![Dubai Garden Glow: ಅದ್ಭುತ ಮ್ಯಾಜಿಕ್ ಪಾರ್ಕ್ “ಗ್ಲೋ ಗಾರ್ಡನ್ ದುಬಾೖ’](https://www.udayavani.com/wp-content/uploads/2025/02/Dubai1-415x234.jpg)
![Dubai Garden Glow: ಅದ್ಭುತ ಮ್ಯಾಜಿಕ್ ಪಾರ್ಕ್ “ಗ್ಲೋ ಗಾರ್ಡನ್ ದುಬಾೖ’](https://www.udayavani.com/wp-content/uploads/2025/02/Dubai1-415x234.jpg)
Team Udayavani, Jan 12, 2024, 10:39 AM IST
ಗುಜರಾತ್: ಅಯೋಧ್ಯೆಯಲ್ಲಿ ಜನವರಿ 22ರಂದು ನಡೆಯಲಿರುವ ರಾಮಮಂದಿರ ಉದ್ಘಾಟನೆ ಕುರಿತು ದೇಶಾದ್ಯಂತ ರಾಮಭಕ್ತರಲ್ಲಿ ಸಂಭ್ರಮ ಮನೆ ಮಾಡಿದೆ. ಈ ನಡುವೆ ದೇಶದ ಮೂಲೆ ಮೂಲೆಯಿಂದ ಭಕ್ತರು ದೇವಸ್ಥಾನಕ್ಕೆ ವಿಶಿಷ್ಟ ರೀತಿಯಲ್ಲಿ ವಸ್ತುಗಳನ್ನು ಸೇವೆಯ ರೂಪದಲ್ಲಿ ನೀಡುತ್ತಿದ್ದಾರೆ ಅದೇ ರೀತಿ ಗುಜರಾತ್ ನಿಂದಲೂ ಓರ್ವ ಭಕ್ತರು ದೇವಸ್ಥಾನಕ್ಕೆ ಭಾರಿ ಗಾತ್ರದ ನಗಾರಿಯನ್ನು ಕಾಣಿಕೆಯಾಗಿ ನೀಡಿದ್ದಾರೆ.
ಇದರ ತೂಕವೇ ಬರೋಬ್ಬರಿ ಐನೂರು ಕೆಜಿ ಇದ್ದು ವಿಶೇಷ ಮೆರವಣಿಗೆ ಮೂಲಕ ಗುರುವಾರ ಅಯೋಧ್ಯೆಯನ್ನು ತಲುಪಿದೆ.
ಚಿನ್ನ ಮತ್ತು ಬೆಳ್ಳಿ ಲೇಪಿತ:
ಗುಜರಾತ್‌ನ ಅಹಮದಾಬಾದ್‌ನಿಂದ ಈ ನಗಾರಿಯನ್ನು ಮೆರವಣಿಗೆ ಮೂಲಕ ಅಯೋಧ್ಯೆಗೆ ತರಲಾಗಿದೆ. ಸುಮಾರು ಐನೂರು ಕೆಜಿ ತೂಕ ಇರುವ ನಗಾರಿಯನ್ನು ಚಿನ್ನ ಮತ್ತು ಬೆಳ್ಳಿಯಿಂದ ಲೇಪಿಸಲಾಗಿದೆ. ರಚನೆಯಲ್ಲಿ ಕಬ್ಬಿಣ ಮತ್ತು ತಾಮ್ರದ ಫಲಕಗಳನ್ನು ಸಹ ಬಳಸಲಾಗಿದೆ. ಈ ನಗಾರಿಯನ್ನು ದಬ್ಗರ್ ಸಮುದಾಯದ ಜನರೇ ತಯಾರಿಸಿದ್ದಾರೆ. ಇದರ ಸದ್ದು ಕೆಲ ಕಿಲೋಮೀಟರ್ ದೂರದವರೆಗೆ ಕೇಳಲಿದೆಯಂತೆ. ಹಿಂದೂ ಸಂಸ್ಕೃತಿಯ ಪ್ರತೀಕವಾದ ಈ ಬೃಹತ್ ನಗಾರಿಯನ್ನು ರಾಮಮಂದಿರದಲ್ಲಿ ಸ್ಥಾಪಿಸಲು ಕರ್ಣಾವತಿ ಮಹಾನಗರದ ದರ್ಯಾಪುರದಲ್ಲಿ ನಿರ್ಮಿಸಲಾಗಿದೆ. ಗುಜರಾತ್ ವಿಶ್ವ ಹಿಂದೂ ಪರಿಷತ್ತಿನ ಪ್ರದೇಶ ಸಚಿವ ಅಶೋಕ್ ರಾವಲ್ ಅವರು ನಗಾರಿಯನ್ನು ಸ್ವೀಕರಿಸಲು ಶಿಫಾರಸು ಮಾಡಿ ಪತ್ರವನ್ನು ಕಳುಹಿಸಿದ್ದಾರೆ. ಅದರಂತೆ ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ಚಂಪತ್ ರೈ ಅವರು ನಗಾರಿಯನ್ನು ಸ್ವೀಕರಿಸಿ ರಾಮಮಂದಿರದ ಸೂಕ್ತವಾದ ಸ್ಥಳದಲ್ಲಿ ಇರಿಸಲಾಗುವುದು ಎಂದು ಹೇಳಿದ್ದಾರೆ.
