​ಸರ್ಪ ಒಲಿದರೆ ಸರ್ವತ್ರ ಸಿದ್ಧಿ ಅನ್ನೋದಕ್ಕೆ ಇಲ್ಲಿದೆ ಉದಾಹರಣೆ


Team Udayavani, Nov 21, 2015, 6:28 AM IST

7.jpg

ಹಿಂದಿನ ವಾರ ಸರ್ಪ ದೋಷದ ಕಿರಿಕಿರಿಗಳ ನಗ್ಗೆ ಮಾತನಾಡುವ ಚರ್ಚಿಸುವ ವಿಚಾರ ಈ ಅಂಕಣದಲ್ಲಿ ತುಂಬಿತ್ತು. ಸರ್ಪ ಅಂದರೆ ರಾಹು ಬರೀ ದೋಷವನ್ನು ಮಾತ್ರ ಕೊಡುವವನಲ್ಲ. ದೇವೇಗೌಡರ ಜಾತಕದಲ್ಲಿ ಸರ್ಪದೋಷಕಾರಕನಾಗಿ ಅವರ ಅಷ್ಟಮಭಾವದಲ್ಲಿ ಚಂದ್ರನೊಟ್ಟಿಗೆ ಕುಳಿತಿದ್ದಾನೆ. ಆದರೆ ಸರ್ಪದ ಮೂಲಕ ಚಂದ್ರನನ್ನು ಹೆಡೆಮುರಿಗೆ ಕಟ್ಟಿ ನಿಷ್ಕ್ರಿಯಗೊಳಿಸಲು ಸರ್ಪಕ್ಕೆ ಸಾಧ್ಯವಾಗಲಿಲ್ಲ. ದೇವೇಗೌಡರು ಪ್ರಧಾನಿಗಳಾಗಿ ಕೂಡಾ ಪ್ರಖ್ಯಾತರಾದರು. ಚಂದ್ರನ ಜೊತೆಗಿನ ಸರ್ಪದಿಂದ ದೇವೇಗೌಡರಿಗಾದ ಪ್ರಯೋಜನ ಏನಿತ್ತು ಎಂಬುದನ್ನು ಮುಂದೆ ವಿವರಿಸುತ್ತೇನೆ. ಭಾರತದಮಾಜಿ ಕ್ರಿಕೆಟ್‌ ನಾಯಕ ಸೌರವ್‌ ಗಂಗೂಲಿ ಪ್ರಖ್ಯಾತರಾಗಿ ಮಿಂಚಿದ್ದೇ ರಾಹುದಶಾಕಾಲದಲ್ಲಿ. ಹಾಗೆ ನೋಡಿದರೆ ಸರ್ಪದೋಷ ಅವರಿಗೆ ಕೂಡಾ ಇದೆ. ಸರ್ಪದೋಷ ಬಂತು ಎಂದಾಕ್ಷಣ ಎಲ್ಲವೂ ಮುಕ್ತಾಯವಾಯಿತು ಎಂದಲ್ಲ. ಹಾಗಾದರೆ ಸರ್ಪದೋಷ ಬಾಧಿಸದೆ ಗಂಗೂಲಿಯವರನ್ನು ಮೇಲೆತ್ತಿದ್ದು ಹೇಗೆ? ಮುಂದೆವರಿಸುತ್ತೇನೆ. ನಮ್ಮದೇ ರಾಜ್ಯದ ರಾಹುಲ್‌ ದ್ರಾವಿಡ್‌ ವಿಶ್ವದ ಪ್ರಖ್ಯಾತರಲ್ಲಿ ಪ್ರಖ್ಯಾತ ಅಂತಾರಾಷ್ಟ್ರೀಯ ಕ್ರಿಕೆಟ್‌ ಆಟಗಾರ. ಇವರಿಗೂ ಸರ್ಪದೋಷವಿದೆ. ಆದರೆ ಇವರು ಏರಿದ ಎತ್ತರ ಯಾವ ರೀತಿಯದ್ದು ಎಂದರೆ ಅದ್ಭುತ. ಹಾಗಾದರೆ ಇದು ಹೇಗೆ ಸಾಧ್ಯವಾಯಿ ಮುಂದೆ ವಿವರಿಸುತ್ತೇನೆ. ಇವೆಲ್ಲಾ ರಾಹು ದೋಷವಿದ್ದರೂ ಶುಭ ಒದಗಿದ ಕೆಲವು ಉದಾಹರಣೆಗಳು. 

