ಹರಳು ಧರಿಸಿದರೆ ಆಪತ್ತು ಗ್ಯಾರಂಟೀನಾ?


Team Udayavani, Jan 16, 2016, 6:25 AM IST

5.jpg

ಭಾರತೀಯ ಜೋತಿಷ್ಯಶಾಸ್ತ್ರ ಧರಿಸುವ ಹರಳುಗಳ ಧಾರಣೆಯ ಬಗ್ಗೆ ವಿಶೇಷವಾದ ವಿವರಗಳನ್ನು, ವಿಧಾನಗಳನ್ನು ಅಗತ್ಯಗಳ ಬಗೆಗಿನ ವಿಶ್ಲೇಷಣೆಗಳನ್ನು ಮಾಡಿದೆ. ಯಾರೇ ಯಾವುದೇ ರೀತಿಯಲ್ಲಾಗಲೀ ಮನಬಂದಂತ ಹರಳು ಧರಿಸುವುದನ್ನು ಜೋತಿಷ್ಯ ಶಾಸ್ತ್ರ ಪುರಸ್ಕರಿಸುವುದಿಲ್ಲ. ಕೆಲವರು ಅವರಿಗೆ ಯಾವ ಪ್ರೇರಣೆಯಿಂದಲೋ ಅವರವರಿಗೆ ಅನಿಸಿದ ರೀತಿಯಲ್ಲಿ ಹರಳು ಧರಿಸಿರುತ್ತಾರೆ. ಇದು ಗ್ರಹಗಳ ವಿಚಾರದಲ್ಲಿ ಗ್ರಹಚಾರಗಳ ವಿಷಯದಲ್ಲಿ ಸೂಕ್ತವಾಗಿರುವುದಿಲ್ಲ. ಯಾವ ರೋಗಕ್ಕೆ ಮದ್ದು ಯಾವುದು ಸೂಕ್ತವೋ ಆ ಮದ್ದನ್ನು ಮಾತ್ರ ಸೇವಿಸಬೇಕು. ಬಿಟ್ಟು ರಕ್ತದೊತ್ತಡಕ್ಕೆ ಜ್ವರದ ಮದ್ದು ಸೇವಿಸಿದರೆ ಏನು ಪ್ರಯೋಜನ? ಪ್ರಯೋಜನ ಒತ್ತಟ್ಟಿಗಿರಲಿ ಇರುವ ತೊಂದರೆ ಬಿಟ್ಟು ಮಗದೊಂದು ತೊಂದರೆಗೂ ಇದರಿಂದ ಆಹ್ವಾನ. 

ನವರತ್ನಗಳು ಎಂದರೆ ವಜ್ರ, ನೀಲ, ಮಾಣಿಕ್ಯ, ಪುಷ್ಯರಾಗ, ಮುತ್ತು, ಹವಳ, ಮರಕತ, ವೈಢೂರ್ಯ, ಗೋಮೇಧಕ. ಇವು ಹಲವು ರೀತಿಯ ರಕ್ಷೆಯನ್ನು ಯುಕ್ತವಾಗಿ ಧರಿಸಿದಾಗ ನೀಡುತ್ತವೆ. ಈ ಹರಳುಗಳನ್ನು ಅನ್ಯವಾದವುಗಳು ನವರತ್ನಗಳೊಳಗೆ ಸಮಾವೇಶವಾಗುವುದಿಲ್ಲ. ಅನ್ಯ ಹರಳುಗಳು ನಮ್ಮ ಜೋತಿಷ್ಯ ಶಾಸ್ತ್ರ ನಿರೂಪಿಸಿದ ವಿಚಾರದಲ್ಲಿ ನಿರ್ದೇಶನಗೊಂಡ ಪರಿಣಾಮಗಳನ್ನು ಕೊಡಲಾರವು. ಯಾವ ಯಾವುದೋ ನಿರ್ಣಯಗಳಿಂದ, ಯಾರ ಹತ್ತಿರವೋ ಸಲಹೆಗಳನ್ನು ಪಡೆದ ಕಾರಣವಾಗಿ ಧರಿಸುತ್ತಾರೆ ಇದು ಸೂಕ್ತವಲ್ಲ. 

 ಸಕಲ ಗ್ರಹಗಳು ಭಾವಮಧ್ಯದಲ್ಲಿ ಪೂರ್ಣ ಬಲಿಷ್ಟರಾಗಿರುತ್ತಾರೆ. ಭಾವ ಸಂಧಿಯಲ್ಲಿ ಸಾಫ‌ಲ್ಯತೆ
ಕೊಡಲಾರರು. ನಮ್ಮ ಸೂಕ್ತಭಾವದ ವಿಶ್ಲೇ‚ಷಣೆಗಳು ಲಗ್ನಭಾವದ ಅಧಿಪತಿಯ ಬಲವನ್ನು ಪರಿಗ್ರಹಿಸಿ
ಸುಖ, ಭಾಗ್ಯ, ಲಾಭ, ಆಪತ್ತು, ಸಂಧಿ ಹಾಗೂ ಇತರ ಒಳಿತಿಗೆ ಸಂಬಂಧವಾಗಿ ಅವನು ಒದಗುವ ರೀತಿ
ಗ್ರಹಿಸಿ ಯಾವ ಹರಳು ಎಷ್ಟು ಕ್ಯಾರಟ್‌ ಎಂಬುದನ್ನು ತಿಳಿದು ಅನಿವಾರ್ಯತೆ ಇರುವ ರೀತಿಯಲ್ಲಿ ಸೂಕ್ತ
ಲೋಹದಲ್ಲಿ, ಸೂಕ್ತ ಸಮಯದಲ್ಲಿ ಧಾರಣ ಮಾಡಬೇಕು. ಇನ್ನು ಪ್ರತಿದಿನವೂ ಮಾಡಬೇಕಾದ ಕಿಂಚತ್‌
ಅನುಷ್ಠಾನಗಳನ್ನು ಮುಖ್ಯವಾಗಿಸಿಕೊಳ್ಳಬೇಕು. ಇವನ್ನೆಲ್ಲಾ ಬಿಟ್ಟು ರತ್ನಗಳನ್ನು ಧರಿಸುವುದು ನಿರೀಕ್ಷಿ$ತ
ಪರಿಣಾಮ ಒದಗಿಸದು. ಒಳ್ಳೆಯ ಪರಿಣಾಮ ಕೊಡುವ ಹರಳಾದರೂ ಚಂದ್ರ ಹಾಗೂ ಬುಧರ ವಿಷಮ
ಸ್ಥಿತಿ ಕಾರಣದಿಂದ ಉದ್ರೇಕ ಚಡಪಡಿಕೆಗೊಳಗಾಗುವ ಶಿಷ್ಠ ಸಾಲಿನ ಜನರು ಈ ರತ್ನಗಳನ್ನು ತೋರಿಸಿ ತೆಗೆದ ನೀರಲ್ಲಿ ಸ್ನಾನ ಪೂರೈಸಿ ದೈನಂದಿನ ದೈವಾರಾಧನೆಯನ್ನು ಪೂರೈಸುವುದು ಸೂಕ್ತ.

