ನಾಮ ನಕ್ಷತ್ರ ಎಷ್ಟು ಸೂಕ್ತ


Team Udayavani, Dec 12, 2015, 5:49 AM IST

10.jpg

ನಮ್ಮಲ್ಲಿ ನಾಮ ನಕ್ಷತ್ರದ ಮೇಲಿಂದ ಒಬ್ಬ ವ್ಯಕ್ತಿಯ ಜೋತಿಷ್ಯವಿಚಾರ, ಭವಿಷ್ಯ ವಿಶ್ಲೇಷಣೆ, ಮಾಡುವ ತಪ್ಪು ಪದ್ಧತಿ ರೂಢಿಯಲ್ಲಿ ಬಂದಿದೆ. ಒಬ್ಬ ವ್ಯಕ್ತಿಯ ನಕ್ಷತ್ರಕ್ಕೂ ಅವನ ಹೆಸರಿಗೂ ಅಥವಾ ಅವರ ಹೆಸರಿಗೂ ಪರಸ್ಪರ ಸಂಬಂಧವೇ ಇಲ್ಲ. ಉದಾಹರಣೆಗೆ ನಮ್ಮ ಪ್ರಧಾನಿ ನರೇಂದ್ರ ಮೋದಿಯವರ ಜಾತಕವನ್ನೇ ಗಮನಿಸಿ. ಅವರದು ಅನುರಾಧಾ ನಕ್ಷತ್ರ.

 ಹಾಗಾಗಿ ಆ ನಕ್ಷತ್ರಕ್ಕೆ ಹೊಂದುವನ  ಅಕ್ಷರದಿಂದಲೇ ಹೆಸರಿಟ್ಟಿದ್ದಾರೆ. ಹೀಗಾಗಿ ಈ ಕ್ರಮ ಸರಿಯಾಗಿರುವುದರಿಂದ ಅವರ ಜನ್ಮನಕ್ಷತ್ರ ಅವರ ಹೆಸರಿನ ಮೇಲಿಂದ ಗುರುತಿಸಿ ತಿಳಿದು ಕೆಲವನ್ನು ವಿಶ್ಲೇಷಿಸಿ ಹೇಳುವುದಕ್ಕೆ ತೊಂದರೆ ಆಗದು. ಆದರೆ ಅದೇ ಮನಮೋಹನ ಸಿಂಗರ ಜಾತಕ ಪರಿಶೀಲಿಸಿ ಆಗ ಅವರ ನಕ್ಷತ್ರ ಆಶ್ಲೇಷಾ ಎನ್ನುವುದು ತಿಳಿಯಲ್ಪಡುತ್ತದೆ. 
ಅವರ ಹೆಸರಾದ ಮನಮೋಹನ ಎಂಬುದನ್ನು ಮಾತ್ರ ಪರಿಗಣಿಸಿದರೆ ಅವರ ನಕ್ಷತ್ರವು ಮಖಾ ನಕ್ಷತ್ರವಾಗುತ್ತದೆ. ಆದರೆ ಅವರದ್ದಾಗಲೀ, ನರೇಂದ್ರ ಮೋದಿಯವರದ್ದಾಗಲೀ ಕ್ರಮವಾಗಿ ಆಶ್ಲೇಷಾ ಮತ್ತು ಅನುರಾಧ ಎಂದು ಪರಿಗಣಿಸಿದಾಗಲೇ ಇಲ್ಲಿಯವರೆಗಿನ ಅವರ ಜೀವನದ ದಾರಿ ಏಳುಬೀಳುಗಳ ಪರಿ ಇತ್ಯಾದಿಗಳನ್ನು ವಿಶ್ಲೇಷಿಸಲು ಸಾಧ್ಯ. ಚಂದ್ರನೂ, ಸೂರ್ಯನೂ ಭಾರತೀಯ ಜೋತಿಷ್ಯಶಾಸ್ತ್ರದ ಆಧಾರಸ್ತಂಭಗಳು. ಟೈಮ್‌ ಮತ್ತು ಸ್ಪೇಸ್‌ ಬಗ್ಗೆ ವಿಜಾnನ ಇಂದು ಹೇಳತೊಡಗಿದೆ. ಅದು ಇಂದಿನ ಜಾnನ ಆದರೆ ಟೈಮ್‌ ಮತ್ತು ಸ್ಪೇಸ್‌ ಬಗ್ಗೆ ನಮ್ಮ ಭಾರತೀಯ ಜೋತಿಷಿಗಳು ಸಾವಿರಾರು ವರ್ಷಗಳ ಹಿಂದೆಯೇ ಸಾಕಷ್ಟು ತಿಳಿಸಿದ್ದಾರೆ. ಆದರಿವರೂ ಭೂಮಿಯನ್ನು ನಮ್ಮ ಭಾರತೀಯ ಜೋತಿಷ್ಯ ವಿಶ್ವದ ಕೇಂದ್ರ ಎಂದು ತಿಳಿಸಿದ್ದರ ಕುರಿತು ನಮ್ಮ ಅನೇಕ ಆಧುನಿಕ ತಜ್ಞರು ಗಹಗಸಿ ನಗುತ್ತಾರೆ. ಭಾರತೀಯ ಜ್ಯೋತಿಷಿಗಳು ಎಂದರೆ ನಮ್ಮ ಈಗಿನ ಜೋತಿಷಿಗಳನ್ನು ಗ್ರಹಿಸಿಕೊಂಡು ನಾವು ವ್ಯಾಖ್ಯಾನಿಸಬಾರದು. ತಾರ್ಕಿಕರು ವಿಜಾnನಿಗಳು ಸಂಶೋಧಕರು ಮುಖ್ಯವಾಗಿ ಋಷಿಮುನಿಗಳು ಎಂಬುದಾಗಿ ನಾವು ತಿಳಿಯಬೇಕು. 

