ನೀವು ಮೇಷ ರಾಶಿಯವರೇ, ಅದರ ಗುಣ ಧರ್ಮ ಹೀಗಿದೆ…


Team Udayavani, Jul 2, 2016, 6:35 AM IST

16.jpg

ಬಾಲಿವುಡ್‌ ನಟಿ ಸುಂದರಿ ಕತ್ರೀನಾ ಕೈಫ್ ಮೇಷ ರಾಶಿಯಲ್ಲಿ ಜನಿಸಿದ್ದಾಳೆ. ಭಾರತದ ಹಿರಿಯ ರಾಜಕಾರಣಿ ಶರದ್‌ಪವಾರ್‌ ಹಾಲಿವುಡ್‌ನ‌ ಪ್ರಸಿದ್ಧ ನಟ ಗ್ರೆಗರಿಪೆಕ್‌, ಇಂಗ್ಲೆàಂಡಿನ ರಾಜಕುಮಾರ ಪ್ರಿನ್ಸ್‌ ಚಾರ್ಲ್ಸ್‌ ಪ್ರಸಿದ್ಧ ಇಂಗ್ಲಿಷ್‌ ಲೇಖಕ ಸಾಮರ್‌ ಸೆಟ್‌ ಮಾಮ್‌ ಮುಂತಾದವರೆಲ್ಲ ಮೇಷರಾಶಿಯಲ್ಲಿ ಜನಿಸಿದವರಾಗಿದ್ದಾರೆ. ಈ ರಾಶಿಯಲ್ಲಿ ಜನಿಸಿದವರೆಲ್ಲ ಮುಖ್ಯವಾಗಿ ತಮ್ಮ ಕಾಲುಗಳ ಮೇಲೆ ಸ್ವತಂತ್ರ್ಯವಾಗಿ ನಿಲ್ಲುವ ಉತ್ಸಾಹ ಹೊಂದಿದ್ದು ಅದ್ಭುತವಾದ ಜೀವನೋತ್ಸಾಹವನ್ನು ಹೊಂದಿದವರಾಗಿರುತ್ಥಾರೆ. ಹೊಸ ಹೊಸದನ್ನು ತಿಳಿಯಬೇಕೆಂಬ ವಿಷಯದಲ್ಲಿ ಸದಾ ಆಸಕ್ತರಾಗಿರುತ್ತಾರೆ. ಪ್ರಶ್ನಿಸದೆ ಯಾವುದನ್ನೂ ಒಪ್ಪಲಾರರು. 

ಶನಿಕಾಟದ ಸಂದರ್ಭದಲ್ಲಿ ಈ ರಾಶಿಯ ಜನ ಅಪಾರವಾಗಿ ಯಾತನೆಗೆ ಗುರಿಯಾಗುತ್ತಾರಾದರೂ ಗುರುಬಲ ದೊರೆತಾಗಲೆಲ್ಲ ಕಾಟವನ್ನು ಎದುರಿಸುವ ಸ್ಥೈರ್ಯ ತೋರುತ್ತಾರೆ. ಮುಖ್ಯವಾಗಿ ವೈಜಾnನಿಕ ವಿಚಾರಗಳಲ್ಲಿ ಹೆಚ್ಚಿನ ಕುತೂಹಲ ಹೊಂದಿರುತ್ತಾರೆ. ಶುಕ್ರಗ್ರಹ ಎಡವಟ್ಟಾಗಿದ್ದಾಗ ಸರ್ರನೆ ಇವರ ಜಗತ್ತಿನಲ್ಲಿ ಶುಕ್ರನ ತೊಂದರೆಗಳಿಂದ ಮಾನಸಿಕವಾದ ಅಸ್ವಸ್ಥತೆ ಪಡೆದುಬಿಡುತ್ತಾರೆ. ಲೈಂಗಿಕವಾಗಿ ವಿಪರೀತವಾಗಿ ಸ್ವೇಚ್ಛೆಯನ್ನು ಪಡೆಯುವಲ್ಲಿ ಮುಂದಿರುತ್ತಾರೆ. ಆದರೆ ತತ್ವಶಾಸ್ತ್ರಗಳಲ್ಲಿ ಹೆಚ್ಚಿನ ಆಸ್ಥೆ ತಳೆಯುತ್ತಾರೆ. ಸದಾಚಾರಗಳಿಂದ ದೂರಾಗದಿರಲು ಈ ತಾತ್ವಿಕತೆಯೇ ಇವರಿಗೆ ಉರುಗೋಲಾಗುತ್ತದೆ. ಇದರಿಂದಾಗಿ ಜೀವನದಲ್ಲಿ ಅನುಪಮವಾದ ಮಾನವೀಯ ಗುಣಧರ್ಮಗಳನ್ನು ಹೊಂದಿರಲು ಹೆಚ್ಚಿನ ತವಕ ತೋರುತ್ತಾರೆ.

