ತುಲಾ ರಾಶಿಯವರು ಹೇಗೆ ಎತ್ತ?
Team Udayavani, Aug 19, 2016, 9:35 PM IST
ತುಲಾ ರಾಶಿಯವರು ಶುಕ್ರಗ್ರಹದ ಆಡಳಿತಕ್ಕೆ ಒಳಪಟ್ಟಿರುತ್ತಾರೆ. ಒಂದೊಮ್ಮೆ ಮಂಗಳ ಗ್ರಹದ ಶಕ್ತಿ ತುಲಾ ರಾಶಿಯ ಮೇಲೆ ಇರಲಿ ಶುಕ್ರನ ಮೇಲೇ ಇರಲಿ ನಕಾರಾತ್ಮಕ ರೀತಿಯದ್ದಾಗಿದ್ದರೆ ತುಲಾ ರಾಶಿಯ ಜನರ ಗುಣಧರ್ಮಗಳು ತೂಕ ತಪ್ಪಿದ ರೀತಿಯದ್ದಾಗುತ್ತದೆ. ಮಾನಸಿಕವಾಗಿ ಸ್ಥೈರ್ಯವನ್ನು ಪ್ರದರ್ಶಿಸಲು ವಿಫಲರಾಗುತ್ತಾರೆ. ಸೂರ್ಯನೂ ಕೂಡಾ
ಇಂಥ ಕಾರ್ಯಗಳನ್ನು ಒದಗಿಸಬಹುದಾಗಿದೆ. ಶುಕ್ರನ ಸಂಬಂಧವಾಗಿ ಸೂರ್ಯ ನಿರ್ಮಿಸುವ ಘಾತಗಳು ಅನೇಕ ಬಗೆಯದಾದ್ದರಿಂದ ಮಂಗಳನು ಚಂಚಲತೆ, ಏಕಾಗ್ರತೆ
ಭಂಗವನ್ನು ತುಲಾರಾಶಿಯವರಿಗೆ ಧಾರಾಳವಾಗಿ ಒದಗಿಸುವವನಾಗಿದ್ದಾರೆ. ಇದರಿಂದ ಸೂರ್ಯ ಹಾಗೂ ಮಂಗಳ ಗ್ರಹಗಳ ಕುರಿತಾಗಿ ಹೆಚ್ಚು ಹೆಚ್ಚು ಶಮನಕಾರಕ ಮೂಲ ಬೀಜಾಕ್ಷರ ಕವಚಾದಿ ಸ್ತೀತ್ರಗಳನ್ನು ತೊಂದರೆಗಳ ನಿವಾರಣೆಗಾಗಿ ಪಠಿಸಬೇಕು. ಆರೋಗ್ಯ ಕೌಟುಂಬಿಕ ಜೀವನ ಬಾಳಸಂಗಾತಿಯೊಂದಿಗಿನ ಹೊಂದಾಣಿಕೆ ಇವೆಲ್ಲ ಚೈತನ್ಯಗಳಿಗೆ ಈ ಪಠಣಗಳು ಸಹಾಯ ಮಾಡುತ್ತದೆ. ಸಿದ್ಧಿಗೆ ದಾರಿಯಾಗುತ್ತದೆ.
