ಉತ್ತಮ ಕಾಯಕಕ್ಕೆ ಬೇಕು ಸಂಪನ್ನ ಗ್ರಹಶಕ್ತಿ
Team Udayavani, Nov 5, 2016, 4:37 AM IST
ಜೀವನದಲ್ಲಿ ಸಂಪಾದನೆಗಾಗಿ ಒಂದು ಕಾಯಕವನ್ನು ಮಾಡಬೇಕು. ಉದ್ಯೋಗವೇ ಪುರುಷನ ನಿಜವಾದ ಲಕ್ಷಣ ಎಂಬ ಹಳೆಯ ನಾಣ್ನುಡಿಯೇ ಇದೆ. ಸಂಸ್ಕೃತದಲ್ಲಿ ಇದನ್ನು ಉದ್ಯೋಗಂ ಪುರುಷ ಲಕ್ಷಣಂ ಎನ್ನುತ್ತಾರೆ. ಈಗ ಜೀವನದ ಎಲ್ಲಾ ರಂಗದಲ್ಲಿ ಮಹಿಳೆಯಂತೂ ಪುರುಷನ ಹೆಗಲೆಣೆಯಾಗಿ ನಿಂತಿದ್ದಾಳೆ. ಅವಳಿಗೂ ಉದ್ಯೋಗ ಪ್ರಧಾನವಾದುದೇ ಆಗಿದೆ. ಕಾಂಚಾಣ ಈಗ ಜಗದ ಸ್ವಾಭಾವಿಕ ಭಾಷೆಯಾಗಿದೆ. ಹೆಣ್ಣು ಹಾಗೂ ಗಂಡು ಇಬ್ಬರೂ ದುಡಿಯುತ್ತಾರೆ. ಇಲ್ಲೀಗ ಪುರುಷನೇ ಸಂಸಾರದ ನೊಗವನ್ನು ಹೊರುವ ಏಕ ಮಾತ್ರ ಶಕ್ತಿಯಾಗಿ ಉಳಿದಿಲ್ಲ. ಉದ್ಯೋಗವು ಈಗ ಎಲ್ಲರ ಸೊತ್ತಾಗಿದೆ.
ಆದರೂ ಎಲ್ಲರೂ ತಂತಮ್ಮ ಉದ್ಯೋಗದಲ್ಲಿ ತೃಪ್ತರು ಎಂದು ಹೇಳಲಾಗದು. ಹಾಕಿದ ಬಂಡವಾಳ ಹಣ ನಿರ್ದಿಷ್ಟ ಗುರಿ ಇರದೆ ನಷ್ಟವನ್ನು ತರಬಲ್ಲುದು. ನಿರ್ದಿಷ್ಟ ಗುರಿ ಇದೂ ನಷ್ಟವನ್ನು ತರಬಲ್ಲುದು. ವಿವೇಚನೆಗಳೇ ಇರದೆ ತಂದ ಸಾಲದ ಗಂಟು ಶೂಲವಾಗಿ ಇಡೀ ಜೀವನ ಒಂದು ನೋವಿನ ಸಂಗ್ರಾಮವಾಗುವ ವಿಚಾರ ಹರಳುಗಟ್ಟುತ್ತದೆ. ಯಾವ ಕಾರಣಕ್ಕಾಗಿ ಸಾಲವನ್ನು ತರುತ್ತಾರೋ ಅದು ಬೇರೆಯ ಕೆಲಸಗಳಿಗೆ ವ್ಯಯಗೊಂಡು ಅಸಲೀ ಕಸುಬು ನಷ್ಟಕ್ಕೆ ಮುಖ ಮಾಡುವ ದಾರುಣತೆ ಒದಗುತ್ತದೆ. ಹೀಗಾಗಿ ಒಬ್ಬನ ಅಥವಾ ಒಬ್ಬಳ ಜಾತಕದಲ್ಲಿ ಕರ್ಮಸ್ಥಾನದ ಅಧಿಪತ್ಯ ಹೊತ್ತ ಗ್ರಹ ಈ ಗ್ರಹದ ಮೇಲೆ ಆವಾಹನೆಗೊಂಡ ದೃಷ್ಟಿ ಇತ್ಯಾದಿ ಇತ್ಯಾದಿ ಅವರವರ ಕೆಲಸದಲ್ಲಿ ಸಫಲತೆಯನ್ನು ತರಲು ಕಾರಣವಾಗುತ್ತದೆ. ಇವುಗಳಲ್ಲಿ ಅಸಮತೋಲನ ತುಂಬಿದಲ್ಲಿ ಉತ್ತಮ ಗಳಿಕೆ ಉತ್ತಮ ಸಂಬಳ ಇರದೆ ಕೆಲಸದಲ್ಲಿ ನೆಮ್ಮದಿ ನಾಶವಾಗುತ್ತದೆ. ಕರ್ಮಸ್ಥಾನದ ಗಟ್ಟಿತನ ಸಂಪತ್ತಿಗೆ ಕಾರಣವಾಗುತ್ತದೆ.
