​ಇಂಥ ರತ್ನಗಳನ್ನು ನಾವೂ ಧರಿಸಬಹುದೇ?


Team Udayavani, Jan 23, 2016, 6:29 AM IST

6.jpg

ಹಿಂದಿನ ವಾರ ರತ್ನಗಳ ಬಗೆಗೆ ಮತ್ತು ಮನುಷ್ಯನ ಜೈವಿಕ ಕ್ರಿಯೆಗಳ ಏರಿಳಿತದಲ್ಲಿ ಶಕ್ತಿ ತುಂಬಲೇ ಬೇಕಾದ ಅನಿವಾರ್ಯತೆಗಳು ಉದ್ಭವಿಸಿದಾಗ ರತ್ನಗಳ ಅನಿವಾರ್ಯತೆಗಳ ಬಗೆಗೆ ಈ ಅಂಕಣದಲ್ಲಿ ಚರ್ಚಿಸಿದ್ದೆ. ಈ ಸಲದ ವಿಚಾರಗಳನ್ನು ಯಾವ ರತ್ನಗಳು ಯಾವ ಗ್ರಹಗಳ ಬಗ್ಗೆ ಯಾವ ಸಂದರ್ಭವನ್ನು ಯುಕ್ತವಾಗಿ ಗಟ್ಟಿಗೊಳಿಸಲು ಯಾವುದನ್ನು ಶಮನಗೊಳಿಸಲು ಎಂಬುದನ್ನು ವಿಶ್ಲೇಷಿಸೋಣ. ಭಾರತೀಯ ಜೋತಿಷ್ಯ ಶಾಸ್ತ್ರ ಕೇವಲ ಭವಿಷ್ಯವನ್ನು ತಿಳಿಸಲು ನನ್ನನ್ನು ನಿರೂಪಿಸಿಕೊಂಡ ಶಾಸ್ತ್ರ ಎಂದು ಜನರಲ್ಲಿ ಸಾಮಾನ್ಯವಾದ ಅಭಿಪ್ರಾಯಗಳಿವೆ. ಆದರೆ ಇಂದಿನ ಮಾನಸಿಕ ಶಾಸ್ತ್ರಜ್ಞರು ನಿಖರವಾಗಿ ಒದಗಿಸಲು ಸಾಧ್ಯವಾಗುವ ಸೂಕ್ಷ್ಮಗಳನ್ನು ಮನುಷ್ಯನ ವ್ಯಕ್ತಿತ್ವ ವರ್ಚಸ್ಸು ಮಾನಸಿಕ ದಾಡ್ಯìತೆ ಒತ್ತಡಗಳನ್ನು ಹೇಗೆ ನಿಭಾಯಿಸಬೇಕು ಎಂಬುದರ ಬಗ್ಗೆ ಸೂಕ್ತ ಬೆಳಕನ್ನು ಒದಗಿಸಿಕೊಡುತ್ತದೆ. ಇಂದಿನ ದಿನಗಳಲ್ಲಿ ಭಾರತೀಯರ ಬಗ್ಗೆ ಹೊಸದೇಶದವರು ಅಸೂಯೆ ಪಡುವಂತಿದ್ದ ಅವಿಭಕ್ತ ಕುಟುಂಬದ ಕಲ್ಪನೆಯೇ ನಾಶವಾಗುತ್ತಿದೆ ಅಥವಾ ನಾಶವಾಗಿದೆ. ಧರ್ಮೇಚ, ಅರ್ಥೇಚ, ಕಾಮೇಚ ನಾತಿಚರಾಮ್‌ ಎಂಬ ಧ್ಯೇಯ ವಾಕ್ಯದ ದಾಂಪತ್ಯ ಸನ್ನಡತೆಯು ಕನ್ನಡಿಯ ಹರಳು ಒಡೆದಂತೆ ತುಂಡು ತುಂಡಾಗಿದೆ. ಬೇರು ಭಾರತೀಯತೆ ತುಂಬಿದ್ದು ಚಿಗುರು ಆಧುನಿಕವಾದರೂ ಶಿಥಿಲ ಆವರಣಗಳನ್ನು ಮೈಗೂಡಿಸಿಕೊಂಡ ದುರ್ಭರತೆಗಳದ್ದು. ಹೆಳವನ ಮೇಲೆ ಕುರುಡನ ಸವಾರಿಯಂತಿದೆ. 

