ಸಿಂಹ ರಾಶಿ ಗುಣಸ್ವಭಾವಗಳು ಹೀಗಿವೆ…


Team Udayavani, Aug 5, 2016, 9:35 PM IST

45.jpg

ಸಿಂಹರಾಶಿಯವರ ಕುರಿತು ಹೇಳಬಹುದಾದದ್ದು ಅಗಾಧವಾಗಿದೆ. ಹೆಸರೇ ಸೂಚಿಸುವಂತೆ ಸಿಂಹರಾಶಿಯವರು ಸಿಂಹದಂತೆ ಗರ್ಜಿಸಬಲ್ಲರು. ಸಂಸ್ಕೃತದಲ್ಲಿ ರೂಢಿಯ ಅರ್ಥಪೂರ್ಣ ಮಾತೊಂದಿದೆ. ಸ್ವಯಂಮೇವಾ ಮೃಗೇಂದ್ರತಾ ಎಂದು. ತನ್ನ ಸ್ವಯಂ ಶಕ್ತಿ ಸಾಮರ್ಥ್ಯಗಳಿಂದ ಸಿಂಹ ಕಾಡಿನ ಇಂದ್ರ ಮೃಗಗಳ ರಾಜನಾಗಿ ಮೆರೆಯುತ್ತಿದೆ ಎಂದು ಇದರ ಅರ್ಥ. ಬಹು ಬಲಾಡ್ಯವಾದ ಆನೆಯ ದಂಡನ್ನೇ ಸಿಂಹ ತನ್ನ ಬೇಟೆಯಾಡುವ ಕುಶಲ ಯುಕ್ತಿ ಸಾಹಸಗಳಿಂದಾಗಿ ಜಯಿಸಬಲ್ಲ ಹಿರಿಮೆಯದ್ದು. ಸಿಂಹರಾಶಿಯ ವ್ಯಕ್ತಿಗಳು ಹೆಸರಿಗೆ ತಕ್ಕ ಚಹರೆಯವರು ಎನ್ನಬಹುದು. ಅಗಲವಾದ ಎದೆ, ಶ್ರೀಮದ್ಗಾಂಭೀರ್ಯದ ನಡೆ ಮೇಳೈಸಿಕೊಂಡಿರುವುದು ಈ ವ್ಯಕ್ತಿಗಳ ಗುಣಲಕ್ಷಣಗಳು ಎಂದು ಧಾರಾಳವಾಗಿ ಹೇಳಬಹುದು. ಇನ್ನೂ ಅನೇಕ ಅನ್ಯರೀತಿಯ ಸಂಲಕ್ಷಣ ಪ್ರಭಾವ, ದುಷ್ಟ ಗ್ರಹಗಳಾದ ರಾಹು ಕೇತು ಶನೈಶ್ಚರ ಇತ್ಯಾದಿ ಸಂಪ್ರಾಪ್ತ ದೋಷಗಳು ಒಗ್ಗೂಡಿದಲ್ಲಿ ದುರ್ಬಲ ಕಾಯ ಕುಬjತೆಗಳು ಇವರನ್ನು ಬಾಧಿಸಬಹುದು. ಆಚಾರ ಬೇರೆ. ಆ ದುಷ್ಟ ಬಾಧೆಗಳು ಬಾಧಿಸಿದಾಗ ದೇಹ ಧರ್ಮ ದುರ್ಬಲಾತಿ ದುರ್ಬಲವೇ.

