ಜಾತಕದ ಕೇತು ದೋಷವಿದ್ದರೆ ಏನು ಧರಿಸಬೇಕು?
Team Udayavani, Feb 6, 2016, 5:11 AM IST
ನಮ್ಮ ಪರಂಪರೆಯಲ್ಲಿ ಭಾರತೀಯರು ಅನೇಕ ವಿಚಾರಗಳನ್ನು ಸಾಂಕೇತಿಕವಾಗಿ ಗ್ರಹಿಸುತ್ತಾರೆ, ಸರ್ಪ ಕಾಮದ ಸಂಕೇತವಾಗಿದೆ. ಸರ್ಪವೇ ಅಮೃತವನ್ನು ಕಣ್ತಪ್ಪಿಸಿ ಕುಡಿಯಲು ಹೊರಟ ರಾಕ್ಷಸನ ರುಂಡಮುಂಡ ಆಗಿ ರೂಪಗೊಳ್ಳುತ್ತದೆ. ವಿಷ್ಣು ಚಕ್ರದ ಘಾತಕ್ಕೆ ಸರ್ಪರೂಪದ ರಾಕ್ಷಸನೋರ್ವ ರಾಹು (ಹಾವಿನ ರುಂಡ) ಕೇತು (ಹಾವಿನ ಮುಂಡ) ಗಳ ರೂಪದಲ್ಲಿ ಛೇದನಗೊಳ್ಳುತ್ತಾನೆ. ಇದೇ ರಾಕ್ಷಸನ ರುಂಡವಾದ ರಾಹುವನ್ನು ನರಸಿಂಹನ ಸ್ವರೂಪವಾಗಿ ನಮ್ಮಪರಂಪರೆ ಗುರುತಿಸುತ್ತದೆ. ಮುಂಡವಾದ ಕೇತುವನ್ನು ಗಣಪತಿಯ ಸ್ವರೂಪವೆಂದು ಗುರುತಿಸುತ್ತಾರೆ.ಕೇತು ಸ್ವರೂಪವಾಗಲೀ ರಾಹು ಸ್ವರೂಪವಾಗಲೀ ನಮ್ಮ ಅನಂತ ಸ್ವರೂಪದ ಛಾಯೆಗಳೇ ಆಗಿವೆ.
ಹೀಗಾಗಿ ಇವು ಛಾಯಾ ಗ್ರಹಗಳು. ಸತ್ಯದ ಸ್ವರೂಪದ ಅಸ್ತಿತ್ವ ಈ ಗ್ರಹಗಳಿಗೆ ಇರದಿದ್ದರೂ ಅವು ಆಮೂರ್ತದಲ್ಲೇ ಮೂರ್ತ ಸ್ವರೂಪದಲ್ಲಿದೆ. ನಿರಾಕಾರ ಸ್ವರೂಪನಾದ ದೇವರು ಸೃತಿ, ಸ್ಥಿತಿ ಹಾಗೂ ಲಯಗಳಿಗೆ ಈ ಬ್ರಹ್ಮಾಂಡದಲ್ಲಿ ಕಾರಣವಾಗಿ ಲೀಲಾಧರನಾಗಿದ್ದಾನೆ. ಮೂರ್ತ ಹಾಗೂ ಅಮೂರ್ತ ಅರ್ಥವಾಗದ ಭಾಗಗಳಾಗಿವೆ. ಆಕಾರ ಹಾಗೂ ನಿರಾಕಾರವೂ ಹಾಗೇ ಆಗಿದೆ. ಒಟ್ಟಿನಲ್ಲಿ ರಾಹುನಷ್ಟೇ ದುಷ್ಟ ಕೇತುವೂ ಆಗಿದ್ದಾನೆ. ರಾಹು ಒಲಿದಾಗ ಸುಖ ಪ್ರವಾಹ ರೂಪದಲ್ಲಿ ಒದಗಿ ಬರುತ್ತದೆ. ಕೇತು ಒಲಿದಾಗ ಸಹಾ ಸುಖದ ಸಮೃದ್ಧಿಗೆ ಹಿಮಾಲಯದಷ್ಟು ಎತ್ತರ. ಕೇತು ದಶಾ ಸಂದರ್ಭದ ಏಳು ವರ್ಷಗಳ ಕಾಲದಲ್ಲಿ ಕೇತು ಒಳ್ಳೆಯವನೇ ಇರಲಿ ಕೆಟ್ಟವನೇ ಇರಲಿ ವೈಢೂರ್ಯ ರತ್ನ ಧಾರಣೆ ಮಾಡಿಕೊಳ್ಳುವುದು ಹಿತಕಾರಿ. ಏಳು ವರ್ಷಗಳ ಅವಧಿ ಮುಗಿಯುತ್ತಿದ್ದ ಹಾಗೆ ಈ ರತ್ನವನ್ನು ದೇಹದಿಂದ ತೆಗೆದು ಬಿಡಬೇಕು. ಹಾಗೊಮ್ಮೆ ಧಾರಣೆಯನ್ನು ಮುಂದುವರಿಸುವುದೇ ಆದಲ್ಲಿ ಕೇತುವಿನ ಸಂಬಂಧವಾದ ಜಪತಪ ಅನುಷ್ಠಾನ, ಧ್ಯಾನಗಳನ್ನು ಧರಿಸಿದ ವ್ಯಕ್ತಿ ನೆರವೇರಿಸಬೇಕು.
ಕೇತು ಮೋಕ್ಷಕಾರಕ,ಅಪಾರ ವಾಗ್ಮಿತ್ವಕ್ಕೆ ಕಾರಣೀಕರ್ತ
ಬಲಿಷ್ಟರಾದ ಶನಿ ಹಾಗೂ ಮಂಗಳ ಗ್ರಹಗಳ ದೃಷ್ಟಿ ಇದ್ದರೆ ಕೇತುನಿಂದ ಧನ ಸಂವರ್ಧನೆ, ಬಹುಗೌರವ ದೊರಕುವ ಲಾಯರ್ ಆಗಿ ಒಳ್ಳೆಯ ಸಂಪಾದನೆ ಹಾಗೂ ಕೀರ್ತಿ ಲಭ್ಯವಾಗುತ್ತದೆ. ಕೇತು ಧನ, ವಾಕ್, ನೇತ್ರ, ಕುಟುಂಬ ಸ್ಥಾನ, ಮೋಕ್ಷಸ್ಥಾನ, ಮಾರಕ ಸ್ಥಾನದಲ್ಲಿ ಸ್ಥಿತನಿರುವಾಗ ಗುರುದೃಷ್ಟಿ ಅದ್ಭುತವನ್ನೇ ಸೃಷ್ಟಿಸಿ ಪರಮೋತ್ಛ ಕೀರ್ತಿ, ಗೌರವಾದರ, ಸಂಪತ್ತು ಮನ್ನಣೆಗಳಿಗೆ ಕಾರಣವಾದೀತು. ಸಕಲ ರಾಜಮರ್ಯಾದೆಗಳಿಗೆ ಸ್ವರಶುದ್ಧಿಗೆ ಕಾರಣನಾಗುತ್ತಾನೆ.
ಕೇತು ಸಂತೃಪ್ತಿಗಾಗಿ ಈ ಕೆಳಗಿನ ಮಂತ್ರ ಪಠಿಸಿ
ಅಶ್ವಧ್ವಜಾಯ ವಿದ್ಮಹೇ ಶೂಲಹಸ್ತಾಯ ಧೀಮಹಿ,ತನ್ನೋ ಕೇತು ಪ್ರಚೋದಯಾತ್ ಇದು ಅಪರೂಪದ ಕೇತು ಗಾಯತ್ರಿಯಾಗಿದೆ. ಅಶ್ವಧ್ವನಾದ ಕೇತುವು ರಾಜಸಮಾನವಾದ ಗೌರವಗಳನ್ನು, ಧೀ ಶಕ್ತಿ,
ಸ್ಮರಣ ಶಕ್ತಿ ಉಪಯೋಗಕ್ಕೆ ಬರುವ ಕೆಲಸ ಕೊಡಿಸಿಕೊಡುತ್ತಾನೆ.
