‘ಬಾಂಧವ್ಯ’ದ ಮೂಲಕ ರಕ್ತದಾನಿಗಳ ಜಾಲವನ್ನು ಹಬ್ಬಿಸಿದ ದಿನೇಶ್ ಬಾಂಧವ್ಯ
Team Udayavani, Jun 14, 2018, 4:12 PM IST
ಇಂದು ವಿಶ್ವ ರಕ್ತದಾನಿಗಳ ದಿನ. ರಕ್ತದಾನಕ್ಕೆ ಸಂಬಂಧಿಸಿದಂತೆ ನಮ್ಮ ದೇಶದಲ್ಲಿ ಇವತ್ತು ಹಲವಾರು ರೀತಿಯ ಜಾಗೃತಿ ಅಭಿಯಾನಗಳು ನಡೆಯುತ್ತಿವೆ. ರಕ್ತದಾನದ ಮಹತ್ವವನ್ನು ಅರಿತಿರುವ ನಮ್ಮ ಯುವ ಜನಾಂಗ ಇಂದು ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನವನ್ನು ಮಾಡುತ್ತಿರುವುದು ಖುಷಿಯ ವಿಚಾರವೇ ಆಗಿದ್ದರೂ, ರಕ್ತದಾನದ ಮಹತ್ವ ಕುರಿತಂತೆ ಇನ್ನೂ ಗಮನಾರ್ಹ ಬದಲಾವಣೆ ಆಗಬೇಕಾಗಿರುವುದು ಅತ್ಯಗತ್ಯವಾಗಿದೆ. ಅದರಲ್ಲೂ ಸಾಮಾಜಿಕ ಜಾಲತಾಣಗಳ ಪರಿಣಾಮಕಾರಿ ಬಳಕೆಯ ಮೂಲಕ ರಕ್ತದಾನಿಗಳು ಮತ್ತು ರಕ್ತದ ಅಗತ್ಯತೆಯುಳ್ಳವರ ನಡುವೆ ಒಂದು ಪರಿಣಾಮಕಾರಿ ಕೊಂಡಿಯನ್ನು ಬೆಸೆಯುವ ಕೆಲಸ ಇನ್ನಷ್ಟು ಉತ್ತಮ ರೀತಿಯಲ್ಲಿ ನಡೆಯಬೇಕಾಗಿದೆ.
ಈ ನಿಟ್ಟಿನಲ್ಲಿ ವಿಶ್ವ ರಕ್ತದಾನಿಗಳ ದಿನವಾಗಿರುವ ಇಂದು ಕರ್ನಾಟಕ ರಾಜ್ಯಾದ್ಯಂತ ರಕ್ತದಾನಿಗಳ ಮಹಾಜಾಲವನ್ನೇ ಬೆಸೆದಿರುವ ‘ಬಾಂಧವ್ಯ ಕರ್ನಾಟಕ’ ಎಂಬ ರಕ್ತದಾನಿಗಳ Whats App ಗುಂಪು ಮತ್ತು http://bandhavyabloodkarnataka.com/ ವೆಬ್ ಸೈಟ್ ಗಳ ರಚನೆಯ ರೂವಾರಿ ಕರಾವಳಿಯ ಸಾಸ್ತಾನದ ಉತ್ಸಾಹಿ ತರುಣ ದಿನೇಶ್ ಬಾಂಧವ್ಯ ಅವರನ್ನು ಹಾಗೂ ಅವರ ಈ ‘ಬಾಂಧವ್ಯ’ ರಕ್ತದಾನಿಗಳ ಗುಂಪಿನ ಕಾರ್ಯಚಟುವಟಿಕೆಗಳನ್ನು ನಮ್ಮ ಓದುಗರಿಗೆ ಪರಿಚಯಿಸುವ ಉದ್ದೇಶಕ್ಕಾಗಿ ಈ ಲೇಖನ…
