​ಗುರುವಿನ ಬಲ : ಜನ ಸಂಶಯವೂ, ಪುರಾತನ ಭ್ರಮೆಯೂ..


Team Udayavani, Jan 30, 2016, 9:44 AM IST

guru.jpg

ಜೀವನದ ಒಂದಲ್ಲಾ ಒಂದು ಘಟ್ಟದಲ್ಲಿ ಒಬ್ಬ ಮನುಷ್ಯನಿಗೆ ಒಂದಲ್ಲಾ ಒಂದು ಸಮಯಕ್ಕೆ ಒಂದಲ್ಲಾ ಒಂದು ಸಫ‌ಲತೆಯನ್ನು ಜನ್ಮ ಕುಂಡಲಿಯಲ್ಲಿ ಗುರುಗ್ರಹ ಕೂಡದೆಯೇ ಉಳಿಯಲಾರದು. ಒಂದಲ್ಲಾ ಒಂದು ಘಟ್ಟದಲ್ಲಿ ಶನೈಶ್ಚರ ಸ್ವಾಮಿ ಎಂಥದೇ ಬಲಾಡ್ಯ ವ್ಯಕ್ತಿಯಿರಲಿ ಆ ವ್ಯಕ್ತಿಯ ಕಾಲೆಳೆದೇ ತೀರುವುದು ಒಂದು ರೀತಿ. ಗುರು ಗ್ರಹದ್ದು ಯಾರೋ ಕಾಲೆಳೆದ ಸಮಯ, ಬಿದ್ದವರನ್ನು ಮೇಲೆತ್ತುವುದು ಒಂದು ಪ್ರವೃತ್ತಿ. ಇದರ ಅರ್ಥ ಗುರು ಗ್ರಹ ಕೆಟ್ಟದನ್ನು ಮಾಡಲಾರದು ಎಂದೇನಲ್ಲ. ಆದರೆ ಗುರು ಗ್ರಹ ಶುಭಕಾರಿ ಗ್ರಹಗಳ ಗುಂಪಲ್ಲಿಯೇ ಅಗಾಧವಾದ ಶುಭಕಾರೀ ಗ್ರಹ. ನೀಚತ್ವಕ್ಕೆ ತುತ್ತಾಗಿಯೋ, ವ್ಯಯಕ್ಕೆ ಬಂದಾಗಲೋ, ಕೇಂದ್ರಾಧಿಪತ್ಯ ದೋಷದ ಜೊತೆ ನಿಶ್ಚಿತ ಗುರಿಯಿರದ ಅಭದ್ರತೆ ಒದಗಿದಾಗ ಮಾತ್ರ ಗುರು ತೀರಾ ಅಪಾಯಕಾರಿ. ಯಾವುದೇ ಮಹತ್ವಾಕಾಂಕ್ಷೆಗಳಿಗೆ ಗುರು ಗ್ರಹಕ್ಕೆ ಬೆಂಬಲಿಸಬೇಕೆಂಬ ಇಚ್ಛೆ ಇದ್ದರೂ, ಚಂದ್ರನಿಗೆ ಬಲವಿಲ್ಲದಿದ್ದಾಗ, ಗುರು ಗ್ರಹದ ಶಕ್ತಿಗೆ ತೊಡಕು ಉಂಟಾಗುತ್ತದೆ. ಅದ್ವಿತೀಯ ಶಕ್ತಿ ಸಮಾರ್ಥಯವಿದ್ದೂ ವಿನೋದ್‌ ಕಾಂಬ್ಳಿಯಂಥ ಕಲಾತ್ಮಕ ಕ್ರಿಕೆಟಿಗ ಮಹತ್ವದ್ದನ್ನು ಸಾಧಿಸಲಾಗದೇ ಹೋದದ್ದು ಗುರು ಗ್ರಹದ ದೌರ್ಬಲ್ಯಕ್ಕೆ ಚಂದ್ರ ಇನ್ನಿಷ್ಟು ಕುಮ್ಮಕ್ಕು ನೀಡಿದ್ದು ಅಷ್ಟೆ. 

