Ayodhya ram mandir: ರಾಮನಗರಕ್ಕೂ ಉಂಟು ರಾಮನ ನಂಟು


Team Udayavani, Jan 22, 2024, 10:55 AM IST

Ayodhya ram mandir: ರಾಮನಗರಕ್ಕೂ ಉಂಟು ರಾಮನ ನಂಟು

ರಾಮನಗರ: ಅಯೋಧ್ಯೆಯಲ್ಲಿ ಹಲವು ವರ್ಷಗಳ ಬಳಿಕ ರಾಮಮಂದಿರ ತಲೆ ಎತ್ತುತಿದೆ. ರಾಮಭಕ್ತರು ಅತ್ಯಂತ ಸಂತಸದಿಂದ ಈ ಕ್ಷಣವನ್ನು ಕಣ್ತುಂಬಿಕೊಳ್ಳಲು ಎದುರು ನೋಡುತ್ತಿದ್ದಾರೆ. ಎಲ್ಲೆಡೆ ರಾಮನ ಜಪ, ರಾಮನಾಮ ಸ್ಮರಣೆ ನಡೆಯುತ್ತಿದ್ದು, ಶ್ರೀರಾಮ, ಸೀತಾ, ಲಕ್ಷ್ಮಣ, ಆಂಜನೇಯ ಸಮೇತ ಜಿಲ್ಲೆಯ ಹಲವೆಡೆ ಭೇಟಿ ನೀಡಿದ್ದ ಎಂಬ ನಂಬಿಕೆ ಜಿಲ್ಲೆಯ ಹಲವು ಪ್ರದೇಶಗಳಲ್ಲಿದ್ದು, ಈ ಸಂಬಂಧ ದಂತಕತೆಗಳು ಇಂದಿಗೂ ಚಾಲ್ತಿಯಲ್ಲಿವೆ.

ರಾಮನಿಂದ ಪೂಜೆಗೊಳಪಟ್ಟ ಅಪ್ರಮೇಯ: ದೊಡ್ಡಮಳೂರಿನ ಶೀ ಅಪ್ರಮೇಯಸ್ವಾಮಿ ದೇವಾಲಯಕ್ಕೂ ರಾಮಾಯಣಕ್ಕೂ ನಂಟಿದ್ದು, ಶ್ರೀರಾಮ ಅಪ್ರಮೇಯಸ್ವಾಮಿಗೆ ಪೂಜೆ ಸಲ್ಲಿಸಿದ್ದರಿಂದ ಈ ದೇವರನ್ನು ಶ್ರೀರಾಮಾ ಪ್ರಮೇಯ ಎಂದು ಕರೆಯಲಾಗುತ್ತದೆ. ಈ ದೇವಾಲಯ ಸಾಕಷ್ಟು ಪ್ರಸಿದ್ಧಿ ಪಡೆದಿದ್ದು ಪ್ರತಿ ವರ್ಷ ಏಪ್ರೀಲ್‌ ಅಥವಾ ಮೇ ತಿಂಗಳಲ್ಲಿ ದೇವರ ರಥೋತ್ಸವ ನಡೆಯಲಿದ್ದು, ರಥೋತ್ಸವದ ಸಮಯದಲ್ಲಿ ಸೂರ್ಯನ ಮೊದಲ ರಶ್ಮಿ ಅಪ್ರಮೇಯಸ್ವಾಮಿಯ ಪಾದವನ್ನು ಸ್ಪರ್ಶಿಸುತ್ತದೆ.

