ಕನಸಿನಲ್ಲಿಯೂ ಯೋಚಿಸಿರದ ರಾಜಪಟ್ಟ ಕರ್ಕಾಟಕರಿಗೆ ….


Team Udayavani, Jul 30, 2016, 8:47 AM IST

13.jpg

ಕರ್ಕಾಟಕ ರಾಶಿಯ ಯಜಮಾನ ಚಂದ್ರನಾಗಿದ್ದಾನೆ. ಚಂದ್ರನ ಮುಖ್ಯವಾದ ಪಾರು ಪತ್ಯವೇ ಮನಸ್ಸಿನ ಮೇಲಿನ ಹಿಡಿತ. ಉತ್ತಮವಾದ ಧೈರ್ಯ ಸ್ಥೈರ್ಯ ಚಂದ್ರನ ಕರುಣೆಯ ಫ‌ಲವಾಗಿರುತ್ತದೆ. ದುಷ್ಟರು ಅಥವಾ ದುಷ್ಟಗ್ರಹಗಳು ಅನಪೇಕ್ಷಿತವಾದ ಹುಂಬು ಧೈರ್ಯವನ್ನು ನೀಡಿದರೂ ಚಂದ್ರನ ಅಗಾಧವಾದ ಶಕ್ತಿ ಸಂಪನ್ನರಾಗಿದ್ದರೆ ಅನ್ಯರನ್ನು ಕೇಳಿಸಿಕೊಂಡು ಅಪಾಯ ತರುವ ಅಥವಾ ಜನವಿರೋಧಿ ಕೆಲಸಗಳನ್ನು ಕರ್ಕಾಟಕ ರಾಶಿಯವರು ಮಾಡುವುದಿಲ್ಲ. ಚಂದ್ರನ ಅಕ್ಷೀಣತ್ವ ಅನಪೇಕ್ಷಿತ ಕೆಲಸಗಳಿಗೆ ಅವಕಾಶ ನೀಡಿ ಅವಕಾಶಗಳನ್ನು ಸೃಷ್ಟಿಸಬಹುದಾಗಿದೆ. ಹುಣ್ಣಿಮೆಯ ದಿನ ಅಪಾಯಗಳನ್ನು ಕರ್ಕಾಟಕ ರಾಶಿಯವರಿಗೆ ಸೂರ್ಯ ಅಥವಾ ಸೂರ್ಯರಂಥ ಅಶುಭ ಗ್ರಹಗಳು, ರಾಹು ಹಾಗೂ ಕೇತುಗಳಂತ ಛಾಯಾಗ್ರಹಗಳು ಸೃಷ್ಟಿಸಬಹುದಾಗಿದೆ. 

ರಾಜಯೋಗದ್ದಾಗ ಚಂದ್ರನ ಪಾತ್ರ ಹೆಚ್ಚು ನಿರ್ಣಾಯಕ
 ಬಹಳ ಮಂದಿಯ ಜಾತಕದಲ್ಲಿ ರಾಜಯೋಗಗಳಿರುತ್ತದೆ. ಆದರೆ ಚಂದ್ರನ ಪಾತ್ರ ಮಹತ್ವದ್ದಾಗಿ ರಾಜಯೋಗಗಳಿಗೆ ಹೆಚ್ಚು ತೂಕ. ಕರ್ಕಾಟಕ ರಾಶಿಯವರಗೆ ರಾಜಯೋಗಗಳಿದ್ದಾಗ ಚಂದ್ರನ ನೆರವು ಅಪಾರವಾದ ಪ್ರಮಾಣವಾದದ್ದು. ಕನಸಿನಲ್ಲಿಯೂ ಯೋಚಿಸಿರದ ರಾಜಪಟ್ಟ ಸಿಗಲು ದಾರಿ ಮಾಡಿಕೊಡುವ ಅದೃಷ್ಟದ ನೆರವನ್ನು ಕರ್ಕಾಟಕ ರಾಶಿಯವರಿಗೆ ಚಂದ್ರ ಒದಗಿಸುತ್ತಾನೆ. ನಮ್ಮ ಮಾಜಿ ಪ್ರಧಾನಿ ಮನಮೋಹನ ಸಿಂಗರನ್ನು ಗಮನಿಸಿ. ಹೆಚ್ಚು ಜನರು ಬೆಂಬಲಿಸಬಹುದಾದ ಸೋನಿಯಾ ಗಾಂಧಿಯವರಾಗಲಿ ರಾಹುಲ್‌ ಗಾಂಧಿಯವರಾಗಲಿ 2004 ರ ಸಂದರ್ಭದಲ್ಲಿ ಪ್ರಧಾನ ಮಂತ್ರಿಯಾಗಲಿಲ್ಲ. ಹಾಗಾದರೆ ಮನಮೋಹನರ ಚಂದ್ರನಿಗೆ ಅದೇನು ತೂಕವೆಂಬ ಪ್ರಶ್ನೆ ಏಳುವುದು ಸಹಜವೇ.

