ಕನ್ಯಾರಾಶಿ ವಜ್ರದಂತೆ ಕಠಿಣ, ಹೂವಿನಂತೆ ಮೃದು


Team Udayavani, Aug 12, 2016, 9:35 PM IST

145.jpg

ಸಂಸ್ಕೃತ ಸುಭಾತದಲ್ಲಿ ಒಂದು ಮಾತು ಬರುತ್ತದೆ. ಅದು ಆಕರ್ಷಕವಾಗಿದೆ ಅದೆಂದರೆ “ವಜ್ರಾದಪಿಕ ಕಠೊರಾನಿ ಮೃದೂನಿ ಕುಸುಮಾದಪಿ’ ವಜ್ರದಂತೆ ಕಠಿಣವೂ ಹೂವಿನಂತೆ ಮೃದುತ್ವವೂ ಎಂದು.  ಕನ್ಯಾರಾಶಿಯವರಿಗೆ ಈ ಮಾತು ಹೆಚ್ಚಿನ ಶೋಭೆಯಾಗಿದೆ. ಸಿಂಹದೆದೆಯ ಧೈರ್ಯಶಾಲಿ ನೇತಾಜಿ ಸುಭಾಷ್‌ಚಂದ್ರ ಬೋಸರು, ಕ್ಯೂಬಾದ ಅಧ್ಯಕ್ಷ ಫಿಡಲ್‌ ಕ್ಯಾಸ್ಟ್ರೋ, ಬಾಳಠಾಕ್ರೆ, ನಾಥೂರಾಮ್‌ ಗೊಡ್ಸೆ, ಬುಷ್‌, ಎಂ.ಎಸ್‌ ಧೋನಿ, ಮದ್ರಾಸ್‌ ರಾಜ್ಯದ ಮಾಜಿ ಮುಖ್ಯಮಂತ್ರಿ ಅಣ್ಣಾದೊರೈ, ಇಸ್ರೇಲ್‌ನ ಮಾಜಿ ಅಧ್ಯಕ್ಷೆ ಉಕ್ಕಿನ ಮಹಿಳೆ ಗೋಲ್ಡಾ ಮೀರ್‌, ನೆರೆಯ ಮೀಯಾನ್ಮಾರ್‌ ಹೋರಾಟಗಾರ್ತಿ ಅಂಗ್‌ ಸಾನ್‌ ಸೂಯಿ ಇತ್ಯಾದಿ ಇತ್ಯಾದಿ ಪಟ್ಟಿ ದೊಡ್ಡದಿದೆ ಎಂದೆನ್ನಬಹುದು. ಸಿನಿಮಾ ನಟ ಅಮೀರ್‌ ಖಾನ್‌ ಪಾಕಿಸ್ತಾನದ ದುರಂತ ನಾಯಕಿ ಬೇನಝೀರ್‌ ಭುಟ್ಟೋ ಜಗತ್ತಿನ ದುರಂತ ನಾಯಕಿ ಮಧುಬಾಲಾ, ಟೆನಿಸ್‌ ಅಂಗಳದ ಧ್ರುವತಾರೆ ಸ್ಟೆಫಿಗ್ರಾಫ್ ಪೋಲಿ ಕಥೆಗಳ ಜನಕ ಎಂದು ವಿರೋಧಿಗಳು ಕೂಗಿದರೂ ಲೇಡೀಸ್‌ ಚಟಲೀìಸ್‌ ಲವರ್‌ನಂಥ ಉತ್ತಮ ಕಾದಂಬರಿಕಾರ ಡಿ.ಎಚ್‌. ಲಾರೆನ್ಸ್‌ ಇತ್ತೀಚೆಗೆ ಭಯೋತ್ಪಾದಕರ ಗುಂಡೇಟಿಗೆ ಬಲಿಯಾದ ತುರ್ತು ಪರಿಸ್ಥಿತಿ ಹೇರಿದ ಸಂದರ್ಭದಲ್ಲಿ ಕೊಂಚ ಪ್ರಶ್ನಾರ್ಹ ನಾಯಕರೂ ಆಗಿದ್ದ .ಸಿ.ಶುಕ್ಲ, ಮಹಾನ್‌ ಚಿಂತಕ ಮರುಮದುವೆಗಳ ರಾಜ ಬಟ್ರಾಂಡ್‌ ರಸೆಲ್‌, ಸಹೋದರನ ಪಿಸ್ತೂಲಿಗೆ ಬಲಿಯಾಗಿ ಮರಣ ಹೊಂದಿದ ಪ್ರಮೋದ್‌ ಮಹಾಜನ್‌ ಇತ್ಯಾದಿ ಇತ್ಯಾದಿ ಇವರೆಲ್ಲ ಕನ್ಯಾರಾಶಿಗೆ ಸೇರಿದ ಪ್ರಸಿದ್ಧರು ಪ್ರಮುಖರು. 

