ವಿಶ್ವ ಕ್ರಿಕೆಟ್ ನಲ್ಲಿ ಮಿಂಚಬೇಕಿದೆ ‘ಶಿಶು’ ತಂಡಗಳು


Team Udayavani, Sep 20, 2018, 6:07 PM IST

afghan-600.jpg

ಮೊನ್ನೆ ತಾನೆ ಭಾರತ ಮತ್ತು ಹಾಂಕಾಂಗ್ ನಡುವೆ ಏಷ್ಯಾ ಕಪ್ ಲೀಗ್ ಪಂದ್ಯಾಟ ನಡೆಯುತ್ತಿದ್ದ ಸಂದರ್ಭದಲ್ಲಿ ಎರಡು ಬಾರಿಯ ವಿಶ್ವಚಾಂಪಿಯನ್ನರ ವಿರುದ್ಧ ಕ್ರಿಕೆಟ್ ಲೋಕದಲ್ಲಿ ಇದೀಗ ತಾನೇ ಕಣ್ಣುಬಿಡುತ್ತಿರುವ ಹಾಂಕಾಂಗ್ ತಂಡ ಹೋರಾಟ ನೀಡಿದ ರೀತಿಯನ್ನು ಭಾರತ ಮಾತ್ರವಲ್ಲದೇ ವಿಶ್ವದ ಕ್ರಿಕೆಟ್ ಪ್ರೇಮಿಗಳೆಲ್ಲರೂ ಅಚ್ಚರಿಯಿಂದ ನೋಡಿದ್ದಾರೆ. ಇದೆ ಸಂದರ್ಭದಲ್ಲಿ ಕರ್ನಾಟಕದ ಖ್ಯಾತ ಕ್ರೀಡಾ ಬರಹಗಾರರೊಬ್ಬರು ತಮ್ಮ ಫೇಸ್ಬುಕ್ ಅಕೌಂಟ್ ನಲ್ಲಿ ಈ ರೀತಿಯಾಗಿ ಬರೆದುಕೊಂಡಿದ್ದರು, ‘ಕ್ರಿಕೆಟ್ ಆಟ ಜಗತ್ತಿನ ಇತರ ರಾಷ್ಟ್ರಗಳಿಗೆ ಹಬ್ಬಬೇಕಾದರೆ ಭಾರತ ಈ ಪಂದ್ಯ ಸೋಲಲೇಬೇಕು’ – ಹೌದು ಆ ಕ್ಷಣಕ್ಕೆ ಈ ಮಾತು ಸತ್ಯವಾದುದೆಂಣಿಸಿದ್ದು ಸುಳ್ಳಲ್ಲ. ಇಲ್ಲವಾದರೇ ನೀವೇ ಯೋಚಿಸಿ ಸುದೀರ್ಘವಾದ ಇತಿಹಾಸವನ್ನು ಹೊಂದಿರುವ ಜನಪ್ರಿಯ ಆಟಗಳಲ್ಲಿ ಒಂದಾಗಿರುವ ಈ ಕ್ರಿಕೆಟ್ ಜಗತ್ತಿನ ಕಾಲು ಭಾಗಕ್ಕೂ ಹಬ್ಬಿಲ್ಲ!