ಬದುಕಿನ ಸಂಬಂಧವಾದ ಸಂಪನ್ನ ಪಾರದರ್ಶಕತೆ ಇವರ ಪಾಲಿಗೆ ಸೂರ್ಯನು ಸರ್ವಶಕ್ತನಾಗಿದ್ದಾಗ ಒದಗಿಬರುತ್ತದೆ. ಶನೈಶ್ಚರನ ಕಾರಣದಿಂದ ಮೇಷರಾಶಿಯವರು ನೇರವಾದ ಹಾದಿಯನ್ನು ತಪ್ಪಿಸಿ ವಕ್ರದಾರಿಯಲ್ಲಿ ಪರದಾಡುವ ಸ್ಥಿತಿ ಬರುತ್ತದೆ. ಸೂರ್ಯನು ಶನಿಯೊಟ್ಟಿಗೆ ಸೇರಿ ಇದ್ದರಂತೂ ಶನೈಶ್ಚರ ಸಾûಾತ್‌ ನರಕವನ್ನು ಸೃಷ್ಟಿಸಬಲ್ಲ ಕ್ರೂರತೆಯನ್ನು ಪ್ರದರ್ಶಿಸುತ್ತಾನೆ. ಉದಾಹರಣೆಗೆ ನಮ್ಮ ದೇಶದ ಪ್ರಧಾನ ಮಂತ್ರಿಯಾಗುವ ಎಲ್ಲ ಅರ್ಹತೆಗಳನ್ನೂ ಹೊಂದಿದ್ದ ಭಾರತೀಯ ಜನತಾಪಕ್ಷದ ಹಿರಿಯ ಹಾಗೂ ಮುತ್ಸದ್ಧಿ
ರಾಜಕಾರಣಿ ಲಾಲಕೃಷ್ಣ ಆಡ್ವಾಣಿ 2009ರ ಲೊಕಸಭಾ ಚುನಾವಣೆಯಲ್ಲಿ ಬಹುದೊಡ್ಡ ರೀತಿಯಲ್ಲಿ ವೈಫ‌ಲ್ಯವನ್ನು ಕಂಡದ್ದು, ಶನೈಶ್ಚರನ ಕ್ರೂರವಾದ ಋಣಾತ್ಮಕ ಪ್ರಭಾವ ನೇರ ಚಂದ್ರನ ಮೇಲೇ ಬಿದ್ದದ್ದು ಪಂಚಮ ಶನಿಕಾಟದಿಂದ ಬಳಲಿದ ಆಡ್ವಾಣೀ ಪ್ರಧಾನಿಯಾಗುವುದಿರಲಿ ಪಕ್ಷದ ಮೇಲಿನ ಹಿಡಿತವನ್ನೇ ಕಳೆದುಕೊಂಡರು. ಗುರುಬಲವೂ° ಕಳೆದುಕೊಂಡಿದ್ದ ಆಡ್ವಾಣಿ ನೀಚ ಗುರು ದಯನೀಯ ಸ್ಥಿತಿಯಿಂದಾಗಿ ವಾಕ್‌ ಪ್ರಾಭಲ್ಯ ಇದ್ದರೂ ಅದು ಕೈಕೊಡುವ ಹಂತ ತಲುಪಿತ್ತು.  ಶ್ರೇಷ್ಠವಾದ ಧರ್ಮ ಸಹಿಷ್ಣುವಿರುವ ಮುತ್ಸದ್ಧಿ ಎಂದು ಕರೆದು ಆರೆಸ್ಸೆಸ್‌ ಕೆಂಗಣ್ಣಿಗೆ ಗುರಿಯಾಗಿದ್ದರು. ಆಗ ಆಡ್ವಾಣಿಯವರ ಜಾತಕದಲ್ಲಿ ನೀಚನಾಗಿರುವ ಸೂರ್ಯನಿಗೆ ಮಾರಕ ಸ್ಥಾನ ಗೋಚಾರ ಸ್ಥಿತಿ ಬಂದಿತ್ತು. ಮೇಷರಾಶಿಯವರಾದ ಆಡ್ವಾಣಿ ಅಸಹಾಯಕರಾಗಿ ನರಳಿದ್ದರು. ಉತ್ತಮನಾದ ಗುರುದಶಾ ಮುಕ್ತಾಯವಾಗಿ ಜಾತಕದಲ್ಲಿ ದುಷ್ಟನಾದ ಶನಿದಶಾ ಕೂಡಾ ಆಗ ಪ್ರಾರಂಭವಾಗಿತ್ತು.