ಎಂಥದೆಲ್ಲ ಭ್ರಮೆಗಳು ಜನ ಮಾನಸದಲ್ಲಿ ಹೊಯ್ದಾಡುತ್ತವೆ ಎಂದರೆ, ಗುರು ಗ್ರಹದ ಬಲವೊಂದು ದೊರೆತಾಗ ಪ್ರತಿ ಕೆಲಸಗಳೂ ಯಶಸ್ಸಿನ ಶಿಖರದಲ್ಲಿ ಜಿಗಿಯುತ್ತವೆ ಎಂಬ ನಂಬಿಕೆಯಲ್ಲೇ ಮುಳುಗೆದ್ದು ಬಿಡುತ್ತಾರೆ. ಗುರು ಬಲ ಒಂದಿದ್ದರೆ ಮುಟ್ಟಿದ್ದೆಲ್ಲ ಚಿನ್ನವೇ ಆಗುತ್ತದೆ ಎಂಬ ವಿಚಿತ್ರ ಆತ್ಮವಿಶ್ವಾಸ ತಳೆದು ಬಿಡುತ್ತಾರೆ. ಹಿಂದಿನವಾರ ಈ ಅಂಕಣದಲ್ಲಿ ಬಂದ ಗುರುಗ್ರಹದ ಬಗೆಗಿನ ಕೆಲವು ಸಕಾರಾತ್ಮಕ ಮಾತುಗಳು ಈ ಜನರನ್ನು ಒಂದು ರೀತಿಯ ಗುಂಗಿನಲ್ಲಿ ಬಂಧಿಸಿಬಿಟ್ಟಿದೆ. ಸ್ಪಷ್ಟವಾಗಿ ಇದೇ ಅಂಕಣದಲ್ಲಿ ಹಿಂದಿನವಾರ ಬರೆದು ಶ್ರುತಪಡಿಸಿದ ಒಂದು ವಿಷಯವನ್ನ ಮತ್ತೂಮ್ಮೆ ಓದುಗರ ಎದುರು ಈಗ ತೆರೆದಿಡುತ್ತಿದ್ದೇನೆ. ಗುರು ಗ್ರಹವೇ ಖಳನಾಯಕವಾದಾಗ ಭಿಕ್ಷೆಯನ್ನು ಭೇದಿಸಲೂ ಗುರು ಕಾರಣನಾಗುತ್ತಾನೆ. 