ಆಲ್‌ಬರ್ಟ್‌ ಐನ್‌ಸ್ಟೈನ್‌ ಶ್ರೇಷ್ಠ ಮಾನವತಾವಾದಿಯಾದುದರೆ ಹಿನ್ನೆಲೆಗಳೇನು? 
ಭಾವುಕತೆಗಳು ಅವನ ಜೀವನದ ಅತಿ ಸೂಕ್ಷ್ಮ ಶಕ್ತಿ ಹಾಗೂ ಮಿತಿ ಎರಡೂ ಆಗಿತ್ತೇ? ಕೌಟುಂಬಿಕ ವಿಚಾರಗಳಲ್ಲಿನ ಜವಾಬ್ದಾರಿ ಹೊರಲು ಹಿಂದೇಟು ಹಾಕುತ್ತಿದ್ದನೇ? ಇತ್ಯಾದಿ ಎಲ್ಲ ಐನ್‌ಸ್ಟೈನ್‌ ಪಚ್ಛೆ ಹರಳನ್ನು ಹಾಕಬೇಕಾದ ಅನಿವಾರ್ಯತೆಯನ್ನು ಸೂಚಿಸುತ್ತಿದ್ದವೇ? ಹಾಗೆಯೇ ವೈವಾಹಿಕ ಜೀವನದ ಸಂದರ್ಭ ನಮ್ಮ ಪ್ರಧಾನಿ ನರೇಂದ್ರ ಮೋದಿಯವರನ್ನು ಅದೇಕೆ ಸೂಕ್ಷ್ಮ ಒಂದಕ್ಕೆ ಕಟ್ಟಿರಿಸಿ ಗೊಂದಲ ಮೂಡಿಸಿತು? ಕ್ರಾಂತಿಕಾರಕ ಬುದ್ಧಿ ಅನಪೇಕ್ಷಿತ ಪ್ರತಿರೋಧಗಳನ್ನುಂಟು ಮಾಡುವ ವಿಷಮ ಶಕ್ತಿಗಳನ್ನು ಎದುರು ಹಾಕಿಕೊಂಡೆ ತೀರುವ ಛಲ ಇತ್ಯಾದಿ ಉತ್ತಮವಾದ ಹವಳವನ್ನು ಧರಿಸಿದ್ದಲ್ಲಿ ಇನ್ನಿಷ್ಟು ಯಶಸ್ಸು ಸಂಪಾದಿಸಿಕೊಡುವಲ್ಲಿ ಸ್ವಕೀಯರೇ ಶತೃಗಳಾಗಿ ಪರಿವರ್ತನೆಗೊಳ್ಳುವುದನ್ನು ನಿಯಂತ್ರಿಸುವಲ್ಲಿ ಸಫ‌ಲವಾಗುತ್ತಿತ್ತೇ? ಸತ್ಯ.  ಪ್ರತಿ ವ್ಯಕ್ತಿಯ ಜೀವನ ರಸಾಯನ. ಪಂಚಭೂತಾತ್ಮಕವಾದದ್ದು. ಈ ಪಂಚಭೂತಾತ್ಮಕವಾದದ್ದು ಜೀನ್‌ಗಳಿಂದ ಒದಗಿ ಬರುತ್ತದೆ. ಪಿತೃ ಪಿತಾಮಹರ ಜೀವ ವಾಹಿನಿ ತಲೆಮಾರಿನಿಂದ ತಲೆಮಾರಿನವರೆಗೆ ಸಾಗಿ ಬರುತ್ತದೆ. ಕೌತುಕಮಯವಾಗಿದೆ ಜೀವನ. ಆಹಾರವಾಗಿ ಬಂದ ಮೇಕೆ ಮರಿಯನ್ನು ಸಿಂಹ ಕೊಲ್ಲುವುದಿಲ್ಲ. ಕೊಲ್ಲಲು ಬಿಡುವುದೂ ಇಲ್ಲ. ಇದು ಆಶ್ಚರ್ಯ. ಆದರೆ ಸತ್ಯ. ಜನ್ಮ ಜನ್ಮಾಂತರಗಳ ಯಾವುದೋ ವಾಸನಾ ಫ‌ಲ. ಸಿಂಹಕ್ಕೆ ಕನಿಕರ. ಇನ್ನು ಮನುಷ್ಯರ ಪಾಡೇನು ಹಾಗಾದರೆ? 

