Ayodhya ರಾಮಮಯ : ಜನ್ಮಭೂಮಿಯಲ್ಲಿ ಕೋಟಿಕಂಗಳ ಕನಸು ಸಾಕಾರ

ರಾಮ ಪ್ರಾಣ ಪ್ರತಿಷ್ಠೆಯ ಅಭೂತಪೂರ್ವ ಕ್ಷಣಕ್ಕೆ ಸಾಕ್ಷಿಯಾಗಲಿದೆ ಸರಯೂ ನದಿ ತಟದ ಮಹಾನಗರಿ

Team Udayavani, Jan 22, 2024, 6:30 AM IST

1-asdadd

ನೂರಾರು ವರ್ಷಗಳ ಹೋರಾಟ, ಕೋಟ್ಯಂತರ ಭಕ್ತರ ಮನದ ಕೋರಿಕೆ ಇಡೀ ಜಗತ್ತೇ ಬೆರಗು ಕಂಗಳಿಂದ ಕಾತುರವಾಗಿ ಕಾಯುತ್ತಿರುವ ಭರತಖಂಡದ ಐತಿಹಾಸಿಕ ಕ್ಷಣವಾಗಿರುವ ರಾಮ ಮಂದಿರದ ಉದ್ಘಾಟನೆಗೆ ಅಯೋಧ್ಯೆ ಸಂಪೂರ್ಣವಾಗಿ ಸಜ್ಜುಗೊಂಡಿದೆ. ಕಂಬನಿ ತುಂಬಿ ಕಾಯುತ್ತಿರುವ ಕೋಟ್ಯಂತರ ಕಂಗಳಿಗೆ ಇಂದು ಭಗವಾನ್‌ ಶ್ರೀ ರಾಮಲಲ್ಲಾನ ದರ್ಶನ ಪ್ರಾಪ್ತವಾಗಲಿದೆ. ಈ ಅಭೂತಪೂರ್ವ ಕ್ಷಣಕ್ಕೆ ಸಾಕ್ಷಿಯಾಗಲಿರುವ ಪುಣ್ಯಭೂಮಿ- ಶ್ರೀರಾಮ ಜನ್ಮಭೂಮಿಯ ತಯಾರಿ ಹೀಗಿದೆ…

ಅಯೋಧ್ಯೆ: ಶ್ರೀ ರಾಮಲಲ್ಲಾನ ಪ್ರಾಣ ಪ್ರತಿಷ್ಠೆಗೆ ಅಯೋ ಧ್ಯೆಯ ರಾಮಮಂದಿರ ಸಂಪೂರ್ಣ ಸಜ್ಜಾಗಿದ್ದು, ಈ ಅಭೂತ ಪೂರ್ವ ಗಳಿಗೆಯನ್ನು ಕಣ್ತುಂಬಿಕೊಳ್ಳಲು ಕೋಟ್ಯಂತರ ಭಾರತೀ ಯರು ತುದಿಗಾಲಲ್ಲಿ ನಿಂತಿದ್ದಾರೆ.
ಪ್ರಾಣ ಪ್ರತಿಷ್ಠೆಗೆ ಸಂಬಂಧಿಸಿದ ಧಾರ್ಮಿಕ ಕಾರ್ಯಗಳು ಜ.16ರಿಂದಲೇ ಆರಂಭವಾಗಿದ್ದು, ಭಾನುವಾರ ಎಲ್ಲ ಕಾರ್ಯ ಗಳೂ ಸಂಪನ್ನಗೊಂಡಿವೆ. ಸೋಮವಾರ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಪ್ರಾಣಪ್ರತಿಷ್ಠೆ ಕಾರ್ಯ ನೆರವೇರಲಿದೆ. ಮಧ್ಯಾಹ್ನ ಸರಿಯಾಗಿ 12.20ಕ್ಕೆ ಪ್ರಾಣ ಪ್ರತಿಷ್ಠೆ ವಿಧಿ ವಿಧಾನ ಆರಂಭವಾಗಲಿದ್ದು, 1 ಗಂಟೆಯ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ತದನಂತರ ಪ್ರಧಾನಿ ಮೋದಿಯವರು ಅಲ್ಲಿ ನೆರೆಯಲಿರುವ ಸಂತರು, ಖ್ಯಾತ ನಾಮರು ಸೇರಿದಂತೆ ಸುಮಾರು 7 ಸಾವಿರಕ್ಕೂ ಅಧಿಕ ಮಂದಿ ಯನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಕೋಟ್ಯಂತರ ಮಂದಿ ಟಿವಿಗಳು ಹಾಗೂ ಆನ್‌ಲೈನ್‌ ವೇದಿಕೆಗಳ ನೇರಪ್ರಸಾರ ದಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠೆಯನ್ನು ಕಣ್ತುಂಬಿಕೊಳ್ಳಲಿದ್ದಾರೆ.

