ನಿತ್ಯಭವಿಷ್ಯ: ಈ ರಾಶಿಯ ನಿರುದ್ಯೋಗಿಗಳು, ಅವಿವಾಹಿತರಿಗೆ ಇಂದು ಶುಭ ಸಮಾಚಾರ
Team Udayavani, Mar 24, 2021, 7:18 AM IST
ಮೇಷ: ವಿದ್ಯಾರ್ಥಿಗಳ ಪ್ರಯತ್ನಬಲಕ್ಕೆ ಅನುಕೂಲವಾದ ಫಲಿತಾಂಶ ಲಭಿಸುವುದು. ಮುಖ್ಯವಾಗಿ ಸಾಂಸಾರಿಕ, ಕೌಟುಂಬಿಕ ಸಮಸ್ಯೆಗಳನ್ನು ಬದಿಗೊತ್ತಿ ಮಾನಸಿಕ ನೆಮ್ಮದಿ ಕಾಪಾಡಿಕೊಳ್ಳಬೇಕು.
ವೃಷಭ: ಅವಿವಾಹಿತರ ವೈವಾಹಿಕ ಭಾಗ್ಯಕ್ಕೆ ಅದೃಷ್ಟಬಲ ಖುಲಾಯಿಸಲಿದೆ. ಆದಾಯ ಮಾರ್ಗಸೂಚಿಗೆ ಹಲವಾರು ಮಾರ್ಗಗಳು ಗೋಚರಕ್ಕೆ ಬಂದಾವು. ಸದುಪಯೋಗಿಸಿಕೊಳ್ಳಬೇಕು. ಸಂತಸದ ಸಮಯವಿದು.
ಮಿಥುನ: ದೇವತಾ ಕಾರ್ಯಗಳಿಂದ ಪುಣ್ಯ ಸಂಪಾದನೆಯ ಸಲಹೆ ವೈದಿಕರಿಂದ ಬಂದೀತು. ರಾಜಕೀಯ ವರ್ಗದವರಿಗೆ ಮನಸ್ಸು ಸ್ಥಿರವಿರದು. ಕುಟುಂಬದ ಹಿರಿಯರ ಆರೋಗ್ಯದ ಬಗ್ಗೆ ಜಾಗ್ರತೆ ಅಗತ್ಯವಿದೆ.
ಕರ್ಕ: ಆರೋಗ್ಯ ಭಾಗ್ಯದಲ್ಲಿ ಆಗಾಗ ಶೀತ ಪ್ರವೃತ್ತಿ, ಮೈನೋವು, ಸಂಧಿನೋವು ಇತ್ಯಾದಿಗಳ ಅನುಭವ ಆಗಲಿದೆ. ಕಾರ್ಯರಂಗದಲ್ಲಿ ಹಾಗೂ ವೃತ್ತಿರಂಗದಲ್ಲಿ ಸಾವಧಾನದಿಂದ ಮುಂದುವರಿಯಬೇಕಾಗುತ್ತದೆ.
ಸಿಂಹ: ದೇಹಾರೋಗ್ಯ ಹಂತಹಂತವಾಗಿ ಸುಧಾರಿಸುತ್ತಾ ಹೋದರೂ ಉದಾಸೀನತೆ ತೋರದಿರಿ. ಧಾರಾಳ ಅವಕಾಶಗಳಿಂದ ವ್ಯವಹಾರಸ್ಥರಿಗೆ ಆರ್ಥಿಕ ಉನ್ನತಿ ಕಂಡುಬರುತ್ತದೆ. ವಾರಾಂತ್ಯ ಶುಭವಿದೆ.
ಕನ್ಯಾ: ನವ ದಾಂಪತ್ಯದಲ್ಲಿ ಹೊಸ ಸದಸ್ಯನ ಆಗಮನವಿರುತ್ತದೆ. ನಿರುದ್ಯೋಗಿಗಳು, ಅವಿವಾಹಿತರು ಶುಭ ಸಮಾಚಾರವನ್ನು ಕೇಳಲಿದ್ದಾರೆ. ಸಂಚಾರದಲ್ಲಿ ಜಾಗ್ರತೆ ಇರಲಿ. ಮನೆಯಲ್ಲಿ ಆಗಾಗ ಶುಭಮಂಗಲ ಕಾರ್ಯ ನಡೆಯಲಿದೆ.