ಸ್ಟೀಫ‌ನ್‌ ಹಾಕಿನ್ಸ್‌ ಅಂಥ ಅತ್ಯಂತ ಚತುರ ಭೌತ ಶಾಸ್ತ್ರಜ್ಞ ಖಗೋಳ ವಿಜಾnನಿ ಹೆಚ್ಚಾಗಿ ಎಲ್ಲಾ ರೀತಿಯ ಆಧುನಿಕ ವಿಜಾnನಗಳ ಕುರಿತಾದ ಪರಮ ಪಂಡಿತ ಮೇಧಾವಿ. ಆದರೆ ಚಂದ್ರನಿಗೆ ಅಂಟಿಕೊಂಡ ರಾಹುವಿನ ಪೀಡೆ ಹಾಗೂ ನೀಚ ಶನಿಯ ವಿಷಯವಾಗಿ ಒದಗಿದ ದುಷ್ಟ ಕುಜಗ್ರಹದ ಪ್ರಭಲಾತಿ ಪ್ರಭಲ ಘಾತ ಪ್ರಹಾರದಿಂದಾಗಿ ಶನಿಯ ದುಷ್ಟ ದೃಷ್ಟಿ ಶುಕನಿಗೆ ಮಾರಕವಾಗಿ ಪರಿಣಮಿಸಿದ್ದರಿಂದ ಇಡೀ ಜೀವನವನ್ನು ಹುಟ್ಟಿದಾರಭ್ಯ ಒಂದು ಒಣಗಿದ ಕೃಷ ಮೂಲಂಗಿಯ ತುಂಡಿನಂತೆ ಸೊರಗಿಕೊಂಡೇ ಬದುಕುತ್ತಿದ್ದಾರೆ. ತಳ್ಳುವ ಗಾಡಿಯ ವಿನಾ ಸ್ವಂತ ಬಲದ ಮೇಲೆ ನಡೆದಾಡಲಾರರು. ಇವರ ಮೇಧಾ ಶಕ್ತಿ ಪ್ರಚಂಡವಾದದ್ದು. ಶನೈಶ್ಚರನ ದೃಷ್ಟಿಗೆ ಬಸವಳಿಸುವ ಉರಿ ಇದ್ದರೂ ಹಾಕಿನ್ಸ್‌ ಜಾತಕದಲ್ಲಿ ಶನೈಶ್ಚರನೇ ಯೋಗಕಾರಕ. ಸಹಜವಾಗೇ ಆಯುಷ್ಕಾರಕ ಗುಣಧರ್ಮ ಶನೈಶ್ಚರನದಾಗಿರುವುದರಿಂದ ಹಾಕಿನ್ಸ್‌ಗೆ ಸಾವು 

ಹತ್ತಿರ ಬರಲು ಹೆದರುತ್ತಿದೆ. ಅವರ ದೇಹ ಕುಗ್ಗಿ ಸೊರಗಿ ದುರ್ಬಲವಾಗಿ ಮುದುಡಿಕೊಂಡು ಗಾಲಿಕುರ್ಚಿಗೆ ಒದ್ದೆಯಾದ ವಸ್ತ್ರದಂತೆ ಅಂಟಿಕೊಂಡಿದೆ. ಈ ವ್ಯಕ್ತಿ ಇಷ್ಟು ದಿನಗಳ ಕಾಲ ಬದುಕಿರುವುದು ಸತ್ಯವೇ ಎಂದೆನಿಸುವುದು  ಆಶ್ಚರ್ಯವಲ್ಲ. ಆದರೆ ಅದು ಸತ್ಯ. ಬೃಹಸ್ಪತಿ ಕೇಂದ್ರ ಯೋಗ ಸಿಂಹ ರಾಶಿಯ ಚಂದ್ರನಿಗೆ ದಕ್ಕಿರುವುದು ಕುಂಡಲಿಯ ಲಗ್ನಾಧಿಪತಿ ಶುಕ್ರ ಸುಖಸ್ಥಾನದಲ್ಲಿ ಬುಧನೊಂದಿಗೆ ರಾಜಯೋಗ ನಿರ್ಮಿಸಿ, ಉತ್ತಮವಾದ ಗುರುದೃಷ್ಟಿ ಪಡೆದಿದ್ದು ಗುರುವೇ ಇವರ ಜಾತಕದ ಮರಣಾಧಿಪತಿ. ಒಂದು ಯೋಗ ಚಂದ್ರನಿಂದಲೂ ಮರಣಾಧಿಪತಿಯತ್ವ ಇದ್ದರೂ ಲಗ್ನಾತ್‌ ಮರಣ ಸ್ಥಾನದಿಂದ ಲಗ್ನಾಧಿಪತಿ ಶುಕ್ರನನ್ನು ದೃಷ್ಟಿಸಿದ್ದು ಆಯುಷ್ಯ ವೃದ್ಧಿಗೊಂದು ಯೋಗ ಸಿದ್ಧಿಯಾಗಿದೆ. ತ್ರಿಮೂರ್ತಿಗಳೇ ಮುನಿದರೂ ಗುರು ಕಾಯÌನು ಎಂಬ ಲೋಕಾರೂಢಿಯ ಮಾತಿಗೆ ಹಾಕಿನ್ಸ್‌ ಪ್ರತ್ಯಕ್ಷ ಸಾಕ್ಷಿ$.