ಮಾಣಿಕ್ಯ

 ಮಾಣಿಕ್ಯವನ್ನು ಸೂರ್ಯನ ಸಂಬಂಧವಾಗಿ ಧರಿಸಬೇಕಾಗುತ್ತದೆ. ಹೀಗೆಂದ ಮಾತ್ರಕ್ಕೆ ಸೂರ್ಯನ ಬಗೆಗೆ ಎಂದು ಜನ್ಮ ಕುಂಡಲಿಯ ವಿಶ್ಲೇಷಣೆ ಆಗದೆಯೇ ಧರಿಸಿಬಿಡುವುದು ಸರ್ವಥಾ ಸಲ್ಲ. ಕ್ರಿಕೆಟ್‌ ದಾಖಲೆಗಳ ಮಟ್ಟಿಗೆ ಸಧ್ಯ ಹೊಸ ಹರಿಕಾರನಾಗಿರುವ ಸಚಿನ್‌ ತೆಂಡೂಲ್ಕರ್‌ ಮಾಣಿಕ್ಯ ಧರಿಸುವುದು ಸೂಕ್ತವಾಗಿತ್ತು. ಅವರು ಧರಿಸಲೂ ಬಹುದು. ಸೂರ್ಯನೇ ಅವರ ಜೀವಮಾನದ ಸಂಜೀವಿನಿ. ಹೆಲ್ಮೆಟ್‌ ತೆಗೆದು (ಮೈಲುಗಲ್ಲು ಸ್ಥಾಪಿಸಿದ ಸಂದರ್ಭಗಳಲ್ಲಿ)ಆಕಾಶಕ್ಕೆ ಮುಖ ಮಾಡುತ್ತಿದ್ದುದು ನಾವೆಲ್ಲಾ ನೋಡಿದ್ದೇವೆ. ನೆನ್ನೆ ಮೊನ್ನೆಯ ಸಂಗತಿ ಇದು. ಅವರ ಸೂರ್ಯ ಒಂದು ವಿಧದಲ್ಲಿ ಶುಕ್ರನ ಜೊತೆಗಾರಿಕೆಯಿಂದಾಗಿ ದುರ್ಬಲನಾದರೂ ಸೂರ್ಯ ಜೊತೆಗೂಡಿ ಶುಕ್ರ ಒದಗಿಸಿದ ರಾಜಯೋಗದ ಶಕ್ತಿ ಸಾಮಾನ್ಯವಲ್ಲ. ಸಚಿನ್‌ ಸೂರ್ಯನನ್ನು ಗಗನದಲ್ಲಿ ಹುಡುಕಿ ನೋಡುತ್ತಿದುದು ಏನೋ ಒಂದು ತನ್ನ ಸ್ಟೈಲ್‌ ನಿರ್ಮಾಣಕ್ಕೆ ಆಗಿರಲಿಲ್ಲ.   ಸೂಕ್ತವಾದವರು ಅವರ ಜಾತಕದ ಸೂರ್ಯನ ಅನುಪಮತೆಯ ಬಗೆಗೆ ತಿಳಿಸಿದ್ದರು. ಧೈರ್ಯದಿಂದ ನುಗ್ಗುವ ಮನೋಬಲ ಚಿಕ್ಕಂದಿನಿಂದಲೇ ಅವರಿಗೆ ಒದಗಿ ಬಂದದ್ದರಿಂದ ಸಚಿನ್‌ ಅವಕಾಶವನ್ನು ವ್ಯರ್ಥಗೊಳಿಸಲಿಲ್ಲ. ಹಾಗೆಂದು ಮಾಣಿಕ್ಯ ಅವರಿಗೆ ಯುಕ್ತ ಎಂದು ಅದು ಎಂ.ಎಸ್‌. ಧೋನಿಯವರಿಗೆ ಸೂಕ್ತವಾಗದು. ಅವರಿಗೆ ಸೂರ್ಯ ದುಷ್ಟನಾದರೂ ಕೀರ್ತಿ ಒದಗಿಸುವ ಅನನ್ಯತೆ ಹೊಂದಿದ್ದಾನೆ. ಇಷ್ಟಾದರೂ ಮಾಣಿಕ್ಯ ಅವರಿಗೆ ಯುಕ್ತ ಎಂದು ಅದು ಧೋನಿಯವರಿಗೆ ನಿಷಿದ್ಧ. ಅದನ್ನು ಧರಿಸಿದರೇ ಅವರಿಗೆ ಹಿನ್ನೆಡೆಗಳೆ ಸಾಧ್ಯ. ಹಾಗೆಂದು ವೀರೇಂದ್ರ ಸೆಹ್ವಾಗ್‌ಗೆ ಮಾಣಿಕ್ಯವೇ ಪರಮ ಭೂಷಣ. ಅವರ ಜಾತಕದ ಸೂರ್ಯನ ಪಾಲಿಗೆ ಮಾಣಿಕ್ಯ ಅಪೇಕ್ಷಣೀಯ. ಸಚಿನ್‌ ಆಟವನ್ನು ಸೆಹ್ವಾಗ್‌ ಆದರಿಸಿದರು. ಸಚಿನ್‌ರನ್ನೂ ಮೀರಿಸಿದ ಶಕ್ತಿ ಅವರ ಬ್ಯಾಟಿಂಗ್‌ಗೆ ಇತ್ತು. ಆದರೂ ಸೆಹ್ವಾಗ್‌ ಸಚಿನ್ನ ಆಗಲಿಲ್ಲ. ಏನಿನೋ ಇಷ್ಟು ಕಡಿಮೆಯೇ ಆಯ್ತು. ಇದು ವಿಧಿ. ಸೆಹ್ವಾಗರನ್ನು ಶನೈಶ್ಚರ ಹಾಗೂ ರಾಹು ಕಾಡಿದ್ದರು. 

