್ಲೂ ಉಪಯೋಗವಾಗುತ್ತದೆ.

ಇಂಗ್ಲೆಂಡ್ ತಂಡದಲ್ಲಿ ಮಧ್ಯಮ ಕ್ರಮಾಂಕದಲ್ಲಿ ಆಡುತ್ತಿದ್ದ ಜೋಸ್ ಬಟ್ಲರ್ ಐಪಿಎಲ್ ನಲ್ಲಿ ಆರಂಭಿಕನಾಗಿ ಭರ್ಜರಿ ಯಶಸ್ಸು ಕಂಡರು. ನಂತರ ಇಂಗ್ಲೆಂಡ್ ತಂಡದಲ್ಲೂ ಆರಂಭಿಕ ಆಟಗಾರನಾದರು. ಕೇವಲ ಬೌಲರ್ ಆಗಿದ್ದ ಸುನೀಲ್ ನರೈನ್ ಐಪಿಎಲ್ ಕಾರಣದಿಂದ ಆಲ್ ರೌಂಡರ್ ಆದರು. ಐಪಿಎಲ್ ನಂತಹ ಕ್ರಿಕೆಟ್ ಕೂಟಗಳಿಂದ ಯುವ ಆಟಗಾರರು ಹಿರಿಯ ಆಟಗಾರರೊಂದಿಗೆ ಬಹಳಷ್ಟು ವಿಚಾರಗಳನ್ನು ಕಲಿಯುತ್ತಾರೆ. ಫಾರ್ಮ್ ಕಳೆದುಕೊಂಡಿರುವ ಆಟಗಾರ ಇಂತಹ ಕೂಟಗಳಲ್ಲಿ ಲಯಕ್ಕೆ ಮರಳುತ್ತಾರೆ. ಒಂದು ವೇಳೆ ಭಾರತೀಯ ಆಟಗಾರರು ವಿದೇಶಿ ಕೂಟಗಳಲ್ಲಿ ಆಡಿ ಉತ್ತಮ ಪ್ರದರ್ಶನ ತೋರಿದರೆ ಟೀಂ ಇಂಡಿಯಾಗೂ ಆಯ್ಕೆಯಾಗಬಹುದು.

ಒಂದು ವೇಳೆ ಬಿಸಿಸಿಐ ತನ್ನ ಆಟಗಾರರಿಗೆ ವಿದೇಶಿ ಕೂಟಗಳಲ್ಲಿ ಆಡಲು ಅವಕಾಶ ನೀಡಿದರೆ ಆಸ್ಟ್ರೇಲಿಯಾದ ಬಿಬಿಎಲ್, ಬಾಂಗ್ಲಾದೇಶದ ಬಿಪಿಎಲ್, ವೆಸ್ಟ್ ಇಂಡೀಸ್ ನ ಸಿಪಿಎಲ್ ಮುಂತಾದ ಪ್ರಮುಖ ಲೀಗ್ ಗಳು ಖಂಡಿತ ಅವಕಾಶ ನೀಡಬಹುದು.

ಆದರೆ ಇಲ್ಲಿ ಒಂದು ಸಮಸ್ಯೆಯೂ ಇದೆ. ಈ ಆಟಗಾರರು ವಿದೇಶಿ ಟಿ20 ಕೂಟದಲ್ಲಿ ಸಿಗುವ ಹಣ ಮೋಜಿನ ಕಾರಣದಿಂದ ಮತ್ತೆ ದೇಶಿಯ ತಂಡದಲ್ಲಿ ಸರಿಯಾದ ಪ್ರದರ್ಶನ ನೀಡುವುದಿಲ್ಲ. ವೆಸ್ಟ್ ಇಂಡೀಸ್ ಆಟಗಾರರನ್ನೇ ಇಲ್ಲಿ ಉದಾಹರಣೆಯಾಗಿ ಪರಿಗಣಿಸಬಹುದು.