ಇದೇ ಅಂಕಣದ ಮುಂದಿನ ಕಂತುಗಳಲ್ಲಿ ಭಾರತೀಯ ಜೋತಿಷ್ಯ ಶಾಸ್ತ್ರ ಟೈಮ್‌ ಮತ್ತು ಸ್ಪೇಸ್‌ ಅನ್ನು ಗ್ರಹಿಸಿದ ವಿಚಾರದ ಕುರಿತು ಚರ್ಚಿಸೋಣ. ನಮ್ಮ ಗೋಚರಕ್ಕೆ ಬಾರದ ರಾಹುಕೇತುಗಳು ಇಲ್ಲಿ ಮುಖ್ಯವಾಗುತ್ತದೆ. ನಮಗೆ ಗೋಚರಿಸುವ ಭೂಮಿ ನಮಗೆ ಕೇಂದ್ರವಾಗಿದೆ. ಭೂಮಿಯ ಮೇಲೆ ಪರಿಣಾಮ ಬೀರುವ ಗ್ರಹಕಾಯಗಳನ್ನು  ಮಾತ್ರ ನವಗ್ರಹಗಳು ಎಂದು ಭಾವಿಸಿದ್ದಾರೆ. ಎಷ್ಟೋ ದೂರದಲ್ಲಿರುವ ಸೂರ್ಯನ ಪ್ರಭಾವ ತೀರಾ ಹತ್ತಿರದಲ್ಲಿರುವ ಕಾರಣಕ್ಕಾಗಿ ಬೆಳಕಿನೊಂದಿಗೆ ಚಂದ್ರನ ಪ್ರಭಾವ, ಸೂರ್ಯ ಮತ್ತು ಚಂದ್ರರು ಗ್ರಹಗಳಿಗಾಗಿಯೇ ವಿಂಗಡಣೆ ಹೊಂದಿದ್ದಾರೆ. ಕೇವಲ ಒಂದೇ ಲೋಟದ ಬಿಸಿ ಎಷ್ಟೋ ದೂರದಲ್ಲಿರುವ ಕುದಿಸಿದ ಬಾಂಡಲೆಗಿಂತ ನಮಗೆ ಹೆಚ್ಚು ಬಿಸಿ ಎನಿಸಲು ಅದರ ಸಾಮಿಪ್ಯವೇ ಕಾರಣ. ಹಾಗೆ ಚಂದ್ರ ಸಮೀಪದಲ್ಲಿದ್ದು ಪ್ರಭಾಸುತ್ತಾ ಆಕರ್ಷಣೆಯನ್ನು ಬೀರುವ ಶಕ್ತಿ ಹೊಂದಿರುವುದರಿಂದ ನಮ್ಮವರು ಚಂದ್ರನನ್ನೂ ಗ್ರಹ ಎಂದೇ ಪರಿಗಣಿಸಿದರು. ಸೂರ್ಯನನ್ನು ಹಾಗೆಯೇ ಪರಿಗಣಿಸಿದರು.