ಕಾಯುವ ಗುರುವೇ ಕಾಡಿದ್ದು, ನರಳಿಸಿದ್ದು ಬಹಳ ಜನರ ಅನುಭವ ಎನ್ನಬಹುದು. ಇತ್ತೀಚೆಗೆ ನಮ್ಮ ದೇಶದ ಪ್ರಮುಖರೊಬ್ಬರು ನಾನು ಮದುವೆಯಾಗಲಾರೆ. ಜೀವನದಲ್ಲಿ ನನಗಿದರ ಅವಶ್ಯಕತೆ ಇಲ್ಲ ಎಂಬ ಹೇಳಿಕೆ ನೀಡಿದರು. ನಿಜಕ್ಕೂ ಇವರ ಜಾತಕದಲ್ಲಿ ಗುರು ಗ್ರಹವೇ ಜೀವನದ ಸಂದರ್ಭದಲ್ಲಿ ಉತ್ತಮ ವೈವಾಹಿಕ ಬಂಧನವನ್ನು ಒದಗಿಸಿಕೊಡಬೇಕು. ಆದರೆ ದುರ್ದೈವವಶಾತ್‌ ಇವರ ಜಾತಕದ ಉತ್ತಮೋತ್ತಮರಲ್ಲಿ ಒಬ್ಬನಾದ ಶನೈಶ್ಚರಸ್ವಾಮಿ ಗುರುಗ್ರಹದ ಕೆಲವೇ ಮಟ್ಟಿಗೆ ಇರಬಹುದಾಗ ಉತ್ತಮ ಶಕ್ತಿಯನ್ನು ಗುರುಗ್ರಹವನ್ನು ತನ್ನ ಕ್ರೂರ, ನೀಚ ದೃಷ್ಟಿಯಿಂದ ದೃಷ್ಟಿಸಿ ಮದುವೆಯಾಗದಿರುವ ಇವರ ನಿಶ್ಚಯಕ್ಕೆ ವೇದಿಕೆ ನಿರ್ಮಿಸಿದ. ಮೊದಲೇ ಈ ಪ್ರಮುಖರ ಜಾತಕದಲ್ಲಿ ಗುರು ದುಷ್ಟನಾಗಿದ್ದಾನೆ. ಕೇಂದ್ರಾಧಿಪತ್ಯ ದೋಷ ಇರುವ ಗುರು, ಈ ಪ್ರಮುಖರ ವೈವಾಹಿಕ ಜೀವನದ ಸಾಫ‌ಲ್ಯತೆಗಳನ್ನ, ಇವರ ಕೆಲಸದ, ಹುದ್ದೆಯ ಮೇಲ್ವಿಚಾರಣೆಯ ವಿಚಾರದಲ್ಲಿ ಗೊಂದಲಗಳನ್ನು ನಿರ್ಮಿಸುತ್ತಾನೆ. ಲಗ್ನ ಭಾವದಲ್ಲಿನ ದುಷ್ಟ ಕುಜ ಹಾಗೂ ಸೂರ್ಯ ಗ್ರಹಗಳು ಸದಾ ಜೀವ ಭಯದಲ್ಲಿರಿಸಿ, ಮನೋಕಾರಕ ಚಂದ್ರನಿಂದ ದಿಟ್ಟ ನಿಲುವು ತಳೆಯಲು ಅಸಮರ್ಥರನ್ನಾಗಿಸುತ್ತಾರೆ. ಪೂರ್ವ ಪುಣ್ಯದಲ್ಲಿಯೇ ಗುರು ಇದ್ದು ಶನಿಯ ಕ್ರೂರ, ನೀಚ ದೃಷ್ಟಿಯ ಫ‌ಲವಾಗಿ ಉಳಿದ ಗ್ರಹಗಳು ಇವರನ್ನು ಇನ್ನಿರದ ರೀತಿಯಲ್ಲಿ ಪರದಾಡಿಸಲು ಕಾರಣವಾಗಿದೆ. ಮನಸ್ಸು ಮಾಡಿದರೆ ಭಾರತ ದೇಶವನ್ನು ಸಂಪನ್ನವಾದ ನೆಲೆಯಲ್ಲಿ ಕರೆದೊಯ್ಯಬಲ್ಲ ಮಹತ್ತರ ಶಕ್ತಿ ಹಾಗೂ ಮನೋಬಲವನ್ನ ಈ ಪ್ರಮುಖರು ಪಡೆಯಬಹುದಿತ್ತು.

