ನಿತ್ಯಭವಿಷ್ಯ: ಈ ರಾಶಿಯವರಿಗೆ ಶತ್ರುಗಳೇ ಅಚ್ಚರಿಗೊಳ್ಳುವಂತೆ ಯಶಸ್ಸು ಸಿಗಲಿದೆ !
Team Udayavani, Mar 31, 2021, 7:42 AM IST
ಮೇಷ: ರಾಜಕೀಯದಲ್ಲಿ ನಿಮ್ಮ ಪರಿಶ್ರಮವು ಸಾರ್ಥಕವಾಗಲಿದೆ. ಚಿತ್ರಕಲೆ, ಶಿಲ್ಪ, ಸಂಗೀತ ಇತ್ಯಾದಿಗಳಲ್ಲಿ ಕೀರ್ತಿ ಗಳಿಸುವ ಕಾಲವಿದು. ಗೃಹ ನಿವೇಶನಗಳ ವ್ಯಾಪಾರವು ಕುದುರೀತು. ಹೊಸ ಉದ್ಯೋಗದ ಪ್ರಾರಂಭವನ್ನು ಸದ್ಯ ಮಾಡದಿರಿ.
ವೃಷಭ: ವಿದ್ಯಾರ್ಥಿಗಳಿಗೆ ವಿದೇಶ ಯಾನದ ಕುರುಹು ಕಂಡುಬರಲಿದೆ. ಹೆಚ್ಚಿನ ವಿದ್ಯಾಭ್ಯಾಸಕ್ಕೆ ಸ್ವಲ್ಪ ಕಠಿಣ ಪರಿಶ್ರಮದ ಅಗತ್ಯವಿದೆ. ಮಹಿಳೆಯರಿಗೆ ತಾಳ್ಮೆ ಸಮಾಧಾನದ ಅಗತ್ಯ ಕಂಡುಬರುವುದು. ವಾಹನ, ಆರೋಗ್ಯದ ಬಗ್ಗೆ ಎಚ್ಚರವಿರಲಿ.
ಮಿಥುನ: ತಂದೆ ಮಕ್ಕಳೊಳಗೆ ಭಿನ್ನಾಭಿಪ್ರಾಯದ ಸಾಧ್ಯತೆ ಕಂಡುಬರುವುದು. ಜೀವನದಲ್ಲಿ ಉತ್ಕಟವಾದ ಇಚ್ಛೆ , ಸೂಕ್ಷ್ಮವಾದ ಬುದ್ಧಿ ಬಲ, ವಾಕ್ಚಾತುರ್ಯದಿಂದ ನಿಮಗೆ ಮುನ್ನಡೆ ಸಿಗಲಿದೆ. ಆಗಾಗ ಪ್ರತಿಕೂಲ ಫಲಗಳು ಅನುಭವಕ್ಕೆ ಬರಲಿದೆ.
ಕರ್ಕ: ಆಗಾಗ ದ್ವಂದ್ವ ಸ್ವಭಾವವು ಕಾಡಲಿದ್ದು ಮುನ್ನಡೆಗೆ ವಿಳಂಬವಾದೀತು. ಚಿಂತಿತ ಕೆಲಸ ಕಾರ್ಯಗಳು ಕಾರ್ಯರೂಪಕ್ಕೆ ಬಂದರೂ ಅಡೆತಡೆಗಳು ಎದುರಾದಾವು. ಸಾಂಸಾರಿಕವಾಗಿ ಆರೋಗ್ಯದ ಬಗ್ಗೆ ವಿಶೇಷ ಗಮನವಿರಲಿ.
ಸಿಂಹ: ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆಯಲ್ಲಿ ಉದಾಸೀನತೆ ಕಾಡಲಿದೆ. ಸಂಚಾರದಲ್ಲಿ ಆಕಸ್ಮಿಕ ಅವಘಡಗಳ ಸಾಧ್ಯತೆ ಕಂಡು ಬಂದೀತು. ವ್ಯಾಪಾರ, ವ್ಯವಹಾರದಲ್ಲಿ ಸ್ಪರ್ಧಾತ್ಮಕ ಮನೋಭಾವದಿಂದ ಶತ್ರುಗಳ ಕಾಟ ಅನುಭವಿಸುವಂತಾದೀತು. ಶುಭವಿದೆ.