ತುಲಾ ರಾಶಿಯವರು ಎಲ್ಲವೂ ಸರಿ ಇದ್ದಾಗ ದೈಹಿಕವಾದ ಸದೃಢತೆ ಲವಲವಿಕೆಗಳಿಂದ ಕಂಗೊಳಿಸುತ್ತಾರೆ. ಶನೈಶ್ಚರ ಹಾಗೂ ಬುಧರು ಜಾತಕದಲ್ಲಿ ಬಲ ತುಂಬಿಕೊಂಡಾಗ ತುಲಾ ರಾಶಿಯವರ ಸಫಲತೆಯ ಮಟ್ಟ ಅಭೂತಪೂರ್ವವಾದುದು. ಕೊಂಚ ಏರು ಪೇರಾದರೂ ಶನಿ ಹಾಗೂ ಬುಧರ ದೌರ್ಬಲ್ಯದಿಂದ ಅನೇಕ ರೀತಿಯ ತಳಮಳ ಕಿರಿಕಿರಿ ವೈಫಲ್ಯಗಳನ್ನು ಜೀವನದ ಸಂದರ್ಭದಲ್ಲಿ ಎದುರಿಸುತ್ತಾರೆ. ಚಂದ್ರನ ತೊಂದರೆಗಳಿಂದ ಮಾಡುವ ಕೆಲಸದಲ್ಲಿ ದುಡಿಯುವ ಸಂಸ್ಥೆ ಅಥವಾ ಸ್ಥಳಗಳಲ್ಲಿ ಅಶಾಂತಿಯನ್ನೇ ಗಂಟಿಕ್ಕಿಕೊಳ್ಳುತ್ತಾರೆ. ಚಂದ್ರ ಸಿದ್ಧಿಯ ಸಲುವಾಗಿ ನಿವಾರಣ ಸಂಕಲ್ಪಗಳನ್ನೋ ಅಥವಾ ಚಂದ್ರ ಪೀಡಾ ನಿವಾರಣಾ ಸ್ತೋತ್ರಗಳನ್ನೋ ಪಠಿಸಿದರೆ ಚಂದ್ರನಿಂದಾಗುವ ತೊಂದರೆಗಳನ್ನು ನಿವಾರಿಸಿಕೊಳ್ಳಬಹುದು. ಹಲವಾರು ಸಿದ್ಧಿ ಮಂತ್ರಗಳನ್ನು ತಾವೇ ಮಾಡಿಕೊಳ್ಳುವುದರಿಂದ ಕ್ಷೇಮಕ್ಕೆ ಸಾಫಲ್ಯಕ್ಕೆ ದಾರಿಗಳೊದಗುತ್ತದೆ. ಹೀಗಾಗಿ ದುಷ್ಟರಾಗಿರುವ ಕುಜ, ಚಂದ್ರ, ಗುರು, ಸೂರ್ಯರಿಂದ ರಕ್ಷಣೆ ಪಡೆಯುವುದಕ್ಕೆ ಸಂಸಾರ ಕಲಹ, ದ್ರವ್ಯನಾಶ, ಕೆಲಸದ ಕಿರಿಕಿರಿಗಳು ಶತ್ರುಪೀಡೆ, ಧೈರ್ಯನಾಶ ಲಾಭದಲ್ಲಿ ಕ್ಷೀಣತೆ, ಇಂಥ ವಿಚಾರಗಳಲ್ಲಿ ಶಮನ ಕಾರಕ ಘಟಕಗಳನ್ನು ಪಡೆಯಬಹುದು.
ತುಲಾ ರಾಶಿಯವರಿಗೆ ಉತ್ತಮ ಗ್ರಹಣ ಶಕ್ತಿ ದೊಡ್ಡ ಆಸ್ತಿಯಾಗಿದೆ. ಒಂದೇ ದೃಷ್ಟಿಯನ್ನು ಸುತ್ತಲೂ ಹರಿಸಿ ಏನು, ಹೇಗೆ, ಎತ್ತ, ಯಾಕೆ ಎಷ್ಟು ಎಲ್ಲಿ ಎಂಬಿತ್ಯಾದಿಗಳ ನಾಡಿ ಮಿಡಿತಗಳನ್ನು ಕುಶಾಗ್ರತೆಯಿಂದ ಗ್ರಹಿಸಿಬಿಡುತ್ತಾರೆ. ವ್ಯಕ್ತಿಗಳ ಕಣ್ಣು ಚತುರವಾಗಿ ಅಳೆಯಬಲ್ಲದು. ಸಿಟ್ಟಿಗೆ ದಾರಿ ಮಾಡಿಕೊಳ್ಳಬಾರದು. ಆನಂತರ ಅಂತರಂಗವನ್ನು ಸಹನೆಯಿಂದ ಇಣುಕಿ ನೋಡಿಕೊಂಡರೆ ದೊಡ್ಡದನ್ನು ಸಾಧಿಸುವ ಧನೋತ್ಪತ್ತಿಯ ಉತ್ತಮಿಕೆಗೆ ದಾರಿ ಒದಗುತ್ತದೆ. ತುಲಾ ರಾಶಿಯವರು ಜನರ ನೋವು ಹಾಗೂ ದಾರುಣತೆಗಳಿಗೆ ಸಂವೇದಿಸಿ ಸಂಜೀನಿ ಸ್ಪರ್ಷ ನೀಡಿ ದಾರುಣತೆ ನಿವಾರಣೆ ಉಂಟುಮಾಡುವ ಹೃದಯವೈಶಾಲ್ಯವನ್ನು ತೋರುವಂಥವರಾಗಿರುತ್ತಾರೆ. ಸಂಸಾರದ ವಿಚಾರದಲ್ಲೂ ಉತ್ತಮ ಜವಾಬ್ದಾರಿ ನಿರ್ವಹಣೆಯಲ್ಲಿ ಇವರು ಸಿದ್ಧ ಹಸ್ತರು. ಹಿಂದಿನಿಂದ ಮಾತಾಡುವ ಜನರ ಬಗೆಗೆ ಅಷ್ಟಾಗಿ ತಲೆ ಕೆಡಿಸಿಕೊಳ್ಳಲಾರರು. ಲಲಿತ ಕಲೆ, ಸಂಸ್ಕೃತಿ, ಮನೋರಂಜನೆ, ಹಾಡು, ನಾಟಕ, ಸಿನಿಮಾಗಳಲ್ಲಿ ಇವರ ಅಭಿರುಚಿ ಉತ್ತಮವಾಗಿರುತ್ತದೆ. ಚಾರ್ಲಿ ಚಾಪ್ಲಿನ್, ಕಾಜೋಲ್ ದೇವಗನ್, ಸ್ಟಿಲ್ ಬರ್ಗ್ ಮುಂತಾದ ಸಿನಿಮಾ ದಿಗ್ಗಜರು ತುಲಾ ರಾಶಿಯವರಾಗಿದ್ದಾರೆ.
ಅಮ್ಜದ್ ಆಲಿ ಖಾನ್ ಎಂಎಲ್ ವಸಂತಕುಮಾರಿ ಮುಂತಾದ ಸಂಗೀತ ಶ್ರೇಷ್ಠರುಗಳು ತುಲಾ ರಾಶಿಯವರು. ಅಮಿತಾಬ್ ಬಚ್ಚನ್, ಸ್ಮಿತಾ ಪಾಟೀಲ್, ತುಲಾ ರಾಶಿಯ ತಾರೆಗಳಾಗಿದ್ದಾರೆ. ಈ ಇಬ್ಬರ ನಡುವಿನ ಸಾಮ್ಯ ಗಮನಿಸಿ. ಇಬ್ಬರೂ ತುಲಾ ರಾಶಿಯವರಾದರೂ ಗಂಭೀರವಾಗಿ ಗಾಯಗೊಂಡು ಸಾವಿನ ಸಮೀಪಕ್ಕೆ ದಾವಿಸಿದ್ದ ಅಮಿತಾಬ್ ಬದುಕಿದರು. ಆದರೆ ಸ್ಮಿತಾ ಪಾಟೀಲ್ ಮಗು ಜನಿಸಿದಾಗ ಮೈಗೇರಿದ ನಂಜು ಜ್ವರದಿಂದ ಅಲ್ಪಾಯುಷ್ಯವನ್ನು ತಪ್ಪಿಸಿಕೊಳ್ಳಲಾಗಲಿಲ್ಲ. ಕೇವಲ 31 ವಯಸ್ಸಿನಲ್ಲೇ ವಿಧಿವಶಾರದರು. ಸ್ಮಿತಾ ಅಭಿನೇತ್ರಿಯಾಗಿ ಅದ್ಭುತವನ್ನು ಸೃಷ್ಟಿಸಿದವರು. ಇನ್ನಿಷ್ಟು ಎತ್ತರಕ್ಕೆ ಏರಬಲ್ಲವರಾಗಿದ್ದರು. ಆದರೆ ಅದೃಷ್ಟ ಅಮಿತಾಬ್‌ಗ ಇತ್ತು. ಸ್ಮಿತಾ ಅವರಿಗೆ ಇರಲಿಲ್ಲ. ಇದೇ ಗ್ರಹಗಳ ವಿಚಾರದ ಏಳುಬೀಳಿಸುವ ಆಟದ ವೈಖರಿ.