ಶುಭ ಒದಗಿಸುವ ರಾಹು ತೊಂದರೆ ಕೊಡಲಾರನೆ?

 ಕೇವಲ ಶುಭವನ್ನೇ ತರಲು ಕಾರಣೀಭೂತನಾದ ರಾಹು ತೊಂದರೆ ಕೊಡಲಾರದು ಎಂಬುದು ನೂರಕ್ಕೆ ನೂರು ಸತ್ಯವಲ್ಲ. ತೊಂದರೆ ಕೊಟ್ಟೇ ತೀರುವ ರಾಹು ಒಳಿತನ್ನು ಮಾಡುವುದೇ ಇಲ್ಲ ಎಂಬುದೂ ನಿಯಮವಲ್ಲ. ಜಾತಕ ಶಾಸ್ತ್ರದಲ್ಲಿ ಅನೇಕ ವಿಷಯಗಳು ಒಂದು ಇನ್ನೊಂದನ್ನು ಹೊಂದಿಕೊಂಡು ವಿಭಿನ್ನ ಸ್ವರೂಪದಲ್ಲಿ ಪರಿಣಾಮಗಳನ್ನು ಕೊಡುತ್ತ ಹೋಗುತ್ತದೆ. ಹೀಗಾಗಿ ಹುಟ್ಟಿದ ಸಂದರ್ಭದ ಗ್ರಹಗಳು ಇವತ್ತಿನ ಗ್ರಹಗಳ ಉಪಸ್ಥಿತಿಯಲ್ಲಿ ಹೇಗೆ ವರ್ತಿಸುತ್ತವೆ ಎಂಬುದನ್ನು ಲೆಕ್ಕ ಹಾಕಬೇಕು. ಪ್ರತಿ ವ್ಯಕ್ತಿಯ ವಿಚಾರದಲ್ಲಿ ಜೋತಿಷಿಗೆ ಅನೇಕ ವಿಚಾರಗಳು ತಿಳಿಯುತ್ತದೆ. ಆದರೆ ಜೋತಿಷಿ ಹೇಳಿದ ವಿಚಾರವನ್ನು ಅನೇಕರು ಹಲವು ಸಲ ನಿರಾಕರಿಸುತ್ತಾರೆ. ಆದರೆ ಅವರು ನಿರಾಕರಿಸಿದರೂ ಸತ್ಯ ಸತ್ಯವೇ ಆಗಿರುತ್ತದೆ. ನಾವು ಸುಖವಾಗಿದ್ದೇವೆಯೋ ಇಲ್ಲವೋ ಎಂಬುದು ಹಲವು ಸಲ ನಮಗೆ ಮಾತ್ರ ನೂರಕ್ಕೆ ನೂರು ತಿಳಿದಿರುತ್ತದೆ. ಯುಕ್ತನಾದ ಜೋತಿಷಿಗೆ ಜನ್ಮ ಕುಂಡಲಿಯ ಮೂಲಕ ಸತ್ಯ ತಿಳಿದೇ ತಿಳಿಯುತ್ತದೆ. ಸತ್ಯ ಹೇಳಿದಾಗಲೂ ಒಪ್ಪಿಕೊಳ್ಳುವುದು ಬಿಡುವುದು ಜೋತಿಷ್ಯ ಕೇಳಲು ಬಂದವನ ಪ್ರಾರಬ್ಧ. ಕೆಲವು ಸಲ ಜೋತಿಷ್ಯ ಕೇಳಲು ಬಂದವರು ಅನ್ಯರ ಜೊತೆ ಬಂದಿರುತ್ತಾರೆ. ಹೇಳಿ ತೊಂದರೆ ಇಲ್ಲ ಅವರು ನಮ್ಮವರೇ ಎನ್ನುತ್ತಾರೆ. ಲೈಂಗಿಕ ವಿಚಾರಗಳ್ಳೋ ಹಲವು ತಪ್ಪು ಕೆಲಸಗಳ ಮೂಲಕ ತೊಂದರೆಗೆ ಸಿಕ್ಕಿ ಹಾಕಿಕೊಳ್ಳುತ್ತೀರಿ ಎಂದು ಅನ್ಯರಿರುವಾಗ ಜೋತಿಷಿ ಸೂಕ್ತವಾಗಿ ತಿಳಿಸಿ ಹೇಳುವುದು ಹೇಗೆ? ಇದೇ ರೀತಿ ಕೆಲವರ ಕುರಿತು ರಾಹುವಿನ ತೊಂದರೆ ಹೀಗೇ ಇತ್ತು ಎಂದು ತಿಳಿಸಿ ಹೇಳುವುದು ಎಲ್ಲರೂ ಓದುವ ಪತ್ರಿಕೆಗಳಲ್ಲಿ ಮಾಧ್ಯಮಗಳಲ್ಲಿ ವಿವರಿಸುವುದು ಕಷ್ಟ. ಶುಭ ಒದಗಿಸುವ ರಾಹು ತೊಂದರೆ ಕೊಡಲಾರನೇ? ಎಂದರೆ ಕೊಡುತ್ತಾನೆ ಎಂಬುದೂ ಸತ್ಯ. ಪ್ರಸ್ತುತ ಗ್ರಹಗಳ ನೆಲೆಯಲ್ಲಿ ಗ್ರಹದ ನಡೆಯಲ್ಲಿ ಒಳ್ಳೆಯ ರಾಹು ತಂದಿಡುವ ಫ‌ಜೀತಿಗಳನ್ನು ತಿಳಿಸುವುದು ಕಷ್ಟವಾಗುತ್ತದೆ. ಹೀಗಾಗಿ ಹೆಸರು ತಿಳಿಸದೇ ಪರ್ಯಾಯವಾಗಿ ಹೇಳಬೇಕಾಗುತ್ತದೆ. 