ಚಂದ್ರ, ಬುಧರ ವಿಷಮ ಸ್ಥಿತ ಕಾರಣ

ಹೀಗೆಂದರೆ ಏನು ಎಂಬ ಪ್ರಶ್ನೆ ಓದುಗರಲ್ಲಿ ಬರುವುದು ಸಹಜ. ಚಂದ್ರನು ಮಾನಸಿಕ ವಿಸ್ತಾರದಲ್ಲಿ ಡೋಲಾಯಮಾನ ಸ್ಥಿತಿಯನ್ನು ಒದಗಿಸುವ ಸಂಧಾನ ಪಡೆದಿದ್ದರೆ ಜಾತಕ ಕುಂಡಲಿಯಲ್ಲಿ ಪ್ರತಿಯೊಂದಕ್ಕೂ ಆ ವ್ಯಕ್ತಿಯನ್ನು ಸೂಕ್ಷ್ಮವಾಗಿಸಿ ಅತಂತ್ರವಾಗಿಸುತ್ತಾನೆ. ಇಂಥ ಚಂದ್ರನು ಬುಧನೂ ತೀವ್ರತಮವಾಗಿ ಬೌದ್ಧಿಕ ಅಸ್ಥಿರತೆ ತರುವ ರೀತಿಯಲ್ಲಿದ್ದರೆ ಧರಿಸಿದ ಹರಳಿನ ಬಗ್ಗೆ ವ್ಯಕ್ತಿ ಸದಾ ಯೋಚಿಸುವ ಆತಂಕಗೊಳ್ಳುವ ಉದ್ರೇಕಗಳಿಗೆ ತಳ್ಳಿ ಧರಿಸಿದ ಹರಳಿನಿಂದಲೇ ಕಿರಿಕಿರಿಯಾಗುತ್ತಿದೆ ಎಂಬ ಸ್ಥಿರ ಸ್ಥಿತಿಗೆ ತಲುಪಿ ಬಿಡುತ್ತಾನೆ. ಹೀಗಾಗಿ ಏನೋ ಒಂದು ಚಡಪಡಿಕೆ ಸಾಮಾನ್ಯವಾಗಿ ಬಿಡುತ್ತದೆ. ಇಂಥ ಸಂದರ್ಭದಲ್ಲಿ ಈ ರತ್ನವನ್ನು ತೋಯಿಸಿ ತೆಗೆದ ನೀರಿನಲ್ಲಿ ಸ್ನಾನ ಪೂರೈಸುವುದು ಒಂದು ರೀತಿಯ ಪರಿಣಾಮವನ್ನು ಸಕಾರಾಥ¾ಕವಾಗಿ ಒದಗಿಸಲು ಕಾರಣವಾಗುತ್ತದೆ.

ಅನವಶ್ಯಕ ಹರಳುಗಳು
ಏಕಾಏಕಿ ನವರತ್ನಗಳನ್ನು ಧರಿಸುವುದು ಕಾರಣವಿರದೆ ಮನಸ್ಸಿಗೆ ಕಂಡ ಹಿತವೆನಿಸಿದ ಕಾರಣದಿಂದ
ಧರಿಸಲೇ ಬಾರದ ಹರಳುಗಳನ್ನು ಧರಿಸುವುದು ಸೂಕ್ತವಲ್ಲ. ಉದಾಹರಣೆಗೆ ಶನೈಶ್ಚರನ ಉತ್ತಮ
ಪ್ರಭಾವಗಳಿಂದ ಸಂಭ್ರಮಿಸಲ್ಪಡಬೇಕಾದ ವ್ಯಕ್ತಿ ಹವಳ ಧರಿಸಿದರೆ ಪರಿಣಾಮ ಏರುಪೇರಾಗಿ ಲಾಭಗಳ
ಬಗೆಗಿನ ದಾರಿ ಸ್ಥಗಿತಗೊಳ್ಳುತ್ತದೆ. ಶುಭಕ್ಕೆ ಧಕ್ಕೆ ಬರುತ್ತದೆ. ನವರತ್ನ ಧರಿಸಿ ಒದ್ದಾಡುವ ಮಂದಿ ಇದ್ದಾರೆ.
ಜನಪ್ರಿಯ ನಟಿಯೊಬ್ಬಳು ಕಾರಣವಿರದೆ ನವರತ್ನ ಧರಿಸಿ ಯಶಸ್ಸಿನ ಹಂತದಲ್ಲಿ ಹಿನ್ನಡೆ ಅನುಭವಿಸಬೇಕಾಗಿ ಬಂತು. ಇತ್ತೀಚೆಗೆ ತನ್ನ ವೈಫ‌ಲ್ಯದ ಕುರಿತಾಗಿ ಸೂಕ್ತವಾದ ತಿಳುವಳಿಕೆ ದೊರೆತ ಮೇಲೆ ಅಭೂತಪೂರ್ವ ಹಿಟ್‌ಗಳನ್ನು ಕೊಡಲು ಸಾಧ್ಯವಾಯಿತು. ಆ ಜನಪ್ರಿಯ ರಾಜಕಾರಣಿಯೊಬ್ಬರು ಅವಶ್ಯಕತೆಗೂ ಮುನ್ನವೇ ವೈಢೂರ್ಯ ಧರಿಸಿ ಕಾರಣವೇ ಇರದ ಸಮಸ್ಯೆಗೆ ಸಿಲುಕಿ ರಾಜೀನಾಮೆ ನೀಡಿದರು. ಅನಿವಾರ್ಯತೆಯ ರಾಹುಕೇತುಗಳ ವಿಚಾರದಲ್ಲಿ ಯಾವಾಗ, ಹೇಗೆ, ಎಷ್ಟು ಕಾಲ ಎಂಬುದನ್ನು ಗ್ರಹಿಸಿಕೊಂಡಾದ ಮೇಲೆಯೇ ಅವುಗಳಿಗೆ ಸೂಕ್ತವಾದ ಗೋಮೇಧಕವನ್ನೋ, ವೈಢೂರ್ಯವನ್ನೋ ಧರಿಸಬೇಕು. ಇಲ್ಲದಿದ್ದರೆ ಅನಾವಶ್ಯಕವಾದ ಕಾಲದಲ್ಲಿ ಕಿರಿಕಿರಿ ತಂದು ತೊಂದರೆಗೆ ಗುರಿ ಮಾಡುತ್ತದೆ.

