ಶುಭಮಂಗಲ ಕಾರ್ಯಗಳಿಗೆ ಉತ್ತಮ ಸಮಯ; ಸರಕಾರಿ ನೌಕರರಿಗೆ ಲಾಭ: ಹೇಗಿದೆ ಇಂದಿನ ಗ್ರಹಬಲ ?
Team Udayavani, Feb 2, 2021, 7:30 AM IST
ಮೇಷ: ಮನಸ್ಸು ಕ್ಲೇಶದ ಗೂಡಾಗಲಿದೆ. ಗೋಚರಕ್ಕೆ ಬಾರದ ಹಲವು ವಿಷಯಗಳು ತಿಳಿದು ಮನಸ್ಸಿಗೆ ತುಂಬಾ ನೋವುಂಟು ಮಾಡಲಿದೆ. ನಿಮ್ಮ ಹೃದಯವು ಒಳ್ಳೆಯ ಭಾವನೆ ಹಾಗೂ ಧ್ಯೇಯವನ್ನು ಹೊಂದಿರುತ್ತದೆ.
ವೃಷಭ: ನಿಮ್ಮ ಕಠಿಣ ಪರಿಶ್ರಮ ಹಾಗೂ ಮೇಧಾಶಕ್ತಿಯು ಸಮಾಜದಲ್ಲಿ ಉತ್ತಮ ಉದ್ಯೋಗಸ್ಥನನ್ನಾಗಿಯೂ, ಗೌರವ ಸಂಪನ್ನನಾಗಿ ಮಾಡುತ್ತದೆ. ಧಾರಾಳ ಮನೋಭಾವವು, ಸಾಮಾನ್ಯ ಜನರ ಸೇವೆಯು ನಿಮ್ಮ ಮನೋವೃತ್ತಿ.
ಮಿಥುನ: ಅತೀ ಸಂಯಮದಿಂದಿರುವ ನೀವು ಒಳ್ಳೆಯ ಶಿಸ್ತಿನ ಜೀವನವನ್ನು ರೂಢಿಸಿಕೊಂಡಿರುವಿರಿ. ಒಳಗೊಂದು ಹೊರಗೊಂದು ನಿಮಗೆ ಗೊತ್ತಿರುವುದಿಲ್ಲ. ಇದರ ದುರುಪಯೋಗವಾಗದಂತೆ ಜಾಗ್ರತೆ ವಹಿಸಿರಿ.
ಕರ್ಕ: ನಿಸರ್ಗ ಸೌಂದರ್ಯವನ್ನು ಆರಾಧಿಸುವ ಕಲಾತ್ಮಕ ದೃಷ್ಟಿ ನಿಮ್ಮದಾಗಿರುತ್ತದೆ. ನಿಮ್ಮ ಮೇಲೆ ನಿಮಗೆ ಹೆಚ್ಚಿನ ನಂಬಿಕೆ. ಆದರೆ ಒಮ್ಮೊಮ್ಮೆ ನಿಮ್ಮಲ್ಲಿ ಸ್ವಾರ್ಥಮಯ ದುಷ್ಟಬುದ್ಧಿಯು ತಲೆ ಎತ್ತಲಿರುವುದು.
ಸಿಂಹ: ನೀವು ತ್ಯಾಗಜೀವಿಯೂ ಹೌದು. ಅಧಿಕಾರ ವ್ಯಾಮೋಹ ನಿಮಗಿರುತ್ತದೆ. ಹಾಗೂ ಮುಖಂಡತ್ವದ ನಿರೀಕ್ಷೆ ನಿಮ್ಮಲ್ಲಿರುತ್ತದೆ. ಆತ್ಮಾಭಿಮಾನವನ್ನು ಸದಾಕಾಲ ಸಂರಕ್ಷಿಸುವ ಪ್ರವೃತ್ತಿಯು ನಿಮ್ಮದಾಗಿರುತ್ತದೆ.
ಕನ್ಯಾ: ಜಯಾಪಜಯವನ್ನು ಪೂರ್ವಭಾವಿಯಾಗಿಯೇ ಯೋಚಿಸಿಯೇ ಕಾರ್ಯರಂಗಕ್ಕೆ ಇಳಿಯುವ ನಿಮ್ಮ ಸ್ವಭಾವವಾದರೂ ಕೆಲವೆಡೆ ತೊಂದರೆಗೆ ಸಿಲುಕಿಕೊಳ್ಳುವಿರಿ. ವ್ಯವಹಾರದಲ್ಲಿ ನಿಮ್ಮಿಂದ ತಪ್ಪುಗಳಾದಾವು.
ತುಲಾ: ಚಿಂತಾಕ್ರಾಂತರಾದಾಗ ನಿಮ್ಮ ಸುಖದುಃಖವನ್ನು ಹಂಚಿಕೊಳ್ಳಲು ಒಳ್ಳೆಯ ಮಿತ್ರರನ್ನು ಹೊಂದಿರುವಿರಿ. ಉತ್ತಮ ಮೇಧಾಶಕ್ತಿ ಹಾಗೂ ತುಲನಾಶಕ್ತಿಯುಳ್ಳ ನೀವು ಉತ್ತಮ ವಾಗ್ಮಿಗಳು. ಸಂಚಾರದಿಂದ ಶುಭ.
