ಸಿನಿಮಾ ಅಭಿನಯ ದಲ್ಲಿ ಶುಕ್ರಗ್ರಹದ ಪಾತ್ರ ಏನು ಗೊತ್ತಾ?
Team Udayavani, Feb 27, 2016, 7:10 AM IST
ಶುಕ್ರಗ್ರಹಕ್ಕೆ ತನ್ನದೇ ಅದ ವಿಶಿಷ್ಠ ಗುಣಧರ್ಮಗಳಿವೆ. ಜೀವನ ಸಂಬಂಧವಾದ ಅನೇಕ ಭೋಗಗಳನ್ನು ಶುಕ್ರಗ್ರಹ ಒದಗಿಸಲು ಸಹಾಯ ಮಾಡುತ್ತದೆ. ಆದರೆ ಭೋಗ ಎನ್ನುವುದನ್ನು ಅನೈತಿಕವಾದ ಅರ್ಥ ನಿಕ್ಷೇಪದಲ್ಲಿ ಸ್ವೀಕರಿಸಬಾರದು. ತನ್ನ ಉನ್ನತವಾದ ಕಾಂತಿಯನ್ನು ಅದು ಚಂದ್ರನ ಸೂರ್ಯನ ಅಥವಾ ಕುಜನ ಕಾರಣಕ್ಕಾಗಿ ಕಳಕೊಂಡಿದ್ದರೆ ಅನೈತಿಕವಾದ ದಾರಿಗೆ ಶುಕ್ರ ಒಬ್ಬ ವ್ಯಕ್ತಿಯನ್ನು ಹೊರಳಿಸಲು ಕಾರಣನಾಗುತ್ತಾನೆ. ಹೀಗಾಗಿ ಶ್ರೀರಾಮಚಂದ್ರನು ಸೀತಾದೇವಿಯೊಂದಿಗೆ ಪಡೆದ ಜೀವನದ ಭೊಗಕ್ಕೆ ಅರ್ಥ ಬೇರೆ. ಇಂದ್ರನ ಅಮರಾವತಿಯಲ್ಲಿ ರಂಭೆ, ಊರ್ವಶಿಯಾದಿಯಾಗಿ ಸುರಗಣಿಕೆಯರೊಂದಿಗಿನ ಭೋಗವೇ ಬೇರೆಬೇರೆಯಾಗುತ್ತದೆ. ಸಾವಿರ ಪತ್ನಿಯರೊಂದಿಗಿನ ಶ್ರೀಕೃಷ್ಣನ ಭೊಗ ಬೇರೆ. ಹೀಗಾಗಿ ಶುಕ್ರನು ಅನುಗ್ರಹಿಸುವ ವಿಧಾನ ಯಾವುದು ಎನ್ನುವುದು ಒಬ್ಬ ವ್ಯಕ್ತಿಯ ಜಾತಕದ ಶುಕ್ರನ ಶಕ್ತಿ ಹಾಗೂ ಮಿತಿಯ ಮೇಲೆ ನಿರ್ಧಾರವಾಗುತ್ತದೆ. ಜಾಗತಿಕ ರಂಗದ ಭಾರತೀಯ ಚಲಚಿತ್ರದ, ಇಷ್ಟೇ ಏಕೆ ನಮ್ಮ ಕನ್ನಡಚಿತ್ರರಂಗದ ಮಹಾನ್ ನಟರನ್ನು ಪರಿಗಣಿಸುವುದಾದರೆ ಶುಕ್ರಗ್ರಹದ ಸಂಪನ್ನತೆ ಅವರುಗಳ ಯಶಸ್ಸಿನ ಮೆಟ್ಟಿಲುಗಳನು ನಿರ್ಮಿಸಿದ್ದು ಸ್ಪಷ್ಟವಾಗಿದೆ.
