Ayodhya Ram Mandir; ರಾಜ್ಯದೆಲ್ಲೆಡೆ ರಾಮನಾಮ ಸ್ಮರಣೆ
Team Udayavani, Jan 22, 2024, 6:50 AM IST
ಅಯೋಧ್ಯೆಯಲ್ಲಿ ಸೋಮವಾರ ರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆಗೊಳ್ಳಲಿದ್ದು, ರಾಜ್ಯದೆಲ್ಲೆಡೆ ಸಂಭ್ರಮ ಮನೆ ಮಾಡಿದೆ. ವಿವಿಧ ದೇವಾಲಯಗಳಲ್ಲಿ ಶ್ರೀರಾಮ ಮೂರ್ತಿ ಗೆ ಅಭಿಷೇಕ, ಹನುಮಾನ ಚಾಲೀಸಾ ಪಠಣ, ಬಾಲ ರಾಮನ ವೇಷಧಾರಿ ಮಕ್ಕಳಿಗೆ ಪುಷ್ಪಾರ್ಚನೆ ಸೇರಿ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.ಕೆಲವೆಡೆ ರಾಮಲೀಲಾ ಪ್ರದರ್ಶನ ಜತೆಗೆ ಅಯೋಧ್ಯೆ ಕರಸೇವೆಯಲ್ಲಿ ಭಾಗವಹಿಸಿದವರನ್ನು ಗೌರವಿಸಲಾಗುತ್ತಿದೆ.
ಬೆಳಗಾವಿ: ಹಳ್ಳಿ ಹಳ್ಳಿಯಲ್ಲಿ ಮೆರವಣಿಗೆ
ಬೆಳಗಾವಿ:ನಗರದ ಪ್ರಮುಖ ಬೀದಿಗಳಲ್ಲಿ ಭಗವಾ ಧ್ವಜ, ಹನುಮಾನ, ಶ್ರೀರಾಮನ ಚಿತ್ರ ಇರುವ ಕೇಸರಿ ಧ್ವಜಗಳನ್ನು ಹಚ್ಚಲಾಗಿದೆ. ಶ್ರೀರಾಮ ಮಂದಿರದ ಪ್ರತಿರೂಪದ ಮಂದಿರಗಳನ್ನು ನರ‍್ಮಿಸಲಾಗಿದೆ. ನಗರ ಸೇರಿ ಹಳ್ಳಿಯಲ್ಲಿ ಮೆರವಣಿಗೆ ನಡೆಯಲಿದೆ. ಶ್ರೀರಾಮ, ಲಕ್ಷ್ಮಣ, ಸೀತೆ, ಹನುಮನ ವೇಷಧಾರಿ ಮಕ್ಕಳು ಗಮನ ಸೆಳೆಯಲಿದ್ದಾರೆ.
ಗದಗ: ವಿಶೇಷ ಪೂಜೆ ಅನ್ನಸಂರ‍್ಪಣೆ
ಗದಗ: ಗದಗ ಬೆಟಗೇರಿ ಅವಳಿ ನಗರದ 200 ದೇವಸ್ಥಾನಗಳು ಸೇರಿ ಜಿಲ್ಲೆಯ 750ಕ್ಕೂ ಹೆಚ್ಚು ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಅನ್ನಸಂರ‍್ಪಣೆ ನಡೆಯಲಿದೆ. 5೦೦ಕ್ಕೂ ಹೆಚ್ಚು ದೇವಸ್ಥಾನಗಳಲ್ಲಿ ಅಭಿಷೇಕ, ರಾಮನಾಮ ಜಪ, ರಾಮತಾರಕ ಹೋಮ, ಪ್ರತ್ಯಂಗಿ ಹೋಮ, ಹನುಮಾನ್ ಚಾಲೀಸ್ ಪಠಣ, ಭಜನೆ ನಡೆಯಲಿದೆ.
ಕೊಪ್ಪಳ: ಅಂಜನಾದ್ರಿಯಲ್ಲಿ ಮೆಟ್ಟಿಲೋತ್ಸವ
ಕೊಪ್ಪಳ: ಅಂಜನಾದ್ರಿ ರ‍್ವತದಲ್ಲಿ ಮುಜರಾಯಿ ಇಲಾಖೆ ಯಿಂದ ಪವಮಾನ ಹೋಮ, ಮೆಟ್ಟಿಲೋತ್ಸವ, ತ್ರಿಕಾಲ ಪೂಜೆ, ದೀಪಾಲಂಕಾರ ಸೇರಿ ಧರ‍್ಮಿಕ ಪೂಜಾ ಕಾರ್ಯ, ಅನ್ನಸಂರ‍್ಪಣೆ ನೆರವೇರಲಿದೆ. ಕೊಪ್ಪಳದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಶತಕೋಟಿ ರಾಮ ತಾರಕ ನಾಮಜಪ ಮಹಾಯಜ್ಞ ಹಾಗೂ ಶ್ರೀರಾಮ ತಾರಕ ಮಹಾಯಾಗ ಕಾರ್ಯ ನಡೆಯಲಿದೆ.
ಹು.ಧಾರವಾಡ : ಚಾಲೀಸ್ ಪಠಣ
ಹುಬ್ಬಳ್ಳಿ: ದೇಶಪಾಂಡೆ ನಗರದ ಶ್ರೀಕೃಷ್ಣ ಕಲ್ಯಾಣ ಮಂಟಪದಲ್ಲಿ ಸೋಮವಾರ ನಡೆಯುವ ವಿಷ್ಣು ಸಹಸ್ರನಾಮ, ಹನುಮಾನ ಚಾಲೀಸ್ ಪಠಣ ಇನ್ನಿತರ ಕಾರ್ಯಕ್ರಮಗಳಲ್ಲಿ 1,೦೦೦ ಜನರು ಪಾಲ್ಗೊಳ್ಳಲಿದ್ದಾರೆ. ಅರಳುಮಲ್ಲಿಗೆ ಪರ‍್ಥಸಾರಥಿ ಉಪನ್ಯಾಸ ನೀಡಲಿದ್ದಾರೆ. 1೦ ಕಡೆಗಳಲ್ಲಿ ಅಯೋಧ್ಯೆಯ ನೇರ ಪ್ರಸಾದ ವ್ಯವಸ್ಥೆ ಮಾಡಲಾಗಿದೆ.