ಕರ್ಮಸ್ಥಾನದ ಅಗಾಧ ಸಿದ್ಧಿ ಮತ್ತು ಬಿಲ್ ಗೇಟ್ಸ್:
ಬಿಲ್ ಗೇಟ್ಸ್ ಹೆಸರು ಯಾರು ತಾನೆ ಕೇಳಿಲ್ಲ? ಮೈಕ್ರೋ ಸಾಫ್ಟ್ ಕಂಪೆನಿಯನ್ನು ಹುಟ್ಟುಹಾಕಿದ ಬಿಲ್ ಗೇಟ್ಸ್ ಜಗತ್ತಿನ ಅತ್ಯಂತ ಶ್ರೀಮಂತರಲ್ಲಿ ಪ್ರಥಮಸಾಲಿನ ಹೆಸರಾದ./ ದಾನ ಧರ್ಮ ಸದ್ಬಳಕೆಗಾಗಿನ ಧನ ವಿನಿಯೋಗ ಗಳೊಂದಿಗೆ
ನವಯುಗದ ಬಹು ಸಾರ್ಥಕತೆಯೊಂದಿಗಿನ ದೊಡ್ಡ ಹೆಸರು ಇವನದ್ದು. ಇವರ ಜಾತಕದಲ್ಲಿ ಬಲವಾದ ಚಂದ್ರ ಬಲಯುತವಾದ ಲಾಭದ ಸಂಚಾಲನೆ ಉಂಟು ಮಾಡುವ ಕುಜ ಹಾಗೂ ಬುಧರಿಂದ ಭರ್ಜರಿಯಾಗಿ ಮಿಂಚಿದ್ದಾನೆ. ಕರ್ಮಸ್ಥಾನಾಧಿಪ ಗುರು ಧನರಾಶಿಯಲ್ಲಿ ಬಲಾಡ್ಯನಾಗಿ ಲಾಭವನ್ನು ಅಗಾಧವಾಗಿ ಚಿಮ್ಮಿಸುವುದಕ್ಕೆ ಸಂಕಲ್ಪ ಮಾಡಿದ್ದಾನೆ. ಕರ್ಮಸ್ಥಾನವಾದ ಮೇಷವನ್ನು ದೃಷ್ಟಿಸಿ ಅಪಾರವಾದ ಧನಸಂಚಯ ಕೈ ಹಾಕಿದ ಕೆಲಸಗಳಲ್ಲಿ ಅದ್ಭುತವಾದ ಗೆಲುವಿಗೆ ಕಾರಣನಾಗಿದ್ದಾನೆ. ಕರ್ಮಸ್ಥಾನದ ಅಧಿಪತಿ ಹಣದ ಥೈಲಿಯನ್ನು ಬಿಡುರದಂತೆ ಹೊತ್ತು ತರುವ ಕಾಯಕಕ್ಕೆ ಮುಂದಾಗಿ ಧೈರ್ಯಸ್ಥಾನದಲ್ಲಿ ಕುಳಿತು ಭಾಗ್ಯದಲ್ಲಿನ ಚಂದ್ರನ ಮೂಲಕ ಶಶಿಮಂಗಳ ಯೋಗಕ್ಕೆ ಕಾರಣನಾಗಿದ್ದಾನೆ. ಸತತ ಪರಿಶ್ರಮ ಧೈರ್ಯ ಸಾಹಸಗಳಿಗೆ ಬಿಲ್ ಗೇಟ್ಸ್ ಮುಂದಾಗುವಂತೆ ಭಾಗ್ಯ ಹಾಗೂ ಧನ ಸಮೃದ್ಧಿಗೆ ಕಾರಣನಾಗಿದ್ದಾನೆ. ಬಿಲ್ ಗೇಟ್ಸ್ ವಹಿವಾಟುಗಳೆಲ್ಲ ಲಕ್ಷಿ$¾à ಕಟಾಕ್ಷದಲ್ಲಿ ಗೆಲ್ಲಲು ಕಾರಣವಾಗುವ ನೀಚಭಂಗ ರಾಜಯೋಗ ರಾಹು ಸಿದ್ಧಿ ಕರ್ಮಸ್ಥಾನದ ಅತಿ ಸುರಕ್ಷಿ$ತ ಗಟ್ಟಿತನ ಜಾತಕದ ಪ್ರಧಾನ ಅಂಶಗಳಾಗಿದೆ. ಒಟ್ಟಿನಲ್ಲಿ ಸಂಪತ್ತನ್ನು ವಿಶೇಷವಾಗಿ ಶೇಖರಿಸುವ ತಾಕತ್ತು ಬಿಲ್ ಗೇಟ್ಸ್ ಜಾತಕದ ಸಕಾರಾತ್ಮಕ ಅಂಶ. ಚಂದ್ರ ವರ್ಚಸ್ಸನ್ನು ವಿಸ್ತರಿಸುವ ವ್ಯಕ್ತಿತ್ವವನ್ನು ಅನುಗ್ರಹಿಸಿದ್ದಾನೆ. ಜೀವನದಲ್ಲಿ ಗೆಲ್ಲಲು ಇನ್ನೇನು ಬೇಕು? ಇದು ಅದೃಷ್ಟದ ಆಟ ವೈಖರಿ ಅಷ್ಟೆ.
