ಮದುವೆಗಳು ಮಹಾ ಸಮರಗಳಾಗುತ್ತವೆ ಏಕೆ?
Team Udayavani, Jan 2, 2016, 6:56 AM IST
ಮದುವೆಗಳು ಸ್ವರ್ಗದಲ್ಲಿ ನಡೆಯುತ್ತದೆ ಎಂಬ ಇಂಗ್ಲಿಷ್ ಮಾತೊಂದಿದೆ. ಋಣಾನುಬಂಧ ರೂಪೇಣಾ ಪಶು ಪತ್ನಿ ಸುತಾಲಯ ಎಂಬ ಮಾತು ನಮ್ಮ ಆಷೇìಯ ಪರಂಪರೆಯಲ್ಲಿ ಸೇರಿಕೊಂಡಿದೆ. ಸ್ವರ್ಗವನ್ನು ವರಿಸುವುದು ಸುಲಭ. ಋಣಾನುಬಂಧದಲ್ಲಿ ಪ್ರಾರಬ್ಧವನ್ನೂ ಅದೃಷ್ಟವನ್ನೂ ಒಟ್ಟಾಗಿ ಅರ್ಥೈಸಿಕೊಳ್ಳಬಹುದು. ಯಾವುದೋ ಋಣ ಪತಿ ಅಥವಾ ಪತ್ನಿ, ಮಕ್ಕಳನ್ನು ಪಶುಗಳನ್ನು (ಗೋವುಗಳನ್ನು) ಗೋವುಗಳು ಮೊದಲು ನಮ್ಮ ಗೋರಾಷ್ಟ್ರ
ಭಾರತದಲ್ಲಿ ಖಂಡ ಸ್ವರೂಪಕ್ಕೆ ಗೋರಾಷ್ಟ್ರ ಎಂದು ಹೆಸರು. ಹಿಂದೆ ಸಂಪತ್ತು ಗೋವುಗಳ ಮೂಲಕವೇ ಅಳೆಯಲ್ಪಡುತ್ತಿತ್ತು. ರಾಷ್ಟ್ರದ ಸಂಪನ್ನ ಹಿನ್ನೆಲೆ ಚರಿತ್ರೆಯ ಬಗ್ಗೆ ಗೊತ್ತಿಲ್ಲದ ಜನ ಗೋಮಾಂಸ ಭಕ್ಷಣೆಯ ಕುರಿತು ತೂಕ ತಪ್ಪಿ ಮಾತನಾಡುತ್ತಾರೆ. ಕಾಲಾಯ ತಸೆ¾„ ನಮಃ, ಕಾಲದ ವೈಪರೀತ್ಯದ ಎದುರು ತಲೆ ತಗ್ಗಿಸಲೇ ಬೇಕು. ನಮ್ಮ ವಾಸಿಸುವ ಮನೆಗಳನ್ನು ನಮ್ಮ ಋಣಾನುಬಂಧದಿಂದಾಗಿ ಈ ಜನ್ಮದಲ್ಲಿ ಪಡೆದು ನಮ್ಮ ಜಯಾಪಜಯಗಳ ಆವರಣಕ್ಕೆ ಸಿಕ್ಕಿಕೊಳ್ಳುತ್ತೇವೆ. ಅನುಬಂಧ ಯಾವಾಗಲೂ ಸಕಾರಾತ್ಮಕ. ಸಕಾರಾತ್ಮಕತೆ ಇದ್ದರೆ ಋಣಾನುಬಂಧ, ಇಲ್ಲದಿದ್ದರೆ ಕೇವಲ ಋಣ-ಪ್ರಾರಬ್ಧ. ಹೀಗಾಗಿ ಇಂಗ್ಲಿಷ್ ಭಾಷೆಯ ನಾಣ್ನುಡಿಯಾದ ಮದುವೆಗಳು ಸ್ವರ್ಗದಲ್ಲಿಯೇ ಸಂಭವಿಸುತ್ತದೆ ಎಂಬ ಮಾತೂ ಸತ್ಯ. ಆದರೆ ಭೂಮಿಯ ಮೇಲೆ ಇದೇ ಮದುವೆಗಳು ಮಹಾ ಸಮರಗಳಾಗಿ ನರಕ ನಿರ್ಮಾಣವಾಗುತ್ತದೆ ಯಾಕೆ?
