ಕುಂಭ ರಾಶಿಯವರ ಸ್ವಭಾವಗಳು ಹೀಗಿವೆ ನೋಡಿ…


Team Udayavani, Sep 17, 2016, 1:15 AM IST

8.jpg

ಕುಂಭರಾಶಿಯು ಕಾಲರಾಯನ ಲಾಭದ ಮನೆಯಾಗಿದ್ದು ಈ ಮನೆಯ ಅಧಿಪತಿಯು ಶನೈಶ್ಚರನಾಗಿದ್ದಾನೆ. ಲಾಭದ ವಿಚಾರದಲ್ಲಿ ಶನೈಶ್ಚರನು ಒದಗಿಸುವ ಲಾಭದವಿಚಾರ ವಿಳಂಬದೊಂದಿಗೆ ಪ್ರಾಪ್ತಿಯಾಗಬಹುದು. ಆದರೆ ಶನೈಶ್ಚರನು ಒದಗಿಸಿದ ಲಾಭವು ಅದ್ಭುತ ಪರಿಣಾಮವನ್ನು ಒದಗಿಸುವಂಥದ್ದಾಗಿರುತ್ತದೆ. ಧಮಾರ್ಥಕಾಮ ಮೋಕ್ಷಗಳನ್ನು ಒಂದು ಉತ್ತಮ ಹದದೊಂದಿಗೆ ಒದಗಿಸಿಕೊಡುವ ಶನಿ ಮಹಾರಾಜ ತಾನು ಕೊಟ್ಟಿದ್ದನ್ನು ಯಾವ ಕಾರಣಕ್ಕೂ ಸವಕಳಿಗೊಳ್ಳದಂತೆ ಶಕ್ತಿ ತುಂಬಿ ಕೊಡುತ್ತಾನೆ. ಶನೈಶ್ಚರನ ರೀತಿಯೇ ಅದು. ಬಿರುಗಾಳಿ ಎದ್ದರೂ ಸ್ಥೈರ್ಯ ಧೈರ್ಯ ಇರುವ ವ್ಯಕ್ತಿಗೆ ದಾರಿ ತೋರಿಸುತ್ತಾನೆ. ನೀಲಾಂಜನ ಸಮಾಭಾಸ ಎಂದು ಕರೆಸಿಕೊಳ್ಳುವ ಶನೈಶ್ಚರನ ಸಿದ್ಧಿ ಅಲೌಕಿಕದ ಶಕ್ತಿಯ ಸಂಯೋಜನೆಯಿಂದಲೇ ಒದಗಿ ಬರುತ್ತದೆ. ಕುಂಭರಾಶಿಯವರು ಸೂರ್ಯನ ಅಥವಾ ಅಂಗಾರಕನ ತೊಂದರೆ ತಪ್ಪಿಸಿಕೊಂಡರೆ ಸ್ವರ್ಗವನ್ನೇ ಆಳುವ ಇಂದ್ರದೇವನಂತೆ ಜೀವನದ ಸರ್ವ ಸಂಭ್ರಮವನ್ನು ಪಡೆದು ಸಫ‌ಲರಾಗಲು ಅವಕಾಶ ಪಡೆಯುತ್ತಾರೆ. ದನಿಷ್ಠಾ ನಕ್ಷತ್ರದ ಮೂರನೇ ಚರಣದವರು ಶತಭಿಷಾ ನಕ್ಷತ್ರದವರು, ಪೂರ್ವಾಭಾದ್ರ ನಕ್ಷತ್ರದ ಮೊದಲ ಮೂರು ಚರಣದವರು ಕುಂಭರಾಶಿಯವರಾಗಿರುತ್ತಾತೆ. ನೋಡಲು ಸ್ಪುರದ್ರೂಪಿಗಲಾಗಬೇಕಾದರೆ ಕುಂಭರಾಶಿಯವರಿಗೆ ಬುಧ ಅಥವಾ ಶುಕ್ರ ಗ್ರಹದ ಸಹಾಯ ಬೇಕು. ಅಂಗಾರಕನ ಪ್ರಭಾವವೇನಾದರೂ ನಕಾರಾತ್ಮಕ ಸ್ವರೂಪದ್ದಾಗಿದ್ದರೆ ತಾವೂ ಯಾತನೆ ಅನುಭವಿಸುತ್ತಾ ಪರರಿಗೂ ಯಾತನೆಯಾಗುತ್ತಾ ಜಡತ್ವದಿಂದ ಕ್ರಿಯಾಶಿಲತೆ ಕಳೆದುಕೊಳ್ಳುತ್ತಾರೆ. ಚಂದ್ರನು ತನ್ನ ದುಷ್ಟತನವನ್ನು ಮೆರೆಸುವ ಸಾಧ್ಯತೆ ಶನೈಶ್ಚರನ ಜೊತೆಗಿನ ಸಂಬಂಧ ಹೇಗೆ ಎನ್ನುವುದರ ಮೂಲಕವೇ ತಿಳಿಯಬೇಕು. ಅತ್ಯಂತ ಸಕಾರಾತ್ಮಕ ಶಕ್ತಿ ಎಂದರೆ ಕುಂಭರಾಶಿಯವರು ಶ್ರಮ ಪಡದೆಯೇ ಜಾnನಿಗಳಾಗುತ್ತಾರೆ. ರಾಹುವಿನೊಂದಿಗೆ ರವಿ ಗ್ರಹದ ಸಂಬಂಧ ಮರಣ ಸ್ಥಾನಕ್ಕೆ ಅಥವಾ ರಿಪು ಸ್ಥಾನಕ್ಕೆ ಕಳಂಕಮಯವಾಗಿದ್ದರೆ ಕುಂಭರಾಶಿಯವರು ಕೇಡಿಗಳಾಗುತ್ತಾರೆ. ಸದ್ವಿವೇಕದ ಎಳೆಗಳನ್ನು ಕಳೆದುಕೊಳ್ಳುತ್ತಾರೆ. ಸುಲಭವಾಗಿ ಜೀವನ ಸಾಗಿಸುವ ಇರಾದೆಯನ್ನು ವ್ಯಕ್ತಪಡಿಸುತ್ತಾ ಹೇಗೆ ಮಾಡಿದರೂ ನಡೆಯುತ್ತದೆ ಎಂಬ ಅಭಿಪ್ರಾಯದಿಂದಾಗಿ ತೊಂದರೆಗಳನ್ನು ಎದುರಿಸುತ್ತಾರೆ. ನೆನಪಿಡಿ ದೇವಿಗೆ ಸಂಬಂಧಿಸಿದ ಅನುಷ್ಠಾನ ಕೆಡಕುಗಳನ್ನು ತಪ್ಪಿಸಬಹುದು.