ಕೇತುಗ್ರಹದ ನಕ್ಷತ್ರಗಳ ವಿಚಾರ
ಅಶ್ವಿನಿ, ಮಖ, ಮೂಲಗಳು ಕೇತುವಿನ ಸಿರಿತನಕ್ಕೆ ಬದ್ಧತೆ ಪಡೆದ ನಕ್ಷತ್ರಗಳಾಗಿವೆ. ಅಶ್ವಿನಿ ನಕ್ಷತ್ರಕ್ಕೆ ಸೂರ್ಯನನ್ನು ಪ್ರಭಲವಾಗಿಸುವ ಶಕ್ತಿ ಇದೆ. ಮಖಾ ನಕ್ಷತ್ರದಲ್ಲಿ ಸ್ಥಿತಗೊಂಡಾಗ ತುಸು ತ್ರಾಸದಾಯಕನಾಗುತ್ತಾನೆ. ಆತ್ಮಕ್ಕೆ ಭಯ, ಸ್ವಂತ ವಿಚಾರದಲ್ಲಿ ನಂಬಿಕೆ ಉಕ್ಕದ ಮುಖ ಹೀನ ಪರಿಸ್ಥಿತಿ ನಿರ್ಮಿಸುತ್ತಾನೆ. ಮೂಲಾ ನಕ್ಷತ್ರದಲ್ಲಿ ಚಂದ್ರನಿದ್ದರೆ ಹುಡುಗಿಯರ ವೈವಾಹಿಕ ಜೀವನಕ್ಕೆ ಅಡೆತಡೆಗಳನ್ನು ತರುತ್ತಾನೆ. ಸಾಮಾನ್ಯವಾಗಿ ದುಷ್ಟರ ಜೊತೆ ಸೇರಿದಾಗ ಸಂಘದೋಷ ಆಘಾತಕಾರಿಯಾಗುತ್ತದೆ.
ಆದರೆ ಮೂಲಾ ನಕ್ಷತ್ರದಲ್ಲಿ ಕುಳಿತ ಕೇತು ಉತ್ತಮವಾದ ಅಭಿವೃದ್ಧಿ ಸಂಪದಗಳಿಗೆ ಕಾರಣನಾಗುತ್ತಾನೆ.
ಈ ಎಲ್ಲಾ ನಕ್ಷತ್ರಗಳಲ್ಲಿ ಅಕಸ್ಮಾತ್ ಎಂಥದ್ದೇ ದುಷ್ಟ ಪ್ರಭಾವಳಿಗಳು ಚಂದ್ರನಿಗಾಗಲೀ ಕೇತುಗಾಗಲೀ ಇದ್ದರೂ ಮಂಗಳಗ್ರಹದ ಹಾಗೂ ಗುರುಗ್ರಹದ ಬಲಗಳು ಬಲವಾಗಿದ್ದಲ್ಲಿ ದೋಷಗಳು ಇಡಿಯಾಗಿ ಹೊಡೆದೋಡಿಸಲ್ಪಡುತ್ತದೆ. ಕೇತುವಿನ ಸಂಬಂಧವಾದ ಪೀಡೆಗಳು ಇದ್ದಲ್ಲಿ ದಿನಕ್ಕೆ 108 ಬಾರಿ –
ವರ್ಣೇಶ್ಚ ಶಥಶೋ…ಥ ಸಹಸ್ರಶಃ| ಉತ್ಪಾತ ರೂಪೋ ಜಗತಾಂ ಪೀಡಾ ಹರತು ಮೇ ತಮಃ|
ಎಂಬ ಸ್ತೋತ್ರ ಪಠಿಸಿದಲ್ಲಿ ಕ್ಷಣಮಾತ್ರದಲ್ಲಿ ಪೀಡೆ ನಿವಾರಿಸುವ ಶಕ್ತಿ ವೃದ್ಧಿಸುತ್ತ ಹೋಗುತ್ತದೆ.
