ದರಿದ್ರ ಯೋಗಗಳು ಯಾಕೆ ಬರುತ್ತವೆ ಗೊತ್ತಾ?


Team Udayavani, Dec 16, 2016, 10:30 PM IST

12.jpg

ದರಿದ್ರ ಯೋಗಗಳು ಜೀವನ ಪೂರ್ತಿ ಇರುತ್ತವೆ ಎಂದಲ್ಲ, ಜೀವನ ಪೂರ್ತಿ ಇರಬಾರದು ಎಂದೂ ಅಲ್ಲ. ಎಂದೋ ಬಂದು ಮತ್ತೆ ಅದು ಹೋಗಲೂಬಹುದು. ಬಂದ ನಂತರ ಹೋಗದೆಯೂ ಇರಬಹುದು. ಜೀವನದ ಪ್ರಾರಂಭದಲ್ಲಿ ಬರಬಹುದು. ಜೀವನದ ಪ್ರಾರಂಭದಲ್ಲಿ ಅದ್ಬುತ ರಾಜಯೋಗವಿದ್ದು ತಾರುಣ್ಯದಲ್ಲಿ ದರಿದ್ರ ಯೋಗ ಬರಬಹುದು. ಮತ್ತೆ ನಡುವಯಸ್ಸಿನಲ್ಲಿ ಮತ್ತೆ ರಾಜಯೋಗಕ್ಕೆ ಅವಕಾಶವಾಗಬಹುದು. ಆಗದೆಯೂ ಇರಬಹುದು. ಬಹಳಷ್ಟು ಎತ್ತರದಲ್ಲಿದ್ದ ವ್ಯಕ್ತಿಯನ್ನು ಕುಟುಂಬದ ಹತ್ತಿರದವರೆ ವಂಚಿಸಿ ಕೆಟ್ಟ ಸ್ಥಿತಿಗೆ ತರಬಹುದು. ದ್ರೋಹಗಳನ್ನು ಅನ್ಯರೂ ಮಾಡಬಹುದು. ವ್ಯಕ್ತಿ ತನಗೆ ತಾನೆ ಅನ್ಯಾಯ ಮಾಡಿಕೊಳ್ಳಬಹುದು. 

ಕೇಮದ್ರುಮ ಯೋಗ ಮತ್ತು ಬ್ಯಾಂಕಿನ ಹಿರಿಯ ಅಧಿಕಾರಿ
ಈ ವ್ಯಕ್ತಿಯ ಜಾnನ ಬುದ್ಧಿಬಲ ಸಮಯಾವಧಾನ ವ್ಯವಹಾರಿಕ ಕೌಶಲ್ಯ ಯಾವುದೂ ತೆಗೆದುಹಾಕುವಂತದ್ದಲ್ಲ. ಬುದ್ಧಿಶಾಲಿ. ನರಿಯ ಬುದ್ಧಿ. ಜೀವನದಲ್ಲಿ ಮೇಲೇರುವಾಗ ಒಬ್ಬ ಶಕುನಿಯೂ ಆಗಬೇಕಾಗುತ್ತದೆ. ಕೃಷ್ಣನೂ ಆಗಬೇಕಾಗುತ್ತದೆ. ಚಾಣಕ್ಯನಂತ ಮಹತ್ತರವಾದ ಏಳುಬೀಳುಗಳಿನ ಚದುರಂಗದಾಟವನ್ನೂ ಆಡಬೇಕಾಗುತ್ತದೆ. ಆದರೆ ಇಲ್ಲಿ ಹೇಳುತ್ತಿರುವ ವ್ಯಕ್ತಿ ಬ್ಯಾಂಕಿನ ಆಡಳಿತ ಮಂಡಳಿಯ ಬಾಲ ಹಿಡಿದುಕೊಂಡೇ ಮೇಲೆ ಬಂದ. ಎಂಥ ಅದ್ಭುತದ ಕಾಲಘಟ್ಟವೆಂದರೆ ಇವರು ಮುಟ್ಟಿದ್ದೆಲ್ಲ ಚಿನ್ನವಾಗುತ್ತ ಹೋಯಿತು. ಎಲ್ಲಾ ರೀತಿಯ ಪದೋನ್ನತಿಗಳು ಬೇಗೆ ಬೇಗ ಹೆಗಲಿಗೆ ಸಿಕ್ಕುತ್ತ ಹೋದವು. ಇವರನ್ನು ಮೇಲಕ್ಕೆ ತಂದ ಅಧಿಕಾರಿಗಳನ್ನೂ ಮೀರಿ ಮೇಲಿನ ಹಂತ ತಲುಪಿದ್ದರು. ಹೀಗಿರುವಾಗ ನಾಟಕೀಯ ರೀತಿಯಲ್ಲಿ ಆಡಳಿತ ಮಂಡಳಿ ಸಸ್ಪೆಂಡ್‌ ಮಾಡಿತು. ತನ್ನನ್ನು ಕಾಪಾಡಿಕೊಳ್ಳಲು ಇವರು ಕೋರ್ಟ್‌ ಮೆಟ್ಟಿಲು ಹತ್ತಬೇಕಾಯಿತು. ಯಾವುದೂ ಪ್ರಯೋಜನವಾಗಲಿಲ್ಲ. ಇವರನ್ನು ಕೆಲಸದಿಂದಲೇ ಆಡಳಿತ ಮಂಡಳಿ ಡಿಸ್‌ಮಿಸ್‌ ಮಾಡಿತು. 