ಹೌದು, ಏಷ್ಯಾ ಖಂಡದಲ್ಲಿ ಭಾರತ, ಪಾಕಿಸ್ತಾನ, ಶ್ರೀಲಂಕಾ, ಬಾಂಗ್ಲಾದೇಶದಂತಹ ವಿಶ್ವದ ಬಲಿಷ್ಠ ಕ್ರಿಕೆಟ್ ತಂಡಗಳ ಜೊತೆಗೆ ಅಫ್ಘಾನಿಸ್ಥಾನ, ನೇಪಾಳ, ಹಾಂಕಾಂಗ್, ಯು.ಎ.ಇ., ಒಮಾನ್, ಸೌದಿ ಅರೇಬಿಯಾ, ಸಿಂಗಾಪುರ ಸೇರಿದಂತೆ ಇನ್ನೂ ಕೆಲವು ದೇಶಗಳ ಕ್ರಿಕೆಟ್ ತಂಡಗಳಿವೆ. ಆದರೆ ಇಲ್ಲಿ ಮೊದಲು ಹೇಳಿದ ನಾಲ್ಕು ದೇಶಗಳದ್ದೇ ಪಾರುಪತ್ಯ. ಇನ್ನುಳಿದಂತೆ, ಆಸ್ಟ್ರೇಲಿಯಾ, ನ್ಯೂಝಿಲ್ಯಾಂಡ್, ಇಂಗ್ಲಂಡ್, ವೆಸ್ಟ್ ಇಂಡೀಸ್, ದಕ್ಷಿಣ ಆಫ್ರಿಕಾ, ಜಿಂಬಾಬ್ವೆ, ಕಿನ್ಯಾ, ಅಯರ್ಲ್ಯಾಂಡ್ ಮುಂತಾದ ತಂಡಗಳಿವೆ. ಇನ್ನು ಫುಟ್ಟಾಲ್ ನಲ್ಲಿರುವಂತೆ ಯೂರೋಪಿಯನ್ ದೇಶಗಳಾಗಲಿ, ಆಫ್ರಿಕಾದ ಇತರೇ ದೇಶಗಳಾಗಲಿ ಅಥವಾ ಅಮೆರಿಕಾ ಮತ್ತು ಲ್ಯಾಟಿನ್ ಅಮೆರಿಕಾ ದೇಶಗಳಾಗಲಿ ಕ್ರಿಕೆಟ್ ಹುಚ್ಚನ್ನು ಬೆಳೆಸಿಕೊಳ್ಳದಿರುವ ಕಾರಣ ಮಾತ್ರ ನಿಗೂಢ!

ನೀವೊಮ್ಮೆ ಗಮನಿಸಿ ನೋಡಿ ಪ್ರತೀ ಬಾರಿ ಕ್ರಿಕೆಟ್ ವಿಶ್ವಕಪ್ ಬಂದಾಗಲೂ ಕ್ರಿಕೆಟ್ ಪ್ರೇಮಿಗಳ ಮನದಲ್ಲಿ ಮೂಡುವುದು ಅವೇ ನಾಲ್ಕೈದು ಕ್ರಿಕೆಟ್ ತಂಡಗಳು. ಪ್ರತೀಬಾರಿ ಅಂತಿಮ ಹಣಾಹಣಿ ಆ ನಾಲ್ಕೈದು ತಂಡಗಳ ನಡುವೆಯೇ ನಡೆಯುತ್ತಿರುತ್ತದೆ. ಅದೇ ಕಾರಣಕ್ಕಾಗಿ ಏಷ್ಯಾ, ಆಫ್ರಿಕಾ ಖಂಡಗಳಲ್ಲಿ ಮತ್ತು ಇಂಗ್ಲಂಡ್ ನೆಲದಲ್ಲಿ ನಡೆಯುವ ವಿಶ್ವಕಪ್ ಅಥವಾ ಇನ್ಯಾವುದೇ ಪ್ರತಿಷ್ಠಿತ ಟೂರ್ನಮೆಂಟ್ ಗಳನ್ನು ಹೊರತುಪಡಿಸಿ ಇನ್ನುಳಿದ ಸ್ಥಳಗಳಲ್ಲಿ ನಡೆಯುವ ಕೂಟಗಳನ್ನು ಯಶಸ್ವಿಗೊಳಿಸುವುದೇ ಐಸಿಸಿಗೆ ಒಂದು ದೊಡ್ಡ ತಲೆನೋವಿನ ವಿಷಯವಾಗಿರುತ್ತದೆ. ಇದಕ್ಕೆ 2007ರಲ್ಲಿ ಕೆರಿಬಿಯನ್ ನಾಡಿನಲ್ಲಿ ನಡೆದ ವಿಶ್ವಕಪ್ ಮತ್ತು ಚಾಂಪಿಯನ್ಸ್ ಟ್ರೋಫಿಗಳಂತಹ ಕೆಲವು ಕೂಟಗಳೇ ಸಾಕ್ಷಿ.

