ರಾಹು ಕೇತುಗಳು ಕಾಲ ಹಾಗೂ ಅಂತರಿಕ್ಷ ಸೂಚಕಗಳೇ ?


Team Udayavani, Dec 19, 2015, 6:43 AM IST

6.jpg

ರಾಹು ಹಾಗೂ ಕೇತುಗಳು ಛಾಯಾಗ್ರಹಗಳು. ನಮ್ಮ ಆಧುನಿಕ ವಿಜ್ಞಾನ ರಾಹು ಹಾಗೂ ಕೇತುಗಳನ್ನು ಗುರುತಿಸುವುದಿಲ್ಲ. ಆಧುನಿಕ ವಿಜಾnನವೆಂಬುದು ನಮ್ಮ ಆರ್ಷೇಯ  ಪ್ರತಿಪಾದನೆಗಳಿಗೆ ಈಗಾಗಲೇ ಸಾವಿರ ಸಾವಿರ ವರ್ಷಗಳ ಹಿಂದಿನ ಮಾತು. ಯಾಕೆಂದರೆ ನಮ್ಮ ವೇದಗಳು ಇತರ ಪಾರಮಾರ್ಥಿಕ ಚರ್ಚೆ ವ್ಯಾಖ್ಯಾನಗಳು ಈಗ ವಿಜ್ಞಾನ ಎಂಬ ನಮ್ಮ ಆಧುನಿಕ ಪರಿಭಾಷೆಯ ಚೌಕಟ್ಟುಗಳು ತೋರಿಸಿಕೊಟ್ಟ ಕಾಲಕ್ಕಿಂತ ಮುಂಚೆಯೇ ಪ್ರತಿಪಾದಿಸಿ ಮುಗಿದದ್ದು. ಇನ್ನೂ ಪ್ರತಿಪಾದಿಸ ಬಹುದಾದದ್ದು ಎಲ್ಲೋ ಒಂದು ಕಾರಣಕ್ಕಾಗಿ ನಡುವೆಯೇ ನಿಂತಿತು. ಕಾಲ ಸರಿದು ಹೋದಂತೆ ಕೆಲವು ಅನ್ಯ ಕಾರಣಗಳಿಗಾಗಿ ಸ್ಥಗಿತಗೊಳುತ್ತವೆ. ಅದಕ್ಕೆ ಹಿರಿಯರು ಕಾಲಾಯ ತಸ್ಮೈ ನಮಃ ಎಂದರು. ಕಾಲಕ್ಕೆ ನನ್ನ ನಮನಗಳು ಎಂಬವಾಕ್ಯದ ಅರ್ಥಕ್ಕೆ ವಾಸ್ತವದ ಲೇಪವೂ ಇದೆ. ವ್ಯಂಗ್ಯವೂ ಇದೆ. ಕಾಲಾನುಘಟ್ಟದಲ್ಲಿ ಮೂರ್ಖರು ಶಕ್ತಿವಂತರಾಗುತ್ತಾರೆ. ಸದ್ಯದ ಹೊಸ ವರ್ತಮಾನದಲ್ಲಿ ಇದು ಸ್ಪಷ್ಟ. ಹೀಗಾಗಿ ಮೂರ್ಖರೇ ಕಾಲ ಎಂಬ ಶಬ್ಧಕ್ಕೆ ಪ್ರತಿ ಅರ್ಥಗಳಾಗುತ್ತಾರೆ. ಮೂರ್ಖರು ಶಕ್ತಿವಂತರಾದಾಗ ನಮಸ್ಕಾರ ಸೂಕ್ತ. 

