ಜನ್ಮ ಕುಂಡಲಿಯ ಅಷ್ಟಮಭಾವ ಒಳ್ಳೆಯದೋ, ಕೆಟ್ಟದ್ದೋ?


Team Udayavani, Oct 31, 2015, 6:49 AM IST

5.jpg

ಜಾತಕ ಕುಂಡಲಿಯಲ್ಲಿ ಅಷ್ಟಮ ಭಾವಕ್ಕೆ ಮರಣವನ್ನು ಸೂಚಿಸುವ, ನಿಯಂತ್ರಿಸುವ ರೋಗಗಳಿಂದ ನಷ್ಟ ಹಾಗೂ ದರಿಧ್ರಗಳಿಂದ ಸತಾಯಿಸುವ ಅಧಿಪತ್ಯ ಒದಗಿರುತ್ತದೆ. 
ಭಾರತೀಯ ಪುರಾಣ ಪುರುಷ ಹೆಸರು ಕೇಳಿದರೆ ಸಾಕು ರೋಮಾಂಚನ ತರಿಸುವ ಕೃಷ್ಣ ಪರಮಾತ್ಮ ದೇವಕಿಯ ಎಂಟನೇ ಗರ್ಭ. ಎಂಟನೇ ಮಗುವಾಗಿ ಜನಿಸಿದವನು. ವಿಧಿಯ ಅಣತಿಯನ್ನು ಪಾಲಿಸುವ ಕೆಲವು ಪ್ರಾಕೃತಿಕ ವಿಚಾರಗಳು, ಒಂದು ರೀತಿಯ ಪವಾಡಗಳನ್ನು,ನಂಬಲಾಗದ ವಿಷಯಗಳನು,° ನಂಬುವಂತೆ ಮಾಡುವ ಅಂಶಗಳನ್ನು ನಮ್ಮ ಗಮನಕ್ಕೆ ಬರುವಂತೆ ಮಾಡುತ್ತದೆ. ತಂಗಿಯಾದ ದೇವಕಿಯನ್ನು ವಸುದೇವನ ಜೊತೆಗೆ ಮದುವೆ ನಡೆಸಿ ದಿಬ್ಬಣದ ಮೆರವಣಿಗೆ ರಾಜರಸ್ತೆಯಲ್ಲಿ ಸಂಭ್ರಮದಿಂದ ಕಂಸನ ಹಿರಿತನದಲ್ಲಿ ಸಾಗಿ ಹೋಗುತ್ತಿದ್ದಾಗ ಅಶರೀರವಾಣಿಯೊಂದು ನಭೋ ಮಂಡಲದಿಂದ ಉಕ್ಕಿ ಅಲೆಅಲೆಯಾಗಿ ಕೇಳಿ ಬರುತ್ತದೆ. ಸೊಕ್ಕಿನಿಂದ ಮೆರೆಯುತ್ತಿರುವ ಕಂಸನೇ ಈ ನಿನ್ನ ದೇವಕಿಯ ಅಷ್ಟಮ ಗರ್ಭ ನಿನ್ನ ಸಾವಿನ ಕುಣಿಕೆಯಾಗಿದೆ ಎಂಬುದಾಗಿ ಬಿತ್ತರಗೊಳ್ಳುತ್ತದೆ. ಕಂಸನು ಆಗಲೇ ಅಸುರೀ ಗುಣಧರ್ಮದಿಂದ ಕಂಸಾಸುರನೆಂದು ಹೆಸರಾಗುತ್ತಾನೆ. 