105 ದೇಶಗಳಲ್ಲಿ ಶಾಶ್ವತ ಸದಸ್ಯ ರಾಷ್ಟ್ರಗಳು 11 ಮಾತ್ರ !
ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯ (ICC) ಸದಸ್ಯ ರಾಷ್ಟ್ರಗಳು 105 ಇದ್ದರೂ ಇವುಗಳಲ್ಲಿ ಶಾಶ್ವತ ಸದಸ್ಯ ರಾಷ್ಟ್ರಗಳು 11 ಮಾತ್ರ. ಅಂದರೆ ಈ ಹನ್ನೊಂದು ದೇಶಗಳಿಗೆ ಮಾತ್ರವೇ ಟೆಸ್ಟ್ ಮಾನ್ಯತೆ ಇದೆ. ಉಳಿದಂತೆ ಪ್ರತೀ ವಿಶ್ವಕಪ್ ಕೂಟದ ಸಂದರ್ಭಗಳಲ್ಲಿ ಈ 11 ದೇಶಗಳ ಜೊತೆಗೆ ಮತ್ತು ನಾಲ್ಕು ಅಥವಾ ಆರು ದೇಶಗಳಿಗೆ ವಿಶ್ವಕಪ್ ನಲ್ಲಿ ಆಡಲು ಅರ್ಹತಾ ಕೂಟ ನಡೆಸಿ ಅವಕಾಶ ನೀಡಲಾಗುತ್ತದೆ. ಆದರೆ ಈ ತಂಡಗಳ ಭಾಗವಹಿಸುವಿಕೆ ನಾಮ್ ಕಾವಸ್ಥೆಗೆ ಮಾತ್ರವೇ ಇರುವುದು ಮಾತ್ರ ವಿಪರ್ಯಾಸ. 1996ರ ವಿಶ್ವಕಪ್ ಕೂಟದಲ್ಲಿ ಅಂಡರ್ ಡಾಗ್ ಎಣಿಸಿಕೊಂಡಿದ್ದ ಆ ಕಾಲದ ‘ಕ್ರಿಕೆಟ್ ಶಿಶು’ ಶ್ರೀಲಂಕಾ ತಂಡ ವಿಶ್ವಕಪ್ ಗೆದ್ದಿದ್ದು ಬಿಟ್ಟರೆ ಮತ್ತುಳಿದ ಕೂಟಗಳಲ್ಲಿ ಹೊಸ ತಂಡಗಳು ತಮ್ಮ ಸಾಧನೆಯನ್ನು ಉಪಾಂತ್ಯದವರೆಗೆ ವಿಸ್ತರಿಸಿದ ಉದಾಹರಣೆಗಳಿಲ್ಲ. ಅಪವಾದವೆಂಬಂತೆ, 1999ರಲ್ಲಿ ಜಿಂಬಾಬ್ವೆ ಮತ್ತು 2003ರಲ್ಲಿ ಕಿನ್ಯಾ ತಂಡಗಳು ಉತ್ತಮವೆನ್ನಬಹುದಾದ ಸಾಧನೆಯನ್ನು ಈ ಕೂಟಗಳಲ್ಲಿ ಮೆರೆದಿದ್ದವು. ಇನ್ನುಳಿದಂತೆ ಆಸ್ಟ್ರೇಲಿಯಾ, ಭಾರತ, ಪಾಕಿಸ್ಥಾನ, ಶ್ರೀಲಂಕಾ, ದ.ಆಫ್ರಿಕಾ ತಂಡಗಳದ್ದೇ ಮೇಲುಗೈ.