ಕಾಲ ಮತ್ತು ರಾಮಾಯಣ

ಹೀಗೆಯೇ ಕಾಲ ಎಂಬುದು ದಿವ್ಯವೊಂದರ ಓಟದ ಪರಿಣಾಮದಿಂದಲೂ ಗುರುತಿಸಲ್ಪಡಬೇಕಾಗಿದೆ. ಹೀಗಾಗಿ ಕಾಲ ದೈವತ್ವಕ್ಕೆ ಜೋಡಣೆಗೊಂಡ ಪರಿಕಲ್ಪನೆ. ಇಂಥ ಕಾಲ ಎಂಬ ಸರಕಿನ ಅಧಿಪತಿ ಕಾಲಪುರುಷ. ಸಾಕ್ಷಾತ್‌ ದೇವರಾಗಿದ್ದಾನೆ. ಹೀಗಾಗಿ ಕಾಲಾಯ ತಸ್ಮೈ ನಮಃ ಎಂದರೆ ಅಂಥ ದೈàವಿ ಪುರುಷನಿಗೆ ನಮಸ್ಕಾರ ಎಂಬ ವಿನಯವೇ ಇದೆ. ರಾಮಾವತಾರದ ಕೊನೆಯಲ್ಲಿ ಅಯೋಧ್ಯೆಯನ್ನು ಬಿಡಲಾರದ ರಾಮನನ್ನು ಅವತಾರದಿಂದ ಮುಕ್ತನಾಗಿ ವೈಕುಂಠಕ್ಕೆ ಹಿಂತಿರುಗು ಎಂದು ನೆನಪಿಸಲು ಸ್ವತಃ ಕಾಲಪುರುಷನೇ ರಾಮನ ಮಂತ್ರಾಲಯಕ್ಕೆ ಮಾತನಾಡಲು ಬರುತ್ತಾನೆ. ಇಂಥ ಕಾಲಕ್ಕೆ ದೈವತ್ವವೆಂಬುದು ಶಾಂತಸ್ವರೂಪವಾದರೆ ಕಾಲ ಪುರುಷ ಬಂದಾಗಲೇ ಮುಟ್ಟಿದರೆ ಬೆಂಕಿ ಭುಗಿಲುಗೊಂಡು ಎದ್ದೇಳುವ ಕೋಪಕ್ಕೆ ಹೆಸರಾದ ದೂರ್ವಾಸ ಮುನಿಗಳೂ ಬರುತ್ತಾರೆ. ದೂರ್ವಾಸರು ನಿಜವಾಗಿ ದೂರ್ವಾಸರು. ಅದೇನೋ ಎಂತೋ ದೂರ್ವಾಸರಾಗಿ ಹೆಸರು ಲಂಬಗೊಂಡಿತು. ಮಲಿನ ವಸ್ತ್ರಧಾರಿಗಳು ಎಂಬುದು ದೂರ್ವಾಸ ಎಂಬ ಶಬ್ದಕೆ ಅರ್ಥ. ಒಟ್ಟಿನಲ್ಲಿ ಉಡುಪುಗಳ ಬಗ್ಗೆ ಹೆಚ್ಚಿಗೆ ತಲೆಕೆಡಿಸಿಕೊಂಡಿರದ ವ್ಯಕ್ತಿ. ಮಹರ್ಷಿ ತಪದ ದೀರ್ಘ‌ತೆಯಿಂದ ಹಸಿನ ತಾಪಕ್ಕೆ ತುತ್ತಾಗಿ ರಾಮನೆ ಬಳಿಯೇ ಬಂದು ಆತಿಥ್ಯ ಸ್ವೀಕರಿಸಿ ಹಸಿವನ್ನು ನೀಗಿಸಿಕೊಳ್ಳಲು ಬಂದಾಗ ರಾಮಾವತಾರದ ವೇದಿಕೆ ಸಿದ್ಧ ಗೊಳ್ಳುವುದು ರಾಮಾಯಣದ ಅಂತ್ಯದ ವಸ್ತು.

ಕೇಳಲು ಇದು ಕಥೆಯಂತೇ ಕಂಡರೂ ವಿವಿಧ ರೀತಿಯ ಅರ್ಥಗಳು ಕತೆಯ ಒಳಗೊಳಗೇ ಅತಿದ್ದು ನಾನಾ ರೀತಿಯ ಸೂಕ್ಷ್ಮವನ್ನು ಒದಗಿಸಿಕೊಡುತ್ತದೆ. ಕಾಲಪುರುಷನಿಗೆ ಓಟದೆ. ಆದರೆ ಜಗತ್ತನ್ನು ಸುವ್ಯವಸ್ಥಿತವಾಗಿಡಲು ಒಂದು ಮಿತಿಯನ್ನು ರೂಪಿಸಿಕೊಳ್ಳಬೇಕು. ಮಿತಿ ದಾಟಿದಾಗ ಸ್ಥಿತಿಕರ್ತನಾದ ರಾಮ (ವಿಷ್ಣು)ನ ಬಳಿಯೇ ಓಡಿ ಬರುತ್ತಾನೆ. ಇದನ್ನು ಒಂದು ಸಂಘರ್ಷದಲ್ಲಿಡಲು ದೂರ್ವಾಸರ ಆಗಮನವಾಗಿ ಲಕ್ಷ್ಮಣನ ದೇಹಾವಸಾನಕ್ಕೆ ಕಾಲ ನಿರ್ಣಯವಾಗುತ್ತದೆ. ಲಕ್ಷ್ಮಣನನ್ನು ಕಳೆದುಕೊಂಡ ಶ್ರೀರಾಮ ತನ್ನ ಅವತಾರವನ್ನೂ ಸಮಾಪ್ತಿಗೊಳಿಸುತ್ತಾನೆ. ಒಂದರ ಪತನ ಇನ್ನೊಂದಕ್ಕೆ ಕಾರಣವಾಗಿ (ಲಕ್ಷ್ಮಣನ ಅಂತ್ಯ ರಾಮನ ಅಂತ್ಯಕ್ಕೆ ಬೀಜವಾಗುವ) ರಾಮಾವತಾರ ಪರಿಸಮಾಪ್ತಿಯಾಗುತ್ತದೆ. 