ಎಂಥದೊಂದು ಬಲ ಪಡೆದು ಮೇಲೇರಿದ್ದ ಈ ವ್ಯಕ್ತಿ ಆಶ್ಚರ್ಯಕರ ರೀತಿಯಲ್ಲಿ ಅಪ್ರಸ್ತುತರಾದರು. ಗಟ್ಟಿಯಾದ ರವಿ,ಬುಧ ಯೋಗ ಹೊಂದಿದ್ದ ಇವರು ದುಃಸ್ಥಾನ ಪೀಡಿತ ಸ್ಥಿತಿಯಿಂದಾಗಿ ಪ್ರತಿಯೊಂದನ್ನೂ ವಕ್ರವಾಗಿಯೇ ಆಲೋಚಿಸಿ ಶಕುನಿಯಂತೆ ದಾಳ ಹಾಕಿದ್ದರು. ರವಿದಶಾಕಾಲದಲ್ಲಿ ಇವರು ಎಸೆದ ಪ್ರತಿಯೊಂದು ದಾಳಗಳು ಇವರನ್ನು ಗೆಲ್ಲಿಸಿದವು. ಆದರೆ ರವಿದಶಾ ಮುಗಿದು ಚಂದ್ರ ದಶಾ ಬಂದಾಗ ಅರಿಷ್ಠವಾಗಿದ್ದ ಅಷ್ಠಮನಲ್ಲಿ ಇದ್ದ ಚಂದ್ರನು ಕೇಮದ್ರುಮ ಯೋಗದ ಕಲ್ಮಶವನ್ನು ಹೊಂದಿದವನಾಗಿ ವ್ಯತಿರಿಕ್ತವಾಧ ಫ‌ಲಗಳನ್ನು ಕೊಡುತ್ತ ಹೋಗಿದ್ದ. ಈ ಯೋಗದಿಂದಾಗಿ ಸ್ತ್ರೀಶಾಪದ ತಾಪಗಳು ಈ ವ್ಯಕ್ತಿಯನ್ನು ಬಾಧಿಸಲಾರಂಭಿಸಿದ್ದವು. ವಿನಾಕಾರಣ ಮದುವೆಯಾದವಳ ಜೊತೆ ದೂರವಾಗಿ ಅನ್ಯಸ್ತ್ರೀಯಯೊಡನೆ ಅಧಿಕೃತವಾಗಿಯೇ ಜೀವನ ಪ್ರಾರಂಭಿಸಿದ್ದು ಇವರ ವರ್ತಮಾನವೂ ಆಗಿತ್ತು. ಸ್ತ್ರೀಶಾಪ, ಪಿತೃಶಾಪ, ಮಾತೃಶಾಪ, ಮಾನಸಿಕ ಪರಿತಾಪಗಳಿಂದಾಗಿ ಯಾರೇ ಕೊಟ್ಟ ಶಾಪವಾಗಲೀ ಒಬ್ಬ ವ್ಯಕ್ತಿಯನ್ನು ಕೆಳಗೆ ಕೆಡವ ಮಣ್ಣು ಮುಕ್ಕಿಸಲು ಸಾಕಾಗುತ್ತದೆ. ಈ ಶಾಪದ ತಾಪ ಕೇಮದ್ರುಮ ಯೋಗದ ಅರಿಷ್ಟ ಪಡೆದಿದ್ದ ಚಂದ್ರ ದಶಾ ಸಂದರ್ಭದಲ್ಲಿ ಬಾಧೆ ಶುರುಮಾಡಿತ್ತು. ಜೀವನದಲ್ಲಿ ಇನ್ನೂ ಏರಬೇಕಾಗಿದ್ದ ವ್ಯಕ್ತಿ ಅಸಹಾಯಕರಾದದ್ದು ಸುಳ್ಳಲ್ಲ. ಆರ್ಥಿಕವಾದ ಬಾಧೆ, ಬಾರದಿದ್ದರೂ ಶಿಖರದಿಂದ ಪ್ರತಾಪಕ್ಕೆ ಉರುಳಿ ಬೀಳುವ ನೋವು ಸಾಮಾನ್ಯದ್ದಲ್ಲ. ದೇಶಭ್ರಷ್ಟನಾಗಿ ಹೋರದೇಶಗಳಿಗೆ ಓಡುವ ಸ್ಥಿತಿಯೂ ಇಂಥದ್ದೇ. 

