ನಿಮ್ಮ ಲಗ್ನಭಾವದಲ್ಲಿಯೇ ಇದೆ ನಿಮ್ಮ ವ್ಯಕ್ತಿತ್ವದ ತೂಕ
Team Udayavani, Dec 23, 2016, 10:30 PM IST
ತಾಯಿಯ ಗರ್ಭದಿಂದ ಹೊರಬಿದ್ದು ಭೂ ಸ್ಪರ್ಶ ಮಾಡುವ ವೇಳೆಯು ಲಗ್ನಭಾವವನ್ನು ಸೃಷ್ಟಿಸುತ್ತದೆ. ಈ ಭಾವವು ಆ ದಿವಸದ ಸೂರ್ಯೋದಯವನ್ನು ಬಹು ಮುಖ್ಯವಾಗಿ ಅವಲಂಬಿಸುತ್ತದೆ. ಸುರ್ಯೋದಯವು ಸುಮಾರಾಗಿ ಒಂದೊಂದು ಊರಿಗಿಂತ ಇನ್ನೊಂದು ಊರಿಗೆ ತುಸು ವ್ಯತ್ಯಾಸವನ್ನು ಪಡೆದಿರುತ್ತದೆ. ಬೆಂಗಳೂರಿಗೆ ಶಿವಮೊಗ್ಗೆಗೆ ಅಂತ ಭಾರಿ ದೂರವಿರದಿದ್ದರೂ ಸೂಕ್ಷ್ಮವಾದ ವ್ಯತ್ಯಾಸ ಇದ್ದೇ ಇರುತ್ತದೆ. ಉದಾಹರಣೆಗೆ ಈ ತಿಂಗಳ ಇಪ್ಪತ್ತನೇ ತಾರೀಖು ಬೆಳಗಿನ 6.55ರ ವೇಳೆಯಲ್ಲಿ ಬೆಂಗಳೂರಿನಲ್ಲಿ ಒಂದು ಶಿಶು ಜನಿಸಿತು ಎಂದಿಟ್ಟುಕೊಳ್ಳಿ. ಅದೇ ವೇಳೆಗೆ ಶಿವಮೊಗ್ಗೆಯಲ್ಲೂ ಒಂದು ಮಗು ಜನಿಸಿತು ಎಂದಿಟ್ಟುಕೊಳ್ಳಿ. ಎರಡೂ ಮಕ್ಕಳ ನಕ್ಷತ್ರಗಳು ಮೂಲಾ ಆದರೂ ಅûಾಂಶ ರೇಖಾಂಶದಲ್ಲಿ ಸೂಕ್ಷ್ಮ ವ್ಯತ್ಯಾಸಗಳಿರುತ್ತದೆ. ಇದು ಲಗ್ನಭಾವದಲ್ಲಿ ಪ್ರತಿಫಲಿಸುತ್ತದೆ. ಚಂದ್ರನ ಸಂಬಂಧವಾಗಿಯೂ ಈ ರೀತಿಯ ಅಂತರಗಳಿದ್ದು ಉಳಿದ ಗ್ರಹಗಳು ಒಂದಲ್ಲಾ ಒಂದು ಸೂಕ್ಷ್ಮ ವ್ಯತ್ಯಾಸ ಪಡೆದಿರುತ್ತದೆ. ಈ ವ್ಯತ್ಯಾಸಗಳ ಕುರಿತಾದ ಅಧ್ಯಯನವನ್ನು ಒಬ್ಬ ಜೋತಿಷಿ ಪೂರೈಸಬೇಕಾಗಿದೆ. ಇಂಥ ನಿಖರ ಅಧ್ಯಯನ ನಡೆದಾಗಲೇ ಗ್ರಹಗಳ ಪ್ರಭಾವ ಇಂಥದೇ ಎಂಬುದನ್ನು ನಿಷ್ಕರ್ಷಿಸಲು ಸಾಧ್ಯ. ಆದರೆ ನೆನಪಿಡಿ ಈ ಸೂಕ್ಷ್ಮ ವ್ಯತ್ಯಾಸದ ಸ್ವರೂಪ ಹೇಗಿರುತ್ತದೆ ಎಂದರೆ ಎಲ್ಲಾ ಮನುಷ್ಯರ ರಕ್ತವೂ ಕೆಂಪುಬಣ್ಣ, ರುಚಿಯಲ್ಲಿ ಉಪ್ಪುಪ್ಪು, ಸಾಂದ್ರತೆಯಲ್ಲಿ ನೀರಿಗಿಂತ ದಪ್ಪ ಎಂಬುದನ್ನು ಯಾರೇ ಆಗಲಿ ಹೇಳಿಬಿಡಬಹುದಾದರೂ ರಕ್ತದ ಗ್ರೂಪ್ ಇದೇ ಎಂದು ನಿರ್ಧರಿಸಲು ವೈದ್ಯರಿಗೆ ಸೂಕ್ಷ್ಮವಾದ ವಿಶ್ಲೇಷಣೆಗಾಗಿನ ಪ್ರಯತ್ನಗಳು ಅವಶ್ಯಕವಾಗಿದೆ. ಒಂದೇ ದೇಹದ ಒಂದು ಭಾಗದ ಜೀವಕೋಶದ ಪಟ್ಟಿಯನ್ನು ಪಡೆದಿದ್ದು ಇನ್ನೊಂದೆಡೆ ದೌರ್ಬಲ್ಯದ ದೊಡ್ಡ ಮೊತ್ತವನ್ನೇ ಪಡೆದಿರಬಹುದು. ಹಾಗೆಯೇ ಲಗ್ನಭಾವವೂ ಕೂಡ. ವ್ಯಕ್ತಿತ್ವದ ಎತ್ತರ ಆಳ ಅಗಲಗಳು ವ್ಯಕ್ತಿತ್ವದ ಮೂಲಕವಾಗಿ ದೊರಕುವ ವರ್ಚಸ್ಸು ಹಾಗೂ ಪ್ರಭಾವಳಿಗಳು ಕೂಡಾ ಬಿನ್ನ ಊರಿನ ಸ್ಥಳಗಳಲ್ಲಿ ಏಕಕಾಲಕ್ಕೆ ಜನಿಸಿದ ಶಿಶುಗಳ ಪಾಳಿಗೆ ಬೇರೆ ಬೇರೆಯದೇ ಆಗಿರುತ್ತದೆ. ಇನ್ನು ಸಾವಿರಾರು ಮೈಲಿಗಳ ಅಂತರ ಕೇಳುವುದೇ ಬೇಡ.
ಲಗ್ನಭಾವದ ಮೂಲಕ ನಿರ್ಧಾರಗೊಳ್ಳುವ ವಿಶೇಷಗಳು
ಲಗ್ನಭಾವದ ಮೂಲಕ ಯಾವ ಗ್ರಹಗಳು ಒಬ್ಬ ವ್ಯಕ್ತಿಗೆ ಒಳ್ಳೆಯ ಹಾಗೂ ಕೆಟ್ಟ ಗ್ರಹಗಳು ಯಾವ ಪ್ರಮಾಣದಲ್ಲಿ ಒಂದು ಗ್ರಹದ ಶಕ್ತಿ ಹಾಗೂ ಮಿತಿಗಳು ಇಷ್ಟೇ ಎನ್ನುವ ನಿರ್ಧಾರ ಆಗಲ್ಪಡುತ್ತದೆ ಇತ್ಯಾದಿ ತಿಳಿಯುತ್ತದೆ. ನಾವು ಸಾಮಾನ್ಯವಾಗಿ ಇಂಥವರು ಪೂರ್ತಿ ಹುಚ್ಚು ಎಂದು ಗುರ್ತಿಸುವುದು ಬೇರೆ, ಪೂರ್ತಿ ಹುಚ್ಚು ಎಲ್ಲರಿಗೂ ತಿಳಿಯುವಂಥದ್ದು. ಇನ್ನು ಸಾವಿರಾರು ಬಗೆ ಹೊರನೋಟಕೆ ತಿಳಿಯುವುದಿಲ್ಲ. ಸಿಟ್ಟು ತೀರಾ ಸಾಧು ಸ್ವಭಾವ, ಭಯ ರೋಗಿಷ್ಟಸ್ಥಿತಿಗಳು ಕೂಡಾ ಲಗ್ನಭಾವದಿಂದಲೇ ಸ್ಪಷ್ಟ. ಆದರೆ ಭ್ರಮೆ ಹಗಲುಗನಸು ಗೀಳು ಏನೋ ಕೆಲವು ಸಲ ಅಸ್ಪಷ್ಟ ಮಾತುಗಳು ತಮಗೆ ತಾವೇ ಮಾತಾಡುವುದು ಪರಿಪೂರ್ಣವಾಗಲು ಬಯಸುವುದು