ದಿನಭವಿಷ್ಯ: ಇಂದು ಈ ರಾಶಿಯವರು ವಾಹನ, ಗ್ಯಾಸ್, ವಿದ್ಯುತ್ ಗಳಿಂದ ಜಾಗರೂಕರಾಗಿರಿ…
Team Udayavani, Feb 22, 2021, 7:30 AM IST
ಮೇಷ: ಆರ್ಥಿಕವಾಗಿ ಹಣವು ಹೆಚ್ಚು ಒಗ್ಗೂಡಿದರೂ ಖರ್ಚು ಅಷ್ಟೇ ಕಂಡುಬರುವುದು. ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸುವ ಹಾಗೂ ಅದಕ್ಕಾಗಿ ಖರ್ಚುಗಳು ಕೂಡಾ ಬರುವುದು. ಆರೋಗ್ಯದಲ್ಲಿ ಏರುಪೇರು.
ವೃಷಭ: ನಿರುದ್ಯೋಗಿಗಳಿಗೆ ಸಿಕ್ಕಿದ ಉದ್ಯೋಗದಲ್ಲಿ ತೃಪ್ತಿ ಪಡಬೇಕಾದೀತು. ಖರ್ಚು ಅತಿಯಾಗಿ ಕಂಡು ಬಂದು ತೆಲೆಕೆಟ್ಟು ಹೋದೀತು. ಕಾರ್ಯಕ್ಷೇತ್ರದಲ್ಲಿ ಸಹೋದ್ಯೋಗಿಗಳಿಂದ ಸಹಕಾರವು ದೊರಕಲಿದೆ.
ಮಿಥುನ: ಅಧಿಕಾರಿ ವರ್ಗದವರಿಂದ ಅನಾವಶ್ಯಕ ಜವಾಬ್ದಾರಿಯು ತಲೆಗೆ ಬರಲಿದೆ. ಆದರೆ ಅದನ್ನು ನಿಭಾಯಿಸಿಕೊಂಡು ಹೋಗುವುದರಲ್ಲಿ ನಿಮ್ಮ ಜಾಣ್ಮೆ ಅಡಗಿದೆ. ಶಿಕ್ಷಣ ಕ್ಷೇತ್ರದಲ್ಲಿ ಮುಂಭಡ್ತಿ ದೊರಕಲಿದೆ.
ಕರ್ಕ: ಸಾಮಾಜಿಕ ರಂಗದಲ್ಲಿ ಹಲವು ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವುದಕ್ಕೆ ಸಮಯವೇ ಸಾಲದಾಗಲಿದೆ. ಸಣ್ಣಪುಟ್ಟ ಬದಲಾವಣೆಗಳು ಶಿಕ್ಷಣ ಕ್ಷೇತ್ರದಲ್ಲಿ ಕಂಡು ಬರಲಿದೆ. ಸಾಂಸಾರಿಕವಾಗಿ ತೃಪ್ತಿ ಇದೆ.
ಸಿಂಹ: ಸಾಂಸಾರಿಕವಾಗಿ ದಾಯಾದಿಗಳ ಪೀಡೆಗಳು ಕಡಿಮೆಯಾಗಿ ದಾಂಪತ್ಯದಲ್ಲಿ ಸುಖ ಸಮಾಧಾನಗಳು ಕಂಡು ಬರುವುದು. ಆದರೂ ತಲೆಯಲ್ಲಿ ಉದ್ವೇಗವು ಇರುವುದು. ಸಮಾಧಾನಕ್ಕಾಗಿ ಗಾಯತ್ರಿ ಮಂತ್ರ ಹೇಳಿರಿ.
ಕನ್ಯಾ: ಅವಿವಾಹಿತರಿಗೆ ವೈವಾಹಿಕ ಭಾಗ್ಯವು ನಿರ್ವಿಘ್ನವಾಗಿ ನೆರವೇರಲಿದೆ. ಆರ್ಥಿಕವಾಗಿ ಖರ್ಚು ಕಂಡು ಬಂದರೂ ಹಣವು ಕೈ ಸೇರಲಿದೆ. ವ್ಯಾಪಾರ, ಉದ್ಯಮದಲ್ಲಿ ಲಾಭಾಂಶವು ಹಂತ ಹಂತವಾಗಿ ಏರಲಿದೆ.