ಕೇತುವಿನ ಕಾರಣಕ್ಕಾಗಿ ವೈಢೂರ್ಯ ಧಾರಣೆ ಮಾಡುವವರು ಬಂಗಾರದಲ್ಲಿ ಧಾರಣೆ ಮಾಡಬಾರದು. ಪಂಚಧಾತು
ಗಳಲ್ಲಿ ಮಾಡಿದ ಉಂಗುರದಲ್ಲಿ ವೈಢೂರ್ಯ ಕೂರಿಸುವುದು ಸೂಕ್ತವಾಗಿದೆ. ಜತೆಗೆ ಪ್ರತಿದಿನ -ಸಿಂಕಾ ಸೂರಿ ಗರ್ಭ ಸಂಭಾವಾಯ ನಮಃ- ಎಂದು ರಾಮ ಸಿಕ್ಕಿದಲ್ಲೆಲ್ಲಾ ಕೇತುವನ್ನು ಸ್ತುತಿಸುತ್ತಿರುವುದು ಕೂಡಾ ಕೇತು ಸಂಬಂಧವಾದ ಪೀಡಾ ನಿವಾರಣೆಯಾಗಿದೆ. ಕೇತುನ ಚಿತ್ತ ಸಂಪ್ರೀತಿಯಿಂದ ಉತ್ತಮ ಸಿದ್ಧಿ ಸಾಫಲ್ಯಗಳನ್ನು ತಡೆಯುವುದಕ್ಕೆ ಅನುಕೂಲವಾಗುತ್ತದೆ. ಶುಕ್ರನಿಂದ 3,6,12ರಲ್ಲಿ ಕೇತು ಕುಳಿತಿದ್ದರೆ ವೈಢೂರ್ಯದಿಂದ ಉಂಟಾಗುವ ಅಭಿವೃದ್ಧಿಗೆ ಹೇರಳವಾದ ಶಕ್ತಿ ಸಾಮರ್ಥ್ಯ ಸಿಗುತ್ತದೆ.
ಕೇತುವಿನ ಪ್ರಾಬಲ್ಯಕ್ಕೆ ಶನಿ ಹಾಗೂ ಮಂಗಳರ ದೃಷ್ಟಿಬಲ ದೊರೆತಲ್ಲಿ ಜಾತಕದಲ್ಲಿ ಸೂರ್ಯನು ದಿಕºಲ ಹೊಂದಿ, ಬುಧನ ಜೊತೆಯಾದಲ್ಲಿ ಅನುಪಮವಾದ ಬುದ್ದಿಶಕ್ತಿ ಸಂಚಯನಗೊಳ್ಳುತ್ತದೆ. ಉತ್ತಮರಾದ ಸುಖ ಸ್ಥಾನಾಧೀಶ ವಿಜೃಂಭಿಸಿದಲ್ಲಿ ಉತ್ತಮವಾದ ಆತ್ಮಭಾವನ ಅಧೀಶ ಜಾತಕದಲ್ಲಿ ಇದ್ದಲ್ಲಿ ಕೇತುವು ಆಯುಷ್ಯದ ಅಂತ್ಯದಲ್ಲಿ ಮೋಕ್ಷಕ್ಕೆ ಕಾರಣನಾಗುತ್ತಾನೆ.
