ಜಾತಕ ಫಲ
Team Udayavani, Nov 17, 2014, 8:59 AM IST
ಪ್ರಸನ್ನ ರಾಜ ಪ್ರಸಾದ, ಹ್ಯೂಸ್ಟನ್ ಅಮೇರಿಕ
ನಾನು ಅಮೆರಿಕಾಕಕ್ಕೆ ಬಂದು ಏಳು ವರ್ಷಗಳಾಗಿವೆ. ಮಕ್ಕಳಿಗೀಗ ಕ್ರಮವಾಗಿ 3 ಹಾಗೂ 5 ವರ್ಷ. ಭಾರತಕ್ಕೆ ಹಿಂದಿರುಗೋಣ ಎಂಬುದು ನನ್ನವಳ ಅಭಿಪ್ರಾಯ. ದೇಶದ ಬಗೆಗೆ ಗೌರವವಿದೆ. ಆದರೆ ಬಿಟ್ಟು ಬರುವ ಕೆಲಸದಲ್ಲಿ ಆತಂಕವಿದೆ. ಏನು ಮಾಡಬಹುದು? ಸಲಹೆ ನೀಡಿ.
ನಿಮ್ಮ ಜಾತಕದ ಪಂಚಮ ಭಾವ ಮತ್ತು ಪಂಚಮಾಧಿಪತಿಗಳ ಸಂಬಂಧ ನೇರವಾಗಿ ಜಲ ತತ್ವಗಳಿಗೆ ಸಂಬಂಧ ಪಡೆದು ಸಿದ್ಧಿ ಯೋಗದಲ್ಲಿ ಗಟ್ಟಿಗೊಂಡಿದ್ದರಿಂದ ನಿಮಗೆ ಮಕ್ಕಳ ವಿಚಾರದಲ್ಲಿ ತೊಂದರೆ ಬರದು. ಉತ್ತಮ ಸಂಸ್ಕಾರಗಳು ಕೌಟುಂಬಿಕ ವಲಯಕ್ಕೆ ಶ್ರೀ ರಕ್ಷೆಯಾಗಲು ಧರ್ಮ ಭಾವವು ಶುಕ್ರನಿಂದ ಬಲಗೊಂಡಿದೆ. ಅಮೇರಿಕಾದಲ್ಲೇ ಇದ್ದರೂ ತೊಂದರೆ ಆಗದು.
ಜಾನ್‌ಜಯಶೀಲ, ಗೋಣಿಕೊಪ್ಪ
ನನಗೆ ದೇವರ ದಯದಿಂದ ಹಣಕಾಸಿನ ತೊಂದರೆ ಇಲ್ಲ. ಸಂಜೆಯ ಹೊತ್ತು ಮಾದಕ ದ್ರವ್ಯ ಸೇವಿಸದೆ ನಿದ್ದೆ ಹತ್ತುವುದಿಲ್ಲ. ಲಿವರ್ ಕೊಂಚ ಘಾಸಿಗೊಂಡಿದೆ ಎಂದು ವೈದ್ಯರು ತಿಳಿಸಿದ್ದಾರೆ. ಏಕ ನಿಷ್ಠೆಯಿಂದ ಮದ್ಯಪಾನದಿಂದ ದೂರಾಗಲು ದಾರಿ ತಿಳಿಸಿ.
ರಾಹು ಗ್ರಹವು ಲಗ್ನಸ್ಥವಾಗಿ ದುಷ್ಟ ಕುಜನ ಪೈಶಾಚಿಕ ಮುಷ್ಟಿಯಲ್ಲಿ ಬಂಧಿತವಾಗಿದೆ. ಚಂದ್ರನ ನಿಮ್ನ ಹಾಗೂ ನೀಚ ಸ್ಥಿತಿ ಮಾನಸಿಕ ದುರ್ಬಲತೆಯನ್ನು ಸೂಚಿಸುತ್ತದೆ.ಅನುಕೂಲ ಮಾಡಿಕೊಂಡು ಪ್ರತಿ ದಿನ ನೆರವೇರಿ ಸುವುದಾದರೆ, ಸಂಜೆಯ ಆರರ ಹೊತ್ತಿಗೆ ಸ್ನಾನ ಪೂರೈಸಿ, ಆಲದ ಅಥವಾ ಅರಳೀ ಮರದ ಎಲೆಯೊಂದರಲ್ಲಿ 5 ಅವರೆಕಾಳನ್ನು ಜೇನು ತುಪ್ಪದಲ್ಲಿ ಬೆರೆಸಿ ಮನೆಯ ನೈಋತ್ಯ ಮೂಲೆಯಲ್ಲಿರಿಸಿ ಏಕಾಗ್ರತೆಯಿಂದ ಏಸುವಿನ ಧ್ಯಾನದಲ್ಲಿ ಒಂದು ತಾಸು ಕಳೆಯಿರಿ. ಈ ಅವರೇ ಕಾಳನ್ನು ನಿಂಬೆ ಹಣ್ಣಿನ ಜೊತೆ ನಂತರು ಶುದ್ಧ ಹಾಲಿನೊಂದಿಗೆ ಸೇವಿಸಿ. ಪರಿಣಾಮ ಉತ್ತಮ.