ವ್ಯಕ್ತಿತ್ವದ ಆಧಾರದ ಮೇಲೆ ನಿಗಾ ಇರಿಸಿ ಹರಳಿನ ಆಯ್ಕೆ

ಹುಟ್ಟುಗುಣ ಘಟ್ಟ ಹತ್ತಿದರೂ ಹೋಗದು ಎಂಬ ಮಾತಿದೆ. ಹಾಗೆಯೇ ನಮ್ಮ ವ್ಯಕ್ತಿತ್ವದ ಆಳ, ಅಗಲ,
ಸೂಕ್ಷ್ಮತೆ ಹಾಗೂ ಸಾರ್ಥಕತೆಗಳನ್ನು ನಿಯಂತ್ರಿಸುವ ಗ್ರಹದ ಆಧಾರದ ಮೇಲೆ ಯಾವ ಹರಳು ಸೂಕ್ತ
ಎಂಬುದನ್ನು ನಿರ್ಧರಿಸಬೇಕು. ನಿರಂತರವಾದ ಧ್ಯಾನ, ತಪಸ್ಸು, ಯೋಗ ಸಿದ್ಧಿ ಆರಾಧನೆಗಳ ಮೂಲಕ
ಪರಿವ್ರಾಜಕರೋ, ಅವಧೂತರುಗಳೊ ಮಠಾಧಿಪತಿಗಳ್ಳೋ ನವರತ್ನಗಳಾದ ವಜ್ರ ವೈಢೂರ್ಯಗಳ
ಹರಳುಗಳನ್ನೆಲ್ಲಾ ಧರಿಸಬಹುದು. ಸಾಮಾನ್ಯರಿಗೆ ನಿರಂತರವಾದ ಅನುಷ್ಠಾನಗಳನ್ನು ರೂಢಿಸಿಕೊಳ್ಳುವುದು ವಸ್ತುಶಃ ದುಃಸಾಧ್ಯ. ಇನ್ನು ಜನನದ ಕಾಲ ಹಾಗೂ ಜನ್ಮ ಕುಂಡಲಿಯನ್ನು ಅನ್ವಯಿಸಿ ಶುಭಪ್ರದವಾದ ರತ್ನವನ್ನು ಧರಿಸುವುದರಿಂದ ವ್ಯಕ್ತಿತ್ವದಲ್ಲಿನ ವಿಕಸನ ಆರೋಗ್ಯದಲ್ಲಿರುವ ದಾಡ್ಯìತೆ ವರ್ಚಸ್ಸಿಗೊಂದು ಶೋಭೆ ಇತ್ಯಾದಿ ಇತ್ಯಾದಿ ಒದಗಿಬರಲು ಸಾಧ್ಯ. ಇದರಿಂದಾಗಿ ಕೆಲವುದೌರ್ಬಲ್ಯಗಳನ್ನು ನಿವಾರಿಸಿಕೊಳ್ಳುವ ವಿಚಾರದಲ್ಲಿ ಹರಳು ಸಹಕರಿಸುತ್ತದೆ. ಕೀಳರಿಮೆಯಿಂದ ಬಳಲುವವರಿಗೆ ಇದು ಸಹಾಯಕ. ಹರಳುಗಳು ರಾಸಾಯನಿಕ ಗುಣಧರ್ಮ ವಿಶಿಷ್ಟವಾದ ಧಾತು ಸಂಯುಕ್ತಗಳ ಫ‌ಲವಾದ ಸಾಂದ್ರತೆಯಿಂದಾಗಿ ಪಂಚಭೂತಾತ್ಮಕವಾದ ಶರೀರಕ್ಕೆ ಶರೀರದ ನಿಯಂತ್ರಣದ ಗ್ರಹದ ಕಾರಣ ಒಗ್ಗೂಡಿಸಿಕೊಂಡು ಪರಿಣಾಮ ನೀಡುತ್ತದೆ. 

