ನಿಮ್ಮ ಜ್ಞಾನ, ಮೇಧಾಶಕ್ತಿಯಲ್ಲಿ ಬುಧನ ಪಾತ್ರವೂ ಇದೆ…
Team Udayavani, Jun 25, 2016, 9:50 AM IST
ಇತ್ತೀಚೆಗೆ ನಮ್ಮ ದೇಶದ ಅತಿ ಮುಖ್ಯವಾದ ಪಕ್ಷದ ಮಾಜಿ ಅಧ್ಯಕ್ಷರೊಬ್ಬರ ಹೇಳಿಕೆಯೊಂದು ದೇಶದಾದ್ಯಂತ ದೊಡ್ಡ ಬಿರುಗಾಳೀಯನ್ನೇ ಎಬ್ಬಿಸಿತ್ತು. ಬೌದ್ಧಿಕ ಹಂತದ ವಿಚಾರದಲ್ಲಿ ಅವರು ದುಷ್ಟ ದಾವೂದ್ ಇಬ್ರಾಹಿಂ ನನ್ನ ಹಾಗೂ ಸಾತ್ವಿಕರಾದ ವಿವೇಕಾನಂದರನ್ನು ಒಂದೇ ತಕ್ಕಡಿಯಲ್ಲಿ ಇರಿಸಿ ತೂಗಿದ್ದರು. ಅವರು ಹೇಳಿದ್ದು ಯಾವ ಅರ್ಥದಲ್ಲಿ ಎಂಬುದನ್ನು ಕೊಂಚ ವಿಸ್ತರಿಸಿ ಹೇಳಬೇಕಿತ್ತು. ನಿಜ ಹೇಳಬೇಕೆಂದರೆ ರಾಕ್ಷಸನ ಮೇಧಾವಿತನಕ್ಕೂ ಸಾತ್ವಿಕನ ಮೇಧಾವಿ ತನಕ್ಕೂ ಬುಧನೇ ಜಾತಕ ಕುಂಡಲಿಯಲ್ಲಿ ಕಾರಣನಾಗಿರುತ್ತಾನೆ. ಆದರೆ ಬುಧನ ಪಾತ್ರ ದುಷ್ಟರ ಶಕ್ತಿಯಿಂದ ಫಲವತ್ತಾಗಿ
ವಿಸ್ತರಿಸಿಕೊಂಡಾಗ ಬುಧನೇ ದುಷ್ಟಬುದ್ಧಿಯನ್ನು ಚಾತುರ್ಯದಲ್ಲಿ ವಿಶೇಷವಾದ ಕಲಾತ್ಮಕತೆ ಬೆರೆಸಿ ಒದಗಿಸಿ ಕೊಡುತ್ತಾನೆ. ಬದಲಿಗೆ ಬುಧನ ಮೇಲೆ ಶುಭ ಗ್ರಹಗಳಾದ ಶುಕ್ರ, ಚಂದ್ರ, ಗುರು ಗ್ರಹಗಳು ಉತ್ತೇಜಿಸಿದಲ್ಲಿ ಸಕರಾತ್ಮಕವಾದ ರೀತಿಯಲ್ಲಿ ಬುಧ ಅತ್ಯಂತ ಸಾಧುತನದೊಂದಿಗೆ ಅದ್ವೀತೀಯವಾದ ಜಾnನ ಹಾಗೂ ಮೇಧಾ ಶಕ್ತಿಗಳಿಗೆ ಕಾರಣನಾಗುತ್ತಾನೆ.
ಮೇಧಾವಿತನಕ್ಕೆ ಬುಧನ ಸಹಾಯ ಬೆಂಬಲಗಳು
ಅಸಲೀ ಬುಧಗ್ರಹ ದುಷ್ಟ ಗ್ರಹಗಳಿಂದ ಕೆಡದೇ ಹೋಗಿದ್ದರೆ ಯಾವಾಗಲೂ ವ್ಯಕ್ತಿಯೊಬ್ಬರ ಮನಸ್ಸು ಹಾಗೂ ಚಿಂತನೆಗಳಿಗೆ ಸದ್ವಿವೇಕವನ್ನು ಧಾರೆ ಎರೆಯುತ್ತಾನೆ. ಸತ್ಕರ್ಮಗಳನ್ನು ಆಚರಿಸುವ ಹುರುಪು ಉತ್ಸಾಹಗಳನ್ನು ನೀಡುತ್ತಾನೆ. ತನ್ನಂತೆಯೇ ಇತರರು ಎಂಬ ಅರಿವನ್ನು ಒದಗಿಸಿ ಉತ್ತಮನನ್ನಾಗಿಸುತ್ತಾನೆ. ಉತ್ತಮ ಕೌಟುಂಬಿಕ ಹಿನ್ನೆಲೆ ಇದ್ದರೂ ದುಷ್ಟತನ ಬಂದುಬಿಡುತ್ತದೆ. ಸಂಸ್ಕಾರದ ಹಿಂಸ್ರ ಪಶುವಿನಂತೆ ಒಬ್ಬ ವರ್ತಿಸಬಹುದು. ಉತ್ತಮ ಹಿನ್ನೆಲೆ ಇರದಿದ್ದರೂ ಪ್ರಹ್ಲಾದನಂಥವರು ಹೊರಹೊಮ್ಮಬಹುದು. ವ್ಯಕ್ತಿಯ ಸಾಧುತ್ವ ಸಾತ್ವಿಕತೆಗಳಲ್ಲಿ ಚಂದ್ರನ ಪಾತ್ರವೂ ಮಹತ್ವದ್ದಾಗಿಯೇ ಇರುತ್ತದೆ. ಹಿಟ್ಲರನ ಜಾತಕದಲ್ಲಿ ಕೇಮದ್ರುಮ ಯೋಗದ ಚಂದ್ರ ಕೇತುಗ್ರಸ್ತನಾಗಿರದೇ ಇದ್ದರೆ ಹಿಟ್ಲರ್ ಲಕ್ಷಾಂತರ ಮಂದಿಯ ರಕ್ತದೋಕುಳಿ ಹರಿಸಲು ಕಾರಣನಾಗುತ್ತಿರಲಿಲ್ಲ. ಕುಜಶುಕ್ರರ ವಿಷಯಾಸಕ್ತಿಗೆ ಕಾರಣನಾಗುವ ಸಯೋಜನೆ ಬುಧರ ಜೋಡಿಗೆ ಒದಗಿರದೇ ಇದ್ದಲ್ಲಿ ಸಾತ್ವಿಕನೇ ಆಗಿರುತ್ತಿದ್ದ. ಅತ್ಯಂತ ಚತುರ ಬುದ್ಧಿ
ಶ್ರೀಮಂತಿಕೆ ಹಿಟ್ಲರಿನಿಗಿತ್ತು. ಆದರೆ ಭಾಗ್ಯದಲ್ಲಿ ಉತ್ತಮನಲ್ಲದ ರಾಹು ಕರ್ಮಸ್ಥಾನದಲ್ಲಿ ಶನೈಶ್ಚರನ ಅತಂತ್ರ ಸ್ಥಿತಿ (ಕರ್ಕಾಟಕದಲ್ಲಿ ಶನೈಶ್ಚರನ ಉಪಸ್ಥಿತಿ ವ್ಯಕ್ತಿಯೊಬ್ಬನ ಜಾತಕದಲ್ಲಿ ಯುಕ್ತವಾಗಿ ಸಮತೋಲನಗೊಳ್ಳದೇ ಹೋದರೆ ಮಾಡುವ ಕೆಲಸದಲ್ಲಿ ಉದ್ರಿಕ್ತ ಸ್ಥಿತಿ ಹತಾಶೆ ಗೊಳ್ಳುವುದು ನಡೆಯುತ್ತದೆ). ಚರಿತ್ರೆಯಲ್ಲಿ ಹಿಟ್ಲರನನ್ನು ಖಳನಾಯಕನನ್ನಾಗಿಸಿತು. ಉತ್ತಮ ಬುಧನಿದ್ದರೂ ಮಾರಕನಾದ ಸೂರ್ಯನಿಂದ ಹೀನ ಸ್ಥಿತಿ, ದುಷ್ಟಬುದ್ಧಿ ಪಡೆದ, ಜಗತ್ತನ್ನೇ ಸ್ಫೋಟಕ ಮದ್ದುಗಳ ಮೇಲೆ ನಿಲ್ಲಿಸಿದ.