ಅನ್ಯರನ್ನು ಟೀಕಿಸುತ್ತಲೇ ಇರುವುದು. ವೃಥಾ ತೊಂದರೆ ಕೊಡುವ ದುಬುìದ್ಧಿ, ಪರರನ್ನು ತೀರಾ ಅಸಹಾಯಕ ಸ್ಥಿತಿಗೆ ತಳ್ಳುವುದು ಸಾರ್ವಜನಿಕ ಸ್ಥಳಗಳಲ್ಲಿ ಕಳ್ಳತನ ಮಾಡುವುದು ಇತ್ಯಾದಿ ಎಲ್ಲವನ್ನೂ ಲಗ್ನಭಾವದಿಂದಲೇ ಹೆಚ್ಚು ಸ್ಪಷ್ಟ. ರಾಹು, ಶನಿ, ಕ್ಷೀಣ ಚಂದ್ರ, ದುಷ್ಟ ಬುಧ, ಕೇತು, ಕುಜ ಸೂರ್ಯ ಗ್ರಹಗಳು ಸಮತೋಲನ ಕಳೆದುಕೊಂಖಡಾಗ ವೈಪರಿತ್ಯಗಳು ಸಾಮಾನ್ಯ. ಪಂಚಮಾರಿಷ್ಟ, ಬಾಲಗ್ರಹಬಾಧೆ, ಚಿತ್ರ ಭ್ರಮೆಗಳು ನಿಜಕ್ಕೂ ಕೆಲವರಿಗೆ ಮಾತ್ರ ಸಿದ್ಧಿಸಬಹುದಾದ ಆರನೇ ಇಂದ್ರಿಯದ ಶಕ್ತಿ, ಈ ಶಕ್ತಿಯಿಂದಲೇ ಪರಿತವಾದ ಭಾÅಮಕ ನಡವಳಿಕೆಗಳು ಲಗ್ನಭಾವದಿಂದ ಸ್ಪಷ್ಟ, ಕುತೂಹಲಕಾರಕ.
ಲಗ್ನಾಧಿಪತಿಯ ಮಹತ್ವದ ಪಾತ್ರ
ಲಗ್ನಭಾವಕ್ಕೆ ಒಬ್ಬ ಅಧಿಪತಿ ಇರುತ್ತಾನೆ. ಈತ ಗಟ್ಟಿಯಾಗಿ ದೃಢವಾಗಿ ಜನ್ಮಕುಂಡಲಿಯಲ್ಲಿ ತೂಕಬದ್ಧವಾಗಿದ್ದರೆ ಜೀವನದ ಯಶಸ್ಸು ಬಯಸುವ ಶಕ್ತಿಯನ್ನು ಸಾರ್ಥಕತೆಯನ್ನು ಬಹುತೇಕವಾಗಿ ಒಬ್ಬ ವ್ಯಕ್ತಿ ಪಡೆದುಬಿಡುತ್ತಾನೆ. ಅನೇಕರಿಗೆ ಅವಕಾಶಗಳು ತಂತಾನೆ ಕೂಡಿ ಬರುತ್ತದೆ. ಹಲವರಿಗೆ ಪ್ರತಿಭೆ ಇರುತ್ತದೆ. ಆದರೂ ಅವಕಾಶಗಳು ದೈವಬೆಂಬಲ ಎಂದೇ ಗ್ರಸಬೇಕಾದ ಸಮಂಜಸ ವ್ಯಕ್ತಿಯ ಜೊತೆಗಿನ ಒಡನಾಟ ದೊರಕಲಾರದು. ಕೆಲವರಿಗೆ ಬದುಕಿನ ಮೊದಲ ಭಾಗದಲ್ಲಿ ಜೀವನದಲ್ಲಿ ಮೇಲೇರುವ ಸೂಚನೆ ಕೌಶಲ್ಯ ಪ್ರದರ್ಶನ ತೋರಿಸುತ್ತಾರೆ. ನಂತರ ದಿಢೀರನೆ ಅದು ಕುಸಿಯುತ್ತದೆ. ಹಲವರಿಗೆ ಮೊದಲು ಏನೂ ಇರದು. ಆದರೆ ನಂತರ ಪಡೆಯುತ್ತಾರೆ. ಹಾಗಂತ ಹಣ ಇದ್ದ ಮಾತ್ರಕ್ಕೆ ವರ್ಚಸ್ಸು ತೂಕ ಎಂಬುದು ನಿಯಮವೇನಲ್ಲ.