ಹರಳುಗಳ ಧಾರಣೆ ಮತ್ತು ಅನುಷ್ಠಾನ
ಯುಕ್ತವಾದ ಮರಗಳ ಅಡಿಯಲ್ಲಿ ಧ್ಯಾನಾಸಕ್ತರಾಗಿ 
ದೇವಾಲಯದಲ್ಲಿ ಧ್ಯಾನಾಸಕ್ತರಾಗುವುದು ಇಲ್ಲಾ ಮನೆಯ ದೈವ ಪೀಠದ ಎದುರೇ ಧ್ಯಾನ ಮಾಡುವುದು ಸೂಕ್ತ. ನಮ್ಮ ಸಂಸ್ಕೃತಿಯಲ್ಲಿ ಅರಳೀ ಮರ, ಬೇವಿನ ಮರಗಳು, ವಟವೃಕ್ಷ ಇತ್ಯಾದಿಗಳು ಸರ್ವಶ್ರೇಷ್ಠ. ಯೋಗಾಭ್ಯಾಸಗಳಿಂದ ಅರಿಷ್ಟಗಳನ್ನು ತರುವ ಆಹಾರಕ್ಕೆ ಕಾರಣವಾದ ತಾಪತ್ರಯಗಳು, ಹರಳಿನ ಕಾರಣದಿಂದ ನಡೆಸುವ ಅನುಷ್ಠಾನಗಳಿಂದಾಗಿ ಮಾಯವಾಗುತ್ತದೆ. ದೇವಸ್ಥಾನದಲ್ಲಿ ಧ್ಯಾನ, ಅನುಷ್ಠಾನಾದಿಗಳನ್ನು ಮಾಡುವುದಾದರೆ ಮೂಲಸ್ಥಾನದಲ್ಲಿ ಪರಿಶೋಭಿತವಾದ ಆಗಮ ಶಾಸ್ತ್ರದ ಆಧಾಯಗಳಿಂದ ಆಶ್ರಿತವಾದ ಅಷ್ಟಬಂಧ ಸಂಸ್ಥಾಪಿತ ದೇವಳಗಳಲ್ಲಿ ನಡೆಸಬೇಕು. ಮನೆಯಲ್ಲಿ ತುಳಸೀ ಗಿಡದ ಎದುರಿಗೂ ಅನುಷ್ಠಾನ ಯುಕ್ತವೇ ಆಗಿದೆ. ತುಳಸೀದಳ ಸೋಕಿದ ನೀರು ತೀರ್ಥಸೇವನೆಯಿಂದ ಹರಳುಗಳ ಪ್ರಭಾವದಲ್ಲಿ ಸಂವರ್ಧನೆ ಅಧಿಕವಾಗುತ್ತದೆ.