ವಿಜಯನಗರ: ಲಾಡು ವಿತರಣೆ
ಹೊಸಪೇಟೆ: ತಾಲೂಕಿನ ಐತಿಹಾಸಿಕ ಹಂಪಿ ಕೋದಂಡರಾಮ, ರಘುನಾಥ ಮಾಲ್ಯವಂತ ಹಾಗೂ ಯಂತ್ರೋದ್ಧಾರಕ ದೇವಾಲಯದಲ್ಲಿ ವಿಶೇಷ ಪೂಜೆಗಳು ನೆರವೇರಲಿವೆ. ಶ್ರೀ ಗುರು ಕೊಟ್ಟೂರೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ನೆರವೇರಲಿದ್ದು, ಭಕ್ತರಿಗೆ ಲಾಡು ವಿತರಣೆ ನಡೆಯಲಿದೆ.
ಉತ್ತರ ಕನ್ನಡದಲ್ಲಿ ಜನ ಸಂಭ್ರಮ
ಕಾರವಾರ: ಕಾರವಾರ ಸೇರಿದಂತೆ ಪ್ರಮುಖ 12 ತಾಲೂಕು ಕೇಂದ್ರಗಳಲ್ಲಿ ಶ್ರೀರಾಮನ ಭಾವಚಿತ್ರದ ಜೊತೆಗೆ ಕೇಸರಿ ಬಾವುಟ, ಬಂಟಿಂಗ್ಸ್ ರಸ್ತೆ ಬೀದಿಗಳಲ್ಲಿ ರಾರಾಜಿಸುತ್ತಿವೆ. ಅಂಕೋಲಾ, ದಾಂಡೇಲಿ, ಶಿರಸಿ, ಭಟ್ಕಳ ಸೇರಿ ವಿವಿಧ ನಗರ ಪಟ್ಟಣಗಳಲ್ಲಿ ಕೇಸರಿ ಬಂಟಿಂಗ್ಸ್ ರಾರಾಜಿಸುತ್ತಿವೆ.
ಹಾವೇರಿಯಲ್ಲಿ ಹಬ್ಬದ ವಾತಾವರಣ
ಹಾವೇರಿ: ಜಿಲ್ಲೆಯ ಶ್ರೀರಾಮ ದೇವಸ್ಥಾನಗಳಲ್ಲಿ ವಿವಿಧ ಪೂಜಾ ಕರ‍್ಯಕ್ರಮ ಹಮ್ಮಿಕೊಳ್ಳಲಾಗಿದೆ. ಬೆಳಗ್ಗೆ 8ಕ್ಕೆ ಶ್ರೀರಾಮನಿಗೆ ಅಭಿಷೇಕ, ಶ್ರೀರಾಮ ತಾರಕ ಯಾಗದ ಪುಣ್ಯಾಹ ವಾಚನ, ತ್ರಯೋದಶ ಸಹಸ್ರ ಹೋಮ, 12.35ಕ್ಕೆ ಪರ‍್ಣಾಹುತಿ ಮಹಾ ಪ್ರಸಾದ ಜರುಗಲಿದೆ. ” ಸೀತೆ ಪುಣೀತೆ’ ನಾಟಕ, ರಾಮಜನ್ಮದ ಗೀತೆಯೊಂದಿಗೆ ಕೋಲಾಟ, ಮಹಾಮಂಗಳಾರತಿ ಜರುಗಲಿವೆ.
ದಾವಣಗೆರೆ: ಎಲ್ಲೆಡೆ ಅನ್ನ ದಾಸೋಹ
ದಾವಣಗೆರೆ: ನಗರದೆಲ್ಲೆಡೆ ಅನ್ನಸಂರ‍್ಪಣೆ, ದೇವರಾಜ ಅರಸು ಬಡಾವಣೆಯಲ್ಲಿ ಮಹಿಳೆಯರಿಂದ ಒಂದು ಸಾವಿರ ಹೋಳಿಗೆ ಸಿದ್ಧಪಡಿಸಲಾಗುತ್ತಿದೆ. ಭಾವೈಕ್ಯತಾ ಪಂಜಿನ ಮೆರವಣಿಗೆ, ರಕ್ತದಾನ ಮುಂತಾದ ಸೇವಾ ಕಾರ್ಯಗಳಿಗೆ ಸಕಲ ಸಿದ್ಧತೆ ನಡೆದಿವೆ. ಜಿಲ್ಲೆಯ ಎಲ್ಲ ತಾಲೂಕುಗಳಲ್ಲೂ ಸಡಗರ, ಸಂಭ್ರಮವೇ ಮೇಳೈಸಿದೆ.
ಶಿವಮೊಗ್ಗ: ರಾಮನಾಮ ಜಪ ಶುರು
ಶಿವಮೊಗ್ಗ: ನಗರದ ಎಲ್ಲ ರಾಮನ ದೇವಸ್ಥಾನಗಳಲ್ಲಿ ಹೋಮ, ಹವನ,ರಾಮಭಜನೆ ಹಮ್ಮಿಕೊಳ್ಳಲಾಗಿದೆ. ಹಿಂದೂಪರ ಸಂಘಟನೆಗಳು ನಗರದ 2೦ ದೇವಸ್ಥಾನಗಳಲ್ಲಿ 8 ಸಾವಿರ ಜನಕ್ಕೆ ಪುಳಿಯೋಗರೆ, ಮೊಸರನ್ನ, ಲಾಡು ಪ್ರಸಾದ ವಿನಿಯೋಗಕ್ಕೆ ವ್ಯವಸ್ಥೆ ಮಾಡಿಕೊಂಡಿವೆ. ರಾಮಭಕ್ತರೊಬ್ಬರು 5 ಸಾವಿರ ಲಾಡು ವಿತರಣೆಗೆ ಮುಂದಾಗಿದ್ದಾರೆ.