ಇಂಥ ಅನೇಕ ಉದಾಹರಣೆಗಳನ್ನು ಕೊಡಬಹುದು. ಸರ್ ಮೋಕ್ಷಗುಂಡಂ ವಿಶ್ವೇಶ್ವರಯ್ಯನವರ ಜನ್ಮಕುಂಡಲಿಯಲ್ಲಿ ಸೂರ್ಯನೇ ಸಾತ್ವಿಕ ರಸಸಿದ್ಧಿಯ ಮೇಧಾಶಕ್ತಿಯನ್ನು
ಭಾಗ್ಯಾಧಿಪತಿಯಾಗಿ ಉತ್ಛನಾದ ಪ್ರಬಲ ಬುಧನಿಗೆ ಕರ್ಮಸ್ಥಾನದಲ್ಲಿ ನೀಡಿದ. ಧರ್ಮಕರ್ಮಾಧಿಪತಿಯೋಗದ ಸಮತೋಲನಯುಕ್ತ ಪ್ರಭಾ ಶಕ್ತಿ ವಿಶ್ವೇಶ್ವರಯ್ಯನವರನ್ನು ನಾಡನ್ನೇ ಬೆಳಗಿಸಿದ ಅದ್ಭುತ ಚೈತನ್ಯವನ್ನಾಗಿ ರೂಪಿಸಿತು. ಭಾರತ ರತ್ನದಂಥ ಅತ್ಯುತ್ತಮ ಶ್ರೇಷ್ಠ ಪುರಸ್ಕಾರ ಸಹಾ ಸಿಕ್ಕಿತು.
ಬುಧಗ್ರಹದ ಕೆಲಸ ಕಾರ್ಯಗಳು
ಲೈಬ್ರರಿಗಳಲ್ಲಿ ಜಾnನ ಸಂಪಾದನೆಗೆ ಬುಧ ಕಾರಣನಾಗುತ್ತಾನೆ. ಅದ್ವಿತೀಯ ಬರಹಗಾರರನ್ನಾಗಿ ರೂಪಿಸಿ ಪ್ರಸಿದ್ಧಿ ತರಬಲ್ಲ. ಪ್ರಕಾಶನ ಸಂಸ್ಥೆ ಪುಸ್ತಕ ಸಂಪಾದನೆಗಳಲ್ಲಿ ಚೈತನ್ಯ ಒದಗಿಸಬಲ್ಲ. ಮುದ್ರಣ ಹಾಗೂ ಸ್ಟೇಷನರಿ ಸರಕುಗಳ ಕೆಲಸಕಾರ್ಯಗಳಲ್ಲಿ ಯಶಸ್ಸು ನಿರ್ಮಿಸಬಲ್ಲ. ಉತ್ತಮ ಶಿಕ್ಷಕರನ್ನಾಗಿಸಬಲ್ಲ. ಐಎಎಸ್ ಚಾರ್ಟರ್ಡ್ ಅಕೌಂಟೆಂಟ್ ಅಂಥ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಮೇಲುಗೈ ಸಾಧಿಸಲು ನೆರವಾಗಬಲ್ಲ. ಕಾಗದ ಪತ್ರ ತಜ್ಞರು ಯೂನಿವರ್ಸಿಟಿ ಅಧ್ಯಾಪಕರು ಪಿ.ಎಚ್.ಡಿ ಅಥವಾ ಇನ್ನೇನೇ ಸೂಕ್ಷ್ಮ ಮತ್ತು ಮೇರು ಶ್ರೇಣಿಯ ಅಧ್ಯಯನಗಳಿಗೆ ಬೇಕಾದ ಮೇಧಾವಿತನ ಬುಧನ ಕೊಡುಗೆಯಿಂದಲೇ ಪಡೆಯಬಹುದು. ಉತ್ತಮವಾದ ರಾಜತಾಂತ್ರಿಕರು ನಿಜ ಅರ್ಥದ ಸಚಿವರು, ಸೆಕ್ರೆಟರಿಗಳು ಕಾರ್ಯಕಾರಿ ಮೇಲ್ವರ್ಗದ ಅಧಿಕಾರಿಗಳು, ಪತ್ರಿಕೆ ಸಂಪಾದಕರು, ವಿಮರ್ಶಕ ವಿದ್ವನ್ಮಣಿಗಳು, ಚರ್ಚಾಪಟುಗಳು, ರಾಜಕೀಯ ಮುತ್ಸದ್ಧಿಗಳು, ಲೋಕನಾಯಕರು