ಊರಿನವರ ರಕ್ತದ ಅವಶ್ಯಕತೆ ಪೂರೈಕೆಗೆ ಹುಟ್ಟಕೊಂಡ ಬಾಂಧವ್ಯ ರಾಜ್ಯವ್ಯಾಪಿಯಾಯಿತು…
ಬಾಂಧವ್ಯ ಗುಂಪಿನ ಕಾರ್ಯಚಟುವಟಿಕೆಗಳ ಮೂಲಕ ಇಂದು ನಾಡಿನಾದ್ಯಂತ ದಿನೇಶ್ ಬಾಂಧವ್ಯ ಎಂದೇ ಪರಿಚಿತರಾಗಿರುವ ಇವರು ಪ್ರಾರಂಭದಲ್ಲಿ ಸುಮಾರು 13 ವರ್ಷಗಳ ಹಿಂದೆ ತನ್ನ ಊರು ಸಾಸ್ತಾನ ಭಾಗದ ಆಸುಪಾಸಿನ ರಕ್ತದಾನಿಗಳ ವಿವರಗಳನ್ನು ಸಂಗ್ರಹಿಸಿ ಅಗತ್ಯ ಸಂದರ್ಭದಲ್ಲಿ ಅವರನ್ನು ಸಂಪರ್ಕಿಸಿ ರೋಗಿಗಳ ತುರ್ತು ಅವಶ್ಯಕತೆಗೆ ರಕ್ತ ಪೂರೈಕೆಯ ವ್ಯವಸ್ಥೆಯನ್ನು ಮಾಡಿಕೊಡುತ್ತಿದ್ದರು. ಸಾಮಾಜಿಕ ಜಾಲತಾಣಗಳಿಲ್ಲದ ಆ ದಿನಗಳಲ್ಲಿ ಮೊಬೈಲ್ ಕಾಂಟಾಕ್ಟ್ ಗಳಲ್ಲಿಯೇ ರಕ್ತದ ಗುಂಪನ್ನು ನಮೂದು ಮಾಡಿಕೊಳ್ಳುವ ಮೂಲಕ (ಉದಾ: ದಿನೇಶ್ ಅವರ ರಕ್ತದ ಗುಂಪು O+ ಆಗಿದ್ದಲ್ಲಿ ಅವರ ಕಾಂಟಾಕ್ಟ್ ಅನ್ನು O+ ದಿನೇಶ್ ಎಂದು ಸೇವ್ ಮಾಡಿಕೊಳ್ಳುವುದು) ಅಗತ್ಯ ಸಂದರ್ಭದಲ್ಲಿ ಸೂಕ್ತ ದಾನಿಗಳನ್ನು ಸುಲಭವಾಗಿ ಸಂಪರ್ಕಿಸುವ ವ್ಯವಸ್ಥೆಯನ್ನು ಇವರು ಮಾಡಿಕೊಂಡಿದ್ದರು.
ಜಾಲ ಬೆಳೆದು ರಾಜ್ಯವ್ಯಾಪಿಯಾಯಿತು
ದಿನೇಶ್ ಅವರು ಹೇಳುವಂತೆ, ಸ್ಥಳೀಯವಾಗಿ ರೋಗಿಗಳ ರಕ್ತದ ಅವಶ್ಯಕತೆಯನ್ನು ಪೂರೈಸುತ್ತಿದ್ದ ಈ ವ್ಯವಸ್ಥೆ ದಿನಕಳೆದಂತೆ ದಕ್ಷಿಣ ಕನ್ನಡ – ಉಡುಪಿ ಜಿಲ್ಲೆಗಳಿಗೆ ಹಬ್ಬಿ ಇಂದು ರಾಜ್ಯವ್ಯಾಪಿಯಾಗಿದೆ. ಮಣಿಪಾಲದ ಕೆ.ಎಂ.ಸಿ. ಆಸ್ಪತ್ರೆಗೆ ಬರುವ ಹೊರ ಜಿಲ್ಲೆಗಳ ರೋಗಿಗಳ ಕಡೆಯವರಲ್ಲಿ ಕೆಲವು ಆಸಕ್ತ ಉತ್ಸಾಹಿಗಳು ಬಾಂಧವ್ಯದ ಕಾರ್ಯನಿರ್ವಹಣೆಯ ಬಗ್ಗೆ ತಿಳಿದುಕೊಂಡು ಬಳಿಕ ತಮ್ಮ ಊರುಗಳಲ್ಲಿಯೂ ರಕ್ತದಾನಿಗಳ ಮಾಹಿತಿ ಜಾಲವನ್ನು