ಚಿಕ್ಕಮಗಳೂರು: ಪುನರ್ ಪ್ರತಿಷ್ಠಾಪನೆ
ಚಿಕ್ಕಮಗಳೂರು: ಜಿಲ್ಲೆಯ 1250 ಕ್ಕೂ ಹೆಚ್ಚು ದೇವಸ್ಥಾನಗಳಲ್ಲಿ ವಿವಿಧ ಕರ‍್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಶೃಂಗೇರಿ ಶಾರದಾ ಮಠದಲ್ಲಿ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿದೆ. ವಿದ್ಯಾರಣ್ಯಪುರದಲ್ಲಿರುವ ಶ್ರೀರಾಮ ಮಂದಿರಕ್ಕೆ ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಅವರಿಂದ ಶ್ರೀರಾಮನ ಪುನರ್ ಪ್ರತಿಷ್ಠಾಪನೆ ನಡೆಯಲಿದೆ.
ಉಡುಪಿ: “ಅಯೋಧ್ಯೆ’ ಮನೆ ಹಸ್ತಾಂತರ
ಉಡುಪಿ: ಶ್ರೀ ಕೃಷ್ಣ ಮಠದಲ್ಲಿ ಹಾಲು ಪಾಯಸ ಹಾಗೂ ಸಂಜೆ ಐದು ರಥೋತ್ಸವ ಇರಲಿದೆ. ಎಲ್ಲ ಸಂಜೆ ದೇವಸ್ಥಾನಗಳಲ್ಲಿ ರಥೋತ್ಸವ, ಉತ್ಸವ ಹಾಗೂ ದೀಪೋತ್ಸವ ಇರಲಿದೆ. ಶಾಸಕ ಯಶಪಾಲ್ ಸುವರ್ಣ ಮನೆ ಇಲ್ಲದ ಒಂದು ಕುಟುಂಬಕ್ಕೆ ಅಯೋಧ್ಯೆ ಹೆಸರಿನ ಮನೆ ಹಸ್ತಾಂತರಿಸಲಿದ್ದಾರೆ.
ದಕ್ಷಿಣ ಕನ್ನಡದಲ್ಲಿ ರಾಮತಾರಕ ಯಜ್ಞ,
ಮಂಗಳೂರು: ದ.ಕ ಜಿಲ್ಲೆಯಾದ್ಯಂತ ಶ್ರೀರಾಮಮಂದಿರ ಉದ್ಘಾಟನೆಗೆ ಜನ ಸಂಭ್ರಮದಿಂದ ಸಜ್ಜಾಗಿದ್ದಾರೆ. ಕಟೀಲು, ಪೊಳಲಿ, ಬಪ್ಪನಾಡು, ಕದ್ರಿ ಸಹಿತ ಬಹುತೇಕ ಎಲ್ಲಾ ದೇವಸ್ಥಾನ, ಮಂದಿರ, ಭಜನಾ ಮಂದಿರಗಳಲ್ಲಿ ರಾಮತಾರಕ ಪಠಣ, ರಾಮತಾರಕ ಯಜ್ಞ, ಭಜನೆ ಬೆಳಗ್ಗಿನಿಂದಲೇ ನಡೆಯಲಿದೆ.
ಹಾಸನ: 14 ಕಡೆ ಎಲ್‌ಇಡಿ ಪರದೆ ವ್ಯವಸ್ಥೆ
ಹಾಸನ: ರಾಮ ಲಲ್ಲಾ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದ ನೇರ ವೀಕ್ಷಣೆಗೆ ನಗರದ ವಿವಿಧೆಡೆ 14 ಕಡೆ ಎಲ್‌ಇಡಿ ಪರದೆಗಳ ವ್ಯವಸ್ಥೆ ಮಾಡಿದ್ದು, ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆ, ಭಜನೆ ಮತ್ತು ಧಾರ್ಮಿಕ ಕಾರ್ಯಕ್ರಮಗಳ ಜೊತೆಗೆ ರಾಮ ಕಥೆಯ ತೊಗಲು ಬೊಂಬೆಯಾಟವೂ ನಿಗದಿಯಾಗಿವೆ. ನಗರದ ಹೊಳೆ ಮಲ್ಲೇಶ್ವರ ದೇವಸ್ಥಾನ, ಸುಭಾಷ್ ಚೌಕ, ಹಳೆ ನಗರಸಭೆ ಕಚೇರಿ, ಪಿಕ್ಚರ್ ಪ್ಯಾಲೇಸ್ ಸೇರಿದಂತೆ ಪ್ರಮುಖ ರಸ್ತೆಗಳು, ವೃತ್ತಗಳಲ್ಲಿ ಕೇಸರಿ ಬಂಟಿಂಗ್ಸ್ ರಾರಾಜಿಸುತ್ತಿವೆ.
ಮಂಡ್ಯ: ಆಂಜನೇಯ ವಿಗ್ರಹ ಲೋಕರ‍್ಪಣೆ
ಮಂಡ್ಯ: ಶ್ರೀರಾಮ ವಿಗ್ರಹ ಪ್ರತಿಷ್ಠಾಪನೆ ಕಾರ್ಯಕ್ರಮಗಳು ನಡೆಯಲಿವೆ. ಮಂಡ್ಯದ ನೆಹರು ನಗರದ 3ನೇ ಕ್ರಾಸ್‌ನಲ್ಲಿರುವ ಶ್ರೀರಾಮಮಂದಿರ 14 ವರ್ಷಗಳ ಇತಿಹಾಸ ಹೊಂದಿದೆ. ಜ.22 ರಂದು ರಾಮಮಂದಿರ ಮುಂಭಾಗ 26 ಅಡಿಯ ಅಭಯ ಹಸ್ತ ಆಂಜನೇಯಸ್ವಾಮಿ ವಿಗ್ರಹ ಲೋಕಾರ್ಪಣೆ ಮಾಡಲಾಗುತ್ತಿದೆ. ನಗರದ ಲೇಬರ್ ಕಾಲೋನಿಯಲ್ಲಿ ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಅವರೇ ಕೆತ್ತನೆ ಮಾಡಿರುವ ಶ್ರೀರಾಮ ಮೂರ್ತಿಯ ವಿಗ್ರಹ ಪ್ರತಿಷ್ಠಾಪನೆ ಹಾಗೂ ರಾಮಮಂದಿರ ಉದ್ಘಾಟನೆ ನಡೆಯಲಿದೆ.
