ಅದೃಷ್ಟ ದುರಾದೃಷ್ಟಗಳಲ್ಲಿ ಸಂಖ್ಯೆಗಳ ಪಾತ್ರ ಏನಿದೆ?
Team Udayavani, May 13, 2016, 10:20 PM IST
ಮಾನವನ ಅದೃಷ್ಟವೋ ದುರಾದೃಷ್ಟವೋ ಅಂಕಿ ಸಂಖ್ಯೆಗಳಿಂದಲೂ ನಿರ್ಧಾರವಾಗುತ್ತದೆ ಎಂಬ ವಿಚಾರ ಎಷ್ಟು ಸತ್ಯ/ ನಂಬಿದರೆ ನಂಬಿ ಬಿಟ್ಟರೆ ಬಿಡಿ ಅಂಕಿ ಸಂಖ್ಯೆಗಳು ಅದೃಷ್ಟದ ವಿಚಾರದಲ್ಲಿ ಮಹತ್ವದ ಪಾತ್ರ ನಿರ್ವಹಿಸುತ್ತದೆ. ಶಿವನಿಗೆ ತ್ರಿದಳವೇ ಮುಖ್ಯವಾದರೆ ಗಣಪತಿಗೆ ಒಂದಂಕಿಯೇ ಪರಮಪ್ರಿಯ. ಚತುರ್ಮುಖ ಬ್ರಹ್ಮನ ವಿಚಾರವಾಗಿ ನಾಲ್ಕು ಎಂಬುದು ವಿಶಿಷ್ಟವೂ ಬಹು ರೀತಿಯಲ್ಲಿ ವಿವೇಚಾನತ್ಮಕವೂ ಆಗಿದೆ. ಬ್ರಹ್ಮನ ಶಿರಕ್ಕೆ ಕೈ ಇಟ್ಟ ಶಿವನಿಗೆ ಬ್ರಹ್ಮನ ಕಪಾಲ ಪ್ರಾರಬ್ಧವಾಯ್ತು. ಷಣ್ಮುಖನಿಗೆ ಆರು ಮುಖಗಳು ದಶಕಂಠ ರಾವಣನಿಗೆ ಹತ್ತುಮುಖಗಳು ಮೇಲಿನನೋಟಕ್ಕೆ ಕಾಣುವುದಕ್ಕಿಂತಲೂ ಹೆಚ್ಚಿನ ವಿಚಾರಗಳನ್ನು ಸೂಚಿಸುತ್ತದೆ.
ಎಲ್ಲವೂ ಕಲೆಸಿಹೋದಾಗ ವಿಕಾರವಾದ ದರ್ಶನವಾಗುತ್ತದೆ. ಏಳು ಬಣ್ಣಗಳು ಕಣ್ಣೂ ಗ್ರಹಿಸುವ ಬಿಡಿಭಾಗಗಳನ್ನು ಗ್ರಹಿಸಲಾರದಷ್ಟು ವೇಗವಾಗಿ ಸುತ್ತಿಕೊಂಡಾಗ ಬಿಳಿಯ ಬಣ್ಣವಾಗುತ್ತದೆ. ವಾಸ್ತವದಲ್ಲಿ ಬಿಳಿಯ ಬಣ್ಣವೂ ಇಲ್ಲ. ಕಪ್ಪು ಬಣ್ಣವೂ ಇಲ್ಲ. ಅದಕ್ಕೂ ಬಿಳಿಯ ಬಣ್ಣವನ್ನು ಕಪ್ಪು ಬಣ್ಣವನ್ನು ನಮ್ಮ ಸಂಸ್ಕೃತಿಯಲ್ಲಿ ಆಧ್ಯಾತ್ಮಿಕ ಆಚಾರ ವಿಚಾರಗಳಲ್ಲಿ ಪ್ರಧಾನವಾಗಿ ಗ್ರಹಿಸುತ್ತೇವೆ. ಕೃಷ್ಣನು ಅರ್ಜುನನಿಗೆ ತೆರೆದು ತೋರಿದ ವಿರಾಟ್ ದರ್ಶನವನ್ನು ನಮ್ಮ ಕಲಾವಿದರುಗಳು ವೈಭವೀಕರಿಸಿ ಒಡಮೂಡಿಸುವ ಪ್ರಮಾಣ ಬದ್ಧ ವಿರಾಟ ರೂಪ ಬೇರೆ. ಆದರೆ ವಾಸ್ತವದಲ್ಲಿ ನೀರು ಮಣ್ಣು ಗಾಳಿ ಬೆಳಕು ಹಾಗೂ ಅನಂತವಾದ