ಕರ್ಕಾಟಕ ರಾಶಿಯವರಾಗಿದ್ದ ಮನಮೋಹನರ ಜಾತಕದಲ್ಲಿನ ಚಂದ್ರ ದುಷ್ಟ ಶನೈಶ್ಚರನನ್ನು ತನ್ನ ಶುಭ ದೃಷ್ಟಿಯ ಮೂಲಕ ಬಲವಾಗಿ ನಿಯಂತ್ರಿಸಿದ್ದ. ಮೌನಗೌರಿ ಎಂದು ವಿರೋಧಿಗಳು ಮನಮೋಹಮನರನ್ನು ಟೀಕಿಸುತ್ತಿದ್ದರು. ಚಂದ್ರನ ಕಾರಣವಾಗಿ ಕೇವಲ ಬುರುಡೆ ಬಿಡಬಹುದಾಗಿದ್ದ ಅಪಾಯದಿಂದ ಮನಮೋಹನರು ಪಾರಾದರು. ಮನಮೋಹನ್‌ ಹೆಚ್ಚು ಮಾತಾಡಲಿಲ್ಲ ನಿಜ, ಆದರೆ ಅವರ ಮೌನಕ್ಕೆ ತೂಕವಿತ್ತು ಎಂಬುದನ್ನು ಅವರ ಕಟು ವಿಮರ್ಷಕರೂ ಒಪ್ಪಿಕೊಳ್ಳಲೇಬೇಕು. ಹಿಂದೊಂದು ಮುಂದೊಂದು ಮಾತನಾಡದ ಮನಮೋಹನರನ್ನು ಸೋನಿಯಾ ಹೆಚ್ಚು ನಂಬಿದ್ದರು.  ಈ ಅಪರೂಪದ ಗುಣ ಚಂದ್ರನ ಸ್ವಾದಿಷ್ಟತೆ ಚಂದ್ರನ ಜೊತೆ ಗೂಡಿದ್ದ ಶುಕ್ರ ಕುಜ ಗ್ರಹಗಳಿಂದಲೂ ಅನ್ಯ ಕಾರಣಗಳಿಗಾಗಿ ಒಡಮೂಡಿಬರಲು ಸಾಧ್ಯವಾಯ್ತು. ಸೂಕ್ತವಾದ ದಿಕ್ಕುಗಳಿಂದ ಚಂದ್ರನು ಒದಗಿಸಿದ ಧೈರ್ಯ ಹಾಗೂ ವಿವೇಕ ಭಾಗ್ಯದಲ್ಲಿನ ಗುರುನ ಶಕ್ತಿ ಕೇತುವಿನ ಮೂಲಕ ದುರ್ಬಲವಾಗಿದ್ದರೂ ರಾಹುವಿನ ಸಿದ್ಧಿಯನ್ನು ಪಡೆದಿದ್ದ ಗುರುಗ್ರಹ ಸೂಕ್ತಕಾಲದಲ್ಲಿ ಮನಮೋಹರರನ್ನು ಮುಂಚೂಣಿಗೆ ತಂದು ಚಾಣಾಕ್ಷ್ಯ ಆರ್ಥಿಕ ತಜ್ಞ ಎಂದು ಗುರುತಿಸುವಂತೆ ಮಾಡಿತು. ಶನೈಶ್ಚರನು ಚುಚ್ಚಿ ಗೀರುವ ಚೂರಿಯಾಗಿದ್ದಂತೆ ಕಂಡರೂ, ಚಂದ್ರನಿಂದ ಮೃದುವಾಗಿ ಅರಳು ಮನೋಹನರನ್ನು ಆರ್ಥಿಕ ತಜ್ಞರಾಗಲು ತನ್ನ ನೆರವು ನೀಡಿದ. ಅವರ ಕೈಕೆಳಗಿನವರನ್ನು ಸಿಂಗ್‌ ಅವರಿಗೆ ನಿಷ್ಠರಾಗಿರಲು ಅವರಿಗೆ ಅವಕಾಶ ಒದಗಿಸಿದ. ತಾಳ್ಮೆಯಿಂದಲೇ ಇರುವಂತಾಗಿಸಿ ಚಂದ್ರನ ಸಿದ್ಧಿ ಪಡೆದು ಹುರಿದುಂಬಿಸಿದ. 