ಬಾಗಲಕೋಟೆ ದೇಗುಲಗಳಲ್ಲಿ ಭಜನೆ
ಬಾಗಲಕೋಟೆ: ಮುಚಖಂಡಿ ಕ್ರಾಸ್‌ನ ಪಂಚಮುಖಿ ಆಂಜನೇಯ ದೇವಸ್ಥಾನ ಪಕ್ಕದಲ್ಲಿ ಹಾಗೂ ತುಳಸಿಗೇರಿ ಆಂಜನೇಯ ದೇವಾಲಯದಲ್ಲಿ ಬೃಹತ್ ಎಲ್‌ಇಡಿ ಅಳವಡಿಸಿದ್ದು, ನೇರ ವೀಕ್ಷಣೆಗೆ ಅವಕಾಶ ಮಾಡಲಾಗಿದೆ. ಚಿಕ್ಕಸಂಗಮದ ಸಂಗಮನಾಥ ದೇವಾಲಯ, ಬಾದಾಮಿ ಬನಶಂಕರಿ ದೇವಾಲಯ, ಕೂಡಲಸಂಗಮದ ಸಂಗಮ ನಾಥ ದೇವಾಲಯ, ಸೀತಿಮನಿಯ ಸೀತಾದೇವಿ ದೇವಸ್ಥಾನ, ಅಚನೂರಿನ ಆಂಜನೇಯ ದೇವಸ್ಥಾನ, ಮುಧೋಳ ರಾಮಮಂದಿರ ಸೇರಿದಂತೆ ಜಿಲ್ಲಾದ್ಯಂತ ಹಲವು ದೇವಸ್ಥಾನಗಳಲ್ಲಿ ಪೂಜೆ, ಹೋಮ, ರಾಮರಕ್ಷಾ ಸ್ತೋತ್ರ, ಪ್ರಸಾದ ವಿತರಣೆ ನಡೆಯಲಿದೆ.
ವಿಜಯಪುರದಲ್ಲಿ ದೀಪೋತ್ಸವ ವೈಭವ
ವಿಜಯಪುರ : ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ 2 ಸಾವಿರ ದೀಪೋತ್ಸವ ಹಮ್ಮಿಕೊಳ್ಳಲಾಗಿದೆ. ಅಯೋಧ್ಯೆ ಕಾರ್ಯ ಕ್ರಮದ ನೇರ ಪ್ರಸಾರ ವೀಕ್ಷಿಸುವಂತೆ ಬೃಹತ್ ಎಲ್ ಇಡಿ ಪರದೆ ಅಳವಡಿ ಸಲಾಗುತ್ತದೆ. ನಗರದ ಹೊರ ವಲಯದ ಹನುಮಗಿರಿಯಲ್ಲಿ ದೀಪೋತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಧರ್ಮದರ್ಶಿ ಸಂಜೀವ ಆಚಾರ್ಯ ತಿಳಿಸಿದ್ದಾರೆ. ಗಣೇಶ ನಗರದಲ್ಲಿರುವ ಸಾಕ್ಷಿ ಹನುಮಾನ ದೇಗುಲದಲ್ಲಿ ಲಕ್ಷ ಸ್ವಾಹಾಕಾರ ಸಹಿತ ಶ್ರೀರಾಮ ತಾರಕ ಯಜ್ಞ ಹಮ್ಮಿ ಕೊಳ್ಳಲಾಗಿದೆ.
ಮೈಸೂರು: ಲಕ್ಷ ಲಾಡು ವಿತರಣೆ
ಮೈಸೂರು: ಜಿಲ್ಲಾ ಬ್ರಾಹ್ಮಣ ಯುವ ವೇದಿಕೆ ವತಿಯಿಂದ ನಗರದ ಕೃಷ್ಣಮರ‍್ತಿಪುರಂನಲ್ಲಿ ಮಂತ್ರಾಕ್ಷತೆ ಹಾಗೂ ಆಮಂತ್ರಣ ಪತ್ರಿಕೆ, ಶ್ರೀರಾಮನ ಭಾವಚಿತ್ರವನ್ನು ಮನೆಮನೆಗೆ ತಲುಪಿಸುವ ಕಾರ್ಯ ನಡೆದಿದ್ದು, ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದಿಂದ ಸಿಎಫ್ಟಿ ಆರ್‌ಐ ಪಕ್ಕದ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಶ್ರೀರಾಮ ತಾರಕ ಹೋಮ, ಶ್ರೀರಾಮ ಜಪ ಹಾಗೂ ಶ್ರೀರಾಮ ಭಜನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಜತೆಗೆ ನಗರದ ಜೈನ್ ಸಮಾಜದಿಂದ 1 ಲಕ್ಷ ಲಾಡು ತಯಾರಿಸುತ್ತಿದ್ದು, ಜ.22ರಂದು ಸಾರ್ವಜನಿಕರಿಗೆ ವಿತರಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಸಂಘಸಂಸ್ಥೆಗಳು ಅನ್ನಸಂತರ್ಪಣೆಗೆ ಮಾಡಲು ಯೋಜನೆ ರೂಪಿಸಿವೆ.