ರಾಮ ಕಾಕಾಸುರನ್ನು ಸಂಹಾರ ಮಾಡಿದ್ದು ರಾಮ ದೇವರ ಬೆಟ್ಟದಲ್ಲಿ: ರಾಮನಗರದಲ್ಲಿರುವ ಶ್ರೀರಾಮಗಿರಿ ಜಿಲ್ಲೆಯ ಪ್ರಮುಖ ರಾಮದೇವರ ತಾಣ ಗಳಲ್ಲಿ ಒಂದು. ಈ ಬೆಟ್ಟದಲ್ಲಿ ಶ್ರೀರಾಮಚಂದ್ರ ಸೀತೆ ಲಕ್ಷ್ಮಣ ಹನುಂತನ ಸಮೇತವಾಗಿ ಕೆಲದಿನಗಳ ಕಾಲ ವಾಸವಿದ್ದ ಎಂಬ ಉಲ್ಲೇಖ ಪುರಾಣೇತಿಹಾಸಗಳಲ್ಲಿವೆ. ಈ ಬೆಟ್ಟದ ಮೇಲೆ ಸೀತೆ ಸ್ನಾನ ಮಾಡಲೆಂದೇ ನಿರ್ಮಾಣಗೊಂಡ ಸೀತಾಕೊಳವಿದ್ದು, ಇದರಲ್ಲಿ ಬಿದ್ದವರು ಬದುಕಿ ಬಂದ ಉದಾಹರಣೆಯೇ ಇಲ್ಲವಾಗಿದೆ.

ಇನ್ನು ಕಾಕಾಸುರ ಈ ಬೆಟ್ಟ ದಲ್ಲಿ ಸೀತೆಯನ್ನು ಕುಟುಕಿದ್ದರಿಂದ ಕುಪಿತಗೊಂಡ ರಾಮ ಕಾಕಾಸುರನನ್ನು ಸಂಹಾರ ಮಾಡಿದ್ದು, ಇಂದಿಗೂ ವಿಶಾಲವಾದ ಈ ಬೆಟ್ಟದ ಸುತ್ತಾ ಒಂದೇ ಒಂದು ಕಾಗೆ ಹಾರಾಡು ವುದಿಲ್ಲ. ಈ ಬೆಟ್ಟದಲ್ಲಿ ದಕ್ಷಿಣ ಅಯೋಧ್ಯೆ ಮಾದರಿಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಸರ್ಕಾರ ಯೋಜನೆ ರೂಪಿಸಿದೆ.

ಮೊದಲು ಕ್ಲೋಸ್‌ ಪೇಟೆ ಎಂದು ಇದ್ದ ಹೆಸರನ್ನು ಕೆಂಗಲ್‌ ಹನುಮಂತಯ್ಯ ಅವರು ರಾಮನಗರ ಎಂದು ಬದಲಾವಣೆ ಮಾಡಿದ್ದರ ಹಿಂದೆ ಶ್ರೀರಾಮನ ಕಥೆಯೇ ಕಾರಣ.

ಹನುಮಂತನಿಗೂ ಉಂಟು ನಂಟು: ಜಿಲ್ಲೆಯಲ್ಲಿ ರಾಮಭಕ್ತ ಹನುಂತನ ಜೊತೆಗೂ ಸಾಕಷ್ಟು ಸಂಬಂಧವಿದೆ. ಹನುಮಂತ ಲಕ್ಷ್ಮಣನನ್ನು ಉಳಿಸಲು ಸಂಜೀವಿನಿ ಪರ್ವತವನ್ನು ಎತ್ತಿಕೊಂಡು ಹೋಗುವಾಗ ಕಣ್ವ ಜಲಾಶಯದ ಸಮೀಪ ಇರುವ ಕಂಬದರಾಯನ ಗುಡ್ಡೆಯಲ್ಲಿ ಮುಗಿಲೆತ್ತರಕ್ಕೆ ಬೆಳೆಯುತ್ತಿದ್ದ ಕಲ್ಲೊಂದು ಹನುಂತನ ಕಾಲಿಗೆ ತಾಕಿ ಛಿದ್ರವಾಯಿತು. ಈ ಘಟನೆಯಲ್ಲಿ ಹನು ಮಂತನ ಕಾಲಿಗೆ ಪೆಟ್ಟಾಯಿತು. ಈ ಸಂದರ್ಭದಲ್ಲಿ ಕೈಯ ಲ್ಲಿದ್ದ ಸಂಜೀವಿನ ಪರ್ವತ ಅಲುಗಾಡಿ ಸಂಜೀವಿನ ಗಿಡದ ತುಂಡೊಂದು ಕೆಳಗೆ ಬಿತ್ತೆಂಬ ನಂಬಿಕೆ ಇದ್ದು, ದೇವರ ಹೊಸಹಳ್ಳಿ ಗ್ರಾಮದಲ್ಲಿ ಪ್ರಸಿದ್ದ ಸಂಜೀವರಾಯ ಸ್ವಾಮಿ ದೇವಾಲಯವನ್ನು ನಿರ್ಮಿಸ ಲಾಗಿದೆ. ಈ ದೇವ ರಿಗೆ ಪೂಜೆ ಸಲ್ಲಿಸಿದರೆ ಎಂತಹ ರೋಗವಾದರೂ ವಾಸಿ ಯಾ ಗುತ್ತದೆ ಎಂಬ ನಂಬಿಕೆ ಇದ್ದು, ಕಾಲಿಗೆ ಪೆಟ್ಟಾಗಿದ್ದರಿಂದ ಹನುಮಂತನ ಕೆಂಗಲ್‌ ಬಳಿ ಪಾದಸ್ಪರ್ಶ ಮಾಡಿ ಮುಂದೆ ಹೋದ ಎಂದು, ನೋವಾಗಿದ್ದರಿಂದ ಹನುಮಂತನ ಮುಖ ಕೆಂಪಾಗಿತ್ತು ಎಂಬ ಕಥೆ ಇದ್ದು, ಇಂದಿಗೂ ಇಲ್ಲಿನ ಹನುಮಂತ ಕೆಂಪು ಕಲ್ಲಿನಿಂದ ಕಡೆಯಲ್ಪಟ್ಟಿದ್ದಾನೆ.