ಕಟಕ ರಾಶಿಯೇ ಆದರೂ ಹರ್ಷದ್‌ ಮೆಹ್ತಾ ಖಳನಾಯಕನಾದದ್ದು
ಕುಜ ಗ್ರಹದ ಪ್ರಭಾವ ಮನದೊಳಗೆ ರಾಹುಗ್ರಹದ ಮೂಲಕ ಇನ್ನಿಷ್ಟು ದುಷ್ಟಬುದ್ಧಿಯನ್ನು ಬಿತ್ತಿತು. ಬುಧನು ಅಪಾಯಕಾರಿಯಾಗಿದ್ದನು. ಆದರೂ ಬೌದ್ಧಿಕತೆಯನ್ನು ತುಂಬಿದ್ದ. ಆದರೆ ಕೇತು ಹಾಗೂ ಗುರುಗ್ರಹಗಳು ದೋಷಪೂರ್ಣರಾದುದರಿಂದ ಷೇರುಪೇಟೆಯನು ಭ್ರಷ್ಟರ ಅಡ್ಡೆಯಾಗುವಂತೆ ಭಾರತದಲ್ಲಿ ಹರ್ಷದ್‌ ಮೆಹ್ತಾ ಕುಟಿಲೋಪಾಯಗಳನ್ನು ಹೆಣೆದ. ವ್ಯತ್ಯಾಸ ಗಮನಿಸಿ ಮನಮೋಹನ್‌ ಸಿಂಗ್‌ ರಿಸರ್ವ್‌ ಬ್ಯಾಂಕನ್ನು, ಆರ್ಥಿಕ ಸಚಿವಾಲಯವನ್ನು ಸಮೃದ್ಧಿಗೊಳಿಸಿದರೆ ಹರ್ಷದ್‌ ಮೆಹ್ತಾರ ಚಂದ್ರ ಸೂರ್ಯನ ಸುಡು-ಉರಿಯಲ್ಲಿ ಮೋಹಕ ಶಕ್ತಿಯನ್ನು ಒದಗಿಸದೆ ಖಳನಾಯಕ ಪಟ್ಟ ನೀಡಿದ. ಅಪಾರ ಪ್ರಮಾಣದ ಲಾಭವನ್ನು ಚಂದ್ರಷೇರು ಪೇಟೆಯ ನಿಯಂತ್ರಣವನ್ನು ತಾನೇ ಮಾಡುವವನಾಗಿ ನಂತರ ಶುಕ್ರ ದಶಾಕಾಲದ ಏರು ಶ್ರೀಮಂತಿಕೆಯ ಸಂದರ್ಭದಲ್ಲಿ ಜೈಲುಪಾಲೂ ಆಗಿ ನಂತರ ಅಪಾದನೆಗಳ ಸರ್ವತ್ರ ಒತ್ತಡ ವಿಚಾರಣೆ, ಬಂಧನ ಇತ್ಯಾದಿ ಸುಳಿಗಳ ನಡುವೆಯೇ ಹೃದಯಾಘಾತದಿಂದ ಸಾವನ್ನಪ್ಪಿದ್ದ. 

