Ayodhya 11,000 ಅತಿಥಿಗಳಿಗೆ ನೀಡಲಾಗುತ್ತೆ 15 ಮೀ. ಉದ್ದದ ಮಂದಿರದ ಚಿತ್ರ
ಮಾರಿಷಸ್: ಜ.22ಕ್ಕೆ 2 ಗಂಟೆ "ರಜೆ'
Team Udayavani, Jan 14, 2024, 6:20 AM IST
ಮಧ್ಯಪ್ರದೇಶದ ಉಜ್ಜಯಿನಿಯಿಂದ ಲಖನೌ ಮಾರ್ಗವಾಗಿ ಅಯೋಧ್ಯೆಗೆ ಹೊರಟಿರುವ ರಾಮಭಕ್ತರ ಪಾದಯಾತ್ರೆ ಚಿತ್ರಣ.
ಅಯೋಧ್ಯೆ: ಜ.22ರಂದು ಅಯೋಧ್ಯೆಗೆ 11,000 ಮಂದಿ ಗಣ್ಯ ಅತಿಥಿಗಳು ಆಗಮಿಸಲಿದ್ದಾರೆ. ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಆಹ್ವಾನದ ಹಿನ್ನೆಲೆಯಲ್ಲಿ ಆಗಮಿಸುತ್ತಿರುವ ಅತಿಥಿಗಳಿಗೆ ವಿಶೇಷ ಕಾಣಿಕೆಗಳನ್ನು ನೀಡಲಾಗುತ್ತದೆ. ಮಂದಿರಕ್ಕೆ ಬುನಾದಿ ನಿರ್ಮಿಸುವ ಹೊತ್ತಿನಲ್ಲಿ ಅಗೆಯಲಾದ ಮಣ್ಣನ್ನು, ಚಿಕ್ಕ ಬಾಕ್ಸ್‌ನಲ್ಲಿ ಹಾಕಿಕೊಡ ಲಾಗುತ್ತದೆ, ದೇಸೀ ಹಸುವಿನ ತುಪ್ಪದಿಂದ ತಯಾರಿಸಿದ 100 ಗ್ರಾಂ ಲಡ್ಡುವನ್ನು ಪ್ರಸಾದದ ರೂಪದಲ್ಲಿ ನೀಡಲಾಗುತ್ತದೆ. 15 ಮೀಟರ್ ಉದ್ದದ ಶ್ರೀರಾಮ ಮಂದಿರದ ಚಿತ್ರವನ್ನು ನೀಡಲಾಗುತ್ತದೆ. ತುಳಸೀದಳ, ಸರಯೂ ನದಿಯ ತೀರ್ಥ, ಗೋರಖಪುರದ ಗೀತಾ ಪ್ರಸ್‌ನ ಪುಸ್ತಕಗಳನ್ನು ಕಾಣಿಕೆಯಾಗಿ ಅತಿಥಿಗಳಿಗೆ ನೀಡಲಾಗುತ್ತದೆ. ಎಲ್ಲವನ್ನೂ ಸೆಣಬಿನ ಚೀಲದಲ್ಲಿ ಪ್ಯಾಕ್ ಮಾಡಿ ಅತಿಥಿಗಳಿಗೆ ಹಸ್ತಾಂತರಿಸಲಾಗುತ್ತದೆ.