ಕೊಡಗು: ದೇವಾಲಯಗಳಲ್ಲಿ ರಾಮನಾಮ ಸ್ಮರಣೆ
ಮಡಿಕೇರಿ: ಜಿಲ್ಲೆಯ ಬಹುತೇಕ ಎಲ್ಲ ದೇವಾಲಯಗಳಲ್ಲಿ ಶ್ರೀ ರಾಮನಾಮ ಸ್ಮರಣೆ ನಡೆಯಲಿದೆ. ಸೋಮವಾರ ಬೆಳಗ್ಗೆಯಿಂದ ರಾತ್ರಿಯವರೆಗೆ ವಿಶೇಷ ಪೂಜೆ, ಪ್ರರ‍್ಥನೆ, ಭಜನೆ ಜರುಗಲಿದ್ದು, ದೇವಾಲಯ ಸಮಿತಿಗಳು ಸಿದ್ಧತೆಗಳನ್ನು ಮಾಡಿಕೊಂಡಿವೆ. ದೇವಾಲಯಗಳು ಭಕ್ತರಿಗೆ ಅನ್ನಸಂತರ್ಪಣೆ ಮಾಡಲು ನರ‍್ಧರಿಸಿವೆ. ಜಿಲ್ಲೆಯ ಊರು, ಊರುಗಳು ಕೇಸರೀಮಯವಾಗಿದ್ದು, ಹಿಂದೂ ಸಂಘಟನೆಗಳು ಮತ್ತು ಬಿಜೆಪಿ ಕಾರ್ಯಕರ್ತರು ರಾಮೋತ್ಸವದ ಸಂಭ್ರಮದಲ್ಲಿದ್ದಾರೆ.
ಚಾಮರಾಜನಗರದಲ್ಲಿ ರಾಮ ಭಕ್ತರಿಂದ ಸಾಂಗತಾ ಯಜ್ಞ
ಚಾಮರಾಜನಗರ: ನಗರದ ದೇವಾಲಯಗಳಲ್ಲಿ ಬೆಳಿಗ್ಗೆಯಿಂದ ವಿಶೇಷ ಪೂಜೆ ನಡೆಯಲಿದೆ. ನಗರದೆಲ್ಲೆಡೆ ಶ್ರೀರಾಮನ ಬ್ಯಾನರ್ ರಾರಾಜಿಸುತ್ತಿದೆ. ಚಾಮರಾಜೇಶ್ವರ ದೇವಾಲಯ, ವೀರಭದ್ರೇಶ್ವರ ದೇವಾಲಯ, ಭುಜಂಗೇಶ್ವರ ದೇವಸ್ಥಾನ, ಹರಳು ಕೋಟೆ ಆಂಜನೇಯಸ್ವಾಮಿ, ಜನರ‍್ದನ ದೇವಾಲಯ, ರಾಘವೇಂದ್ರಸ್ವಾಮಿ ಮಠ ದೇವಾಲಯಗಳಲ್ಲಿ ವಿಶೇಷ ಪೂಜೆ ನಡೆಸಲಾಗುತ್ತಿದೆ. ಶಂಕರಪುರದಲ್ಲಿರುವ ಶ್ರೀರಾಮಮಂದಿರದಲ್ಲಿ ಚಂದ್ರಶೇಖರ ಭಾರತೀ ಸೇವಾ ಟ್ರಸ್ಟ್ ಹಾಗೂ ರಾಮಮಂದಿರದಲ್ಲಿ, ಶ್ರೀರಾಮ ತಾರಕ ಮಹಾ ಮಂತ್ರ ಜಪ ಹಾಗೂ ಸಾಂಗತಾ ಯಜ್ಞ ಏರ್ಪಡಿಸಲಾಗಿದೆ.
ಬೀದರ: ರಾಮ ವೇಷಧಾರಿ ಮಕ್ಕಳಿಗೆ ಪುಷ್ಪಾರ್ಚನೆ
ಬೀದರ: ಜಿಲ್ಲೆಯ ಸ್ವಾಮೀಜಿಗಳ ಒಕ್ಕೂಟ ಮತ್ತು ರಾಮಲೀಲಾ ಉತ್ಸವ ಸಮಿತಿಯಿಂದ ನಗರದ ಸಾಯಿ ಸ್ಕೂಲ್ ಮೈದಾನದಲ್ಲಿ “ಶ್ರೀ ರಾಮೋತ್ಸವ’ ಆಯೋಜಿಸಿ, ವಿವಿಧ ಧಾರ್ಮಿಕ ಕಾರ್ಯ ನಡೆಸಲಾಗುತ್ತಿದೆ. ಸೋಮವಾರ ಶ್ರೀರಾಮ ಮೂರ್ತಿಗೆ ಅಭಿಷೇಕ, ಹನುಮಾನ ಚಾಲೀಸಾ ಪಠಣ, 498 ಬಾಲ ರಾಮನ ವೇಷಧಾರಿ ಮಕ್ಕಳಿಗೆ ಪುಷ್ಪಾರ್ಚನೆ ಹಮ್ಮಿಕೊಳ್ಳಲಾಗಿದೆ.
ಕಲಬುರಗಿ: ಎರಡು ಲಕ್ಷ ಹಣತೆ ವಿತರಣೆ
ಕಲಬುರಗಿ: ರಾಮನವಮಿ ಉತ್ಸವ ಸಮಿತಿ 2ಲಕ್ಷ ಹಣತೆಗಳನ್ನು ಜಿಲ್ಲೆಯ 1೦8 ದೇವಸ್ಥಾನಗಳಿಗೆ ವಿತರಿಸಲಾಗಿದ್ದು, ರಾಮೋತ್ಸವಕ್ಕೆ ದೀಪ ಸಂಭ್ರಮ ಮೆರಗು ನೀಡಲಿದೆ. ಸೋಮವಾರ ಸಂಜೆ ನಗರದ ಶರಣಬಸವೇಶ್ವರ ದೇವಸ್ಥಾನದ ಆವರಣದಲ್ಲಿ 15 ಅಡಿ ಶ್ರೀರಾಮನ ಮೂರ್ತಿಗೆ ಮಹಾದಾ ಸೋಹ ಸಂಸ್ಥಾನದ ಪೀಠಾಧಿಪತಿ ಚಿರಂಜೀವಿ ದೊಡ್ಡಪ್ಪ ಅಪ್ಪ ಪೂಜೆ ಸಲ್ಲಿಸಲಿದ್ದಾರೆ. ಐದು ಸಾವಿರ ಹಣತೆಗಳಲ್ಲಿ ಶ್ರೀರಾಮ ದೀಪ ಬೆಳಗಲಿದೆ.