ತುಲಾ: ಅವಿವಾಹಿತರಿಗೆ ಇದು ಸಕಾಲವಲ್ಲ. ಸಾಂಸಾರಿಕ ಜೀವನದಲ್ಲಿ ಸ್ವಲ್ಪ ವಿರಸ ಮೂಡಬಹುದು. ನೂತನ ಕಾರ್ಯಾರಂಭಕ್ಕೆ ದುಡುಕದಿರಿ. ತಾಳ್ಮೆ ಸಮಾಧಾನವಿರಲಿ. ಮಕ್ಕಳಿಗೆ ಉತ್ತಮ ಭವಿಷ್ಯವಿರುವುದು.
ವೃಶ್ಚಿಕ: ಪ್ರಯತ್ನಕ್ಕೆ ಹೆಚ್ಚಿನ ಒತ್ತು ನೀಡಿದ್ದಲ್ಲಿ ನಿಮ್ಮ ಕಾರ್ಯವು ಕೈಗೂಡಲಿದೆ. ವೃತ್ತಿರಂಗದಲ್ಲಿ ನಿಮ್ಮ ಸ್ಥಾನಮಾನಗಳು ವೃದ್ಧಿಯಾಗುತ್ತಲೇ ಹೋಗುವುದು. ಕೌಟುಂಬಿಕವಾಗಿ ಸಂತೋಷ, ಖುಶಿ ದೊರಕಲಿದೆ.
ಧನು: ನೀವು ಸದಾಕಾಲ ಚಟುವಟಿಕೆಯಿಂದ ಕಾರ್ಯಪ್ರವೃತ್ತರಾಗಬೇಕಾಗುತ್ತದೆ. ದೂರ ಸಂಚಾರದಿಂದ ನಿಮಗೆ ಪ್ರಗತಿಯು ಕಂಡು ಬರುವುದು. ಸಾಮಾಜಿಕ ರಂಗದಲ್ಲಿ ಉನ್ನತ ಸ್ಥಾನಮಾನ ದೊರಕಲಿದೆ.
ಮಕರ: ಆರ್ಥಿಕ ಸ್ಥಿತಿಯು ಒಂದು ಹಂತದಲ್ಲಿ ಅಭಿವೃದ್ಧಿ ಮಾಡುತ್ತಿದ್ದರೂ. ಗೃಹ ಯಾ ನಿವೇಶನ ಖರೀದಿ ನಡೆದು ಕೈ ಖಾಲಿಯಾಗಲಿದೆ. ಆರೋಗ್ಯ ಸ್ಥಿತಿಯು ತೃಪ್ತಿದಾಯಕವಾಗಿದ್ದರೂ ತಾಪತ್ರಯಗಳು ಮುಗಿಯುವುದಿಲ್ಲ.
ಕುಂಭ: ವಿದ್ಯಾರ್ಥಿಗಳಿಗೆ ತಕ್ಕಮಟ್ಟಿನ ಯಶಸ್ಸು ಕಂಡು ಬರಲಿದೆ. ಮಕ್ಕಳಿಂದ ಜಾಗ ಖರೀದಿಯ ಮಾತುಕತೆ ನಡೆದೀತು. ವೃತ್ತಿರಂಗದಲ್ಲಿ ನಿರ್ಧಿಷ್ಟವಾದ ಯೋಜನೆಗಳು ನಕಾರ್ಯಗತವಾಗಲಿದೆ. ಲಾಭಾಂಶ ಕಡಿಮೆ.
ಮೀನ: ಹಿರಿಯರ ಸಲಹೆಗಳು ನಿಮಗೆ ಮಾರ್ಗದರ್ಶನ ಕೊಡಲಿದೆ. ವಾಹನ, ಗ್ಯಾಸ್, ವಿದ್ಯುತ್ ಗಳಿಂದ ಸ್ವಲ್ಪ ಜಾಗ್ರತೆ ಮಾಡಿರಿ. ಮಂಗಲ ಕಾರ್ಯಕ್ಕೆ ಸಕಾಲವಿದು. ಒಪ್ಪಿಗೆ ಕೊಡುವುದು ನಿಮ್ಮ ಕೈಯಲ್ಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.