ಚಂದ್ರ ಮತ್ತು ಜೋತಿಷ್ಯ

 ಭೂಮಿಗೆ ಸಮೀಪವಿರುವ ಕಾರಣಕ್ಕಾಗಿ ಚಂದ್ರನು ಭಾರತೀಯ ಜೋತಿಷ್ಯ ಶಾಸ್ತ್ರದಲ್ಲಿ ಮುಖ್ಯನಾಗಿದ್ದಾನೆ ಎಂಬುದೊಂದೇ ಸೋಜಿಗದ ವಿಚಾರ. ಮುಖ್ಯವಾಗಿ ಚಂದ್ರನು ರಾಜಯೋಗಗಗಳ ವಿಚಾರದಲ್ಲಿ ಪ್ರಧಾನ ಭೂಮಿಕೆಯನ್ನು ನಿರ್ವಹಿಸುತ್ತಾನೆ. ಚಂದ್ರನ ಬೆಳಕು ಪ್ರಖರವಾಗಿದ್ದಷ್ಟೂ ಇತರೇ ರೀತಿಯಲ್ಲಿ ದುಷ್ಟ ಸಂಯೋಜನೆಯಲ್ಲಿ ಇಲ್ಲದಿದ್ದಷ್ಟೂ ಉತ್ತಮ ಮತ್ತು ಸಾತ್ವಿಕ ಧೈರ್ಯ ಸ್ಥೈರ್ಯಗಳ ವಿಚಾರದಲ್ಲಿ ಶಕ್ತಿ ಒದಗಿಸುತ್ತಾನೆ. 
ಸೂರ್ಯನೂ ಕೂಡಾ ತನ್ನ ಸರ್ವಾಧಿಕ್ಯ ಬೆಳಕಿನ ಕಾರಣದಿಂದ ಇತರ ಗ್ರಹಗಳನ್ನು ಸಂವೇದಿಸುವ ಬುಧನೊಂದಿಗೆ ಬೌದ್ಧಿಕತೆಯನ್ನು, ಸಾರ್ಥಕವಾದ ಸಂಜೀವಿನಿಯಾಗಿಸುವ ಅವಕಾಶ ಒದಗಿಸಿಕೊಡುತ್ತಾನೆ. ಮಾನಸಿಕವಾದ ಸ್ಥೈರ್ಯ ಬೌದ್ಧಿಕವಾದ ಅನುಪಮತೆ ಒಬ್ಬ ವ್ಯಕ್ತಿಗೆ ಒದಗಿತು ಎಂದಾದರೆ ರಾಜಯೋಗ ಹಾಗೂ ದಾಡ್ಯìತೆಗೆ ಹೆಚ್ಚೇ ಆಗುವ ದಿವ್ಯ ಸಿದ್ಧಿ ದೊರೆಯುತ್ತದೆ. ಮಾನಸಿಕ ಸ್ಥೈರ್ಯ ಚಾಣಾಕ್ಷತೆಗಳ ಕೊರೆತೆಗಳಾಗದಂತೆ ಸೂರ್ಯ ಚಂದ್ರರು ಉಳಿದ ಗ್ರಹಗಳ ಜೊತೆಗೆ ಸಮತೋಲನ ಕಂಡುಕೊಂಡಾಗ ಸಾಧ್ಯವಾಗುತ್ತದೆ.

