ಕಲಾವಿದನಾಗಲು ಬೆಂಬಲವಿರಲಿಲ್ಲ !.99 ರ ಗೋಪಾಲ ರಾಯರ ಮಾತು 2
Team Udayavani, Aug 12, 2018, 4:53 PM IST
ಯಕ್ಷಗಾನವೆನ್ನುವುದು ಪರಂಪರೆಯಿಂದ ಬೆಳೆದು ಬಂದ ಕಲೆ. ಇದರಲ್ಲಿ ಯಾವುದೇ ಅನುಮಾನವಿಲ್ಲ. ಕೈ ಕೈ ಸೇರಿ ಚಪ್ಪಾಳೆ ಎಂಬಂತೆ ಹಲವು ವಿದ್ವಾಂಸರ ಕೊಡುಗೆ , ಕಲಾವಿದರ ಕೊಡುಗೆ ಕಲೆಯ ಏಳಿಗೆಗೆ ಕಾರಣವಾಗಿದೆ. ಯಕ್ಷಗಾನ ಕನ್ನಡ ಸಾಹಿತ್ಯದ ಬೆಳವಣಿಗೆಗೆ ಕಾರಣವಾಗಿದೆ. ಇಂದು ಬದಲಾವಣೆಯ ಹಾದಿ ಹಿಡಿದಿದೆ.
ಸ್ವಾತಂತ್ರ್ಯ ಪೂರ್ವದಲ್ಲಿ ನಾನು ಯಕ್ಷರಂಗವನ್ನು ಪ್ರವೇಶಿಸಿದವನು . ಅಂದೆಲ್ಲಾ ಯಕ್ಷಗಾನ ಕ್ಷೇತ್ರಕ್ಕೆ ಕಾಲಿಟ್ಟರೆ ದಾರಿ ತಪ್ಪುತ್ತಾನೆ ಎನ್ನುವ ಭಾವನೆ ಇತ್ತು. ಯಕ್ಷಗಾನದ ಕುರಿತಾಗಿಯೂ ಕೆಲ ವರ್ಗದ ಜನರಲ್ಲಿ ತಾತ್ಸಾರವಿತ್ತಾದರೂ ಅಂದು ಆರಾಧನಾ ಕಲೆಯಾಗಿ ಯಕ್ಷಗಾನ ಇದ್ದ ಕಾರಣ ಜನರು ಅದನ್ನು ಒಪ್ಪಿಕೊಂಡಿದ್ದರು. ಇಂದು ಆರಾಧನೆಯೊಂದಿಗೆ ವಾಣಿಜ್ಯ ಉದ್ದೇಶಕ್ಕೆ ಕಲೆ ಬಳಕೆಯಾಗುತ್ತಿರುವುದು ವಿಪರೀತ ಎನಿಸುವಂತಹ ಬದಲಾವಣೆಗೆ ತಿರುಗಿದೆ. ಇದರಿಂದ ಕಲೆಯ ಮೂಲ ಆಶಯಕ್ಕೆ ಧಕ್ಕೆ ಅಲ್ಲವೇ ಎಂದರು.
ಅಂದಿನ ಯಕ್ಷಗಾನ ಕಲಾವಿದರ ಬದುಕೇ ವಿಭಿನ್ನವಾಗಿತ್ತು, ಕಲಾ ಜೀವನಕ್ಕೆ ಕಾಲಿಡುವವನು ಅಷ್ಟು ಸುಲಭದಲ್ಲಿ ಪುಕ್ಕಟೆ ಪ್ರಚಾರ ಪಡೆಯುವುದು ಅಸಾಧ್ಯವಾಗಿತ್ತು. ಹಂತ ಹಂತವಾಗಿ ಸಾಧನೆಗಳನ್ನು ಮಾಡಿ ಕಲಾವಿದನೊಬ್ಬ ರೂಪುಗೊಳ್ಳಬೇಕಾಗಿತ್ತು. ದಿನ ಬೆಳಗಾಗುವುದರೊಳಗೆ ಸ್ಟಾರ್ ಪಟ್ಟ ಸಿಗುತ್ತಿರಲಿಲ್ಲ. ಪರಂಪರೆಗಳನ್ನು ಒಪ್ಪಿಕೊಂಡು ಚೌಕಟ್ಟಿನೊಳಗೆ ವ್ಯವಹರಿಸಬೇಕಿತ್ತು ಎಂದರು.