ಬೆಸೆದು ಬೆಳೆಸಿದರ ಪರಿಣಾಮ ಇಂದು ‘ಬಾಂಧವ್ಯ’ ರಕ್ತದಾನಿಗಳ 14 ವಾಟ್ಸ್ಯಾಪ್ ಬಳಗಗಳಿವೆ. ಇದರಲ್ಲಿ ಒಂದು ಬಳಗ ಕೇವಲ ಮಹಿಳಾ ರಕ್ತದಾನಿಗಳಿಗಾಗಿಯೇ ಮೀಸಲಾಗಿರುವ ಬಳಗವಾಗಿದೆ. ಕರಾವಳಿ, ಬೆಂಗಳೂರು, ಮೈಸೂರು, ಹುಬ್ಬಳ್ಳಿ-ಧಾರವಾಢ, ವಿಜಯಪುರ, ದಾವಣಗೆರೆ, ಮಂಡ್ಯ, ಹಾಸನ, ಶಿವಮೊಗ್ಗ… ಹೀಗೆ ಕರ್ನಾಟಕದ ಬಹುತೇಕ ಎಲ್ಲಾ ಜಿಲ್ಲೆಗಳಲ್ಲಿ ಯಾರಗಾದರೂ ತುರ್ತು ರಕ್ತದ ಅವಶ್ಯಕತೆಯಿದ್ದರೆ ಶೀಘ್ರವಾಗಿ ಒದಗಿಸಿಕೊಡುವ ಜಾಲವಾಗಿ ‘ಬಾಂಧವ್ಯ’ ಇಂದು ಬೆಳೆದು ನಿಂತಿದೆ.
ವಾಟ್ಸ್ಯಾಪ್ ಗ್ರೂಪ್ ಗಳಲ್ಲಿದೆ ಶಿಸ್ತು
ಬಾಂಧವ್ಯ ವಾಟ್ಸ್ಯಾಪ್ ಗ್ರೂಪ್ ಗಳು ಶಿಸ್ತುಬದ್ಧವಾಗಿ ಕಾರ್ಯನಿರ್ವಹಿಸುತ್ತಿವೆ. 14 ಗ್ರೂಪ್ ಗಳಿಗೂ ಒಬ್ಬೊಬ್ಬರು ಕಾರ್ಯದರ್ಶಿಗಳಿದ್ದು ಆಯಾಯ ಗುಂಪಿನ ಕಾರ್ಯದರ್ಶಿ ತನ್ನ ಗುಂಪಿನಲ್ಲಿ ಹಾಕಲಾಗುವ ರಕ್ತದ ಬೇಡಿಕೆಗಳನ್ನು ಪರಿಶೀಲಿಸಿ ಅವುಗಳ ಒದಗಿಸುವಿಕೆಗೆ ಬೇಕಾಗಿರುವ ವ್ಯವಸ್ಥೆಯನ್ನು ಮಾಡುವ ಜವಾಬ್ದಾರಿಯನ್ನು ಹೊಂದಿರುತ್ತಾರೆ. ಮಾತ್ರವಲ್ಲದೇ ಗ್ರೂಪಿನ ನಿಯಮಗಳನ್ನು ಮೀರಿ ರಕ್ತದಾನಕ್ಕೆ ಸಂಬಂಧಿಸಿರದ ಯಾವುದೇ ಇತರೇ ಮಾಹಿತಿಗಳನ್ನು ಹಾಕುವ ಸದಸ್ಯರನ್ನು 2 ದಿನಗಳ ಕಾಲ ಗುಂಪಿನಿಂದ ಹೊರಹಾಕುವ ಪರಿಪಾಠವನ್ನು ಇಲ್ಲಿ ಪಾಲಿಸಲಾಗುತ್ತಿದೆ. ಈ ಕಾರಣದಿಂದಲೇ ಬೇರೆಲ್ಲಾ ವಾಟ್ಸ್ಯಾಪ್ ಬ್ಲಡ್ ಗ್ರೂಪ್ ಗಳಿಗಿಂತ ‘ಬಾಂಧವ್ಯ’ ಗ್ರೂಪ್ ಹೆಚ್ಚು ಪರಿಣಾಮಕಾರಿಯಾಗಿ ಹಾಗೂ ನಂಬಿಕಾರ್ಹವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗಿದೆ.