ಹಿಡಿದ ಕಾರ್ಯವನ್ನು ಸುಲಭವಾಗಿ ಕೈಬಿಡದವರು
ಕುಂಭರಾಶಿಯ ಜನ ಒಮ್ಮೆ ಒಂದು ಕೆಲಸವನ್ನು ಮಾಡಿ ಮುಗಿಸಬೇಕು ಎಂಬ ಜಿದ್ದಿಗೆ ಬಿದ್ದರೆ ಆ ಕಾರ್ಯವನ್ನು ಮುಗಿಸದೆ ವಿರಮಿಸಲಾರರು. ನಮ್ಮ ದೇಶದ ಮಾಜಿ ಪ್ರಧಾನಿಗಳಾದ ದೇವೇಗೌಡರ ಜಿಗುಟುತನವನ್ನೇ ಗಮನಿಸಿ. ಚಂದ್ರನು ಅವರ ಜಾತಕದಲ್ಲಿ ಲಗ್ನಾಧಿಪತಿಯಾಗಿ ಕರ್ಕರಾಶಿಯ ಅಧಿಪತಿಯಾಗಿದ್ದಾನೆ. ಮೇಲ್ನೋಟಕ್ಕೆ ಅಷ್ಠಮಸ್ಥಾನದಲ್ಲಿ ಕೇತುವಿನೊಂದಿಗೆ ಕೂಡಿ ಬಹುಶಃ ಗೌಡರಿಗೆ ತೊಂದರೆ ತರುವ ಗ್ರಹವಾಗಿ ಪರಿವರ್ತಿತನಾಗುತ್ತಾನೆ ಎಂದು ತಿಳಿಯುವಂತೆ ರಾಹುಗ್ರಸ್ಥನಾಗಿ ಕುಂಭರಾಶಿಯಲ್ಲಿ ಕುಳಿತಿದ್ದಾನೆ. ಆದರೆ ರಾಹುವು ಪೂರ್ವಾಭಾದ್ರ ನಕ್ಷತ್ರದಲ್ಲಿರುವ ಚಂದ್ರನೊಂದಿಗೆ ಇರುವುದರಿಂದ ತನ್ನ ಸ್ವಂತ ನಕ್ಷತ್ರ ಶತಭಿಷಾದಲ್ಲಿದ್ದು ಅಲ್ಪಾಯುಷ್ಯವನ್ನು ತಪ್ಪಿಸಿದ್ದಾನೆ. ದೇವೇಗೌಡರು ಅಷ್ಟಮದಲ್ಲಿ ರಾಹುವಿನ ಜೊತೆ ಇರುವ ಚಂದ್ರನ ಕಾರಣದಿಂದ ದೀರ್ಘಾಯುಸ್ಸನ್ನು ಸಂಪಾದಿಸಿಕೊಂಡರು. ಶನೈಶ್ಚರನು ಚಂದ್ರನ ಉಪಸ್ಥಿತಿ ತನ್ನ ಅಧಿಪತ್ಯದ ಕುಂಭರಾಶಿಯಲ್ಲೇ ಇದ್ದುದರಿಂದ ದೇವೇಗೌಡರ ಜಾತಕದಲ್ಲಿ ದುಷ್ಟನಾಗಿ ಮೇಲ್ನೋಟಕ್ಕೆ ಕಂಡರೂ ಕಳತ್ರಸ್ಥಾನಾಧಿಪತಿಯಾಗಿ ದೇವೇಗೌಡರ ಪತ್ನಿಯ ಯೋಗಬಲದ ಹಿನ್ನೆಲೆಯಲ್ಲಿ ಸಮಾಜದ ಕೆಳಸ್ತರದ ಜನರಲ್ಲಿಆತ್ಮವಿಶ್ವಾಸ ಬೆಳೆಸಿ ಒಳ್ಳೆಯ ರಾಜಕೀಯ ಸಂಘಟಕನನ್ನಾಗಿ ದೇವೇಗೌಡರನ್ನು ರೂಪಿಸಿದ್ದಲ್ಲದೆ ಹಿಡಿದ ಹಠವನ್ನು ಬಿಡದೆ ಬೆಂಬತ್ತಿ ಹೋರಾಡುವ ಜಿಗುಟುತನ ಒದಗಿಸಿ ಕೊಟ್ಟನು. ಸಾಡೇ ಸಾತಿ ಕಾಟ ಇದ್ದರೂ ಪಕ್ಷದಲ್ಲಿನ ಆಂತರಿಕ ಬಿಕ್ಕಟ್ಟುಗಳ ನಡುವೆಯೇ ವಿರೋಧಿಗಳ ಮೇಲೆ ಹಿಡಿತ ಸಾಧಿಸಿ ಕರ್ನಾಟಕದ ಮುಖ್ಯಮಂತ್ರಿಗಳೂ ಆದರು. ಮುಖ್ಯಮಂತ್ರಿಪಟ್ಟ ಹೊಯ್ದಾಡುವ ಜೋಕಾಲಿಯಂತೆ ದೇವೇಗೌಡರ ಎದುರು ಕಣ್ಣಾಮುಚ್ಚಾಲೆ ಆಟ ಆಡಿದರೂ ಅಂತಿಮವಾದ ಶಕ್ತಿಯ ಒಟ್ಟೂ ಸಾಂದ್ರತೆ ಕುಂಭರಾಶಿ ಯವರಾಗಿದ್ದರಿಂದಲೇ ಗೌಡರು ಪಟ್ಟಾಭಿಷಿಕ್ತರಾದರು. ಲಾಭವನ್ನು ಒದಗಿಸುತ್ತಲೇ ಬೇಕಾದ ಶುಕ್ರನು ಗೌಡರಿಗೆ ಸಂಪನ್ನನಲ್ಲದಿದ್ದರೂ ತನ್ನ ದಶಾಕಾಲದಲ್ಲಿ ಚಂದ್ರನಿಂದ ಬಹುಮುಖ್ಯವಾದ ಸುಖಸ್ಥಾನದಲ್ಲಿದ್ದುದರಿಂದ ಪೂರ್ವಪುಣ್ಯ ನಿರ್ದೇಶಿತ ಪ್ರಧಾನಿ ಪಟ್ಟವನ್ನು ಕೂಡಾ ನಾಟಕೀಯ ಸನ್ನಿವೇಶಗಳೊಂದಿಗೆ ಗೌಡರು ಅಲಂಕರಿಸುವ ಅದ್ಭುತ ಯೋಗವನ್ನು ಕರುಣಿಸಿದನು. ಕುಂಭರಾಶಿಯು ಗೌಡರಿಗೆ ನಕಾರಾತ್ಮಕ ಅಲೆಗಳನ್ನು ಸಕಾರಾಥ¾ಕಗೊಳಿಸಿದ ಅದ್ಭುತವನ್ನು ಕುಂಭರಾಶಿಯ ಚಂದ್ರನಿಂದ ಪಡೆಯುವಂತಾಯ್ತು. ಬಹುದೊಡ್ಡ ವಾಗ್ಮಿ ಎಂಬ ಹಣೆಪಟ್ಟಿ ಪಡೆಯದಿದ್ದರೂ ಗೌಡರ ಮಾತುಗಳು ತಮ್ಮೆದುರಿಗಿರುವ ಜನರನ್ನು ಮೋಡಿಗೊಳಿಸುವ ವಿಶೇಷ ಪಡೆದಿದ್ದಂತೂ ಸತ್ಯ. 