ಜಿಲ್ಲೆಯ ನೂರಾರು ಗ್ರಾಮದಲ್ಲಿವೆ ರಾಮಮಂದಿರ: ಮರ್ಯಾದ ಪುರುಷ ಶ್ರೀರಾಮ ಜಿಲ್ಲೆಯ ಸಾಕಷ್ಟು ಮಂದಿಯ ಆರಾಧ್ಯ ದೈವ. ಇಂದಿಗೂ ಜಿಲ್ಲೆಯ ಹಲವು ಗ್ರಾಮಗಳಲ್ಲಿ ರಾಮಮಂದಿರಗಳು ಇವೆ. ಗ್ರಾಮೀಣ ಭಾಗ ದಲ್ಲಿ ಜನತೆ ಈ ಹಿಂದೆ ರಾಮಮಂದಿರದಲ್ಲಿ ಪ್ರತಿವಾರ ಭಜನೆ ಮಾಡುತ್ತಿದ್ದರು. ಇನ್ನೂ ಕೆಲ ಗ್ರಾಮಗಳಲ್ಲಿ ಪ್ರತಿ ಶನಿವಾರ ಇಡೀ ಗ್ರಾಮದ ಸುತ್ತಾ ರಾಮದೇವರ ಪೋಟೋ ಹಿಡಿದುಕೊಂಡು ಭಕ್ತರು ದೊಡ್ಡ ದೀಪದೊಂದಿಗೆ ರಾಮಭಜನೆ ಮಾಡುತ್ತಾ ಗ್ರಾಮದ ಸುತ್ತಾ ಪ್ರದಕ್ಷಿಣೆ ಬರುತ್ತಿದ್ದರು. ಕೆಲ ರಾಮಮಂದಿರಗಳಲ್ಲಿ ಇಂದಿಗೂ ಪೂಜಾ ಕಾರ್ಯಕ್ರಮಗಳು ನಡೆಯುತ್ತಿವೆಯಾದರೂ, ಕೆಲ ಗ್ರಾಮಗಳಲ್ಲಿ ರಾಮಮಂದಿರ ನಿರ್ಲಕ್ಷ್ಯಕ್ಕೆ ಒಳಗಾಗಿವೆ.

ರಾಮನಗರದಲ್ಲಿ ಜಟಾಯು ರಕ್ಕೆಗೆ ಸಂಸ್ಕಾರ : ಚನ್ನಪಟ್ಟಣ ತಾಲೂಕಿನ ಕೂಡ್ಲೂರು ಗ್ರಾಮದಲ್ಲಿರುವ ಶ್ರೀರಾಮ ದೇವಾಲಯ ಸಾವಿರಾರು ವರ್ಷಗಳಷ್ಟು ಹಳೆಯದಾಗಿದ್ದು, ಈ ದೇವಾಲಯವನ್ನು ಚೋಳರ ಕಾಲದಲ್ಲಿ ನಿರ್ಮಾಣ ಮಾಡಲಾಯಿತು ಎಂದು ಉಲ್ಲೇಖಗಳಿವೆ. ಈ ದೇವಾ ಲಯದ ಸಮೀಪ ಬಿಳಿಯ ಬೂದಿ ರೂಪದ ಮಣ್ಣು ಸಿಗುತ್ತಿದ್ದು, ಇದನ್ನು ಈ ಭಾಗದ ಜನತೆ ಯಾವುದೇ ಆರೋಗ್ಯ ಸಮಸ್ಯೆಯಾದರೆ ಮನೆಗೆ ತೆಗೆದು ಕೊಂಡು ಹೋಗಿ ಪೂಜಿಸಿ ಹಚ್ಚಿಕೊಳ್ಳುತ್ತಿದ್ದರು. ರಾಮಾಯಣ ಕಾಲದಲ್ಲಿ ಸೀತಾ ನ್ವೇಷಣೆಗೆ ಹೊರಟ ಶ್ರೀರಾಮನಿಗೆ ಈ ಜಾಗದಲ್ಲಿ ಜಟಾಯುವಿನ ರೆಕ್ಕೆಯೊಂದು ಸಿಕ್ಕಿದ್ದು, ಅದರನ್ನು ಇಲ್ಲಿ ಸಂಸ್ಕಾರ ಮಾಡಿದ ಎಂಬ ಪ್ರತೀತಿ ಇದೆ. ಈ ದೇವಾಲಯದ ರಾಮಭಕ್ತರ ಪಾಲಿನ ಪವಿತ್ರ ಸ್ಥಾನಗಳಲ್ಲಿ ಒಂದಾಗಿದೆ.

ರಾಮದೇವರ ನೀರಿನ ಹೊಂಡಗಳು : ಜಿಲ್ಲೆಯ ಮತ್ತೂಂದು ಪ್ರಸಿದ್ಧ ರಾಮಕ್ಷೇತ್ರವೆಂದರೆ ಚನ್ನಪಟ್ಟಣ ತಾಲೂಕಿನ ವಿರು ಪಾಕ್ಷಿಪುರ ಗ್ರಾಮದ ಹೊರವಲಯದಲ್ಲಿರುವ ಶ್ರೀಗವಿರಂಗಸ್ವಾಮಿ ಬೆಟ್ಟ. ಕಬ್ಟಾಳು ಮಾರ್ಗದಲ್ಲಿರುವ ಈ ಬೆಟ್ಟದಲ್ಲಿ ರಾಮದೇವರ ಸೋಣೆ( ನೀರಿನ ಗುಂಡಿ) ಎಂದು ಸ್ಥಳೀಯರು ಕರೆಯುವ ನೀರಿನ ಗುಂಡಿಯೊಂದಿದ್ದು, ಇದರಲ್ಲಿ ಬೇಸಿಗೆಯಲ್ಲಿ ಸಿಹಿಯಾದ ನೀರು ದೊರೆಯುತ್ತದೆ. ಇಲ್ಲಿ ಶ್ರೀರಾಮನಿಗೆ ನೀರು ಕುಡಿಯಲು ದಾಹವಾದಾಗ ಬಾಣ ಹೂಡಿ ಗುಂಡಿಯನ್ನು ನಿರ್ಮಿಸಿದನೆಂಬ ಪ್ರತೀತಿ ಇದ್ದು, ಇಲ್ಲಿನ ಜನತೆ ಈ ಹೊಂಡವನ್ನು ರಾಮದೇವರ ಸೊಣೆ ಎಂದು ಕರೆಯುತ್ತಾರೆ.

ಸು.ನಾ.ನಂದಕುಮಾರ್‌

 

ಟಾಪ್ ನ್ಯೂಸ್

AI world: ಕ್ರಿಮಿನಲ್‌ಗ‌ಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್‌!

AI world: ಕ್ರಿಮಿನಲ್‌ಗ‌ಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್‌!

