​ಜಾತಕ ಕುಂಡಲಿ ಮತ್ತು ಮಾತಿನ ನೈಪುಣ್ಯತೆ


Team Udayavani, Jun 10, 2016, 9:35 PM IST

5.jpg

ಭಾರತೀಯ ಜೋತಿಷ್ಯದಲ್ಲಿ ಒಬ್ಬ ವ್ಯಕ್ತಿಯ ಜನ್ಮ ಕುಂಡಲಿಯ ಮೇಲಿಂದ ಆ ವ್ಯಕ್ತಿಯ ಮಾತಿನ ವೈಖರಿಯನ್ನು ಮಾತಿನಿಂದಾಗಿ ತನ್ನ ಜೀವನದ ಯಶಸ್ಸು ಅಥವಾ ಅಪಯಶಸ್ಸನ್ನು ನಿಷ್ಕರ್ಷೆ ಮಾಡಬಹುದು. ಮಾತು ಮಾಣಿಕ್ಯ. ಮಾತೇ ಸಕಲ ಸಂಪದಕ್ಕೆ ದಾರಿ ಎಂದು ತಿಳಿದವರು ಹೇಳುತ್ತಾರೆ. ಬಸವಣ್ಣನವರು ಕೂಡಾ ತಮ್ಮ ವಚನದಲ್ಲಿ ಮಾತಿನ ವೈಶಿಷ್ಟÂವನ್ನು ಬಣ್ಣಿಸುತ್ತ ಮಾತು ಮುತ್ತಿನ ಹಾರದಂತಿರಬೇಕು, ಮಾತು ಸ್ಫಟಿಕದ ಶಲಾಕೆಯಂತಿರಬೇಕು ಎನ್ನುತ್ತಾರೆ. ಮಾತಿನ ಸೊಗಸಿಗೆ ಕಲ್ಲಾಗಿರುವ ಶಿವಲಿಂಗ ಕೂಡಾ ಅಹುದಹುದು ಎನ್ನಬೇಕು ಎನ್ನುತ್ತಾರೆ. ಇದೆಲ್ಲ ಸರಿ ಆದೆ, ಬಲ್ಲವರು ಮಾತೇ ಜೋರ್ತಿಲಿಂಗ ಎಂದು ಹೇಳುವುದು ಒಂದೆಡೆಯಾದರೆ ಮಾತು ಬೆಳ್ಳಿà ಮೌನ ಬಂಗಾರ ಎಂಬ ಬಲ್ಲವರ ಇನ್ನೊಂದು ಅಭಿಪ್ರಾಯ ಕೂಡಾ ಮಾತಿನ ಬೆರಗಿಗಾಗಿ ಇದೆ. ಒಟ್ಟಿನಲ್ಲಿ ತಿಳಿದವರ ಮಾತುಗಳು ಮಾತಿನ ಬಗೆಗೆ ಹೀಗೆಲ್ಲಾ ಬಂತೆಂಬುದು ಒಂದೆಡೆ. ಜನಪದರು ಮಾತಿನ ಬಗೆಗೆ ಇನ್ನೊಂದು ನಾಣ್ಣುಡಿ ಅದ್ಭುತವಾಗಿದೆ, ಮಾತು ಮನೆ ಕೆಡಿಸಿತು ತೂತು ಒಲೆ ಕೆಡಿಸಿತು. ನಿಜ ಒಂದೇ ಒಂದು ಮಾತಿನಿಂದ ಮನೆತನಕ್ಕೆ ಮನೆತನವೇ ತಾಪತ್ರಯಕ್ಕೆ ಬೀಳುವುದರ ಜೊತೆ ಕುಟುಂಬದ ಒಬ್ಬ ವ್ಯಕ್ತಿಯ ಮಾತಿಂದ ಮನೆ ಇಬ್ಭಾಗವಾಗಿ ಕುಟುಂಬದ ಮಂದಿ ಎಲ್ಲ ಬೇರಾಗುವ ದುರಂತ ನಾವು ಕಂಡಿದ್ದೇವೆ. ಇದು ನಿಜಕ್ಕೂ ದುರಂತವೇ ಸರಿ.