ವೃದ್ಧಾಪ್ಯದ ತೊಂದರೆ ಎದುರಿಸಿದ ಬ್ಯಾಂಕ್‌ನ ವರಿಷ್ಟ
ಇವರಿಗೆ ವೃದ್ಧಾಪ್ಯದ ಬೇಗುದಿಯಾದಾಗಿ ಕುಜದಶಾ ಪ್ರಾರಂಭವಾಗಿತ್ತು. ಎಲೆಅಡಿಕೆ ತಿಂದು ಊರಲ್ಲಿಯೇ ಸೇವಾ ಹಿರಿತನ ಮುಗಿಸಿದ ವ್ಯಕ್ತಿ ಕೈಕೆಳಗಿನವರಿಗೆ ಶಿಸ್ತು ಹಾಗೂ ಪರಿಶ್ರಮಗಳು ಹೇಗಿರಬೇಕು ಎಂಬ ತತ್ವಬೋಧನೆ ಮಾಡುತ್ತಿದ್ದರು. ಅನ್ಯರೆ ಕಷ್ಟವರಿಯದೆ ತನಗೆ ಮಸ್ಕಾ ಹೊಡೆದ ಪ್ರತಿಯೊಬ್ಬನನ್ನೂ ಮೇಲೆ ತಂದರು. ಅನ್ಯರನ್ನು ವರ್ಗಾವಣೆ ಪದೋನ್ನತಿ ಕೊಡದೆ ಸತಾಯಿಸಿದರು. ಸೂರ್ಯ ಚಂದ್ರ ಇಬ್ಬರೂ ಬದುಕಿನಲ್ಲಿ ಮೇಲೇರಿ ಬರುವಂತೆ ಸಹಕರಿಸಿದ್ದರು. ಕುಜದಶಾಕಾಲ ಬಂದಾಗ ಬ್ಯಾಂಕಿನ ವರಿಷ್ಠತೆಯ ಕಾಲವೂ ಬಂದಾಗಿತ್ತು. ಶನೈಶ್ಚರನ ಕಾಟವೂ ಶುರುವಾಗಿತ್ತು. ಶನೈಶ್ಚರನ ದೃಷ್ಟಿ ಆಘಾತಕ್ಕೆ ಸಿಲುಕಿದ್ದ ಕುಜನು  ಬುದ್ಧಿಯ ಬಿಗುವನ್ನೇ ಕಳೆದುಕೊಂಡಿದದ್ದನು. ಶನೈಶ್ಚರ ಯೋಗವನ್ನು ಇನ್ನಷ್ಟು ಸಂವರ್ಧಿಸಬೇಕಿದ್ದ ಕುಜನನ್ನು ಕುತ್ತಿಗೆ ಹಿಸುಕಿ ದರಿದ್ರ ಯೋಗಕ್ಕೆ ದಾರಿ ಮಾಡಿದ್ದ. ತಾನು ಎಂಥ ಸ್ಥಿತಿಯಲ್ಲಿದ್ದೇನೆ ಎಂಬುದನ್ನು ಅರಿಯದ ಸ್ಥಿತಿ ಉಂಟಾಗಿತ್ತು.

