ದಿನಭವಿಷ್ಯ: ಈ ರಾಶಿಯವರು ದೇಹಾರೋಗ್ಯದ ಕಡೆ ಹೆಚ್ಚಿನ ಗಮನಹರಿಸಿ
Team Udayavani, Apr 17, 2021, 8:13 AM IST
ಮೇಷ: ರಾಜಕೀಯ ವರ್ಗಗಳಲ್ಲಿ ಪಕ್ಷ ಪಕ್ಷದ ನಡುವೆ ತಿಕ್ಕಾಟ ಪ್ರಾರಂಭವಾಗಿ ಮನಸ್ಸು ಕೆಡಲಿದೆ. ವಿದ್ಯಾರ್ಥಿಗಳು ಪ್ರಯತ್ನಬಲದಲ್ಲಿ ಮುನ್ನಡೆಯಬೇಕು. ಪಾಲು ಬಂಡವಾಳ ವ್ಯವಹಾರದಲ್ಲಿ ಅತೀ ಜಾಗ್ರತೆ ಮಾಡಿರಿ.
ವೃಷಭ: ದೇಹಾರೋಗ್ಯದ ಬಗ್ಗೆ ಹೆಚ್ಚಿನ ಗಮನಹರಿಸುವ ಅಗತ್ಯ ಕಂಡುಬರುವುದು. ಕಾರ್ಯಕ್ಷೇತ್ರದಲ್ಲಿ ಹಿತಶತ್ರುಗಳ ಕಾಟ ಕಿರಿಕಿರಿ ಎನಿಸಲಿದೆ. ಕೆಲವು ಗ್ರಹಗಳ ಒಳ್ಳೆಯ ನಡೆಯಿಂದ ಅನುಕೂಲವಾಗಲಿದೆ.
ಮಿಥುನ: ಶುಭಮಂಗಲ ಕಾರ್ಯಗಳಿಗೆ ಅನುಕೂಲವಾಗಿ ಯೋಗ ವಯಸ್ಕರಿಗೆ ಕಂಕಣಬಲ ಕೂಡಿ ಬರಲಿದೆ. ವ್ಯಾಪಾರಿ ವರ್ಗದವರಿಗೆ ಆದಾಯವು ಹೆಚ್ಚಲಿದೆ. ದೇಹಾರೋಗ್ಯದ ಬಗ್ಗೆ ಚಿಂತೆ ಬೇಡ. ಅಭಿವೃದ್ಧಿ ಇರುತ್ತದೆ.
ಕರ್ಕ: ಕೋರ್ಟು ಕಚೇರಿ ಕಾರ್ಯಭಾಗದಲ್ಲಿ ಯಶಸ್ಸು ನಿಮ್ಮದಾಗಲಿದೆ. ದೃಢ ನಿರ್ಧಾರಗಳು ಮುಂದಿನ ಬೆಳವಣಿಗೆಗೆ, ಅಭಿವೃದ್ಧಿಗೆ ಪೂರಕವಾಗಲಿದೆ. ಪ್ರಯತ್ನಬಲಕ್ಕೆ ಹೆಚ್ಚು ಒತ್ತು ನೀಡಿ ಮುನ್ನಡೆದರೆ ಉತ್ತಮ.
ಸಿಂಹ: ಉದ್ಯೋಗರಂಗದಲ್ಲಿ ಒತ್ತಡಗಳಿಂದ ತಪ್ಪುಗಳು ಘಟಿಸಬಹುದು. ಸ್ವಲ್ಪ ಸಾವಧಾನದಿಂದ ಯೋಚಿಸಿ ಮುನ್ನಡೆಯಿರಿ. ಧನಾಗಮನಕ್ಕಿಂತ ಅಧಿಕ ಖರ್ಚುಗಳು ಕಂಡು ಬರುವುದು. ಲೆಕ್ಕ ಸರಿಯಾಗಿರಲಿ.
ಕನ್ಯಾ: ಚಾಣಾಕ್ಷರಾದ ನಿಮಗೆ ವೃತ್ತಿರಂಗದಲ್ಲಿ ಸ್ಥಾನ ಪ್ರಾಪ್ತಿಯಿಂದ ಮುನ್ನಡೆಗೆ ಸಾಧಕವಾಗಲಿದೆ. ಸ್ಥಗಿತಗೊಂಡ ಕೆಲಸಕಾರ್ಯಗಳು ಪುನಃಹ ಚಾಲನೆಗೆ ಬರಲಿದೆ. ಗುರುಗಳ, ಹಿರಿಯರ ಅನುಗ್ರಹವು ನಿಮ್ಮ ಮೇಲಿದೆ.
ತುಲಾ: ಸರಕಾರೀ ನೌಕರರಿಗೆ ಮುಂಭಡ್ತಿ ಯೋಗವಿದೆ. ಶಿಕ್ಷಣ ಕ್ಷೇತ್ರ ವೃತ್ತಿ ನಿರತರಿಗೆ ಕಾರ್ಯಭಾರ ಅಧಿಕವೆನಿಸಿದರೂ ಲಾಭವಿದೆ. ಮನೆಯಲ್ಲಿ ಪತ್ನಿ , ಮಕ್ಕಳಿಂದ ಅಧಿಕ ಸಹಕಾರ ಕೂಡಿಬಂದೀತು. ಶುಭವಿದೆ.