ಪುರುಷ ಸೂಕ್ತ ಮತ್ತು ಪುರುಷ

 ಹಾಗಾದರೆ ಈ ಕಾಲ ಯಾರು ಎಲ್ಲಿದ್ದಾನೆ? ಕಾಲನಿಗೂ ತನ್ನ ಓಟಕ್ಕೆ ಒಂದು ವ್ಯಾಪ್ತಿ ಬೇಕು. ಕಾಲದ ಓಟ ನಿರಂತರವೇ? ಈ ಕಾಲದ ಓಟಕ್ಕೆ ಸ್ಥಳ ಯಾವುದು? ವಿಶ್ವದ ಕಲ್ಪನೆ ನಮಗಿದೆ. ಆದರೆ ವಿಶ್ವಕ್ಕೆ ಸ್ಥಳ ಯಾವುದು? ಆಂತರಿಕ್ಷವೇ ವಿಶ್ವವನ್ನು ತನ್ನ ವ್ಯಾಪ್ತಿಯಲ್ಲಿ ಹಿಡಿದಿಟ್ಟಿದೆಯೇ? ಹಾಗಾದರೆ ಆಂತರಿಕ್ಷದ ವ್ಯಾಪ್ತಿ ಎಷ್ಟು ಶಾಲವಾದದ್ದು? ಪುರುಷ ಸೂಕ್ತದಲ್ಲಿನ ಮೊದಲ ಮಂತ್ರವೇ ಆದಿಭೂತ ಅಂದರೆ ಕಾಲ ಪುರುಷ ಎನ್ನೋಣವೇ? ಭಗವಂತ ಎನ್ನೋಣವೇ ಏನಾದರೂ ಅನ್ನಿ ಆದರೆ ಮೂಲ ಪುರುಷ (ಇಲ್ಲಿ ಮತ್ತೆ ಪುರುಷ ಮಾತ್ರನೇ ಎಂಬ ಪ್ರಶ್ನೆ ಸಹಜ. ಪ್ರತಿಪುರುಷನೂ ಸ್ತ್ರೀ ರೂಪದಲ್ಲಿಯೇ ಕರಗಿಕೊಂಡಿದ್ದಾನೆ. ಸ್ತ್ರೀ ಪುರುಷನಲ್ಲಿಯೇ ಕರಗಿಕೊಂಡಿದ್ದಾಳೆ. ಹರಿಹರ, ಶಂಕರ, ನಾರಾಯಣ ಇತ್ಯಾದಿ ಸ್ವರೂಪಗಳು ನಮಗೆ ಪ್ರಮಾಣ ಇಲ್ಲ. ಇಲ್ಲಿ ವಿಷ್ಣುವೇ ಮೋನಿಯಾಗಿದ್ದಾನೆ. ಅವನೊಳಗೆ ಸ್ತ್ರೀ ಇದ್ದ ಕಾರಣದಿಂದಲೇ ಮೋನಿಯಾಗುವ ಶಕ್ತಿ ಬಂತು. ಈಶ್ವರನಿಗೂ ತನ್ನೊಳಗೆ ಸ್ತ್ರೀ ಸ್ವರೂಪ ಇರುವುದರೆ ಬಗ್ಗೆ ಅರಿತು ಎಂಬುದು ಸ್ಕಂದ ಪುರಾಣದಲ್ಲಿ ವೇದ್ಯ. ಇವೆಲ್ಲಾ ಕಥೆಗಳನ್ನು ಪೂರ್ತಿಯಾಗಿ ವಿವರಿಸುವುದಿಲ್ಲ ಕಷ್ಟ. ವಾಸ್ತವದಲ್ಲಿ ಪುರುಷ ಮತ್ತು ಪ್ರಕೃತಿಯರು ಒಗ್ಗೂಡಿದ ಸಂಯುಕ್ತ ಸ್ವರೂಪ. ಅವನು ಹೇಗೆ ವ್ಯಾಪಿಸಿಕೊಂಡಿದ್ದಾನೆ ಎಂಬುದು ಪುರುಷ ಸೂಕ್ತದಲ್ಲಿ ಚೆನ್ನಾಗಿ ವಿವರಿಸಲ್ಪಟ್ಟಿದೆ. ಪುರುಷ ಸೂಕ್ತದಲ್ಲಿನ ಈ ಮಂತ್ರ ಹೀಗಿದೆ. ಓಂ ಸಹಸ್ರ ಶೀರ್ಷಾ ಪುರುಷಃ ಸಹಸ್ರಾಕ್ಷ ಸಹಸ್ರಪಾತ್ಸ ಭೂಷಣಂ ವಿಶ್ವತೋ ವ್ಯತ್ವಾ ಅತ್ಯ ತಿಷ್ಠದ್ದ  ಶಾಂಗುಲಂ (ಪುರುಷನು ಅಂದರೆ ಆದಿಯಲ್ಲಿ ಸಂಭಸಿದ ಸರ್ವಶಕ್ತನು ಸಹಸ್ರ ತಲೆಗಳನ್ನು ಸಹಸ್ರ ಕಣ್ಣುಗಳನ್ನು ಸಹಸ್ರ ಪಾದಗಳನ್ನು ಹೊಂದಿದ್ದಾನೆ. ಅವನು ಭೂಮಿಯೂ ಸೇರಿದನತೆ ಇಡೀ ವಿಶ್ವವನ್ನು ಎಲ್ಲೆಡೆಗಳಿಂದ ಸುತ್ತುವರೆದು ಇವೆಲ್ಲವನ್ನೂ ಮೀರಿ ಮತ್ತೆ ಹತ್ತು ಅಂಗುಲದಷ್ಟು ಅಧಿಕವಾಗಿ ವ್ಯಾಪಿಸಿದ್ದಾನೆ ಎಂದರ್ಥ).

ಇನ್ನಿಷ್ಟು ವಿಧವಿಧವಾಗಿ ಪುರುಷನ ಬಗೆಗಿನ ವಿವರಗಳು ಪುರುಷಸೂಕ್ತದಲ್ಲಿ ಬರುತ್ತದೆ. ಸೃಷ್ಟಿಯನ್ನು ಒಂದು ಸ್ಥಿತಿಯಲ್ಲಿ ಸುವ್ಯಸ್ಥಿತವಾಗಿಡಲು ಪುರುಷನು ಸ್ಥಿತಿಗಾಗಿ ವಲೆಸೆ ನಡೆಸುತ್ತಾನೆ. ಆದರೆ ಇರುವುದೇ ಜಡವಾಗಿ ಹೊಸದೊಂದರೆ ಉತ್ಪತ್ತಿಗಾಗಿ ಕಾರಣವಾಗುವ ಲಯವನ್ನು ಪುರುಷನೇ ನಡೆಸುತ್ತಾನೆ. ಅಂತೆಯೇ ಸರ್ವಸ್ವಕ್ಕೂ ಲಯಕರ್ತನಾಗಿ ಸರ್ವಸ್ವದ ಸುಸ್ಥಿತಿಗಾಗಿ ಸ್ಥಿತಿಕರ್ತನಾಗಿ ಸರ್ವಸ್ವವನ್ನೂ ಸೃಷ್ಟಿಸುವ ಬ್ರಹ್ಮನೂ ಆಗುತ್ತಾನೆ. ಬ್ರಹ್ಮನು ವಿಷ್ಣುವಿನ ನಾಭಿಯಲ್ಲಿಯೇ ಹೊರಚಿಮ್ಮಿದ ಕಮಲದ ಹೂವಿನ ಮೇಲೆ ಜನಿಸಲ್ಪಟ್ಟಿದ್ದಾನೆ. ವಿಶ್ವದ ಅಗಾಧವಾದ ಕೆಸರನ್ನು ಪುರುಷ ಮರುಸೃಷ್ಟಿಗೆ ಬೇಕಾದ  ಬ್ರಹ್ಮನನ್ನು ಕಮಲದ ನಡುವಿರಿಸಿ ಸೃಷ್ಟಿಸಲು ಮುಂದಾಗುತ್ತಾನೆ. ಅಂದರೆ ಯಾವುದಕ್ಕೂ ನಾಶವಿಲ್ಲ. ಅದೇ ಇದ್ದದ್ದೇ ಮತ್ತೆ ಪರಿಷ್ಕರಣಗೊಂಡು ಹುಟ್ಟುತ್ತದೆ ಎಂಬ ವಿಷಯ ಇಲ್ಲಿ ಸ್ಪಷ್ಟವಾಗುತ್ತದೆ. ವಿಷ್ಣುವಿನ ಹೊಕ್ಕಳಬಳ್ಳಿ  ಸೃಷ್ಟಿಕರ್ತ ಬ್ರಹ್ಮನ ಹುಟ್ಟಿಗೆ ಅನಿವಾರ್ಯ. ಅದೇ ಬ್ರಹ್ಮ ಸಕಲ ಚರಾಚರಗಳ ಜನಕ. ಅವನ ಸೃಷ್ಟಿಯು ಎಲ್ಲಾ ವಸ್ತುಗಳು ಜರ್ಝರವಾದಾಗ ಶಿವನಿಂದ ಲಯಕ್ಕೆ ನಾಂದಿ. ವಿಜಾnನ ಹೇಳುತ್ತಿರುವುದನ್ನು ನಮ್ಮ ಪುರಾಣವೇ ಕಥಾರೂಪದಲ್ಲಿ ವಿವರಿಸಿದೆ ಎಂಬುದು ಸ್ಪಷ್ಟ.  ಹಾಗಾದರೆ ವಿಜಾnನ ನಮ್ಮ ಆಷೇìಯ ತತ್ವಗಳಲ್ಲಿ ಅಡಗಿಕೊಂಡಿದೆ. 