ಅಶರೀರವಾಣಿಯ ನಂತರದ ಕತೆ ನಿಮಗೆಲ್ಲಾ ಗೊತ್ತೇ ಇದೆ. ಶುಕ್ಲಪಕ್ಷದ ಅಷ್ಟಮಿಯಂದೇ ಕೃಷ್ಣನ ಜನನ. ಕೃಷ್ಣನ ಜನನದ ದಿನವೂ ಕಂಸನ ನಾಶಕ್ಕಾಗಿ ಅಷ್ಟ ತಿಥಿಯ ಮೂಲಕ ಶಕ್ತಿ ಸಂಪಾದಿಸಲು ಕಾರಣವಾಯ್ತು. ಏನು, ಹೇಗೆ, ಎಂಬುದೆಲ್ಲಾ ಯೋಚಿಸಬೇಕಾದ ವಿಷಯ. ಕಂಸನ ಮರಣದ ವಿಚಾರ ಏನೇ ಇರಲಿ ಅಷ್ಟಮಭಾವ ಜನ್ಮ ಕುಂಡಲಿಯಲ್ಲಿ ಒಳಿತಾದುದಲ್ಲ. ಈ ಭಾವದ ಶಕ್ತಿ ಸಕಾರಾತ್ಮಕವಾಗಿದ್ದರೆ ತಾಪತ್ರಯದಾಯಕವಾಗಿರುವುದಿಲ್ಲ. ದುರ್ಮರಣಗಳು ಸಂಭವಿಸಲಾರವು. ಹೀಗಾಗಿ ಆಯುಷ್ಯದ ಬಗೆಗೆ ಆಯುಷ್ಯದ ಮುಕ್ತಾಯದ ಬಗೆಗೆ ಅನೇಕ ವಿಚಾರಗಳನ್ನು ಈ ಭಾವ ತಿಳಿಸಿಕೊಡುತ್ತದೆ. ಈ ಅಷ್ಟಮ ಭಾವದ ಜೊತೆಗೆ ಜಾತಕ ಕುಂಡಲಿಯ ಎರಡು, ಮೂರು ಹಾಗೂ ಹನ್ನೆರಡನೇ ಮನೆಗಳೂ ಕೆಲವು ಮಹತ್ವದ ಬೆಳಕನ್ನು ಚೆಲ್ಲುತ್ತದೆ. ಬಾಳ ಸಂಗಾತಿಯನ್ನು ಸೂಚಿಸುವ ಸಪ್ತಮಭಾವ ಕೂಡಾ ಅಷ್ಟಮದ ಕುರಿತಾಗಿ ಕೊಂಡಿಗಳನ್ನು ಪಡೆದಿರುತ್ತದೆ.