ಕೀರ್ತನ್ ಶೆಟ್ಟಿ ಬೋಳ

ಟಾಪ್ ನ್ಯೂಸ್

BGV–BIMS

Belagavi: ಬಿಮ್ಸ್ ಆಸ್ಪತ್ರೆಯಲ್ಲಿ ಮತ್ತೊರ್ವ ಬಾಣಂತಿ ಮೃತ್ಯು; ಕುಟುಂಬಸ್ಥರ ಆಕ್ರಂದನ

RSS: ಮೋಹನ್‌ ಭಾಗವತರ ಮಂದಿರ,ಮಸೀದಿ ಹೇಳಿಕೆಗೆ ಈಗ ಆರೆಸ್ಸೆಸ್‌ ಪತ್ರಿಕೆ ಆಕ್ಷೇಪ

RSS: ಮೋಹನ್‌ ಭಾಗವತರ ಮಂದಿರ,ಮಸೀದಿ ಹೇಳಿಕೆಗೆ ಈಗ ಆರೆಸ್ಸೆಸ್‌ ಪತ್ರಿಕೆ ಆಕ್ಷೇಪ

Telangana: ಕಾನೂನು ಪಾಲನೆ ಕಡ್ಡಾಯ: ತೆಲುಗು ಚಿತ್ರರಂಗಕ್ಕೆ ತೆಲಂಗಾಣ ಸಿಎಂ ಖಡಕ್‌ ಮಾತು

Telangana: ಕಾನೂನು ಪಾಲನೆ ಕಡ್ಡಾಯ: ತೆಲುಗು ಚಿತ್ರರಂಗಕ್ಕೆ ತೆಲಂಗಾಣ ಸಿಎಂ ಖಡಕ್‌ ಮಾತು

Cong-ind-Map

Controversy: ಕಾಂಗ್ರೆಸ್‌ ಪೋಸ್ಟರ್‌ನಲ್ಲಿ ಪಿಒಕೆ ತಪ್ಪಾಗಿ ಚಿತ್ರಣ; ಬಿಜೆಪಿ ತೀವ್ರ ಆಕ್ರೋಶ

Tollywood: ಹೊಸ ವರ್ಷಕ್ಕೆ ಟಾಲಿವುಡ್‌ನಲ್ಲಿ ಸಾಲು ಸಾಲು ಹಳೆ ಸಿನಿಮಾಗಳು ರೀ- ರಿಲೀಸ್

Tollywood: ಹೊಸ ವರ್ಷಕ್ಕೆ ಟಾಲಿವುಡ್‌ನಲ್ಲಿ ಸಾಲು ಸಾಲು ಹಳೆ ಸಿನಿಮಾಗಳು ರೀ- ರಿಲೀಸ್

Kambala: ಡಿ.28-29ರಂದು 8ನೇ ವರ್ಷದ “ಮಂಗಳೂರು ಕಂಬಳ’: ಸಂಸದ ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

Kambala: ಡಿ.28-29ರಂದು 8ನೇ ವರ್ಷದ ‘ಮಂಗಳೂರು ಕಂಬಳ’: ಸಂಸದ ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

Bidar; ಖರ್ಗೆ ಆಪ್ತನಿಂದ ವಂಚನೆ, ಕೊಲೆ ಬೆದರಿಕೆ; ಪತ್ರ ಬರೆದಿಟ್ಟು ಗುತ್ತಿಗೆದಾರ ಆತ್ಮಹತ್ಯೆ

Bidar; ಖರ್ಗೆ ಆಪ್ತನಿಂದ ವಂಚನೆ, ಕೊಲೆ ಬೆದರಿಕೆ; ಪತ್ರ ಬರೆದಿಟ್ಟು ಗುತ್ತಿಗೆದಾರ ಆತ್ಮಹತ್ಯೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

kambalaHigh-tech touch for Kambala race

Kambala ಓಟಕ್ಕೆ ಹೈಟೆಕ್ ಸ್ಪರ್ಶ; ಗೇಟ್ ತೆರೆದ ಕೂಡಲೇ ಓಟ ಶುರು; ಇಲ್ಲಿದೆ ಸಮಗ್ರ ಮಾಹಿತಿ

JIO SPACE FIBER 1

JioSpace Fiber: ಭಾರತದಲ್ಲಿ ಮತ್ತೊಂದು ಇಂಟರ್ನೆಟ್ ಕ್ರಾಂತಿಗೆ ಜಿಯೋ ಮುನ್ನುಡಿ… ಏನಿದು.?

thumb news web exclusive uv (2) (1)

“ಈ ಕಾಯಿಲೆ” ಇರುವವರು ಅರಿಶಿನ ಹಾಕಿದ ಹಾಲು ಸೇವಿಸಬಾರದು…

thumb web ex (1) (1) (1) (1) (1) (1) copy (1)

ನೀವು ಮುಖಕ್ಕೆ ಅರಿಶಿನ ಹಚ್ತೀರಾ..? ಹಾಗಾದ್ರೆ ಈ ತಪ್ಪುಗಳನ್ನು ಮಾಡಿರೋದು ಪಕ್ಕಾ!

web exclusive keer

ಒಂದು ಜಾಹೀರಾತು ದೇಶಕ್ಕೆ ಬೆಂಕಿ ಹಚ್ಚಿತ್ತು.. ಏನಿದು ಪೆಪ್ಸಿಯ ನಂಬರ್ ಫೀವರ್

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

accident2

Gangolli: ಸ್ಕೂಟರ್‌ – ಬೈಕ್‌ ಢಿಕ್ಕಿ; ಗಾಯ

ತಿರುಚಿದ ದೇಶದ ನಕ್ಷೆ ಬಳಸಿದ್ದು ನಾಚಿಕೆಗೇಡು: ಬಿಜೆಪಿ ಟೀಕೆ

Congress Session: ತಿರುಚಿದ ದೇಶದ ನಕ್ಷೆ ಬಳಸಿದ್ದು ನಾಚಿಕೆಗೇಡು: ಬಿಜೆಪಿ ಟೀಕೆ

accident

Shirva: ರಿಕ್ಷಾ ಢಿಕ್ಕಿ; ಸ್ಕೂಟರ್‌ ಸವಾರನಿಗೆ ಗಾಯ

10

Bagalkot : ಸಕಲ ಸರ್ಕಾರಿ ಗೌರವಗಳೊಂದಿಗೆ ಯೋಧ ಮಹೇಶ್ ಮರೆಗೊಂಡ ಅಂತ್ಯಸಂಸ್ಕಾರ

Hunsur: ಬೈಕ್‌ನಿಂದ ಬಿದ್ದು ಹಿಂಬದಿ ಸವಾರ ಸಾವು

Hunsur: ಬೈಕ್‌ನಿಂದ ಬಿದ್ದು ಹಿಂಬದಿ ಸವಾರ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.