ಯಾದಗಿರಿ: ಶ್ರೀರಾಮತರ‍್ಥ ಸ್ಥಳಕ್ಕೆ ಪಾದಯಾತ್ರೆ
ಯಾದಗಿರಿ: ಗುರುಮಠಕಲ್ ಮತಕ್ಷೇತ್ರದ ಯರಗೋಳ ಗ್ರಾಮದ ಬೆಟ್ಟದ ಮೇಲಿರುವ ಶ್ರೀರಾಮಲಿಂಗೇಶ್ವರ ಬೆಟ್ಟದ ಶ್ರೀರಾಮ ತೀರ್ಥ ಸ್ಥಳಕ್ಕೆ ಜನರು ಪಾದಯಾತ್ರೆ ಕೈಗೊಂಡಿದ್ದು, ವಿಶೇಷ ಪೂಜೆಯಲ್ಲಿ ಶಾಸಕ ಶರಣಗೌಡ ಕಂದಕೂರ ಭಾಗವಹಿಸಲಿದ್ದಾರೆ. ಮಾಜಿ ಶಾಸಕ ವೆಂಕಟರೆಡ್ಡಿ ಮುದ್ನಾಳ ಕಾರ್ಯಲಯದಲ್ಲಿ ಅಯೋಧ್ಯೆಯ ಕಾರ್ಯಕ್ರಮದ ನೇರ ಪ್ರಸಾರಕ್ಕೆ ವ್ಯವಸ್ಥೆ ಮಾಡಲಾಗಿದೆ. ಕಾರ್ಯಲಯ ಅಂಗಳದಲ್ಲಿರುವ ದೇವಸ್ಥಾನದಲ್ಲಿ ವಿಶೇಷ ಪೂಜೆ, ಅನ್ನದಾಸೋಹವನ್ನು ಮಹೇಶರೆಡ್ಡಿ ಮುದ್ನಾಳ ನೆರವೇರಿಸಲಿದ್ದಾರೆ.
ರಾಯಚೂರು: 5೦ ಕೆ.ಜಿ ಹೋಳಿಗೆ ಊಟದ ವ್ಯವಸ್ಥೆ
ರಾಯಚೂರು: ನಗರದ ಪ್ರಸನ್ನ ಲಕ್ಷ್ಮಿ ವೆಂಕಟೇಶ್ವರ ದೇವಸ್ಥಾನದಲ್ಲಿ ಬೆಳಗ್ಗೆ ಶ್ರೀ ತಾರಕ ಹೋಮ ಜರುಗಲಿದೆ. ಬಳಿಕ ನೇರ ಪ್ರಸಾರದ ವ್ಯವಸ್ಥೆ ಮಾಡಲಾಗಿದೆ. ಮಧ್ಯಾಹ್ನ ಪ್ರಸಾದದ ವ್ಯವಸ್ಥೆಯಿದ್ದು, ಸಂಜೆ 7 ಗಂಟೆಗೆ ದೀಪೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ತಾಲೂಕಿನ ಗಾರಲದಿನ್ನಿ ಗ್ರಾಮದ ಆಂಜನೇಯ ಸ್ವಾಮಿ ದೇವಸ್ಥಾನದಲ್ಲೂ ವಿಶೇಷ ಪೂಜೆ ನಡೆಯಲಿದ್ದು, ಭಕ್ತರಿಗೆ 5೦ ಕೆ.ಜಿ ಹೋಳಿಗೆ ಊಟದ ವ್ಯವಸ್ಥೆ ಮಾಡಲಾಗಿದೆ. ಶ್ರೀ ರಾಘವೇಂದ್ರ ಸ್ವಾಮಿ ಮಠದಿಂದ ಶೋಭಾಯಾತ್ರೆ ಆಯೋಜಿಸಲಾಗಿದೆ. ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತರ‍್ಥರ ಸಾನ್ನಿಧ್ಯದಲ್ಲಿ ಯಾತ್ರೆ ಜರುಗಲಿದೆ.
ಬಳ್ಳಾರಿ: ವಿವಿಧೆಡೆ ಬೃಹತ್ ಮೆರವಣಿಗೆ
ಬಳ್ಳಾರಿ: ಜಿಲ್ಲೆಯ ಸಿರುಗುಪ್ಪ ಪಟ್ಟಣದಲ್ಲಿ ಹಿಂದೂಪರ ಸಂಘಟನೆಗಳಿಂದ ಶ್ರೀರಾಮ ಸಂಭ್ರಮವನ್ನು ಭರ್ಜರಿಯಾಗಿ ಆಯೋಜಿಸಲಾಗುತ್ತಿದೆ. ಐದು ಕಡೆ ಮೆರವಣಿಗೆಗೆ ವ್ಯವಸ್ಥೆ ಮಾಡಲಾಗಿದೆ. ಅಭಯಾಂಜನೇಯ, ಪ್ಯಾಟೆ ಆಂಜನೇಯ ದೇವಸ್ಥಾನದಲ್ಲಿ ಪೂಜೆ, ಪ್ರಸಾದ ವಿತರಣೆ ನಡೆಯಲಿದ್ದು, ಮನೆ ಮನೆಗಳಲ್ಲೂ ದೀಪ ಬೆಳಗಿಸಲು ವ್ಯವಸ್ಥೆ ಮಾಡಲಾಗಿದೆ.ಅಯೋಧ್ಯೆ ರಾಮಮಂದಿರ ಪ್ರಾಣಪ್ರತಿಷ್ಠೆ ಹಿನ್ನೆಲೆಯಲ್ಲಿ ನಗರದಲ್ಲಿ ಕೇಸರಿ ಬಾವುಟ, ಅದಕ್ಕೆ ಬೇಕಾಗುವ ಕೋಲುಗಳಿಗೆ ಎಲ್ಲಿಲ್ಲದ ಬೇಡಿಕೆ ಶುರುವಾಗಿದೆ. ಬಹುತೇಕ ರಸ್ತೆ ಇಕ್ಕೆಲಗಳಲ್ಲಿ ಕೇಸರಿ ಬಾವುಟ, ಕೇಸರಿ ಬಣ್ಣದ ಪೇಪರ್‌ಗಳು ಕಂಗೊಳಿಸುತ್ತಿವೆ.