ಇನ್ನು ಆಯುಷ್‌ಕಾರಕನಾಗಿ ಶನೈಶ್ಚರನೂ ಮಹತ್ವದ ಪಾತ್ರ ವಹಿಸುತ್ತಾನೆ. ಶನೈಶ್ಚರನ ಬಲಾಡ್ಯತೆಗಳು ಮತ್ತು ದೌರ್ಬಲ್ಯಗಳು ತಮ್ಮದೇ ಆದ ರೀತಿಯಲ್ಲಿ ಅಷ್ಟಮ ಭಾವವನ್ನು ನಿಯಂತ್ರಿಸುತ್ತಲೇ ಇರುತ್ತದೆ ಎಂಬುದು ಗಮನಾರ್ಹ.  ಶನೈಶ್ಚರನ ಕಾಟದ ಸಂದರ್ಭದಲ್ಲಿ ಈ ವಿಷಯವನ್ನು ಪರಿಗ್ರಹಿಸಲೇ ಬೇಕು. ಇಂದಿರಾಗಾಂಧಿಯವರ ಸಂದರ್ಭದಲ್ಲಿ ಶನೈಶ್ಚರನಿಗೆ ಶನಿಕಾಟದ ಸಂದರ್ಭದಲ್ಲಿ ಮರಣ ಒದಗಿದಸಲು ಸಾಧ್ಯವಾಗಲಿಲ್ಲ. ಆದರೆ ಶನಿಕಾಟದ ಸಂದರ್ಭದಲ್ಲಿ ದೊಡ್ಡದಾದ ಮಹತ್ವದ ಲೋಕಸಭಾ ಚುನಾವಣೆಯಲ್ಲಿ ಸೋಲುವಂತೆ ಮಾಡಿದ. ದುರ್ಗಾಳಂತೆ ಇಳಿದ ಇಂದಿರಾ ಪ್ರಪಾತಕ್ಕೆ ಇಳಿದಂತೆ ಜನತಾ ಪಕ್ಷದ ಸರಕಾರದ ಅಧಿಕಾರದ ಅವಧಿಯಲ್ಲಿ ಪರದಾಡಿದರು. ಆದರೆ ಇದೇ ಶನಿ ಚಿವುಟುವ, ತೂಗುವ ಎರಡೂ ಕೆಲಸದಲ್ಲಿ ನಿರತನಾಗಿದ್ದು ಮತ್ತೆ ಶನಿಕಾಟ ಇರುವಾಗಲೇ ಇಂದಿರಾರನ್ನು ಪ್ರಧಾನಿಯಾಗಿಸಿದ. ಇಂದಿರಾ ತಮ್ಮ ಎರಡನೆಯ ಮಗನನ್ನು ಇದೇ ಸಂದರ್ಭದಲ್ಲಿ ವಿಮಾನ ಅಪಘಾತದಲ್ಲಿ ಕಳೆದುಕೊಂಡರು. ಶನೈಶ್ಚರ ಅವರ ಜಾತಕದ ಮರಣಸ್ಥಾನದ ಅಧಿಪತಿ ಕೂಡಾ. ಇಂದಿರಾ ಇದೇ ಶನೈಶ್ಚರನ ದಶಾಕಾಲದ ಅವಧಿಯಲ್ಲೇ ಹಂತಕರ ಗುಂಡಿಗೆ ಬಲಿಯಾದರು. 