ಸದಾ ಭಾವನಾತ್ಮಕವಾಗಿ ಹೊಯ್ದಾಟದಲ್ಲಿರುವವರು ಕನ್ಯಾರಾಶಿಯ ಜನ. ಕಲೆ ಹಾಗೂ ಕಾವ್ಯ ಲಲಿತ ವೈಭವ, ಶಿಲ್ಪ ಗಾಯನ ಚಿತ್ರಕಲೆ ಇವರನ್ನು ಸೂಜಿಗಲ್ಲಿನಂತೆ ಸೆಳೆಯುತ್ತದೆ. ಶುಕ್ರನ ಮೂಲಕವೂ ಭಾಗ್ಯದ ಮಹಾ ಸಾರ್ಥಕ ಬಿಂದು ವಿಶೇಷ ಇವರನ್ನು ಸದಾ ಫ‌ಲವಂತಿಕೆಯಲ್ಲಿ ಇಡುವುದರಿಂದ ಕಲೆ ಹಾಗೂ ಗಾಯನ ಸಂಗೀತ ಸಾಹಿತ್ಯಗಳಿಗೆ ಇವರ ಆಕರ್ಷಣೆ ಚಿಮ್ಮಿಕೊಂಡಿರುತ್ತದೆ. ಶನೈಶ್ಚರನ ಪೂರ್ವಪುಣ್ಯಸ್ಥಾನದ ಅಧಿಪತಿಯಾದರೂ ಛಿದ್ರಸ್ಥಾನದ ಅಧಿಪತಿಯಾಗಿ ಆಯಕಟ್ಟಿನ ಸಂದರ್ಭಗಳಲ್ಲಿ ಕನ್ಯಾರಾಶಿಯವರನ್ನು ದುರಂತ ನಾಯಕನನ್ನೋ ನಾಯಕಿಯನ್ನೋ ಆಗಿ ಪರಿವರ್ತಿಸಿಬಿಡುತ್ತದೆ.

ಮಧುಬಾಲಾ ರತಿರೂಪಿನ ವರ್ಚಸ್ವಿ. ಆದರೂ ಬದುಕಿನಲ್ಲಿ ನರಳಿದಳು. 35-36 ನೇ ವಯಸ್ಸಿನಲ್ಲಿ ಅಭಿಮಾನಿಗಳನ್ನು ಅಗಲಿ ಜೀವತೊರೆದಳು. ವಿಸ್ತೃತವಾಗಿ ಕಾಡುವ ಉದ್ವಿಗ್ನತೆಯ ಅಲೆ ಮಧುಬಾಲಾರನ್ನು ಅಂತರಂಗದಲ್ಲಿ ಸುಖೀಯಾಗಿರಿಸಲಿಲ್ಲ. ಎಳೆ ಹರೆಯದಲ್ಲೇ ಚಿಂತೆಯ ಚಿತೆಗೂ ನೂಕಿತ್ತು. ಬೇನಝೀರ್‌ ಭುಟ್ಟೋ ಎದುರಿಸಿದ ಬಿರುಗಾಳಿಯನ್ನು ಗಮನಿಸಿ. ನೇಣಿಗೇರಿಸಲ್ಪಟ್ಟ ತಂದೆ ದೇಶದ ಮಹಾನ್‌ ನಾಯಕ ಜುಲ್ಫಿಕರ್‌ ಆಲಿ ಭುಟ್ಟೋ ಇವಳ ಎಳವೆಯಲ್ಲೇ ಹತ್ಯೆಗೊಳಗಾದದ್ದು ದುರಂತದ ದಾರಿಯಲ್ಲೇ ಇವಳೂ ಹುಲಿ ಸವಾರಿ ನಡೆಸವ ಪ್ರಧಾನಿ ಪಟ್ಟವನ್ನು ಪಾಕಿಸ್ತಾನದಲ್ಲಿ ಏರಬೇಕಾಗಿ ಬಂತು. ಈ ದಾರಿಯ ಕೊನೆಯೂ ಸಫ‌ಲತೆಯತ್ತ ಮುಖ ಮಾಡಲಿಲ್ಲ. ದೇಶಭ್ರಷ್ಟೆತೆಯಾಗಿ ಅಲೆದಾಡಿದಳು. ಅಂತಿಮವಾಗಿ ಸಹಜವಲ್ಲದ ಹತ್ಯೆಯೆಂದು ಕರೆಯಲ್ಪಟ್ಟ ಸಾವಿನ ಆಲಯದ ಅತಿಥಿಯಾಗಿ ಕಣ್ಮರೆಯಾದಳು. 