ಭಾರತ ಚಿತ್ರರಂಗದ ಮಹಾನ್‌ ನಟ 
ಭೋಗವೇ ಜೀವನದ ಗುರಿಯಾದಾಗ ಜೀವನದ ವೈವಿಧ್ಯತೆಗಳ ಬಗ್ಗೆ ಪೂರ್ತಿ ನಿರ್ಲಕ್ಷ್ಯ ತಳೆದಾಗ ಕಾರ್ಯವಾಸಿ ಎಂಥವರ ಕಾಲನ್ನೂ ಹಿಡಿಯುತ್ತೇವೆ ಎಂಬ ಆತ್ಮನಾಶ ದಿವಾಳಿತನ ಮಾನಸಿಕವಾಗಿ ಹೇಸಿಗೆ ಅನಿಸದೇ ಹೋದಾಗ ಹೆಣ್ಣು ಹೆಂಡಗಳನ್ನು ದೂರಮಾಡಿಕೊಳ್ಳುವುದು ಅಸಾಧ್ಯವಾದಾಗ ಯಾವ ಚಿನ್ನದ ಪಲ್ಲಕಿಯೂ ಪಲ್ಲಕಿಯಾಗಿರದು. ರಾಜಯೋಗಗಳು ಹಿಂದುಮುಂದಿನ ವಿಚಾರ ಅರಿಯಲು ಸಹಾಯ ಮಾಡದಂತೆ ಚಂದ್ರನನ್ನು ರಾಹು ಕಾಡಿದ ಪರಿಣಾಮವಾಗಿ ಬಲ ಪಡೆಯಲಿಲ್ಲ. ವ್ಯಕ್ತಿತ್ವದಲ್ಲಿ ತೊಂದರೆಗಳನ್ನು ಬಿರುಕುಗಳನ್ನು ನಿರ್ಮಿಸಿದ್ದವು. ಆರ್ಥಿಕ ಸ್ಥಾನಾಧಿಪತಿ ಸೂರ್ಯನ ದಶಾ ಬಂದಾಗ ಮರಣವೇ ನಿಶ್ಚಿತವಾಯ್ತು. ಭರವಸೆಯ ಕುಡಿಗಳಾದ ಮಕ್ಕಳೂ ಗೆಲ್ಲಲು ಪರದಾಡುತ್ತಿದ್ದರು. ಗೆಲ್ಲಲಾಗದೆ ಕೈ ಚೆಲ್ಲಿದ್ದರು. ಸ್ತ್ರೀಲೋಲುಪತೆಯು ಭಾÅಮಕ ಸುಖ ತಂದಿದ್ದರೂ ಶನಿ ಹಾಗೂ ಶುಕ್ರರು ಇಂಥ ಭ್ರಮೆ ಚಿಗುರಿಸಿದ್ದರು. ಆದರೆ ದರಿದ್ರವನ್ನು ಹೊರಲು ಕಾರಣರಾದ ರಾಜಯೋಗದ ಬೇರಿಗೆ ಅರಿಷ್ಟಗಳಾಗಿದ್ದವು. ಆರ್ಥಿಕ ಚೈತನ್ಯವನ್ನು ತುಂಬಲಾಗದ ಸೂರ್ಯದಶಾದಲ್ಲಿ ಮಹಾನ್‌ ನಟ ನಿರ್ದೇಶಕ ನೇಪಥ್ಯಕ್ಕೆ ಸರಿದಿದ್ದರು. ಸಿನಿಮಾ ಮಾಡಲು ಇವರು ಯಾರ್ಯಾರ ಬಳಿ ಸಾಲ ಮಾಡಿದರು ಎಂಬುದು ತಿಳಿಯದಿದ್ದರೆ ವಾಸಿ. ಆದರೆ ಇಂಥ ದಯನೀಯ ಸ್ಥಿತಿಗೆ ಯಾವುದು ಕಾರಣ. ಸ್ವಯಂಕೃತಾಪರಾಧಗಳು ಎಂಬುದೇ ಇದಕ್ಕೆ ಸೂಕ್ತವಾದ ಉತ್ತರ. ಒಬ್ಬ ಮಹಾನ್‌ ಪ್ರತಿಭಾವಂತನಿಗೆ ಅಸಹಾಯಕತೆ ಬರಬಾರದು. ಆದರೆ ದರಿದ್ರ ಯೋಗಗಳು ಹಿಂಸ ಪಶುಗಳಂತೆ ಎಗರಿ ಬರುತ್ತದೆ ಜೀವನದ ಸಂದರ್ಭದಲ್ಲಿ.