ವೃಶ್ಚಿಕ: ಸರಕಾರೀ ನೌಕರರಿಗೆ ಲಾಭಗಳು ಹಿಂದಿನಗಿಂತ ಉತ್ತಮವಿದ್ದೀತು. ಅಭಿವೃದ್ಧಿ ತಂದುಕೊಟ್ಟಿತು. ಆರೋಗ್ಯದ ಬಗ್ಗೆ ಹಾಗೂ ಸಂಚಾರದ ಬಗ್ಗೆ ವಿಶೇಷ ರೀತಿಯ ಕಾಳಜಿ ವಹಿಸುವುದು ಅತೀ ಅಗತ್ಯವಾಗಿದೆ.
ಧನು: ಅಪೇಕ್ಷಿತ ಜನರಿಂದ ಸಹಾಯ ದೊರೆತರೂ ಅದು ಸಾಲದು ಎಂಬ ವಿಚಾರ ಮನದಲ್ಲಿಟ್ಟು ಮುನ್ನಡೆಯಿರಿ. ಹೊಸ ಯೋಜನೆಗಳ ಚಿಂತನೆ ಮಾಡಿ ಮುನ್ನಡೆದರೆ ಅಭಿವೃದ್ಧಿ ತೋರಿಬರಲಿದೆ. ಅತೀ ಸಂಚಾರ ಬೇಡ.
ಮಕರ: ಉದ್ಯೋಗಿಗಳಿಗೆ ಅನಿರೀಕ್ಷಿತ ರೀತಿಯಲ್ಲಿ ಅಭಿವೃದ್ಧಿಯು ಅನುಭವಕ್ಕೆ ಬರಲಿದೆ. ಮುಖ್ಯವಾಗಿ ನಿಮ್ಮ ಪ್ರಯತ್ನಬಲ, ಆತ್ಮವಿಶ್ವಾಸ, ದೃಢ ನಿರ್ಧಾರಗಳು ನಿಮಗೆ ಸಮಾಜದಲ್ಲಿ ಗೌರವ, ಘನತೆ, ಕೀರ್ತಿ ಕೊಡಲಿದೆ.
ಕುಂಭ: ಪರದೇಶೀ ಉದ್ಯೋಗದವರು ಅತೀ ಶ್ರಮ ಪಡಬೇಕಾದರೂ ನಿರೀಕ್ಷಿತ ಫಲವು ದೊರೆತೇ ದೊರೆಯುವುದು. ಕೃಷಿ, ಕಾರ್ಖಾನೆ ಉದ್ದಿಮೆಯವರಿಗೆ ಚೇತರಿಕೆ ಕಂಡುಬರುವುದು. ಉದ್ಯೋಗಿಗಳು ಜಾಗ್ರತೆ ಮಾಡಿರಿ.
ಮೀನ: ಗೃಹ ನಿರ್ಮಾಣದಂತಹ ನೂತನ ಕೆಲಸ ಕಾರ್ಯಗಳಿಗೆ, ಶುಭಮಂಗಲ ಕಾರ್ಯಗಳಿಗೆ ಇದು ಅನುಕೂಲವಾದ ಸಮಯ. ಸ್ವಲ್ಪ ಪ್ರಯತ್ನದಲ್ಲೇ ಫಲ ಸಿಗಲಿದೆ. ಅತಿಯಾದ ಆಸೆಯು ನಿಮಗೆ ಬೇಡ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kashmir cold: 34 ವರ್ಷಗಳಲ್ಲೇ ಕನಿಷ್ಠ ತಾಪಮಾನ ದಾಖಲು!
Natural Disaster: ಅನಿರೀಕ್ಷಿತ ಮಳೆಗೆ ಸೊರಗಿದ ವಿಶಿಷ್ಟ ಗುಣದ ಹೆಮ್ಮಾಡಿ ಸೇವಂತಿಗೆ
Rain Alert: ರಾಜ್ಯದಲ್ಲಿ ಕನಿಷ್ಠ ತಾಪಮಾನ 4 ಡಿ.ಸೆ ಏರಿಕೆ; ಹಲವೆಡೆ 24ರಂದು ಮಳೆ ಸಾಧ್ಯತೆ
Karnataka; ರಾಜ್ಯದ ಕಾಡಿಗೆ ಕೊಡಲಿ! ಮಾನವ-ವನ್ಯಜೀವಿ ಸಂಘರ್ಷ ಹೆಚ್ಚಳ?
Puri; ವರ್ಷಾರಂಭದೊಂದಿಗೆ ಜಗನ್ನಾಥ ದೇಗುಲದಲ್ಲಿ ಹೊಸ ದರ್ಶನ ವ್ಯವಸ್ಥೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.