ಜನ್ಮಕುಂಡಲಿಗಳು ಮತ್ತು ಸತಿಪತಿ
ಯಾವ ವ್ಯಕ್ತಿಯ ಜನ್ಮ ಕುಂಡಲಿಯೇ ಇರಲಿ. ಆ ವ್ಯಕ್ತಿಯ ಇಷ್ಟ, ಕಷ್ಟ, ಅಭಿರುಚಿ, ಆಸೆ ಆಕಾಂಕ್ಷೆಗಳು ಆ ವ್ಯಕ್ತಿಯ ಜನನದ ಮೂಲ ಬಿಂದು (ಲಗ್ನಭಾವ) ವನ್ನು ಅನುಸರಿಸಿಕೊಂಡು ಆಕಾರ ಪಡೆದಿರುತ್ತದೆ. ಆದರೆ ಈ ಲಗ್ನಭಾವದ ನೇರಕ್ಕೆ ಏಳನೇ ಮನೆ ಕಳತ್ರ ಸ್ಥಾನವು ಬಾಳ ಸಂಗಾತಿಯ ಬಗ್ಗೆ ಬೆಳಕು ಚೆಲ್ಲುವ ಮನೆಯಾಗಿರುತ್ತದೆ. ಈ ಕಳತ್ರಭಾವದ ಯಜಮಾನ
ಯಾವಾಗಲೂ ಒಬ್ಬ ವ್ಯಕ್ತಿಯ ಲಗ್ನಭಾವದ ಯಜಮಾನನ ಜೊತೆ ವೈರತ್ವವನ್ನೇ ಹೊಂದಿರುತ್ತಾನೆ. ಅಂದರೆ ಈ ಯಜಮಾನರುಗಳು ಪರಸ್ಪರರ ಬಗ್ಗೆ ಭಾವನೆಯನ್ನೇ ಹೊಂದಿರುತ್ತಾರೆ. ನಾವು ಅಡುಗೆಗೆ ಉಪಯೋಗಿಸುವ ಹಾಗಲಕಾಯಿಯನ್ನು ನೆನಪಿಸಿಕೊಳ್ಳಿ. ಈ ಹಾಗಲಕಾಯಿಯ ಕೆಟ್ಟ ಕಹಿ ಕಳಚಿಸಿ ಉಪ್ಪು ಹುಳಿ ಖಾರ ಒಗ್ಗರಣೆ ಬಳಸಿ ನಮ್ಮ ಅಭಿರುಚಿಗೆ ಹಾಗಲಕಾಯನ್ನು ಒಗ್ಗಿಸಿಕೊಂಡಾಗ ಅದರ ಕಹಿ ಕೂಡಾ ನಮ್ಮ ರುಚಿಗೆ ಒಗ್ಗುತ್ತದೆ. ಬಾಯಿ ಚಪ್ಪರಿಸುತ್ತೇವೆ. ಕುಂಡಲಿಗಳ ಮ್ಯಾಚಿಂಗ್ ಸಹಾ ಹಾಗೆಯೇ. ಹಾಗಲ ಕಾಯನ್ನು ನಮ್ಮ ರುಚಿಗೆ ಒಗ್ಗಿಸಿಕೊಳ್ಳುವಂತೆ ಜೀವನದ ಭಿನ್ನ ದಿಕ್ಕುಗಳಿಂದ ಬಂದ ವ್ಯಕ್ತಿಗಳನ್ನು ಮದುವೆ ಎಂಬ ಅನುಬಂಧಕ್ಕೆ, ಋಣಾನುಬಂಧಕ್ಕೆ ಸಿಕ್ಕಿಸುವುದು.. ಇದು ಸುಲಭವೇ? ಸುಲಭವಲ್ಲ. ಹೀಗಾಗಿ ಕುಂಡಲಿಗಳಲ್ಲಿನ ವಿವಾಹಕ್ಕೆ ಉಪಯುಕ್ತವಾಗಬೇಕಾದ ದ್ವಾದಶಕೂಟಗಳನ್ನು ಗಂಡು ಹೆಣ್ಣುಗಳ ಸಂಬಂಧವಾಗಿ ಜೋಡಿಸಿ ವಿವಾಹ ಸಂಬಂಧದ ಹೊಂದಾಣಿಕೆ ಇದೆಯೋ ಇಲ್ಲವೋ ಎಂಬುದನ್ನು ನಿರ್ಧರಿಸುತ್ತಾರೆ. ಸುಖಕ್ಕಾಗಿನ ದಾರಿ ಒದಗಿ ಬರಬೇಕು ಎಂಬುದೇ ಇದರ ಹಿಂದಿನ ಮುಖ್ಯ ಕಾರಣ. ಕನ್ನಡಭಾಷೆಯ ನಾಣ್ನುಡಿಯೊಂದು ಈ ಸಂದರ್ಭದಲ್ಲಿ ನೆನಪಿಗೆ ಬರುತ್ತದೆ ಅದೇನೆಂದರೆ ಸಾವಿರ ಸುಳ್ಳು ಹೇಳಿ ಒಂದು ಮದುವೆ ಮಾಡು. ಏನು ಅರ್ಥ ಈ ಮಾತು ಕುತೂಹಲಕಾರಿಯಾಗಿದೆ. ಜಾತಕ ಹೊಂದಿಸಿ ಮದುವೆ ಸರಿ, ಆದರೆ ಸಾವಿರ ಸುಳ್ಳು ಯಾಕೆ?
ಸಾವಿರ ಸುಳ್ಳು ಮತ್ತು ಒಂದು ಮದುವೆ
ನಿಜ ಹೇಳಬೇಕೆಂದರೆ ಮದುವೆ ಎಂದರೆ ಹೆಣ್ಣುಗಂಡುಗಳನ್ನು ಒಗ್ಗೂಡಿ ಇರಿಸಿ ಸುಹಾಸಕರವಾದ ಸಮಾಜವನ್ನು ಬೆಳೆಸುವ ಸಲುವಾಗಿ ಮಾಡಿಕೊಂಡ ಪದ್ಧತಿ. ಇದು ಮನುಷ್ಯರು ವಿವಿಧ ರೂಪದ ಸಂಸ್ಕಾರದಲ್ಲಿ ವಿವಾಹವನ್ನು ಒಂದು ಸಂಧಾನಕ್ಕೆ ಅಳವಡಿಸಿ
ರೂಢಿಸಿಕೊಂಡ ಸಂಸ್ಕಾರ. ಆದರೆ ದುರ್ದೈವ ವಶಾತ್ ಅನೇಕ ಸಲ ಬಾಳ ಸಂಗಾತಿಯ ಯೋಗ ಜಾತಕದಲ್ಲಿರುವುದಿಲ್ಲ. ಆದರೂ ಸಮಾಜ ಒಂದು ಗಂಡಿಗೆ ಒಂದು ಹೆಣ್ಣು ಎಂಬ ಸಾಮಾಜಿಕ ನಿಯಮವನ್ನು ರೂಪಿಸಿ ಮದುವೆಯೆಂಬ ವಿಧಿಯನ್ನು ರೂಢಿಗೆ ತಂದಿತೆಂಬುದು ಯುಕ್ತವಾದರೂ ಹಲವರಿಗೆ ಸಂಗಾತಿಯ ಯೋಗ ಇರುವುದಿಲ್ಲ ಎಂಬುದು ಗ್ರಹಚಾರ. ಆಗ ಸಮಾಜ ಸಾವಿರ ಸುಳ್ಳು ಹೇಳಿ ಒಂದು ಮದುವೆ ಮುಗಿಸುವ ವಿಚಾರವನ್ನು ಶಿಷ್ಟರೀತಿ ಎಂದೇ ಸ್ವೀಕರಿಸಿತು. ಅಂದರೆ ಆಶ್ಚರ್ಯವಾಗುವ ರೀತಿಯಲ್ಲಿ ನಮ್ಮ ಸಮಾಜ ಸಾವಿರ ಸುಳ್ಳು ಹೇಳಿ ಮುಗಿಸಿದ ಮದುವೆ ಅನರ್ಥದ ಗೂಡಾಗದಂತೆ ಎಚ್ಚರ ವಹಿಸುತ್ತಿತ್ತು. ಈಗ ಕಾಲ ಬದಲಾಗಿದೆ. ಕಾಲದ ಸೂಕ್ಷ್ಮ ಸಾರ ಸೂಕ್ಷ್ಮಗಳನ್ನು ಹೇಳಿ ನಡೆಸಿದ ವಿವಾಹಗಳಿರಲಿ, ಜಾತಕ ಹೊಂದಿಸಿ ಮದುವೆಯಾದ ಜೋಡಿಗಳು ವೈವಾಹಿಕ ಬಾಂಧವ್ಯ, ಅನುಬಂಧ, ಋಣಾನುಬಂಧಗಳನ್ನು ಮುಗಿಸಿ ಹೊರಸಿಡಿದು ಬರುತ್ತಿದೆ. ಎಲ್ಲಿ, ಏನು, ಯಾಕೆ, ಹೇಗೆ ತಪ್ಪುಗಳಾಗುತ್ತಿದೆ?
ಎಲಿಜಿಬತ್ ಟೇಲರ್‌ಗೆ ಎಂಟು ಮದುವೆ ಹೇಗೆ?
ಸುಂದರಿಯಾಗಿದ್ದ ಹಾಲಿವುಡ್ ನಟಿ ಎಲಿಜಿಬತ್ ಟೇಲರ್ ಯಾರಿಗೆ ಗೊತ್ತಿಲ್ಲ?
ಚಿನ್ನಾಭರಣಗಳ ಬಗ್ಗೆ ತೀವ್ರವಾದ ಅಸ್ಥೆ ಹೊಂದಿದ್ದ ನಟಿ, ವೃತ್ತಿಯಲ್ಲಿ ಪ್ರತಿಭಾನ್ವಿತೆಯಾಗಿದ್ದಳು. ಕ್ಲಿಯೋಪಾತ್ರಾ ಆಗಿ ಇವಳ ನಟನೆ ಅದ್ಭುತವೆನಿಸಿತ್ತು. ಜೀವನದಲ್ಲಿ ಸುಖವಾಗಿದ್ದಾಳೆ ಎಂಬ ಪ್ರಶ್ನೆಗೆ ಉತ್ತರ ಕಷ್ಟ. ಎಂಟು ಬಾರಿ ಮದುವೆಯಾದರು. ಇವು ಪ್ರದರ್ಶನಕ್ಕಾ? ಸುಖಕ್ಕಾ? ಬೇರೆ ಏನಾದರೂ ಕಾರಣಗಳಿದೆಯಾ? ಜಾತಕದಲ್ಲಿ ಸುಖದ ರಾಶಿ ಒದಗಿಸ ಬೇಕಾದ ಗುರು ಶನಿ ದೃಷ್ಟಿಯಲ್ಲಿ ಬಳಲಿದ್ದಾನೆ. ಬಾಳ ಸಂಗಾತಿ ಸ್ಥಾನದ ಅಧಿಪತಿಯೂ ಆಗಿ ಕೇಂದ್ರಾಧಿಪತ್ಯ ದೋಷವೂ ಇದೆ ಗುರುವಿಗೆ. ಬಾಳ ಸಂಗಾತಿಯ ಸ್ಥಳದಲ್ಲಿ ಭಾಗ್ಯ ಒದಗಿಸುವ ಶುಕ್ರನನ್ನು ಉಸಿರುಗಟ್ಟಿಸಿದ ರಾಹು ದೋಷ ಬುದ್ಧಿಯೋಗ ಇದ್ದರೂ ಅದು ಕೊಂಚ ಪ್ರಶ್ನಾರ್ಹ. ವ್ಯಕ್ತಿತ್ವದ ಗಟ್ಟಿತನ ಒದಗಿಸುವ ಬುಧನಿಗೆ ಸೂರ್ಯ ಹಾಗೂ ಅಂಗಾರಕರ ಬಾಧೆ. ಆದರೆ ಧೈರ್ಯ. ಯಾರನ್ನು ಕೇರ್ ಮಾಡುವವಳಲ್ಲ. ನನ್ನ ದಾರಿಯ ದಿಕ್ಕು ಯಾವುದೆಂಬುದು ನನಗೆ ಚೆನ್ನಾಗಿ ಗೊತ್ತು. ನಾನು ಬೇರೆಯವರ ಬಗೆಗಾಗಿ ಬದುಕುವವಳಲ್ಲ ಎಂಬಿತ್ಯಾದಿ ವಿಚಾರಗಳನ್ನು ಬುಧ, ಸೂರ್ಯ ಅಂಗಾರಕರು ಜತನದಿಂದ ಕಾಪಾಡಿದರು. ತನ್ನ ಎಪ್ಪತ್ತೂಂಭತ್ತನೇ
ವಯಸ್ಸಿನಲ್ಲಿ ಸಾಡೆಸಾತಿ ಶನಿಕಾಟ ಶುರುವಾದಾಗ ಮರಣ ಹೊಂದಿದಳು.