ನಕ್ಷತ್ರ ಮತ್ತು ಚಂದ್ರ

 ನಾವು ಹುಟ್ಟಿದಾಗ ಚಂದ್ರನು ಯಾವ ರಾಶಿಯಲ್ಲಿರುತ್ತಾನೋ ಅದು ನಮ್ಮ ಜನ್ಮರಾಶಿಯಾಗುತ್ತದೆ. ಪ್ರತಿರಾಶಿಯಲ್ಲೂ ಮೂರು ನಕ್ಷತ್ರಗಳ ಗುಂಪು ತಮ್ಮ ಪ್ರಭಾವವನ್ನು ಈ ರಾಶಿಯ ಮೇಲೆ ಬೀರುತ್ತದೆ. ಅವು ಒಂದೇ ನಕ್ಷತ್ರದ ಪೂರ್ತಿಭಾಗವನ್ನು ಒಂದೊಂದು ನಕ್ಷತ್ರದ ಬೇರೆ ಬೇರೆ ಭಾಗಗಳನ್ನು ಹೊಂದಿರಬಹುದು. ಈ ನಕ್ಷತ್ರಗಳು ಆಕಾಶದಲ್ಲಿ ಅಗಣಿತ ತಾರಾಗಣಗಳಾಗಿರಬಹುದು. ಆದರೆ ಪೃಥ್ವಿಯ ಮಟ್ಟಿಗೆ ಕೇವಲ ಪ್ರಭಾವಳಿ ಒದಗಿಸಬಲ್ಲ ಶಕ್ತಿ ಪಡೆದಿರುತ್ತದೆ. ಒಟ್ಟೂ ಸೂರ್ಯ, ಚಂದ್ರ ಇತ್ಯಾದಿ ಒಂಭತ್ತು ಗ್ರಹಗಳು (ಮೂರು ನಕ್ಷತ್ರಗಳಿಗೆ ಒಂದು ಗ್ರಹ)ಈ 27 ನಕ್ಷತ್ರಗಳನ್ನು ತಮ್ಮ ಅಂಕುಶದಲ್ಲಿಟ್ಟು ಆಳ್ವಿಕೆ ನಡೆಸುತ್ತಿದೆ. ಸೂರ್ಯ,ಚಂದ್ರರಿಗೆ ತಲಾ ಒಂದೊಂದು ರಾಶಿಯ ಅಧಿಪತ್ಯ ಮುಖ್ಯ ಗ್ರಹಗಳಾದ ಮಂಗಳ, ಬುಧ, ಗುರು, ಶುಕ್ರ, ಶನಿಗಳಿಗೆ ಎರಡೆರಡು ರಾಶಿಗಳ ಅಧಿಪತ್ಯ. ರಾಹುಕೇತುಗಳಿಗೆ ಮಿಕ್ಕುಳಿದ ವಿಶ್ವವೇ ಕೈವಶ. ನಕ್ಷತ್ರಗಳ ಅಧಿಪತ್ಯಗಳಲ್ಲಿ ಇವರಿಗೂ ಮೂರು ನಕ್ಷತ್ರಗಳ ಅಧಿಪತ್ಯವಿದೆ. ಚಂದ್ರನು ಯಾವ ನಕ್ಷತ್ರದಲ್ಲಿರುತ್ತಾನೋ ಅದು ನಮ್ಮ ಜನ್ಮ ನಕ್ಷತ್ರ. ಈ ರೀತಿಯ ನಕ್ಷತ್ರಕ್ಕೆ ಅನುಗುಣವಾಗಿ ನಮ್ಮ ಹೆಸರುಗಳು ಇಡಬೇಕು ಎಂಬುದೊಂದು ನಿಯಮವಿತ್ತು. ಹೀಗಾಗಿ ನಮ್ಮ ಹೆಸರಿನ ಮೇಲಿಂದ ನಕ್ಷತ್ರ ತಿಳಿಯಬಹುದಿತ್ತು.