ಆದರೆ ಇದೇ ಶುಕ್ರಗ್ರಹದ ಒಂದು ಹಂತದ ಶಕ್ತಿ ಅನೇಕ ಕಲಾವಿದರುಗಳನ್ನು ಮೇಲೇರಿಸಿದ್ದು ಹೌದಾದರೂ ಶುಕ್ರಗ್ರಹದ ದುರ್ಬಲ ಹಂತದ ಘಟ್ಟದಲ್ಲಿ ಇದೇ ಕಲಾವಿದರುಗಳು ವೈಫಲ್ಯವನ್ನು ಮೈಮೇಲೆ ಎಳೆದುಕೊಂಡು ಪರದಾಡಿದ ರೀತಿಯೂ ಸ್ಪಷ್ಟವಾಗಿದೆ. ಬಹುಮುಖ್ಯವಾಗಿ ಶುಕ್ರನಿಗೆ ಕುಜಗ್ರಹದೊಂದಿಗಿನ ಅಸಹಜವಾದ ಸಂಬಂಧಗಳು ಮುಖ್ಯವಾಗಿ ಒಬ್ಬ ಯಶಸ್ವೀ ಕಲಾವಿದನೋ ಕಲಾವಿದೆಯನ್ನೋ ಅವನತಿಗೆ ತಳ್ಳಬಹುದಾಗಿದೆ. ಕೆಳಹಂತದಿಂದ ಯಶಸ್ಸಿನ ಶೀಖರ ಏರುವುದರಲ್ಲಿ ಹಿಂಸೆ ಇಲ್ಲ. ಯಶಸ್ಸಿನ ಶಿಖರದಿಂದ ಅಪಯಶಸ್ಸಿನ ಪಾತಾಳವನ್ನು ತಲುಪುವುದು ದುರಾದೃಷ್ಟಕರ. ಮುಖ್ಯವಾಗಿ ಈ ಎಲ್ಲಾ ರೀತಿಯ ಅನುಭವಗಳನ್ನು ಪಡೆದ ಯಶಸ್ವೀ ಕಲಾವಿದರ ದೊಡ್ಡ ಪಟ್ಟಿ ನೀಡಬಹುದು.
ಮುಖ್ಯವಾಗಿ ಶುಕ್ರ ಎಂದರೆ ದೈàತ್ಯಶಕ್ತಿ. (ದುರ್ಗಾ, ಸರಸ್ವತಿ) ಹೀಗೆ ದ್ಯೋತಕವಾದ ಗ್ರಹ. ರಾಕ್ಷಸರ ಧರ್ಮಗುರು ಪುರೋಹಿತ ಶುಕ್ರಾಚಾರ್ಯರನ್ನು ಪ್ರತಿನಿಧಿಸುತ್ತಾನೆ. ಸಂಜೀನಿ
ವಿದ್ಯೆಯ ಪಿತಾಮಹ ಈ ಶುಕ್ರಾಚಾರ್ಯ. ರಾಕ್ಷಸರನ್ನು ಕ್ರೌರ್ಯ ಕಳೆಸಿ ಸನ್ಮಾರ್ಗಕ್ಕೆ ಹಚ್ಚುವುದೇ ಶುಕ್ರನ ಕೆಲಸವಾಗಿತ್ತು. ಇಂಥ ಅಪರೂಪದ ಸಂಜೀನಿ ವಿದ್ಯೆಗಾಗಿ ಸಹಜವಾಗಿಯೇ ಅಮೃತತ್ವದಿಂದ ಶಕ್ತರಾಗಿದ್ದ ದೇವತೆಗಳು ಬೃಹಸ್ಪತಿಯ ಮಗ ಕಚನನ್ನು ಶುಕ್ರಾಚಾರ್ಯರ ಬಳಿ ಅಟ್ಟುತ್ತಾರೆ. ತದನಂತರದ ಕಚದೇವಯಾನಿ ಕತೆ ಎಲ್ಲರಿಗೂ ತಿಳಿದದ್ದೇ. ಸಂಜೀನಿ ವಿದ್ಯೆ ದಕ್ಕದೆಹೋಗಲೆಂಬ ಶಾಪಕ್ಕೆ ಕಚ ಗುರಿಯಾಗುತ್ತಾನೆ.