ಹೀಗೆ ಮೇಷರಾಶಿಯವರಿಗೆ ಶನೈಶ್ಚರ ಶತಾಯ ಗತಾಯ ಕಾಡುತ್ತಾನೆೊಂದೊಮ್ಮೆ ಗುರುಗ್ರಹದ ಅಥವಾ ಶುಕ್ರಗ್ರಹದ ಉಪಶಮನಕಾರಕ ದೃಷ್ಟಿ/ಪ್ರಾಭಲ್ಯ ಹೆಚ್ಚಾ ಧನಾತ್ಮಕವಾಗಿದ್ದರೆ ಶನೈಶ್ಚರನ ಕಾಟಕ್ಕೆ ಪರಿಣಾಮಕಾರಿಯಾದ ತಡೆ ಉಂಟಾಗುವುದರಲ್ಲಿ ಸಹಾಯವಾಗುತ್ತದೆ. ನೀಚ ಹಸ್ತಂಗತ ಶತೃ ಪೀಡಿತ ರಾಹುಗ್ರಸ್ಥ ಬುಧನಿದ್ದರಂತೂ ಮೇಷರಾಶಿಯವರ ನಿರ್ಧಾರಗೆಳೆಲ್ಲಾ ವಿಫ‌ಲಗೊಂಡು ಅಪಕೀರ್ತಿ ಬರುತ್ತದೆ. ಈ ರಾಶಿಯ ಅಧಿಪತಿ ಕುಜನಾಗಿದ್ದು ಸಾಮಾನ್ಯವಾಗಿ ಈ ರಾಶಿಯವರಿಗೆ ಕುಜದೋಷ ಒದಗಿ ಬರುವುದಿಲ್ಲ. ಪರಿಣಾಮಕಾರಿಯಾದ ನಿರ್ಣಯವನ್ನು ಕ್ಷಣಾರ್ಧದಲ್ಲಿ ತಳೆಯುವ ವಿಶೇಷ ಹರಿತ ಇವರ ಬುದ್ಧಿ ಕೌಶಲ್ಯಕ್ಕೆ ಸಹಜವಾದುದಾಗಿರುತ್ತದೆ. ಹಾಗೆಯೇ ಈ ರಾಶಿಯವರಿಗೆ ಧೈರ್ಯ ಜಾಸ್ತಿ. ಆತುರರದ ಸಹನೆ ತಾಳ್ಮೆಗಳನ್ನು ಚಂದ್ರನೂ ಉತ್ತಮನಾಗಿದ್ದು ಈ ರಾಶಿಯವರಿಗೆ ಧಾರೆ ಎರೆದಲ್ಲಿ ಮೇಷರಾಶಿಯವರು ಬಹುಚತುರ ಮೇಧಾವಿಗಳಾಗಿ ಸಂಪನ್ನ ಕಾರ್ಯ ತಂತ್ರ ಸಂಯೋಜಕರಾಗಿ ಹೊರಹೊಮ್ಮುತ್ತಾರೆ.