ಅಷ್ಟಮ ಕೇವಲ ಅನಿಷ್ಟವೇ? ಭಾಗ್ಯಕ್ಕೆ ದಾರಿ ಇಲ್ಲವೇ?

ಭಾಗ್ಯಕ್ಕೆ ದಾರಿಯನ್ನು ಮಾಡಿಕೊಡುವ ಶಕ್ತಿಯನ್ನು ವಿಶಿಷ್ಟ ಸಂದರ್ಭಗಳಲ್ಲಿ ಅರಿಷ್ಟವರ್ಗಗಳ ಮನೆಯಾದ ಅಷ್ಟಮ ಮಾಡಿಕೊಡುತ್ತದೆ. ಇಂದೀರಾರವರ ಜಾತಕದಲ್ಲಿ ಅಷ್ಟಮ ಸ್ಥಾನದ ಅಧಿಪತಿ ಲಗ್ನದ ಅಧಿಪತಿ (ಶನಿ ಹಾಗೂ ಚಂದ್ರ) ತಮ್ಮ ತಮ್ಮ ಸ್ಥಾನಗಳನ್ನು ಪರಿವರ್ತನೆಗೆ ಒಳಪಡಿಸಿಕೊಂಡಿದ್ದಾರೆ. ಇದು ಒಳ್ಳೆ ಪರಿವರ್ತನಾ ಯೋಗವಲ್ಲ. ಆದರೆ ಶನೈಶ್ಚರನಿಗೆ ಈ ಪರಿವರ್ತನಾ ಯೋಗದಿಂದಾಗಿ ಇಂದಿರಾರನ್ನು ಸಾûಾತ್‌ ದುರ್ಗೆಯಾಗಿ ಪರಿವರ್ತಿಸುವ ದಾಡ್ಯìತೆಯೂ ಉಂಟಾಗಿತ್ತು. ಅವರ ಎಲ್ಲಾ ಅದ್ಭುತ ಎಂದು ಅನಿಸುವ ಕ್ಷಣಗಳಲ್ಲಿ ಇಂದಿರಾ ಮಾನಸಿಕವಾಗಿ ಸುಖದ ಕ್ಷಣಗಳನ್ನು ಅನುಭಸುತ್ತಿದ್ದರೇ ಎಂಬ ಪ್ರಶ್ನೆಯನ್ನು ಒಬ್ಬ ಭಾರತೀಯ ಜೋತಿಷ್ಯಶಾಸ್ತ್ರದ ವಿದ್ಯಾರ್ಥಿ ಕೇಳಿದರೆ ಒಬ್ಬ ಸಮರ್ಥ ಜೋತಿಷಿ ಉತ್ತರಕ್ಕಾಗಿ ಪರದಾಡಬಹುದು. ನಿರ್ಧಾಕ್ಷಿಣ್ಯವಾಗಿ ಹೇಳುವ ಸಮರ್ಥ ಜೋತಿಷಿ ಇಂದೀರಾ ರವರಿಗೆ ಸುಖವೇ ಎಲ್ಲಿ? ಹೇಗೆ? ಯಾವಾಗ ಇತ್ತು ಎಂದು ಮರುಪ್ರಶ್ನೆ ಮಾಡಬಹುದು. ಇಂದಿರಾ ಸರಿಯಾಗಿ ಶಾಲೆಗೆ ಹೋಗಲಾಗಲಿಲ್ಲ. ತಂದೆಗೆ ಮಗಳನ್ನು ಸಂಧಿಸಿ, ಮಾತನಾಡಿಸಿ, ಕುಶಲ ವಿಚಾರಿಸಲು ಸಮಯವಿರಲಿಲ್ಲ. ಅಸ್ವಸ್ಥೆಯಾದ ತಾಯಿ ಕಮಲಾದೇವಿಯವರ ಆರೈಕೆಯನ್ನು ಇಂದಿರಾ ನಿರಂತರವಾಗಿ ನಡೆಸಿದ್ದರು. 