ವೈಢೂರ್ಯದಿಂದ ಕೇತು ಸಿದ್ದಿಯ ಜೊತೆಗೆ ಜಾnನ ಶ್ರೀಮಂತಿಕೆ ಒಂದೊಮ್ಮ ಕೇತು ಗ್ರಹವು ಜಾತಕದ ದುಸ್ಥಾನಗಳಾದ 3 ಅಥವಾ 6ರಲ್ಲಿ ಅನೇಕ ರೀತಿಯ ಕೇತು ಅನುಷ್ಠಾನಗಳೊಂದಿಗೆ ವೈಢೂರ್ಯ ಧರಿಸಿದಲ್ಲಿ ಜಾnನದ ಸುಧೆ ಮನುಷ್ಯನಲ್ಲಿ ಪ್ರಭಲಗೊಳ್ಳುತ್ತದೆ. ವಾಕ್ ಸ್ಥಾನವಾದ 2ನೇ ಮನೆಯಲ್ಲಿ ಕೇತುವಿದ್ದರೆ ಮೋಕ್ಷ, ವಾಕ್ ಸಿದ್ದಿ, ಎಂಥದ್ದೇ ಕ್ರಿಮಿನಲ್ ಕೇಸುಗಳನ್ನು ಗೆಲ್ಲಬಲ್ಲ ತರ್ಕಬದ್ಧ ಮಾತಿನ ಚರ್ಚಾಪಟುತ್ವ,(ವಿಶೇಷವಾಗಿ ಲಾಯರ್ ಗಳಿಗೆ ಇದು ಅನುಕೂಲ) ಸಿದ್ಧಿಸುತ್ತದೆ. ಕೇತುವಿನ ಪ್ರಾಬಲ್ಯಕ್ಕೆ ಶನಿ ಹಾಗೂ ಮಂಗಳರ ದೃಷ್ಟಿಬಲ ದೊರೆತಲ್ಲಿ ಜಾತಕದಲ್ಲಿ ಸೂರ್ಯನು ದಿಕºಲ ಹೊಂದಿ, ಬುಧನ ಜೊತೆಯಾದಲ್ಲಿ ಅನುಪಮವಾದ
ಬುದ್ದಿಶಕ್ತಿ ಸಂಚಯನಗೊಳ್ಳುತ್ತದೆ. ಉತ್ತಮರಾದ ಸುಖ ಸ್ಥಾನಾಧೀಶ ವಿಜೃಂಭಿಸಿದಲ್ಲಿ ಉತ್ತಮವಾದ ಆತ್ಮಭಾವನ
ಅಧೀಶ ಜಾತಕದಲ್ಲಿ ಇದ್ದಲ್ಲಿ ಕೇತುವು ಆಯುಷ್ಯದ ಅಂತ್ಯದಲ್ಲಿ ಮೋಕ್ಷಕ್ಕೆ ಕಾರಣನಾಗುತ್ತಾನೆ. ಮರಣಕ್ಕೆ ಯಾತನೆ
ಕೊಡಲಾರ.
ಭಾರತೀಯ ಪರಂಪರೆ ಮೋಕ್ಷವನ್ನು ಬಹು ಗೌರವದಿಂದ ಕಂಡಿದೆ. ಮೋಕ್ಷಕ್ಕಾಗಿ ಸದಾ ತುಡಿತಗಳನ್ನು
ಒದಗಿಸಿರುತ್ತದೆ. ಆದರೆ ಮೋಕ್ಷ ಸುಲಭದ ಮಾತಲ್ಲ. ಜನ್ಮ ಜನ್ಮಾಂತರದ ಕರ್ಮಫಲಗಳನ್ನು ನಿವಾರಿಸಿಕೊಂಡು
ಮೋಕ್ಷ ಸಂಪಾದಿಸುವುದಕ್ಕೆ ಏಳೇಳು ಜನ್ಮಗಳ ಸುಕೃತಫಲಗಳು ದೊರೆತಿರಬೇಕು. ಈ ವಿಶ್ವದಲ್ಲಿ ಯಾವುದಕ್ಕೂ
ಸಾನವಿಲ್ಲ. ಪರಿವರ್ತನೆಗಳು ಮಾತ್ರ. ನಮ್ಮ ಭಾರತೀಯ ನಂಬಿಕೆಗಳ ಪ್ರಕಾರ ನಮ್ಮ ಮೋಕ್ಷದ ದಾರಿಯಿಂದಾದ
ಸಾಯುಜ್ಯ ಹರಿಪಾದವನ್ನು ಸೇರಿಕೊಳ್ಳುತ್ತದೆ. ಸ್ವರ್ಗದ ಸೀಮೆಯನ್ನು ತಲುಪಿ ಧನ್ಯಗೊಳ್ಳುತ್ತದೆ ಎಂಬ ವ್ಯಾಖ್ಯಾನದ
ತಳಹದಿಯ ಮೆಲೆ ಧನ್ಯತೆಗೆ ದಾರಿಯಾಗುತ್ತದೆ. ಹೊಳೆಯುವ ನಕ್ಷತ್ರವಾಗಿ ಮೋಕ್ಷ ಸಿಕ್ಕಿದ ಆತ್ಮದ ರೂಪಾಂತರಗಳು