ಹಾಗೆಯೇ, ದೇಹ ದಾಡ್ಯìತೆ ಈ ರಾಶಿಯವರ ಪ್ರಧಾನ ಸಂಪತ್ತು. ಸ್ಥೂಲಕಾಯದವರೂ ಆಗಿ ಬಹಳಷ್ಟು ಕೊಲೆಸ್ಟ್ರಾಲ್‌ ಸಂಬಂಧಿ ರಕ್ತ ವಿಷಮತೆಯಿಂದ ಬಳಲುತ್ತಾರೆ. ಆದರೆ ಅಷ್ಟಮ ಹಾಗೂ ಛಿದ್ರಸ್ಥಾನದ ಅಧಿಪತಿಗಳು ಚೆನ್ನಾಗಿದ್ದಲ್ಲಿ ರಕ್ತಸಂಬಂಧಿ ಅಸಮತೋಲನ ಕ್ರಿಯೆಗಳು ಇವರಿಗೆ ಒದಗಿಬರಲಾರದು. ಇಷ್ಟೇ ಅಲ,É ಅಪಾರ ಪ್ರಮಾಣದ ಶಕ್ತಿ ಉತ್ಸಾಹಗಳು ಇವರಿಗೆ ಛಿದ್ರ ಹಾಗೂ ಅಷ್ಟಮಸ್ಥಾನಗಳ ಅಧಿಪತಿಗಳ ಸಂತುಲಿತ ಸ್ಥಿತಿಯಿಂದ ಒದಗಿ ನಿರಂತರವಾಗಿ ಗಂಟೆಗಟ್ಟಲೆ ದುಡಿದು ಒಂದು ನಿರ್ದಿಷ್ಟ ಕಾರ್ಯವನ್ನು ಯಶಸ್ವಿಯಾಗಿ ಮುಗಿಸಿ 
ಜಯಶೀಲರಾಗುವುದು ಇವರ ಜಾಯಮಾನ. ದಣಿವು ಎಂಬುದನ್ನೇ ಹೆಚ್ಚಾಗಿ ಈ ರಾಶಿಯವರು ಅರಿಯರು. ಈ ರಾಶಿಯವರಿಗೆ ಗುರು ಮತ್ತು ಸೂರ್ಯ ಅಗಾಧವಾದ ಸಿದ್ಧಿಯನ್ನು ಒದಗಿಸಬಲ್ಲರು. ಶುಕ್ರ, ಶನಿ ಹಾಗೂ ಬುಧ, ಗ್ರಹಗಳು ಈ ರಾಶಿಯವರಿಗೆ ಸದಾ ಪೀಡಕರಾಗಿ ಸತಾಯಿಸುತ್ತ  ಇರುತ್ತಾರೆ.