ರಕ್ತದಾನಿಗಳು ಮತ್ತು ರಕ್ತದ ಅಗತ್ಯವಿರುವವರ ನಡುವೆ ‘ಬಾಂಧವ್ಯ’ ಬೆಸೆಯುವಿಕೆ ಹೀಗೆ…
ಮೊದಲಿಗೆ ರಕ್ತದ ಅವಶ್ಯಕತೆ ಇರುವವರು ದಿನೇಶ್ (9964888970) ಅವರನ್ನು ಸಂಪರ್ಕಿಸಿ ರಕ್ತದ ಗುಂಪು, ದಾಖಲಾಗಿರುವ ಆಸ್ಪತ್ರೆ, ಅಗತ್ಯವಿರುವ ಯೂನಿಟ್ ಗಳು ಇತ್ಯಾದಿ ಮಾಹಿತಿಗಳನ್ನು ಸೂಕ್ತ ಸಂಪರ್ಕ ಸಂಖ್ಯೆಯೊಂದಿಗೆ ನೀಡಿದಲ್ಲಿ, ಈ ಮಾಹಿತಿಗಳನ್ನು ಗ್ರೂಪ್ ಗಳಲ್ಲಿ ಶೇರ್ ಮಾಡಲಾಗುವುದು. 14 ಗ್ರೂಪ್ ಗಳಲ್ಲಿ ಶೇರ್ ಆದ ಸಂದೇಶವನ್ನು ನೋಡಿ ಸದ್ರಿ ಆಸ್ಪತ್ರೆಗೆ ಸಮೀಪದಲ್ಲಿರುವ ರಕ್ತದಾನಿಗಳು ರಕ್ತದಾನವನ್ನು ಮಾಡುವ ಮೂಲಕ ಸದ್ರಿ ರೋಗಿಯ ರಕ್ತದ ಬೇಡಿಕೆ ಪೂರೈಸಲಾಗುತ್ತದೆ. ಮತ್ತು ಒಮ್ಮೆ ಈ ರೀತಿಯಾಗಿ ರಕ್ತದಾನಿಗಳ ವ್ಯವಸ್ಥೆಯಾದನಂತರ ಎಲ್ಲಾ ಗ್ರೂಪುಗಳಿಗೂ ಇದಕ್ಕೆ ಸಂಬಂಧಿಸಿದ ಸಂದೇಶಗಳನ್ನು ಕಳುಹಿಸಲಾಗುವುದು. ಹೀಗೆ ಮಾಡುವುದರಿಂದ ರಕ್ತದ ಅವಶ್ಯಕತೆ ಪೂರೈಕೆಗೊಂಡ ಬಳಿಕವೂ ರಕ್ತ ಬೇಕಾಗಿದೆ ಅನ್ನುವ ಒಂದೇ ಸಂದೇಶವು ಮತ್ತೆ ಮತ್ತೆ ಶೇರ್ ಆಗುವುದು ತಪ್ಪುತ್ತದೆ. ಮತ್ತು ರಕ್ತದ ಅವಶ್ಯಕತೆ ಇದೆ ಎನ್ನುವ ಸಂದೇಶವನ್ನು ಶೇರ್ ಮಾಡುವಾಗ ಅಂದಿನ ದಿನಾಂಕವನ್ನು ಸಂದೇಶದ ಪ್ರಾರಂಭದಲ್ಲಿ ನಮೂದಿಸುವುದರಿಂದ ತಿಂಗಳುಗಳಗಟ್ಟಳೆ ಈ ಸಂದೇಶವು ವಾಟ್ಸ್ಯಾಪ್ ನಲ್ಲಿ ಶೇರ್ ಆಗುವುದೂ ಸಹ ತಪ್ಪುವುದು.