 ಕೃಷ್ಣರಂಧ್ರಗಳ ಬಗೆಗಿನ ಆಳವಾದ ಅಧ್ಯಯನ ಆಯುಷ್ಯ ಕಳೆದುಕೊಂಡ ನಕ್ಷತ್ರಗಳ ಬಗೆಗಿನ ವಿಚಾರವಾಗಿನ ಅಧ್ಯಯನ ಗುರುತ್ವಾಕರ್ಷಣಕ್ಕೆ ಸಂಬಂಧಿಸಿದ ಸತತ ಅಧ್ಯಯನ. ಅಣುಗಳ ಬಗೆಗಿನ ಸೂûಾ¾ತಿಸೂಕ್ಷ್ಮ ಸ್ಫೋಟಕ ಸಿದ್ಧಾಂತಗಳ ಕುರಿತಂತೆ ಸ್ಟೀಫ‌ನ್‌ ಕುಬjನಾದರೂ ತನ್ನ ದೇಹದ ಒಳಗಿನ ಅಗಾಧವಾದ ಮೆದುಳಿನ ಸ್ನಿಗ್ಧ ಪಾಂಡಿತ್ಯವನ್ನು ಮಂಡಿಸುತ್ತಲಿದ್ದಾರೆ. ಇದು ಮನುಕುಲದ ಉಳಿವಿಗೆ, ಸಂಪನ್ನತೆಗೆ ತನ್ನದೇ ಪಾಲನ್ನು ದೊಡ್ಡದಾಗಿ ಧಾರೆ ಎರೆಯುತ್ತಿದೆ. ಪ್ರಕಾಶಮಾನ ಸೂರ್ಯನ  ಬೌದ್ಧಿಕ ಚಾಣಾಕ್ಷತೆಗಿಂತ ಬುಧ, ಸಿಂಹ, ರಾಶಿಯ ಚಂದ್ರನ ಮೂಲಕ ವಿಜಾnನದ ವಿಚಾರದಲ್ಲಿ ಲಾಭದ ಕೊಪ್ಪರಿಗೆಯನ್ನೇ ಸ್ಟೀಫ‌ನ್‌ಗೆ ಒದಗಿಸಿದ್ದಾರೆ. 

ಮಹಾಕ್ರೂರಿ ಔರಂಗಾಜೇಬ್‌ ಕೂಡಾ ಸಿಂಹ ರಾಶಿಯವನೇ. ಆದರೆ ಪರಮ ಧರ್ಮಭೀರು. ತನ್ನ ಜೀವನೋಪಾಯಕ್ಕಾಗಿನ ದುಡಿಮೆಯನ್ನು ತಾನೇ ಹೆಣೆದ ಪ್ರಾರ್ಥನಾ ಟೋಪಿಗಳನ್ನು ಮಾರಿ ತಾನೇ ಸಂಪಾದಿಸಿಕೊಳ್ಳುತ್ತಿದ್ದ. ಗ್ರೆಗ್‌ ಚಾಪೆಲ್‌ ಭಾರತೀಯ ಕ್ರಿಕೆಟ್‌ ಪ್ರಿಯರಿಗೇನು ಪ್ರಪಂಚದ ಎಲ್ಲಾ ಕ್ರಿಕೆಟ್‌ ಪ್ರಿಯರಿಗೂ ಗೊತ್ತು. ನೂರಕ್ಕೆ ನೂರು ಶ್ರಮವನ್ನು ತಂಡದ ಹಿತವನ್ನು ಬಯಸಿ ಟೀಕೆಗೊಳಗಾಗಿ ಕರ್ತವ್ಯ ನಿರ್ವಹಿಸಿದ ದುರ್ದೈವ ಆಟಗಾರ. ಆದರೆ ಪ್ರಚಂಡ ಹೋರಾಟಗಾರ. ಭಾರತ ತಂಡದ ತರಬೇತುದಾರನಾಗಿ ಹಲವು ವಿವಾದಗಳನ್ನು ಸೃಷ್ಟಿಸಿದರೂ ರೈನಾ, ಇಶಾಂತ್‌ ಶರ್ಮಾ, ದ್ರಾವಿಡ್‌ ಮುಂತಾದವರ ಮೂಲಕ ಉತ್ತಮ ಪ್ರಯತ್ನಗಳನ್ನು ತಂಡಕ್ಕಾಗಿ ರೂಪಿಸಿದ ಚಾಪೆಲ್‌ ಸಿಂಹ ರಾಶಿಯ ವ್ಯಕ್ತಿ.