ವೃಶ್ಚಿಕ: ಆಗಾಗ ನಿರೀಕ್ಷಿತ ಕಾರ್ಯಸಿದ್ಧಿಯಿಂದ ಸಮಾಧಾನ ಸಿಗಲಿದೆ. ಹಿರಿಯರ ಸೂಕ್ತ ಸಲಹೆ ಗಳನ್ನು ಸ್ವೀಕರಿಸಿರಿ. ಯೋಗ್ಯ ವಯಸ್ಕರಿಗೆ ಅಡೆತಡೆಗಳು ಕಂಡುಬಂದರೂ ಕಂಕಣಬಲದ ಪ್ರಾಪ್ತಿ ಇದೆ. ಜಾಗ್ರತೆ ಇರಲಿ.
ಧನು: ರಾಜಕೀಯದಲ್ಲಿ ನಿಮ್ಮ ಪರಿಶ್ರಮ ಸಾರ್ಥಕವಾಗಲಿದೆ. ಗೃಹ ನಿವೇಶನದ ಖರೀದಿ ನಡೆದೀತು. ಆಗಾಗ ವಿಘ್ನ ಪರಂಪರೆಗಳು ಅನುಭವಕ್ಕೆ ಬರುವುದು. ವಿದ್ಯಾರ್ಥಿಗಳಿಗೆ ಆಶಾಭಂಗವಾದೀತು. ಧೈರ್ಯ ಮಾಡುವುದು.
ಮಕರ: ತಾಳ್ಮೆ ಸಮಾಧಾನದಿಂದ ಮುನ್ನಡೆಯಿರಿ. ತಂದೆ ಮಕ್ಕಳಲ್ಲಿ ಭಿನ್ನಾಭಿಪ್ರಾಯ ಮೂಡಿಬರುವುದು. ತಿದ್ದಿ ಸರಿ ಮಾಡಿಕೊಳ್ಳಿರಿ. ಜೀವನದಲ್ಲಿ ಉತ್ಕಟ ಇಚ್ಛೆಗಳು ನಿಮ್ಮ ಮುನ್ನಡೆಗೆ ಕಾರಣವಾದಾವು. ಯಶಸ್ಸು ಇದೆ.
ಕುಂಭ: ಆಗಾಗ ದ್ವಂದ ಸ್ವಭಾವ ಕಾಡಲಿದ್ದು ಮುನ್ನಡೆಗೆ ವಿಳಂಬವಾದೀತು. ಚಿಂತಿತ ಕೆಲಸಗಳು ಕಾರ್ಯರೂಪಕ್ಕೆ ಬಂದರೂ ಅಡೆತಡೆಗಳು ಎದುರಾಗಲಿದೆ. ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆಯಲ್ಲಿ ಹಿನ್ನಡೆ ತೋರಿಬರಲಿದೆ.
ಮೀನ: ವ್ಯಾಪಾರ, ವ್ಯವಹಾರಗಳಲ್ಲಿ ಸ್ಪರ್ಧಾತ್ಮಕ ಮನೋಭಾವದಿಂದ ಶತ್ರುಕಾಟ ತೋರಿಬರುವುದು. ಸಂಚಾರದಿಂದ ಲಾಭ ಉಂಟಾಗಲಿದೆ. ವ್ಯಾಪಾರಿಗಳಿಗೆ ಲಾಭ ಇದ್ದರೂ ಖರ್ಚು ಅಷ್ಟೇ ಕಂಡುಬಂದೀತು. ಮುನ್ನಡೆಯಿರಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Organ Donation: ಸಾವಿನ ನಂತರವೂ ನೆರವಾದ ಜೀವ
Anandapura: ಸಾಲದ ಬಾಧೆ ತಾಳಲಾರದೆ ರೈತ ಆತ್ಮಹ*ತ್ಯೆ
Maharashtra Election: ಅಮಿತ್ ಶಾ ಅವರ ಬ್ಯಾಗ್ ಪರೀಕ್ಷಿಸಿದ ಚುನಾವಣಾ ಅಧಿಕಾರಿಗಳು
Bengaluru: ವೈದ್ಯೆಗೆ ಲೈಂಗಿಕ ಕಿರುಕುಳ: ಪಿಎಸ್‌ಐ ವಿರುದ್ದ ಪೊಲೀಸ್ ಆಯುಕ್ತರಿಗೆ ದೂರು
Bengaluru: ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯ ಜೀವ ಉಳಿಸಿದ ಸಂಚಾರ ಪೊಲೀಸರು
MUST WATCH
ಹೊಸ ಸೇರ್ಪಡೆ
Organ Donation: ಸಾವಿನ ನಂತರವೂ ನೆರವಾದ ಜೀವ
Anandapura: ಸಾಲದ ಬಾಧೆ ತಾಳಲಾರದೆ ರೈತ ಆತ್ಮಹ*ತ್ಯೆ
Maharashtra Election: ಅಮಿತ್ ಶಾ ಅವರ ಬ್ಯಾಗ್ ಪರೀಕ್ಷಿಸಿದ ಚುನಾವಣಾ ಅಧಿಕಾರಿಗಳು
Bengaluru: ವೈದ್ಯೆಗೆ ಲೈಂಗಿಕ ಕಿರುಕುಳ: ಪಿಎಸ್‌ಐ ವಿರುದ್ದ ಪೊಲೀಸ್ ಆಯುಕ್ತರಿಗೆ ದೂರು
Bengaluru: ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯ ಜೀವ ಉಳಿಸಿದ ಸಂಚಾರ ಪೊಲೀಸರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.