 ಕನ್ಯಾರಾಶಿಯವರು ಅಷ್ಟೊಂದು ಸ್ಪುರದ್ರೂಪಿಗಳಲ್ಲಿ ಎಂಬುದೂ ಈ ರಾಶಿಯ ಗುಣಧರ್ಮ ಜ್ಯೋತಿಷ್ಯ ಧರ್ಮ ಸಂಹಿತೆಯಲ್ಲಿ ಇದು ಉಲ್ಲೇಖೀಸಲ್ಪಟ್ಟಿದೆ. ಬಟ್ರಾಂಡ್‌ ರಸೆಲ್‌, ಫಿಡಲ್‌ ಕ್ಯಾಸ್ಟ್ರೋ ಹೀಗೆ ಹಲವು ಹೆಸರು ಸ್ಪುರದ್ರೂಪಿಗಳಲ್ಲದ ಗುಂಪಲ್ಲಿ ಹೆಸರಿಸಬಹುದು. ಆದರೆ ಮಧುಬಾಲಾ, ಅಮೀರ ಖಾನ್‌, ಸುರೈಯ್ನಾ, ಜಾರ್ಜ್‌ ಬುಶ್‌ (ಜ್ಯೂನಿಯರ್‌) ಡಿಂಪಲ್‌ ಕಪಾಡಿಯಾ, ಪ್ರಮೋದ ಮಹಾಜನ್‌ ಇತ್ಯಾದಿ, ಇತ್ಯಾದಿ ಗುಂಪು ಕುರೂಪದ ಆವರಣದಲ್ಲಿ ಬರದೆ ಉಳಿಯುವಂಥರು. ಅಂದರೆ ಉತ್ತರ ಫಾಲ್ಗುಣಿ ಚಿತ್ತಾ, ನಕ್ಷತ್ರಗಳನ್ನು ಒಳಗೊಳ್ಳುವ ಕನ್ಯಾರಾಶಿಯ ಎಲ್ಲಾ ನಕ್ಷತ್ರಗಳ ಪಾದ ಅಶುಭ ಗೃಹಗಳ ಆಧಿಪತ್ಯದ್ದೇ ಆದ ಕಾರಣ ಕುರೂಪದ ಬಗೆಗೆ ಈ ಉಲ್ಲೇಖ್ಯ ಹರಳುಗಟ್ಟಿರಬಹುದು. ಆದರೆ ಅನ್ಯ ಕಾರಣಗಳು ಸ್ಪುರದ್ರೂಪಕ್ಕೂ ದಾರಿ ಮಾಡಿಕೊಡುತ್ತವೆ ಅನುಮಾನ ಬೇಡ. ಕೆಲ ರೀತಿಯ ನರ ಸಂಬಂಧೀ, ಉದರ ಸಂಬಂಧೀ ವಿಚಾರಗಳು ಬಹುವಾಗಿ ಬಾಧಿಸಲು ಸಾಧ್ಯ ಶನಿಕಾಟದ ಸಂದರ್ಭದಲ್ಲಿ ಈ ರಾಶಿಗೆ ಮಾರಕನಾದ ಚಂದ್ರನ ಜೊತೆ ಶನೈಶ್ಚರನ ಹೋಯ್‌ ಕೈ, ಸೆಣಸು, ಮುನಿಸುಗಳು ರೋಗದ ಬಾಧೆಗೆ, ತೀವ್ರತಮ ಭಾವಾವೇಶಗಳಿಗೆ, ರಸ್ತೆಯಲ್ಲಿನ ಅವಘಡಗಳಿಗೆ ಕಾರಣವಾದೀತು. ಆದರೆ ಎಲ್ಲವನ್ನೂ ತಡೆಯುವ ಶುಕ್ರ, ಆಯುRಷ್ಕಾರಕ ಶನೈಶ್ಚರ ಸಿದ್ಧಿ ದೊರೆತಲ್ಲಿ ಅವಘಡಗಳನ್ನು, ಭಾವಾವೇಶದಿಂದ ಉಂಟಾಗುವ ಪ್ರಕೋಪಗಳನ್ನು ತಡೆಯಬಹುದಾಗಿದೆ. 