ತಮಿಳುನಾಡಿನ ಮುಖ್ಯ ಮಂತ್ರಿ ಜಯಲಲಿತಾ, ಟಿಬೆಟ್‌ ಧರ್ಮಗುರು ದಲೈಲಾಮ, ಹಿಂದಿ ಚಿತ್ರರಂಗದ ಪ್ರಥಮ ಸೂಪರ್‌ಸ್ಟಾರ್‌ ರಾಜೇಶ್‌ ಖನ್ನಾ, ಎರಡನೇ ಮಹಾಯುದ್ಧದ ನಿರ್ಣಾಯಕ ಸೇನಾನಿ  ಚರ್ಚಿಲ್‌ ಭಾರತದ ಮಾಜಿ ಪ್ರಧಾನಿ ರಾಜೀವ್‌ ಗಾಂಧಿ, ಹಠಮಾರಿ ಎಂದೆನಿಸಿದರೂ ಶಿಸ್ತಿಗಾಗಿ ಕಾತರಿಸಿದ್ದ. ಅಪಘಾತದಲ್ಲಿ ಅಸು ನೀಗಿದ ಸಂಜಯ್‌ ಗಾಂಧಿ ಹಿಂದಿ ಚಿತ್ರರಂಗದ ಮಹಾನ್‌ ತಾರೆ ದಿಲೀಪ್‌ ಕುಮಾರ್‌.  ಕವಿ, ಕಾದಂಬರಿಕಾರ ವಂದೇ ಮಾತರಂ ಎಂಬ ಭಾರತೀಯರ ಪಾಲಿನ ರೋಮಾಂಚಕ ಗೀತೆ ಬರೆದ ಬಂಕಿಮ ಚಂದ್ರ ಚಟರ್ಜಿ, ಉತ್ತಮ ಆಡಳಿತಗಾರ ಎಂದು ಹೆಸರು ಪಡೆಯುತ್ತಿದ್ದಾಗಲೇ ಹಂತಕನ ಗುಂಡೇಟಿಗೆ ಬಲಿಯಾದ ಅಮೆರಿಕಾದ ಮಾಜಿ ಅಧ್ಯಕ್ಷ ಜಾನ್‌ ಎಫ್ ಕೆನಡಿ, ಇತ್ಯಾದಿ ಹೀಗೆ ಸಿಂಹರಾಶಿಯವರ ಪಟ್ಟಿ ಬೆಳೆಯುತ್ತದೆ. ಸ್ವಸಾಮರ್ಥ್ಯದ ಸಿದ್ಧಿಸೂತ್ರ ಹಿಡಿಯಬಲ್ಲವರೆಲ್ಲ ಇವರಾಗಿದ್ದರು ಎಂಬುದನ್ನು ನಾವು ಪ್ರಧಾನವಾಗಿ ಗಮನಿಸ ಬಹುದು. 