ಗೆದ್ದರೂ ಆರ್ಥಿಕವಾಗಿ ಸೋತ ಕ್ರಿಕೆಟಿಗ ಮತ್ತು ಶನಿಗ್ರಹ
ಈ ಕ್ರಿಕೆಟಿಗ ಯಾರು ಎಂಬುದರ ಪ್ರಸ್ಥಾಪ ಬೇಡ. ಹೆಸರು ಹೇಳುವುದು ಸೂಕ್ತವಾಗದು. ಕ್ರಿಕೆಟ್ ಆಟದ ಆಯ್ಕೆ ಸರಿಯಾಗಿಯೇ ಇದು,ª ಆದರೆ ಈ ಜಗದ್ವಿಖ್ಯಾತ ಕ್ರಿಕೆಟಿಗನಿಗೆ ಬರಿಗೈಯ ಕಾಸಿರದ ದೊರೆ ಈಗ. ಈತ ಬೌಲ್ ಮಾಡಲು ಹೊರಟರೆ ಪ್ರಪಂಚದ ಎಂಥದೇ ಪ್ರಚಂಡ ದಾಂಢಿಗನಾದರೂ ಒಮ್ಮೆ ಗುಂಡಿಗೆ ಹಿಡಿದು ನೋಡಿಕೊಳ್ಳಬೇಕು. ಸುಳಿಯಾಗಿ ಪುಟಿದು ಬರುವ ಚೆಂಡು ಪ್ರಕಾಂಡ ಬ್ಯಾಟ್ಸ್‌ಮನ್ ರಕ್ಷಣಾ ವ್ಯೂಹವನ್ನು ಬೇಧಿಸಿ ಸ್ಟಂಪ್‌ಗ್ಳನ್ನು ಬೇರುಸತ ಕಿತ್ತು ಬೀಳಿಸುತ್ತಿತ್ತು. ನಿರ್ದಿಷ್ಟ ವಲಯ ತಿರುವು ಎಸೆತದ ಉದ್ದ ದಕ್ಕಿದಾಗ ಆ ಬೌಲರ್ ಎಸೆತಗಳೆದುರು ನೂರು ರನ್‌ಗಳನ್ನು ಎದುರಾಳಿ ತಂಡ ಮಾಡುವುದು ದುಸ್ತರವಾಗುತ್ತಿತ್ತು. ಈ ಕ್ರಿಕೆಟಿಗನ ಜಾತಕದ ಕರ್ಮಸ್ಥಾನದ ದೊರೆ ಬುಧ, ಕರ್ಮಸ್ಥಾನಕ್ಕಿಂತ ಗುರು ಬಲು ಬಲಾಡ್ಯರು. ಕ್ರಿಕೆಟ್ ಅಂಗಳಕ್ಕೆ ಯುಕ್ತವಾಗೇ ಎಳೆದು ತಂದವು ಈ ಗ್ರಹಗಳು. ಆದರೆ ಧನಸ್ಥಾನದ ಸವಕಳಿ ಧನಾಧಿಪತಿಯ, ಧನಸ್ಥಾನದ ಮೇಲೆ ಶನಿಮಹಾತ್ಮನ ಕ್ರೂರ ದೃಷ್ಟಿ ಲಾಭದಲ್ಲಿದ್ದರೂ ಕುಜನ ದೃಷ್ಟಿಯಿಂದ ನರಳಿದ ಲಾಭಕ್ಕೆ ಭಂಗ ತಂದ ಶನಿಗ್ರಹ ಈ ಕ್ರಿಕೆಟಿಗನ ವಿಚಾರದಲ್ಲಿ ಲಕ್ಷಿ$¾ಕಟಾಕ್ಷವನ್ನು ಒದಗಿಸಲಿಲ್ಲ. ಕ್ಷೀಣ ಚಂದ್ರನ ದುಃಸ್ಥಾನ ಪೀಡಿತ ಸ್ಥಿತಿ ಇವರ ಮನೋವೇದಿಕೆಯನ್ನು ನಿರಂತರವಾಗಿ ಸ್ಥಿರತೆಯಲ್ಲಿ ಹೊಯ್ದಾಡಿಸುತ್ತಿದೆ. ಅಂತರಂಗದಲ್ಲಿ ಅಶಾಂತಿಯನ್ನೇ ತುಂಬಿದೆ. ಕ್ರಿಕೆಟಿಗನಾಗಿ ಅದೃಷ್ಟ ಆದರೂ ಬರಿಗೈ ದೊರೆ ಆದದ್ದು ಇವರು ಪಡೆದು ಬಂದ ಅದೃಷ್ಟ. ಒಟ್ಟಿನಲ್ಲಿ ಗ್ರಹಗಳ ಆಟ ವಿಚಿತ್ರವಾಗಿದೆ.