ಜನಪ್ರಿಯ ಸಿನಿಮಾ ನಟ ಹಾಗೂ ಖ್ಯಾತಿ ತಂದ ರಾಹು ಗ್ರಹ

 ಇವರ ಹೆಸರಿನ ಪ್ರಸ್ತಾಪ ಬೇಡ ಆದರೆ ಇವರು ಜನಪ್ರಿಯತೆಯಲ್ಲಿ ಶಿಖರಪ್ರಾಯರು. ಪ್ರಸಿದ್ಧಿಗೆ ಏರಿದ್ದೇ ರಾಹು ದಶಾ ಕಾಲದಲ್ಲಿ. ಆದರೆ ಪ್ರಸಿದ್ಧಿಗೇರಿಸಿದ್ದ ರಾಹು ಇವರನ್ನು ಕಾಡಿದ್ದ ರೀತಿ ಅಂತಿಂಥದ್ದಲ್ಲ. ನೋಡುವರ ಎದುರು ಪ್ರಸಿದ್ಧಿ ನಿಜ. ಆದರೆ ವಾಸ್ತವ ಸ್ಥಿತಿ ಬೇರೆ ಇತ್ತು. ದಾರುಣತೆಗಳನ್ನು ಕಳಚಿಕೊಂಡಿದ್ದಾರೆ ಎಂಬಂತೆ ರಾಹು ದಶಾಕಾಲದಲ್ಲಿ ಬೆಳ್ಳಿ ಪರದೆಗೆ ಏರಿ ಬಂದರು. ಖ್ಯಾತಿಯನ್ನು ಒದಗಿಸುವ ಏಣಿಯ ಮೆಟ್ಟಿಲುಗಳು ಸಿಕ್ಕವು. ಏರುತ್ತಲೂ ಇದ್ದರು. ಆದರೆ ನಂಬಿದರೆ ನಂಬಿ ಬಿಟ್ಟರೆ ಬಿಡಿ ರಾಹು ದಶಾದ ಮೊದಲ ಹನ್ನೆರಡು ವರ್ಷಗಳು ಈ ನಟ ಅನುಭಸಿದ ಮಾನಸಿಕ ಯಾತನೆ ಸಂಕಟ ಪರದಾಟ ಇಷ್ಟೇ ನನ್ನ ಹಣೆಬರಹ ಎಂದುಕೊಂಡ ಅಸಹನೀಯ ಸ್ಥಿತಿಗತಿ ಆ ದೇವರಿಗೇ ಪ್ರೀತಿ. ನಂತರ ಕೊನೆಯ ಆರು ವರ್ಷಗಳಲ್ಲಿ ಖ್ಯಾತಿ ಹಣ ಒಮ್ಮೆಗೇ ಬಂತು. ಆದರೆ ಅಂತರಂಗದ ದುಗುಡ ಭಯ ಯಾವಾಗ ಏನಾಗುವುದೋ ಎಂಬ ಅನಿಶ್ಚಿತತೆ ಭಯ ಎದುರಾದದ್ದು ಒಂದಲ್ಲ ಎರಡಲ್ಲ. ಈ ರಾಹು ಸರಿಯಾದ ಸಂದರ್ಭ ಸಿಕ್ಕರೆ ಪ್ರಾಣಕ್ಕೂ ಸಂಚಕಾರ ತರುವ ಗ್ರಹವೇ. ಆದರೆ ಪ್ರಾಣಕ್ಕೆ ಗಂಡಾಂತರ ಬರಲಿಲ್ಲ. ಬರಬಹುದೇ ಎಂಬ ದುಗುಡ ಅಂತಿಂಥದ್ದಲ್ಲ. ಇವರಿಗೆ ದೊಡ್ಡ ಕಾಯಿಲೆ ಇದೆ ಎಂದು ಪ್ರಚಾರ ಮಾಡಲಾಯಿತು. ಒಲಿದವಳ ಜೊತೆ ಮದುವೆಯಾಗಲೂ ಸಾಧ್ಯವಾಗಲಿಲ್ಲ. ಇವರು ಅಭಿನಯಿಸಿದ ಸಿನಿಮಾ ಗಲ್ಲಾಪೆಟ್ಟಿಗೆಯನ್ನು