ಅಂತರಂಗದಲ್ಲಿ ಏಕಾಂಗಿ ಆದರೂ…ಪ್ರಧಾನಿ

 ಅಷ್ಟಮಾಧಿಪತಿಯೇ (ಮರಣ ಸ್ಥಾನದ ಅಧಿಪತಿ)ಇಂದಿರಾರನ್ನು ಪ್ರಧಾನಿಯಾಗಿಸಿದ್ದು. ಆದರೆ ಪ್ರಧಾನಿಯಾದಲ್ಲಿಂದಲೂ ಇಂದಿರಾ ಬಲಿಷ್ಠೆಯಾಗಿ ಕಂಡರೇ ವಿನಾ ಅಂತರಂಗದಲ್ಲಿ ಏಕಾಂಗಿಯೇ ಇದ್ದರು. ದುಷ್ಟ ಶನಿ ಸುಖವನ್ನು ನೀಡಲು ಸಾಧ್ಯವೇ ಇಲ್ಲ. ಆದರೆ ಚಂದ್ರನಂಥ ಪ್ರಭಾವಿ ಗ್ರಹದೊಡನೆ ಪರಿವರ್ತನೆ ಸಾಧ್ಯವಾಗಿದ್ದರಿಂದ ಇಂದಿರಾ ಪಾಕಿಸ್ತಾನ ಇರಲಿ, ಅಮೆರಿಕಾವನ್ನೂ ಕಂಗೆಡಿಸಿದರು. ಸುಮಾರು 1969-70 ರಿಂದ 1977 ರವರೆಗೆ ವಿರೋಧ ಪಕ್ಷದ ಉಸಿರೇ ಇದ್ದಿರಲಿಲ್ಲ. ಆದರೆ ಇಂದಿರಾ ಸುಖವಾಗಿದ್ದರೇ ಎಂಬ ಪ್ರಶ್ನೆಗೆ ಇಲ್ಲ ಎಂಬುದೇ ಉತ್ತರ. ಅಧಿಕಾರದ ಕುರ್ಚಿಯಲ್ಲಿ ಚೂಪಾದ ಮುಳ್ಳುಗಳಿದ್ದವು. ಹೌದು, ಪ್ರಧಾನಿಯಾಗಿ ಅದ್ಭುತ ಪ್ರಭಾವಳಿ. ಆದರೆ ವ್ಯಕ್ತಿಯಾಗಿ ಅಂತರಂಗದಲ್ಲಿ ನೋವಿನ ದಳ್ಳುರಿ. 
ಶನಿ ಮಹಾರಾಜ ಭಾರತ ದೇಶದ ಏಕಚಕ್ರಾಧಿಪತ್ಯದ ದೀಕ್ಷೆ ನೀಡಿದ್ದು ಹೌದು. ಆದರೆ ಸುಖ ಸಾಧ್ಯವಿಲ್ಲ. ಪ್ರಧಾನಿಯಾಗಿ ಅಧಿಕಾರಕ್ಕೆ ಬಂದಾಗಲೇ ಲಾಲ್‌ ಬಹದ್ದೂರ್‌ ಶಾಸಿŒಯವರ ಅಕಾಲಿಕ ಮರಣದ ಬಗೆಗೆನ ಕೊಂಕು ಮಾತುಗಳು ಪ್ರತಿಕ್ರಿಯೆಗಳು ಇಂದಿರಾರನ್ನು ಸುಖವಾಗಿಡಲು ಹೇಗೆ ಸಾಧ್ಯ? ಇಂದಿರಾ ಜಾತಕದ ಗುರುಗ್ರಹ ತಂದೆಯಿಂದ ಅಗಾಧವಾದ ಪ್ರಭಾವ, ವಶೀಲಿ ಹೊಂದಲು ಬೇಡವೆಂದರೂ ಸಾಧ್ಯಮಾಡುವ ಸಂಪನ್ನತೆ ಕೊಟ್ಟಿದ್ದು ಸತ್ಯ. ಆದರೆ ಗುರುಗ್ರಹ ಇಂದಿರಾರನ್ನು ಸರ್ವತ್ರ ಮನ್ನಣೆಗೆ ಕಾರಣವಾಗಿ ಭವಿಷ್ಯದ ನಾಯಕಿಯನ್ನಾಗಿಸುವ ಅವಕಾಶ ಕೊಡಲಿಲ್ಲ. ಕೇರಳದ ನಂಬೂದರಿ ಅವರ ಕಮ್ಯೂನಿಷ್ಟ್ ಸರಕಾರ ಉರುಳಲು ಕಾರಣ ಇಂದಿರಾ ಎಂಬ ಅಪವಾದ ಹೊತ್ತು ಪರದಾಡಿದ್ದು ಇದೇ ಗುರು ಗ್ರಹದಿಂದಾಗಿ. ಇಂದಿರಾ ಒಳ್ಳೆಯ ಗ್ರಹದ ಸಹಾಯ ದೊರಕಿಸಿಕೊಂಡದ್ದು ಹೆಚ್ಚೇನಲ್ಲ. ಲಾಲ್‌ ಬಹದ್ದೂರ್‌ ಶಾಸಿŒ ಪ್ರಧಾನಿಯಾಗುವಾಗ ಇಂದಿರಾ ಹೆಸರು ಪ್ರಸ್ಥಾಪಿಸಲ್ಪಟ್ಟಿತ್ತು. ಆದರೆ ಗುರುಗ್ರಹಕ್ಕೆ ಇಂದಿರಾರನ್ನು ಪ್ರಧಾನಿ ಪಟ್ಟಕ್ಕೆ ವರಿಸುವ ಸಂಪನ್ನತೆ ಶಕ್ತಿಪೂರ್ಣವಾಗಿರಲಿಲ್ಲ. ಗುರುವಿನ ದುರ್ಬಲತೆಗೆ ಕಾರಣವಾಗಿದ್ದು ಶನೈಶ್ಚರ. 