ಯುವಕರನ್ನು ಹುಚ್ಚೆಬ್ಬಿಸಿದ ಮರ್ಲಿನ್ ಮನ್ರೊà
ಯುವಕರಿರಲಿ, ಮಧ್ಯವಯಸ್ಕರಿರಲಿ, ಮುದಿ ವಯಸ್ಕರಿರಲಿ ಎಲ್ಲರ ನಿದ್ದೆಗೆಡಿಸಿದ
ಮತ್ತೂಬ್ಬ ನಟಿ ಮರ್ಲಿನ್ ಮನ್ರೊà. ಮೂರು ಬಾರಿ ವಿವಾಹಿತಳು. ಬದುಕಲ್ಲಿ ಪ್ರವೇಶಿಸಿದ ಪುರುಷರು ಎಷ್ಟು ಎಂಬುದನ್ನು ಮನ್ರೊà ನೆನಪಿಡಬೇಕು ಅಷ್ಟೇ ಎಂದು ಮಾಧ್ಯಮಗಳ ವರದಿ. ಬಾಳ ಸಂಗಾತಿಯನ್ನು ಸಂಕೇತಿಸುವ ಶನೈಶ್ಚರ ಸುಖ ಸ್ಥಾನದಲ್ಲಿ. ಸುಖ ಸ್ಥಾನದ ಅಧಿಪತಿ ಶುಕ್ರನಿಂದಲೇ ಅತಿ ಬಲಾಡ್ಯ. ಆದರೆ ಶುಕ್ರನನ್ನು ದೃಷ್ಟಿಸಿದ್ದರಿಂದ ಸುಖಸ್ಥಾನಾಧಿಪತಿ ದುರ್ಬಲನಾಗಿದ್ದಾನೆ. ಇವಲ್ಲಕ್ಕೂ ಹೆಚ್ಚಾಗಿ ಚಂದ್ರನ ದೌರ್ಬಲ್ಯವು ಮರ್ಲಿನ್‌ಗೆ ಮಾರಕ ಸ್ವರೂಪದ್ದು. ಗುರು ಮಂಗಳ ಯೋಗವಿದ್ದರೂ ದುರ್ಘಟನೆ ಅರಿಷ್ಟಗಳನ್ನು ಸೂಚಿಸುವ ಗುರು, ಆಯಸ್ಸಿಗೆ ಶಕ್ತಿ ಚೈತನ್ಯ ತುಂಬುವ ಚಂದ್ರ ಕ್ರಮವಾಗಿ ಮರಣ ಹಾಗೂ ಮಾರಕದ ಮನೆಯಲ್ಲಿ ಸುಸ್ಥಿರವಿರಲ್ಲ. ಲಗ್ನಾಧಿಪತಿಯು ಚಂದ್ರನಾಗಿ, ಬಾಳ ಸಂಗಾತಿಯ ಮನೆಯಲ್ಲಿ ಸ್ಥಿತನಾದರೆ ವೈವಾಹಿಕ ಜೀವನ ಲೈಂಗಿಕ ಜೀವನ ದುರದೃಷ್ಟಕರವೆಂಬುದು ಬಹುತೇಕ ಖಚಿತ. ಈ ಯೋಗವನ್ನು ಕೆಲವು ರೀತಿಯಲ್ಲಿ ಶಮನಗೊಳಿಸಿ ಆನಂದದಾಯಕ ಗ್ರಹ ಸಂಯೋಜನೆ ಬೇಕಾಗುತ್ತದೆ. ಆದರೆ ಕೀರ್ತಿವಂತರಾಗಿರುತ್ತಾರೆ. ಪ್ರಭಲ ಮಹಿಳಾ ಪ್ರಧಾನಿಯೊಬ್ಬರು ಶನೈಶ್ಚರನ ಕಾರಣಕ್ಕಾಗಿಯೇ ಎದ್ದು ನಿಂತದ್ದು ನಿಂತು ಬಿದ್ದದ್ದು. ವೈವಾಹಿಕ ಜೀವನದಲ್ಲಿ ಸಾಫಲ್ಯತೆ ಕಾಣದೆ ಹೋದದ್ದು ಪ್ರಪಂಚದ ಇತಿಹಾಸದಲ್ಲಿ ಇತ್ತು. ಮರ್ಲಿನ್ ಮನ್ರೊà ನಿಗೂಢ ರೀತಿಯಲ್ಲಿ ಮರಣ ಹೊಂದಿದರು. ಅವರ ಲೈಂಗಿಕ ಜೀವನ ಸಫಲವೋ ಫಲà ತಿಳಿಯದಾಯಿತು.