ತುಂಬುತ್ತಿತ್ತು. ವರಮಾನವೂ ಬರುತ್ತಿತ್ತು. ಆದರೆ ಸುಖಮಾತ್ರ ಇಲ್ಲ. ಹಾಗಾದರೆ ಒಂದೆಡೆ ಕೊಟ್ಟಂತೆ, ಗೆಲ್ಲಿಸಿದಂತೆ ಆಗಲು ಕಾರಣಗಳೇನು? ಉಳಿದ ಗ್ರಹಗಳ ನೆರವು. ರಾಹು ಗ್ರಹ ಶುಭ ಗ್ರಹದ ಮನೆಯಲ್ಲಿ ಕುಳಿತಿದ್ದು ರಾಹು ಮರಣವನ್ನು ತರಲು ಶತಪ್ರಯತ್ನ ನಡೆಸಿದರೂ ಗುರುಗ್ರಹದ ಚೈತನ್ಯ ಈ ನಟನಿಗೆ ಅಲ್ಪಾಯುಷ್ಯವನ್ನು ಒದಗಿಸಲಿಲ್ಲ. ಹಾಗೆಯೇ ಲಗ್ನಾಧಿಪತಿ ಶನಿಯ ಉರಿಗಣ್ಣಿಗೆ ಬಿದ್ದರೂ ಗುರುಗ್ರಹದ ಮೂಲಕ ಆಯಸ್ಸಿನ ಗಂಟು ಲಾಭದ ದಾರಿಯಮೇಲೇ ಸಾಗಿ ಬರಬೇಕು. ಇದು ಹಣೆಬರಹ. ಖ್ಯಾತಿ, ಹಣ ಇದ್ದರೂ ಪರದಾಟಗಳ ನಡುವೆ ನಿಲ್ಲಿಸಿದ ಕೀರ್ತಿ ರಾಹುವಿಗೆ. ರಾಹುವಿನ ಮೂಲಕ ಸ್ಥಾನ ಉರುಳಿದ್ದರೂ ಗುರುಗ್ರಹದ ಒಲುಮೆ ಉರುಳನ್ನು ದೂರ ಸರಿಸಿದ ಶಕ್ತಿ ಅದರೊಂದಿಗೆ ನಂತರ ಗುರುದಶಾದಲ್ಲಿ ಈ ನಟನು ಮೇಲೇರಿದ ರೀತಿ ಅಸಾಮಾನ್ಯ. ಆದರೆ ಆಂತರಿಕವಾದ ಸುಖ ನಾವು ತಿಳಿದುಕೊಂಡಂತೆಯೇ ಇತ್ತೇ ಎಂದರೆ ಇಲ್ಲ ಎಂಬುದೇ ಉತ್ತರ. ಯುಕ್ತವಾದ ಸುಖಕ್ಕೆ ರಾಹು ಹಾಗೂ ಶನಿಗ್ರಹಗಳು ಬಿಡಲಾರರು. ಹಳೆಯ ಅವಮಾನಗಳ ಲೇಪದಲ್ಲಿ ಖ್ಯಾತಿಯ ವರ್ತಮಾನದ ಗಾಲಿಗಳು ಉರುಳುತ್ತಿರುತ್ತದೆ. ಮನುಷ್ಯನಿಗೆ ಹೀಗಾಗಿ ಹಿಂದಿನದನ್ನು ಮರೆಯುವ ಶಕ್ತಿ ಬೇಕು. ಕೆಲವರು ಲಜ್ಜೆ ಬಿಟ್ಟು ಹಿಂದಿನದನ್ನು ಮರೆತಿರುತ್ತಾರೆ. ಇದೂ ಸರಿಯಲ್ಲ. ಆದರೆ ಮುಂದೆ ಬಂದು ಶಿಖರಪ್ರಾಯರಾದಾಗ ಲಾಭನಷ್ಟಗಳನ್ನೆಲ್ಲಾ ಸಮಚಿತ್ತದಿಂದ ಸ್ವೀಕರಿಸಬೇಕು. ಇದು ಎಲ್ಲರಿಂದಲೂ ಸಾಧ್ಯವಾಗದು. 