ಅನುಷ್ಠಾನಗಳನ್ನು ನಿರ್ದಿಷ್ಟ ಲಯ ಹಾಗೂ ಏರಿಳಿತಗಳೊಂದಿಗೆ ಪಠಿಸುವುದರಿಂದಲೂ ಹರಳುಗಳ ಪ್ರಭಾವ ನಮ್ಮ ಪ್ರತಿ ಜೀವಕೋಶ¨ಮೇಲೆ ಸೂಕ್ತವಾಗಿ ಚಿಕಿತ್ಸಕ ಪ್ರಭಾವ ಹೊಮ್ಮಿಸಲು ಸರಳವಾಗುತ್ತದೆ. ರಕ್ತದೊತ್ತಡ, ಮಧುಮೇಹ, ಚರ್ಮವ್ಯಾಧಿಶ್ವಾಸಕೋಶ ಬಾಧೆ ಇತ್ಯಾದಿಗಳು ದೂರವಾಗಲು ನಿಶ್ಚಿತವಾದ ಸೂಕ್ಷ್ಮ ಸಂವೇದನೆ ನೀಡಲು ಕಾರಣವಾಗುತ್ತದೆ. ತ್ರಿಪುಂಢÅ, ಭಸ್ಮಧಾರಣ, ಗಂಧ ಚಂದನ ಕುಂಕುಮ ಅರಿಶಿಣ ಲೇಪಗಳು ಕೂಡಾ ಹರಳುಗಳ ಕ್ರಿಯಾಶೀಲತೆಯ ಜೊತೆಜೊತೆಗೇ ಎನ್ನುವುದು ಗಮನಾರ್ಹ. ಹರಳು ಇರುವ ಉಂಗುರವನ್ನು ಊಟದ ಸಂದರ್ಭದಲ್ಲಿ ಬಲಗೈಯಿಂದ ಎಡಗೈಗೆ ಹಸ್ತಾಂತರಿಸಿಕೊಳ್ಳುವುದು ಹೆಚ್ಚುಸೂಕ್ತ. ಅನುಷ್ಠಾನದ ಸಂದರ್ಭದಲ್ಲಿ ದೇವರೆದುರು ನೀಲಾಂಜನ ಹೊತ್ತಿಸಿದರೆ ಒಳಿತು.

ಹರಳುಗಳನ್ನು ಯಾವ ಧಾತುವಿನಿಂದ ಪುಷ್ಟೀಕರಿಸಬೇಕು?
ಯಾವುದೋ ಹರಳನ್ನು, ಯಾವುದೋ ಲೋಹದಲ್ಲಿ ಕಟ್ಟಿಸಿ ಉಂಗುರ ಪದಕ ಮಾಡಿ ಧರಿಸಬಾರದು. ಬಂಗಾರ ಬೆಳ್ಳಿ ಪ್ಲಾಟಿನಂ, ತಾಮ್ರ, ಕಬ್ಬಿಣ/ಪಂಚಲೋಹದ ಮಿಶ್ರಣಗಳಲ್ಲೇ ಯಾವ ಹರಳಿಗೆ ಯಾವುದು ಎಂದು ಉಪಯೋಗಿಸಬೇಕು. ನೀಲವನ್ನು ಬೆಳ್ಳಿಯಲ್ಲಿ ಹಾಕುವುದೋ, ವೈಢೂರ್ಯವನ್ನು ಬಂಗಾರದಲ್ಲಿ ಕಟ್ಟಿಸುವುದೋ ಇತ್ಯಾದಿ. ತಪ್ಪು ಸರಿ ಯೋಚನೆಗಳಿರುತ್ತವೆ. ಹಾಕಬೇಕಾದ ಹರಳು ಯಾವ ಗ್ರಹಗಳಿಗೆ ಸಂಬಂಧಿಸಿವೆ ಎಂಬುದು ತಿಳಿದೇ ಲೋಹದ ಆಯ್ಕೆ ಆಗಬೇಕು. ಏನೋ ಒಂದನ್ನು ಆಯ್ಕೆ ಮಾಡಬಾರದು. ವಿಷಯ ಆಯ್ಕೆಗಿಂತ ಹರಳು ಧರಿಸದಿರುವುದೇ ಹೆಚ್ಚು ಪ್ರಯೋಜನಕಾರಿ. ಹಾಗೆಯೇ ರಾಶಿಯ ಮೇಲಿಂದ ಹರಳು ಧರಿಸುವ ದಾನ ಕೂಡಾ ವಿಧ್ಯುಕ್ತವಾದಲ್ಲಿ ರಾಶ್ಯಾಧಿಪತಿಯ ಜನನ ಸಂದರ್ಭದ ಕಾಲಗಣನೆಗೆ ಹೊಂದಿ ಹುಟ್ಟಿದ ವ್ಯಕ್ತಿಗೆ ಯಾವ ದಶಾ ಎಂದರಿತು ನಮ್ಮ ರಾಶಿಯ ಚಂದ್ರನ ಉಪಸ್ಥಿತಿ ಉಪಯೋಗಕ್ಕೆ ಬರುತ್ತದೆ. ಚಂದ್ರನು ಇರುವ ರಾಶಿ ನಮ್ಮ ಜನ್ಮ ರಾಶಿ. ಅಂದರೆ ಜನ್ಮರಾಶಿಯ ಅಧಿಪತಿಯನ್ನು ಲಕ್ಷಿಸಿಕೊಂಡು ಹರಳಿನ ನಿರ್ಧಾರ ಆಗಬಾರದು. ಅನ್ಯರಾಶಿಯ ಅಧಿಪತಿ ಒಬ್ಬ ವ್ಯಕ್ತಿಯ ಜಾತಕದಲ್ಲಿ ದುಷ್ಟನಾಗಿರುವ ಸಾಧ್ಯತೆ ಇರುತ್ತದೆ.