ಛಾಯಾಗ್ರಹಗಳ ಅಸ್ತಿತ್ವ

ಇಲ್ಲೀಗ ವೇಳೆ ಮತ್ತು ವಿಶ್ವವನ್ನು ಅಡಕಗೊಳಿಸಿಕೊಂಡ ಅನಂತ ವ್ಯಾಪ್ತಿ ಆಂತರಿಕ್ಷ ಎಂದು ಒಂದು ಸೀಮಿತ ರೂಪದಲ್ಲಿ ಮಾತ್ರ ಹೇಳಿದಂತಾಗುತ್ತದೆ. ಹೀಗಾಗಿ ಅನಂತ ವ್ಯಾಪ್ತಿ. ರಾಹುಕೇತುಗಳ ಸ್ವರೂಪ ಹೇಗೆ ಪಡೆಯುತ್ತದೆ ಎಂಬುದು ಪರಿಶೀಲಿಸೋಣ. ಸೂರ್ಯ, ಚಂದ್ರ, ಕುಜ ಇತ್ಯಾದಿ ಗ್ರಹಗಳಂತೆ ರಾಹು ಹಾಗೂ ಕೇತುಗಳು ನಮ್ಮ ಆಷೇìಯ ಪದ್ಧತಿಯಲ್ಲಿ ನವಗ್ರಹಗಳ ಗುಂಪಿನಲ್ಲಿ ಸೇರಿಕೊಂಡಿದೆ. ಇವು ಅಸ್ತಿತ್ವದಲ್ಲಿ ಕಾಣವುದಿಲ್ಲ. ಛಾಯಾಗ್ರಹಗಳು ಇವುಗಳ ಅಸ್ತಿತ್ವ ಕಾಲಪುರುಷನ ಅನಂತ ವ್ಯಾಪ್ತಿಯ ಆದಿ ಅಂತ್ಯಗಳಲ್ಲಿ ಅಡಕಗೊಂಡಿದೆ. ಕಾಲಪುರುಷ ಕಾಣಲುಸಿಗಲಾರ. ಇಲ್ಲಾ ನಾವು ಭ್ರಮಿಸಿದ ನಮ್ಮ ಕಲ್ಪನೆಯ ಅಥವಾ ನಮ್ಮ ಊಹಾ ಸ್ವರೂಪದ ನೆಲೆಯ ಸಿದ್ಧಾಂತಗಳಿಂದಲೇ ರಾಹು ಕೇತುಗಳನ್ನು ನಾವು ಗುರುತಿಸಿಕೊಳ್ಳಬೇಕು. ಅವನು ಇದ್ದಾನೆ. ಅವನು ಎಂದರೆ ದೇವರು. ನಮ್ಮ ದೇವರುಗಳು ಮನುಷ್ಯನ ಅಂಗ ಆಹಾರಕ್ಕಾಗಿ ನಮ್ಮ ಅನುಕೂಲಕ್ಕಾಗಿ ನಿರೂಪಿಸಲ್ಪಟ್ಟ ಆಕೃತಿಗಳಾಗಿದೆ. ಇದೂ ಬೇಕು. ಇದು ಅನಿವಾರ್ಯ. ಅಗಾಧವಾದುದನ್ನು ಅನಂತವನ್ನು ತಮ್ಮ ಯೋಚನಾ ಶಕ್ತಿಗೆ ಒಗ್ಗಿಸಿಕೊಂಡವರು ನಮ್ಮ ವ್ಯವಹಾರಿಕ ಪ್ರಪಂಚದಲ್ಲಿ ಸಿಗುವುದು ಕಷ್ಟ. ಹೀಗಾಗಿ ಅನಂತಕ್ಕೆ ಎರಡು ಧೃವಗಳಲ್ಲಿ ರಾಹುಕೇತುಗಳು ಇವೆ. ಕಾಣಿಸುವುದಿಲ್ಲವಾದ್ದರಿಂದ ಇವು ಛಾಯಾಗ್ರಹಗಳು. ರಾಹುಕೇತುಗಳು ಹೇಗೆ ಎತ್ತಿವೆ, ಕೆಳಗಿಳಿಸಿವೆ ಜನರನ್ನು ಎಂಬುದನ್ನು ನಮ್ಮವರೇ ಆದ ಮನಮೋಹನ ಸಿಂಗ್‌, ತೆಂಡೂಲ್ಕರ್‌, ರಜನಿಕಾಂತ್‌, ಧೋನಿ ಮುಂತಾದವರ ಜಾತಕಗಳಲ್ಲಿ ಸ್ಪಷ್ಟ. ಅಮೃತಮಯವೂ ಆಗಿರುವ ರಾಹುವಿನ ಬೆಂಬಲ 
ಭಾಗ್ಯಕ್ಕೆ ಸಿಗದಿದ್ದಾಗ ಸೆರೆಮನೆಯಲ್ಲಿಯೂ ರಾಹುಗ್ರಹ ಒಬ್ಬ ವ್ಯಕ್ತಿಯನ್ನು ಹೇಗೆ ಸೆರೆಗೆ ತಳ್ಳಬಹುದೆಂದು ಒಂದು ರಾಜ್ಯದ ಮಾಜಿ ಮುಖ್ಯಮಂತ್ರಿ ಸೆರೆಯಲ್ಲೀಗ ದಿನ ಕಳೆಯುತ್ತಿರುವುದೇ ಸ್ಪಷ್ಟ.