ಗುರು ಗ್ರಹದ ಬಲವಿದ್ದೂ, ರಾಹು, ಶನಿಗಳು ಕೆಡಿಸಿದ ಪ್ರಧಾನಿ ಪಟ್ಟ

ತೀರಾ ಇತ್ತೀಚೆಗೆ ಭಾರತೀಯ ಜನತಾ ಪಕ್ಷದ ವರಿಷ್ಠ, ಮುತ್ಸದ್ದಿ, ರಾಜಕಾರಣಿ, ನಿಷ್ಠುರವಾದಿ ಲಾಲ ಕೃಷ್ಣ ಅಡ್ವಾಣಿ ಪಕ್ಷದ ಬಹು ಮುಖ್ಯ ಸಭೆಯಲ್ಲಿ ಭಾವೋದ್ವೇಗದಿಂದ ಕಣ್ಣೀರಿಟ್ಟರು. ತಾನು ಪ್ರಧಾನ ಮಂತ್ರಿಯಾಗಲಿಲ್ಲ. ಇನ್ನಂತೂ ಆಗಲಾರೆ ಎಂಬುದಕ್ಕಲ್ಲ ಈ ಕಣ್ಣೀರು. ಬದಲು ತಾನು ಸಾಗಿ ಬಂದ, ತಾನೂ ಬೆಳೆಸಿದ ಪಕ್ಷವನ್ನು ಭ್ರಷ್ಟಾಚಾರದ ಕೊಳಕಿನಿಂದ ಮೇಲೆತ್ತಗಾಲಿಲ್ಲವಲ್ಲ ಎಂಬ ಅಳಲು ಕಣ್ಣೀರಲ್ಲಿತ್ತು. ಜನರ ಅನುಮಾನದ ಹುತ್ತದ ಕೊಳೆ ಅವರ ಚಿತ್ತವನ್ನ ನೋವಿಗೆ ಒಡ್ಡಿತ್ತು. ಪಕ್ಷದಲ್ಲಿ ಉಂಟಾದ ಅಶಿಸ್ತು, ಅಪ್ರಾಮಾಣಿಕತೆ ಮೆರೆದ ಮಂದಿಯ ಬಗ್ಗೆ ಜಿಗುಪ್ಸೆ ಇತ್ತು. ಸದಾ ಅನುಕೂಲವನ್ನೇ ಒದಗಿಸಿ ಕೊಡಬೇಕಿದ್ದ ಅವರ ಜಾತಕದ ಗುರು ಗ್ರಹ 2009ರ ಲೋಕಸಭಾ ಚುನಾವಣೆಯಲ್ಲಿ ನೀಚತ್ವವನ್ನ ಸಂಪಾದಿಸಿಕೊಂಡಿತ್ತು. ಹಲವು ತಲ್ಲಣಗಳನ್ನು ನಿರ್ಮಿಸಬೇಕಾದ ಜಾತಕದ ರಾಹು ದೋಷ 2009ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಅಡ್ವಾಣಿಯವರಿಗೆ ನಷ್ಟವನ್ನೇ ತರಬೇಕಾದ ನಷ್ಟದಲ್ಲಿ ಕ್ರೂರವಾಗಿತ್ತು. ಶತಾಯುಗತಾಯು ಅವರ ಸುಖವನ್ನ ಛಿದ್ರಗೊಳಿಸಲೆಂದೇ ಹಟ ತೊಟ್ಟಿದ್ದ ಶನೈಶ್ಚರಸ್ವಾಮಿ(ಪಂಚಮ ಶನಿಕಾಟ) ಕಾಟದ ಶನಿಸ್ವಾಮಿಯಾಗಿದ್ದ. ಪರಿಣಾಮದಲ್ಲಿ ಕರ್ಮಸ್ಥಾನದ ಸಿದ್ಧಿಯನ್ನ ಕೆಡಿಸಲೇ ಬಂದಂತೆ ಈ ಕಾಟ ಆದವಾನಿಯವರ ಕರ್ಮಸ್ಥಾನದಲ್ಲಿ ಬೆನ್ನು ಹತ್ತಿತ್ತು. ಯೋಗ್ಯತೆ ಇದ್ದೂ ಆದವಾನಿ ಸೋತರು. (ಲೋಕಸಭಾ ಸ್ಥಾನ ಗೆದ್ದರೂ ಪಕ್ಷದ ಆಡಳತದ ಚುಕ್ಕಾಣಿ ಹಿಡಿಯಲು ಸಾಧ್ಯವಾಗಲಿಲ್ಲ)ಸಾಲದೆಂಬಂತೆ ಜಿನ್ನಾ ಬಗೆಗೆ ಕೆಲವು ಉತ್ತಮ ಮಾತುಗಳನ್ನಾಡಿ ಪರದಾಡಿದರು.  ಎಷ್ಟೇ ಅಲ್ಲವೆಂದರೂ ಬಿಜೆಪಿಯನ್ನು ನಿಯಂತ್ರಿಸುವ ಆರ್‌ಎಸ್‌ಎಸ್‌ ಕೆಂಗಣ್ಣಿಗೆ ಅಡ್ವಾಣಿ ಗುರಿಯಾದದ್ದು ಈಗ ಇತಿಹಾಸ. ಅವರ ಮಾತುಗಳು ಅವರನ್ನು ಮೂಲೆ ಗುಂಪು ಮಾಡಿತು. ನೀಚತ್ವವನ್ನ ಗೋಚಾರದಲ್ಲಿ ಪಡೆದಿದ್ದ ಗುರು ಗ್ರಹವೇ ಅವರ ವಾಕ್‌ (ಮಾತಿನ) ಸ್ಥಳದ ಅಧಿಪತಿಯಾಗಿದ್ದುದು ಒಂದು ಆಕಸ್ಮಿಕವೇನಲ್ಲ. ಕಾಡುವ ಸಂದರ್ಭ ಬಂದಾಗ ಗುರುವೂ ದಾರಿ ತಪ್ಪಿಸಬಲ್ಲ ಎಂಬುದಕ್ಕೆ ಇದು ದೊಡ್ಡ ನಿದರ್ಶನ. ಪರಿಪೂರ್ಣ ಚಂದ್ರ ಗ್ರಹ ಈ ಇಳಿವಯಸ್ಸಿನಲ್ಲೂ ಅವರ ಚೇತನವನ್ನ ಕಾಪಾಡಿಕೊಂಡೇ ಬಂದಿದ್ದಾನೆ. ಲಾಭಾಧಿಪತಿ ಬುಧನನ್ನು ಬೌದ್ಧಿಕವಾಗಿ ಅರಳಿಸಬಲ್ಲ ಚಂದ್ರ 2014ರ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಅಡ್ವಾಣಿಯವರನ್ನ ಅನಿರೀಕ್ಷಿತ ಸಂಪನ್ನತೆಗೆ ತಳ್ಳದಿರಲಾರ ಎಂಬುದೊಂದು ಬಹು ಮಹತ್ವದ ಅಂಶ. ಈ ಬುಧ ಅಡ್ವಾಣಿಯವರ ಜಾತಕದ ನಷ್ಟದಲ್ಲಿದ್ದರೂ, ಗುರುವಿನ ನಕ್ಷತ್ರವಾದ ವಿಶಾಖಾ ನಕ್ಷತ್ರದಲ್ಲಿ ವಿರೋಧಿಗಳನ್ನು ಬಗ್ಗು ಬಡಿಯುವ ಚೈತನ್ಯವನ್ನು ಹೊಂದಿದ್ದಾನೆ. ಅಂಗ ರಕ್ಷಕರ ಬಹುಮುಖ್ಯ ವ್ಯವಸ್ಥೆಗೆ ಯಾವುದೇ ಚ್ಯುತಿ ಒದಗಬಾರದೆಂಬುದು ಮುಖ್ಯ. 