ಭ್ರಮಾಪೂರ್ಣ ಆಕಾಶ ತತ್ವ ಅಲ್ಲಿ ಒಂದು ಇನ್ನೊಂದರೊಳಗೆ ಕಲಿಸಿಹೋದ ವಿಕಾರ ಸ್ವರೂಪ ಅಲ್ಲಿತ್ತು. ಗಣಪತಿಯನ್ನು ಪ್ರಥಮಂ ವಕ್ರತುಂಡ ಎಂದು ಕರೆಯುವುದರಲ್ಲೂ ಇದೇ ಆಧಾರ. ಪ್ರಥಮದಲ್ಲಿ ಆಕಾರದ ವಿಕಾರವೇ ಎಲ್ಲದರ ಮೂಲ. ನಂತರ ಅಲ್ಲಿ ಆಕೃತಿಗಳು ಒಡಮೂಡ ತೊಡಗಿದವು. ಈ ಆಕೃತಿಗಳಿಗೆ ಅಂಕೆ ಸಂಖ್ಯೆಗಳು ಆಧಾರವಾಗಿದೆ. ಒಬ್ಬ ಮನುಷ್ಯನಿಗೆ ಒಂದೇ ಮುಖ, ಎರಡೇ ಕಣ್ಣೂ, ಎರಡೇ ಕಿವಿ, ಒಂದೇ ನಾಲಗೆ, ಒಂದೇ ಮೂಗು ಇತ್ಯಾದಿ ಇತ್ಯಾದಿ ಇದ್ದಾಗಲೇ ಧನಾತ್ಮಕ ಬಲವನ್ನು ಹೊಂದಲು ಸಾಧ್ಯ. ಒಂದೇ ಒಂದು ಅಳತೆ ಮೀರಿ ಇದ್ದರೂ ಅದು ವಿಕಾರವೆನಿಸುತ್ತದೆ.
ಅದೃಷ್ಟ ಸಂಖ್ಯೆಯ ನಿರ್ಧಾರ ಹೇಗೆ ಸಾಧ್ಯ?
ಭಾರತೀಯ ಧರ್ಮ ಮೀಮಾಂಸೆ, ಸಂಸ್ಕೃತಿ, ಆಗಮ ಶಾಸ್ತ್ರ, ಸಾಂಗತ್ಯ, ತಂತ್ರ, ಮಂತ್ರಯಂತ್ರ ವಿವೇಚನೆಗಳಲ್ಲಿ ಅಂಕಿಗಳು ಸಂಖ್ಯೆಗಳು ಅತಿಶಯವಾದ ಮಹತ್ವವನ್ನು ಸಾಧಕ ಸಿದ್ಧಿಗೆ ತಳಪಾಯ ಒದಗಿಸುತ್ತದೆಂಬುದರ ಉಲ್ಲೇಖಗಳಿವೆ. ಮೂರು, ಐದು, ಏಳು, ಒಂಭತ್ತು, ಹನ್ನೆರಡು, ಹದಿಮೂರು, ಹದಿನಾಲ್ಕು, ಇಪ್ಪತ್ತೂಂದು ನೂರಾ ಎಂಟು ಇತ್ಯಾದಿ ಬಹಳೇ ರೀತಿಯಲ್ಲಿ ಶಕ್ತಿಯುತ ಸಂಖ್ಯೆಗಳಿವೆ. ಸಾಧನೆಗೆ ಈ ಅಂಕಿ ಸಂಖ್ಯೆಗಳು ಒಂದು ವಿಶಿಷ್ಟ ಸ್ಪಂದನವನ್ನು ಪಡಿಮೂಡಿಸುತ್ತದೆ.