ಶನೈಶ್ಚರನಿಂದಲೇ ಪ್ರಧಾನಿಯಾಗಿದ್ದು…

 ತಾನು ದುಷ್ಟನಾದರೂ ಶನೈಶ್ಚರ ಇಂದಿರಾರನ್ನು ಪ್ರಧಾನಿಯಾಗಿಸಿದ. ಮರಣಾಧಿಪತಿ ದಶಾದಲ್ಲಿ ಒಬ್ಬರು ಪ್ರಧಾನಿ ಪಟ್ಟ ಪಡೆಯುತ್ತಾರೆ ಎಂದಾದರೆ ಪ್ರಪಂಚದ ಅದ್ಭುತಗಳಲ್ಲಿ ಒಂದು. ಆದರೆ ಶನೈಶ್ಚರ ಇಂದಿರಾರನ್ನು ಸಖವಾಗಿ ಇರಿಸಿದ್ದನೇ? ಎಂದು ಕೇಳಿದರೆ ಉತ್ತರ ಕಷ್ಟ. ಇಡೀ ರಾಷ್ಟ್ರದ ದೊಡ್ಡ ಅಕ್ಷರಸ್ಥ ಗುಂಪು ಇಂದಿರಾ ವಿರುದ್ಧ ನಿಂತಿತ್ತು. ಮಾಧ್ಯಮಗಳು ಇಂದಿರಾ ಅವರನ್ನು ಟೀಕಿಸುತ್ತಲೇ ಇದ್ದವು. ಕಾಂಗ್ರೆಸ್‌ ಹೋಳಾಯ್ತು. ಸರ್ವಾಧಿಕಾರಿ ಹಿಟ್ಲರ್‌ ಎಂಬ ಪಟ್ಟಿ, ಹಿರಿಯ ಮಗನು ಪ್ರೀತಿಸಿದ ಸೋನಿಯಾ ವಿಚಾರ ಇಂದಿರಾಗೆ ಬಿಸಿತುಪ್ಪದ ಮಾತಾಗಿತ್ತು. ಇಂದಿರಾ ಹಾಗೂ ಫಿರೋಜ್‌ ಗಾಂಧಿ ವಿಷಯದಲ್ಲಿ ಇಂದಿರಾ ಎದುರಿಸಿದ ಮುಖಭಂಗದ ವಿಷಯ ಹಗುರವಾಗಿದ್ದಾಗಿರಲಿಲ್ಲ. ಅಭಿವ್ಯಕ್ತಿ ಸ್ವಾತಂತ್ರ್ಯದಿಂದಾಗಿ ಬಂದ ಹಲವು ಪುಸ್ತಕಗಳು ಇಂದಿರಾರ ಖಾಸಗಿ ಜೀವನವನ್ನು ಮುಜುಗರ ಪಡಿಸುತ್ತಲೇ ಇದ್ದವು. ಇಂದಿರಾರ ಯೋಗ ಗುರು ಧೀರೇನ್‌ ಬ್ರಹ್ಮಚಾರಿ, ಸಂಪುಟದ ಸಹಮಂತ್ರಿ ದಿನೇಶ ಸಿಂಗ್‌, ತಂದೆ ಜವಾಹರರ ಸಹವರ್ತಿ ಮಥಾಯ್‌ ಇತ್ಯಾದಿ ವಿಚಾರಗಳು ಇಂದಿರಾರನ್ನು ಹಣ್ಣುಗಾಯಿ ನೀರುಗಾಯಿ ಮಾಡುತ್ತಿದ್ದವು. ಸಂಜಯ್‌ ಗಾಂಧಿ ವಿಚಾರದಲ್ಲಿ ಇಂದಿರಾ ಖನ್ನರಾಗುತ್ತಿದ್ದರು ಎಂಬ ಪ್ರಚಾರ ಯಾವ ತಾಯಿಗೆ ಸಂಭ್ರಮದ ವಿಷಯವಾಗುತ್ತದೆ? ತಾಯಿಯ ಮಾತುಗಳನ್ನು ಮಗ ಕೇಳಿಸಿಕೊಳ್ಳುತ್ತಲೇ ಇರಲಿಲ್ಲ ಎಂಬುದು ಎಲ್ಲರ ಅಭಿಪ್ರಾಯ. ಸಂಜಯ್‌ ಸಾವಿನ ನಂತರ ಮೇನಕಾ ಗಾಂಧಿಯವರ ನಡೆ ಇಂದಿರಾರನ್ನು ತೀವ್ರವಾದ ಅಸಹಾಯಕತೆಗೆ ತಳ್ಳಿತ್ತು ಎಂಬ ಸುದ್ದಿ ಇಂದಿರಾ ಸುಖವಾಗಿದ್ದರು ಎಂಬುದನ್ನು ಹೇಗೆ ದೃಢಪಡಿಸುತ್ತದೆ? ತುರ್ತು ಪರಿಸ್ಥಿತಿಯ ಕಾರಣ ಇಂದಿರಾ ಖಳನಾಯಕಿಯಾದರು. ಸಿಖ್‌ ಪ್ರತ್ಯೇಕತಾ ಚಳವಳಿ ಅವರ ಪ್ರಾಣಕ್ಕೆ ಕುತ್ತು ತಂತು. ಈಗ ಹೇಳಿ ಜನ್ಮ ಕುಂಡಲಿಯ ಅಷ್ಟಮ ಭಾವ ಅರಿಷ್ಟಧ್ದೋ, ಸ್ವಾದಿಷ್ಟಧ್ದೋ? 