ಜಯಲಲಿತಾ ಅವರನ್ನೇ ಗಮನಿಸಿ ಸಿಂಹರಾಶಿಯವರ ಮೂಲಭೂತ ಗುಣವಾದ ಹೋರಾಟ ಜಯಲಲಿತಾ ಅವರ ಪ್ರಧಾನ ಆಸ್ತಿ. ಅವರ ವಿರುದ್ಧವಾದ ಯಾವುದೇ ಅಂಶಗಳನ್ನು ಇವರು ಸ್ವೀಕರಿಸಲಾರರು. ಗಾಳಿ ಬಂದೆಡೆ ತೂರಲಾರರು. ಇವರ ಜಾತಕದ ದೊಡ್ಡ ದೋಷ ಬಂಧನ ಯೋಗದ ಉಪಸ್ಥಿತಿ.  ಆದರೆ ರೀತಿ ರಿವಾಜುಗಳಲ್ಲಿ ಶಿಸ್ತಿಗೆ ಸದಾ ಬದ್ಧ. ಆಖೈರಿನ ಜಯಕ್ಕಾಗಿ ಸದಾ ಹೋರಾಟ. ದಣಿವರೆಯದ ಪ್ರವೃತ್ತಿ. ನರೇಂದ್ರಮೋದಿಯವರ ಜನ್ಮವಿವರದ ಲಭ್ಯತೆ ಇರದ ಕಾರಣ ಅವರ ಪ್ರಧಾನಿ ಪಟ್ಟದ ಬಗೆಗೆ ಚಿತ್ರಗಳು ಮಸುಕಾಗಿವೆ. ಆದರೆ 2014ರ ಗೋಚಾರದ ಉತ್ಛಗುರು ಜಯಲಲಿತಾ ಅವರನ್ನು ನರೇಂದ್ರಮೋದಿಯವರ ಸರತಿಯಲ್ಲೇ ಪ್ರಧಾನಿ ಪಟ್ಟಕ್ಕೆ ಹತ್ತಿರ ತಂದು ನಿಲ್ಲಿಸಿದರೆ ಆಶ್ಚರ್ಯವಿಲ್ಲ. ಸಿಂಹ ರಾಶಿಯ ಚಂದ್ರ ಭಾಗ್ಯದ ಬುಧರನ್ನು ಸಕಾರಾತ್ಮಕವಾಗಿ ಸ್ಪಂದಿಸಿರುವುದು, ಜನನದ ಸಮಯದಲ್ಲಿ ಧನುರಾಶಿಯಲ್ಲೇ ಗುರು ಇರುವುದು ಇತ್ಯಾದಿ ಇತ್ಯಾದಿ ಸೇರಿ ಭಾರದತ ಮುಂದಿನ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಜಯಲಲಿತಾ ಅವರತ್ತ ಹೊಸ ಜವಾಬ್ದಾರಿ ತಂದಿತ್ತರೆ ಆಶ್ಚರ್ಯವಿಲ್ಲ. 
 

ಟಾಪ್ ನ್ಯೂಸ್

Firefighters rescue horse that fell into canal

Shimoga; ಕಾಲುವೆಗೆ ಬಿದ್ದ ಕುದುರೆಯನ್ನು ರಕ್ಷಣೆ ಮಾಡಿದ ಅಗ್ನಿಶಾಮಕ ಸಿಬ್ಬಂದಿ

SUNIL-KUMAR

Congress government ಗಾಂಧಿವಾದದಿಂದ‌ ಮಾವೋವಾದಕ್ಕೆ ಹೊರಳಿದೆ: ಸುನಿಲ್ ಕುಮಾರ್ ಕಿಡಿ

arrested

Delhi Police; ಬೆಂಗಳೂರಿನಲ್ಲಿ ಇಬ್ಬರು ಶಾರ್ಪ್‌ಶೂಟರ್‌ಗಳ ಬಂಧನ

KSRTC: ಚಾರ್ಮಾಡಿ ಘಾಟಿಯಲ್ಲಿ ಕೆಟ್ಟು ನಿಂತ ಸರ್ಕಾರಿ ಬಸ್, ಪ್ರಯಾಣಿಕರಲ್ಲಿ ಆತಂಕ…!

KSRTC: ಚಾರ್ಮಾಡಿ ಘಾಟಿಯಲ್ಲಿ ಕೆಟ್ಟು ನಿಂತ ಸರ್ಕಾರಿ ಬಸ್, ಪ್ರಯಾಣಿಕರಲ್ಲಿ ಆತಂಕ…!

1-frrr

L&T; ನೌಕರರು ರವಿವಾರವೂ ಕೆಲಸ ಮಾಡಬೇಕು, ವಾರಕ್ಕೆ 90 ಗಂಟೆ ಕೆಲಸ!!

1-naxal

NIA ವಿಶೇಷ ನ್ಯಾಯಾಲಯ; ಶರಣಾದ ಆರು ನಕ್ಸಲರಿಗೆ ಜ.31ರವರೆಗೆ ನ್ಯಾಯಾಂಗ ಬಂಧನ

Dog Love: ಮನೆ ಮಗನಂತಿರುವ ಈ ಶ್ವಾನ ಹಸುಗಳನ್ನು ಮೇಯಿಸಲು ಎಕ್ಸ್ ಪರ್ಟ್!