ಕಲಾವಿದನಾದವ ತಿರುಗಾಟದಲ್ಲಿ ಮನೆಯಿಂದ ದೂರ ಉಳಿಯುವುದು ಅನಿವಾರ್ಯವಾಗಿತ್ತು. 6 ತಿಂಗಳ ಕಾಲ ಮನೆಯಲ್ಲಿ ಏಳೋ, ಎಂಟು ದಿನಗಳ ಕಾಲ ಮಾತ್ರ ಮನೆಗೆ ಬರುವ ಸಾಧ್ಯತೆಗಳಿದ್ದವು. ಮನೆಯ ಹತ್ತಿರ ಆಟ ಇದ್ದಲ್ಲಿ ಮನೆಯವರ ಮುಖ ದರ್ಶನ. ದೂರ ವಾಣಿ ಸಂಪರ್ಕವೂ ಇರಲ್ಲಿಲ್ಲ. ಬಹುಷಃ ಇದೇ ಕಾರಣಕ್ಕಾಗಿ ಬಾಲಕರನ್ನು ಯಕ್ಷಗಾನ ಕ್ಷೇತ್ರಕ್ಕೆ ತೆರಳಲು ಪೋಷಕರು ಮನಸ್ಸು ಮಾಡುತ್ತಿರಲಿಲ್ಲ ಎಂದರು.
ಮಂದಾರ್ತಿ ಮೇಳದಲ್ಲಿದ್ದ ನಮಗೆ ಮಂದಾರ್ತಿ ಜಾತ್ರೆಯ ವೇಳೆ ಮೂರು ದಿನ ರಜೆ ಸಿಗುತ್ತಿತ್ತು. ಬಳಿಕ ಶಿವರಾತ್ರಿಗೊಂದು ರಜೆ ಸಿಗುತ್ತಿತ್ತು ಆಗಲೆ ಮನೆಗೆ ಬಂದು ಆಗು ಹೋಗುಗಳನ್ನು ನೋಡಿಕೊಳ್ಳುತ್ತಿದ್ದೆವು ಎಂದರು.
ತಿರುಗಾಟದುದ್ದಕ್ಕೂ ಕಲಾವಿದರು ನಡಿಗೆಯಲ್ಲೇ ತೆರಳುತ್ತಿದ್ದರು. ದಿನಕ್ಕೆ 5 ರಿಂದ 10 ಕಿ.ಮೀ ನಡಿಗೆ ಅನಿವಾರ್ಯವಾಗಿತ್ತು. ದಿನವಿಡೀ ದಣಿದು ರಾತ್ರಿ ಅಪಾರ ನಿರೀಕ್ಷೆ ಇರಿಸಿಕೊಂಡು ಬರುತ್ತಿದ್ದ ಪ್ರೇಕ್ಷಕರಿಗೆ ನಿರಾಸೆ ಮಾಡುತ್ತಿರಲಿಲ್ಲ. ಆಗಿನ ಕಾಲದಲ್ಲಿ ಪ್ರದರ್ಶನದಲ್ಲಿ ಕೊರತೆ ಕಂಡು ಬಂದರೆ ಪ್ರಶ್ನಿಸುವ ವ್ಯಕ್ತಿಗಳಿದ್ದರು. ಅದು ಹಾಗಾಗ ಬಾರದಿತ್ತು, ನಿಮ್ಮ ಪಾತ್ರ ಚಿತ್ರಣ ಸರಿಯಾಗಲಿಲ್ಲ ಎಂದು ನೇರವಾಗಿ ಹೇಳುತ್ತಿದ್ದರು. ಕಲಾವಿದರು ವಿಮರ್ಶಕರನ್ನು ಒಪ್ಪಿ ಬದಲಾವಣೆ ಮಾಡಿಕೊಳ್ಳುತ್ತಿದ್ದರು. ಕಲಾವಿದರಿಗೆ ಪ್ರೇಕ್ಷಕರ ಭಯ ಇತ್ತು. ಕಲೆಯ ಮೌಲ್ಯ ತಿಳಿದಿತ್ತು. ಆದರೆ ಈಗ ದೇವರು ಬಂದು ಹೇಳಿದರೂ ನನ್ನ ದಾರಿ ನನಗೆ ಎನ್ನುವ ಪರಿಸ್ಥಿತಿ ಯಕ್ಷಗಾನದಲ್ಲಿ ಬಂದಿದೆ ಎಂದು ಹೇಳಿ ಭಾವುಕರಾದರು.