ಮನೋವೈದ್ಯ ಬಿಡಿಸಲು ಸಾಧ್ಯವಾಗದ ಸಮಸ್ಯೆ
ಇಂಥ ಸಮಸ್ಯೆಗಳನ್ನು ಜಾತಕ ಕುಂಡಲಿಯ ಲಗ್ನಭಾವ ಲಗ್ನಾಧಿಪತಿ ಗಳನ್ನು ವಿಶ್ಲೇಷಿಸಿ ಹಲವು ಪರಿಹಾರಗಳನ್ನು ಸಂಯೋಜಿಸುವುದರ ಮೂಲಕ ನಿಯಂತ್ರಿಸಬಹುದು. ಮಾತು ಧೈರ್ಯ ಸ್ವಭಾವ ದೋಷ ನಿವಾರಣೆಗಳ ಕುರಿತು ಒಬ್ಬ ಉತ್ತಮ ಜೋತಿಷ್ಯ ಮನೋವೈದ್ಯನನ್ನು ಉಪೇಕ್ಷಿಸುವ ಕಾರ್ಯವಲ್ಲ. ಜಾnನ ಎಂದು ನಾವು ಪರಿಭಾಸುವ ವಿಚಾರಗಳ ಜೊತೆ ಪರಿಪೂರ್ಣವಾದ ರೀತಿಯಲ್ಲಿ ಉಪಯೋಗಿಸಿಕೊಳ್ಳಬಹುದಾದ ಶಕ್ತಿ ಜೋತಿಷ್ಯ ಜಾnನಕ್ಕೆ ಇದೆ.
ಮೋದಿ ಜಾತಕದಲ್ಲಿ ಗೋಚರದ ಪರಿವರ್ತನಾ ಯೋಗ
ನಿಷ್ಪಕ್ಷಪಾತವಾಗಿ ಯೋಚಿಸಿದರೆ ಪ್ರಧಾನಿ ನರೇಂದ್ರ ಮೋದಿಯವರು ತಳೆದ ಕರೆನ್ಸಿ ರದ್ಧತಿ ವಿಚಾರ ಗ್ರಹಿಸಿ. ಮೋದಿಯವರ ವರ್ಚಸ್ಸನ್ನು ವೃದ್ಧಿಸಬೇಕಾದ ಕುಜ ಹಾಗೂ ಚಂದ್ರ ಶನೈಶ್ಚರ ಹಿಡಿತದಲ್ಲಿರಿಸಿಕೊಂಡಿದ್ದಾನೆ. ಸಧ್ಯ ಗೋಚಾರದಲ್ಲಿ ಮೋದಿಯವರು ತಳೆದ ಅಥವಾ ಅವರ ಸಲಹೆಗಾರರ ಯೋಜನೆಗೆ ತೂಲ ಇದೆಯಾದರೂ ಸಧ್ಯದ ಕಪ್ಪುಹಣದ ವಿಚಾರದಲ್ಲಿ ತಲುಪಬೇಕಾದ ಗುರಿ ತಲುಪಲು ಶನೈಶ್ಚರ ಬಿಡುವುದಿಲ್ಲ. ಪ್ರಧಾನಿಗಳ ಲೆಕ್ಕಾಚಾರ ತಪ್ಪುತ್ತದೆ ಎಂದರೆ ಎಂಥ ಪರಿಸ್ಥಿತಿ ಇದು? ವರ್ಚಸ್ಸಿಗೆ ಏಟು ಕೊಡಲು ಶನೈಶ್ಚರನಿಗೆ ಸಾಧ್ಯವಾಗುತ್ತಿರುವುದು ಅವರ ಲಗ್ನಭಾವದಲ್ಲಿ ಕ್ಷೀಣ ಚಂದ್ರ, ಸಧ್ಯ ಗೋಚಾರದಲ್ಲಿ ನಿರಂತರವಾಗಿ ಲಗ್ನಾಧಿಪತಿ ಮತ್ತು ಚಂದ್ರರು ಬಾಧೆಯಲ್ಲಿದ್ದಾರೆ. ಶನೈಶ್ಚರನ ಮೂಲಕ. ಬ್ಯಾಂಕ್ ಸಿಬ್ಬಂದಿಗಳು ಭ್ರಷ್ಟರೊಡನೆ ಕೈಗೂಡಿಸಿದರೆ ಎಂಥ ಕಷ್ಟ ಬಂದೀತೆಂಬುದನ್ನು ಮೋದಿಗೆ ಸಲಹೆ ಕೊಡುವವರು ಯಾಕೆ ಊಹಿಸಲಿಲ್ಲ? ಕೆಲ ಬ್ಯಾಂಕ್ ಅಧಿಕಾರಿಗಳು ನಡೆದುಕೊಂಡ ಪ್ರಶ್ನಾರ್ಹ ನಡೆ ಸುದ್ದಿಯಾಗುತ್ತಲೇ ಇದೆ. ಡಿಸೆಂಬರ್ 30ರ ವರೆಗೆ ಹಳೆಯ ನೋಟುಗಳನ್ನು ಬ್ಯಾಂಕಿಗೆ ಸಂದಾಯ ಮಾಡಬಹುದು ಎಂದು ಹೇಳಿದ್ದ ಮಾತನ್ನು ಮೋದಿಯವರಿಗೆ ಉಳಿಸಿಕೊಳ್ಳಲಾಗಲಿಲ್ಲ. ಅವರ ಮಾತನ್ನು ನಂಬಿದ್ದ ಪ್ರಮಾಣಿಕರಿಗೆ ತೊಂದರೆ ಬಂತಲ್ಲವೇ? ಸಧ್ಯಕ್ಕಂತೂ ಇದು ಇವರ ಸೋಲು. ಲಗ್ನಭಾವದ ಕ್ಷೀಣ ಚಂದ್ರ ಈ ದುರವಸ್ಥೆಗೆ ಕಾರಣನಾಗಿದ್ದಾನೆ.