ಭರವಸೆ ಮೂಡಿಸುತ್ತಿವೆ ಏಷ್ಯಾದ ಹೊಸ ತಂಡಗಳು
ಕ್ರಿಕೆಟ್ ಆಟವನ್ನು ಜಾಗತಿಕ ಮಟ್ಟದಲ್ಲಿ ವಿಸ್ತರಿಸುವುದಕ್ಕೆ ಐಸಿಸಿ ಹಲವಾರು ಕ್ರಮಗಳನ್ನು ಯೋಜನೆಗಳನ್ನು ಹಮ್ಮಿಕೊಳ್ಳುತ್ತಲೇ ಬಂದಿದೆ. ಆದರೆ ಯುರೋಪಿಯನ್ ದೇಶಗಳಲ್ಲಿ ಕ್ರಿಕೆಟ್ ಕುರಿತಾಗಿ ಇರುವ ನಿರಾಸಕ್ತಿ ಮತ್ತು ಅಮೆರಿಕಾ, ಚೀನಾದಂತ ವಿಶ್ವದ ದೈತ್ಯ ಕ್ರೀಡಾ ಶಕ್ತಿಗಳು ತಮ್ಮ ತಮ್ಮ ದೇಶಗಳಲ್ಲಿ ಈ ಆಟವನ್ನು ತಳಮಟ್ಟದಿಂದ ಬೆಳೆಸಲು ಆಸಕ್ತಿ ತೋರಿಸದಿರುವುದು ಐಸಿಸಿಯ ಪ್ರಯತ್ನಗಳಿಗೆ ಹಿನ್ನಡೆಯನ್ನುಂಟು ಮಾಡುತ್ತಲೇ ಇದೆ. ಆದರೂ ಇತ್ತೀಚಿನ ವರ್ಷಗಳಲ್ಲಿ ಅಫ್ಘಾನಿಸ್ಥಾನ, ನೇಪಾಳ, ಹಾಂಕಾಂಗ್, ಸಿಂಗಾಪುರ, ಇರಾನ್, ಸೌದಿ ಅರೇಬಿಯಾದಂತಹ ಏಷ್ಯಾದ ತಂಡಗಳು ಜಾಗತಿಕ ಕ್ರಿಕೆಟ್ ರಂಗದಲ್ಲಿ ಭರವಸೆಯ ಹೆಜ್ಜೆಗಳನ್ನು ಇಡುತ್ತಿರುವುದು ಮುಂದಿನ ದಿನಗಳಲ್ಲಿ ಕ್ರಿಕೆಟ್ ರಂಗದಲ್ಲಿ ಆವರಿಸಿಕೊಂಡಿರುವ ಒಂದು ರೀತಿಯ ಏಕತಾನತೆಯನ್ನು ಹೋಗಲಾಡಿಸುವ ಭರವಸೆಯನ್ನು ಮೂಡಿಸುತ್ತಿವೆ.

ಕ್ರಿಕೆಟ್ ಶಿಶು ರಾಷ್ಟ್ರಗಳಿಗೆ ಬೇಕು ಸಪೋರ್ಟ್
T20 ಮಾದರಿ ಜನಪ್ರಿಯಗೊಳ್ಳಲು ಪ್ರಾರಂಭಿಸಿದ ಬಳಿಕ ಹೆಚ್ಚಿನ ದೇಶಗಳಲ್ಲಿ ಕ್ರಿಕೆಟ್ ಕುರಿತಾಗಿರುವ ಆಸಕ್ತಿ ಹೆಚ್ಚುತ್ತಿದೆ. ಮಾತ್ರವಲ್ಲದೇ ಮುಂಬರುವ ದಿನಗಳಲ್ಲಿ T10 ಮಾದರಿಯ ಪಂದ್ಯಗಳನ್ನು ಆಯೋಜಿಸಲು ಐಸಿಸಿ ಯೋಚಿಸಿರುವುದರಿಂದ ಕ್ರಿಕೆಟ್ ಜ್ವರ ಇನ್ನಷ್ಟು ರಾಷ್ಟ್ರಗಳಿಗೆ ಹಬ್ಬುವ ಆಶಾವಾದವನ್ನು ಕ್ರಿಕೆಟ್ ಪ್ರೇಮಿಗಳು ಇರಿಸಿಕೊಳ್ಳಬಹುದು. ಆದರೆ ಹೊಸ ತಂಡಗಳಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಶ್ರೇಷ್ಠ ತಂಡಗಳನ್ನೆದುರಿಸಲು ಸೂಕ್ತವಾದ ತರಬೇತಿ ನೀಡುವ ಅಗತ್ಯವಿದೆ. ಇಲ್ಲವಾದಲ್ಲಿ ವಿಶ್ವಕಪ್ ನಂತಹ ಪ್ರತಿಷ್ಠಿತ ಕೂಟಗಳಲ್ಲಿ ಈ ತಂಡಗಳ ನಿರ್ವಹಣೆ ಕಳಪೆ ಅಥವಾ ಸಾಧಾರಣ ಮಟ್ಟದಲ್ಲಿರುತ್ತದೆ. ಆದರೆ ಈ ತಂಡಗಳಲ್ಲಿಯೂ ಹಲವಾರು ಪ್ರತಿಭಾವಂತ ಆಟಗಾರರಿದ್ದಾರೆ. ಅವರಿಗೆ ವಿಶ್ವದರ್ಜೆಯ ಮಾರ್ಗದರ್ಶನ ಸಿಕ್ಕಿದಲ್ಲಿ ಮುಂದೊಂದು ದಿನ ಈ ಆಟಗಾರರು ತಮ್ಮ ತಂಡವನ್ನು ವಿಶ್ವಮಟ್ಟದಲ್ಲಿ ಹೊಸ ಎತ್ತರಕ್ಕೆ ಏರಿಸುವ ಸಾಧ್ಯತೆಗಳಿವೆ.