ಮುತ್ತು

ಮುತ್ತುಗಳು ಚಿಪ್ಪಿನ ಕಲ್ಲಿನಲ್ಲಿ ಹರಳುಗಟ್ಟಬೇಕು. ಮುತ್ತುಗಳು ಸೃಷ್ಟಿಯಾಗುವ ವಿಧಾನ ಬಹು ಶಿಷ್ಠವಾದದ್ದು. ಚಂದ್ರನ ಹಳದಿ ಬಣ್ಣ ಪೃಥ್ವಿಯಿಂದ ನಮಗೆ ಹೇಗೆ ಗೋಚರಿಸುತ್ತದೋ ಅಂಥ ಬಣ್ಣದಿಂದ ಕೂಡಿದ ಸಂಪನ್ನ ಮುತ್ತುಗಳು ಈ ಚಿಕ್ಕ ಚಿಪ್ಪಿನ ಪ್ರಾಣೀಯ ಮೂಲಕ ಸೃಷ್ಟಿಗೊಳ್ಳುವಂಥದ್ದು. ಮುತ್ತುಗಳೊಳಗೂ ಬಹಳೇ ರೀತಿಯ ಮುತ್ತುಗಳಿವೆ. ಅದೇ ಜಯ್‌ ಸ್ಟರ್‌ ಜನ್ಯ ಮುತ್ತುಗಳು ಉತ್ತಮವಾದದ್ದು. ಇತ್ತೀಚೆಗೆ ಕಲ್ಚರ್ಡ್‌ ಮುತ್ತುಗಳು ಕೃತಕವಾಗಿ ಜಯ್‌ಸ್ಟರ್‌ನಲ್ಲಿ ಘನೀರ್ಭವಿಸಿದ ಹಾಗೆ ಬರುತ್ತದೆ. ಇದು ದಧಿ ಶಂಖ ತುಷಾರಾಭಂ ಆದ ಚಂದ್ರನನ್ನು ಸೂಕ್ತವಾಗಿ ಸಂಭ್ರಮಿಸುವಂಥದ್ದಲ್ಲ. ಮುತ್ತುಗಳ ಸೃಷ್ಟಿಯ ಬಗೆಗೆ ಅನೇಕಾನೇಕ ನಂಬುಗೆಗಳು ಕಥೆಯ ಪದರುಗಳಂತೆ ಅನಿಸುವ ಕವಿ ಸಮಯಗಳೂ ಉಂಟು. ಆದರೆ ಚಿಪ್ಪಿನ ಮುತ್ತು ಒಂದು ತೂಕ ಮೇಲೆಯೇ. ಆದರೆ ಚಂದ್ರನ ಗಟ್ಟಿತನಕ್ಕೆ ಹೇಗೆ ಎಷ್ಟು ಬೇಕೆಂಬುದನ್ನು ಅರಿತೇ ಮುತ್ತನ್ನು ಬೆಳ್ಳಿಯಲ್ಲಿ ಕೂಡ್ರಿಸಿ ತೊಡಬೇಕು. 