ಸರ್ಪರೂಪದಲ್ಲಿ ರಾಹುಕೇತುಗಳು

 ನಮ್ಮ ಜೋತಿಷ್ಯ, ವಿಜ್ಞಾನ , ರಾಹು ಹಾಗೂ ಕೇತುಗಳನ್ನು ಸರ್ಪಕ್ಕೆ ಹೋಲಿಸಿದೆ. ಸರ್ಪಕ್ಕೆ ಕೊರಳಿನ ಭಾಗವು ರಾಹುವಾದರೆ ಮುಂಡ ಅಂದರೆ ದೇಹ ಭಾಗವು ಕೇತುವಾಗಿದೆ. ಈ ಸರ್ಪವು ಮಹಾವಿಷ್ಣುವಿನ ಚಕ್ರದಿಂದ ಒಂದು ಎರಡಾಗಿ ತುಂಡರಿಸಲ್ಪಟ್ಟಿದೆ. ತಮಗೆ ದಕ್ಕಲೇ ಬಾರದಾಗಿದ್ದ ಅಮೃತವನ್ನು ಈ ಸರ್ಪ (ಒಂದು ಜಂತುವೂ ಹೌದು ಒಂದು ರಾಕ್ಷಸನೂ ಹೌದು , ಸಿಂಕಾ ಗರ್ಭ ಸಂಭೂತನಾಗಿ ವರ್ಣಿಸಲ್ಪಟ್ಟಿದ್ದಾನೆ. ಕೇತುವು ಅನೇಕ ರೂಪ ವಣೈìಶ್ಚ ಶತಶೋತ ಸಹಸ್ರಶ ಎಂದು ವರ್ಣಿಸಲ್ಪಟ್ಟಿದ್ದಾನೆ) ಇವೆಲ್ಲಾ ಉಲ್ಲೇಖಗಳು ರಾಹು ಹಾಗೂ ಕೇತುಗಳು ವಿಶ್ವದ ಆಸ್ತಿತ್ವದೊಂದಿಗೆ ಭೂಮಿಗೂ ಪರಿಣಾಮಕಾರಿಗಳಾಗಿ ಹೇಗೆ ವರ್ತಿಸುತ್ತದೆ ಎಂಬುದನ್ನು ಮುಂದಿನವಾರ ಚರ್ಚಿಸೋಣ.