ಅನಂತಶಾಸ್ತ್ರೀ 

ಟಾಪ್ ನ್ಯೂಸ್

ಖರ್ಗೆ ಮನೆ ಮುತ್ತಿಗೆ ಯತ್ನ: ಅಶೋಕ, ಸಿ.ಟಿ ರವಿ ಸೇರಿ ನೂರಾರು ಮುಖಂಡರು ಪೊಲೀಸ್ ವಶಕ್ಕೆ

ಖರ್ಗೆ ಮನೆ ಮುತ್ತಿಗೆ ಯತ್ನ: ಅಶೋಕ, ಸಿ.ಟಿ ರವಿ ಸೇರಿ ನೂರಾರು ಮುಖಂಡರು ಪೊಲೀಸ್ ವಶಕ್ಕೆ

Delhi Polls: ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ: ಕೇಜ್ರಿವಾಲ್‌ ವಿರುದ್ಧ ವರ್ಮಾ

Delhi Polls: ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ: ಕೇಜ್ರಿವಾಲ್‌ ವಿರುದ್ಧ ವರ್ಮಾ

Divorce Rumours: ಚಹಾಲ್‌ – ಧನಶ್ರೀ ದಾಂಪತ್ಯದಲ್ಲಿ ಬಿರುಕು? ಶೀಘ್ರದಲ್ಲಿ ವಿಚ್ಛೇದನ?

Divorce Rumours: ಚಹಾಲ್‌ – ಧನಶ್ರೀ ದಾಂಪತ್ಯದಲ್ಲಿ ಬಿರುಕು? ಶೀಘ್ರದಲ್ಲಿ ವಿಚ್ಛೇದನ?

New Delhi; Argument with classmates;

New Delhi; ಸಹಪಾಠಿಗಳೊಂದಿಗೆ ವಾಗ್ವಾದ; 7ನೇ ತರಗತಿ ವಿದ್ಯಾರ್ಥಿಯನ್ನು ಇರಿದು ಹತ್ಯೆ

Thane; Businessman, key witness in criminal case,

Thane; ಕ್ರಿಮಿನಲ್‌ ಕೇಸ್‌ ನ ಮುಖ್ಯ ಸಾಕ್ಷಿ, ಉದ್ಯಮಿಯನ್ನು ಗುಂಡಿಕ್ಕಿ ಹತ್ಯೆ

13-bng

Road Mishap: ಎಚ್ಚರ! ಬೆಂಗ್ಳೂರಲ್ಲಿದೆ 64 ಆಕ್ಸಿಡೆಂಟ್‌ ಡೇಂಜರ್‌ ಸ್ಪಾಟ್‌

12-chowta

Brijesh Chowta: ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರನ್ನು ಭೇಟಿಯಾದ ಕ್ಯಾ. ಬ್ರಿಜೇಶ್‌ ಚೌಟ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Astrology 2024: 2024ರಲ್ಲಿ ಮಿಶ್ರ ಫ‌ಲಗಳೇ ಅಧಿಕ-ರಾಜ್ಯದಲ್ಲೇನಾಗುತ್ತದೆ?