ಸ್ಮಿತಾ ಪಾಟೀಲರ ಜಾತಕದಲ್ಲಿ ಚಂದ್ರ ಮರಣ ಸ್ಥಾನದಲ್ಲಿದ್ದು ಅಲ್ಲದೆ ಸೂರ್ಯನ ಕ್ರೂರ ಉರುಳಿನಲ್ಲಿ ಶುಕ್ರ ಶನಿಗ್ರಹಗಳನ್ನು ಒಳಗೊಂಡು ದುರ್ಬಲಾತಿ ದುರ್ಬಲತೆಯಿಂದ ನರಳುತ್ತಿದ್ದ. ರಕ್ಷಣೆಗೆ ಧಾವಿಸಿ ಬರಬೇಕಾದ ಗುರುಗ್ರಹ ಜನ್ಮಪಡೆಯುವಾಗಲೇ ಸ್ಮಿತಾರಿಗೆ ದುರ್ಬಲನಾಗಿದ್ದ. ಮಹಾಕ್ರೂರಿ ಶನೈಶ್ಚರನೂ ವ್ಯಾಧಿಯ ನಾಯಕ ಸೂರ್ಯನಿಗೂ ಮರಣದ ಅಧಿಪತಿ ಶುಕ್ರನಿಗೂ ಕ್ಷೀಣ ಚಂದ್ರನ ಪಾಲಿಗೆ ಅಂಟಿಕೊಂಡ ಶನಿಕಾಟದ ಸಂದರ್ಭ ಉಪಯೋಗಿಸಿಕೊಂಡು ಜೀವ ಹರಣಕ್ಕೆ ವೇದಿಕೆ ಸಶಕ್ತವಾಗಿ ನಿರ್ಮಾಣವಾಗಿ ಹೋಗಿತ್ತು. ಅಮಿತಾಬ್‌ಗೂ ಶನಿಕಾಟ ಇತ್ತು. ಮರಣಾಂತಿಕ ಗಾಯದ ಸಂದರ್ಭದಲ್ಲಿ ಆದರೆ ಸರ್ವಾರ್ಥಗಳಲ್ಲೂ ಶಕ್ತಿದಾಯಕನಾಗಿದ್ದ ಶನೈಶ್ಚರ ಸರ್ವಶಕ್ತಿಗೆ ಇನ್ನಷ್ಟು ಪ್ರಭಾವಳಿ ಒದಗುವ ಭಾಗ್ಯದ ಮನೆಯಲ್ಲಿದ್ದಾಗ ಕೊಲ್ಲಲೇ ಬೇಕೆಂದು ಹಠ ತೊಟ್ಟಿದ್ದ ಚಂದ್ರನನ್ನು ನಿರೀಕ್ಷಿತ ಗುರಿಯಲ್ಲಿ ಸಫಲಗೊಳ್ಳಲು ಬಿಡಲಿಲ್ಲ. ವರ್ಚಸ್ಸು ಅಂತಸ್ತು ರೂಪ ಮೈಕಟ್ಟು ಧಾರಣಾ ಶಕ್ತಿಯನ್ನು ಒದಗಿಸುವ ಅಧಿಪತ್ಯ ಹೊತ್ತ ಶನೈಶ್ಚರ ಅಮಿತಾಬ್‌ರ ವಿಷಮಾವಸ್ಥೆಯ ಆರೋಗ್ಯಕ್ಕೆ ಸಂಜೀವಿನಿ ಶಕ್ತಿ ಒದಗಿಸಿ ನಿಜವಾದ ಆಯುಷ್ಕಾರಕನಾಗಿ ಹೊರಹೊಮ್ಮಿದ್ದ. ನಟನಾ ವೃತ್ತಿಯಲ್ಲೂ ಅಮಿತಾಬ್‌ನ್ನು ಬಹಳ ಎತ್ತರಕ್ಕೆ ಏರಿಸಿದ. ಆದರೆ ಬುಧದಶಾ ಬಂದಾಗ ಐದಾರು ವರ್ಷಗಳಲ್ಲಿ ಅುತಾಬ್ ಹಣಕಾಸಿನ ಚಾರದಲ್ಲಿ ದಿವಾಳಿ ಎದ್ದಿದ್ದರು. ಆಗ ಪಂಚಮ ಶನಿಕಾಟ. ಆದರೂ ಅಮಿತಾಬ್ ದಿವಾಳಿಯಾಗಿದ್ದ ಶುನ್ಯಸ್ಥಿತಿಯಿಂದ ಮೇಲೆದ್ದು ಬಂದದ್ದು ಶನೈಶ್ಚರ ಧನಸ್ಥಾನವಾದ ಮೀನರಾಶಿಗೆ ಬಂದಾಗಲೇ. ಆಗ ಸಾಲಗಾರರ ಕಾಟದಿಂದ ಮುಕ್ತಿಗೆ ದಾರಿಗಳು ಸಿಗಲಾರಂಬಿಸಿದವು.