ಇಂದು ಮದುವೆಗಳು ಗಟ್ಟಿಯಾಗಿ ನಿಲ್ಲುವುದೇ ಅಪರೂಪ
ಭಾರತದ ದಾಂಪತ್ಯವೆಂದರೆ ಏಳೇಳು ಜನ್ಮಗಳ ಋಣಾನುಬಂಧ ಎಂದು ನಂಬಿದ ಪರಂಪರೆಯಲ್ಲಿ ನಡೆದು ಬಂದ ದೇಶ. ದಾಂಪತ್ಯ ವಿಚ್ಛೇದನಗಳು ಇದ್ದಿರಲೇ ಇಲ್ಲ ಎಂಬಷ್ಟು ಸಣ್ಣ ಪ್ರಮಾಣದಲ್ಲಿತ್ತು. ಆದರೆ ಇಂದು ಪರಿಸ್ಥಿತಿ ಬದಲಾಗಿದೆ. ಮದುವೆಯ ಬಂಧನಗಳಲ್ಲಿ ಬಿರುಕುಗಳು ಅಪಾರವಾಗುತ್ತಿದೆ. ವಿಚ್ಛೇದನಗಳು ಏರುಮುಖದಲ್ಲಿವೆ. ಗಂಡುಗಳಿಗೆ ಹೆಣ್ಣುಗಳೇ ಸಿಗಲಾರದ ಅತಂತ್ರತೆ . ಸಿಕ್ಕಿದರೂ ಬಹಳ ದಿನಗಳ ಕಾಲ ಒಗ್ಗೂಡಿಕೊಂಡ ಅನುಪಮತೆಯಲ್ಲಿ ದಾಂಪತ್ಯ ಮುಂದುವರೆಯಬಹುದೆಂಬ ನಂಬಿಕೆ ಇಲ್ಲ. ಜಾತಕ ನೋಡಿ ಮದುವೆ ಮಾಡುವ ಜಾತಕ ನೋಡಿದ ಮೇಲೆಯೇ ಮದುವೆ ನಿಶ್ಚಯಿಸುವ ಪ್ರಮಾಣ ಕಡಿಮೆಯೇನಾಗಿಲ್ಲ. ಆದರೂ ಮದುವೆಗಳ ನಂತರದಲ್ಲಿ ಹೆಣ್ಣು ಗಂಡುಗಳು ಮಹಾ ಸಮರದ ಅಂಚಲ್ಲಿ ಬಂದು ನಿಲ್ಲುತ್ತಾರೆ. ಯಾಕೆ ಜೋತಿಷ್ಯ ಶಾಸ್ತ್ರ ಹೊಂದಿಸಿದ ತೊಂದರೆ ಇಲ್ಲ ಸತಿಪತಿಗಳಾಗಬಹುದು ಎಂಬ ಹಸಿರು ನಿಶಾನೆ ತೋರಿದ ಬಳಿಕವೂ ಸಂಬಂಧಗಳು ಕೋರ್ಟ್ ಮೆಟ್ಟಿಲನ್ನು ಏರುತ್ತಿವೆ ಯಾಕೆ? ನಿಜ ಬದಲಾದ ಕಾಲದಲ್ಲಿ ಜಾತಕ ಪರೀಕ್ಷೆ ಹೆಣ್ಣುಗಂಡುಗಳ ಮ್ಯಾಚಿಂಗ್‌ಗೆ ಅನ್ಯ ವಿಚಾರಗಳನ್ನು ಗಮನಿಸಲೇ ಬೇಕು. ಸಂಸ್ಕೃತಿಯ ಸ್ಥಿತ್ಯಂತರ ಕಾಲರಾಯನನ್ನು ನಾವು ಗೌರವಿಸಲೇ ಬೇಕು. ಹಾಗಾದರೆ ಜಾತಕ ಜೋಡಣೆ ಹೇಗೆ?