ಹಲವರ ಕನಸುಗಳನ್ನು ಕದ್ದ ನಟಿ ಮದುವೆಯಾಗಲಿಲ್ಲ
ಅನೇಕರು ಮೇಲೇರಲು ತಮಗೆ ಯೋಗ್ಯರಲ್ಲದ ಪುರುಷರನ್ನು ಆಯ್ಕೆ ಮಾಡಿಕೊಂಡ ಅನೇಕ ಯಶಸ್ವೀ ಮಹಿಳೆಯರನ್ನು ನಾವು ಗಮನಿಸಿದ್ದೇವೆ. ನೂರಾರು ಉದಾಹರಣೆ ಕೊಡಬಹುದು. ಆದರೆ ಇಲ್ಲಿ ಪ್ರಸ್ಥಾಪ ಮಾಡುತ್ತಿರುವ ಮಹಿಳೆಗೆ ಮೇಲೇರಲು ಪುರುಷರು ಬೇಕಾಗಿರಲಿಲ್ಲ. ತನ್ನ ರೂಪ ಪ್ರತಿಭೆಗಳಿಂದಲೇ ಮೇಲೆದ್ದು ಬಂದಳು. ಈ ಅಂಕಣದಲ್ಲಿ ಯಾರನ್ನೂ ನಾನು ಹೆಸರಿಸಿಲ್ಲ. ಯೋಗಗಳು ಸಾಫ‌ಲ್ಯಕ್ಕೆ ಕಾರಣವಾಗಿದ್ದಾಗ ಹೆಸರುಗಳನ್ನು ತಿಳಿಸಬಹುದು. ಆದರೆ ಜೀವನದಲ್ಲಿ ಗೆಲುವಿದ್ದರೂ ಗೆಲುವನ್ನು ಗೆಲುವೆಂದು ತಿಳಿಯಲಾಗದ ದರಿದ್ರತೆ ಆವರಿಸಿದಾಗ ಹೆಸರನ್ನು ಹೇಳುವುದು ಅಷ್ಟು ಸೂಕ್ತವಲ್ಲ. ಈ ನಟಿಯ ಹಣೆ ಬರಹ ನೋಡಿ. ಮದುವೆಯಾಗಲು ಸಾಧ್ಯವಾಗಲಿಲ್ಲ. ಬಾಳ ಸಂಗಾತಿಯ ಜಾಗದಲ್ಲಿ ಶನೈಶ್ಚರ ಅಡ್ಡಗೋಡೆಯಾಗಿ ನಿಂತಿದ್ದಾನೆ. ಪುರುಷರ ಸಂಪರ್ಕ ಬಂದಿಲ್ಲವೆಂದಲ್ಲ. ಆದರೆ ಏಕೋ ಏನೋ ಪುರುಷರು ತಿಳಿದುಕೊಂಡ ಬಗೆಯಲ್ಲಿ ಬಾಳ ಸುರಕ್ಷತೆ ಒದಗಿಸಲಾರದೆ ಹೋದರು. ಇದು ಶನೈಶ್ಚರನು ಕೊಟ್ಟ ದಾರುಣತೆ. ಶುಕ್ರ ಕುಜರು ಅನೇಕ ಪುರುಷರನ್ನು ಸಂತೋಷದ ಮರೀಚಿಕೆ ರೂಪಿಸಿ ತಂದರೇ ವಿನಾ ಸಫ‌ಲತೆ ಸಾಧ್ಯವಾಗಲಿಲ್ಲ. ಹಲವರ ಕನಸಿನ ರಾಣಿ ನಾನು ನಿಮ್ಮಿಂದ ಬೀಳ್ಕೊಂಡೆ ಎಂದೇ ದೂರವಾದಳು ಈ ನಟಿ. ಮಕ್ಕಳ ಯೋಗವಿಲ್ಲ. ಮಕ್ಕಳ ಯೋಗವಿದ್ದಿದ್ದರೆ ಮದುವೆಯಾಗುತ್ತಿತ್ತು. ಮದುವೆಯಾಗಿದ್ದರೆ ಮಕ್ಕಾಳಗುತ್ತಿದ್ದರು.