ರಾಹುಗ್ರಸ್ತನಾದ ಚಂದ್ರನ ಕಾರಣದಿಂದ ದೇವೇಗೌಡರ ನಡೆಯನ್ನೆಲ್ಲ ಟೀಕಿಸಿ ಅವರನ್ನು ಒಬ್ಬ ಖಳನಾಯಕನಂತೆ ಚಿತ್ರಿಸುವ ಪ್ರಯತ್ನಗಳನ್ನು ವಿರೋಧಿಗಳು ಮಾಡುತ್ತಲೇ ಇರುತ್ತಾರೆ. ದೇವೇಗೌಡರಿಗೆ ಜಿಗುಟುತನವನ್ನೀ ಆ ಜಿಗುಟಿತನದಿಂದಾಗಿ ಯೋಗಗಳನ್ನು ಅಲ್ಲಲ್ಲಿಯೇ ತುಂಡರಿಸಿ ಗೌಡರ ಪಾಳಿಗೆ ಹಲವು ಏಳುಬೀಳುಗಳನ್ನು ಒದಗಿಸಿದ ಸೂರ್ಯ ಹಾಗೂ ಶುಕ್ರರು ನಿರ್ಮಿಸಿದ ರಾಜಯೋಗ ಚಂದ್ರನಿಂದಾಗಿಯೇ ನಿಜವಾದ ತೂಕ ಪಡೆದದ್ದು ಎಂಬುದಕ್ಕೆ ಅನುಮಾನವಿಲ್ಲ. ಚಂದ್ರನಿಗೆ ದೌರ್ಬಲ್ಯ ಸಂಪಾದನೆ ಆಗಿರದಿದ್ದರೆ ಗೌಡರು ಇನ್ನೂ ಹೆಚ್ಚಿನ ಶಕ್ತಿ ಪಡೆಯುತ್ತಿದ್ದರು. ಆದರೆ ಆ ಶಕ್ತಿಯನ್ನು ಕ್ಷೀಣಗೊಳಿಸಿದ ಕುಖ್ಯಾತಿ ಕೇತುವಿಗೆ ಸಲ್ಲಬೇಕು. ಆದರೆ ಕೇತುವು ಅವರಿಗೆ ಮೋಕ್ಷಕಾರಕನಾಗಿಯೂ ಅನಾಯಾಸ ವಾದ ಬದುಕಿನ ಅಂತ್ಯ ನೀಡುತ್ತಾನೆ.