ಬಾಂಧವ್ಯ ರಕ್ತದಾನಿಗಳ ಗುಂಪಿನ ವಿಶೇಷತೆಗಳು:
– ರಕ್ತದಾನ ಮತ್ತು ರಕ್ತದಾನ ಸಂಬಂಧಿತ ವಿಷಯಗಳಿಗೆ ಮಾತ್ರವೇ ಸೀಮಿತವಾಗಿರುವ ಗುಂಪು.
– ಬಾಂಧವ್ಯ ವೆಬ್ ಸೈಟ್ ನಲ್ಲಿ 4500 ಜನ ಮತ್ತು 14 Whats App ಗ್ರೂಪ್ ಗಳಲ್ಲಿ ಸುಮಾರು 3000 ಜನ ರಕ್ತದಾನಿಗಳಿದ್ದು, ತುರ್ತು ಸಂದರ್ಭದಲ್ಲಿ ರಕ್ತದ ಅವಶ್ಯಕತೆಯನ್ನು ಪೂರೈಸಲು ಸನ್ನದ್ಧ.
– ಪ್ರತೀ Whats App ಗುಂಪಿಗೂ ಒಬ್ಬೊಬ್ಬ ಕಾರ್ಯದರ್ಶಿಗಳಿದ್ದು, ಅವರು ತಮ್ಮ ತಮ್ಮ ಗುಂಪುಗಳಲ್ಲಿ ನಡೆಯುವ ಚಟುವಟಿಕೆಗಳನ್ನು ನಿಯಂತ್ರಿಸುತ್ತಾರೆ ಮತ್ತು ತಮ್ಮ ಗ್ರೂಪ್ ಗಳಿಗೆ ಬರುವ ರಕ್ತದ ಅವಶ್ಯಕತೆಯಿದೆ ಎಂಬ ಸಂದೇಶಗಳನ್ನು ಪರಿಶೀಲಿಸಿ ಅಗತ್ಯ ವ್ಯವಸ್ಥೆಗೆ ಕ್ರಮ ತೆಗೆದುಕೊಳ್ಳುತ್ತಾರೆ.
– ಕರ್ನಾಟಕದ ಬಹುತೇಕ ಎಲ್ಲಾ ಜಿಲ್ಲೆಗಳ ರಕ್ತದಾನಿಗಳ ಮಾಹಿತಿಯನ್ನು ಒಳಗೊಂಡಿರುವ ‘ಬಾಂಧವ್ಯ’ Whats App ಗುಂಪು ಮತ್ತು ‘ಬಾಂಧವ್ಯ’ ವೆಬ್ ಸೈಟ್ (www.bandhavyabloodkarnataka.com).
– ಈ ಬ್ಲಡ್ ಗ್ರೂಪ್ ಗಳಲ್ಲಿ ಯಾವುದೇ ಸದಸ್ಯರು ಬೇರೆ ಸಂದೇಶಗಳನ್ನು ಹಾಕಿದಲ್ಲಿ ಅಂತಹ ಸದಸ್ಯರನ್ನು ಗ್ರೂಪಿನಿಂದ 2 ದಿನಗಳ ಕಾಲ ರಿಮೂವ್ ಮಾಡಿ ಎರಡು ದಿನಗಳ ಬಳಿಕ ಅವರನ್ನು ಮತ್ತೆ ಸೇರಿಸುವ ವ್ಯವಸ್ಥೆಯ ಶಿಸ್ತು ಕ್ರಮ ಮಾದರಿ.