ಗುರು ಗ್ರಹ ಸುಮಾರಾಗಿ ಮಿಥುನ ಲಗ್ನದವರನ್ನ, ಕನ್ಯಾ ಲಗ್ನದವರನ್ನ ಅಗಾಧವಾಗಿ ಕಾಡುತ್ತದೆ. ಮಿಥುನ ಲಗ್ನದವರಿಗೆ ರಾಹು, ಕುಜ-ಶನಿ ಗ್ರಹಗಳ ದೌರ್ಬಲ್ಯ ಕೂಡಿ ಬಂದಲ್ಲಿ ಗುರು ಪ್ರತ್ಯಕ್ಷ ರಾಕ್ಷಸನಾಗಿ ಮಾರ್ಪಾಡುಗೊಳ್ಳುತ್ತಾನೆ. ಈ ಅಂಕಣದ ಮೊದಲು ಭಾಗದಲ್ಲಿ ವಿಶ್ಲೇಷಿಸಿದ ನಮ್ಮ ರಾಷ್ಟ್ರದ ಪ್ರಮುಖ ವ್ಯಕ್ತಿ ಮಿಥುನ ಲಗ್ನ ಜಾತಕರಾಗಿದ್ದಾರೆ. ದುರ್ಬಲ ಶನಿ, ದುರ್ಬಲ ರಾಹು (ಸರ್ಪ) ಹಾಗೂ ದುಷ್ಟ ಕುಜ ಗ್ರಹಗಳು ಇವರನ್ನ ನಿರಂತರವಾಗಿ ಕಾಡಿದ್ದಾರೆ. ಬಹು ಸೂಕ್ಷ್ಮ ಆವರಣಗಳಿಂದ ಗುರು ಗ್ರಹ ಅಪರೂಪಕ್ಕೆ ಸಾಕಷ್ಟು ದುಷ್ಟತನ ಕಳಕೊಂಡಿದ್ದರೂ, ನೀಚ ಶನಿ, ಗುರು ಗ್ರಹದ ಧನಾತ್ಮಕ ಅಂಶಗಳನ್ನ  ಛಿದ್ರಗೊಳಿಸಿದೆ. ಬಹು ಮುಖ್ಯ, ಸೂಕ್ಷ್ಮ ಸಂವೇದಿ, ದಿಟ್ಟ ಮಾರ್ಗದರ್ಶಕರೊಬ್ಬರು ಈ ವ್ಯಕ್ತಿಗೆ ಒದಗಿ ಬಂದಲ್ಲಿ 2020ರ ನಂತರದಲ್ಲಿ ಭಾರತದ ಒಬ್ಬ ಅದ್ಭುತನಾಯಕನಾಗುವ ಯೋಗ ಕೂಡಿ ಬರಲು ಇವರ ಜಾತಕದ ಧರ್ಮಕರ್ಮಾಧಿಪ ದೃಷ್ಟಿಯೋಗ  ಅವಕಾಶಗಳನ್ನು ರೂಪಿಸಿಕೊಡಬಲ್ಲದು. ಮಾರ್ಗದರ್ಶಕ ಯಾರು? ಸೂಕ್ಷ್ಮ ಸಂವೇದಿ, ದಿಟ್ಟ ಮಾರ್ಗದರ್ಶಕ ಎಂಬುದಕ್ಕೆ ವ್ಯಾಖ್ಯೆಗಳೇನು, ಈ ಭ್ರಷ್ಟ ವ್ಯವಸ್ಥೆಗಳ ನಡುವೆ ಸಂಪನ್ನನೊಬ್ಬ ಸಿಗಬಲ್ಲನೆ? ಸಿಗಬಲ್ಲ ಎಂಬುದನ್ನು ನಿರಾಕರಿಸಲಾಗದು. ಆದರೆ, ಮುಖ್ಯವಾಗಿ ಮಾತುಗಳಲ್ಲಿನ ಮೃದುತ್ವ, ಆದರೆ ಮಾತನಾಡಲು ಗಟ್ಟಿಯಾಗಿ ಮುಂದಾಗಲು ಏನೋ ಅಳುಕು. ಇವು ಒಂದಕ್ಕೊಂದು ವೈರುಧ್ಯಗಳಾದರೂ ಶುಕ್ರಗ್ರಹದ ಅಗಾಧವಾದೊಂದು ಅನಿರೀಕ್ಷಿತ ಶಕ್ತಿ ಜಾತಕದಲ್ಲಿ ಈ ವ್ಯಕ್ತಿಗೆ ಭವಿಷ್ಯದಲ್ಲಿ ಬೆಳಕನ್ನಿಟ್ಟಿದೆ. 