ಇದನ್ನು ಗಮನಿಸಬೇಕು. ಮಕ್ಕಳಾಗುವ ಯೋಗವಿದ್ದರೂ  ಮದುವೆಯಾಗದ್ದರಿಂದ ಮಕ್ಕಳಾಗಲಿಲ್ಲ. ಮಕ್ಕಳಾಗದ ಯೋಗವೂ ಇದ್ದರೂ ಮಕ್ಕಳು ಹುಟ್ಟಿದ್ದರೂ ಅವರಿಗೆ ಆಯುಷ್ಯವಿರುತ್ತಿರಲಿಲ್ಲ. ಒಟ್ಟಿನಲ್ಲಿ ಆಯುರಾರೋಗ್ಯ ಸಂಪತ್ತು ಇದೆ. ಆದರೆ ಭಾಗ್ಯವೇ ದೊಡ್ಡ ಸೊನ್ನೆ.     

ಅನಂತ ಶಾಸ್ತ್ರೀ 

ಟಾಪ್ ನ್ಯೂಸ್

Sabarimala Virtual Queue Booking Limit Increase

Kerala govt: ಶಬರಿಮಲೆ ವರ್ಚುವಲ್‌ ಕ್ಯೂ ಬುಕ್ಕಿಂಗ್‌ ಮಿತಿ ಹೆಚ್ಚಳ

UP-Jhansi

Uttar Pradesh: ಝಾನ್ಸಿ ಅಗ್ನಿ ಅವಘಡ: ಗುರುತೇ ಸಿಗದಂತೆ ಕರಕಲಾದ ಹಸುಳೆಗಳು

PM-Nigirya

G20 Leaders Summit: ಪ್ರಧಾನಿ ಮೋದಿ ನೈಜೀರಿಯಾ, ಬ್ರೆಜಿಲ್‌, ಗಯಾನಾ ಪ್ರವಾಸ ಶುರು

Chattisgadh-Petrol

Chhattisgarh: ನೀರಿನ ಬಾವೀಲಿ ಪೆಟ್ರೋಲ್‌: ಸಂಗ್ರಹಕ್ಕೆ ಮುಗಿಬಿದ್ದ ಜನ

Manipu: ಸಿಎಂ ಬಿರೇನ್‌ ಸಿಂಗ್‌ ಮನೆಗೆ ನುಗ್ಗಲು ಯತ್ನಿಸಿದ ಗುಂಪು; ಹೆಚ್ಚಿದ ಹಿಂಸಾಚಾರ

Manipur: ಸಿಎಂ ಬಿರೇನ್‌ ಸಿಂಗ್‌ ಮನೆಗೆ ನುಗ್ಗಲು ಯತ್ನಿಸಿದ ಗುಂಪು; ಹೆಚ್ಚಿದ ಹಿಂಸಾಚಾರ

DK-Shivakumar

Racial Remark: ಕುಮಾರಸ್ವಾಮಿಯವರ “ಕರಿಯ” ಎಂದದ್ದು ತಪ್ಪು: ಡಿ.ಕೆ.ಶಿವಕುಮಾರ್‌

MNG-hosp

Mangaluru: ವೆನ್ಲಾಕ್‌ ಆಸ್ಪತ್ರೆ 10 ಕೋಟಿ ರೂ. ವೆಚ್ಚದಲ್ಲಿ ಆಧುನೀಕರಣ: ಸಚಿವ ದಿನೇಶ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Astrology 2024: 2024ರಲ್ಲಿ ಮಿಶ್ರ ಫ‌ಲಗಳೇ ಅಧಿಕ-ರಾಜ್ಯದಲ್ಲೇನಾಗುತ್ತದೆ?