ನಮ್ಮ ಮಾಜಿ ಪ್ರಧಾನಿ ಇಂದಿರಾಗಾಂಧಿಯವರಿಗೆ ಮುತ್ತು ಒಳಿತಾಗಿತ್ತು. ಆದರೆ ಅವರು ಧರಿಸಿದ್ದರೋ ಇಲ್ಲವೋ ಎಂಬುದು ತಿಳಿದಿಲ್ಲ. ಅವರ ಕುರಿತಾದ ಜೀವನ ಚರಿತ್ರೆಯಲ್ಲಿ ಈ ಬಗೆಗೆ ಉಲ್ಲೇಖಗಳಿಲ್ಲ. ರುದ್ರಾûಾಮಣಿಯನ್ನು ಅವರು ಧರಿಸುತ್ತಿದ್ದದ್ದು ಕೆಲವು ಚಿತ್ರಗಳಲ್ಲಿ ಕಂಡುಬರುತ್ತಿತ್ತು. ದಾಡ್ಯìತೆ ಇದ್ದರೂ ಗೊಂದಲಗಳು ಮಕ್ಕಳ ಯೋಗಕ್ಷೇಮದ ವಿಚಾರದಲ್ಲಿ ಬಿಕ್ಕಟ್ಟುಗಳು, ತೀವ್ರತರವಾದ ಅಂಜುಬುರುಕುತನ, ಇನ್ನಿಲ್ಲದ ನಾಚಿಕೆ ಇತ್ಯಾದಿ ಸಂಕಟಗಳು ಚಂದ್ರನ ಮೂಲಕ ನಿಯಂತ್ರಣಕ್ಕೊಳಬೇಕಾದಾಗ ಮುತ್ತು ಅನಿವಾರ್ಯ. ಇಂಗ್ಲೆಂಡಿನ ಪ್ರಿನ್ಸ್‌ ಚಾರ್ಲ್ಸ್‌ಎದುರಿಸಿದ ಬಿಕ್ಕಟ್ಟುಗಳ ನಿವಾರಣೆಗೆ ಮುತ್ತು ಅವಶ್ಯವಾಗಿತ್ತು. ಲಾಲೂ ಪ್ರಸಾದ್‌ ಜಾತಕದಲ್ಲಿ ಚಂದ್ರ ಅದ್ಭುತವಾಗಿದ್ದರೂ ಮುತ್ತನ್ನು ಧರಿಸಿದರೇ ತೊಳಲಾಟಗಳೇ ಅಧಿಕವಾಗುತ್ತದೆ. ಶನೈಶ್ಚರ ವ್ಯತಿರಿಕ್ತವಾಗಿ ವ್ಯತಿರಿಕ್ತ ಸ್ಥಿತಿ ತರುತ್ತಾನೆ. ಈಗ ಅವರಿಗೆ ಶನಿಕಾಟವಿದೆ ಗೆಲುವಿನ ಅಲೆಯಲ್ಲಿದ್ದರೂ ಅಧಿಕಾರ ನಿತೀಶ್‌ ಬಳಿ. ಒಂದು ಕಾಲದ ಕಡು ವಿರೋಧಿ ಆದರೆ ವರ್ತಮಾನ ಕಡುವಿರೋಧಿಯನ್ನೇ ಪರಮೋನ್ನತ ಮುಖ್ಯಮಂತ್ರಿ ಕುರ್ಚಿಯಲ್ಲಿ ಕುಳ್ಳಿರಿಸುವ ಕೈಂಕರ್ಯವನ್ನು ಲಾಲೂ ಪ್ರಸಾದ್‌ ಪಾಲಿಗೆ ತಂದೊದಗಿಸಿದೆ. ಶನೈಶ್ಚರನ ಪ್ರಭಾವ ಹಗರಣಗಳ ಹೊರೆ ಇದ್ದಾಗಲೂ ಚಂದ್ರ ಅವರನ್ನು ಕೇಂದ್ರ ರೈಲ್ವೇ ಸಚಿವರನ್ನಾಗಿಸಿದ. ಆದರೆ ರಾಹುಭಕ್ತಿ ಬಂದಾಗ ಈಗ ಶನಿಕಾಟದ ತನಕ ಲಾಲು ಹಿಂದೆ ಬಿದ್ದಿದ್ದರು. ಆದರೆ ಕುಜದಶಾ ಬರುತ್ತಿದ್ದಂತೆ ಮತ್ತೆ ಮುಖ್ಯರಾಗಿದ್ದರೂ ಜೊತೆಗಿರುವ ಶುಕ್ರ ಪೂರ್ಣಪ್ರಮಾಣದ ಚೈತನ್ಯ ಒದಗಿಸುವುದು ಕಷ್ಟ. ಮುತ್ತನ್ನು ಧರಿಸಲೇ ಬಾರದು. ಮುತ್ತನ್ನು ಧರಿಸಿದರೆ ಶನೈಶ್ಚರ ಹಾರಿ ಹಿಡಿಯುವ ವ್ಯಾಘ್ರನಾಗುತ್ತಾನೆ.