ನೂರಾ ಎಂಟು ಗಾಯಿತ್ರಿ ಮಂತ್ರ ಉತ್ಛರಿಸುವುದು ಎಂದರೆ ಅದನ್ನು ಸಮ್ಮಿಳಿತ ಪೂರ್ವಕ ಸಧೃಢ ಸ್ವರದ ಏರಿಳಿತಗಳಲ್ಲಿ ಅನುಷ್ಠಾನಗೊಳಿಸಿದಾಗ ಕಾಂತ ವಲಯಗಳು ಮನುಷ್ಯನ ಜೈವಿಕ ಅನುಸಂಧಾನದಲ್ಲಿ ವಿದ್ಯುತ್ ಬಲುºಗಳು ಉರಿದು ಬೆಳಕು ಕೊಡುವಂತೆ ಪ್ರತ್ಛನ್ನತೆಯನ್ನು ಪಡೆಯುತ್ತದೆ. ಸಪ್ತಶತಿ ರುದ್ರಾದಿ ಚಮಕಗಳು ನಿರ್ದಿಷ್ಟ ಸಂಖ್ಯೆಗಳಲ್ಲಿ ಉದ್ಘೋಷಗೊಂಡಾಗಲೂ ಜೈವಿಕ ಸದಪಂದನೆಗಳಿಗೆ ಚಾಲನೆ ದೊರಕಿ ವ್ಯಕ್ತಿ ಕ್ರಿಯಾಶೀಲನಾಗುತ್ತಾನೆ. ಮೃತ್ಯುಂಜಯ ಮಂತ್ರ ಉಚ್ಛಾರಣೆ ಕೊಲೆಸ್ಟ್ರಾಲ್ ಸಂಖ್ಯೆಯನ್ನು ಅಧಿಕ ಸಕ್ಕರೆ ಕಾಯಿಲೆಯ ನಿಯಂತ್ರಣವನ್ನು ಸಾಕಾರಗೊಳಿಸುತ್ತದೆಂಬುದು ಆಶ್ಚರ್ಯ ತಂದೀತು. ಆದರೆ ಸತ್ಯ. ಈ ಎಲ್ಲಾ ಮಂತ್ರ ಪಠಣಗಳು ಇಂದು ನಾವು ಕಾಣುತ್ತಿರುವ ವ್ಯಾಪಾರಶೀಲ ಜಗತ್ತಿನ ವಿಧಿ ವಿಧಾನಗಳಲ್ಲಿ ಫಲಕಜಾರಿಯಾಗದಿರುವ ಅನಾಹುತ ಗಮನಿಸಿ. ಇವುಗಳೊಂದಿಗಿನ ಅಂತರ್ಗತ ಸತ್ಯವನ್ನು ಹಾಸ್ಯಾಸ್ಪದಗೊಳಿಸುವ ನಿರ್ಣಯಕ್ಕೆ ಬರುವ ಆತುರ ತೋರಬಾರದು. ಹೀಗಾಗಿ ಅದೃಷ್ಟಶಾಲಿ ಅಂಕೆ-ಸಂಖ್ಯೆಯನ್ನು ಒಬ್ಬ ತನ್ನ ಜೈವಿಕ ಆವರಣಕ್ಕೆ ಸರಳವಾಗುವ ಮಂತ್ರಭಾಗದ ಮೂಲಕ ಕಂಡು ಹಿಡಿದುಕೊಳ್ಳಬೇಕು.
ಈ ಹುಡುಕಾಟದಲ್ಲಿ ಮೂಲ ಬೀಜಾಕ್ಷರ ಮಂತ್ರಗಳು ಸಹಾಯಕ್ಕೆ ಬರುತ್ತದೆ. ಇಂದಿನ ಜಾಗತಿಕ ಸಂದರ್ಭ ಇಂಥದೊಂದು ಹುಡುಕಾಟಕ್ಕೆ ಅವಕಾಶ ಕೊಡುವುದಿಲ್ಲ. ಆದರೂ ಒಬ್ಬ ವ್ಯಕ್ತಿಯು ಹುಟ್ಟಿದ ಸಂದರ್ಭದ ನಕ್ಷತ್ರ, ರಾಶಿ, ಲಗ್ನಭಾವಗಳ ಮೇಲಿಂದ ಅದೃಷ್ಟ ಸಂಖ್ಯೆಯನ್ನು ಗುರ್ತಿಸಲಾಗಿದೇ ಅದೃಷ್ಟ ಸಂಖ್ಯೆಯ ಒಳ ಸಾಂದ್ರತೆಗೆ ಗಾಢವಾದ ಶಕ್ತಿ ಸಿಗುವಂತಾಗುವ ಮೂಲ ಬೀಜಾಖÒರ ಮಂತ್ರವನ್ನು ನಂತರ ತಿಳಿದುಕೊಳ್ಳಬೇಕು.