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Astrology 2024: 2024ರಲ್ಲಿ ಮಿಶ್ರ ಫಲಗಳೇ ಅಧಿಕ-ರಾಜ್ಯದಲ್ಲೇನಾಗುತ್ತದೆ?
ಜ್ಯೋತಿಷ್ಯದಲ್ಲಿ ನವಗ್ರಹಕ್ಕಿಂತಲೂ ನಕ್ಷತ್ರಗಳಿಗೆ ಹೆಚ್ಚು ಪ್ರಾಮುಖ್ಯತೆ ಯಾಕೆ ಕೊಡಲಾಗಿದೆ?
ಶುಭ ವಿಚಾರ ತಿಳಿಯುವ ಗೋಚಾರ ಫಲ ಎಂದರೇನು, ಗುರುಬಲ ಯಾವಾಗ ಆರಂಭವಾಗಲಿದೆ…
ಮಾರಕಾಧಿಪತಿ, ಭಾದಕಾಧಿಪತಿ: ಅಕಾಲಿಕ ಮರಣದ ಬಗ್ಗೆ “ಅಷ್ಠಮ ಸ್ಥಾನ” ಮುನ್ಸೂಚನೆ ಕೊಡುತ್ತದೆಯೇ?
ಗಜಕೇಸರಿ ಯೋಗ… ಈ ಯೋಗ ಹೇಗೆ ಉಂಟಾಗುತ್ತದೆ, ಇದರ ಮಹತ್ವವೇನು?
MUST WATCH
ಹೊಸ ಸೇರ್ಪಡೆ
Waqf Bill: ಜೆಪಿಸಿ ಅಧ್ಯಕ್ಷರ ಭೇಟಿ ಚುನಾವಣ ನಿಯಮ ಉಲ್ಲಂಘನೆ: ಸಚಿವ ಪ್ರಿಯಾಂಕ್
MUDA: ಆರೋಪಿ ಸ್ಥಾನದಲ್ಲಿರುವ ಸಿಎಂ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ: ಬಿವೈವಿ
By Election: ಒಬ್ಬ ಯುವಕನ ಕಟ್ಟಿ ಹಾಕಲು ಬೀಡುಬಿಟ್ಟ ಕೈ ನಾಯಕರ ದಂಡು: ಎಚ್.ಡಿ.ಕುಮಾರಸ್ವಾಮಿ
Rahul Gandhi ಗುರಿ ತಪ್ಪಿದ ಕ್ಷಿಪಣಿ, ಸೋನಿಯಾರಿಂದ ತರಬೇತಿ ಅಗತ್ಯ: ಹಿಮಾಂತ
Delhi; ಕಾನೂನು ಅಧಿಕಾರಿ ನಿವಾಸದಲ್ಲಿ 3.79 ಕೋಟಿ ನಗದು ಸಿಬಿಐನಿಂದ ವಶಕ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.