ಭಾರತದ ಪ್ರತಿಭಾಶೀಲ ಟೆನ್ನಿಸ್‌ ಅಗ್ರಗಣ್ಯ ಆಟಗಾರ್ತಿ ಸಾನಿಯಾ ಮಿಜಾì ಕೂಡಾ ಮೇಷರಾಶಿಯವರಾಗಿದ್ದು ಇವರ ಜಾತಕದಲ್ಲಿ ಬುಧ ಹಾಗೂ ಶುಕ್ರರು ಸೂರ್ಯ ಗ್ರಹಣದೊಂದಿಗೆ ತುಲಾದಲ್ಲಿ ಸ್ಥಿತವಾಗಿದ್ದು, ಇದು ಬಾಳ ಸಂಗಾತಿಯ ವಿಷಯದಲ್ಲಿ ತಲ್ಲಣಗಳು ಸೃಷ್ಟಿಯಾಗಲು ಕಾರಣವಾಗಿತ್ತು. ಪಂಚಮ ಶನಿಯ ಕಾಟದ ಸಂದರ್ಭದಲ್ಲಿ ನಿಶ್ಚಿತಾರ್ಥ ನೆರವೇರಿದ್ದ ವಿವರನೊಂದಿಗೆ ವಿವಾಹದ ಮಾತುಕತೆ ಮುರಿದು ಬಿತ್ತು. ಇಷ್ಟಾದರೂ ನೀಚಭಂಘರಾಜಯೋಗ ಪಡೆದ ಸೂರ್ಯನ ಕಾರಣವಾಗಿ ಶುಕ್ರಗ್ರಹದ ಸ್ವಗೃಹ ಸ್ಥಿತಿಯ ಸಹಾಯಕಾರಿ ಅಂಶಗಳು ಪಾಕಿಸ್ತಾನದ ಮಹಾನ್‌ ಕ್ರಿಕೆಟ್‌ ತಾರೆ ಶೊಯಬ್‌ ಮಲ್ಲಿಕ್‌ ಜೊತೆ ವಿವಾಹ ಸಂಬಂಧ ಕುದುರಿತ್ತು. ಮುರಿದು ಬಿದ್ದ ವಿವಾಹ ನಿಶ್ಚಿತಾರ್ಥದ ಸಲುವಾಗಿ ಸಾನಿಯಾ ಎದುರಿಸಿದ ಬದುಕಿನ ಬಿರುಗಾಳಿಯ ದಾಳಿಯಂತೂ ಅಂತಿಥದಲ್ಲ. ಒಟ್ಟಿನಲ್ಲಿ ಶುಕ್ರಬುಧರು ಆ ಸಂದರ್ಭದ ಬಿಕ್ಕಳಿಕೆಗಳಿಗೆ ಕಾರಣರಾದರು.

ಕತ್ರೀನಾ ಕೈಫ್ ಯಾರಿಗೆ ತಿಳಿದಿಲ್ಲ? 

ಮನೋಹರ ರೂಪದ ಚೆಲುವೆ ಈಗ ಬಾಲಿವುಡ್‌ ಜಗತ್ತಿನ ಚಿನ್ನದ ವರ್ಚಸ್ಸಿನ ತಾರಾಮಣಿ. ಮೇಷ ರಾಶಿಯವಳಾದ ಈಕೆ ಪ್ರಧಾನವಾಗಿ ಚಂದ್ರನ ಮೂಲಕವಾದ ಅಗಾಧವಾದ ಆಕರ್ಷಣೆಯ ಸುಂದರಿಯಾದಳು. ಜೊತೆಗೆ ಅಂತಸ್ತು ವರ್ಚಸ್ಸನ್ನು ದಯಪಾಲಿಸಿದ ಚಂದ್ರ ನಟಿಯಾಗಿ ಈಕೆಯನ್ನು ಬೇಡಿಕೆಯ ನಟಿಯಾಗಿಸಿ ಸಿರಿವಂತಿಕೆಗೆ ಕಾರಣನಾದ. ಇದೇ ರೀತಿ ಇಂಗ್ಲೆಂಡಿನ ಯುವರಾಜ ಚಾರ್ಲ್ಸ್‌ ಸುಂದರ ಸುರೂಪಿಯಾಗಿ ಅನೇಕ ಮಹಿಳೆಯರ ಮನ ಗೆದ್ದವನಾದರೂ ರಾಹು ದೋಷದ ಪರಿಣಾಮವಾಗಿ ಅನೇಕ ಬಿಕ್ಕಟ್ಟುಗಳನ್ನು ವೈವಾಹಿಕ ಜೀವನದ ಸಂದರ್ಭದಲ್ಲಿ ಎದುರಿಸಬೇಕಾಗಿ ಬಂತು. ಮೇಷ ರಾಶಿಯವರಾದ ಚಾಲ್ಸ್‌ ì ಸಾಡೆಸಾತಿನ ಸಂದರ್ಭದಲ್ಲಿ ವಿಚ್ಛೇದಿತ ಪತ್ನಿ ಲೇಡಿ ಡಯಾನರನ್ನು ದಾರುಣ ಅಪಘಾತದಲ್ಲಿ ಕಳಕೊಳ್ಳಬೇಕಾಯಿತು. 