 ಆದರೆ ನಾಥೂರಾಮ್‌ ಗೂಡ್ಸೆ ಅಂತ ಏರು ರಕ್ತದ ತರುಣ ಮಹಾತ್ಮಾಗಾಧಿಯವರನ್ನು ಪಿಸ್ತೂಲಿನ ನಳಿಕೆಯಿಂದ ಗುಂಡಿಟ್ಟು ಹತ್ಯೆ ಮಾಡಿದ ದಾರುಣ ಸಂದರ್ಭ ನೆನಪಿಸಿಕೊಳ್ಳಿ. ನಾಥೂರಾಮ್‌ ಗೋಡ್ಸೆ ಕನ್ಯಾ ರಾಶಿಯಲ್ಲಿ ಸೇರುವ ವ್ಯಕ್ತಿ. ಗಜಕೇಸರಿ ಯೋಗಯುಕ್ತನಾದ ಚಂದ್ರನಿದ್ದರೂ ಉದ್ರೇಕಿಸುವ ಸಾಡೇಸಾತಿನ ಶನೈಶ್ಚರ ನೀಚನಾಗಿ ವೈರಿಯ ಮನೆಯಲ್ಲಿ ಸಿತ್ಥನಾಗಿದ್ದಾನೆ. ಚಂದ್ರನಿಂದಲೂ ಮರಣದ ಮನೆಯಲ್ಲಿರುವ ಶನೈಶ್ಚರ, ಲಗ್ನಭಾವದಿಂದ ಮರಣಾಧಿಪತಿಯಾಗಿ ಏಕಾದಶದಲ್ಲಿ ನೀಚನಾಗಿದ್ದಾನೆ. ಶನಿ ದಶಾ, ಶನಿಕಾಟದ ಸಂದರ್ಭದಲ್ಲಿ ಚಂದ್ರನ ಜೊತೆಗಿನ ಹೊಕೈ ಉಂಟಾಗಿ, ಭಾವನಾತ್ಮಕ ಉದ್ರೇಕ ತಡೆದುಕೊಳ್ಳಲಾಗದೆ, ತನಗೆ ಸರಿಕಂಡ ಗಾಂಧಿ ಹತ್ಯೆಗೆ ಮುಂದಾಗಿ, ಸಫ‌ಲನಾಗಿದ್ದಾನೆ. ನೇಣಿಗೇರಿ ಪ್ರಾಣ ಬಿಟ್ಟಿದ್ದಾನೆ. ನಾನೇಕೆ ಗಾಂಧಿ ಹತ್ಯೆ ಮಾಡಿದೆ ಎಂಬುದನ್ನು ಅನ್ಯರ ಮೂಲಕ ದಾಖಲಿಸಿದ್ದಾನೆ. ತಾನು ರಾಷ್ಟ್ರಭಕ್ತ ಎಂಬ ವಿಚಾರವನ್ನ ಮನಗಾಣಿಸುತ್ತಾನೆ. ಅವನ ಪ್ರಕಾರ ಗಾಂಧಿ ಹತ್ಯೆ ಅನಿವಾರ್ಯವಾಗಿತ್ತು ಎಂಬುದನ್ನು ಸ್ಪಷ್ಟಪಡಿಸುತ್ತಾನೆ. 

