ಪ್ರತಿಭಾ ಸಂಪನ್ನ ಕಲಾವಿದ ಅಡೂರು ಮರೆಯಾದರು


Team Udayavani, Dec 16, 2018, 4:40 PM IST

1-z.jpg

ಅವರೊಬ್ಬರು ದೈತ್ಯ ಪ್ರತಿಭೆ, ತನ್ನ ನುಡಿತಗಳಿಂದ ಲಕ್ಷಾಂತರ ಜನರಿಗೆ ರಂಜನೆ ನೀಡಿದವರು,ನಿದ್ದೆಯಿಂದ ಬಡಿದೆಬ್ಬಿಸಿದವರು, ಅವರೇ ಅಡೂರು ಗಣೇಶ್‌ ರಾವ್‌. ನಡುವಯಸ್ಸಿನಲ್ಲೇ  ಯಕ್ಷಲೋಕವನ್ನು ಅಗಲಿ ಹೋಗಿದ್ದಾರೆ. 

ಡಿಸೆಂಬರ್‌ 11 ರಂದು ಯಕ್ಷಗಾಭಿಮಾನಿಗಳಿಗೆ, ನೂರಾರು ಕಲಾವಿದರಿಗೆ ನೋವಿನ ಸುದ್ದಿಯಾಗಿ ಕೇಳಿ ಬಂದಿದ್ದು ಅಡೂರು ಗಣೇಶ್‌ ರಾವ್‌ ಅವರ ನಿಧನದ ವಾರ್ತೆ. ದೇರಳಕಟ್ಟೆಯ ಕೆ.ಎಸ್‌.ಹೆಗ್ಡೆ ಆಸ್ಪತ್ರೆಯಲ್ಲಿ  50 ರ ಹರೆಯದ ಗಣೇಶ್‌ ರಾವ್‌ ಕೊನೆಯುಸಿರೆಳೆದಿದ್ದಾರೆ ಎನ್ನುವುದನ್ನು ಯಾರಿಗೂ ನಂಬಲೂ ಸಾಧ್ಯವಾಗಲಿಲ್ಲ.

1968 ರ ಮಾರ್ಚ್‌ 23 ರಂದು ಕೆ.ಕೃಷ್ಣರಾವ್‌ ಮತ್ತು ಪಾರ್ವತಿ ದಂಪತಿಯ ಪುತ್ರನಾಗಿ ಜನಿಸಿದ ಅಡೂರು ಗಣೇಶ್‌ ರಾವ್‌ ಮನೆಯಲ್ಲೇ ಯಕ್ಷಗಾನದ ಪ್ರಾಥಮಿಕ ಪಾಠವನ್ನು ಕಲಿತು ಪರಿಪೂರ್ಣ ಕಲಾವಿದನಾಗಿ ಮೂಡಿ ಬಂದವರು.

ಪ್ರಖ್ಯಾತ ಗುರು, ಶ್ರೇಷ್ಠ ಕಲಾವಿದ ನಿಡ್ಲೆ  ದಿವಂಗತ ನರಸಿಂಹ ಭಟ್ಟರಲ್ಲಿ ಅಭ್ಯಾಸ ನಡೆಸಿ ಗಣೇಶ್‌ ರಾವ್‌ ಆರಂಭದಲ್ಲಿ  ವೇಷಗಾರಿಕೆಯತ್ತ ಗಮನ ಹರಿಸಿದ್ದರು. ದಿವಂಗತ ಇರಾ ಗೋಪಾಲಕೃಷ್ಣ ಭಾಗವತರು ಮತ್ತು ಕುಕ್ಕಿಲ ಶಂಕರ್‌ ಭಟ್‌ ಅವರ ಬಳಿ ಮದ್ದಳೆ ಅಭ್ಯಾಸ ಮಾಡಿದರು. 

ಪುಂಡುವೇಷಧಾರಿಯಾಗಿಯೂ ಗಮನ ಸೆಳೆದಿದ್ದ ಅವರು  ಆ ಬಳಿಕ ಮದ್ದಳೆ ಮತ್ತು ಚಂಡೆವಾದಕರಾಗಿ ಖ್ಯಾತಿ ಪಡೆದಿದ್ದು ವಿಶೇಷ ಮಾತ್ರವಲ್ಲದೆ ಅವರ ಪ್ರತಿಭಾ ಸಂಪನ್ನತೆಗೆ ಸಾಕ್ಷಿ.

ಸವ್ಯಸಾಚಿ ಎನಿಸಿಕೊಂಡಿದ್ದ ಅವರು ಹಲವು ಪ್ರಮುಖ ಕಲಾವಿದರೊಂದಿಗೆ ತಿರುಗಾಟ ನಡೆಸಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದರು. 