ಹವಳ

ಶುಕ್ರನ ಭಾದೆಯ ಕಾರಣದಿಂದ ಒಳ್ಳೆಯವನಾಗಬೇಕಾದ ಕುಜನು ಮದುವೆಯಾದ ಜೀವನದಲ್ಲಿ ಹುಳಿ ಹಿಂಡುತ್ತಾನೆ. ಸ್ವಮೋಹವೇ ಬಾಧೆಯಾಗುವ ಅನಾವಶ್ಯಕ ಕೋಪ ಹಿಂದೆ ಮುಂದೆ ನೋಡದೆ ಮುಂದಕ್ಕೆ ಧಾವಿಸುವ ಇತ್ಯಾದಿ ಪ್ರಮಾದಗಳನ್ನು ಸೃಷ್ಟಿಸುವ ಜನರಿಗೆ ಹವಳ ಬೇಕು. ಆದರೆ ಜಾತಕ ಕುಂಡಲಿಯ ಸ್ವರೂಪ ಗಮನಿಸದೆ ಮುಂದರಿದು ತೊಡಲು ಮುಂದಾಗಬಾರದು. ತಾಮ್ರದಲ್ಲಿ ಧರಿಸಬೇಕು. ಭಾರತದ ಪ್ರಸ್ತುತ ವರ್ತಮಾನವನ್ನು ಸಾಡೆಸಾತಿಯ ವಿಫ‌ುಲ ತೊಂದರೆಗಳನ್ನು ಕಳಕೊಳ್ಳುತ್ತ ಧಾಡ್ಯìತೆಗಾಗಿ ನಮ್ಮ ಪ್ರಧಾನಿ ಮೋದಿ ಹವಳ ಧರಿಸುವುದು ಉತ್ತಮ. ನಮ್ಮವರೇ ಆದ ಗಿರೀಶ್‌ ಕಾರ್ನಾಡ್‌ ಹವಳ ಧರಿಸುವುದು ಸೂಕ್ತ. ಶಕ್ತಿ ಮತ್ತು ಮಿತಿ ಎರಡನ್ನೂ ಹೊಂದಿರುವ ಶನೈಶ್ಚರನ ಪ್ರಭಾವ ತಗ್ಗಿಸಲು ಹವಳ ನೆರವಾಗುತ್ತಿತ್ತು. ಏರಬೇಕಾದ ಎತ್ತರ ಇನ್ನೂ ಹೆಚ್ಚೇ ಒದಗಿಬರುತ್ತಿತ್ತು. ನಮ್ಮವರೇ ಆದ ಮಾಜಿ ಪ್ರಧಾನಿ ದೇವೇಗೌಡರು ಹವಳ ತೊಡದಿರುವುದೇ ಸೂಕ್ತ. ತೊಟ್ಟರೆ ಯಾತನಾಮಯವಾಗುವ ರಾಹುದೋಷ ನಿಶ್ಚಿತ.

ಒಟ್ಟಿನಲ್ಲಿ ಹವಳ ಬಲು ಬೆಲೆಬಾಳುವ ರತ್ನಗಳಲ್ಲಿ ಒಂದಲ್ಲವಾದರೂ ಇದಕ್ಕೆ ಇದರದೇ ಆದ ಸಕಾರಾತ್ಮಕವಾದ ಬಲವಾದ ಮಿಡಿತಗಳು ಸಂವೇದನೆಗಳನ್ನುಂಟುಮಾಡುವ ಶಕ್ತಿ ಇದೆ. ಬಹುತೇಕವಾಗಿ ಕ್ಯಾಲಿÒಯಂ ಸಂಯುಕ್ತ ಘಟಕಗಳು ಹವಳದಲ್ಲಿ ಅಡಕವಾಗಿದ್ದು ಇವುಗಳನ್ನು ಸ್ರವಿಸಿ ಕಟ್ಟುವ ಮೃದ್ವಂಗಿಗಳುಂಟು. ಭಾರತದಲ್ಲೂ ವಿಶಿಷ್ಟವಾದ ಹವಳದ ನಿಕ್ಷೇಪರಾಶಿಗಳು ಪ್ರಸಿದ್ಧವಾಗಿಯೇ ಇತ್ತಾದರೂ  ಈಗ ಭಾರತದಲ್ಲಿರುವುದು ಅಪರೂಪ. ನಮ್ಮ ಕರ್ನಾಟಕದಲ್ಲೇ ಭಟ್ಕಳದ ಸಮೀಪ ಮಾವಿನ ಕುರ್ವೆ ದ್ವೀಪ ಸಮೂಹದಲ್ಲಿ ಹವಳಗಳಿವೆ ಎಂಬುದನ್ನು ಕೇಳಿದ್ದೇವೆ.