ಸದಾ ಹೊಗಳಿಕೆ ಬಯಸಿಯೇ ಹೆಜ್ಜೆ ಇಟ್ಟ ಜವಹರಲಾಲ್‌ ನೆಹರು
ಎಲ್ಲವೂ ನಿಮ್ಮ ಆಡಳಿತದಲ್ಲಿ ಸರಿಯಾಗಿಯೇ ಇದೆ ಎಂದು ಹೊಗಳಿದ ಸಮಯಸಾಧಕರ ಬುದ್ಧಿಜೀಗಳ ಮಾತಿನಮೇಲೇ ನಂಬಿಕೆ ಇರಿಸಿ ಜಗತ್ತಿನ ನಾಯಕರಾಗ ಬಯಸಿದ ಜವಹರಲಾಲ್‌ ನೆಹರು ಎಂಬ ಹೆಸರು ಹೇಳಿದರೆ ಸಾಕು ಸಿಡಿಯುವ ಮಂದಿ ಎಷ್ಟು ಜನ? ಅಸಂಖ್ಯ ಜನ. ಜನಾನುರಾಗಿ ಪ್ರಧಾನಿಯಾದವರು. ಮೌಂಟ್‌ ಬ್ಯಾಟನ್‌ ಪತ್ನಿ ಐರಿನಾ ಜೊತೆ ಐವತ್ತರ ಹರೆಯದರಲ್ಲೂ ಹದಿಹರೆಯದ ಅನುರಾಗ ಹೊಂದಿದ್ದರು. ಸಾರ್ವಜನಿಕವಾಗಿ ಐರೀನಾ ಜೊತೆ ಹರಟುತ್ತಿದ್ದ ಆಪ್ತ ಚಿತ್ರಗಳನ್ನು ನಾವು ಅವರ ಬಗೆಗಿನ ಲೇಖನ ಪುಸ್ತಕ ವರದಿ ಹಾಗೂ ಟೀಕೆಗಳಲ್ಲಿ ಗಮನಿಸಿದ್ದೇವೆ. ಧೈರ್ಯ ಅದೃಷ್ಟ ಆದರೆ ಬದುಕಿನ ಒಳಾಂತರ್ಗತ ಹಲವು ವಿಚಾರಗಳಲ್ಲಿ ನಿವಾರಣೆಗೆ ಸಾಧ್ಯವಿರದ ಅಸಹಾಯಕ ಹತಾಶೆ ಎಲ್ಲಾ ಒಳಿತುಗಳನ್ನು ನಿರ್ಮಿಸಲು ಸಾಧ್ಯವಿದ್ದರೂ ಮಾಡಲಾಗದೆ ಕೈಚೆಲ್ಲಿದ ಅಸಂಗತತೆ ಇತ್ಯಾದಿಗಳೆಲ್ಲವೂ ಚಂದ್ರನ ಫ‌ಲ. ನೆಹರು ಕರ್ಕಾಟಕ ರಾಶಿಯ ಗುಂಪಿಗೆ ಸೇರಿದವರು. ಮೋಹಕ ವ್ಯಕ್ತಿತ್ವ. ಆದರೆ ತಮ್ಮ ಪೂರ್ಣ ಶಕ್ತಿಯನ್ನು ಬಳಸಿಕೊಳ್ಳಲಾಗದೆ ವಿರೋಧಿಗಳ ಕಟು ಟೀಕೆಗಳನ್ನು ಎದುರಿಸಿದರೂ ನಿರ್ಲಕ್ಷರಾದ ಗುರುತರವಾದ ಆರೋಪ ಹೊತ್ತವೈರುಧ್ಯ.  ಚೀನಾವನ್ನು ಹಾಗೂ ಪಾಕಿಸ್ತಾನವನ್ನೂ ಸೂಕ್ತವಾಗಿ ನಿಯಂತ್ರಿಸಲಾಗದೆ. ನಿರಂತರವಾದ ಸಮಸ್ಯೆಯೊಂದನ್ನು ಸೃಷ್ಟಿಸಿದ್ದು ಇವರ ಮೇಲಿನ ಗುರುತರ ಆರೋಪ ಚಲ್ತಾ ಹೈ ಧೋರಣೆಯನ್ನು ಚಂದ್ರ ಒದಗಿಸಿದ್ದ.