ಆಧುನಿಕತೆ ಮತ್ತು ಹೆಸರು

 ಈ ಆಧುನಿಕ ಕಾಲ. ಈಗ ಸುಮಾರು ಶತಮಾನವೇ ಕಳೆದಿರಬಹುದು. ಈಗ ನಕ್ಷತ್ರದ ಮೇಲಿಂದ ಹೆಸರಿಡುವ ಕ್ರಮ ಇಲ್ಲ. ಗವಾಸ್ಕರ್‌ ತಮ್ಮನ್ನು ಸಂವೇದಿಸಿದ ರೋಹನ್‌ ಕನ್ಹಾಯ್‌ ಎಂಬ ಪ್ರಖ್ಯಾತ ಕ್ರಿಕೆಟ್‌ ದಾಂಢಿಗನ ಹೆಸರನ್ನು ತಮ್ಮ ಮಗನಿಗೆ ಇಟ್ಟಿದ್ದರು.(ಈ ರೋಹನ್‌  ವೆಸ್ಟ್‌ ಇಂಡೀಸ್‌ ತಂಡದಲ್ಲಿದ್ದು ಪ್ರಪಂಚದ ಪ್ರಖ್ಯಾತ ಬೌಲರ್‌ಗಳನ್ನು ಮನಬಂದಂತೆ ಚಚ್ಚಿದ ಕಲಾತ್ಮಕವಾದ ಬ್ಯಾಟಿಂಗ್‌ ಪ್ರತಿಭೆ ಇವರದ್ದಾಗಿತ್ತು. ಇವರ ಪೂರ್ವಿಕರು ಭಾರತೀಯರಾಗಿದ್ದರು) ಇಂಥ ಸಂದರ್ಭದಲ್ಲಿ ಗವಾಸ್ಕರ್‌ ಮಗನಾದ ರೋಹನ್‌ ಗವಾಸ್ಕರ್‌ ಅವರ ನಕ್ಷತ್ರ ಸ್ವಾತಿ ನಕ್ಷತ್ರ ಎಂದು ತಿಳಿದುಕೊಂಡರೆ ತಪ್ಪಾಗುತ್ತದೆ. ನಾಮ ನಕ್ಷತ್ರ ಎಂದು ಸ್ವಾತಿಯನ್ನು ಪರಿಗಣಿಸಿದರೆ ಪ್ರಯೋಜನವಿಲ್ಲ. ಸಚಿನ್‌ ತೆಂಡೂಲ್ಕರ್‌ ಸೆಂಚುರಿ ಬಾರಿಸಿದ ಮರುದಿನ ಹುಟ್ಟಿದ ತಮ್ಮ ಮಕ್ಕಳಿಗೆ ಸಚಿನ್‌ ಎಂದು ಹೆಸರಿಡುವುದು ಇತ್ಯಾದಿ ತುಂಬಾ ಉದಾಹರಣೆಗಳು. ಸಿನಿಮಾ ನಟನಟಿಯರ ಹೆಸರುಗಳು, ದೇವರುಗಳ ಹೆಸರುಗಳು ಇನ್ನೇನೋ ಭಾವನಾತ್ಮಕವಾಗಿರುವ ಸಂದರ್ಭಗಳಲ್ಲಿ ಹೆಸರು ಇಡುವುದು ಜಾಸ್ತಿ ಆಯಿತು. ಹೆಸರಿಟ್ಟಿದ್ದ ಎಲ್ಲರಿಗೂ ತಿಳಿದ ವಿಚಾರವೇ. ಇಂಥ ಹೆಸರಿಟ್ಟದ್ದು ಜನ್ಮ ನಕ್ಷತ್ರಗಳಿಗೂ 
ಸಂಬಂಧವಿಲ್ಲ. ಹುಟ್ಟಿದ ಮಕ್ಕಳೆಲ್ಲ ಸತ್ತಾಗ ನಂತರ ಹುಟ್ಟಿದ ಮಗನಿಗೆ ಗುಂಡ ಎಂಬ ಹೆಸರಿಡುವ ಪದ್ಧತಿಯೂ ಇತ್ತು. ಆದರೆ ಇಲ್ಲಿ ಗುಂಡನ ಜನ್ಮ ನಕ್ಷತ್ರ ದನಿಷ್ಠಾ ನಕ್ಷತ್ರವಾಗುವುದಿಲ್ಲ. ಅಂತೆಯೇ ಜನ್ಮ ನಕ್ಷತ್ರ ತಿಳಿಯಿತು ಎಂದ ಮಾತ್ರಕ್ಕೆ ಇಡೀ ಜೀವನದ ಸಂದರ್ಭ ಅವನನ್ನು ವಿಶ್ಲೇಷಿಸಿ ಹೇಳುವುದು ಕೂಡಾ ಸಾಧ್ಯವಾಗದು. ಇಡೀ ಜನ್ಮ ಕುಂಡಲಿಯೇ ಮುಖ್ಯ.