ಹೆಸರಿನ ಮೂಲಕ ಅದೃಷ್ಟ ಸಂಖ್ಯೆ ಕಂಡು ಹಿಡಿಯ ಬಹುದೇ???
ಬಹಳ ಜನ ಈ ಪ್ರಶ್ನೆಯನ್ನು ಕೇಳುತ್ತಾರೆ. ನಮ್ಮ ವ್ಯಾಪಾರೀಕರಣ ಜಗತ್ತು ಅದೃಷ್ಟದ ಮೇಲೆ ನಿಂತಿದೆ ಎಂಬುದು ನೇರ ನೋಟಕ್ಕೆ ಕಾಣುವ ಸತ್ಯ. ಆದರೆ ವ್ಯವಾಹಾರಿಕ ಜಗತ್ತಲ್ಲದ
ಆಧ್ಯಾತ್ಮದ ಅವಧೂತ ಶಕ್ತಿಯ ಸಂಪನ್ನ ಆವರಣದ ತಾಂತ್ರಿಕ ಜಗತ್ತು ಗೂಢವೊಂದನ್ನು ವಿಶ್ಲೇಷಿಸಿ ಅದೃಷ್ಟದ ನಿಕ್ಷೇಪವನ್ನು ಒದಗಿಸುತ್ತದೆ. ಇದನ್ನು ತಿಳಿಯಲು ವ್ಯವಧಾನ ತಾಳ್ಮೆಗಳು ಬೇಕು. ಹೀಗಾಗಿ ವ್ಯಕ್ತಿಯ ಹೆಸರೊಂದನ್ನೇ ಅಲ್ಲದೆ ಅವನ ಜೀವನದ ಕೆಲ ಘಟನಾವಳಿಗಳ ಆಧಾರದ ಅಮೇಲೆ ಬ್ರಹ್ಮಕಲ್ಪದ ಪದ್ಮದೆಳೆಗಳನ್ನು ಅವನ ಜಾತಕ ಹಸ್ತರೇಖೆಗಳ ಸಂಯೋಜನೆ ಆಧರಿಸಿ ಅದೃಷ್ಟ ಸಂಖ್ಯೆಯ ನಿರ್ಣಯವಾಗಬೇಕು ಇದನ್ನು ನಿರ್ಧರಿಸಲು ಆತುರ
ಸಾಧುವಲ್ಲ.
ನಮ್ಮ ಮಾಜಿ ಪ್ರಧಾನಿ ಜವಹರಲಾಲ ನೆಹರು ಅವರ ಏಳುಬೀಳುಗಳು ಐದರಿಂದ ಎಂಟರಿಂದ ಮತ್ತು ಏಳರಿಂದಅನೇಕ ಅಂಶಗಳನ್ನು ತನ್ನ ಮೂಲದಲ್ಲಿ ಆತುಕೊಂಡಿದ್ದವು ಎಂದರೆ ಆಶ್ಚರ್ಯವಾದೀತು. ಆರು ಅವರನ್ನು ಸೋಲಿಸಲೆಂದೇ ಬಂದ ಸಂಖ್ಯೆಯಾಗುತ್ತಿತ್ತು. ಗುರುಗೂ ಕೇತುಗೂ ಬಿದ್ದ ಜಟಾಪಟಿಯು ಆರಂಕಿಯ ಸಂದರ್ಭದ ಅವರ ನಿರ್ಣಯಗಳಿಗೆ ಧಕ್ಕೆ ತರುತ್ತಿತ್ತು. ವಿರೋಧಿಗಳನ್ನು ದಮನಿಸುವ ಶಕ್ತಿಯನ್ನು ಅವರಿಗೆ ಆರು ಒದಗಿಸಿತ್ತಾದರೂ ಆರು ಅನೇಕ ಅವಮಾನಗಳನ್ನೂ ಸೃಷ್ಟಿಸಿತ್ತು. ಅವರ ಜಾತಕದಲ್ಲಿ ಕೇತು ಗುರುವನ್ನು ನಿಯಂತ್ರಿಸಿದ್ದು ಇದಕ್ಕೆ ಕಾರಣ. ಆದರೆ ಮೋಹಕ ರೂಪ ಶುಭಕರ್ತರಿ ಸೂರ್ಯ ಶನಿ ತರುವ ಮಾತಿನ ದೋಷವನ್ನು ನಿಯಂತ್ರಿಸಿದ್ದ. ಇನ್ನಿಷ್ಟು ವಿವರಗಳು ವಿಶ್ಲೇಷಣೆಗಳು ಬೇಡ. ಇದು ಅವರ ವೈಯುಕ್ತಿಕ ಜೀವನವನ್ನು ಕದಲಂತಾಗುತ್ತದೆ. ಅದು ಸಾಧುವಲ್ಲ.
ರಿಚರ್ಡ್ ನಿಕ್ಸನ್ ಅಮೆರಿಕಾದ ಮಾಜಿ ಅಧ್ಯಕ್ಷ. ಅವರ ಸಂಂಖ್ಯೆ ಎರಡು, ಯಾವಾಗಲೂ ಆಘಾತಕಾರಿಯಾಗಿರುತ್ತಿತ್ತು. ಸಂಖ್ಯೆ ಎರಡು ಶುಭ ಪ್ರದವಾದುದಲ್ಲವಾದ್ದರಿಂದ ಅದರ ವಾಕ್ ಸ್ಥಾನಕ್ಕೆ ಪೆಟ್ಟು ಒದಗಿತ್ತು. ಅಧ್ಯಕ್ಷರಿಗೆ ಸಲ್ಲದ ಮಾತಿನ ಚಲಾವಣೆ ಅವರಿಂದ ಸಾಧ್ಯವಾಗಿ ವಾಟರ್ ಗೇಟ್ ಹಗರಣ ಸಂಭವಿಸಿತು. ಅಧ್ಯಕ್ಷ ಸ್ಥಾನದಿಂದ ಪದಚ್ಯುತರಾದರು.
ಕ್ಲಿಂಟನ್ ಕೂಡಾ ಅಮೆರಿಕಾದ ಮಾಜಿ ಅಧ್ಯಕ್ಷರು. ಎರಡು ಅವರ ಅದೃಷ್ಟ ಸಂಖ್ಯೆ. ಹೀಗಾಗಿ ಅವರ ಜಾತಕದ ಸೂರ್ಯ ಪದಚ್ಯುತರಾಗುವ ಅವಕಾಶವಿದ್ದರೂ ಅವಮಾನವನ್ನು ತಪ್ಪಿಸಿದ್ದ. ಹೀಗೆ ದಾಖಲಿಸುತ್ತ ಹೋದರೆ ಅಂಕಿಸಂಖ್ಯೆಗಳು ಮಾನವನ ಏಳುಬೀಳುಗಳಲ್ಲಿ ನಿವಃಸುವ ಪಾತ್ರ ದೊಡ್ಡದು. ಹೀಗಾಗಿ ಅಂಕಿ ಸಂಖ್ಯೆಗಳಲ್ಲಿ ಹಣದ ಲೆಕ್ಕಾಚಾರ ಮಾತ್ರವಲ್ಲ ಬದುಕಿನ ಕ್ರಿಯಾಶೀಲ ಯಶಸ್ಸಿನ ಪಾತ್ರಕ್ಕೂ ದಾರಿಗಳು ಅಡಗಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Astrology 2024: 2024ರಲ್ಲಿ ಮಿಶ್ರ ಫಲಗಳೇ ಅಧಿಕ-ರಾಜ್ಯದಲ್ಲೇನಾಗುತ್ತದೆ?
ಜ್ಯೋತಿಷ್ಯದಲ್ಲಿ ನವಗ್ರಹಕ್ಕಿಂತಲೂ ನಕ್ಷತ್ರಗಳಿಗೆ ಹೆಚ್ಚು ಪ್ರಾಮುಖ್ಯತೆ ಯಾಕೆ ಕೊಡಲಾಗಿದೆ?
ಶುಭ ವಿಚಾರ ತಿಳಿಯುವ ಗೋಚಾರ ಫಲ ಎಂದರೇನು, ಗುರುಬಲ ಯಾವಾಗ ಆರಂಭವಾಗಲಿದೆ…
ಮಾರಕಾಧಿಪತಿ, ಭಾದಕಾಧಿಪತಿ: ಅಕಾಲಿಕ ಮರಣದ ಬಗ್ಗೆ “ಅಷ್ಠಮ ಸ್ಥಾನ” ಮುನ್ಸೂಚನೆ ಕೊಡುತ್ತದೆಯೇ?
ಗಜಕೇಸರಿ ಯೋಗ… ಈ ಯೋಗ ಹೇಗೆ ಉಂಟಾಗುತ್ತದೆ, ಇದರ ಮಹತ್ವವೇನು?
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.