ಯಾವಯಾವ ನಕ್ಷತ್ರಗಳು ಕಟಕ ರಾಶಿಯನ್ನು ಹೆಣೆಯುತ್ತದೆ
ಪುನರ್ವಸು ನಕ್ಷತ್ರದ ನಾಲ್ಕನೇ ಪಾದ, ಪುಷ್ಯಾ ನಕ್ಷತ್ರದ ನಾಲ್ಕೂ ಪಾದಗಳು ಆಶ್ಲೇಷಾ ನಕ್ಷತ್ರದ ನಾಲ್ಕೂ ಪಾದಗಳು ಕಟಕರಾಶಿಯಲ್ಲಿ ಸಮಾವೇಶಗೊಳ್ಳುತ್ತದೆ. ಪುನರ್ವಸು ನಕ್ಷತ್ರದ ನಾಲ್ಕನೇ ಪಾದದ ಕಟಕ ರಾಶಿಯವರು ಗುರುಗ್ರಹದ ಶುಭಫ‌ಲಗಳನ್ನು ಪಡೆಯುತ್ತಾರೆ. ಉತ್ತಮ ವಾಗ್ಮಿಗಳಾಗುವ,ಉತ್ತಮವಾದ ಅಲೌಕಿಕತೆಯ ಕುರಿತಾದ ಧರ್ಮದ ವಿಚಾರವಾಗಿನ ಸಾತ್ವಿಕ ಮಾರ್ಗದರ್ಶನಗಳನ್ನು ಕೊಡುವ ಜನ ಇವರಾಗಿರುತ್ತಾರೆ. ತಮ್ಮ ಮೇಲೆ ಸೂಕ್ತವಾದ ನಿಯಂತ್ರಣ ಹೇರಿಕೊಳ್ಳುವ ಅನನ್ಯತೆ ಇವರಿಗೆ ಸಾಧ್ಯ. ಇವರ ದೌರ್ಬಲ್ಯ ಎಂದರೆ ಎಲ್ಲವನ್ನೂ ಇವರಿಗೆ ತಿಳಿದ ಧರ್ಮದ ನೆರಳನಡಿಯಲ್ಲೇ ನೋಡಿ ಮೈಮರೆಯುವ ಸ್ವಭಾವ. ಚಂದ್ರನಿಗೆ ಅಸ್ತಂಗತ ದೋಷವುಂಟಾದಾಗ ಈ ನಕ್ಷತ್ರದ ಭಾಗದಲ್ಲಿ ಬರುವ ಜನ ಸ್ಥೈರ್ಯ ಕಳೆದುಕೊಳ್ಳುವ ಸಾಧ್ಯತೆ ಅಧಿಕ.