ಮಾರಿಷಸ್: ಜ.22ಕ್ಕೆ 2 ಗಂಟೆ ‘ರಜೆ’
ಶ್ರೀರಾಮಮಂದಿರ ಉದ್ಘಾಟನೆ ಕೇವಲ ಭಾರತದಲ್ಲಿ ಮಾತ್ರವಲ್ಲ, ವಿಶ್ವದ ವಿವಿಧ ರಾಷ್ಟ್ರಗಳಲ್ಲೂ ಭಾರೀ ಸಂಭ್ರಮ ಮೂಡಿಸಿದೆ. ಮಾರಿಷಸ್ ಸರಕಾರ ಜ.22ರಂದು 2 ಗಂಟೆಗಳ ಕಾಲ ಸರಕಾರಿ ಅಧಿಕಾರಿಗಳಿಗೆ ಬಿಡುವು ನೀಡಲು ಸಮ್ಮತಿಸಿದೆ. ಮಂದಿರ ಉದ್ಘಾಟನೆಯ ಹೊತ್ತಿನಲ್ಲಿ ತಮ್ಮ ದೇಶದ ಹಿಂದೂಗಳಿಗೆ, ಆ ಸಂದರ್ಭವನ್ನು ಸಂಭ್ರಮಿಸಲು, ಇದ್ದಲ್ಲಿಂದಲೇ ಪ್ರಾರ್ಥನೆ ಸಲ್ಲಿಸಲು ಪ್ರಧಾನಿ ಪ್ರವಿಂದ್ ಜಗನ್ನಾಥ್ ನೇತೃತ್ವದ ಸರಕಾರ ಅವಕಾಶ ಕೊಟ್ಟಿದೆ. ಆ ದೇಶದ ಸನಾತನ ಧರ್ಮ ದೇಗುಲಗಳ ಒಕ್ಕೂಟ, ಪ್ರಧಾನಿ ಪ್ರವಿಂದ್ ಜಗನ್ನಾಥ್‌ಗೆ ಪತ್ರ ಬಿಡುವು ನೀಡುವಂತೆ ಆಗ್ರಹಿಸಿತ್ತು.
ಜೈಶ್ರೀರಾಮ್ ಘೋಷಣೆ ಜತೆ ಬೈಕ್ ರ‍್ಯಾಲಿ
ಅಮೆರಿಕದ ಹ್ಯೂಸ್ಟನ್‌ನಲ್ಲಿ ರಾಮ ಮಂದಿರ ಲೋಕಾರ್ಪಣೆ ಸಂಭ್ರಮ ತುಂಬಿದೆ. ಆ ನಗರದ ವಿವಿಧೆಡೆ ಬೈಕ್ ರ‍್ಯಾಲಿ ನಡೆಯಿತು. ಹೊಸ ಮಂದಿರದ ಬೃಹತ್ ಕಟೌಟ್‌ಗಳನ್ನು ತೆರೆದ ವಾಹನದಲ್ಲಿ ಪ್ರದರ್ಶಿಸಿ ಮೆರವಣಿಗೆ ಮಾಡಲಾಯಿತು. ಕೇಸರಿ ಮತ್ತು ಅಮೆರಿಕದ ರಾಷ್ಟ್ರ ಧ್ವಜ ಪ್ರದರ್ಶಿಸಿ ಜೈ ಶ್ರೀರಾಮ್ ಘೋಷಣೆ ಹಾಕಿದರು.
ರಾಮನಿಗಾಗಿ ಎರಡು ಬಾರಿ ಹಿಮಾಲಯಕ್ಕೆ ಹಾರಿದ ಹನುಮ
ಹನುಮಂತ, ರಾಮನ ಮೇಲೆ ಎಷ್ಟು ಭಕ್ತಿಯನ್ನಿಟ್ಟದ್ದ ಎಂದು ಎಲ್ಲರಿಗೂ ಗೊತ್ತು. ಲಂಕಾದಲ್ಲಿ ಯುದ್ಧ ನಡೆಯುತ್ತಿರುವಾಗ, ಇಂದ್ರಜಿತ್ ಸರ್ಪಾಸ್ತ್ರ ಪ್ರಯೋಗಿಸುತ್ತಾನೆ. ಆಗಾಗ ಕಪಿಸೇನೆ ಮೂಛೆìಹೋದ ಪ್ರಸಂಗ ನಡೆಯುತ್ತದೆ. ಶ್ರೀರಾಮ-ಲಕ್ಷ್ಮಣರ ಜೀವಕ್ಕೇ ಆಪತ್ತು ಎದುರಾದಾಗ, ಎರಡು ಬಾರಿ ಹನುಮಂತ ಹಿಮಾಲಯಕ್ಕೆ ಹಾರಿ, ಸಂಜೀವಿನಿಯನ್ನು ತರುತ್ತಾನೆ. ಮೊದಲ ಬಾರಿಯಂತೂ, ಓಷಧ ಕರಣಿ-ವಿಶಲ್ಯ ಕರಣಿ ಎಂಬ ಸಸ್ಯಗಳು ಸಿಗದಾಗ ಸಂಜೀವಿನಿ ಪರ್ವತವನ್ನೇ ಹೊತ್ತುಕೊಂಡು ಹನುಮ ಮರಳಿ ಲಂಕೆಗೆ ನೆಗೆಯುತ್ತಾನೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.