ಟಾಪ್ ನ್ಯೂಸ್

Chennai: ಲಾಟರಿ ಕಿಂಗ್‌ ಮಾರ್ಟಿನ್‌ನ 8.8 ಕೋಟಿ ರೂ. ಇ.ಡಿ. ವಶಕ್ಕೆ

Chennai: ಲಾಟರಿ ಕಿಂಗ್‌ ಮಾರ್ಟಿನ್‌ನ 8.8 ಕೋಟಿ ರೂ. ಇ.ಡಿ. ವಶಕ್ಕೆ

Thiruvananthapuram: ಶಬರಿಮಲೆ ಅಯ್ಯಪ್ಪ ಸ್ವಾಮಿ ದರ್ಶನ, ಮಂಡಲ ಪೂಜೆ ಶುರು

Thiruvananthapuram: ಶಬರಿಮಲೆ ಅಯ್ಯಪ್ಪ ಸ್ವಾಮಿ ದರ್ಶನ, ಮಂಡಲ ಪೂಜೆ ಶುರು

Maharashtra: ಲೈಂಗಿಕ ಕಿರುಕುಳ ನೀಡುವವರ ಪರ ಬಿಜೆಪಿ ಪ್ರಚಾರ: ಉದ್ಧವ್‌ ಠಾಕ್ರೆ

Maharashtra: ಲೈಂಗಿಕ ಕಿರುಕುಳ ನೀಡುವವರ ಪರ ಬಿಜೆಪಿ ಪ್ರಚಾರ: ಉದ್ಧವ್‌ ಠಾಕ್ರೆ

ರಾಹುಲ್‌ಗೆ ಸಂವಿಧಾನದ ಎಬಿಸಿ ಕೂಡ ಗೊತ್ತಿಲ್ಲ: ಸಚಿವ ಜೆ.ಪಿ.ನಡ್ಡಾ ಟೀಕೆ

Congress: ರಾಹುಲ್‌ಗೆ ಸಂವಿಧಾನದ ಎಬಿಸಿ ಕೂಡ ಗೊತ್ತಿಲ್ಲ: ಸಚಿವ ಜೆ.ಪಿ.ನಡ್ಡಾ ಟೀಕೆ

Maharashtra Election: ಮಲ್ಲಿಕಾರ್ಜುನ ಖರ್ಗೆ ಬಳಿಕ ಯೋಗಿ ವಿರುದ್ಧ ಶರದ್‌ ಪವಾರ್‌ ಟೀಕೆ

Maharashtra Election: ಮಲ್ಲಿಕಾರ್ಜುನ ಖರ್ಗೆ ಬಳಿಕ ಯೋಗಿ ವಿರುದ್ಧ ಶರದ್‌ ಪವಾರ್‌ ಟೀಕೆ

Rahul Gandhi; ಕಾಪ್ಟರ್‌ ಟೇಕಾಫ್ ವಿಳಂಬ: ಕಾಂಗ್ರೆಸ್‌ನಿಂದ ಆಕ್ಷೇಪ

Rahul Gandhi; ಕಾಪ್ಟರ್‌ ಟೇಕಾಫ್ ವಿಳಂಬ: ಕಾಂಗ್ರೆಸ್‌ನಿಂದ ಆಕ್ಷೇಪ

Pro Kabaddi League: ಪಾಟ್ನಾ ಪೈರೆಟ್ಸ್‌ ಪರಾಕ್ರಮPro Kabaddi League: ಪಾಟ್ನಾ ಪೈರೆಟ್ಸ್‌ ಪರಾಕ್ರಮ

Pro Kabaddi League: ಪಾಟ್ನಾ ಪೈರೆಟ್ಸ್‌ ಪರಾಕ್ರಮ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Astrology 2024: 2024ರಲ್ಲಿ ಮಿಶ್ರ ಫ‌ಲಗಳೇ ಅಧಿಕ-ರಾಜ್ಯದಲ್ಲೇನಾಗುತ್ತದೆ?

Astrology 2024: 2024ರಲ್ಲಿ ಮಿಶ್ರ ಫ‌ಲಗಳೇ ಅಧಿಕ-ರಾಜ್ಯದಲ್ಲೇನಾಗುತ್ತದೆ?

ಜ್ಯೋತಿಷ್ಯದಲ್ಲಿ ನವಗ್ರಹಕ್ಕಿಂತಲೂ ನಕ್ಷತ್ರಗಳಿಗೆ ಹೆಚ್ಚು ಪ್ರಾಮುಖ್ಯತೆ ಯಾಕೆ ಕೊಡಲಾಗಿದೆ?