ಇನ್ನು ಪುಷ್ಯ ಹಾಗೂ ಆಶ್ಲೇಷಾ ನಕ್ಷತ್ರಗಳನ್ನು ಹೊಂದಿದ ಕಟಕ ರಾಶಿಯ ಜನ ಅದರಲ್ಲೂ ಪುಷ್ಯಾ ನಕ್ಷತ್ರದ ಸಮೂಹ ಗುರು ಗ್ರಹದ ಉಪಸ್ಥಿತಿ ಪುಷ್ಯಾ ನಕ್ಷತ್ರದಲ್ಲೇ ಇದ್ದಲ್ಲಿ ಅಧಿಕವಾದ ಲಾಭ ಪಡೆಯಲು ಸಾಧ್ಯ. ಇಂಥ ಗುರುಗ್ರಹದಿಂದ ಹೆಚ್ಚು ಹೆಚ್ಚು ದೂರಾಲೋಚನೆ ತರ್ಕ, ನಿರ್ದಿಷ್ಟ ಸುಸ್ಥಿರ ಯೋಜನೆಗಳ ಮೂಲಕ ಒಳಿತುಗಳನ್ನು ನಿರ್ಮಿಸಲು ಕಂಕಣಬದ್ಧರಾಗುತ್ತಾರೆ. ತಮ್ಮ ಸ್ಥಿರ ಮಾನಸಿಕ ಬಲದಿಂದ ಹಿಡಿದ ಕೆಲಸವನ್ನು ಛಲಬಿಡದೆ ಸಾಧಿಸುವ ಅನುಪಮ ಸಂಪನ್ನತೆ ಪಡೆದಿರುತ್ತಾರೆ. ಮೈಕೆಲ್‌ ಗೋರ್ಬಚೇವ್‌ರಂಥ ಅದ್ಭುತ ನಾಯಕ ರಷ್ಯಾವನ್ನು ಕಮ್ಯುನಿಸ್ಟ್‌ ತತ್ವದಿಂದ ಹೊರಬರಿಸಿ ತನ್ನ ಭಾರಕ್ಕೆ ತಾನೆ ಕುಸಿಯಲಿದ್ದ ಸೋವಿಯತ್‌ ಯೂನಿಯನ್‌ ಅನ್ನು ಹಲವು ಪ್ರಜಾಸತ್ತಾತ್ಮಕ ರಾಷ್ಟ್ರಗಳನ್ನಾಗಿ ಆಕಾರಗೊಳ್ಳಲು ವರ್ತಮಾನದಲ್ಲಿ ಯೋಜನೆ ರೂಪಿಸಿದ. ಕಾಲಗರ್ಭದಲ್ಲಿ ಗೋರ್ಬಚೇವ್‌ ಯೋಜನೆ ಎಂಥ ವಿನಾಶವನ್ನು ತಪ್ಪಿಸಿತು!  ಜಾಗತಿಕ ಅಶಾಂತಿಯನ್ನು ದೂರಗೊಳಿಸಿದವು. ಶೀತಲ ಸಮರದ ಕಾರಣಕ್ಕಾಗಿ ಸುಡು ಕೆಂಡಗಳಾಗಿದ್ದ ಅಮೆರಿಕಾ ರಷ್ಯಾ ಈ ಕಾರಣದಂದ ಹತ್ತಿರವಾದವು. ಗೋರ್ಬಚೇವ್‌ ಗೆ ಆತ್ಮ ಪ್ರಾಮಾಣವನ್ನು ವಾಸ್ತವದಲ್ಲಿ ಜಾಗತಿಕವಾದ ಒಳಿತುಗಳಿಗೆ ಕೊಂಡಿ ಕೂಡಿಸುವ ಅವಶ್ಯಕವಾದ ಶಕ್ತಿ ಒದಗಿದ್ದು ಕರ್ಕಾಟಕ ರಾಶಿಯ ಗುಣಧರ್ಮದ ಫ‌ಲವಾಗಿ.

ಹಾಗೆಯೇ, ಕಟಕ ರಾಶಿಯವರ ಉಡಾಫೆತನ ಸ್ವಂತ ವ್ಯಕ್ತಿತ್ವಕ್ಕೆ ಮಾರಕವಾಗುವ ರೀತಿಯಲ್ಲಿ ವಿಸ್ತರಿಸಿಕೊಳ್ಳುತ್ತದೆ. ಲಾಲೂ ಪ್ರಸಾದ್‌ ಯಾದವ್‌ ಬುದ್ಧಿವಂತರೇ ಆಗಿದ್ದಾರೆ. ಆದರೆ ಒರಟುತನವನ್ನು ತೋರುವುದರ ಮೂಲಕ ತಮ್ಮನ್ನೇ ಪ್ರತಿಷ್ಠಾಪಿಸುವ ವಿಚಾರದಲ್ಲಿ ಕ್ರಿಯಾಶೀಲರಾಗುತ್ತಾರೆ. ಚಂದ್ರನೊಟ್ಟಿಗೆ ಶನೈಶ್ಚರನು ಇದ್ದಿರುವ ಕಾರಣ ಇಂಥ ವಿಚಾರಗಳು ಅಪಾಯಕಾರಿ ಮಟ್ಟಕ್ಕೆ ಏರಿಬಿಡುತ್ತದೆ. ಪಶುಗ್ರಾಸದ ವಿಷಯದ ಹಗರಣ ಅವರನ್ನು ಸೆರೆಮನೆಗೂ ತಳ್ಳಿತು. ಆದರೆ ತನ್ನ ಹೆಂಡತಿಯನ್ನೇ ಮುಖ್ಯಮಂತ್ರಿಯಾಗಿಸಿ ಕೂಡ್ರಿಸಿದರು. ಸಧ್ಯ ತಮ್ಮ ಇಬ್ಬರು ಮಕ್ಕಳನ್ನು ಬಿಹಾರದಲ್ಲಿ ಮಂತ್ರಿಗಳನ್ನಾಗಿಸಿದ್ದಾರೆ. ಆತನು ಮೂಕ ಪ್ರೇಕ್ಷಕರಾಗುತ್ತಾರೆ. ನಮ್ಮ ಸಂವಿಧಾನದಲ್ಲಿನ ಚೌಕಟ್ಟನ್ನು ಮೀರುವ ಕೆಲಸವಲ್ಲವಾದರೂ ಭಂಡತನವನ್ನು ಪ್ರದರ್ಶಿಸುವ ಅನುಚಿತತೆ ಸಂಭವಿಸಬಾರದು. 