ಜನ್ಮ ಕುಂಡಲಿಯಲ್ಲಿ ಎರಡನೇ ಮನೆ ಮಾತಿನ ಮನೆ

ನಿಜ, ಜನ್ಮ ಕುಂಡಲಿಯ ಎರಡನೇ ಮನೆ ಮಾತನ್ನು ಆ ವ್ಯಕ್ತಿಯ ಕುರಿತಾಗಿ ಪ್ರತಿಫ‌ಲಿಸುತ್ತದೆ. ಇದು ಕುಂಡಲಿಯಲ್ಲಿ ಮಾರಕ ಸ್ಥಾನವೂ ಹೌದು. ಈ ಮನೆಯ ಅಧಿಪತಿ ಮಾರಕನೂ ಆಗಿರುತ್ತಾನೆ. ಎರಡನೇ ಮನೆಯಲ್ಲಿರುವ ಗ್ರಹ ಕೂಡಾ ಮಾರಕ ಅಂಶಗಳನ್ನು ಪಡೆದುಬಿಡುತ್ತದೆ. ಎರಡನೇ ಮನೆಯ ಅಧಿಪತ್ಯವಾಗಲಿ, ಎರಡನೇ ಮನೆಯಲ್ಲಿರುವ ಗ್ರಹವೇ ಇರಲಿ, ಶುಭ ಗ್ರಹಗಳಾದರೂ ತಮ್ಮ ಅಂತರಂಗದಲ್ಲಿ ಮಾರಕ ಸ್ಪಂದನಗಳನ್ನು ಹೊಂದಿರುತ್ತದೆ. ಹೀಗಾಗಿ ಮೇಧಾ ಶಕ್ತಿ ಮತ್ತು ಪ್ರಸಂಗಾವಧಾನಗಳು ಮಾತಿನ ವಿಷಯದಲ್ಲಿ ಈ ಗ್ರಹಗಳ ಮೂಲಕ ವ್ಯಕ್ತಿಯೊಬ್ಬನಿಗೆ ಆತನ ಅಥವಾ ಅವಳ ಜಾತಕದಲ್ಲಿ ಒದಗಿ ಬಂದರೆ ಮಾತುಗಳು ಬಂಗಾರವಾಗುತ್ತದೆ.

ಹೇಗೆ ಅತಿಯಾದ ಮಾತು ಕೇವಲ ತಪ್ಪೋ ಅಷ್ಟೇ ಅಪಾಯಕಾರಿಯಾದದ್ದು. ಪೂರ್ತಿ ಮಾತನಾಡಲು ಬಾರದೆ ಚಡಪಡಿಸುವ ಮಾತೇ ಯುಕ್ತ ಸಂದರ್ಭದಲ್ಲಿ ಹೊರಡದೆ ಮೂಕರಾಗಿ ಮಹತ್ವದ್ದೊಂದನ್ನು ಚರ್ಚೆ ಹಾಗೂ ಕಾಗದ ಪತ್ರಗಳ ಒಡಂಬಡಿಕೆಯ ಸಂದರ್ಭದಲ್ಲಿ ಕಳಕೊಳ್ಳುವ ಹಾಗೂ ಹಳಹಳಿಸುವ ದುರ್ಭರ ಸ್ಥಿತಿಗೆ ಸಿಲುಕಿಕೊಳ್ಳುವುದೂ ತಪ್ಪು. ಮಾತಿನ ಸ್ಥಾನದ ಹಿರಿತನ ತಾಯಿ ಶ್ರೀ ಸರಸ್ವತಿಯದ್ದು. ಆದರೆ ದುರ್ದೈವವಶಾತ್‌ ಈ ಮಾತಿನ ಸ್ಥಾನವಾದ ಎರಡನೇ ಮನೆಗೆ ಜಾತಕ ಕುಂಡಲಿಯಲ್ಲಿ ಸರಿಯಾದ ಶುಭಗ್ರಹಗಳ ಅನುಪಮ ಸುಹಾಸಕರತೆ ಸಿಗದಿರುವುದು. ದುಷ್ಟ ಗ್ರಹಗಳು ತಮ್ಮ ಅಧಿಪತ್ಯವನ್ನು ಮಾತಿನ ವಿಷಯವನ್ನು ಹೊಂದಿರುವುದು. ದುಷ್ಟ ಗ್ರಹಗಳ ಸಂಸರ್ಗ ದೃಷ್ಟಿಗಳಿಂದ ಮಾತಿನ ಮನೆ ಮಾತಿನ ಮನೆಯ ಅಧಿಪತಿ ಭ್ರಷ್ಟಗೊಳ್ಳುವುದು ಸಾಮಾನ್ಯ. ಆದರೆ ಎಲ್ಲವೂ ಒಳಿತೆನಿಸುವ ಮಟ್ಟದಲ್ಲಿದ್ದಾಗ ಮಾತು ಒಬ್ಬನಿಗೋ ಒಬ್ಬಳಿಗೋ ವರವಾಗಿ ಪರಿಣಮಿಸುತ್ತದೆ.