ದಾರುಣ ಅಂತ್ಯ ಮತ್ತು ಲೇಡಿ ಡಯಾನ
ದೇವೇಗೌಡರ ಕುಂಭರಾಶಿಯ ಚಂದ್ರನ ಶಕ್ತಿ ಸಕಾರಾತ್ಮಕ ಅಂಶ ಪಡೆದಿದ್ದರೆ ಇಂಗ್ಲೆಂಡಿನ ಮಾಜಿ ಯುವರಾಣಿ ಲೇಡಿ ಡಯಾನ ಕುಂಭರಾಶಿಯ ಚಂದ್ರನ ನಕಾರಾತ್ಮಕ ಸ್ಪಂದನಗಳಿಂದಾಗಿ ಭೀಕರ ರಸ್ತೆ ಅಪಘಾತದಲ್ಲಿ ದಾರುಣ ಮೃತ್ಯುವನ್ನು ಕಂಡಳು. ಮರಣಸ್ಥಾನದ ಅಧಿಪತಿಯಾದ ಚಂದ್ರ ವಿಪರೀತ ರಾಜಯೋಗ ದಯಪಾಲಿಸಿದ್ದನಾದರೂ ಶನಿಕಾಟದ ಸಂದರ್ಭದಲ್ಲಿ ಶನೈಶ್ಚರನು ಒದಗಿಸಿದ ಮೃತ್ಯುದಂಡವನ್ನು ಸಾಧ್ಯವಾಗಲಿಲ್ಲ. ಲಗ್ನಾಧಿಪತಿಯಾದ ನೀಚಗುರುವಿನ ಜತೆ ಇದ್ದ ಶನೈಶ್ಚರ ಸಾಡೆಸಾತಿ ಕಾಟದ ಯಾತನಾಮಯ ಶನೈಶ್ಚರನಾಗಿ ತೀರಾ ಎಳೆವಯಸ್ಸಿನ ಡಯಾನರನ್ನು ರಸ್ತೆ ಅಪಘಾತಕ್ಕೆ ಸಿಲುಕಿಸಿ ಬದುಕಿನ ಅಂತ್ಯಕ್ಕೆ ಚರಮಗೀತೆ ಹಾಡಿದ್ದ. ವೈರಿಯಾದ ಸೂರ್ಯನ ಉತ್ತರಾಷಾಢ ನಕ್ಷತ್ರಸ್ಥಿತ ಶನೈಶ್ಚರನಿಗೆ ಗುರು ಗೋಚಾರದಲ್ಲಿ ಮಾರಕಸ್ಥಾನಕ್ಕೆ ಬಂದಾಗ ಬದುಕಿನ ವ್ಯಾಪಾರ ಮುಗಿಸಿ ಹೊರಡಿಸುವಲ್ಲಿ ಚಂದ್ರನ ದೌರ್ಬಲ್ಯ ಬಲ ಪಡೆದು ಅಂತಿಮ ಯಾತ್ರೆಗೆ ವರ್ತಮಾನವನ್ನು ಸಿದ್ಧಪಡಿಸಿ ಡಯಾನರ ಬಲಿ ಪಡೆದಿದ್ದ. ಗುರು ದಶಾವೂ ಆಗಿದ್ದರಿಂದ ಶನೈಶ್ಚರನಿಗೆ ಡಯಾನಾರ ಸಾವನ್ನು ಮೂರ್ತಗೊಳಿಸಲು ತೊಂದರೆ ಬರಲೇ ಇಲ್ಲ. ಅಲ್ಪಾಯುಷಿವಿನಲ್ಲಿಯೇ ಡಯಾನ ದಾರುಣ ಅಂತ್ಯ ಕಂಡರು. ಹೊಂದಾಣಿಕೆಯಾಗದ ದಾಂಪತ್ಯದ ಬೇಗುದಿಯಲ್ಲಿ ಶನಿಕಾಟದ ದಿನಗಳನ್ನು ಕಳೆದರು. ಗಂಡನಿಂದ ವಿಚ್ಛೇದನ ಹಿಡಿತವನ್ನು ಸಾಧಿಸಲಾಗದ ಮನೋವ್ಯಾಕುಲತೆ ರಾಜಕುಮಾರಿಯಾದರೂ ಸುಖವಿರದ ದಿನಗಳನ್ನು ಕಳೆದರು. ಒಟ್ಟಿನಲ್ಲಿ ಕುಂಭರಾಶಿಯ ಚಂದ್ರ ದುರ್ಬಲನಾದಾಗ ಯಾವ ವಿವಿಧ ಕಾರಣಗಳಿಂದ ಸಂಪನ್ನತೆ ತರಬಲ್ಲ, ತಾರದೆಯೇ ಯಾತನೆಯ ಗಂಟು ಒದಗಿಸಿ ಬಿಡಬಲ್ಲ ಎಂಬುದಲಕ್ಕೆ ದೇವೇಗೌಡ ಹಾಗೂ ಡಯಾನ ಜಾತಕಗಳೇ ಸಾಕ್ಷಿ.