ನಾವು ಮಾಡುವ ಕೆಲಸ ವಹಿವಾಟು ಕಸುಬು ಉದ್ಯೋಗಗಳೆಲ್ಲ ಗ್ರಹಗಳ ಮೇಲಿಂದಲೇ ಅದೃಷ್ಟವನ್ನು ತರುವಂಥದ್ದಾಗಿರುತ್ತದೆ. ಬಿಲ್ ಗೇಟ್ಸ್ ಯಾವುದನ್ನೋ ಶುರು ಮಾಡಿ ಗೆದ್ದು ಬಿಟ್ಟರು ಎಂದಾಕ್ಷಣ ಮತ್ತೂಬ್ಬ ಶೆಲ್‌ಗೇಟ್ಸ್ ಇದೇ ಕೆಲಸದಲ್ಲಿ ಗೆಲುವು ಸಂಪಾದಿಸಿ ಬಿಡಬಲ್ಲರು ಎಂದರ್ಥವಲ್ಲ.
ಒಬ್ಬ ವ್ಯಕ್ತಿ ತನ್ನ ಮಿತಿಯನ್ನು ಅರಿತು ಹೆಜ್ಜೆ ಇಟ್ಟರೆ ಚೆನ್ನ. ಒಬ್ಬ ಸಮರ್ಥ ಪೊಲೀಸ್ ಅಧಿಕಾರಿಯಾಗಿ ಮಿಂಚಬಲ್ಲ. ಮಗದೊಬ್ಬ ವರನಟನಾಗಬಲ್ಲ. ಸಮರ್ಥ ನಿರ್ದೇಶಕ ಕೈಚೆಲ್ಲಿ ಕೇರಾಫ್ ಫುಟ್ ಪಾತ್ ಆಗಬಲ್ಲ. ನಿರಂತರವಾದ ಬಲಾಡ್ಯತೆಯೊಂದಿಗೆ ಜಗತ್ತನ್ನೇ ಅಲ್ಲಾಡಸಬಲ್ಲ ಚಕ್ರವರ್ತಿಯಾಗಬಲ್ಲ. ಗೆಳೆಯರಿಂದಲೇ ವಂಚನೆಗೆ ಸಿಕ್ಕಿ ಸಾಯುವ ಸೀಸ ರ್ರೂ ಆಗಬಲ್ಲ.
ಅನಂತ ಶಾಸ್ತ್ರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Astrology 2024: 2024ರಲ್ಲಿ ಮಿಶ್ರ ಫಲಗಳೇ ಅಧಿಕ-ರಾಜ್ಯದಲ್ಲೇನಾಗುತ್ತದೆ?
ಜ್ಯೋತಿಷ್ಯದಲ್ಲಿ ನವಗ್ರಹಕ್ಕಿಂತಲೂ ನಕ್ಷತ್ರಗಳಿಗೆ ಹೆಚ್ಚು ಪ್ರಾಮುಖ್ಯತೆ ಯಾಕೆ ಕೊಡಲಾಗಿದೆ?
ಶುಭ ವಿಚಾರ ತಿಳಿಯುವ ಗೋಚಾರ ಫಲ ಎಂದರೇನು, ಗುರುಬಲ ಯಾವಾಗ ಆರಂಭವಾಗಲಿದೆ…
ಮಾರಕಾಧಿಪತಿ, ಭಾದಕಾಧಿಪತಿ: ಅಕಾಲಿಕ ಮರಣದ ಬಗ್ಗೆ “ಅಷ್ಠಮ ಸ್ಥಾನ” ಮುನ್ಸೂಚನೆ ಕೊಡುತ್ತದೆಯೇ?
ಗಜಕೇಸರಿ ಯೋಗ… ಈ ಯೋಗ ಹೇಗೆ ಉಂಟಾಗುತ್ತದೆ, ಇದರ ಮಹತ್ವವೇನು?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.