Dog Love: ಮನೆ ಮಗನಂತಿರುವ ಈ ಶ್ವಾನ ಹಸುಗಳನ್ನು ಮೇಯಿಸಲು ಎಕ್ಸ್ ಪರ್ಟ್!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Astrology 2024: 2024ರಲ್ಲಿ ಮಿಶ್ರ ಫ‌ಲಗಳೇ ಅಧಿಕ-ರಾಜ್ಯದಲ್ಲೇನಾಗುತ್ತದೆ?

Astrology 2024: 2024ರಲ್ಲಿ ಮಿಶ್ರ ಫ‌ಲಗಳೇ ಅಧಿಕ-ರಾಜ್ಯದಲ್ಲೇನಾಗುತ್ತದೆ?

ಜ್ಯೋತಿಷ್ಯದಲ್ಲಿ ನವಗ್ರಹಕ್ಕಿಂತಲೂ ನಕ್ಷತ್ರಗಳಿಗೆ ಹೆಚ್ಚು ಪ್ರಾಮುಖ್ಯತೆ ಯಾಕೆ ಕೊಡಲಾಗಿದೆ?

ಜ್ಯೋತಿಷ್ಯದಲ್ಲಿ ನವಗ್ರಹಕ್ಕಿಂತಲೂ ನಕ್ಷತ್ರಗಳಿಗೆ ಹೆಚ್ಚು ಪ್ರಾಮುಖ್ಯತೆ ಯಾಕೆ ಕೊಡಲಾಗಿದೆ?

ಶುಭ ವಿಚಾರ ತಿಳಿಯುವ ಗೋಚಾರ ಫಲ ಎಂದರೇನು, ಗುರುದೆಸೆ ಯಾವಾಗ ಆರಂಭವಾಗಲಿದೆ…

ಶುಭ ವಿಚಾರ ತಿಳಿಯುವ ಗೋಚಾರ ಫಲ ಎಂದರೇನು, ಗುರುಬಲ ಯಾವಾಗ ಆರಂಭವಾಗಲಿದೆ…

jjhgfd

ಮಾರಕಾಧಿಪತಿ, ಭಾದಕಾಧಿಪತಿ: ಅಕಾಲಿಕ ಮರಣದ ಬಗ್ಗೆ “ಅಷ್ಠಮ ಸ್ಥಾನ” ಮುನ್ಸೂಚನೆ ಕೊಡುತ್ತದೆಯೇ?

ಗಜಕೇಸರಿ ಯೋಗ… ಈ ಯೋಗ ಹೇಗೆ ಉಂಟಾಗುತ್ತದೆ, ಇದರ ಮಹತ್ವವೇನು?

ಗಜಕೇಸರಿ ಯೋಗ… ಈ ಯೋಗ ಹೇಗೆ ಉಂಟಾಗುತ್ತದೆ, ಇದರ ಮಹತ್ವವೇನು?

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

Firefighters rescue horse that fell into canal

Shimoga; ಕಾಲುವೆಗೆ ಬಿದ್ದ ಕುದುರೆಯನ್ನು ರಕ್ಷಣೆ ಮಾಡಿದ ಅಗ್ನಿಶಾಮಕ ಸಿಬ್ಬಂದಿ

SUNIL-KUMAR

Congress government ಗಾಂಧಿವಾದದಿಂದ‌ ಮಾವೋವಾದಕ್ಕೆ ಹೊರಳಿದೆ: ಸುನಿಲ್ ಕುಮಾರ್ ಕಿಡಿ

Katapady: ಕಾರ್ಮಿಕ ಕುಸಿದು ಬಿದ್ದು ಸಾವು

Katapady: ಕಾರ್ಮಿಕ ಕುಸಿದು ಬಿದ್ದು ಸಾವು

arrested

Delhi Police; ಬೆಂಗಳೂರಿನಲ್ಲಿ ಇಬ್ಬರು ಶಾರ್ಪ್‌ಶೂಟರ್‌ಗಳ ಬಂಧನ

Hanchikatte: ಆ್ಯಂಬುಲೆನ್ಸ್‌ಗೆ ಕೆಎಸ್‌ಆರ್‌ಟಿಸಿ ಬಸ್‌ ಢಿಕ್ಕಿ

Hanchikatte: ಆ್ಯಂಬುಲೆನ್ಸ್‌ಗೆ ಕೆಎಸ್‌ಆರ್‌ಟಿಸಿ ಬಸ್‌ ಢಿಕ್ಕಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.