ರಾಹುವಿನ ಲಾಭ ಪಡೆದ ಮನಮೋಹನ ಸಿಂಗ್‌

ರಾಹುದಶಾಕಾಲದ ಎಲ್ಲಾ 18 ವರ್ಷಗಳ ದೀರ್ಘ‌ ಅವಧಿಯನ್ನು ಏರುವ ಏಣಿಯಲ್ಲೇ ಇದ್ದು ಬಹು ದೊಡ್ಡ ಎತ್ತರ ಏರಿದ ಕೀರ್ತಿ ನಮ್ಮ ಮಾಜಿ ಪ್ರಧಾನಿ ಮನಮೋಹನ ಸಿಂಗ್‌ರಿಗೆ ಸೇರಬೇಕು. (ಟೀಕೆಗಳು ಇರಲಿಲ್ಲ ಎಂದೇನಲ್ಲ. ಆದರೆ ರಾಹು ಒದಗಿಸಿದ ಯೋಗ ಮಾತ್ರ ಬಂಗಾರದ ತೂಕದ್ದು ಎಂಬುದಕ್ಕೆ ಅನುಮಾನಲ್ಲ. ಕುಜದಶಾ ಕಾಲದ ಪ್ರಾರಂಭಕ್ಕೇ ಏರುವುದಕ್ಕೆ ಶುರು ಹತ್ತಿದ ದಿನಗಳು ಮನಮೋಹನರಿಗೆ ರಿಸರ್ವ್‌ಬ್ಯಾಂಕ್‌ ಗವರ್ನರ್‌ ಆದಲ್ಲಿಂದ (1989) ಹಿಂತಿರುಗಿ ನೋಡಲೇ ಇಲ್ಲ ಅವರು. ರಾಹು ದಶಾ ಕಾಲದಲ್ಲಿ ಪ್ರಧಾನ ಮಂತ್ರಿಗಳೇ ಆದರು. ರಿಸರ್ವ್‌ ಬ್ಯಾಂಕ್‌ ಗವರ್ನರ್‌ ಆದಲ್ಲಿಂದಲೂ ಅವರ ನೆರವಿಗೆ ಬಂದದ್ದು ಅವರ ನಿಯತ್ತು ಮತ್ತು ಪ್ರಾಮಾಣಿಕತೆ. ನಿಯತ್ತು ಮತ್ತು ಪ್ರಾಮಾಣಿಕತೆಗಳು ಕೈ ಡಿಯುತ್ತವೆ ಎಂಬುದಕ್ಕೆ ಮನಮೋಹನ ಸಿಂಗ್‌ ಸಾಕ್ಷಿ$. ಅವರ ರಾಹು ಅವರನ್ನು ಅವರ ಗುರು ಗ್ರಹದ ಕಾರಣದಿಂದಾಗಿ ಕೈ ಬಿಡಲಿಲ್ಲ. ಗುರುವಿಗೆ ಕೇತುವಿನ ದೋಷವಿದ್ದರೂ ಹುಟ್ಟಿನ ಸಮಯದಲ್ಲಿದ್ದ ಧರ್ಮ ಕರ್ಮಾಧಿಪ ಯೋಗದ (ವಿದ್ವಾನ್‌ ಸರ್ವತ್ರ ಪೂಜ್ಯತೇ) ಕಾರಣ. ಇದು ಅವರ ಪಾಲಿಗೆ ಬುದ್ಧಿ ಯೋಗವೂ ಹೌದಾಗಿತ್ತು. ಧರ್ಮಕರ್ಮಾದಿಪರು ಸುಖ ಸ್ಥಾನವನ್ನು ಗಮನಿಸಿ, ವ್ಯಕ್ತಿತ್ವ ಸಿದ್ಧಿಗೆ ನೇರ, ಇವನೇ ವ್ಯಕ್ತಿತ್ವದ ಮನೆಯ ಅಧಿಪತಿ ಗುರುಗ್ರಹದ ಪಾತ್ರ ಅಪಾರ. ಸೋನಿಯಾ ಗಾಂಧಿಯವರಿಗೆ ತನ್ನನ್ನು ಧಿಕ್ಕರಿಸಿ ಮುನ್ನಡೆಯದ‌ ಶಾಂತ ಆದರೆ ಸೂಕ್ತ ವ್ಯಕ್ತಿ ಪ್ರಧಾನಿ ಪಟ್ಟಕ್ಕೆ ಬೇಕಿತ್ತು. ಜೊತೆಗೆ ಇಂದಿರಾ ಕುಟುಂಬ ಸಿಖ್‌ ವಿರೋಧಿ ಎಂಬುದನ್ನು ಕಳೆದುಕೊಳ್ಳಬೇಕಿತ್ತು. ಮನಮೋಹನ್‌ ಪ್ರಧಾನಿಯಾದರು. ಕಾಲ ಸಂದರ್ಭ, ಗ್ರಹ ಬೆಂಬಲ ಅದೃಷ್ಟ ವ್ಯಕ್ತಿತ್ವ ಪಾಂಡಿತ್ಯ ಎಲ್ಲಾ ಸೇರಿ ಬಂದಾಗ ವಿಷಮಯನಾದ ರಾಹು ಇದ್ದರೂ ವಿಷವೂ ಅಮೃತಕ್ಕೆ ಪರಿವರ್ತನಗೊಳ್ಳುತ್ತದೆ ಎಂಬುದಕ್ಕೆ ಮನಮೋಹನರಿಗಿಂತ ಬೇರೆ ಉದಾಹರಣೆ ಇಲ್ಲ. ಅವರ ಮೌನವನ್ನು ಟೀಕಿಸಬಹುದಾದರೂ ಅದು ರಾಹುವಿನ ದುಷ್ಟತನದಿಂದಾಗಿ ಆದುದ್ದಲ್ಲ. ಶನೈಶ್ಚರನೂ ಕುಜನೂ ನಡೆಸಿದ ದೃಷ್ಟಿಯುದ್ಧದಿಂದ ಉಂಟಾದ ಫ‌ಲ ಅದು. ಯುಕ್ತ ಯೋಗಗಳು ಕೂಡಿಬಂದಾಗ ರಾಹು ನೀಡುವ ರಾಜಯೋಗ ಅದ್ಭುತವಾದದ್ದು.