ತುಲಾ: ಅವಿವಾಹಿತರು ಹೊಂದಾಣಿಕೆಯ ಮನೋಭಾವನೆಯನ್ನು ಮಾಡಿಕೊಂಡಲ್ಲಿ ಕಂಕಣಬಲಕ್ಕೆ ಸಾಧಕವಾದೀತು. ವೈಯಕ್ತಿಕವಾಗಿ ಯಾರನ್ನು ನಂಬದಂಥ ಪರಿಸ್ಥಿತಿ ಇದೆ. ಆರ್ಥಿಕವಾಗಿ ಧನದಾಹ ಹೆಚ್ಚಳದಿಂದ ಏರುಪೇರಾಗುವ ಸಮಯವಿದು.
ವೃಶ್ಚಿಕ: ಹೂಡಿಕೆ, ವಿಸ್ತರಣೆಗಳು, ವ್ಯಾಪಾರ, ವ್ಯವಹಾರಗಳಿಗೆ ಅನುಕೂಲಕರ. ಕಾರ್ಯಕ್ಷೇತ್ರದಲ್ಲಿ ಹಲವಾರು ವಾಸ್ತವ ಅವಕಾಶಗಳು ನಿಮಗೆ ಬರುವುದರಿಂದ ಅದರ ಸದುಪಯೋಗ ಮಾಡಿಕೊಳ್ಳಿ.
ಧನು: ಸಾಮಾಜಿಕ ರಂಗದಲ್ಲಿ ಹೊಸಬರ ಸಂಪರ್ಕ ಕಾರ್ಯನುಕೂಲಕ್ಕೆ ಪೂರಕವಾಗಲಿದೆ. ಸಾಂಸಾರಿಕ ವಿಚಾರಗಳಲ್ಲಿ ಸಮಾಧಾನಕರ ವಾತಾವರಣವಿದ್ದರೂ ಸಣ್ಣ-ಪುಟ್ಟ ತಪ್ಪು ತಿಳುವಳಿಕೆಗಳು ಆಗಾಗ ತೋರಿಬರಬಹುದು.
ಮಕರ: ದೂರ ಸಂಚಾರದಲ್ಲಿ ಮಾತ್ರವಲ್ಲ, ಚಾಲನೆಯಲ್ಲಿ ಕೂಡ ಜಾಗ್ರತೆ ಇರಲಿ. ಆಗಾಗ ಕೊಂಚ ಗೊಂದಲಕ್ಕೆ ಕಾರಣವಾಗುವ ತಾಪತ್ರಗಳನ್ನು ಅನುಭವಿಸ ಬೇಕಾಗುತ್ತದೆ. ಸ್ವಕೃತ ಅಪರಾಧಗಳು ತೋರಿಬಾರದಂತೆ ಜಾಗ್ರತೆ ವಹಿಸಬೇಕು.
ಕುಂಭ: ಯಾವುದೇ ವಿಚಾರದಲ್ಲಿ ದುಡುಕು ವರ್ತನೆಗೆ ಕಾರಣರಾಗದಂತೆ ವರ್ತಿಸಿರಿ. ವಿದ್ಯಾರ್ಥಿ ಗಳು ಅಭ್ಯಾಸದಲ್ಲಿ ಮಿತ್ರ ಸಮೂಹದ ಆಕರ್ಷಣೆಗೆ ಒಳಗಾದಾರು. ನಿರುದ್ಯೋಗಿಗಳ ಹಿನ್ನಡೆ ಅನಿರೀಕ್ಷಿತ ರೂಪದಲ್ಲಿ ನಿವಾರಣೆಯಾಗುತ್ತದೆ.
ಮೀನ: ಸಾಂಸಾರಿಕ ಹೊಂದಾಣಿಕೆ ಗಟ್ಟಿಯಾಗಿರಲಿ. ಹಿರಿಯರ, ಮಕ್ಕಳ ಆರೋಗ್ಯ ಆಗಾಗ ಕೈಕೊಡಲಿದೆ. ಆರ್ಥಿಕ ಪರಿಸ್ಥಿತಿ ನಿಮ್ಮ ಲೆಕ್ಕಾಚಾರವನ್ನು ಹೊಂದಿಕೊಂಡು ಹೋಗಬೇಕಾಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.