ಮಾತಿನ ಮಲ್ಲ ವಿನ್‌ಸ್ಟನ್‌ ಚರ್ಚಿಲ್‌

ಭಾರತೀಯರಿಗೆ ಸ್ವಾತಂತ್ರÂ ನೀಡಿದರೆ ಅದು ಸ್ವಾರ್ಥ, ಲಂಪಟ, ರಕ್ತ ಹೀರುವ ರಾಕ್ಷಸರ ಕೈಗೆ ದೇಶ ಕೊಟ್ಟು, ನರಳುವಂತಾಗುತ್ತದೆ ಎಂದು ಚರ್ಚಿಲ್‌ ಗುಡುಗಿ ನುಡಿದು ತನ್ನ ದೇಶದ ಸಂಸತ್ತಿನಲ್ಲಿ ಭಾರತದ ಸ್ವಾತಂತ್ರÂದ ವಿಚಾರದಲ್ಲಿ ತನ್ನ ಪ್ರತಿರೋಧ ಸೂಚಿಸಿ ಭಾಷಣ ಮಾಡಿದ ವ್ಯಕ್ತಿ. ಭಾರತೀಯರ ಕಿವಿಗಿದು ಕಾದ ಸೀಸದಂತಿದ್ದರೂ ಇಂದಿನ ಪರಿಸ್ಥಿತಿ ಗಮನಿಸಿದಾಗ ಚರ್ಚಿಲ್‌ ಮಾತು ಸತ್ಯವಾಯ್ತಲ್ಲ ಎಂದು ಅನಿಸದಿರದು. ಹಿಟ್ಲರ್‌ ದಾಳಿಯಿಂದಾಗಿ ಬ್ರಿಟನ್‌ ತತ್ತರಿಸಿ ಕಂಗಾಲಾದರೂ ಪ್ರಧಾನಿಯಾಗಿ ದೇಶದ ಜನರಲ್ಲಿ ಎಂದೂ ಸೋಲುತ್ತಿರುವ ದೇಶ ಬ್ರಿಟನ್‌ ಅಲ್ಲ ಎಂಬ ತುಂಬು ಧೈರ್ಯ ಹಾಗೂ ಆತ್ಮ ವಿಶ್ವಾಸವನ್ನು ತನ್ನ ವಾಕ್‌ ಶಕ್ತಿಯಿಂದ ಸದಾ ತುಂಬುತ್ತಲೇ ಇದ್ದ. ಭರವಸೆ ಕೂಡಾ ಕೊಡುತ್ತಿದ್ದ. ಚರ್ಚಿಲ್‌ ಬಗ್ಗೆ ಜನಕ್ಕೆ ವಿಶ್ವಾಸವಿತ್ತು. ಅವನ ಮಾತಿನ ಶಕ್ತಿ ಅದು. ನಿಜ ಚರ್ಚಿಲ್‌ ಮಾತು ಉಳಿಸಿಕೊಂಡಿದ್ದ. ಶುಭ ಗ್ರಹಗಳಾದ ಗುರು ಶುಕ್ರ ಹಾಗೂ ಬುಧರ ಶಕ್ತಿ ಮಾತಿನ ಮಂಟಪದಲ್ಲಿ ಚರ್ಚಿಲ್‌ ಅದ್ಭುತವೆನಿಸಲು ಅವಕಾಶ ನೀಡಿದವು. ಕೇತುದೋಷ ಕೆಲವೊಮ್ಮೆ ಮಾತಿನಲ್ಲಿ ಉಗ್ಗು ತರುತ್ತಿತ್ತು. ಬಾಲ್ಯದಲ್ಲಿನ ತಂದೆತಾಯಿಗಳ ಆರೈಕೆಯ ಕೊರತೆ ಕೇತುವಿನಿಂದ ಈ ಉಗ್ಗು ಆಗಾಗ ತೊಂದರೆ ಕೊಡುತ್ತಿತ್ತು.