ಟಾಪ್ ನ್ಯೂಸ್

Renukaswamy Case: ಬಿಡುಗಡೆಯಾಗುತ್ತಿದ್ದಂತೆ ಓಡೋಡಿ ಬಂದು ಕಾರು ಹತ್ತಿದ ಆರೋಪಿ ಲಕ್ಷ್ಮಣ್

Renukaswamy Case: ಜೈಲಿನಿಂದ ಬಿಡುಗಡೆಯಾಗುತ್ತಿದ್ದಂತೆ ಓಡೋಡಿ ಕಾರು ಹತ್ತಿದ ಲಕ್ಷ್ಮಣ್‌

Sindhanur: ಲಾರಿ ಪಲ್ಟಿ… ರಸ್ತೆ ಬದಿ ನಿಂತಿದ್ದ ಇಬ್ಬರು ಇಂಜಿನಿಯರ್​ ಸೇರಿ ಮೂವರ ದುರ್ಮರಣ

ಸಿಂಧನೂರು: ಲಾರಿ ಪಲ್ಟಿಯಾಗಿ ರಸ್ತೆ ಬದಿ ನಿಂತಿದ್ದ ಇಬ್ಬರು ಇಂಜಿನಿಯರ್​ ಸೇರಿ ಮೂವರ ದುರ್ಮರಣ

One Nation, One Poll: ಲೋಕಸಭೆಯಲ್ಲಿ ಒಂದು ದೇಶ, ಒಂದು ಚುನಾವಣೆ ಮಸೂದೆ ಮಂಡನೆ; ಕೈ ವಿರೋಧ

One Nation, One Poll: ಲೋಕಸಭೆಯಲ್ಲಿ ಒಂದು ದೇಶ, ಒಂದು ಚುನಾವಣೆ ಮಸೂದೆ ಮಂಡನೆ; ಕೈ ವಿರೋಧ

Delhi: ಪ್ರಿಯಕರನ ಜೊತೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಪತ್ನಿ… ಮುಂದೆ ಆಗಿದ್ದೇ ಬೇರೆ

Delhi: ಪ್ರಿಯಕರನ ಜೊತೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಪತ್ನಿ… ಬಳಿಕ ನಡೆದದ್ದು ಘೋರ

ಭಾರತದಲ್ಲಿ ಶ್ರೀರಾಮನ ಸಂಪ್ರದಾಯ ಮುಂದುವರಿಯಲಿದೆ ವಿನಃ ಬಾಬರನದ್ದಲ್ಲ: ಸಿಎಂ ಯೋಗಿ

ಭಾರತದಲ್ಲಿ ಶ್ರೀರಾಮನ ಸಂಪ್ರದಾಯ ಮುಂದುವರಿಯಲಿದೆ ವಿನಃ ಬಾಬರನದ್ದಲ್ಲ: ಸಿಎಂ ಯೋಗಿ

Charmady: ನದಿಯಲ್ಲಿ ಗೋವುಗಳ ತಲೆ ಸೇರಿದಂತೆ ಅವಶೇಷ ಪತ್ತೆ

Charmady: ನದಿಯಲ್ಲಿ ಗೋವುಗಳ ತಲೆ ಸೇರಿದಂತೆ ಅವಶೇಷ ಪತ್ತೆ

Chhattisgarh: ಜೀವಂತ ಕೋಳಿ ಮರಿ ನುಂಗಿ ವ್ಯಕ್ತಿ ಸಾ*ವು…ಆದರೆ ಕೋಳಿ ಮರಿ ಬಚಾವ್!

Chhattisgarh: ಜೀವಂತ ಕೋಳಿ ಮರಿ ನುಂಗಿ ವ್ಯಕ್ತಿ ಸಾ*ವು…ಆದರೆ ಕೋಳಿ ಮರಿ ಬಚಾವ್!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Astrology 2024: 2024ರಲ್ಲಿ ಮಿಶ್ರ ಫ‌ಲಗಳೇ ಅಧಿಕ-ರಾಜ್ಯದಲ್ಲೇನಾಗುತ್ತದೆ?