 ಭಾವನಾತ್ಮಕವಾದ ಮಹಾರಾಷ್ಟ್ರ ಸಂಬಂಧವಾದ, ಮರಾಠಿ ಸಂಬಂಧವಾದ ಬಾಳ ಠಾಕ್ರೆಯವರ ಉಮ್ಮಳ, ತಹತಹಗಳು ಅದೆಷ್ಟೋ ಬಾರಿ ಕನ್ನಡಿಗರಿಗೆ, ಉತ್ತರ ಹಿಂದುಸ್ತಾನದವರಿಗೆ, ಅದರಲ್ಲೂ ಬಿಹಾರಿಗಳಿಗೆ ತಲೆ ನೋವಿನ ಪರಿಸ್ಥಿತಿ ಉಂಟಾಗುತ್ತಿತ್ತು. ಅಮೇರಿಕಾದ ಮಾಜಿ ಅಧ್ಯಕ್ಷ ಜಾರ್ಜ್‌ಬುಷ್‌ ತನ್ನ ದೇಶದವರನ್ನು ಸುರಕ್ಷಿತವಾಗಿಡುವ ವಿಚಾರದಲ್ಲಿ ಭಾವನಾತ್ಮಕ ಸ್ಥಿತಿಯನ್ನು ಅಪ್ಪಿಕೊಂಡು, ಆಫ್ಘಾನ್‌, ಇರಾಕ್‌, ಇತ್ಯಾದಿ, ಇತ್ಯಾದಿ ನಿಯಂತ್ರಿಸಲು ಮಿಲಿಟರಿ ಹೊಕೈಯ್ಯೊಂದಿಗೆ ಮುಂದಾದರು. ಅಮೇರಿಕಾದ ವೈಯುಕ್ತಿಕ ಬಿಕ್ಕಟನ್ನ ಜಾಗತಿಕ ಬಿಕ್ಕಟ್ಟನ್ನಾಗಿಸಿದರು. ಫಿಡಲ್‌ ಕ್ಯಾಸ್ಟ್ರೋ ಅಮೇರಿಕಾ ನಡೆಸಿದ ತನ್ನ ಎಲ್ಲಾ ಪ್ರಾಣದ ಮೇಲಿನ ಸಂಚಕಾರಗಳಿಂದ ತಪ್ಪಿಸಿಕೊಂಡರು. ಕ್ಯುಬಾದ ಜನರ ಆತ್ಮಸ್ಥೈರ್ಯವೊಂದನ್ನೇ ಮೇಲೆತ್ತುವುದು ಅದರ ಹಂಬಲವಲ್ಲ. ಜಾಗತಿಕವಾಗಿ ಅಮೇರಿಕಾವನ್ನು ಅಂತಾರಾಷ್ಟ್ರೀಯ ತಂಟೆಕೋರ ಎಂದು ಪ್ರತಿಪಾದಿಸುವುದು ಅವರ ಜೀವನದ ಗುರಿ. ಪ್ರಪಂಚದ ಭೂಪಟಲದಲ್ಲಿ ಒಂದು ಚುಕ್ಕೆಯಂತೆ ಕ್ಯೂಬಾ ಇದ್ದರೂ ಅಮೇರಿಕಾ ವಿರೋಧಿ ನಿಲುವಿನಿಂದ ಮಹತ್ವ ಪಡೆದವರು ಕ್ಯಾಸ್ಟ್ರೋ. ಅಂತೂ ಭಾವನಾತ್ಮಕ ಆವರಣ, ತಲ್ಲಣ, ಶಕ್ತಿ ಮಿತಿಗಳಲ್ಲಿ ಕನ್ಯಾರಾಶಿಯ ಜನ ಕುಸಮದಂತೆ ಮೃದುವೂ, ವಜ್ರಾದಪಿ ಕಠೊರ ಮನಸ್ಸಿನವರೂ ಆಗೇ ತೀರುತ್ತಾರೆ.

ಅನಂತಶಾಸ್ತ್ರೀ  

ಟಾಪ್ ನ್ಯೂಸ್

California: ಹತ್ತೇ ಕಿ.ಮೀ. ದೂರದಲ್ಲಿ ಧಗಧಗಿಸುತ್ತಿತ್ತು ಕಾಳ್ಗಿಚ್ಚು !

California: ಹತ್ತೇ ಕಿ.ಮೀ. ದೂರದಲ್ಲಿ ಧಗಧಗಿಸುತ್ತಿತ್ತು ಕಾಳ್ಗಿಚ್ಚು !

1-aaadf

Afghanistan ವಾಗ್ಧಾನ; ಭಾರತ ವಿರೋಧಿ ಚಟುವಟಿಕೆಗೆ ಅವಕಾಶ ಇಲ್ಲ

1-indi

INDIA Bloc ಖತಂ?: ದಿಲ್ಲಿ ವಿಧಾನಸಭಾ ಚುನಾವಣೆ ಕಾವೇರಿರುವಾಗಲೇ ಬಿರುಕು

baby 2

Russia; 25ರ ವಿದ್ಯಾರ್ಥಿನಿ ಮಗು ಹೆತ್ತರೆ 81,000 ರೂ.!