ಆಡಿದ್ದು ಮಾಡಲಾಗದೇ ಸೋತ ಜುಲ್ಫಿಕರ್‌ ಭುಟ್ಟೋ

ಭುಟೋ ಕುಟುಂಬ ಯಾರಿಗೆ ತಿಳಿದಿಲ್ಲ? ಭಾರತೀಯರಿಗಂತೂ ಭುಟ್ಟೋ ಒಂದರ್ಥದಲ್ಲಿ ಆಪರಿಚಿತರ ಸಾಲಿಗೆ ಸೇರುವ ಹಾಗೆ ಕಂಡರೂ ಭಾರತದೊಂದಿಗಿನ ದ್ವೇಷವನ್ನು ಪ್ರತಿಪಾದಿಸುತ್ತಾ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಂಡ ಕುಟುಂಬವಾಗಿ ಕಾರಣವಲ್ಲದ ಕಾರಣಕ್ಕೆ ಹುತಾತ್ಮರಾಗುವ ಸ್ಥಿತಿ ಕಂಡು ಕನಿಕರ, ಸಿಟ್ಟು ಭಾರತೀಯರಿಂದ ಹೊಂದುವ ವಿಪರ್ಯಾಸ ಹೊಂದಿದ ಕುಟುಂಬ. ಭಾರತೀಯರನ್ನು ವಿಶ್ವಸಂಸ್ಥೆಯ ತನ್ನ ಭಾಷಣದಲ್ಲಿ ನಾಯಿಗಳು ಎಂದು ಕರೆದ ವ್ಯಕ್ತಿ ಜುಲ್ಫಿಕರ್‌ ಆಲಿ ಭುಟ್ಟೋ. ಸಾವಿರ ವರ್ಷಗಳ ಕಾಲ ಭಾರತೀಯರ ವಿರುದ್ಧ ಧರ್ಮಯುದ್ಧ ಸಾರಿದ, ಆದರೆ ಭಾರತದ ವಿರುದ್ಧ 1971ರಲ್ಲಿ ನಡೆದ ಯುದ್ಧದಲ್ಲಿ ಸೋತು ಸುಣ್ಣಾಗಿ ಲಕ್ಷಕ್ಕೂ ಮೀರಿ ಸೆರೆಸಿಕ್ಕ ತನ್ನ ದೇಶದ ಸೈನಿಕರನ್ನು ಬಿಡುಗಡೆ ಮಾಡಿ ಎಂದು ಅಂಗಲಾಚಿದ ವ್ಯಕ್ತಿ. ಭುಟ್ಟೋ ಜಾತಕದಲ್ಲಿ ಕರ್ಕಾಟಕ ರಾಶಿ ಇವರ ಮಾತಿನ ಮನೆ. ಇದರ ಅಧಿಪತಿಗೆ ರಾಹುದೋಷ ಬೇರೆ. ಯುಕ್ತವಲ್ಲದ ವ್ಯಯಸ್ಥಾನದಲ್ಲಿ ಚಂದ್ರ ದುರ್ಬಲ. ಮೇಲಿಂದ ಚಂದ್ರನಿಗೆ ದುರ್ದೈವದಿಂದ ಹತ್ತಿದ ಕೇಮದ್ರುಮದಂಥ ಕೆಟ್ಟ ಯೋಗ. ದುಷ್ಟರಾದ ಶನಿ ಕೇತು ಕುಜರ ದೃಷ್ಟಿಯ ಪ್ರಭಾವ ಕೂಡಾ ಚಂದ್ರನ ಮೇಲೆ. ಮನೋಹರತೆಯನ್ನು ಮಾತಿಗೆ ಕಲ್ಪಿಸಿಕೊಡಬೇಕಾದ ಚಂದ್ರ ನಷ್ಟದ ಮನೆಯಲ್ಲಿ ಸ್ಥಿತನಾಗಿ ದುಷ್ಟರ ಪ್ರಭಾವದಿಂದ ಮಾತಿಗೆ ನಡವಳಿಕೆಗೆ ಹೊಂದಾಣಿಕೆ ಇಲ್ಲದೆ ಜುಲ್ಫಿಕರ್‌ ಆಲಿ ಭುಟ್ಟೋ ಪರದಾಡಿದ್ದು ಅಂತಿಂಥ ರೀತಿಯಲ್ಲಲ್ಲ. ಮರಣಾಧಿಪತಿಯಾದ ಶನೈಶ್ಚರನ ಮುಖ್ಯ ದಶಾಕಾಲವೂ, ಚಂದ್ರನ ಭುಕ್ತಿಯೂ ಇದ್ದಾಗ, ಇದೇ ಚಂದ್ರನ ಸಕಾರಾತ್ಮಕವಲ್ಲದ ಸ್ಪಂದನಗಳು, ಶನೈಶ್ಚರನು ಸೂಚಿಸುವ ಸೆರೆಮನೆಯ ಗೋಳು ಇತ್ಯಾದಿ ಸೇರಿ, ಆ ಕಾಲದ ಪಾಕಿಸ್ತಾನದ ಸರ್ವಾಧಿಕಾರಿ ಜಿಯಾ ಉಲ್‌ ಹಕ್‌ರಿಂದ ನೇಣುಗಂಬ ಏರಿದ್ದು ಭುಟ್ಟೋ ಸ್ಥಿತಿಯಾಯ್ತು. ಭುಟ್ಟೋ ಆಡಿದ ಕೊನೆಯ ಮಾತು “ನಾನು ನಿಷ್ಪಾಪಿ, ಮುಗ್ಧ’ ಎಂದು. ಜಿಯಾ ವೈಯುಕ್ತಿಕವಾಗಿ ಆಡಿದ ಖಾಸಗಿ ಸ್ವರೂಪದ ಭುಟ್ಟೋ ಮಾತುಗಳಿಂದ ಅಪಮಾನಕ್ಕೊಳಗಾಗಿ ಭುಟ್ಟೋ ಎಂದರೆ ವ್ಯಗ್ರರಾಗುತ್ತಿದ್ದರು ಎಂಬ ವದಂತಿಯೂ ಇದೆ. ಇದು ಹೌದಾದರೆ ಮಾತು ಒಬ್ಬ ವ್ಯಕ್ತಿಯ ಜೀವನ್ಮರಣದ ಪರಿಸ್ಥಿತಿಯಲ್ಲಿ ಎಷ್ಟು ಮುಖ್ಯ ಎಂಬುದನ್ನು ಸಾರುತ್ತದೆ. 