ಕುಂಭ ರಾಶಿಯವರ ದಾರ್ಢ್ಯತೆ ಮತ್ತು ಕಲ್ಪನಾಶಕ್ತಿಯ ಪರಾಕಾಷ್ಠತೆ
ಈ ಹಿಂದಿನ ಸೋವಿಯತ್‌ ರಷ್ಯಾ ಒಕ್ಕೂಟದ ಖ್ಯಾತ ಬರಹಗಾರ ಸೋಲೆl ನಿತಿನ್‌ ತನ್ನ ಕ್ರಾಂತಿಯ ಬರಹ ವಿಚಾರಧಾರೆಗಳಿಂದ ಸೋವಿಯತ್‌ ಯೂನಿಯನ್ನಿನ ಕೆಂಗಣ್ಣಿಗೆ ಗುರಿಯಾಗಿದ್ದ ಮಹಾನ್‌ ಹೋರಾಟಗಾರ. ಅಭಿವ್ಯಕ್ತಿ ಸ್ವಾತಂತ್ರ್ಯವೇ ಇರದ ಮನುಷ್ಯನ ಬದುಕು ಒಂದು ವಿಕಾರ ಬದುಕಾಗದೆ ಇರಲು ಹೇಗೆ ಸಾಧ್ಯ? ಎಂಬುದು ಅವನ ನಿಲುವಾಗಿತ್ತು. ಸೋವಿಯತ್‌ ಯೂನಿಯನ್ನಿನ ಪಟ್ಟಭದ್ರ ಜನವಿರೋಧಿ ದಮನಕಾರಕ ಆಡಳಿತದ ವಿರುದ್ಧ ಲೇಖನಿಯನ್ನೇ ಖಡ್ಗವನ್ನಾಗಿಸಿಕೊಂಡಿದ್ದ ನಿತ್ಸಿನ್‌ ಸೋವಿಯತ್‌ ಪ್ರಭುತ್ವವನ್ನು ಖಂಡಿಸಿದ್ದಾತ, ಎದುರು ಹಾಕಿಕೊಂಡಿದ್ದು ಸೋವಿಯತ್‌ ಯೂನಿಯನ್ನಿನ ಕಮ್ಯುನಿಷ್ಟ್ ಸರಕಾರದ ವರಿಷ್ಟ ಸ್ಟಾಲಿನ್‌ನನ್ನು. ಸ್ಟಾಲಿನ್‌ ಮನಸ್ಸು ಮಾಡಿದ್ದರೆ ಇವನನ್ನು ರಾಜಕೀಯ ಕೈದಿಯನ್ನಾಗಿಸಿ ರಾಜದ್ರೋಹದ ಆರೋಪದ ಮೇಲೆ ಮರಣದಂಡನಗೆ ಗುರಿಪಡಿಸಬಹುದಿತ್ತು. ಆದರೆ ಇವನ ಪರ ಜಾಗತಿಕ ಬೆಂಬಲವಿದ್ದುದರಿಂದ ಸ್ಟಾಲಿನ್‌ ಕೇವಲ ಕಾರಾಗೃಹವಾಸ ವಿಧಿಸಿದ್ದ. ಎಂಟು ವರ್ಷಗಳ ದೀರ್ಘ‌ಕಾಲ ನಿರಂತರ ಬಂಧಿಯಾಗಿ ಕಾಲಕಳೆದ. ಆದರೆ ಬುಧದಶಾ ಕಾಲವಾದುದರಿಂದ ಬುಧನಿಂದ ಸಂಪನ್ನತೆ ಪಡೆದಿದ್ದ ಕೇತು ಬಂಧನದಲ್ಲೂ ನಿತ್ಸಿನ್‌ನ ಕೂದಲೂ ಕೊಂಕದಂತೆ ಆರೈಕೆ ನಡೆಸಿದ್ದ. ಬೌದ್ಧಿಕತೆಯ ವಿಚಾರಧಾರೆಯನ್ನು ಕಮ್ಯುನಿಷ್ಟ್ ಸರಕಾರ ನಿತ್ಸಿನ್‌ ಕಸಿಯಲು ಸಾಧ್ಯವಾಗಲಿಲ್ಲ. ಇಲ್ಲಿಯೂ ವಿಪರೀತ ರಾಜಯೋಗದ ಸಿದ್ಧಿ ಪಡೆದ ಕುಂಭರಾಶಿಯ ಚಂದಸ್ರನಿಗೆ ಮರಣಾಧಿಪತಿಯಾದರೂ ಮರಣವನ್ನು ತರಲಾಗಲಿಲ್ಲ. ಅಷ್ಟೇ ಏಕೆ ಕೇವಲ 52ನೇ ವಯಸ್ಸಿನಲ್ಲಿ ಅನುಪಮವಾದ ದಿವ್ಯಶಕ್ತಿಯನ್ನು ಪಡೆದಿದ್ದ ಕೇತುದಶೆ ನೋಬೆಲ್‌ ಪುರಸ್ಕಾರವನ್ನು ಕೂಡಾ ಒದಗಿಸಿಕೊಟ್ಟಿತು. ವಿಪರೀತ ರಾಜಯೋಗಕಾರಕ ಕುಂಭರಾಶಿಯ ಚಂದ್ರನಿಗೆ ಲಗ್ನಾಧಿಪತಿ ಗುರುವಿನ ದೃಷ್ಟಿ ಇದ್ದದ್ದು ಇವನನ್ನು ಉತ್ತಮ ಚಿಂತಕನನ್ನಾಗಿಯು ಬರಹಗಾರನನ್ನಾಗಿಯೂ ರೂಪಿಸಿತು.