ಅನಂತ ಶಾಸ್ತ್ರಿ 

ಟಾಪ್ ನ್ಯೂಸ್

: ಸಿಎಂ ಸಿದ್ದರಾಮಯ್ಯ

Bagalakote: ಅನರ್ಹರ ಬಿಪಿಎಲ್ ಕಾರ್ಡ್ ಗಳು ಮಾತ್ರ ರದ್ದು: ಸಿಎಂ ಸಿದ್ದರಾಮಯ್ಯ

Kunigal: ಹಳ್ಳಕ್ಕೆ ಉರುಳಿ ಬಿದ್ದ ಟ್ರ್ಯಾಕ್ಟರ್… ತಂದೆ ಮಗ ಸಾವು

Kunigal: ಹಳ್ಳಕ್ಕೆ ಉರುಳಿ ಬಿದ್ದ ಟ್ರ್ಯಾಕ್ಟರ್… ತಂದೆ ಮಗ ಸಾವು

Shimoga; Omini caught fire while filling with petrol

Shimoga; ಪೆಟ್ರೋಲ್ ಹಾಕುವಾಗ ಹೊತ್ತಿ ಉರಿದ ಓಮಿನಿ

Davanagere: ಯತ್ನಾಳ್‌ ಫೋರ್ತ್ ಗ್ರೇಡ್ ರಾಜಕಾರಣಿ..: ರೇಣುಕಾಚಾರ್ಯ ವಾಗ್ದಾಳಿ

Davanagere: ಯತ್ನಾಳ್‌ ಫೋರ್ತ್ ಗ್ರೇಡ್ ರಾಜಕಾರಣಿ..: ರೇಣುಕಾಚಾರ್ಯ ವಾಗ್ದಾಳಿ

BBK11: ಹನುಮಂತು ಬಳಿಕ ಮತ್ತಿಬ್ಬರು ವೈಲ್ಡ್‌ ಕಾರ್ಡ್‌ ಸ್ಪರ್ಧಿಗಳು ಬಿಗ್‌ಬಾಸ್‌ ಮನೆಗೆ

BBK11: ಹನುಮಂತು ಬಳಿಕ ಮತ್ತಿಬ್ಬರು ವೈಲ್ಡ್‌ ಕಾರ್ಡ್‌ ಸ್ಪರ್ಧಿಗಳು ಬಿಗ್‌ಬಾಸ್‌ ಮನೆಗೆ

Karkala: ಬೋಳ ಅಕ್ರಮ ಮದ್ಯ ದಾಸ್ತಾನು ಪ್ರಕರಣ: ಕಾರವಾರದಲ್ಲಿ ಓರ್ವ ಆರೋಪಿ ಬಂಧನ

Karkala: ಬೋಳ ಅಕ್ರಮ ಮದ್ಯ ದಾಸ್ತಾನು ಪ್ರಕರಣ: ಕಾರವಾರದಲ್ಲಿ ಓರ್ವ ಆರೋಪಿ ಬಂಧನ

Hubli: Sri Shivlingeshwar Swamiji of Advisiddeswar Mutt passed away

Hubli: ಅಡವಿಸಿದ್ದೇಶ್ವರ ಮಠದ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಲಿಂಗೈಕ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Astrology 2024: 2024ರಲ್ಲಿ ಮಿಶ್ರ ಫ‌ಲಗಳೇ ಅಧಿಕ-ರಾಜ್ಯದಲ್ಲೇನಾಗುತ್ತದೆ?