5-video

ಹೊಸ ಟ್ರೆಂಡ್ ನ ಪ್ಯಾಂಟ್ ಧರಿಸಿದ ಯುವಕ;ಸ್ನೇಹಿತರಿಂದ ಅವಮಾನ, ನೊಂದ ಯುವಕ ಆತ್ಮಹತ್ಯೆಗೆ ಯತ್ನ

Perth Test: ಟೀಂ ಇಂಡಿಯಾಗಿಲ್ಲ ಶುಭಾರಂಭ: ಮೊದಲ ಸೆಶನ್‌ ನಲ್ಲೇ ಪರದಾಡಿದ ಬ್ಯಾಟರ್‌ ಗಳು

Perth Test: ಟೀಂ ಇಂಡಿಯಾಗಿಲ್ಲ ಶುಭಾರಂಭ: ಮೊದಲ ಸೆಶನ್‌ ನಲ್ಲೇ ಪರದಾಡಿದ ಬ್ಯಾಟರ್‌ ಗಳು

Amazon Employee: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು

Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು

3-yellapur

Yellapur: ಕಣ್ಣಿಗೆ ಖಾರಾಪುಡಿ ಎರಚಿ ಹಣ, ಸ್ಕೂಟಿ ದರೋಡೆ; ಆರೋಪಿಗಳ ಬಂಧನ

venkatesh-gowda

Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ

Three Nation Trip: ಮೂರು ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ

Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

venkatesh-gowda

Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ

Fraud: “ವಿಡಿಯೋಗೆ ಲೈಕ್‌ ನೀಡಿ’ 13.97 ಲಕ್ಷ ಕಳೆದುಕೊಂಡರು!

Fraud: “ವಿಡಿಯೋಗೆ ಲೈಕ್‌ ನೀಡಿ’ 13.97 ಲಕ್ಷ ಕಳೆದುಕೊಂಡರು!

Yogeshwar

C.P.Yogeshwara; ಜಮೀರ್ ಹೇಳಿಕೆ ಪರಿಣಾಮ…: ಸೋಲಿನ ಆತಂಕ ಹೊರ ಹಾಕಿದ ಸೈನಿಕ?!

CM-Ramanagara

By Election: ದೇವೇಗೌಡರನ್ನು 1994ರಲ್ಲಿ ಮುಖ್ಯಮಂತ್ರಿ ಮಾಡಿದ್ದೇ ನಾನು: ಸಿಎಂ ಸಿದ್ದರಾಮಯ್ಯ

Ramanagara: ಆರು ಟ್ರಾನ್ಸ್‌‌ ಫಾರ್ಮರ್ ಗಳ ಕಳವು

Ramanagara: ಆರು ಟ್ರಾನ್ಸ್‌‌ ಫಾರ್ಮರ್ ಗಳ ಕಳವು

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

AI world: ಕ್ರಿಮಿನಲ್‌ಗ‌ಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್‌!

AI world: ಕ್ರಿಮಿನಲ್‌ಗ‌ಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್‌!

5-video

ಹೊಸ ಟ್ರೆಂಡ್ ನ ಪ್ಯಾಂಟ್ ಧರಿಸಿದ ಯುವಕ;ಸ್ನೇಹಿತರಿಂದ ಅವಮಾನ, ನೊಂದ ಯುವಕ ಆತ್ಮಹತ್ಯೆಗೆ ಯತ್ನ

Perth Test: ಟೀಂ ಇಂಡಿಯಾಗಿಲ್ಲ ಶುಭಾರಂಭ: ಮೊದಲ ಸೆಶನ್‌ ನಲ್ಲೇ ಪರದಾಡಿದ ಬ್ಯಾಟರ್‌ ಗಳು

Perth Test: ಟೀಂ ಇಂಡಿಯಾಗಿಲ್ಲ ಶುಭಾರಂಭ: ಮೊದಲ ಸೆಶನ್‌ ನಲ್ಲೇ ಪರದಾಡಿದ ಬ್ಯಾಟರ್‌ ಗಳು

4-siruguppa

Siruguppa: ಜೋಡೆತ್ತಿನ ಬಂಡಿಗೆ ಡಿಕ್ಕಿ ಹೊಡೆದ ಬಸ್‌; ಎತ್ತು ಸಾವು

Amazon Employee: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು

Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.