Astrology 2024: 2024ರಲ್ಲಿ ಮಿಶ್ರ ಫ‌ಲಗಳೇ ಅಧಿಕ-ರಾಜ್ಯದಲ್ಲೇನಾಗುತ್ತದೆ?

ಜ್ಯೋತಿಷ್ಯದಲ್ಲಿ ನವಗ್ರಹಕ್ಕಿಂತಲೂ ನಕ್ಷತ್ರಗಳಿಗೆ ಹೆಚ್ಚು ಪ್ರಾಮುಖ್ಯತೆ ಯಾಕೆ ಕೊಡಲಾಗಿದೆ?

ಜ್ಯೋತಿಷ್ಯದಲ್ಲಿ ನವಗ್ರಹಕ್ಕಿಂತಲೂ ನಕ್ಷತ್ರಗಳಿಗೆ ಹೆಚ್ಚು ಪ್ರಾಮುಖ್ಯತೆ ಯಾಕೆ ಕೊಡಲಾಗಿದೆ?

ಶುಭ ವಿಚಾರ ತಿಳಿಯುವ ಗೋಚಾರ ಫಲ ಎಂದರೇನು, ಗುರುದೆಸೆ ಯಾವಾಗ ಆರಂಭವಾಗಲಿದೆ…

ಶುಭ ವಿಚಾರ ತಿಳಿಯುವ ಗೋಚಾರ ಫಲ ಎಂದರೇನು, ಗುರುಬಲ ಯಾವಾಗ ಆರಂಭವಾಗಲಿದೆ…

jjhgfd

ಮಾರಕಾಧಿಪತಿ, ಭಾದಕಾಧಿಪತಿ: ಅಕಾಲಿಕ ಮರಣದ ಬಗ್ಗೆ “ಅಷ್ಠಮ ಸ್ಥಾನ” ಮುನ್ಸೂಚನೆ ಕೊಡುತ್ತದೆಯೇ?

ಗಜಕೇಸರಿ ಯೋಗ… ಈ ಯೋಗ ಹೇಗೆ ಉಂಟಾಗುತ್ತದೆ, ಇದರ ಮಹತ್ವವೇನು?

ಗಜಕೇಸರಿ ಯೋಗ… ಈ ಯೋಗ ಹೇಗೆ ಉಂಟಾಗುತ್ತದೆ, ಇದರ ಮಹತ್ವವೇನು?

MUST WATCH

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

ಹೊಸ ಸೇರ್ಪಡೆ

Sabarimala Virtual Queue Booking Limit Increase

Kerala govt: ಶಬರಿಮಲೆ ವರ್ಚುವಲ್‌ ಕ್ಯೂ ಬುಕ್ಕಿಂಗ್‌ ಮಿತಿ ಹೆಚ್ಚಳ

UP-Jhansi

Uttar Pradesh: ಝಾನ್ಸಿ ಅಗ್ನಿ ಅವಘಡ: ಗುರುತೇ ಸಿಗದಂತೆ ಕರಕಲಾದ ಹಸುಳೆಗಳು

PM-Nigirya

G20 Leaders Summit: ಪ್ರಧಾನಿ ಮೋದಿ ನೈಜೀರಿಯಾ, ಬ್ರೆಜಿಲ್‌, ಗಯಾನಾ ಪ್ರವಾಸ ಶುರು

Chattisgadh-Petrol

Chhattisgarh: ನೀರಿನ ಬಾವೀಲಿ ಪೆಟ್ರೋಲ್‌: ಸಂಗ್ರಹಕ್ಕೆ ಮುಗಿಬಿದ್ದ ಜನ

Manipu: ಸಿಎಂ ಬಿರೇನ್‌ ಸಿಂಗ್‌ ಮನೆಗೆ ನುಗ್ಗಲು ಯತ್ನಿಸಿದ ಗುಂಪು; ಹೆಚ್ಚಿದ ಹಿಂಸಾಚಾರ

Manipur: ಸಿಎಂ ಬಿರೇನ್‌ ಸಿಂಗ್‌ ಮನೆಗೆ ನುಗ್ಗಲು ಯತ್ನಿಸಿದ ಗುಂಪು; ಹೆಚ್ಚಿದ ಹಿಂಸಾಚಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.