Astrology 2024: 2024ರಲ್ಲಿ ಮಿಶ್ರ ಫ‌ಲಗಳೇ ಅಧಿಕ-ರಾಜ್ಯದಲ್ಲೇನಾಗುತ್ತದೆ?

ಜ್ಯೋತಿಷ್ಯದಲ್ಲಿ ನವಗ್ರಹಕ್ಕಿಂತಲೂ ನಕ್ಷತ್ರಗಳಿಗೆ ಹೆಚ್ಚು ಪ್ರಾಮುಖ್ಯತೆ ಯಾಕೆ ಕೊಡಲಾಗಿದೆ?

ಜ್ಯೋತಿಷ್ಯದಲ್ಲಿ ನವಗ್ರಹಕ್ಕಿಂತಲೂ ನಕ್ಷತ್ರಗಳಿಗೆ ಹೆಚ್ಚು ಪ್ರಾಮುಖ್ಯತೆ ಯಾಕೆ ಕೊಡಲಾಗಿದೆ?

ಶುಭ ವಿಚಾರ ತಿಳಿಯುವ ಗೋಚಾರ ಫಲ ಎಂದರೇನು, ಗುರುದೆಸೆ ಯಾವಾಗ ಆರಂಭವಾಗಲಿದೆ…

ಶುಭ ವಿಚಾರ ತಿಳಿಯುವ ಗೋಚಾರ ಫಲ ಎಂದರೇನು, ಗುರುಬಲ ಯಾವಾಗ ಆರಂಭವಾಗಲಿದೆ…

jjhgfd

ಮಾರಕಾಧಿಪತಿ, ಭಾದಕಾಧಿಪತಿ: ಅಕಾಲಿಕ ಮರಣದ ಬಗ್ಗೆ “ಅಷ್ಠಮ ಸ್ಥಾನ” ಮುನ್ಸೂಚನೆ ಕೊಡುತ್ತದೆಯೇ?

ಗಜಕೇಸರಿ ಯೋಗ… ಈ ಯೋಗ ಹೇಗೆ ಉಂಟಾಗುತ್ತದೆ, ಇದರ ಮಹತ್ವವೇನು?

ಗಜಕೇಸರಿ ಯೋಗ… ಈ ಯೋಗ ಹೇಗೆ ಉಂಟಾಗುತ್ತದೆ, ಇದರ ಮಹತ್ವವೇನು?

MUST WATCH

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

udayavani youtube

ಅಯ್ಯಪ್ಪ ಸ್ವಾಮಿ ಪವಾಡ | ಮಾತು ಬಾರದ ಬಾಲಕನಿಗೆ ಮಾತು ಬಂತು!

udayavani youtube

CCTV Footage | Udupi; ಹೆದ್ದಾರಿಯಲ್ಲೇ ಶರವೇಗದಲ್ಲಿ ಬಂದು ಅಪ್ಪಳಿಸಿದ ಕಾರು.

ಹೊಸ ಸೇರ್ಪಡೆ

3

Ullal ಬೀಚ್‌ ಸುಂದರ, ಆದರೆ ಅವ್ಯವಸ್ಥೆಗಳ ಆಗರ!

Renukaswamy Case: ಬಿಡುಗಡೆಯಾಗುತ್ತಿದ್ದಂತೆ ಓಡೋಡಿ ಬಂದು ಕಾರು ಹತ್ತಿದ ಆರೋಪಿ ಲಕ್ಷ್ಮಣ್

Renukaswamy Case: ಜೈಲಿನಿಂದ ಬಿಡುಗಡೆಯಾಗುತ್ತಿದ್ದಂತೆ ಓಡೋಡಿ ಕಾರು ಹತ್ತಿದ ಲಕ್ಷ್ಮಣ್‌

2(1

Punjalkatte: ವಾಮದಪದವು-ವೇಣೂರು ಸಂಪರ್ಕ ಇನ್ನೂ ದೂರ!

Neelavanti Movie: ಹಾರರ್‌ ನೀಲವಂತಿ

Neelavanti Movie: ಹಾರರ್‌ ನೀಲವಂತಿ

1(1

Savanur: ಸರಕಾರಿ ಶಾಲೆಯ 2 ಎಕ್ರೆ ಜಾಗ ಅಡಿಕೆ ತೋಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.