ಸುಮಾರು 13 ವರ್ಷಗಳಿಂದ ರಕ್ತದಾನಿಗಳು ಮತ್ತು ರಕ್ತದ ಅವಶ್ಯಕತೆ ಇರುವವರ ನಡುವೆ ಬಾಂಧವ್ಯವನ್ನು ಬೆಸೆಯುವ ಕಾರ್ಯವನ್ನು ಯಶಸ್ವಿಯಾಗಿ ನಡೆಸಿಕೊಂಡು ಬಂದಿರುವ ದಿನೇಶ್ ಬಾಂಧವ್ಯ ಹಾಗೂ ಅವರ ಉತ್ಸಾಹಿ ತಂಡವನ್ನು ‘ವಿಶ್ವ ರಕ್ತದಾನಿಗಳ’ ದಿನವಾಗಿರುವ ಇಂದು ಗುರುತಿಸಿ ಅವರ ನಿಸ್ವಾರ್ಥ ಸೇವೆಯನ್ನು ಗೌರವಿಸುವ ಮೂಲಕ ಅವರ ಈ ಸಮಾಜಮುಖಿ ಕಾರ್ಯಕ್ಕೆ ಇನ್ನಷ್ಟು ಪ್ರೋತ್ಸಾಹ ನೀಡುವ ಕಿರುಪ್ರಯತ್ನ ನಮ್ಮದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kambala ಓಟಕ್ಕೆ ಹೈಟೆಕ್ ಸ್ಪರ್ಶ; ಗೇಟ್ ತೆರೆದ ಕೂಡಲೇ ಓಟ ಶುರು; ಇಲ್ಲಿದೆ ಸಮಗ್ರ ಮಾಹಿತಿ
JioSpace Fiber: ಭಾರತದಲ್ಲಿ ಮತ್ತೊಂದು ಇಂಟರ್ನೆಟ್ ಕ್ರಾಂತಿಗೆ ಜಿಯೋ ಮುನ್ನುಡಿ… ಏನಿದು.?
“ಈ ಕಾಯಿಲೆ” ಇರುವವರು ಅರಿಶಿನ ಹಾಕಿದ ಹಾಲು ಸೇವಿಸಬಾರದು…
ನೀವು ಮುಖಕ್ಕೆ ಅರಿಶಿನ ಹಚ್ತೀರಾ..? ಹಾಗಾದ್ರೆ ಈ ತಪ್ಪುಗಳನ್ನು ಮಾಡಿರೋದು ಪಕ್ಕಾ!
ಒಂದು ಜಾಹೀರಾತು ದೇಶಕ್ಕೆ ಬೆಂಕಿ ಹಚ್ಚಿತ್ತು.. ಏನಿದು ಪೆಪ್ಸಿಯ ನಂಬರ್ ಫೀವರ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Bangladesh ಮತದಾನದ ಅರ್ಹ ವಯಸ್ಸು 17ಕ್ಕಿಳಿಸಲು ಚಿಂತನೆ
Yamuna ನದಿಯಲ್ಲಿ ಡಾ| ಮನಮೋಹನ್ ಸಿಂಗ್ ಚಿತಾಭಸ್ಮ ವಿಸರ್ಜನೆ
Shri Krishna Matha; ವಿಶ್ವಮಟ್ಟದಲ್ಲಿ ಭಗವದ್ಗೀತೆ ಜಾಗೃತಿ: ಪುತ್ತಿಗೆ ಶ್ರೀ
ICC Awards 2024: ಐಸಿಸಿ ಪ್ರಶಸ್ತಿಗೆ ಅರ್ಷದೀಪ್ ಸಿಂಗ್, ಸ್ಮೃತಿ ಮಂಧನಾ ನಾಮ ನಿರ್ದೇಶ
Padubidri: ಮೊಬೈಲ್ ಕೊಡಿಸದ ತಾಯಿ; ಸಾಯಲು ಹೆದ್ದಾರಿಗೋಡಿದ ಮಗ; ಲಾರಿ ಡಿಕ್ಕಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.