ಟಾಪ್ ನ್ಯೂಸ್

Karkala: ತಿಂಗಳ ಹಿಂದೆ ಮೃತಪಟ್ಟಿದ್ದ ಪತಿ, ಆತ್ಮಹತ್ಯೆಗೆ ಶರಣಾದ ಅಂಗನವಾಡಿ ಶಿಕ್ಷಕಿ

Karkala: ತಿಂಗಳ ಹಿಂದೆ ಮೃತಪಟ್ಟ ಪತಿ, ಮನನೊಂದು ಆತ್ಮಹತ್ಯೆಗೆ ಶರಣಾದ ಅಂಗನವಾಡಿ ಶಿಕ್ಷಕಿ

Karkala: ಅಣ್ಣನ ತಿಥಿಗೆ ಬಂದಿದ್ದ ತಂಗಿಯೂ ವಿದ್ಯುತ್ ಆಘಾತದಿಂದ ಮೃ*ತ್ಯು

Karkala: ಅಣ್ಣನ ತಿಥಿಗೆ ಬಂದಿದ್ದ ತಂಗಿ ವಿದ್ಯುತ್ ಆಘಾತದಿಂದ ಮೃ*ತ್ಯು

Sanju Weds Geetha 2: ಅವನು ಸಂಜು ಅವಳು ಗೀತಾ!; ಹಾಡಿನಲ್ಲಿ ಪ್ರೇಮ ಕಥನ

Sanju Weds Geetha 2: ಅವನು ಸಂಜು ಅವಳು ಗೀತಾ!; ಹಾಡಿನಲ್ಲಿ ಪ್ರೇಮ ಕಥನ

Ranji Trophy: ಇನ್ನಿಂಗ್ಸ್‌ ನ ಎಲ್ಲಾ 10 ವಿಕೆಟ್‌ ಕಿತ್ತು ಅನ್ಶುಲ್‌ ಕಾಂಬೋಜ್‌ ದಾಖಲೆ

Ranji Trophy: ಇನ್ನಿಂಗ್ಸ್‌ ನ ಎಲ್ಲಾ 10 ವಿಕೆಟ್‌ ಕಿತ್ತು ಅನ್ಶುಲ್‌ ಕಾಂಬೋಜ್‌ ದಾಖಲೆ

ಅಕ್ಕಿ ಗಿರಣಿ ಮುಂದೆ ಭತ್ತ ತುಂಬಿದ ವಾಹನಗಳ ಸಾಲು… ಮುಂಗಾರು ಮುಗಿದರೂ ನಿಲ್ಲದ ಕೃಷಿಕರ ಗೋಳು

ಅಕ್ಕಿ ಗಿರಣಿ ಮುಂದೆ ಭತ್ತ ತುಂಬಿದ ವಾಹನಗಳ ಸಾಲು… ಮುಂಗಾರು ಮುಗಿದರೂ ನಿಲ್ಲದ ಕೃಷಿಕರ ಗೋಳು

Sri Lanka Election Result:ಸಂಸತ್‌ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ

Sri Lanka Election Result:ಸಂಸತ್‌ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ

India Vs India A ಅಭ್ಯಾಸ ಪಂದ್ಯ: ಅಗ್ಗಕ್ಕೆ ಔಟಾದ ಕೊಹ್ಲಿ, ಪಂತ್;‌ ಗಾಯಗೊಂಡ ರಾಹುಲ್

India Vs India A ಅಭ್ಯಾಸ ಪಂದ್ಯ: ಅಗ್ಗಕ್ಕೆ ಔಟಾದ ಕೊಹ್ಲಿ, ಪಂತ್;‌ ಗಾಯಗೊಂಡ ರಾಹುಲ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

kambalaHigh-tech touch for Kambala race

Kambala ಓಟಕ್ಕೆ ಹೈಟೆಕ್ ಸ್ಪರ್ಶ; ಗೇಟ್ ತೆರೆದ ಕೂಡಲೇ ಓಟ ಶುರು; ಇಲ್ಲಿದೆ ಸಮಗ್ರ ಮಾಹಿತಿ

JIO SPACE FIBER 1

JioSpace Fiber: ಭಾರತದಲ್ಲಿ ಮತ್ತೊಂದು ಇಂಟರ್ನೆಟ್ ಕ್ರಾಂತಿಗೆ ಜಿಯೋ ಮುನ್ನುಡಿ… ಏನಿದು.?

thumb news web exclusive uv (2) (1)

“ಈ ಕಾಯಿಲೆ” ಇರುವವರು ಅರಿಶಿನ ಹಾಕಿದ ಹಾಲು ಸೇವಿಸಬಾರದು…

thumb web ex (1) (1) (1) (1) (1) (1) copy (1)

ನೀವು ಮುಖಕ್ಕೆ ಅರಿಶಿನ ಹಚ್ತೀರಾ..? ಹಾಗಾದ್ರೆ ಈ ತಪ್ಪುಗಳನ್ನು ಮಾಡಿರೋದು ಪಕ್ಕಾ!

web exclusive keer

ಒಂದು ಜಾಹೀರಾತು ದೇಶಕ್ಕೆ ಬೆಂಕಿ ಹಚ್ಚಿತ್ತು.. ಏನಿದು ಪೆಪ್ಸಿಯ ನಂಬರ್ ಫೀವರ್

MUST WATCH

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

ಹೊಸ ಸೇರ್ಪಡೆ

7

Siruguppa: ಬೈಕ್ ಮತ್ತು ಅಪರಿಚಿತ ವಾಹನದ ಮಧ್ಯೆ ಭೀಕರ ಅಪಘಾತ; ಇಬ್ಬರ ಸಾವು

Karkala: ತಿಂಗಳ ಹಿಂದೆ ಮೃತಪಟ್ಟಿದ್ದ ಪತಿ, ಆತ್ಮಹತ್ಯೆಗೆ ಶರಣಾದ ಅಂಗನವಾಡಿ ಶಿಕ್ಷಕಿ

Karkala: ತಿಂಗಳ ಹಿಂದೆ ಮೃತಪಟ್ಟ ಪತಿ, ಮನನೊಂದು ಆತ್ಮಹತ್ಯೆಗೆ ಶರಣಾದ ಅಂಗನವಾಡಿ ಶಿಕ್ಷಕಿ

6

Hampanakatte: ಗುಟ್ಕಾ ಉಗುಳುವವರು, ಧೂಮಪಾನಿಗಳ ಹಾವಳಿ

5

Mangaluru: ತೆರೆದ ತೋಡಿನಲ್ಲಿ ಕೊಳಚೆ ನೀರು ಹರಿಯುವುದು ನಿಂತಿಲ್ಲ

Karkala: ಅಣ್ಣನ ತಿಥಿಗೆ ಬಂದಿದ್ದ ತಂಗಿಯೂ ವಿದ್ಯುತ್ ಆಘಾತದಿಂದ ಮೃ*ತ್ಯು

Karkala: ಅಣ್ಣನ ತಿಥಿಗೆ ಬಂದಿದ್ದ ತಂಗಿ ವಿದ್ಯುತ್ ಆಘಾತದಿಂದ ಮೃ*ತ್ಯು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.