ಚಿತ್ರದುರ್ಗ: ಒಂದೂವರೆ ಲಕ್ಷ ಲಾಡು ವಿತರಣೆ
ಚಿತ್ರದುರ್ಗ: ನಗರದ ಎಲ್ಲ ಬಡಾವಣೆಗಳಲ್ಲಿ ಎಲ್‌ಇಡಿ ಪರದೆ ಅಳವಡಿಸಿ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ನೇರ ಪ್ರಸಾರಕ್ಕೆ ವ್ಯವಸ್ಥೆ ಮಾಡಿಕೊಡಲಾಗಿದೆ. ಕಾರ್ಯಕ್ರಮ ಮುಕ್ತಾಯವಾದ ನಂತರ ಸಾರ್ವಜನಿಕರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ. ಚಳ್ಳಕೆರೆ ನಗರದಲ್ಲಿ ಸುಮಾರು ಒಂದೂವರೆ ಲಕ್ಷ ಪೊಟ್ಟಣಗಳಲ್ಲಿ ಲಾಡು ವಿತರಣೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಚಿತ್ರದುರ್ಗ ನಗರದ ವಿವಿಧ ದೇಗುಲ, ವೃತ್ತಿಗಳಲ್ಲಿ ಎಲ್‌ಇಡಿ ಪರದೆ ಅಳವಡಿಸಿ ನೇರ ಪ್ರಸಾರಕ್ಕೆ ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ.
ತುಮಕೂರು: ಪವಿತ್ರ ಗಂಗಾಜಲ ವಿತರಣೆ
ತುಮಕೂರು: ಜಿಲ್ಲೆಯ ಎಲ್ಲಾ ಮುಜರಾಯಿ ಇಲಾಖೆ ದೇವಾಲಯಗಳಲ್ಲಿ ವಿಶೇಷ ಪೂಜಾ ಕಾರ್ಯ ನಡೆಯಲಿವೆ. ಇದರ ಹೊರತಾಗಿ ತುಮಕೂರು ನಗರ ಸೇರಿದಂತೆ ಹಲವು ದೇವಾಲಯಗಳಲ್ಲಿ ವಿಭಿನ್ನ ಕಾರ್ಯಕ್ರಮಗಳು ನಡೆಯಲಿವೆ. ನಗರದ ರಾಮಮಂದಿರದಲ್ಲಿ 6 ಅಡಿ ಉದ್ದದ ಊದುಬತ್ತಿ ಹಚ್ಚಿ ವಿಶೇಷ ಆಚರಣೆ ಮಾಡಲಾಗುವುದು. ರಾಮನ ಚಿರಬಿಂಬ ಪ್ರತಿಷ್ಠಾಪನ ಮಹೋತ್ಸವ ಹಮ್ಮಿಕೊಳ್ಳಲಾಗಿದೆ.ನಗರದಲ್ಲಿ ನಡೆಯುವ ಕರಸೇವಕರ ಮಿಲನ ಕಾರ್ಯಕ್ರಮದಲ್ಲಿ ಪವಿತ್ರ ಗಂಗಾಜಲ ವಿತರಿಸಲಾಗುವುದು.
ಚಿಕ್ಕಬಳ್ಳಾಪುರದಲ್ಲಿ ದೀಪೋತ್ಸವ
ಚಿಕ್ಕಬಳ್ಳಾಪುರ: ತಾಲೂಕಿನ ಸಬ್ಬೇನಹಳ್ಳಿ ಗ್ರಾಮಸ್ಥರು ಸೀತಾ ಲಕ್ಷ್ಮಣ, ಹನುಮಂತನ ಸಮೇತ ಶ್ರೀ ರಾಮಚಂದ್ರಸ್ವಾಮಿ ಪ್ರಾಣ ಪ್ರತಿಷ್ಠಾಪನಾ ಮಹೋತ್ಸವ ಹಮ್ಮಿಕೊಂಡಿದ್ದಾರೆ. ಬಜಾರ್ ರಸ್ತೆಯಲ್ಲಿರುವ ಕೋದಂಡರಾಮಸ್ವಾಮಿ, ಗಂಗಮ್ಮ ಗುಡಿ ರಸ್ತೆಯಲ್ಲಿರುವ ಪಟ್ಟಾಭಿರಾಮಸ್ವಾಮಿ, ಮಂಡಿಕಲ್ ಬಳಿ ಇರುವ ರಾಮದೇವರ ಬೆಟ್ಟದಲ್ಲಿ ದೀಪೋತ್ಸವ, ಅನ್ನಸಂತರ್ಪಣೆ ಏರ್ಪಡಿಸಲಾಗಿದೆ.
ಕೋಲಾರ: ಅನ್ನದಾನ, ಪ್ರಸಾದ ವಿನಿಯೋಗ
ಕೋಲಾರ: ಶ್ರೀರಾಮ ಹಾಗೂ ಆಂಜನೇಯ ದೇವಾಲಯಗಳಲ್ಲಿ ಸೋಮವಾರ ಬೆಳಗ್ಗೆ 5 ಗಂಟೆಯಿಂದ ಆರಂಭವಾಗಿ ಸಂಜೆಯವರೆಗೂ ವಿವಿಧ ಕಾರ‍್ಯಕ್ರಮ ಏರ‍್ಪಡಿಸಿರುವುದರಿಂದ ದೇವಾಲಯಗಳಲ್ಲಿ ವಿಶೇಷ ಅನ್ನದಾನ, ಪ್ರಸಾದ ವಿನಿಯೋಗ ಕಾರ‍್ಯಕ್ರಮ ಆಯೋಜಿಸಲಾಗಿದೆ. ಇದಕ್ಕಾಗಿ ವಿಶೇಷ ತಯಾರಿಗಳನ್ನು ದೇವಾಲಯಗಳ ಬಳಿಯೇ ನಡೆಸಲಾಗುತ್ತಿದೆ.