ಹುಣ್ಣಿಮೆ, ಅಮಾವಾಸ್ಯೆಗಳು ಮತ್ತು ಲಗ್ನಭಾವಗಳ ಅಸಮತೋಲನ
ಜೋತಿಷ್ಯ ವಿಜಾnನ ಹುಣ್ಣಿಮೆ ಅಮಾವಾಸ್ಯೆಗಳ ದಿನದಂದು ಸರಿಯಾಗೇ ಇರುವ ಮನುಷ್ಯನೂ ಅತಿರೇಕವಾದ ವ್ಯತಿರಿಕ್ತವಾದ ವ್ಯವಹಾರ ಓಡಾಟ, ಮನೋಖನ್ನತೆ ತೋರಿಸುತ್ತಾನೆ. ಹಲವು ನಾಮಾಂಕಿತರ ಸಾವು ಅಪಘಾತದ ತೊಂದರೆಗಳು ಮಾಡಬಾರದ ವಿಚಾರಗಳಲ್ಲಿ ಮಹತ್ವದ ನಿರ್ಧಾರ ತಳೆದು ಫಲವಾಗುವ ವಿಧಿ ವಿಧಾನ ಗ್ರಹಿಸುತ್ತಲೇ ಇರುತ್ತೇವೆ. ನಿರ್ಧಾರಗಳು ನಿಶ್ಚಿತ ಗುರಿ ತಲುಪುವ ವಿಚಾರಕ್ಕೆ ಬೇಕಾದ ತಾರ್ಕಿಕತೆ ಸೂಕ್ತ ಸಂದರ್ಭದಲ್ಲಿ ಬಲಾಡ್ಯರಿಗೂ ಸಿಗಲಾರದು. ಮಾಡ ಹೊರಡುವುದೇ ಒಂದು ಆಗುವುದೇ ಮತ್ತೂಂದು.
ಅನಂತ ಶಾಸ್ತ್ರೀ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Astrology 2024: 2024ರಲ್ಲಿ ಮಿಶ್ರ ಫಲಗಳೇ ಅಧಿಕ-ರಾಜ್ಯದಲ್ಲೇನಾಗುತ್ತದೆ?
ಜ್ಯೋತಿಷ್ಯದಲ್ಲಿ ನವಗ್ರಹಕ್ಕಿಂತಲೂ ನಕ್ಷತ್ರಗಳಿಗೆ ಹೆಚ್ಚು ಪ್ರಾಮುಖ್ಯತೆ ಯಾಕೆ ಕೊಡಲಾಗಿದೆ?
ಶುಭ ವಿಚಾರ ತಿಳಿಯುವ ಗೋಚಾರ ಫಲ ಎಂದರೇನು, ಗುರುಬಲ ಯಾವಾಗ ಆರಂಭವಾಗಲಿದೆ…
ಮಾರಕಾಧಿಪತಿ, ಭಾದಕಾಧಿಪತಿ: ಅಕಾಲಿಕ ಮರಣದ ಬಗ್ಗೆ “ಅಷ್ಠಮ ಸ್ಥಾನ” ಮುನ್ಸೂಚನೆ ಕೊಡುತ್ತದೆಯೇ?
ಗಜಕೇಸರಿ ಯೋಗ… ಈ ಯೋಗ ಹೇಗೆ ಉಂಟಾಗುತ್ತದೆ, ಇದರ ಮಹತ್ವವೇನು?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.