ಮುಂದಿನ ವಾರ ಇನ್ನುಳಿದ ರತ್ನಗಳ ಬಗೆಗೆ ಚರ್ಚೆಗೆ ಪುಷ್ಟಿ ಕೊಡುವ ಟಿಪ್ಪಣಿಗಳನ್ನು ವಿಶ್ಲೇಸೋಣ. ನವರತ್ನಗಳು ಬಿಡಿಬಿಡಿಯಾಗಿ ಧರಿಸಲು ಯೋಗ್ಯ ಆದರೆ ಅವಸರ ಮಾಡದೆ ತಿಳಿದು ಕೂಲಂಕಷವಾಗಿ ಅರಿತುಕೊಂಡೇ ಧರಿಸುವ ವಿಚಾರ ಕೈಗೊಳ್ಳಬೇಕು. ರತ್ನಗಳನ್ನು ಧರಿಸಿ ಗೆದ್ದವರುಂಟು. ಕೊಹಿನೂರ್‌ ಅಂತ ರತ್ನಗಳು ಸಾಮ್ರಾಜ್ಯ ಉರುಳಿಸಿದ್ದೂ ಉಂಟು. 

ಟಾಪ್ ನ್ಯೂಸ್

CM Siddaramaiah: ರಾಜ್ಯ ಸಂಪುಟ ವಿಸ್ತರಣೆ ಬಗ್ಗೆ ವರಿಷ್ಠರೊಂದಿಗೆ ಚರ್ಚೆ

CM Siddaramaiah: ರಾಜ್ಯ ಸಂಪುಟ ವಿಸ್ತರಣೆ ಬಗ್ಗೆ ವರಿಷ್ಠರೊಂದಿಗೆ ಚರ್ಚೆ

Karnataka ಪಠ್ಯಪುಸ್ತಕ ಬೇಡಿಕೆ: ಜ.10ರೊಳಗೆ ದೃಢೀಕರಣ ರಾಜ್ಯಹಂತಕ್ಕೆ ಕಳುಹಿಸಿ

Karnataka ಪಠ್ಯಪುಸ್ತಕ ಬೇಡಿಕೆ: ಜ.10ರೊಳಗೆ ದೃಢೀಕರಣ ರಾಜ್ಯಹಂತಕ್ಕೆ ಕಳುಹಿಸಿ

Nelamangala: ಸಾಕು ನಾಯಿ ಸತ್ತಿದ್ದಕ್ಕೆ ಮಾಲಕ ಆತ್ಮಹ*ತ್ಯೆ

Nelamangala: ಸಾಕು ನಾಯಿ ಸತ್ತಿದ್ದಕ್ಕೆ ಮಾಲಕ ಆತ್ಮಹ*ತ್ಯೆ

Bowling Ranking: 907 ರೇಟಿಂಗ್‌ ಅಂಕ ಬುಮ್ರಾ ದಾಖಲೆ

Bowling Ranking: 907 ರೇಟಿಂಗ್‌ ಅಂಕ ಬುಮ್ರಾ ದಾಖಲೆ

Laxmi Hebbalkar  ಮತ್ತೊಂದು ದೂರು ನೀಡಿದ ಅನಂತರವಷ್ಟೇ ಮುಂದಿನ ಕ್ರಮ: ಹೊರಟ್ಟಿ

Laxmi Hebbalkar ಮತ್ತೊಂದು ದೂರು ನೀಡಿದ ಅನಂತರವಷ್ಟೇ ಮುಂದಿನ ಕ್ರಮ: ಹೊರಟ್ಟಿ

Test Cricket: ವರ್ಷದ ಮೊದಲ ಟೆಸ್ಟ್‌… ಕೆಲವರಿಗೆ ಅಂತಿಮ ಟೆಸ್ಟ್‌?

Test Cricket: ವರ್ಷದ ಮೊದಲ ಟೆಸ್ಟ್‌… ಕೆಲವರಿಗೆ ಅಂತಿಮ ಟೆಸ್ಟ್‌?

Minister ಸೋಮಣ್ಣ, ಸಿ.ಎಸ್‌. ಹೆಸರಲ್ಲಿ ನಕಲಿ ಸಹಿ, ಲೆಟರ್‌ಹೆಡ್‌: ಬಂಧನ

Minister ಸೋಮಣ್ಣ, ಸಿ.ಎಸ್‌. ಹೆಸರಲ್ಲಿ ನಕಲಿ ಸಹಿ, ಲೆಟರ್‌ಹೆಡ್‌: ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Astrology 2024: 2024ರಲ್ಲಿ ಮಿಶ್ರ ಫ‌ಲಗಳೇ ಅಧಿಕ-ರಾಜ್ಯದಲ್ಲೇನಾಗುತ್ತದೆ?