ಜ್ಯೋತಿಷ್ಯದಲ್ಲಿ ನವಗ್ರಹಕ್ಕಿಂತಲೂ ನಕ್ಷತ್ರಗಳಿಗೆ ಹೆಚ್ಚು ಪ್ರಾಮುಖ್ಯತೆ ಯಾಕೆ ಕೊಡಲಾಗಿದೆ?

ಶುಭ ವಿಚಾರ ತಿಳಿಯುವ ಗೋಚಾರ ಫಲ ಎಂದರೇನು, ಗುರುದೆಸೆ ಯಾವಾಗ ಆರಂಭವಾಗಲಿದೆ…

ಶುಭ ವಿಚಾರ ತಿಳಿಯುವ ಗೋಚಾರ ಫಲ ಎಂದರೇನು, ಗುರುಬಲ ಯಾವಾಗ ಆರಂಭವಾಗಲಿದೆ…

jjhgfd

ಮಾರಕಾಧಿಪತಿ, ಭಾದಕಾಧಿಪತಿ: ಅಕಾಲಿಕ ಮರಣದ ಬಗ್ಗೆ “ಅಷ್ಠಮ ಸ್ಥಾನ” ಮುನ್ಸೂಚನೆ ಕೊಡುತ್ತದೆಯೇ?

ಗಜಕೇಸರಿ ಯೋಗ… ಈ ಯೋಗ ಹೇಗೆ ಉಂಟಾಗುತ್ತದೆ, ಇದರ ಮಹತ್ವವೇನು?

ಗಜಕೇಸರಿ ಯೋಗ… ಈ ಯೋಗ ಹೇಗೆ ಉಂಟಾಗುತ್ತದೆ, ಇದರ ಮಹತ್ವವೇನು?

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

Chennai: ಲಾಟರಿ ಕಿಂಗ್‌ ಮಾರ್ಟಿನ್‌ನ 8.8 ಕೋಟಿ ರೂ. ಇ.ಡಿ. ವಶಕ್ಕೆ

Chennai: ಲಾಟರಿ ಕಿಂಗ್‌ ಮಾರ್ಟಿನ್‌ನ 8.8 ಕೋಟಿ ರೂ. ಇ.ಡಿ. ವಶಕ್ಕೆ

Thiruvananthapuram: ಶಬರಿಮಲೆ ಅಯ್ಯಪ್ಪ ಸ್ವಾಮಿ ದರ್ಶನ, ಮಂಡಲ ಪೂಜೆ ಶುರು

Thiruvananthapuram: ಶಬರಿಮಲೆ ಅಯ್ಯಪ್ಪ ಸ್ವಾಮಿ ದರ್ಶನ, ಮಂಡಲ ಪೂಜೆ ಶುರು

Maharashtra: ಲೈಂಗಿಕ ಕಿರುಕುಳ ನೀಡುವವರ ಪರ ಬಿಜೆಪಿ ಪ್ರಚಾರ: ಉದ್ಧವ್‌ ಠಾಕ್ರೆ

Maharashtra: ಲೈಂಗಿಕ ಕಿರುಕುಳ ನೀಡುವವರ ಪರ ಬಿಜೆಪಿ ಪ್ರಚಾರ: ಉದ್ಧವ್‌ ಠಾಕ್ರೆ

ರಾಹುಲ್‌ಗೆ ಸಂವಿಧಾನದ ಎಬಿಸಿ ಕೂಡ ಗೊತ್ತಿಲ್ಲ: ಸಚಿವ ಜೆ.ಪಿ.ನಡ್ಡಾ ಟೀಕೆ

Congress: ರಾಹುಲ್‌ಗೆ ಸಂವಿಧಾನದ ಎಬಿಸಿ ಕೂಡ ಗೊತ್ತಿಲ್ಲ: ಸಚಿವ ಜೆ.ಪಿ.ನಡ್ಡಾ ಟೀಕೆ

Maharashtra Election: ಮಲ್ಲಿಕಾರ್ಜುನ ಖರ್ಗೆ ಬಳಿಕ ಯೋಗಿ ವಿರುದ್ಧ ಶರದ್‌ ಪವಾರ್‌ ಟೀಕೆ

Maharashtra Election: ಮಲ್ಲಿಕಾರ್ಜುನ ಖರ್ಗೆ ಬಳಿಕ ಯೋಗಿ ವಿರುದ್ಧ ಶರದ್‌ ಪವಾರ್‌ ಟೀಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.