ಧರ್ಮಸ್ಥಳ ಮೇಳದಲ್ಲಿ ಸುದೀರ್ಘ‌ ತಿರುಗಾಟ ಮಾಡಿದ್ದ ಅವರು ಖ್ಯಾತ ಭಾಗವತ ಕಂಚಿನ ಕಂಠದ ರಘುರಾಮ ಹೊಳ್ಳರೊಂದಿಗೆ ಸಹವಾದಕನಾಗಿ ಕಾಣಿಸಿಕೊಂಡು ನಾಡಿನಾದ್ಯಂತ ರಂಗದ ರಂಗು ಹೆಚ್ಚಿಸಿದ್ದರು. 

ಚಂಡೆಯ  ಪ್ರಾಧಾನ್ಯತೆ ಇರುವ ರಾಕ್ಷಸ ವೇಷ , ಪುಂಡು ವೇಷ ಗಳಿಗೆ ಬಾರಿಸುವಿಕೆಯ ಮೂಲಕ ಪ್ರೇಕ್ಷಕರನ್ನು ತನ್ನತ್ತ ಸೆಳೆಯುವ ಶಕ್ತಿ ಗಣೇಶ್‌ ರಾವ್‌ ಅವರಲ್ಲಿತ್ತು. 

ತೆಂಕಿನ ಮೇಳಗಳಾದ ಸುರತ್ಕಲ್‌ , ಕಟೀಲು, ಕದ್ರಿ , ಪುತ್ತೂರು ಮೇಳಗಳಲ್ಲಿಯೂ ತಿರುಗಾಟ ಮಾಡಿದ್ದ ಅವರು ತೆಂಕು ತಿಟ್ಟು ಯಕ್ಷಗಾನದಲ್ಲಿ ಅಪಾರ ಅನುಭವ ಸಂಪಾದಿಸಿದ್ದ ಕಲಾವಿದ ಎನಿಸಿಕೊಂಡಿದ್ದರು. 

ಕರಾವಳಿ,ದೇಶದ ವಿವಿಧೆಡೆ ಮತ್ತು ವಿದೇಶದಲ್ಲೂ ಸಾವಿರಾರು ಕಾರ್ಯಕ್ರಮಗಳನ್ನು ನೀಡಿದ ಗಣೇಶ್‌ ರಾವ್‌ ಅವರು ಬಹುಬೇಡಿಕೆಯ ಕಲಾವಿದರಾಗಿದ್ದರು. 

ಕಲಾವಿದರು ನೋವಿಗೆ ಸಿಲುಕುವುದು ಹೆಚ್ಚು ಅನ್ನುವ ಹಾಗೆ  ಗಣೇಶ್‌ ರಾವ್‌ ಅವರು ಲಿವರ್ ಸಮಸ್ಯೆಯಿಂದ ಬಳಲಿ ಯಕ್ಷರಂಗದಿಂದ ಮರೆಯಾಗಿದ್ದಾರೆ. ಶ್ರೀಮಂತ ತೆಂಕು ತಿಟ್ಟು ಯಕ್ಷರಂಗದಿಂದ ಕೊಂಡಿಯೊಂದು ಕಳಚಿಕೊಂಡಂತಾಗಿದೆ. ಪತ್ನಿ , ಪುತ್ರ ಮತ್ತು ಪುತ್ರಿಯನ್ನು ಅಗಲಿಹೋಗಿದ್ದಾರೆ. 

ಧರ್ಮಸ್ಥಳ ಮೇಳದ ರಂಗಸ್ಥಳಲ್ಲಿ ಅಜಾನುಬಾಹುವಾಗಿ ಕಾಣಿಸಿಕೊಳ್ಳುತ್ತಿದ್ದ ಅವರ ಅನುಪಸ್ಥಿತಿ ಯಕ್ಷಾಭಿಮಾನಿಗಳಿಗೆ ಎದ್ದು ಕಾಣುತ್ತಿದೆ.

ಟಾಪ್ ನ್ಯೂಸ್

Wayanad: ಪ್ರಿಯಾಂಕಾ ಗಾಂಧಿ ‘ಕೈ’ ಹಿಡಿಯಲಿದ್ದಾರಾ ಮತದಾರರು… 37,000 ಮತಗಳಿಂದ ಮುನ್ನಡೆ

Wayanad: ಪ್ರಿಯಾಂಕಾ ಗಾಂಧಿ ‘ಕೈ’ ಹಿಡಿಯಲಿದ್ದಾರಾ ಮತದಾರರು… 48,000 ಮತಗಳಿಂದ ಮುನ್ನಡೆ

maharstra

Election Results: ಮಹಾರಾಷ್ಟ್ರ, ಝಾರ್ಖಂಡ್‌ ನಲ್ಲಿ ಮತ ಎಣಿಕೆ ಪ್ರಕ್ರಿಯೆ ಆರಂಭ

ಉಪ ಚುನಾವಣಾ ಫಲಿತಾಂಶ: ಸಂಡೂರು, ಚನ್ನಪಟ್ಟಣ, ಶಿಗ್ಗಾಂವಿ ಕ್ಷೇತ್ರಗಳ ಮತ ಎಣಿಕೆ ಆರಂಭ

ಉಪ ಚುನಾವಣಾ ಫಲಿತಾಂಶ: ಸಂಡೂರು, ಚನ್ನಪಟ್ಟಣ, ಶಿಗ್ಗಾಂವಿ ಕ್ಷೇತ್ರಗಳ ಮತ ಎಣಿಕೆ ಆರಂಭ

BYV-yathnal

BJP Internal Politics: ಬಿಜೆಪಿಯ ಬೇಗುದಿ ಇತ್ಯರ್ಥಕ್ಕೆ ಡಿಸೆಂಬರ್‌ನಲ್ಲಿ ಮುಹೂರ್ತ?