ಮುಂದಿನವಾರ ದೇವೇಗೌಡರು, ಸೌರವ್‌ ಗಂಗೂಲಿ, ದ್ರಾವಿಡ್‌ ಮುಂತಾದವರ ಜಾತಕದಲ್ಲಿ ರಾಜಯೋಗಗಳಿದ್ದೂ ರಾಹುಗ್ರಹ ಅದನ್ನು ಭಂಗ ಪಡಿಸಿದ ರೀತಿಯ ಕುರಿತು ಚರ್ಚಿಸೋಣ.  

ಟಾಪ್ ನ್ಯೂಸ್

ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಸ್ಥಿತಿ ಬರಲಿದೆ: ಈರಣ್ಣ ಕಡಾಡಿ

Belagavi: ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಸ್ಥಿತಿ ಬರಲಿದೆ: ಈರಣ್ಣ ಕಡಾಡಿ

Congress is taking revenge by forming SIT: Araga Jnanendra

Shimoga: ಎಸ್ಐಟಿ ರಚನೆ ಮೂಲಕ ಕಾಂಗ್ರೆಸ್ ಹಗೆ ತೀರಿಸಿಕೊಳ್ಳುತ್ತಿದೆ: ಆರಗ ಜ್ಞಾನೇಂದ್ರ

Maharashtra Election: Election officials checked Amit Shah’s bag

Maharashtra Election: ಅಮಿತ್‌ ಶಾ ಅವರ ಬ್ಯಾಗ್‌ ಪರೀಕ್ಷಿಸಿದ ಚುನಾವಣಾ ಅಧಿಕಾರಿಗಳು

Anmol Buffalo: The price of this Buffalo weighing 1500 kg is Rs 23 crore!

Anmol Buffalo:1500 ಕೆಜಿ ತೂಗುವ ಈ ಕೋಣದ ಬೆಲೆ ಬರೋಬ್ಬರಿ 23 ಕೋಟಿ ರೂ!

13-BBK-11

BBK11: ಅಸಲಿ ಆಟ ಶುರು ಮಾಡಿದ ಧನರಾಜ್: ಮೋಕ್ಷಿತಾಳಿಗೆ ಅಹಂಕಾರ ಇದೆ ಎಂದ ಸೈಲೆಂಟ್ ಕಿಲಾಡಿ

Digital Arrest ಹೆಸರಿನಲ್ಲಿ ನಿವೃತ್ತ ಇಂಜಿನಿಯರ್‌ ಗೆ 10 ಕೋಟಿ ರೂಪಾಯಿ ಪಂಗನಾಮ!

Digital Arrest ಹೆಸರಿನಲ್ಲಿ ನಿವೃತ್ತ ಇಂಜಿನಿಯರ್‌ ಗೆ 10 ಕೋಟಿ ರೂಪಾಯಿ ಪಂಗನಾಮ!

12-gundya

Subramanya: ಗುಂಡ್ಯದಲ್ಲಿ ಮಂಗಳೂರು- ಬೆಂಗಳೂರು ಹೆದ್ದಾರಿ ತಡೆ ನಡೆಸಿದ ಪ್ರತಿಭಟನಾಕಾರರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Astrology 2024: 2024ರಲ್ಲಿ ಮಿಶ್ರ ಫ‌ಲಗಳೇ ಅಧಿಕ-ರಾಜ್ಯದಲ್ಲೇನಾಗುತ್ತದೆ?