ಜನ್ಮ ಕುಂಡಲಿ ಮತ್ತು ಲಗ್ನಭಾವ

 ಜನ್ಮರಾಶಿಗಿಂತ ಕುಂಡಲಿಯಲ್ಲಿ ಜನ್ಮ ಲಗ್ನ ಎಂಬ ಭಾವ ಮುಖ್ಯ. ಇದನ್ನು ಲಗ್ನ ಎಂಬುದಾಗಿ ಸಂಬೋಧಿಸುತ್ತಾರೆ. ಈ ಲಗ್ನ ಎಂದರೆ ಬಹು ವಿಸ್ತಾರವಾದ ಅರ್ಥ ಹೊರಡುತ್ತದೆ. ಸೂಕ್ಷ್ಮವಾಗಿ ಹೇಳಬಹುದಾದರೆ ನಾವು ಹುಟ್ಟಿದ ವೇಳೆಯ ಒಂದು ಬಿಂದುವೇ ಲಗ್ನ. ನಮಗೆ ಎಲ್ಲಾ ಸಂದರ್ಭಗಳಲ್ಲೂ ಒಳಿತೇ ತರಬೇಕೆಂಬುದು ನಿಯಮವಲ್ಲ. ರಾಶಿ ಅಧಿಪತಿಯೂ ಅಷ್ಟೇ. ಆದರೆ ಲಗ್ನ ಮತ್ತು ಲಗ್ನಾಧಿಪತಿಗಳು ನಮಗೆ ಸರ್ವತ್ರ ಒಳಿತಿಗೆ ಕಾರಣವಾಗುತ್ತದೆ. ನಾ ಕೆಟ್ಟದ್ದಕ್ಕೆ ಇವು ನಾಂದಿ ಇಡಲಾರವು. ಇವು ದುರ್ಬಲವಾಗಿ ಇದ್ದುದಾದರೆ ದುರ್ಬಲಗೊಳ್ಳುವ ಸಂದರ್ಭ ಒದಗಿ ಬಂದಿದ್ದರೆ ಅದು ದುರ್ದೈವವೇ ಆಗುತ್ತದೆ.

ನಾಮ ನಕ್ಷತ್ರ ನಮ್ಮ ಕುರಿತಾದ ಸೂಕ್ತ ನಕ್ಷತ್ರ ಅಲ್ಲ

 ಈ ಮೇಲಿನ ಎಲ್ಲಾ ವಿವರಗಳಿಂದ ನಾವು ತಿಳಿಯಲೇ ಬೇಕಾದದ್ದು ನಮ್ಮ ಹೆಸರು ನಕ್ಷತ್ರದ ಆಧಾರದ ಮೇಲೆ ಇಡಲ್ಪಟ್ಟಿದ್ದರೆ ನಾಮ ನಕ್ಷತ್ರ ತಿಳಿಯುವುದು ಸೂಕ್ತ.  ಇಲ್ಲದಿದ್ದರೆ ಇದು ಅಷ್ಟೊಂದು ಅವಶ್ಯಕತೆಯಿಲ್ಲ. ದೇವರ ಮೇಲೆ ಭಾರ ಹಾಕಿ ನಮ್ಮ ಪ್ರಾರ್ಥನೆ ಸಲ್ಲಿಸುವುದು. ಕೊನೆಗೂ ಎಲ್ಲರಿಗಿಂತ ಸೃಷ್ಟಿಕರ್ತನೇ ದೊಡ್ಡ ಶಕ್ತಿಯಾಗಿದ್ದಾನೆ. ನಮ್ಮ ಸೂರ್ಯ ಮಂಡಲಕ್ಕೆ ಅವನೇ ದೊಡ್ಡ ಶಕ್ತಿ. ಅವನೇ ದೇವರು. ಇದಕ್ಕಾಗಿಯೇ ಬುದ್ಧಿಯನ್ನು ಪ್ರಚೋದಿಸುವ ಜಾnನಿಯನ್ನಾಗಿ ಮಾಡು ಎಂದು ಪ್ರಾರ್ಥಿಸುವುದು. ಜಾnನಿ ವಿದ್ವಾಂಸನಾಗುತ್ತಾನೆ. 

ಅನಂತ ಶಾಸ್ತ್ರೀ 

ಟಾಪ್ ನ್ಯೂಸ್

1-aaccc

PoK ಪ್ರದೇಶದಲ್ಲಿ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳು: ಬಿಸಿಸಿಐ ನಿಂದ ತೀವ್ರ ಖಂಡನೆ

Ashok-1

Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್‌.ಅಶೋಕ್‌

HDK (4)