ಶುಕ್ರಗ್ರಹಕ್ಕೆ ಗೆಳೆಯರು ಮತ್ತು ವಿರೋಧಿಗಳು
ಮುಖ್ಯವಾಗಿ ಶನೈಶ್ಚರಸ್ವಾಮಿ ಹಾಗೂ ಬುಧ ಗ್ರಹಗಳು ಶುಕ್ರನ ಗೆಳೆಯರು. ಈ ಗೆಳೆಯರ ಸಂಗಾತಿ ಯುಕ್ತವಾಗಿ ದೊರೆತಾಗ ರಾಜಯೋಗದ ಪ್ರಾಪ್ತಿಯನ್ನು ಶುಕ್ರಗ್ರಹ ಒದಗಿಸುತ್ತಾನೆ. ಅದೇ ಸೂರ್ಯ ಹಾಗೂ ಚಂದ್ರರು ಪರಮ ಶತೃಗಳಾಗಿದ್ದಾರೆ. ಗುರು ಹಾಗೂ ಮಂಗಳರು ತಟಸ್ಥರಾದರೂ ಕುಜ ಸಂಪರ್ಕ ಮಾತ್ರ ಘಾತಕರೀತಿಯಲ್ಲಿ ಒದಗಿದಾಗ, ಕ್ರೌರ್ಯ, ಅನೈತಿಕ ಸಂಬಂಧ,ಲವಲವಿಕೆ ಕಳೆದುಕೊಂಡ ಮನೋಸ್ಥಿತಿ, ಅಪಯಶಸ್ಸು ಅಪಕೀರ್ತಿಗಳು, ಒದಗಿ ಬರುತ್ತದೆ. ಆದರೆ ಈ ವಿಚಾರದಲ್ಲಿ ಅವಸರದ ನಿರ್ಣಯ ಸಲ್ಲ. ಕುಜಶುಕ್ರರ ಅಪರೂಪದ ಮಧುರ ವೈವಾಹಿಕ ಜೀವನದ ಸಾಫಲ್ಯತೆಯನ್ನು ಒದಗಿಸಿದ ಅನೇಕ ಉದಾಹರಣೆಗಳಿದೆ. ಮಹಾತ್ಮಾ ಗಾಂಧಿ ಹಾಗೂ ಕಸ್ತೂರಬಾ ನಡುವಣ ದಾಂಪತ್ಯದಲ್ಲಿ ಸಾಫಲ್ಯತೆ ಇತ್ತು. ಹಿಟ್ಲರನ ಜೀವನದಲ್ಲಿ ಕುಜಶುಕ್ರರು ಜೀವನದ ಮೌಲ್ಯದ ವಿಚಾರದಲ್ಲಿ ಅವನನ್ನು ಕೆಳಹಂತಕ್ಕಿಳಿಸಿದ ಉದಾಹರಣೆಯೂ ಇದೆ. ದೇವಾನಂದ್ ಭಾರತೀಯ ಚಲನಚಿತ್ರರಂಗದ ಅಪರೂಪದ ಯಶಸ್ವೀ ನಟ. ಅವರ ಜಾತಕದ ಶುಕ್ರಗ್ರಹ ಅವರನ್ನು ಚಲನಚಿತ್ರರಂಗದ ಯಶಸ್ವೀ ನಟನನ್ನಾಗಿ ರೂಪಿಸಿತು. ಆದರೆ ಸೂರ್ಯನ ಉಪಸ್ಥಿತಿಯಿಂದಾಗಿ ಶುಕ್ರ ಬಾಧೆಗೊಳಗಾಗಿದ್ದು ದೇವಾನಂದರನ್ನು ಅವರ ಜೀವನದಲ್ಲಿ ಬಂದು ಹೋದ ಗೆಳತಿಯರ ವಿಷಯದಲ್ಲಿ ಪರದಾಡಿಸಿದ್ದು ಇದೆ. ಇದನ್ನು ಸ್ವತಃ ದೇವಾನಂದರೇ ತಮ್ಮ ತಮ್ಮ ಆತ್ಮ ಚರಿತ್ರೆಯ
ಪುಟಗಳಲ್ಲಿ ಶ್ರುತಪಡಿಸಿದ್ದಾರೆ.