ಪ್ರಚಂಡ ಉದ್ಯಮಿಗಳು, ಇಂಜಿನಿಯರ್‌ಗಳು, ರೇಡಿಯೋ ಟೀವಿಯಂಥ ಮಾದ್ಯಮಗಳಲ್ಲಿ ಜನರನ್ನು ಆಸಕ್ತಿಯಿಂದ ಸೆಳೆಯಬಲ್ಲ ಸಮರ್ಥರು ಇತ್ಯಾದಿ ಪ್ರತಿಭಾನ್ವಿತರಿಗೆ ಬುಧ ತಳಹದಿಯಾಗುತ್ತಾನೆ. ಅನೇಕ ಭಾಷೆಗಳಲ್ಲಿ ಹಿಡಿತ ಅಂತಾರಾಷ್ಟ್ರೀಯ ಸಂಧಾನಗಳ ಕಾರ್ಯ ಯೋಜನೆಗಳ ಮಹಾನ್ ತಾಂತ್ರಿಕರು ಸಂವಹನಾ ಚತುರರೂ ಲೌಕಿಕ ವಿಚಾರಗಳಲ್ಲಿ ನಿಷ್ಣಾತ ವ್ಯಾಖ್ಯಾನಕಾರರು ವಿದ್ಯಾರ್ಥಿ ವೃಂದವನ್ನು ಶಿಷ್ಟ ಚಾಕಚಕ್ಯತೆಯಿಂದ ಸಂವೇದಿಸುವ ಕುಶಲ ಬೋಧಕರು ಮುಂತಾದವರೆಲ್ಲಾ ಬುಧಗ್ರಹದ ಆಶೀರ್ವಾದ ಬೆಂಬಲಗಳ ಸಾಕಾರದಲ್ಲಿ ವಿಕಸನ ಗೊಂಡಿರುತ್ತಾರೆ. ಉತ್ತಮವಾದ ಫರ್ನಿಚರ್ಸ್ ಡಿಸೈನರ್ಸ್, ಒಳಾಂಗಣ ಹೊರಾಂಗಣ ಶೋಭಾದಾಯಕ ಚಿತ್ರಕಾರರು ಕೂಡಾ ಬುಧಗ್ರಹದ ಮೂಲಕ ದೊರೆತ ಕೌಶಲ್ಯದಿಂದಾಗಿಯೇ ಪಳಗಿದವರಾಗುತ್ತಾರೆ.
ದುರ್ದೈವದ ಬಾಲಗ್ರಹ ದೋಷ, ಬುದ್ಧಿ ಮಂಕುತನಗಳಲ್ಲಿ ಬುಧನ ಪಾತ್ರ
ಸೂರ್ಯನಿಂದ ಮಂಕುತನ, ನಿಸ್ತೇಜ ಹೊಂದಿದ ಬುಧ ಶೂಭತನ ಕಳೆದುಕೊಂಡ ಕ್ಷೀಣ ಚಂದ್ರರು ಬುಧನನ್ನು ಮೆಟ್ಟಿನಿಲ್ಲಬಲ್ಲರು. ಪರಿಣಾಮದಿಂದಾಗಿ ಮೌಡ್ಯ ದಡ್ಡತನ ಬಾಲಗ್ರಹ ಪೀಡೆಗಳು ಆತ್ಮನಾಶಕ್ಕೆ ಕಾರಣವಾಗುವ ಬೋಳೇತನಗಳೆಲ್ಲ ಕಾಣಿಸಿಕೊಳ್ಳುತ್ತದೆ. ಮಾತುಗಳು ಮಕ್ಕಳಲ್ಲಿ ಬೇಗ ಬೇಗ ಬರಲು ತೊಂದರೆ ಆದೀತು. ತೊದಲುವುದು, ಹೈಪರ್ ಆಕ್ಟಿವ್, ರಚ್ಚೆ ಹಿಡಿಯುವ ಪ್ರವೃತ್ತಿ ಇತ್ಯಾದಿಗಳು ಮಕ್ಕಳಲ್ಲಿ ತಲೆದೋರಬಹುದು. ರಾಹು ಕೇತು ಹಾಗೂ ಮಾಂದಿ ದೋಷದಿಂದ ಬುಧ ಪೀಡೆ ಚಂದ್ರಪೀಡೆಗಳು ಬೇರೆ ಬೇರೆ ಮನೋವಿಕಾರಗಳಿಗೆ ದಾರಿ ಮಾಡಿಕೊಡಬಲ್ಲವು. ಬುಧನ ಹೊಂದಾಣಿಕೆ ಸೂರ್ಯನ ವಿಚಾರದಲ್ಲಿ ಹೀಗೆಲ್ಲ ವೈಪರೀತ್ಯಗಳನ್ನು ಹೊಂದಿದೆ ಎಂಬುದು ಚರ್ಮವ್ಯಾಧಿಗೂ ತಳ್ಳಲು ಸಾಧ್ಯ. ಅಲರ್ಜಿಯಿಂದ ಬರುವ ಇಸುಬು ಸೊರಿಯಾಸಿಸ್ ತುರಿಕೆ ಇತ್ಯಾದಿಗಳನ್ನು ತರಬಲ್ಲದು. ಬುಧನು ಜಲರಾಶಿಯಲ್ಲಿ ನೀಚನಾಗಿ ಸ್ಥಿತನಾದಾಗ ದುರ್ಬಲ ಅಸಂಗತ ದೋಷದಲ್ಲಿದ್ದಾಗ ಗಂಟಲು ಶ್ವಾಸಕೋಶ ಅಸ್ತಮಾದಂಥ ಕಾಯಿಲೆಗಳಿಗೆ ದಾರಿ ಆಗಬಲ್ಲದು. ಆರನೆಯ ಮನೆಯಲ್ಲಿ ಬುಧರಿದ್ದಾಗ ಶನಿ ದೃಷ್ಟಿ ಬಿದ್ದಿದ್ದರೆ ಆರ್ಥಿಕ ದಿವಾಳಿತನ, ಅಪಘಾತ ಸಂಭವಿಸಬಲ್ಲದು.
ಏನೇ ಇರಲಿ ಜಾತಕದಲ್ಲಿ ತೊಂದರೆಗಳನ್ನು ಫಲಗೊಳಿಸುವ ಇತರ ಜೋಡಣೆಗಳು ಇರಬಾರದೆಂದೇನಿಲ್ಲ. ಏನೇ ಇದ್ದರೂ ಬುಧನ ಶಕ್ತಿ ಮತ್ತು ದೌರ್ಬಲ್ಯಗಳು ಮನುಷ್ಯನ ಪ್ರಪಂಚದಲ್ಲಿ ಅನೇಕಾನೇಕ ಬದಲಾವಣೆಗಳನ್ನು ತರಬಲ್ಲವು. ಮನಷ್ಯುನ ಮೆದುಳು ಪ್ರಾಣಿಗಳಲ್ಲೇ ಅತ್ಯಂತ ಗರಿಷ್ಠ ಮಟ್ಟದಲ್ಲಿದೆ ಎಂಬುದನ್ನು ಗಮನಿಸಬೇಕು.
ಅನಂತ ಶಾಸ್ತ್ರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Astrology 2024: 2024ರಲ್ಲಿ ಮಿಶ್ರ ಫಲಗಳೇ ಅಧಿಕ-ರಾಜ್ಯದಲ್ಲೇನಾಗುತ್ತದೆ?
ಜ್ಯೋತಿಷ್ಯದಲ್ಲಿ ನವಗ್ರಹಕ್ಕಿಂತಲೂ ನಕ್ಷತ್ರಗಳಿಗೆ ಹೆಚ್ಚು ಪ್ರಾಮುಖ್ಯತೆ ಯಾಕೆ ಕೊಡಲಾಗಿದೆ?
ಶುಭ ವಿಚಾರ ತಿಳಿಯುವ ಗೋಚಾರ ಫಲ ಎಂದರೇನು, ಗುರುಬಲ ಯಾವಾಗ ಆರಂಭವಾಗಲಿದೆ…
ಮಾರಕಾಧಿಪತಿ, ಭಾದಕಾಧಿಪತಿ: ಅಕಾಲಿಕ ಮರಣದ ಬಗ್ಗೆ “ಅಷ್ಠಮ ಸ್ಥಾನ” ಮುನ್ಸೂಚನೆ ಕೊಡುತ್ತದೆಯೇ?
ಗಜಕೇಸರಿ ಯೋಗ… ಈ ಯೋಗ ಹೇಗೆ ಉಂಟಾಗುತ್ತದೆ, ಇದರ ಮಹತ್ವವೇನು?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.