ಪ್ರೇಕ್ಷಕರು ಪ್ರದರ್ಶನ ಮತ್ತು ಕಲಾವಿದನ ಏಳಿಗೆಗೆ ಕಾರಣವಾಗುತ್ತಾರೆ. ಕಲಾವಿದನಾದನಿಗೆ ಕಲೆಯ ಮೇಲೆ ಮತ್ತು ಪ್ರೇಕ್ಷಕರ ಕುರಿತು ಗೌರವ ಇರಲೇ ಬೇಕು, ಅದಿಲ್ಲವಾದಲ್ಲಿ ಕಲಾವಿದನಲ್ಲಿರುವ ಕಲೆಯ ಬೆಲೆ ಶೂನ್ಯ ಎಂದರು.
ಮುಂದುವರಿಯುವುದು..
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kambala ಓಟಕ್ಕೆ ಹೈಟೆಕ್ ಸ್ಪರ್ಶ; ಗೇಟ್ ತೆರೆದ ಕೂಡಲೇ ಓಟ ಶುರು; ಇಲ್ಲಿದೆ ಸಮಗ್ರ ಮಾಹಿತಿ
JioSpace Fiber: ಭಾರತದಲ್ಲಿ ಮತ್ತೊಂದು ಇಂಟರ್ನೆಟ್ ಕ್ರಾಂತಿಗೆ ಜಿಯೋ ಮುನ್ನುಡಿ… ಏನಿದು.?
“ಈ ಕಾಯಿಲೆ” ಇರುವವರು ಅರಿಶಿನ ಹಾಕಿದ ಹಾಲು ಸೇವಿಸಬಾರದು…
ನೀವು ಮುಖಕ್ಕೆ ಅರಿಶಿನ ಹಚ್ತೀರಾ..? ಹಾಗಾದ್ರೆ ಈ ತಪ್ಪುಗಳನ್ನು ಮಾಡಿರೋದು ಪಕ್ಕಾ!
ಒಂದು ಜಾಹೀರಾತು ದೇಶಕ್ಕೆ ಬೆಂಕಿ ಹಚ್ಚಿತ್ತು.. ಏನಿದು ಪೆಪ್ಸಿಯ ನಂಬರ್ ಫೀವರ್
MUST WATCH
ಹೊಸ ಸೇರ್ಪಡೆ
Siruguppa: ಬೈಕ್ ಮತ್ತು ಅಪರಿಚಿತ ವಾಹನದ ಮಧ್ಯೆ ಭೀಕರ ಅಪಘಾತ; ಇಬ್ಬರ ಸಾವು
Karkala: ತಿಂಗಳ ಹಿಂದೆ ಮೃತಪಟ್ಟ ಪತಿ, ಮನನೊಂದು ಆತ್ಮಹತ್ಯೆಗೆ ಶರಣಾದ ಅಂಗನವಾಡಿ ಶಿಕ್ಷಕಿ
Hampanakatte: ಗುಟ್ಕಾ ಉಗುಳುವವರು, ಧೂಮಪಾನಿಗಳ ಹಾವಳಿ
Mangaluru: ತೆರೆದ ತೋಡಿನಲ್ಲಿ ಕೊಳಚೆ ನೀರು ಹರಿಯುವುದು ನಿಂತಿಲ್ಲ
Karkala: ಅಣ್ಣನ ತಿಥಿಗೆ ಬಂದಿದ್ದ ತಂಗಿ ವಿದ್ಯುತ್ ಆಘಾತದಿಂದ ಮೃ*ತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.