ಒಟ್ಟಿನಲ್ಲಿ ತುಲಾರಾಶಿಯ ಜನ ಶನೈಶ್ಚರ ಶುಕ್ರಬುಧರ ಸಿದ್ಧಿ ಸಿಕ್ಕಿದಾಗ ಜನಪ್ರಿಯರಾಗುತ್ತಾರೆ. ಪ್ರತಿಭೆಯ ವಿಚಾರದಲ್ಲಿ ಅತ್ಯಂತ ಎತ್ತರದ ಶಿಖರ ತಲುಪಿ ಪ್ರಸಿದ್ಧರಾಗುತ್ತಾರೆ. ಹಿಂದಿ ಕವಯತ್ರಿ ಅಮೃತಾ ಪ್ರೀತಂ ಅದ್ಭುತ ಹೆಸರು ಸಂಪಾದಿಸಿದರು. ಜಾnನಪೀಠ ಪುರಸ್ಕಾರ ಕೂಡಾ ಲಭಿಸಿತು. ಆದರೆ ರಾಹು ಹಾಗೂ ಕೇತು ದೋಷಗಳು ವೈವಾಹಿಕ ಜೀವನವನ್ನು ಹಾಳುಗೆಡವಿದವು. ಇದೇ ರಾಹುಕೇತುಗಳು ನೆಲ್ಸನ್ ಮಂಡೇಲಾರನ್ನು 30 ವರ್ಷಗಳ ಕಾಲ ದೀರ್ಘಕಾಲ ಜೈಲಿನಲ್ಲಿರಿಸಿದವು.
ಅನಂತ ಶಾಸ್ತ್ರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Astrology 2024: 2024ರಲ್ಲಿ ಮಿಶ್ರ ಫಲಗಳೇ ಅಧಿಕ-ರಾಜ್ಯದಲ್ಲೇನಾಗುತ್ತದೆ?
ಜ್ಯೋತಿಷ್ಯದಲ್ಲಿ ನವಗ್ರಹಕ್ಕಿಂತಲೂ ನಕ್ಷತ್ರಗಳಿಗೆ ಹೆಚ್ಚು ಪ್ರಾಮುಖ್ಯತೆ ಯಾಕೆ ಕೊಡಲಾಗಿದೆ?
ಶುಭ ವಿಚಾರ ತಿಳಿಯುವ ಗೋಚಾರ ಫಲ ಎಂದರೇನು, ಗುರುಬಲ ಯಾವಾಗ ಆರಂಭವಾಗಲಿದೆ…
ಮಾರಕಾಧಿಪತಿ, ಭಾದಕಾಧಿಪತಿ: ಅಕಾಲಿಕ ಮರಣದ ಬಗ್ಗೆ “ಅಷ್ಠಮ ಸ್ಥಾನ” ಮುನ್ಸೂಚನೆ ಕೊಡುತ್ತದೆಯೇ?
ಗಜಕೇಸರಿ ಯೋಗ… ಈ ಯೋಗ ಹೇಗೆ ಉಂಟಾಗುತ್ತದೆ, ಇದರ ಮಹತ್ವವೇನು?
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.