1-cm-yogi

Mahakumbh; ಕುಂಭ ಮೇಳ ಸನಾತನ ಗರ್ವ: ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌

CT Ravi

CID; ಶಾಸಕ ಸಿ.ಟಿ. ರವಿ ಬೆಳಗಾವಿ ದೌರ್ಜನ್ಯ ವಿವರಣೆ

ಮಹಾರಾಷ್ಟ್ರದಲ್ಲೂ ರಾಜ್ಯದ ಮಕ್ಕಳ ಶಾಲಾ ದಾಖಲಾತಿ!

ಮಹಾರಾಷ್ಟ್ರದಲ್ಲೂ ರಾಜ್ಯದ ಮಕ್ಕಳ ಶಾಲಾ ದಾಖಲಾತಿ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Astrology 2024: 2024ರಲ್ಲಿ ಮಿಶ್ರ ಫ‌ಲಗಳೇ ಅಧಿಕ-ರಾಜ್ಯದಲ್ಲೇನಾಗುತ್ತದೆ?

Astrology 2024: 2024ರಲ್ಲಿ ಮಿಶ್ರ ಫ‌ಲಗಳೇ ಅಧಿಕ-ರಾಜ್ಯದಲ್ಲೇನಾಗುತ್ತದೆ?

ಜ್ಯೋತಿಷ್ಯದಲ್ಲಿ ನವಗ್ರಹಕ್ಕಿಂತಲೂ ನಕ್ಷತ್ರಗಳಿಗೆ ಹೆಚ್ಚು ಪ್ರಾಮುಖ್ಯತೆ ಯಾಕೆ ಕೊಡಲಾಗಿದೆ?

ಜ್ಯೋತಿಷ್ಯದಲ್ಲಿ ನವಗ್ರಹಕ್ಕಿಂತಲೂ ನಕ್ಷತ್ರಗಳಿಗೆ ಹೆಚ್ಚು ಪ್ರಾಮುಖ್ಯತೆ ಯಾಕೆ ಕೊಡಲಾಗಿದೆ?

ಶುಭ ವಿಚಾರ ತಿಳಿಯುವ ಗೋಚಾರ ಫಲ ಎಂದರೇನು, ಗುರುದೆಸೆ ಯಾವಾಗ ಆರಂಭವಾಗಲಿದೆ…

ಶುಭ ವಿಚಾರ ತಿಳಿಯುವ ಗೋಚಾರ ಫಲ ಎಂದರೇನು, ಗುರುಬಲ ಯಾವಾಗ ಆರಂಭವಾಗಲಿದೆ…

jjhgfd

ಮಾರಕಾಧಿಪತಿ, ಭಾದಕಾಧಿಪತಿ: ಅಕಾಲಿಕ ಮರಣದ ಬಗ್ಗೆ “ಅಷ್ಠಮ ಸ್ಥಾನ” ಮುನ್ಸೂಚನೆ ಕೊಡುತ್ತದೆಯೇ?

ಗಜಕೇಸರಿ ಯೋಗ… ಈ ಯೋಗ ಹೇಗೆ ಉಂಟಾಗುತ್ತದೆ, ಇದರ ಮಹತ್ವವೇನು?

ಗಜಕೇಸರಿ ಯೋಗ… ಈ ಯೋಗ ಹೇಗೆ ಉಂಟಾಗುತ್ತದೆ, ಇದರ ಮಹತ್ವವೇನು?

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

California: ಹತ್ತೇ ಕಿ.ಮೀ. ದೂರದಲ್ಲಿ ಧಗಧಗಿಸುತ್ತಿತ್ತು ಕಾಳ್ಗಿಚ್ಚು !

California: ಹತ್ತೇ ಕಿ.ಮೀ. ದೂರದಲ್ಲಿ ಧಗಧಗಿಸುತ್ತಿತ್ತು ಕಾಳ್ಗಿಚ್ಚು !

1-aaadf

Afghanistan ವಾಗ್ಧಾನ; ಭಾರತ ವಿರೋಧಿ ಚಟುವಟಿಕೆಗೆ ಅವಕಾಶ ಇಲ್ಲ

1-indi

INDIA Bloc ಖತಂ?: ದಿಲ್ಲಿ ವಿಧಾನಸಭಾ ಚುನಾವಣೆ ಕಾವೇರಿರುವಾಗಲೇ ಬಿರುಕು

baby 2

Russia; 25ರ ವಿದ್ಯಾರ್ಥಿನಿ ಮಗು ಹೆತ್ತರೆ 81,000 ರೂ.!

1-cm-yogi

Mahakumbh; ಕುಂಭ ಮೇಳ ಸನಾತನ ಗರ್ವ: ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.