ಅನಂತಶಾಸ್ತ್ರೀ 

ಟಾಪ್ ನ್ಯೂಸ್

Uppinangady: ಕೆಮರಾ ಕಣ್ಣಿಗೆ ಸಿಕ್ಕಿದ ಕಾಡಾನೆ

Uppinangady: ಕೆಮರಾ ಕಣ್ಣಿಗೆ ಸಿಕ್ಕಿದ ಕಾಡಾನೆ

Road Mishap: ಮೋಟಾರು ಸೈಕಲ್‌ ಢಿಕ್ಕಿ: ಮಹಿಳೆಗೆ ಗಾಯ

Road Mishap: ಮೋಟಾರು ಸೈಕಲ್‌ ಢಿಕ್ಕಿ: ಮಹಿಳೆಗೆ ಗಾಯ

Moodbidri ಪರಿಸರದಲ್ಲಿ ಸಕ್ರಿಯರಾಗಿರುವ ಬ್ಯಾಟರಿ ಕಳ್ಳರು

Moodbidri ಪರಿಸರದಲ್ಲಿ ಸಕ್ರಿಯರಾಗಿರುವ ಬ್ಯಾಟರಿ ಕಳ್ಳರು

Karnataka: ಹೊಸ ವರ್ಷದ ಆಚರಣೆ ಮದ್ಯ ಮಾರಾಟ ನೀರಸ

Karnataka: ಹೊಸ ವರ್ಷದ ಆಚರಣೆ ಮದ್ಯ ಮಾರಾಟ ನೀರಸ

Karnataka ಪ್ರತ್ಯೇಕ ಪ್ರಕರಣ: ಅಪಘಾತಗಳಲ್ಲಿ 11 ಮಂದಿ ಸಾವು

Karnataka ಪ್ರತ್ಯೇಕ ಪ್ರಕರಣ: ಅಪಘಾತಗಳಲ್ಲಿ 11 ಮಂದಿ ಸಾವು

ಕೆಎಸ್ಸಾರ್ಟಿಸಿ ಮುಡಿಗೆ 9 ರಾಷ್ಟ್ರಮಟ್ಟದ ಪ್ರಶಸ್ತಿ

Bengaluru: ಕೆಎಸ್ಸಾರ್ಟಿಸಿ ಮುಡಿಗೆ 9 ರಾಷ್ಟ್ರಮಟ್ಟದ ಪ್ರಶಸ್ತಿ

Rave Party: ನಟಿ ಹೇಮಾ ವಿರುದ್ಧದ ಪ್ರಕರಣಕ್ಕೆ ಹೈಕೋರ್ಟ್‌ ತಡೆ

Rave Party: ನಟಿ ಹೇಮಾ ವಿರುದ್ಧದ ಪ್ರಕರಣಕ್ಕೆ ಹೈಕೋರ್ಟ್‌ ತಡೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Astrology 2024: 2024ರಲ್ಲಿ ಮಿಶ್ರ ಫ‌ಲಗಳೇ ಅಧಿಕ-ರಾಜ್ಯದಲ್ಲೇನಾಗುತ್ತದೆ?