Astrology 2024: 2024ರಲ್ಲಿ ಮಿಶ್ರ ಫ‌ಲಗಳೇ ಅಧಿಕ-ರಾಜ್ಯದಲ್ಲೇನಾಗುತ್ತದೆ?

ಜ್ಯೋತಿಷ್ಯದಲ್ಲಿ ನವಗ್ರಹಕ್ಕಿಂತಲೂ ನಕ್ಷತ್ರಗಳಿಗೆ ಹೆಚ್ಚು ಪ್ರಾಮುಖ್ಯತೆ ಯಾಕೆ ಕೊಡಲಾಗಿದೆ?

ಜ್ಯೋತಿಷ್ಯದಲ್ಲಿ ನವಗ್ರಹಕ್ಕಿಂತಲೂ ನಕ್ಷತ್ರಗಳಿಗೆ ಹೆಚ್ಚು ಪ್ರಾಮುಖ್ಯತೆ ಯಾಕೆ ಕೊಡಲಾಗಿದೆ?

ಶುಭ ವಿಚಾರ ತಿಳಿಯುವ ಗೋಚಾರ ಫಲ ಎಂದರೇನು, ಗುರುದೆಸೆ ಯಾವಾಗ ಆರಂಭವಾಗಲಿದೆ…

ಶುಭ ವಿಚಾರ ತಿಳಿಯುವ ಗೋಚಾರ ಫಲ ಎಂದರೇನು, ಗುರುಬಲ ಯಾವಾಗ ಆರಂಭವಾಗಲಿದೆ…

jjhgfd

ಮಾರಕಾಧಿಪತಿ, ಭಾದಕಾಧಿಪತಿ: ಅಕಾಲಿಕ ಮರಣದ ಬಗ್ಗೆ “ಅಷ್ಠಮ ಸ್ಥಾನ” ಮುನ್ಸೂಚನೆ ಕೊಡುತ್ತದೆಯೇ?

ಗಜಕೇಸರಿ ಯೋಗ… ಈ ಯೋಗ ಹೇಗೆ ಉಂಟಾಗುತ್ತದೆ, ಇದರ ಮಹತ್ವವೇನು?

ಗಜಕೇಸರಿ ಯೋಗ… ಈ ಯೋಗ ಹೇಗೆ ಉಂಟಾಗುತ್ತದೆ, ಇದರ ಮಹತ್ವವೇನು?

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

17-bng

Bengaluru: ಅನಧಿಕೃತ ಕಾಲ್‌ಸೆಂಟರ್‌ ಮೇಲೆ ಪೊಲೀಸರ ದಾಳಿ: ಇಬ್ಬರ ಬಂಧನ

16-bng

Bengaluru: ಪ್ರೀತಿಸಿದವಳು ದೂರಾಗಿದ್ದಕ್ಕೆ ಯುವಕ ಆತ್ಮಹತ್ಯೆ

ಖರ್ಗೆ ಮನೆ ಮುತ್ತಿಗೆ ಯತ್ನ: ಅಶೋಕ, ಸಿ.ಟಿ ರವಿ ಸೇರಿ ನೂರಾರು ಮುಖಂಡರು ಪೊಲೀಸ್ ವಶಕ್ಕೆ

ಖರ್ಗೆ ಮನೆ ಮುತ್ತಿಗೆ ಯತ್ನ: ಅಶೋಕ, ಸಿ.ಟಿ ರವಿ ಸೇರಿ ನೂರಾರು ಮುಖಂಡರು ಪೊಲೀಸ್ ವಶಕ್ಕೆ

15-bng

Bengaluru: ಟ್ಯೂಷನ್‌ಗೆ ಬರುತ್ತಿದ್ದ ಅಪ್ರಾಪ್ತ ಬಾಲಕಿ ಜೊತೆ ಶಿಕ್ಷಕ ಪರಾರಿ

Delhi Polls: ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ: ಕೇಜ್ರಿವಾಲ್‌ ವಿರುದ್ಧ ವರ್ಮಾ

Delhi Polls: ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ: ಕೇಜ್ರಿವಾಲ್‌ ವಿರುದ್ಧ ವರ್ಮಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.