ಅನಂತಶಾಸ್ತ್ರೀ 

ಟಾಪ್ ನ್ಯೂಸ್

ಜ.14: ಶಬರಿಮಲೆಯಲ್ಲಿ ಮಕರ ಸಂಕ್ರಮಣ ಪೂಜೆ

ಜ.14: ಶಬರಿಮಲೆಯಲ್ಲಿ ಮಕರ ಸಂಕ್ರಮಣ ಪೂಜೆ

kejriwal-2

Distribution of money ಆರೋಪ: ಬಿಜೆಪಿ ಅಭ್ಯರ್ಥಿ ಸ್ಪರ್ಧೆ ನಿರ್ಬಂಧಕ್ಕೆ ಕೇಜ್ರಿ ಮನವಿ

Vitla ಬೋಳಂತೂರು ಮನೆ ದರೋಡೆ ಪ್ರಕರಣ: ತನಿಖೆ ಚುರುಕು

Vitla ಬೋಳಂತೂರು ಮನೆ ದರೋಡೆ ಪ್ರಕರಣ: ತನಿಖೆ ಚುರುಕು

1-jpc

One Nation, One Election: ಸಂಸದರಿಗೆ ಜೆಪಿಸಿ ಸಭೆಯಲ್ಲಿ 52 ಕೆ.ಜಿ. ತೂಕದ ಸೂಟ್‌ಕೇಸ್‌!

Udupi ಶ್ರೀಕೃಷ್ಣಮಠ: ವಾರ್ಷಿಕ ಸಪ್ತೋತ್ಸವ ಆರಂಭ

Udupi ಶ್ರೀಕೃಷ್ಣಮಠ: ವಾರ್ಷಿಕ ಸಪ್ತೋತ್ಸವ ಆರಂಭ

ಉಡುಪಿಯಲ್ಲಿ ಶ್ರೀಕೃಷ್ಣ ಕಾರಿಡಾರ್‌ ಚಿಂತನೆ

ಉಡುಪಿಯಲ್ಲಿ ಶ್ರೀಕೃಷ್ಣ ಕಾರಿಡಾರ್‌ ಚಿಂತನೆ

Kaup ಶ್ರೀ ಹೊಸ ಮಾರಿಗುಡಿ ಬ್ರಹ್ಮಕಲಶೋತ್ಸವ: ಸಿಎಂ, ಸಚಿವರಿಗೆ ಆಹ್ವಾನKaup ಶ್ರೀ ಹೊಸ ಮಾರಿಗುಡಿ ಬ್ರಹ್ಮಕಲಶೋತ್ಸವ: ಸಿಎಂ, ಸಚಿವರಿಗೆ ಆಹ್ವಾನ

Kaup ಶ್ರೀ ಹೊಸ ಮಾರಿಗುಡಿ ಬ್ರಹ್ಮಕಲಶೋತ್ಸವ: ಸಿಎಂ, ಸಚಿವರಿಗೆ ಆಹ್ವಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Astrology 2024: 2024ರಲ್ಲಿ ಮಿಶ್ರ ಫ‌ಲಗಳೇ ಅಧಿಕ-ರಾಜ್ಯದಲ್ಲೇನಾಗುತ್ತದೆ?