Astrology 2024: 2024ರಲ್ಲಿ ಮಿಶ್ರ ಫ‌ಲಗಳೇ ಅಧಿಕ-ರಾಜ್ಯದಲ್ಲೇನಾಗುತ್ತದೆ?

ಜ್ಯೋತಿಷ್ಯದಲ್ಲಿ ನವಗ್ರಹಕ್ಕಿಂತಲೂ ನಕ್ಷತ್ರಗಳಿಗೆ ಹೆಚ್ಚು ಪ್ರಾಮುಖ್ಯತೆ ಯಾಕೆ ಕೊಡಲಾಗಿದೆ?

ಜ್ಯೋತಿಷ್ಯದಲ್ಲಿ ನವಗ್ರಹಕ್ಕಿಂತಲೂ ನಕ್ಷತ್ರಗಳಿಗೆ ಹೆಚ್ಚು ಪ್ರಾಮುಖ್ಯತೆ ಯಾಕೆ ಕೊಡಲಾಗಿದೆ?

ಶುಭ ವಿಚಾರ ತಿಳಿಯುವ ಗೋಚಾರ ಫಲ ಎಂದರೇನು, ಗುರುದೆಸೆ ಯಾವಾಗ ಆರಂಭವಾಗಲಿದೆ…

ಶುಭ ವಿಚಾರ ತಿಳಿಯುವ ಗೋಚಾರ ಫಲ ಎಂದರೇನು, ಗುರುಬಲ ಯಾವಾಗ ಆರಂಭವಾಗಲಿದೆ…

jjhgfd

ಮಾರಕಾಧಿಪತಿ, ಭಾದಕಾಧಿಪತಿ: ಅಕಾಲಿಕ ಮರಣದ ಬಗ್ಗೆ “ಅಷ್ಠಮ ಸ್ಥಾನ” ಮುನ್ಸೂಚನೆ ಕೊಡುತ್ತದೆಯೇ?

ಗಜಕೇಸರಿ ಯೋಗ… ಈ ಯೋಗ ಹೇಗೆ ಉಂಟಾಗುತ್ತದೆ, ಇದರ ಮಹತ್ವವೇನು?

ಗಜಕೇಸರಿ ಯೋಗ… ಈ ಯೋಗ ಹೇಗೆ ಉಂಟಾಗುತ್ತದೆ, ಇದರ ಮಹತ್ವವೇನು?

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Uppinangady: ಕೆಮರಾ ಕಣ್ಣಿಗೆ ಸಿಕ್ಕಿದ ಕಾಡಾನೆ

Uppinangady: ಕೆಮರಾ ಕಣ್ಣಿಗೆ ಸಿಕ್ಕಿದ ಕಾಡಾನೆ

Road Mishap: ಮೋಟಾರು ಸೈಕಲ್‌ ಢಿಕ್ಕಿ: ಮಹಿಳೆಗೆ ಗಾಯ

Road Mishap: ಮೋಟಾರು ಸೈಕಲ್‌ ಢಿಕ್ಕಿ: ಮಹಿಳೆಗೆ ಗಾಯ

Moodbidri ಪರಿಸರದಲ್ಲಿ ಸಕ್ರಿಯರಾಗಿರುವ ಬ್ಯಾಟರಿ ಕಳ್ಳರು

Moodbidri ಪರಿಸರದಲ್ಲಿ ಸಕ್ರಿಯರಾಗಿರುವ ಬ್ಯಾಟರಿ ಕಳ್ಳರು

13

Surathkal: ಅನಾರೋಗ್ಯದಿಂದ ಸಿ.ಎ. ವಿದ್ಯಾರ್ಥಿನಿ ಸಾವು

Karnataka: ಹೊಸ ವರ್ಷದ ಆಚರಣೆ ಮದ್ಯ ಮಾರಾಟ ನೀರಸ

Karnataka: ಹೊಸ ವರ್ಷದ ಆಚರಣೆ ಮದ್ಯ ಮಾರಾಟ ನೀರಸ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.