ಬೆಂಗಳೂರು ಗ್ರಾ.: ಸೀತಾರಾಮರ ಮೆರವಣಿಗೆ
ದೇವನಹಳ್ಳಿ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ 4 ತಾಲೂಕುಗಳ ದೇಗುಲಗಳಲ್ಲಿ ಬೆಳಗ್ಗೆಯಿಂದಲೇ ವಿಶೇಷ ಪೂಜೆ, ಹೋಮ, ಪಾರಾಯಣ, ಅನ್ನಸಂತರ್ಪಣೆ, ಶ್ರೀರಾಮ ಭಜನೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಗಳು ನೆರವೇರಲಿವೆ. ದೇವನಹಳ್ಳಿ ಪಟ್ಟಣದಲ್ಲಿ ಆಂಜನೇಯ ಸ್ವಾಮಿ, ಸೀತಾರಾಮರ ಮೆರವಣಿಗೆ ನಡೆಯುತ್ತದೆ. ನಂತರ ಸಾರ್ವಜನಿಕರಿಗೆ ಪ್ರಸಾದ ವಿನಿಯೋಗ ಮಾಡಲಾಗುವುದು.
ಬೆಂ. ನಗರ: ವಿಶೇಷ ಪೂಜೆ, ಧಾರ್ಮಿಕ ಕಾರ್ಯಕ್ರಮ
ಬೆಂಗಳೂರು: ಜಯನಗರ 4ನೇ ಬ್ಲಾಕ್‌ನ ವಿನಾಯಕ ಸ್ವಾಮಿ ದೇವಸ್ಥಾನ, ಗಂಗಾನಗರ ಶ್ರೀ ಕೋದಂಡ ರಾಮಚಂದ್ರಸ್ವಾಮಿ ದೇವಾಲಯ, ರಾಗೀ ಗುಡ್ಡದ ಆಂಜನೇಯ ಸ್ವಾಮಿ, ಮಲ್ಲೇಶ್ವರದ ಕೋದಂಡರಾಮ, ಸಿರಿನಾಡ ಮಹಾಸಭಾ ಕನ್ನಡ ಕಣ್ಮಣಿ ಭಕ್ತ ಮಂಡಳಿಯಲ್ಲಿ ವಿಶೇಷ ಪೂಜೆ, ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಮೈಸೂರು ಬ್ಯಾಂಕ್ ವೃತ್ತದಲ್ಲಿರುವ ಆಂಜನೇಯ ದೇವಾಲಯದಲ್ಲಿ ಬೆಳಗ್ಗೆ 8.3೦ಕ್ಕೆ ವಿಶೇಷ ಪೂಜೆ ಸಲ್ಲಿಸಲಾಗುತ್ತಿದೆ.
ರಾಮನಗರ: ಮಕ್ಕಳಿಗೆ ವೇಷ ಭೂಷಣ ಸ್ರ‍್ಧೆ
ರಾಮನಗರ: ರಾಮದೇವರ ಮೆರವಣಿಗೆ, ರಾಮಮಂದಿರ ಉದ್ಘಾಟನೆ ಕಾರ್ಯಕ್ರಮವನ್ನು ಬೃಹತ್ ಪರದೆಯಲ್ಲಿ ವೀಕ್ಷಣೆಗೆ ವ್ಯವಸ್ಥೆ ಮಾಡುವ ಜೊತೆಗೆ ಭಕ್ತರಿಗೆ ಪ್ರಸಾದ ವಿನಿಯೋಗ ಮತ್ತು ಮಕ್ಕಳಿಗೆ ವೇಷ ಭೂಷಣ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಚನ್ನಪಟ್ಟಣದಲ್ಲಿ ಶ್ರೀರಾಮನ ಅಭಿಮಾನಿಗಳು ರಾಮದೇವರ ದೇವಾಲಯದಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳ ಜೊತೆಗೆ ಸಾರ್ವಜನಿಕರಿಗೆ ಪಾನಕ ಕೋಸಂಬರಿ ವಿತರಣೆ, ಕೊಲ್ಲಾಪುರದಮ್ಮನ ದೇಗುಲದಲ್ಲಿ ಸಂಭ್ರಮಾಚರಣೆ, ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ವಕ್ಫ್ ಆಸ್ತಿ ತಿದ್ದುಪಡಿ ವಿಚಾರದಲ್ಲಿ ಸಿಎಂ ಅಸಹಾಯಕರು: ಕುಮಾರ್ ಬಂಗಾರಪ್ಪ
Hospet: ವಕ್ಫ್ ನಿಂದ ಹಿಂದೂ – ಮುಸ್ಲಿಂ ಸಮಾಜಕ್ಕೆ ಅನ್ಯಾಯ; ರಮೇಶ್ ಜಾರಕಿಹೊಳಿ
Yadgir: ನಗರ ಪೊಲೀಸರ ಕಾರ್ಯಾಚರಣೆ… 7 ಲಕ್ಷ ರೂ. ಮೌಲ್ಯದ 22 ಬೈಕ್ ವಶ
Bidar contractor ಆತ್ಮಹ*ತ್ಯೆ ಪ್ರಕರಣ: ಸ್ವತಂತ್ರ ತನಿಖೆಗೆ ಪ್ರಿಯಾಂಕ್ ಖರ್ಗೆ ಒಲವು
Manvi; ರಾಜಲಬಂಡ ಅಣೆಕಟ್ಟೆಯಲ್ಲಿ ಕಂಡು ಬಂದ ಭಾರಿ ಗಾತ್ರದ ಮೀನುಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.