ಶುಕ್ರ ಕುಜರ ಬಲೆಯಲ್ಲಿ ಮೀನಾಕುಮಾರಿ ಮತ್ತು ಸಂಜಯ್‌ದತ್
ವಾಸ್ತವ ಯಾವಾಗಲೂ ಜಟಿಲ. ಅಂತೆಯೇ ಆಶ್ಚರ್ಯಕಾರಕ, ಕತೆಗಳಿಗಿಂತ ಬದುಕು ಹೆಚ್ಚು ರೋಚಕ. ಚಲನಚಿತ್ರರಂಗದಲ್ಲಿ ಮೀನಾಕುಮಾರಿ ಹಾಗೂ ಸಂಜಯ್ ದತ್ತರನ್ನೇ ಗಮನಿಸಿ , ಅಭಿನೇತ್ರಿಯಾಗಿ ಮೀನಾಕುಮಾರಿ ಜಾಗತಿಕ ಮಟ್ಟದ ಅಪರೂಪದ ಪ್ರತಿಭೆ. ಅನುಮಾನವೇ ಇಲ್ಲ. ಮಹಾನ್ ತಾರಾ ದಂಪತಿಗಳಾದ ಸುನಿಲ್‌ದತ್ ಹಾಗೂ ನರ್ಗೀಸ್ ದತ್ತರ ಪುತ್ರ ಸಂಜಯ್‌ದತ್ ಈಗಲೂ ಬಾಕ್ಸ್ ಆಫೀಸಿನ ದೃಷ್ಟಿಯಿಂದ ಅದಮ್ಯ ಚೇತನ. ಆದರೆ ಯಶಸ್ಸು ಮತ್ತು ಪ್ರತಿಭೆಗಳಿಂದಲೇ ಮಾನಸಿಕ ಶಾಂತಿ ಲಭಿಸದೆಂಬುದಕ್ಕೆ ನಮ್ಮ ಕಣ್ಣಮುಂದೆಯೇ ಹರಳುಗಟ್ಟಿರುವ ಇವರುಗಳ ಜೀವನದ ಏರಿಳಿತಗಳನ್ನು ಗಮನಿಸಿದರೆ ಚಲನಚಿತ್ರರಂಗದಲ್ಲಿ ಶುಕ್ರನ ಪಾತ್ರ ಪೂರ್ತಿ ಸಾಬೀತು. ನಮ್ಮ ಕನ್ನಡ ಚಿತ್ರರಂಗದ ನಟಿಯೊಬ್ಬಳ ಜೀವ®ದ ಯಶಸ್ಸು ಹತಾಶೆಗಳಿಗೆ ಶುಕ್ರ ಕಾರಣನಾಗಿದ್ದಾನೆ. ಚಂದ್ರ ಖಳನಾಯಕನಾಗಿದ್ದಾನೆ.
ಶುಕ್ರಗ್ರಹದ ಸಿದ್ಧಿಯನ್ನು ವೃದ್ಧಿಪಡಿಸುವುದು ಹೇಗೆ?
ಶುಕ್ರನ ಸಂಬಂಧವಾದ ಶಕ್ತಿ ದೇವತೆಗಳು ಶುಕ್ರಗ್ರಹಕ್ಕೆ ಹೆಚ್ಚಿನ ಶಕ್ತಿ ನೀಡುತ್ತದೆ.