ಆವರಣಗೊಂಡು ಸಕ್ರಿಯಗೊಳ್ಳುತ್ತದೆ ಎಂಬ ನಂಬಿಕೆ ಇದೆ. ನಕ್ಷತ್ರಗಳೆಂದರೆ ಸ್ವಪ್ರತಿಭೆಯಿಂದ ಕೋರೈಸುವ
ಅಗಾಧ ಶಕ್ತಿಯ ದ್ರವ್ಯರಾಶಿಯಾಗಿದೆ. ಕೇತುವಿನ ರಕ್ಷಣೆ ಆಶೀರ್ವಾದಗಳು ಸಿಕ್ಕಿದಲ್ಲಿ ಜಾnನಸಿದ್ದಿಗೆ ದಾರಿಯಾಗುವ
ಉತ್ತಮಿಕೆಯಿಂದ ಕರ್ಮಬಂಧನವನ್ನು ಇಷ್ಟಾರ್ಥಪೂರ್ಣ ಭಾವ ಸ್ವಭಾವಗಳೊಂದಿಗೆ ಸಾಧಿಸಿ ಸ್ವಯಂಪ್ರಭೆ ದಕ್ಕಲು
ದಾರಿಯಾಗುತ್ತದೆ.
ಅನಂತಶಾಸ್ತ್ರೀ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Astrology 2024: 2024ರಲ್ಲಿ ಮಿಶ್ರ ಫಲಗಳೇ ಅಧಿಕ-ರಾಜ್ಯದಲ್ಲೇನಾಗುತ್ತದೆ?
ಜ್ಯೋತಿಷ್ಯದಲ್ಲಿ ನವಗ್ರಹಕ್ಕಿಂತಲೂ ನಕ್ಷತ್ರಗಳಿಗೆ ಹೆಚ್ಚು ಪ್ರಾಮುಖ್ಯತೆ ಯಾಕೆ ಕೊಡಲಾಗಿದೆ?
ಶುಭ ವಿಚಾರ ತಿಳಿಯುವ ಗೋಚಾರ ಫಲ ಎಂದರೇನು, ಗುರುಬಲ ಯಾವಾಗ ಆರಂಭವಾಗಲಿದೆ…
ಮಾರಕಾಧಿಪತಿ, ಭಾದಕಾಧಿಪತಿ: ಅಕಾಲಿಕ ಮರಣದ ಬಗ್ಗೆ “ಅಷ್ಠಮ ಸ್ಥಾನ” ಮುನ್ಸೂಚನೆ ಕೊಡುತ್ತದೆಯೇ?
ಗಜಕೇಸರಿ ಯೋಗ… ಈ ಯೋಗ ಹೇಗೆ ಉಂಟಾಗುತ್ತದೆ, ಇದರ ಮಹತ್ವವೇನು?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
BBK11: 13ನೇ ವಾರದಲ್ಲಿ ವೀಕ್ಷಕರ ಗಮನ ಸೆಳೆದಿದ್ದ ಖ್ಯಾತ ಸ್ಪರ್ಧಿಯೇ ಎಲಿಮಿನೇಟ್
RBI: ಯುಪಿಐ ಮೂಲಕ ಡಿಜಿಟಲ್ ವ್ಯಾಲೆಟ್ ಹಣ ಬಳಕೆಗೆ ಅಸ್ತು
Madikeri: ಗುಂಡು ಹೊಡೆದು ಕಾರ್ಮಿಕನ ಕೊ*ಲೆ; ವ್ಯಕ್ತಿ ಬಂಧನ
Daily Horoscope: ಅಪಾತ್ರರಿಗೆ ಸಲಹೆ ನೀಡಿ ಅವಮಾನ ಹೊಂದದಿರಿ, ಭವಿಷ್ಯದ ಕುರಿತು ಚಿಂತನೆ
THAAD System: ಹೌತಿ ದಾಳಿ ತಡೆಗೆ ಇಸ್ರೇಲ್‌ನಿಂದ “ಥಾಡ್’ ವ್ಯವಸ್ಥೆ ಬಳಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.