ಟಾಪ್ ನ್ಯೂಸ್

1—amanatulla-khan

Waqf; ಅಮಾನತುಲ್ಲಾ ಖಾನ್ ಗೆ ಜಾಮೀನು: ಮೋದಿಯ ಸುಳ್ಳು ಪ್ರಕರಣ ಬಹಿರಂಗ ಎಂದ ಆಪ್

marriage 2

Davangere: ಮದುವೆಯಾಗುವುದಾಗಿ ಯುವತಿಯರಿಗೆ 62 ಲಕ್ಷ ರೂ.ಗೂ ಹೆಚ್ಚು ವಂಚಿಸಿದವನ ಬಂಧನ

Vimana 2

Kochi airport; ಶಬರಿಮಲೆ ಭಕ್ತರಿಗೆ ಅನುಕೂಲವಾಗುವಂತೆ ವಿಶೇಷ ವ್ಯವಸ್ಥೆಗಳು

Mika Singh: ಮಿಕಾ ಹಾಡಿಗೆ ಫಿದಾ..‌ಪಾಕ್‌ ಅಭಿಮಾನಿಯಿಂದ 3 ಕೋಟಿ ರೂ. ವಾಚ್‌, ಚಿನ್ನ ಗಿಫ್ಟ್

Mika Singh: ಮಿಕಾ ಹಾಡಿಗೆ ಫಿದಾ..‌ಪಾಕ್‌ ಅಭಿಮಾನಿಯಿಂದ 3 ಕೋಟಿ ರೂ. ವಾಚ್‌, ಚಿನ್ನ ಗಿಫ್ಟ್

1-kanna

Maharashtra Election; ಫಡ್ನವಿಸ್ ಪತ್ನಿಯ ವಿರುದ್ಧ ಕನ್ಹಯ್ಯಾ ಕುಮಾರ್ ಹೇಳಿಕೆ

1-raga

Modiji ಸಂವಿಧಾನವನ್ನು ಓದಲೇ ಇಲ್ಲ, ಹಾಗಾಗಿ…: ರಾಹುಲ್ ಗಾಂಧಿ

ಎಸ್‌ಡಿಎ ರುದ್ರಣ್ಣ ಕೇಸ್:‌ ಮೂವರು ಆರೋಪಿಗಳಿಗೆ ನಿರೀಕ್ಷಣಾ ಜಾಮೀನು

Belagavi: ಎಸ್‌ಡಿಎ ರುದ್ರಣ್ಣ ಕೇಸ್:‌ ಮೂವರು ಆರೋಪಿಗಳಿಗೆ ನಿರೀಕ್ಷಣಾ ಜಾಮೀನು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Astrology 2024: 2024ರಲ್ಲಿ ಮಿಶ್ರ ಫ‌ಲಗಳೇ ಅಧಿಕ-ರಾಜ್ಯದಲ್ಲೇನಾಗುತ್ತದೆ?

Astrology 2024: 2024ರಲ್ಲಿ ಮಿಶ್ರ ಫ‌ಲಗಳೇ ಅಧಿಕ-ರಾಜ್ಯದಲ್ಲೇನಾಗುತ್ತದೆ?

ಜ್ಯೋತಿಷ್ಯದಲ್ಲಿ ನವಗ್ರಹಕ್ಕಿಂತಲೂ ನಕ್ಷತ್ರಗಳಿಗೆ ಹೆಚ್ಚು ಪ್ರಾಮುಖ್ಯತೆ ಯಾಕೆ ಕೊಡಲಾಗಿದೆ?

ಜ್ಯೋತಿಷ್ಯದಲ್ಲಿ ನವಗ್ರಹಕ್ಕಿಂತಲೂ ನಕ್ಷತ್ರಗಳಿಗೆ ಹೆಚ್ಚು ಪ್ರಾಮುಖ್ಯತೆ ಯಾಕೆ ಕೊಡಲಾಗಿದೆ?

ಶುಭ ವಿಚಾರ ತಿಳಿಯುವ ಗೋಚಾರ ಫಲ ಎಂದರೇನು, ಗುರುದೆಸೆ ಯಾವಾಗ ಆರಂಭವಾಗಲಿದೆ…

ಶುಭ ವಿಚಾರ ತಿಳಿಯುವ ಗೋಚಾರ ಫಲ ಎಂದರೇನು, ಗುರುಬಲ ಯಾವಾಗ ಆರಂಭವಾಗಲಿದೆ…

jjhgfd

ಮಾರಕಾಧಿಪತಿ, ಭಾದಕಾಧಿಪತಿ: ಅಕಾಲಿಕ ಮರಣದ ಬಗ್ಗೆ “ಅಷ್ಠಮ ಸ್ಥಾನ” ಮುನ್ಸೂಚನೆ ಕೊಡುತ್ತದೆಯೇ?

ಗಜಕೇಸರಿ ಯೋಗ… ಈ ಯೋಗ ಹೇಗೆ ಉಂಟಾಗುತ್ತದೆ, ಇದರ ಮಹತ್ವವೇನು?

ಗಜಕೇಸರಿ ಯೋಗ… ಈ ಯೋಗ ಹೇಗೆ ಉಂಟಾಗುತ್ತದೆ, ಇದರ ಮಹತ್ವವೇನು?

MUST WATCH

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

ಹೊಸ ಸೇರ್ಪಡೆ

1-eweweq

Muddebihal; ಬೊಲೇರೊ-ಬೈಕ್ ಮುಖಾಮುಖಿ ಡಿಕ್ಕಿ: ಸವಾರ ಮೃ*ತ್ಯು

byndoor

Kundapura: ಪ್ರತ್ಯೇಕ ಅಪಘಾತ ಪ್ರಕರಣ; ಗಾಯ

1-p-r

US; ಒಬಾಮಾ ಮನೆಯಲ್ಲಿ ಪ್ರೇಯಸಿ ಕರೆಸಿ ಸೆ*ಕ್ಸ್ ಮಾಡಿದ ಸೀಕ್ರೆಟ್ ಸರ್ವಿಸ್ ಏಜೆಂಟ್ ವಜಾ!

POLICE-5

Malpe: ಜುಗಾರಿ ಅಡ್ಡೆಗೆ ದಾಳಿ, ವಶಕ್ಕೆ

POlice

Malpe: ಜೂಜಾಟ; 12 ಮಂದಿ ಅಂದರ್‌; ಪ್ರಕರಣ ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.