#WATCH | Uttar Pradesh | A ‘nagada’, decorated with Gold foil, brought to Ayodhya ahead of the ‘pranpratishtha’ of the Ram Temple.
Shri Ram Janmabhoomi Teerth Kshetra General Secretary Champat Rai says, “We will see where it can be installed on the temple premises.” pic.twitter.com/2dGopz1hck
— ANI (@ANI) January 11, 2024
Railway; ಮಹಾಕುಂಭಕ್ಕೆ ಟಿಕೆಟ್ ಇಲ್ಲದೆ ಪ್ರಯಾಣಿಸಲು ಮೋದಿ ಜಿ ಹೇಳಿದ್ದಾರೆ ಎಂದ ಮಹಿಳೆಯರು
Website blocked: ಮೋದಿ ವ್ಯಂಗ್ಯಚಿತ್ರ ಪ್ರಕಟಿಸಿದ್ದಕ್ಕೆ ನಿರ್ಬಂಧ: ವಿಕಟನ್ ಪತ್ರಿಕೆ
ಚೀನಾ ಭಾರತದ ಶತ್ರುವಲ್ಲ: ಕಾಂಗ್ರೆಸ್ ಮುಖಂಡ ಪಿತ್ರೋಡಾ ಹೇಳಿಕೆಗೆ ಬಿಜೆಪಿ ಆಕ್ರೋಶ
Earthquake: ಪ್ರಬಲ ಭೂಕಂಪ: ಬೆಳ್ಳಂಬೆಳಗ್ಗೆ ಬೆಚ್ಚಿ ಬಿದ್ದ ದೆಹಲಿ ಜನ.. 4.0ತೀವ್ರತೆ ದಾಖಲು
Delhi Stampede: ನನ್ನ ಪತ್ನಿ ತಾರಾ ಎಲ್ಲಿ?..ನಾಪತ್ತೆಯಾದ ಪತ್ನಿಗಾಗಿ ಪತಿಯ ಹುಡುಕಾಟ!
Anandapura:ಮನೆಗೆ ಆಕಸ್ಮಿಕ ಬೆಂಕಿ; ಅಪಾರ ನಷ್ಟ; ಶಾಸಕ ಗೋಪಾಲಕೃಷ್ಣ ಬೇಳೂರು ಸ್ಥಳಕ್ಕೆ ಭೇಟಿ
Dubai Garden Glow: ಅದ್ಭುತ ಮ್ಯಾಜಿಕ್ ಪಾರ್ಕ್ “ಗ್ಲೋ ಗಾರ್ಡನ್ ದುಬಾೖ’
ಎಲ್ಲೆಲ್ಲಿ ಆಡಿ ಬಂದೆ ಹೇಳಯ್ಯಾ ರಂಗ!: ಆಡೂ ಆಟ ಆಡು ….ನೀ ಆಡು ಆಡು ಆಡಿ ನೋಡು
Railway; ಮಹಾಕುಂಭಕ್ಕೆ ಟಿಕೆಟ್ ಇಲ್ಲದೆ ಪ್ರಯಾಣಿಸಲು ಮೋದಿ ಜಿ ಹೇಳಿದ್ದಾರೆ ಎಂದ ಮಹಿಳೆಯರು
Udupi: ಡಾ| ಟಿಎಂಎ ಪೈ ಆಸ್ಪತ್ರೆ; ಫೆ.20ರಂದು ಲಿಂಫೆಡೆಮಾ ತಪಾಸಣೆ ಶಿಬಿರ
You seem to have an Ad Blocker on.
To continue reading, please turn it off or whitelist Udayavani.