ಪ್ರಧಾನವಾಗಿ ಶುಕ್ರನ ನಕ್ಷತ್ರಗಳಾದ ಭರಣಿ, ಪುಬ್ಟಾ ಹಾಗೂ ಪೂರ್ವಾಷಾಢ ನಕ್ಷತ್ರಗಳು ಕುಜ ಚಂದ್ರ ಹಾಗೂ ಸೂರ್ಯರನ್ನು ಶುಕ್ರನ ಸಂಬಂಧವಾಗಿ ಹೇಗೆ ಎಷ್ಟು ಮೃದುಗೊಳಿಸಬಲ್ಲವು ಎಂಬುದನ್ನು ಪರಿಗಣಿಸಬೇಕಾಗುತ್ತದೆ. ಸೂರ್ಯ ಹಾಗೂ ಕುಜರ ವಿಚಾರದಲ್ಲಿ ಇದು ಮುಖ್ಯವಾಗುತ್ತದೆ. ಚಂದ್ರನ ವಿಚಾರದಲ್ಲಿ ಇದು ಸೂರ್ಯನಿಂದ ಚಂದ್ರನ ದೂರ ಎಷ್ಟು ಎಂಬುದನ್ನು ಗ್ರಹಿಸಬೇಕಾಗುತ್ತದೆ. ಬೆಳ್ಳಿಯದೇ ಪ್ರತಿಮೆ, ಅವರೆ ಕಾಳು, ಬಿಳಿ ವಸ್ತ್ರ, ಶಾಸ್ತ್ರಬದ್ಧವಾಗಿ ಒಂದು ಸಂಪನ್ನವಾದ ಗುಂಪಾಗಿ ಶುಕ್ರನ ಶಕ್ತಿಯನ್ನು ವೃದ್ಧಿಸುತ್ತದೆ. ಬೇಕಾಬಿಟ್ಟಿ ವಜ್ರವನ್ನು ಧರಿಸುವುದು ಶುಕ್ರನ ಕ್ರೌರ್ಯವನ್ನು ವರ್ಧಿಸಬಹುದು. ಶುಕ್ರನ ಸಿದ್ಧಿಗೆ ಅನುಕೂಲವಾಗುವ ಹಾಗೆ ವಜ್ರದ ಬಳಕೆ ಆಗಬೇಕು. ಔದುಂಬರ ವೃಕ್ಷದ ಶಾಸ್ತ್ರ ರೀತ್ಯಾ ಪೂಜೆ ಶುಭವಾದುದು. ತುಪ್ಪದ ಅನ್ನದಿಂದ ಮಾಡಿದ ಭಕ್ಷ್ಯದಿಂದ ಶುಕ್ರನನ್ನು ಮಂತ್ರಸಾಂಗತ್ಯದಲ್ಲಿ ತೃಪ್ತಿ ಪಡಿಸಬೇಕು. ಬಿಳಿ ಕಮಲದ ಹೂಗಳ, ಧವಳಾಶ್ವಗಳು ಶುಕ್ರನನ್ನು ಪುಷ್ಟಿಗೊಳಿಸುತ್ತದೆ. ಶುಕ್ರವಾರಕ್ಕೂ ಜೇಷ್ಠಾ ನಕ್ಷತ್ರಕ್ಕೂ ಶುಕ್ರನನ್ನು ಸಂಪ್ರೀತ ಗೊಳಿಸುವ ಶಕ್ತಿ ಇದೆ.
ಅನಂತಶಾಸಿŒ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Astrology 2024: 2024ರಲ್ಲಿ ಮಿಶ್ರ ಫಲಗಳೇ ಅಧಿಕ-ರಾಜ್ಯದಲ್ಲೇನಾಗುತ್ತದೆ?
ಜ್ಯೋತಿಷ್ಯದಲ್ಲಿ ನವಗ್ರಹಕ್ಕಿಂತಲೂ ನಕ್ಷತ್ರಗಳಿಗೆ ಹೆಚ್ಚು ಪ್ರಾಮುಖ್ಯತೆ ಯಾಕೆ ಕೊಡಲಾಗಿದೆ?
ಶುಭ ವಿಚಾರ ತಿಳಿಯುವ ಗೋಚಾರ ಫಲ ಎಂದರೇನು, ಗುರುಬಲ ಯಾವಾಗ ಆರಂಭವಾಗಲಿದೆ…
ಮಾರಕಾಧಿಪತಿ, ಭಾದಕಾಧಿಪತಿ: ಅಕಾಲಿಕ ಮರಣದ ಬಗ್ಗೆ “ಅಷ್ಠಮ ಸ್ಥಾನ” ಮುನ್ಸೂಚನೆ ಕೊಡುತ್ತದೆಯೇ?
ಗಜಕೇಸರಿ ಯೋಗ… ಈ ಯೋಗ ಹೇಗೆ ಉಂಟಾಗುತ್ತದೆ, ಇದರ ಮಹತ್ವವೇನು?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.