ಕನ್ಯಾ: ಸರಕಾರೀ ಅಧಿಕಾರಿಗಳಿಂದ ಭೀತಿ ಭಾದೆ ಕಂಡುಬರಲಿದೆ. ವ್ಯಾಪಾರ, ವ್ಯವಹಾರದಲ್ಲಿ ಮೋಸ ವಂಚನೆ, ತೆರಿಗೆ ಅಧಿಕಾರಿಗಳ ಕೆಂಗಣ್ಣು ಕಂಡುಬರಲಿದೆ. ಸಾಹಿತಿ, ಕಲಾವಿದರಿಗೆ ಸಿನೆಮಾ ಪ್ರಪಂಚದವರಿಗೆ ಶ್ರಮಕ್ಕೆ ತಕ್ಕ ಫಲ ದೊರೆಯದು.
ತುಲಾ: ನಿರುದ್ಯೋಗಿಗಳು ಬಂದ ಅವಕಾಶವನ್ನು ಕಳೆದುಕೊಳ್ಳುವ ಸಾಧ್ಯತೆ ಇರುತ್ತದೆ. ದೂರಸಂಚಾರದಲ್ಲಿ ಆದಷ್ಟು ಜಾಗ್ರತೆ ವಹಿಸುವುದು ಉತ್ತಮ. ಪಾಲು ಬಂಡವಾಳದಲ್ಲಿ ನಿರೀಕ್ಷಿತ ಲಾಭವಿರದು. ಸಂಚಾರದಲ್ಲಿ ಅವಘಡದ ಸಾಧ್ಯತೆ ಇರುತ್ತದೆ.
ವೃಶ್ಚಿಕ: ಆರ್ಥಿಕವಾಗಿ ಧನಾರ್ಜನೆಯ ಮಾರ್ಗದಲ್ಲಿ ಹಲವಾರು ಅಡಚಣೆಗಳು ಕಂಡುಬರಲಿದೆ. ಅಭಿವೃದ್ಧಿಯು ಸ್ವಲ್ಪ ನಿಧಾನವಾಗಿ ಅನುಭವಕ್ಕೆ ಬರಲಿದೆ. ತಾತ್ಕಾಲಿಕ ಹುದ್ದೆಯವರಿಗೆ ಉದ್ಯೋಗದಲ್ಲಿ ಭಡ್ತಿ ಕಂಡುಬಂದೀತು. ಮುನ್ನಡೆಯಿರಿ.
ಧನು: ಗೃಹ ನಿರ್ಮಾಣ ಕಾರ್ಯ, ಭೂಖರೀದಿಯು ಸುಲಭ ರೂಪದಲ್ಲಿ ಕೈಗೂಡಲಿದೆ. ಮುಖ್ಯವಾಗಿ ಸಾಂಸಾರಿಕ ಹೊಂದಾಣಿಕೆ ಅತೀ ಅಗತ್ಯವಿದೆ. ಒಮ್ಮೆಮ್ಮೊ ಶತ್ರುಗಳೇ ಅಚ್ಚರಿಗೊಳ್ಳುವಂತೆ ನಿಮಗೆ ಯಶಸ್ಸು ಒಲಿದು ಬಂದೀತು. ಉತ್ತಮ ಕಾಲ.
ಮಕರ: ಆತ್ಮೀಯ ಗೆಳೆಯರು ನಿಮ್ಮ ಮುನ್ನಡೆಗೆ ಅನುಕೂಲರಾದಾರು. ಕಾರ್ಯಕ್ಷೇತ್ರ ಹಾಗೂ ಸಾಮಾಜಿಕ ಜೀವನದಲ್ಲಿ ಯೋಗ್ಯ ಪುರಸ್ಕಾರವು ಲಭಿಸಲಿದೆ. ಧರ್ಮಕಾರ್ಯಗಳು ನಿಮ್ಮಿಂದ ನೆರವೇರಲಿದೆ. ಪುಣ್ಯ ಸಂಪಾದನೆಗೆ ಅವಕಾಶವಿದೆ.