Astrology 2024: 2024ರಲ್ಲಿ ಮಿಶ್ರ ಫ‌ಲಗಳೇ ಅಧಿಕ-ರಾಜ್ಯದಲ್ಲೇನಾಗುತ್ತದೆ?

ಜ್ಯೋತಿಷ್ಯದಲ್ಲಿ ನವಗ್ರಹಕ್ಕಿಂತಲೂ ನಕ್ಷತ್ರಗಳಿಗೆ ಹೆಚ್ಚು ಪ್ರಾಮುಖ್ಯತೆ ಯಾಕೆ ಕೊಡಲಾಗಿದೆ?

ಜ್ಯೋತಿಷ್ಯದಲ್ಲಿ ನವಗ್ರಹಕ್ಕಿಂತಲೂ ನಕ್ಷತ್ರಗಳಿಗೆ ಹೆಚ್ಚು ಪ್ರಾಮುಖ್ಯತೆ ಯಾಕೆ ಕೊಡಲಾಗಿದೆ?

ಶುಭ ವಿಚಾರ ತಿಳಿಯುವ ಗೋಚಾರ ಫಲ ಎಂದರೇನು, ಗುರುದೆಸೆ ಯಾವಾಗ ಆರಂಭವಾಗಲಿದೆ…

ಶುಭ ವಿಚಾರ ತಿಳಿಯುವ ಗೋಚಾರ ಫಲ ಎಂದರೇನು, ಗುರುಬಲ ಯಾವಾಗ ಆರಂಭವಾಗಲಿದೆ…

jjhgfd

ಮಾರಕಾಧಿಪತಿ, ಭಾದಕಾಧಿಪತಿ: ಅಕಾಲಿಕ ಮರಣದ ಬಗ್ಗೆ “ಅಷ್ಠಮ ಸ್ಥಾನ” ಮುನ್ಸೂಚನೆ ಕೊಡುತ್ತದೆಯೇ?

ಗಜಕೇಸರಿ ಯೋಗ… ಈ ಯೋಗ ಹೇಗೆ ಉಂಟಾಗುತ್ತದೆ, ಇದರ ಮಹತ್ವವೇನು?

ಗಜಕೇಸರಿ ಯೋಗ… ಈ ಯೋಗ ಹೇಗೆ ಉಂಟಾಗುತ್ತದೆ, ಇದರ ಮಹತ್ವವೇನು?

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

ಜ.14: ಶಬರಿಮಲೆಯಲ್ಲಿ ಮಕರ ಸಂಕ್ರಮಣ ಪೂಜೆ

ಜ.14: ಶಬರಿಮಲೆಯಲ್ಲಿ ಮಕರ ಸಂಕ್ರಮಣ ಪೂಜೆ

kejriwal-2

Distribution of money ಆರೋಪ: ಬಿಜೆಪಿ ಅಭ್ಯರ್ಥಿ ಸ್ಪರ್ಧೆ ನಿರ್ಬಂಧಕ್ಕೆ ಕೇಜ್ರಿ ಮನವಿ

Vitla ಬೋಳಂತೂರು ಮನೆ ದರೋಡೆ ಪ್ರಕರಣ: ತನಿಖೆ ಚುರುಕು

Vitla ಬೋಳಂತೂರು ಮನೆ ದರೋಡೆ ಪ್ರಕರಣ: ತನಿಖೆ ಚುರುಕು

1-jpc

One Nation, One Election: ಸಂಸದರಿಗೆ ಜೆಪಿಸಿ ಸಭೆಯಲ್ಲಿ 52 ಕೆ.ಜಿ. ತೂಕದ ಸೂಟ್‌ಕೇಸ್‌!

Udupi ಶ್ರೀಕೃಷ್ಣಮಠ: ವಾರ್ಷಿಕ ಸಪ್ತೋತ್ಸವ ಆರಂಭ

Udupi ಶ್ರೀಕೃಷ್ಣಮಠ: ವಾರ್ಷಿಕ ಸಪ್ತೋತ್ಸವ ಆರಂಭ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.