50 cr for 50 Cong MLAs ; ಎಸ್ ಐಟಿ ತನಿಖೆಗೆ ಎಚ್.ಡಿ.ಕುಮಾರಸ್ವಾಮಿ ಒತ್ತಾಯ

1-kangu

‘Kanguva’; ಮೊದಲ ದಿನವೇ 58.62 ಕೋಟಿ ರೂ. ಬಾಚಿದ ಕಂಗುವ

Ajit Pawar

BJP;’ಬಟೆಂಗೆ ತೊ ಕಟೆಂಗೆ’ ಹೇಳಿಕೆಗೆ ಬೆಂಬಲವಿಲ್ಲ ಎಂದ ಅಜಿತ್ ಪವಾರ್

01

Catacombs: ಇದು ಎಲುಬುಗಳೇ ತುಂಬಿಕೊಂಡ ಸುರಂಗ; ಸುಂದರ ದೇಶದ ಕರಾಳ ಇತಿಹಾಸ

DVG-Rail

Save Life: ಆಯತಪ್ಪಿ ಬಿದ್ದು ರೈಲಿನಡಿ ಸಿಲುಕುತ್ತಿದ್ದ ಪ್ರಯಾಣಿಕನ ಕಾಪಾಡಿದ ಹೋಂಗಾರ್ಡ್‌!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Astrology 2024: 2024ರಲ್ಲಿ ಮಿಶ್ರ ಫ‌ಲಗಳೇ ಅಧಿಕ-ರಾಜ್ಯದಲ್ಲೇನಾಗುತ್ತದೆ?

Astrology 2024: 2024ರಲ್ಲಿ ಮಿಶ್ರ ಫ‌ಲಗಳೇ ಅಧಿಕ-ರಾಜ್ಯದಲ್ಲೇನಾಗುತ್ತದೆ?

ಜ್ಯೋತಿಷ್ಯದಲ್ಲಿ ನವಗ್ರಹಕ್ಕಿಂತಲೂ ನಕ್ಷತ್ರಗಳಿಗೆ ಹೆಚ್ಚು ಪ್ರಾಮುಖ್ಯತೆ ಯಾಕೆ ಕೊಡಲಾಗಿದೆ?

ಜ್ಯೋತಿಷ್ಯದಲ್ಲಿ ನವಗ್ರಹಕ್ಕಿಂತಲೂ ನಕ್ಷತ್ರಗಳಿಗೆ ಹೆಚ್ಚು ಪ್ರಾಮುಖ್ಯತೆ ಯಾಕೆ ಕೊಡಲಾಗಿದೆ?

ಶುಭ ವಿಚಾರ ತಿಳಿಯುವ ಗೋಚಾರ ಫಲ ಎಂದರೇನು, ಗುರುದೆಸೆ ಯಾವಾಗ ಆರಂಭವಾಗಲಿದೆ…

ಶುಭ ವಿಚಾರ ತಿಳಿಯುವ ಗೋಚಾರ ಫಲ ಎಂದರೇನು, ಗುರುಬಲ ಯಾವಾಗ ಆರಂಭವಾಗಲಿದೆ…

jjhgfd

ಮಾರಕಾಧಿಪತಿ, ಭಾದಕಾಧಿಪತಿ: ಅಕಾಲಿಕ ಮರಣದ ಬಗ್ಗೆ “ಅಷ್ಠಮ ಸ್ಥಾನ” ಮುನ್ಸೂಚನೆ ಕೊಡುತ್ತದೆಯೇ?

ಗಜಕೇಸರಿ ಯೋಗ… ಈ ಯೋಗ ಹೇಗೆ ಉಂಟಾಗುತ್ತದೆ, ಇದರ ಮಹತ್ವವೇನು?

ಗಜಕೇಸರಿ ಯೋಗ… ಈ ಯೋಗ ಹೇಗೆ ಉಂಟಾಗುತ್ತದೆ, ಇದರ ಮಹತ್ವವೇನು?

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

5

Karkala: ದ್ವೇಷ ಭಾವನೆ ಕೆರಳಿಸುವ ಆರೋಪ; ದೂರು ದಾಖಲು

1-aaccc

PoK ಪ್ರದೇಶದಲ್ಲಿ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳು: ಬಿಸಿಸಿಐ ನಿಂದ ತೀವ್ರ ಖಂಡನೆ

Ashok-1

Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್‌.ಅಶೋಕ್‌

HDK (4)

50 cr for 50 Cong MLAs ; ಎಸ್ ಐಟಿ ತನಿಖೆಗೆ ಎಚ್.ಡಿ.ಕುಮಾರಸ್ವಾಮಿ ಒತ್ತಾಯ

1-kangu

‘Kanguva’; ಮೊದಲ ದಿನವೇ 58.62 ಕೋಟಿ ರೂ. ಬಾಚಿದ ಕಂಗುವ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.