ಸತ್ಯವತಿ ತಡಸಲಕೊಪ್ಪ
ಕನಸಲ್ಲಿ ಬಾಧೆಯಾಗುತ್ತಿದೆ. ನಿರ್ಜನ ಪ್ರದೇಶ ಒಂದರಲ್ಲಿ ಹುಲಿ, ಸಿಂಹ, ಕರಡಿಗಳು ಮೈಮೇಲೆ ಎರಗಿ ಬಂದಂತಾಗುತ್ತವೆ. ಕಷ್ಟಪಟ್ಟು ಓಡಿ ಅವುಗಳಿಂದ ತಪ್ಪಿಕೊಂಡಂತೆ ಅನಿಸಿದಾಗ ಎಚ್ಚರವಾಗುತ್ತದೆ. ಎಚ್ಚರವಾದಾಗ ಕೂಗದೇ ಇರಲಾಗದು. ಮನೆಯಲ್ಲಿ ಪತಿ ಹಾಗೂ ಮಕ್ಕಳಿಗೆ ಯಕ್ಷ ಪ್ರಶ್ನೆಯಾಗಿದ್ದೇನೆ. ಈ ಗೊಂದಲದಿಂದ ಹೊರಬರಲು ಏನು ಮಾಡಲಿ?
ಕುಜನು ಅಷ್ಟಮ ಭಾವದಲ್ಲಿ ನೀಚ ಗುರುವಿನೊಂದಿಗೆ ಇದ್ದಿರುವುದು, ಗುರುವಿನ ಕೇಂದ್ರಾಧಿಪತ್ಯ ದೋಷಕ್ಕೆ ಇನ್ನಿಷ್ಟು ದುರ್ಬಲತೆ ತುಂಬಿದೆ. ಎಳ್ಳೆಣ್ಣೆಯಿಂದ ಪಂಚಮುಖೀ ಹನುಮಂತನನ್ನು ಪ್ರತಿ ಶನಿವಾರ ಹಾಗೂ ಮಂಗಳವಾರ ಪೂಜಿಸಿ. ಈ ಎಣ್ಣೆಯ ನಯವನ್ನು ಪ್ರತಿ ದಿನ ತುಸುವೇ ಕಣ್ಣಿಗೆ ಲೇಪಿಸಿಕೊಂಡು ಪ್ರತಿ ದಿನ ನಿದ್ದೆ ಮಾಡಿ. ಪೂಜೆಯ ಸಮಯದಲ್ಲಿ ಮಹಾಕಾಳಿಯ ಸ್ತುತಿ ಮಾಡಿ.
ಜ್ಯೋತಿಷ ಕುರಿತಾದ ಪ್ರಶ್ನೆಗಳನ್ನು ನಮ್ಮ ವಿಳಾಸಕ್ಕೆ ಅಥವಾ ಕೆಳಗಿನ ಇ-ಮೇಲ್‌ಗೆ ಕಳುಹಿಸಿ:
Email: [email protected]
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?
Ugadi astrology 20204: ನಿಮ್ಮ ರಾಶಿ ಭವಿಷ್ಯ-ಯಾವ ರಾಶಿಗೆ ಕೇಡು, ಯಾವ ರಾಶಿಗೆ ಒಳಿತು!
ಗುರುವಾರದ ರಾಶಿ ಫಲ, ಇಲ್ಲಿವೆ ನಿಮ್ಮ ಗ್ರಹಬಲ
ಶುಭಮಂಗಲ ಕಾರ್ಯಗಳಿಗೆ ಉತ್ತಮ ಸಮಯ; ಸರಕಾರಿ ನೌಕರರಿಗೆ ಲಾಭ: ಹೇಗಿದೆ ಇಂದಿನ ಗ್ರಹಬಲ ?
ಆತಂಕ, ದುಗುಡ ಯಾಕೆ? ಅಕ್ಟೋಬರ್ ತಿಂಗಳ ನಿಮ್ಮ ಮಾಸ ಭವಿಷ್ಯ ಓದಿ..
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ
ದುಷ್ಟ ಶಕ್ತಿಗಳಿಂದ ದೇಶದ ನೆಮ್ಮದಿ ಕೆಡಿಸಲು ಧರ್ಮ-ಜಾತಿಯ ದುರ್ಬಳಕೆ: ಸಿದ್ದರಾಮಯ್ಯ
Shivamogga: ಮಾಂಗಲ್ಯ ಸರ ಕಿತ್ತು ಪರಾರಿಯಾದ ಖರ್ತನಾಕ್ ಕಳ್ಳರು; ಸಿಸಿಟಿವಿಯಲ್ಲಿ ಸೆರೆ
Mollywood: ʼಮಾರ್ಕೊʼ ಬಳಿಕ ಮೋಹನ್ ಲಾಲ್ ನಿರ್ದೇಶನದ ʼಬರೋಜ್ʼ ಚಿತ್ರಕ್ಕೂ ಪೈರಸಿ ಕಾಟ
BGT; ಬಾರ್ಡರ್-ಗಾವಸ್ಕರ್ ಟ್ರೋಫಿ ವಿತರಣೆಗೆ ಗಾವಸ್ಕರ್ ಗೆ ಆಹ್ವಾನವಿಲ್ಲ! ದಿಗ್ಗಜನ ಬೇಸರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.