Vikram-Naxal-Mud

Naxal Vikram Gowda: ನೆಟ್ಟಣದಿಂದ ಮುರ್ಡೇಶ್ವರಕ್ಕೆ ರೈಲಿನಲ್ಲಿ ಪ್ರಯಾಣಿಸಿದ್ದ ನಕ್ಸಲರು!

peethabailu-1

Vikram Gowda Encounter: ಭೀತಿಗ್ರಸ್ತ ಪೀತಬೈಲು ಪರಿಸರದಲ್ಲಿ ನೀರವ ಮೌನ

Egg-Students

Financial Burden: ಶಾಲಾ ಶಿಕ್ಷಕರಿಗೆ ಮೊಟ್ಟೆ ತಲೆನೋವು!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

kambalaHigh-tech touch for Kambala race

Kambala ಓಟಕ್ಕೆ ಹೈಟೆಕ್ ಸ್ಪರ್ಶ; ಗೇಟ್ ತೆರೆದ ಕೂಡಲೇ ಓಟ ಶುರು; ಇಲ್ಲಿದೆ ಸಮಗ್ರ ಮಾಹಿತಿ

JIO SPACE FIBER 1

JioSpace Fiber: ಭಾರತದಲ್ಲಿ ಮತ್ತೊಂದು ಇಂಟರ್ನೆಟ್ ಕ್ರಾಂತಿಗೆ ಜಿಯೋ ಮುನ್ನುಡಿ… ಏನಿದು.?

thumb news web exclusive uv (2) (1)

“ಈ ಕಾಯಿಲೆ” ಇರುವವರು ಅರಿಶಿನ ಹಾಕಿದ ಹಾಲು ಸೇವಿಸಬಾರದು…

thumb web ex (1) (1) (1) (1) (1) (1) copy (1)

ನೀವು ಮುಖಕ್ಕೆ ಅರಿಶಿನ ಹಚ್ತೀರಾ..? ಹಾಗಾದ್ರೆ ಈ ತಪ್ಪುಗಳನ್ನು ಮಾಡಿರೋದು ಪಕ್ಕಾ!

web exclusive keer

ಒಂದು ಜಾಹೀರಾತು ದೇಶಕ್ಕೆ ಬೆಂಕಿ ಹಚ್ಚಿತ್ತು.. ಏನಿದು ಪೆಪ್ಸಿಯ ನಂಬರ್ ಫೀವರ್

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

Wayanad: ಪ್ರಿಯಾಂಕಾ ಗಾಂಧಿ ‘ಕೈ’ ಹಿಡಿಯಲಿದ್ದಾರಾ ಮತದಾರರು… 37,000 ಮತಗಳಿಂದ ಮುನ್ನಡೆ

Wayanad: ಪ್ರಿಯಾಂಕಾ ಗಾಂಧಿ ‘ಕೈ’ ಹಿಡಿಯಲಿದ್ದಾರಾ ಮತದಾರರು… 48,000 ಮತಗಳಿಂದ ಮುನ್ನಡೆ

maharstra

Election Results: ಮಹಾರಾಷ್ಟ್ರ, ಝಾರ್ಖಂಡ್‌ ನಲ್ಲಿ ಮತ ಎಣಿಕೆ ಪ್ರಕ್ರಿಯೆ ಆರಂಭ

ಉಪ ಚುನಾವಣಾ ಫಲಿತಾಂಶ: ಸಂಡೂರು, ಚನ್ನಪಟ್ಟಣ, ಶಿಗ್ಗಾಂವಿ ಕ್ಷೇತ್ರಗಳ ಮತ ಎಣಿಕೆ ಆರಂಭ

ಉಪ ಚುನಾವಣಾ ಫಲಿತಾಂಶ: ಸಂಡೂರು, ಚನ್ನಪಟ್ಟಣ, ಶಿಗ್ಗಾಂವಿ ಕ್ಷೇತ್ರಗಳ ಮತ ಎಣಿಕೆ ಆರಂಭ

BYV-yathnal

BJP Internal Politics: ಬಿಜೆಪಿಯ ಬೇಗುದಿ ಇತ್ಯರ್ಥಕ್ಕೆ ಡಿಸೆಂಬರ್‌ನಲ್ಲಿ ಮುಹೂರ್ತ?

Vikram-Naxal-Mud

Naxal Vikram Gowda: ನೆಟ್ಟಣದಿಂದ ಮುರ್ಡೇಶ್ವರಕ್ಕೆ ರೈಲಿನಲ್ಲಿ ಪ್ರಯಾಣಿಸಿದ್ದ ನಕ್ಸಲರು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.