ಟಾಪ್ ನ್ಯೂಸ್

Miracle: ಗುಳಿ ಗುಳಿ ಶಂಕರ ಎಂಬ ಮಾಂತ್ರಿಕ ಕೊಳ… ಇಲ್ಲಿದೆ ಹಲವು ಚಮತ್ಕಾರಿ ವಿಚಾರಗಳು

Miracle: ಗುಳಿ ಗುಳಿ ಶಂಕರ ಎಂಬ ಮಾಂತ್ರಿಕ ಕೊಳ… ಇಲ್ಲಿದೆ ಹಲವು ಚಮತ್ಕಾರಿ ವಿಚಾರಗಳು

Table Space: ಟೇಬಲ್‌ ಸ್ಪೇಸ್‌ ಸ್ಥಾಪಕ ಅಮಿತ್‌ ಬ್ಯಾನರ್ಜಿ ಹೃದಯಾಘಾತದಿಂದ ನಿಧನ

Table Space: ಟೇಬಲ್‌ ಸ್ಪೇಸ್‌ ಸ್ಥಾಪಕ ಅಮಿತ್‌ ಬ್ಯಾನರ್ಜಿ ಹೃದಯಾಘಾತದಿಂದ ನಿಧನ

Delhi-Cong

Delhi Polls: ದಿಲ್ಲಿಯ ಮಹಿಳಾ ಮತದಾರರ ಸೆಳೆಯಲು ಗ್ಯಾರಂಟಿ ಘೋಷಿಸಿದ ಕಾಂಗ್ರೆಸ್‌

ನನ್ನ ಮಗಳ ಬಾಯ್‌ಫ್ರೆಂಡ್‌ ಫೋಟೋ ರಿವೀಲ್‌ ಮಾಡಿದರೆ 21 ಲಕ್ಷ ಬಹುಮಾನ: ಬಿಗ್‌ ಬಾಸ್‌ಗೆ ಸವಾಲು

ನನ್ನ ಮಗಳ ಬಾಯ್‌ಫ್ರೆಂಡ್‌ ಫೋಟೋ ರಿವೀಲ್‌ ಮಾಡಿದರೆ 21 ಲಕ್ಷ ಬಹುಮಾನ: ಬಿಗ್‌ ಬಾಸ್‌ಗೆ ಸವಾಲು

Mahakumbh Mela: ಪ್ರಯಾಗ್ ರಾಜ್‌ ಚಲೋ-ಮಹಾಕುಂಭ ಮೇಳಕ್ಕೆ ಅಡ್ಡಿ: ಉ*ಗ್ರ ಪನ್ನು‌ ಬೆದರಿಕೆ

Mahakumbh Mela: ಪ್ರಯಾಗ್ ರಾಜ್‌ ಚಲೋ-ಮಹಾಕುಂಭ ಮೇಳಕ್ಕೆ ಅಡ್ಡಿ: ಉ*ಗ್ರ ಪನ್ನು‌ ಬೆದರಿಕೆ

siddanna-2

HMPV: ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ ಸಿಎಂ ಸಿದ್ದರಾಮಯ್ಯ

Tulu movie Daskath will release in Kannada soon

Daskath ಮೆಚ್ಚಿದ ಪ್ರೇಕ್ಷಕರಿಗೆ ಬಿಗ್‌ ನ್ಯೂಸ್‌ ಕೊಟ್ಟ ಚಿತ್ರತಂಡ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Astrology 2024: 2024ರಲ್ಲಿ ಮಿಶ್ರ ಫ‌ಲಗಳೇ ಅಧಿಕ-ರಾಜ್ಯದಲ್ಲೇನಾಗುತ್ತದೆ?

Astrology 2024: 2024ರಲ್ಲಿ ಮಿಶ್ರ ಫ‌ಲಗಳೇ ಅಧಿಕ-ರಾಜ್ಯದಲ್ಲೇನಾಗುತ್ತದೆ?

ಜ್ಯೋತಿಷ್ಯದಲ್ಲಿ ನವಗ್ರಹಕ್ಕಿಂತಲೂ ನಕ್ಷತ್ರಗಳಿಗೆ ಹೆಚ್ಚು ಪ್ರಾಮುಖ್ಯತೆ ಯಾಕೆ ಕೊಡಲಾಗಿದೆ?