Astrology 2024: 2024ರಲ್ಲಿ ಮಿಶ್ರ ಫ‌ಲಗಳೇ ಅಧಿಕ-ರಾಜ್ಯದಲ್ಲೇನಾಗುತ್ತದೆ?

ಜ್ಯೋತಿಷ್ಯದಲ್ಲಿ ನವಗ್ರಹಕ್ಕಿಂತಲೂ ನಕ್ಷತ್ರಗಳಿಗೆ ಹೆಚ್ಚು ಪ್ರಾಮುಖ್ಯತೆ ಯಾಕೆ ಕೊಡಲಾಗಿದೆ?

ಜ್ಯೋತಿಷ್ಯದಲ್ಲಿ ನವಗ್ರಹಕ್ಕಿಂತಲೂ ನಕ್ಷತ್ರಗಳಿಗೆ ಹೆಚ್ಚು ಪ್ರಾಮುಖ್ಯತೆ ಯಾಕೆ ಕೊಡಲಾಗಿದೆ?

ಶುಭ ವಿಚಾರ ತಿಳಿಯುವ ಗೋಚಾರ ಫಲ ಎಂದರೇನು, ಗುರುದೆಸೆ ಯಾವಾಗ ಆರಂಭವಾಗಲಿದೆ…

ಶುಭ ವಿಚಾರ ತಿಳಿಯುವ ಗೋಚಾರ ಫಲ ಎಂದರೇನು, ಗುರುಬಲ ಯಾವಾಗ ಆರಂಭವಾಗಲಿದೆ…

jjhgfd

ಮಾರಕಾಧಿಪತಿ, ಭಾದಕಾಧಿಪತಿ: ಅಕಾಲಿಕ ಮರಣದ ಬಗ್ಗೆ “ಅಷ್ಠಮ ಸ್ಥಾನ” ಮುನ್ಸೂಚನೆ ಕೊಡುತ್ತದೆಯೇ?

ಗಜಕೇಸರಿ ಯೋಗ… ಈ ಯೋಗ ಹೇಗೆ ಉಂಟಾಗುತ್ತದೆ, ಇದರ ಮಹತ್ವವೇನು?

ಗಜಕೇಸರಿ ಯೋಗ… ಈ ಯೋಗ ಹೇಗೆ ಉಂಟಾಗುತ್ತದೆ, ಇದರ ಮಹತ್ವವೇನು?

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

ಬೆಳಗಾವಿ:ಮಾನವ ಕಳ್ಳ ಸಾಗಾಣಿಕೆ-ಜೀತ ಪದ್ಧತಿ ದೊಡ್ಡ ಸಮಸ್ಯೆ

ಬೆಳಗಾವಿ: ಮಾನವ ಕಳ್ಳ ಸಾಗಾಣಿಕೆ-ಜೀತ ಪದ್ಧತಿ ದೊಡ್ಡ ಸಮಸ್ಯೆ

ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಸ್ಥಿತಿ ಬರಲಿದೆ: ಈರಣ್ಣ ಕಡಾಡಿ

Belagavi: ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಸ್ಥಿತಿ ಬರಲಿದೆ: ಈರಣ್ಣ ಕಡಾಡಿ

raghav

Shimoga; ವಿಜಯೇಂದ್ರರನ್ನು ಕಟ್ಟಿ ಹಾಕಲು ಕಾಂಗ್ರೆಸ್‌ ನಿಂದ ಸುಳ್ಳು ಆರೋಪ: ರಾಘವೇಂದ್ರ

9

Anandapura: ಸಾಲ ಬಾಧೆ ತಾಳಲಾರದೆ ರೈತ ಆತ್ಮಹ*ತ್ಯೆ

Congress is taking revenge by forming SIT: Araga Jnanendra

Shimoga: ಎಸ್ಐಟಿ ರಚನೆ ಮೂಲಕ ಕಾಂಗ್ರೆಸ್ ಹಗೆ ತೀರಿಸಿಕೊಳ್ಳುತ್ತಿದೆ: ಆರಗ ಜ್ಞಾನೇಂದ್ರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.