Astrology 2024: 2024ರಲ್ಲಿ ಮಿಶ್ರ ಫ‌ಲಗಳೇ ಅಧಿಕ-ರಾಜ್ಯದಲ್ಲೇನಾಗುತ್ತದೆ?

ಜ್ಯೋತಿಷ್ಯದಲ್ಲಿ ನವಗ್ರಹಕ್ಕಿಂತಲೂ ನಕ್ಷತ್ರಗಳಿಗೆ ಹೆಚ್ಚು ಪ್ರಾಮುಖ್ಯತೆ ಯಾಕೆ ಕೊಡಲಾಗಿದೆ?

ಜ್ಯೋತಿಷ್ಯದಲ್ಲಿ ನವಗ್ರಹಕ್ಕಿಂತಲೂ ನಕ್ಷತ್ರಗಳಿಗೆ ಹೆಚ್ಚು ಪ್ರಾಮುಖ್ಯತೆ ಯಾಕೆ ಕೊಡಲಾಗಿದೆ?

ಶುಭ ವಿಚಾರ ತಿಳಿಯುವ ಗೋಚಾರ ಫಲ ಎಂದರೇನು, ಗುರುದೆಸೆ ಯಾವಾಗ ಆರಂಭವಾಗಲಿದೆ…

ಶುಭ ವಿಚಾರ ತಿಳಿಯುವ ಗೋಚಾರ ಫಲ ಎಂದರೇನು, ಗುರುಬಲ ಯಾವಾಗ ಆರಂಭವಾಗಲಿದೆ…

jjhgfd

ಮಾರಕಾಧಿಪತಿ, ಭಾದಕಾಧಿಪತಿ: ಅಕಾಲಿಕ ಮರಣದ ಬಗ್ಗೆ “ಅಷ್ಠಮ ಸ್ಥಾನ” ಮುನ್ಸೂಚನೆ ಕೊಡುತ್ತದೆಯೇ?

ಗಜಕೇಸರಿ ಯೋಗ… ಈ ಯೋಗ ಹೇಗೆ ಉಂಟಾಗುತ್ತದೆ, ಇದರ ಮಹತ್ವವೇನು?

ಗಜಕೇಸರಿ ಯೋಗ… ಈ ಯೋಗ ಹೇಗೆ ಉಂಟಾಗುತ್ತದೆ, ಇದರ ಮಹತ್ವವೇನು?

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

Bengaluru Airport: ಏರ್ ಪೋರ್ಟ್‌ನಲ್ಲಿ ಆಮೆ, ಮೊಸಳೆ ಸಾಗಣೆ ಯತ್ನ

Bengaluru Airport: ಏರ್ ಪೋರ್ಟ್‌ನಲ್ಲಿ ಆಮೆ, ಮೊಸಳೆ ಸಾಗಣೆ ಯತ್ನ

Crime: ಮೊಬೈಲ್‌ಗಾಗಿ ಜಗಳ; ಪುತ್ರನ ಕೊಂದ ಅಪ್ಪ!

Crime: ಮೊಬೈಲ್‌ಗಾಗಿ ಜಗಳ; ಪುತ್ರನ ಕೊಂದ ಅಪ್ಪ!

Bengaluru: ಕಾರಿನೊಳಗೆ ಬೆಂಕಿ ಹಚ್ಚಿಕೊಂಡು ಉದ್ಯಮಿ ಆತ್ಮಹತ್ಯೆ

Bengaluru: ಕಾರಿನೊಳಗೆ ಬೆಂಕಿ ಹಚ್ಚಿಕೊಂಡು ಉದ್ಯಮಿ ಆತ್ಮಹತ್ಯೆ

2(1)

AI ಆರೋಗ್ಯ ರಕ್ಷಣೆಯ ವ್ಯವಸ್ಥೆಯಲ್ಲಿ ಸ್ವೀಕಾರದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆಯೇ?

: ಸಿಎಂ ಸಿದ್ದರಾಮಯ್ಯ

Bagalakote: ಅನರ್ಹರ ಬಿಪಿಎಲ್ ಕಾರ್ಡ್ ಗಳು ಮಾತ್ರ ರದ್ದು: ಸಿಎಂ ಸಿದ್ದರಾಮಯ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.