Astrology 2024: 2024ರಲ್ಲಿ ಮಿಶ್ರ ಫ‌ಲಗಳೇ ಅಧಿಕ-ರಾಜ್ಯದಲ್ಲೇನಾಗುತ್ತದೆ?

ಜ್ಯೋತಿಷ್ಯದಲ್ಲಿ ನವಗ್ರಹಕ್ಕಿಂತಲೂ ನಕ್ಷತ್ರಗಳಿಗೆ ಹೆಚ್ಚು ಪ್ರಾಮುಖ್ಯತೆ ಯಾಕೆ ಕೊಡಲಾಗಿದೆ?

ಜ್ಯೋತಿಷ್ಯದಲ್ಲಿ ನವಗ್ರಹಕ್ಕಿಂತಲೂ ನಕ್ಷತ್ರಗಳಿಗೆ ಹೆಚ್ಚು ಪ್ರಾಮುಖ್ಯತೆ ಯಾಕೆ ಕೊಡಲಾಗಿದೆ?

ಶುಭ ವಿಚಾರ ತಿಳಿಯುವ ಗೋಚಾರ ಫಲ ಎಂದರೇನು, ಗುರುದೆಸೆ ಯಾವಾಗ ಆರಂಭವಾಗಲಿದೆ…

ಶುಭ ವಿಚಾರ ತಿಳಿಯುವ ಗೋಚಾರ ಫಲ ಎಂದರೇನು, ಗುರುಬಲ ಯಾವಾಗ ಆರಂಭವಾಗಲಿದೆ…

jjhgfd

ಮಾರಕಾಧಿಪತಿ, ಭಾದಕಾಧಿಪತಿ: ಅಕಾಲಿಕ ಮರಣದ ಬಗ್ಗೆ “ಅಷ್ಠಮ ಸ್ಥಾನ” ಮುನ್ಸೂಚನೆ ಕೊಡುತ್ತದೆಯೇ?

ಗಜಕೇಸರಿ ಯೋಗ… ಈ ಯೋಗ ಹೇಗೆ ಉಂಟಾಗುತ್ತದೆ, ಇದರ ಮಹತ್ವವೇನು?

ಗಜಕೇಸರಿ ಯೋಗ… ಈ ಯೋಗ ಹೇಗೆ ಉಂಟಾಗುತ್ತದೆ, ಇದರ ಮಹತ್ವವೇನು?

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

CM Siddaramaiah: ರಾಜ್ಯ ಸಂಪುಟ ವಿಸ್ತರಣೆ ಬಗ್ಗೆ ವರಿಷ್ಠರೊಂದಿಗೆ ಚರ್ಚೆ

CM Siddaramaiah: ರಾಜ್ಯ ಸಂಪುಟ ವಿಸ್ತರಣೆ ಬಗ್ಗೆ ವರಿಷ್ಠರೊಂದಿಗೆ ಚರ್ಚೆ

Karnataka ಪಠ್ಯಪುಸ್ತಕ ಬೇಡಿಕೆ: ಜ.10ರೊಳಗೆ ದೃಢೀಕರಣ ರಾಜ್ಯಹಂತಕ್ಕೆ ಕಳುಹಿಸಿ

Karnataka ಪಠ್ಯಪುಸ್ತಕ ಬೇಡಿಕೆ: ಜ.10ರೊಳಗೆ ದೃಢೀಕರಣ ರಾಜ್ಯಹಂತಕ್ಕೆ ಕಳುಹಿಸಿ

byndoor

Siddapura: ಬೈಕಿಗೆ ಕಾರು ಡಿಕ್ಕಿ; ಬೈಕ್‌ ಸವಾರ ಗಂಭೀರ

Nelamangala: ಸಾಕು ನಾಯಿ ಸತ್ತಿದ್ದಕ್ಕೆ ಮಾಲಕ ಆತ್ಮಹ*ತ್ಯೆ

Nelamangala: ಸಾಕು ನಾಯಿ ಸತ್ತಿದ್ದಕ್ಕೆ ಮಾಲಕ ಆತ್ಮಹ*ತ್ಯೆ

Bowling Ranking: 907 ರೇಟಿಂಗ್‌ ಅಂಕ ಬುಮ್ರಾ ದಾಖಲೆ

Bowling Ranking: 907 ರೇಟಿಂಗ್‌ ಅಂಕ ಬುಮ್ರಾ ದಾಖಲೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.