ಜ್ಯೋತಿಷ್ಯದಲ್ಲಿ ನವಗ್ರಹಕ್ಕಿಂತಲೂ ನಕ್ಷತ್ರಗಳಿಗೆ ಹೆಚ್ಚು ಪ್ರಾಮುಖ್ಯತೆ ಯಾಕೆ ಕೊಡಲಾಗಿದೆ?

ಶುಭ ವಿಚಾರ ತಿಳಿಯುವ ಗೋಚಾರ ಫಲ ಎಂದರೇನು, ಗುರುದೆಸೆ ಯಾವಾಗ ಆರಂಭವಾಗಲಿದೆ…

ಶುಭ ವಿಚಾರ ತಿಳಿಯುವ ಗೋಚಾರ ಫಲ ಎಂದರೇನು, ಗುರುಬಲ ಯಾವಾಗ ಆರಂಭವಾಗಲಿದೆ…

jjhgfd

ಮಾರಕಾಧಿಪತಿ, ಭಾದಕಾಧಿಪತಿ: ಅಕಾಲಿಕ ಮರಣದ ಬಗ್ಗೆ “ಅಷ್ಠಮ ಸ್ಥಾನ” ಮುನ್ಸೂಚನೆ ಕೊಡುತ್ತದೆಯೇ?

ಗಜಕೇಸರಿ ಯೋಗ… ಈ ಯೋಗ ಹೇಗೆ ಉಂಟಾಗುತ್ತದೆ, ಇದರ ಮಹತ್ವವೇನು?

ಗಜಕೇಸರಿ ಯೋಗ… ಈ ಯೋಗ ಹೇಗೆ ಉಂಟಾಗುತ್ತದೆ, ಇದರ ಮಹತ್ವವೇನು?

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Miracle: ಗುಳಿ ಗುಳಿ ಶಂಕರ ಎಂಬ ಮಾಂತ್ರಿಕ ಕೊಳ… ಇಲ್ಲಿದೆ ಹಲವು ಚಮತ್ಕಾರಿ ವಿಚಾರಗಳು

Miracle: ಗುಳಿ ಗುಳಿ ಶಂಕರ ಎಂಬ ಮಾಂತ್ರಿಕ ಕೊಳ… ಇಲ್ಲಿದೆ ಹಲವು ಚಮತ್ಕಾರಿ ವಿಚಾರಗಳು

Table Space: ಟೇಬಲ್‌ ಸ್ಪೇಸ್‌ ಸ್ಥಾಪಕ ಅಮಿತ್‌ ಬ್ಯಾನರ್ಜಿ ಹೃದಯಾಘಾತದಿಂದ ನಿಧನ

Table Space: ಟೇಬಲ್‌ ಸ್ಪೇಸ್‌ ಸ್ಥಾಪಕ ಅಮಿತ್‌ ಬ್ಯಾನರ್ಜಿ ಹೃದಯಾಘಾತದಿಂದ ನಿಧನ

Delhi-Cong

Delhi Polls: ದಿಲ್ಲಿಯ ಮಹಿಳಾ ಮತದಾರರ ಸೆಳೆಯಲು ಗ್ಯಾರಂಟಿ ಘೋಷಿಸಿದ ಕಾಂಗ್ರೆಸ್‌

ನನ್ನ ಮಗಳ ಬಾಯ್‌ಫ್ರೆಂಡ್‌ ಫೋಟೋ ರಿವೀಲ್‌ ಮಾಡಿದರೆ 21 ಲಕ್ಷ ಬಹುಮಾನ: ಬಿಗ್‌ ಬಾಸ್‌ಗೆ ಸವಾಲು

ನನ್ನ ಮಗಳ ಬಾಯ್‌ಫ್ರೆಂಡ್‌ ಫೋಟೋ ರಿವೀಲ್‌ ಮಾಡಿದರೆ 21 ಲಕ್ಷ ಬಹುಮಾನ: ಬಿಗ್‌ ಬಾಸ್‌ಗೆ ಸವಾಲು

1-kmc

Manipal KMC; ಮಧುಮೇಹಿ ಮಕ್ಕಳಿಗಾಗಿ ಶೈಕ್ಷಣಿಕ ಕಾರ್ಯಕ್ರಮ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.