ಕುಂಭ: ಸದಾ ಚಂಚಲ, ಉದ್ವೇಗ ಪ್ರವೃತ್ತಿಯವರಾದ ನೀವು ನಿಧಾನವಾಗಿ ಮುಂದುವರಿದರೆ ಕಾರ್ಯಗಳು ಕೈಗೂಡಲಿದೆ. ಬಂದ ಅವಕಾಶದಲ್ಲಿ ಸಂತೃಪ್ತಿಗೊಂಡು ಅವಕಾಶವನ್ನು ಸದುಪಯೋಗಿಸಿಕೊಂಡಲ್ಲಿ ಅನುಕೂಲವಾಗಲಿದೆ. ಜವಾಬ್ದಾರಿ ಹೆಚ್ಚಲಿದೆ.
ಮೀನ: ಜವಾಬ್ದಾರಿಯುತ ಸ್ಥಾನಪ್ರಾಪ್ತಿ ವೃತ್ತಿರಂಗದಲ್ಲಿ ಅನುಭವಿಸುವಂತಾದೀತು. ಮಕ್ಕಳ ವಿದ್ಯಾಪ್ರಗತಿಯಿಂದಾಗಿ ಮನಸ್ಸು ಕೊಂಚ ಹಗುರವೆನಿಸಲಿದೆ. ಕೃಷಿ ಕಾರ್ಯಗಳು ಪ್ರಕೃತಿಯ ಏರಿಳಿತದಿಂದ ವಿಳಂಬವಾದೀತು. ಎಚ್ಚರಿಕೆ ಇರಲಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Out of Syllabus Review; ಪ್ರೇಮಿಗಳಿಗೆ ಹೊಸ ಸಿಲೆಬಸ್
INDvAUS; ಇತಿಹಾಸದಲ್ಲೇ ಮೊದಲ ಬಾರಿಗೆ…: 200 ವಿಕೆಟ್ ನೊಂದಿಗೆ ಹೊಸ ದಾಖಲೆ ಬರೆದ ಬುಮ್ರಾ
Aranthodu: ಉಡುಪಿಗೆ ಭತ್ತದ ಲೋಡ್ ಸಾಗಿಸುತ್ತಿದ್ದ ವೇಳೆ ಲಾರಿಗೆ ಆಕಸ್ಮಿಕ ಬೆಂಕಿ
Anandapura: ಬಸ್ ಹಾಗೂ ಕಾರು ಮುಖಾಮುಖಿ ಡಿಕ್ಕಿ; ಇಬ್ಬರು ಸ್ಥಳದಲ್ಲೇ ಸಾವು
Liquor Sale; ರಾಜ್ಯದಲ್ಲಿ ಒಂದೇ ದಿನ 408 ಕೋಟಿ ರೂ ಮೌಲ್ಯದ ಮದ್ಯ ಮಾರಾಟ ದಾಖಲೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Out of Syllabus Review; ಪ್ರೇಮಿಗಳಿಗೆ ಹೊಸ ಸಿಲೆಬಸ್
INDvAUS; ಇತಿಹಾಸದಲ್ಲೇ ಮೊದಲ ಬಾರಿಗೆ…: 200 ವಿಕೆಟ್ ನೊಂದಿಗೆ ಹೊಸ ದಾಖಲೆ ಬರೆದ ಬುಮ್ರಾ
Aranthodu: ಉಡುಪಿಗೆ ಭತ್ತದ ಲೋಡ್ ಸಾಗಿಸುತ್ತಿದ್ದ ವೇಳೆ ಲಾರಿಗೆ ಆಕಸ್ಮಿಕ ಬೆಂಕಿ
Anandapura: ಬಸ್ ಹಾಗೂ ಕಾರು ಮುಖಾಮುಖಿ ಡಿಕ್ಕಿ; ಇಬ್ಬರು ಸ್ಥಳದಲ್ಲೇ ಸಾವು
Liquor Sale; ರಾಜ್ಯದಲ್ಲಿ ಒಂದೇ ದಿನ 408 ಕೋಟಿ ರೂ ಮೌಲ್ಯದ ಮದ್ಯ ಮಾರಾಟ ದಾಖಲೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.