ಎಲ್ಲೆಲ್ಲೂ ರಾಮ ನಾಮ

ಪ್ರಾಣ ಪ್ರತಿಷ್ಠೆಗೆ ಸಜ್ಜುಗೊಂಡಿ ರುವ ಅಯೋಧ್ಯೆಯು ಸಂಪೂರ್ಣವಾಗಿ ರಾಮಮಯ ವಾಗಿದೆ. ರಾಮಮಂದಿರವು ವಿಶೇಷ ದೀಪಾಲಂಕಾರ, ಪುಷ್ಪಾಲಂಕಾರ ದಿಂದ ಕಂಗೊಳಿಸುತ್ತಿದೆ. ಎಲ್ಲೆಲ್ಲೂ ಆಧ್ಯಾತ್ಮಿಕ ಭಾವ ತುಂಬಿ ತುಳುಕುತ್ತಿದ್ದು, “ಅಯೋಧ್ಯಾ ರಾಮಮಯ್‌ ಹೋ ರಹಾ ಹೇ’ ಎಂದು ಸ್ಥಳೀಯರು ಉದ್ಗರಿಸುತ್ತಿದ್ದಾರೆ. ಮನೆಗಳು, ಕಟ್ಟಡಗಳ ಗೋಡೆಗಳಿಂದ ಹಿಡಿದು ಮೇಲ್ಸೇತು ವೆಗಳ ಮೇಲಿನ ಬೀದಿದೀಪಗಳನ್ನೂ ಬಿಡದೇ “ರಾಮ, ರಾಮಾಯಣ, ಬಿಲ್ಲು-ಬಾಣಗಳ’ ಚಿತ್ರಗಳು ತುಂಬಿಹೋಗಿವೆ. ನಗರದೆಲ್ಲೆಡೆ ರಾಮರಾಜ್ಯದ ಉದ್ಘೋಷಗಳು, ಕೇಸರಿ ಬಾವುಟಗಳು ರಾರಾಜಿ ಸುತ್ತಿವೆ. ರಾಮಮಾರ್ಗ, ಸರಯೂ ನದಿ ತೀರ, ಲತಾ ಮಂಗೇಶ್ಕರ್‌ ಚೌಕ್‌ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ರಾಮಾಯಣದ ಸ್ತೋತ್ರಗಳು ಮಿಂಚುತ್ತಿವೆ. ನಗರ ದೆಲ್ಲೆಡೆ ರಾಮಲೀಲಾಗಳು, ಭಗವತ್‌ ಕಥಾ, ಭಜನ್‌ ಸಂಧ್ಯಾ ಹಾಗೂ ಇತರೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿವೆ.

ಈಗಾಗಲೇ ಬಿಜೆಪಿ ಆಡಳಿತವಿರುವ ರಾಜ್ಯಗಳು ಹಾಗೂ ಬಿಜೆಡಿ ಆಡಳಿತದ ಒಡಿಶಾ ಸರ್ಕಾರ ಸೋಮವಾರ ರಜೆ ಘೋಷಿಸಿದ್ದು, ಕೇಂದ್ರ ಸರ್ಕಾರವು ತನ್ನ ಅಧೀನದಲ್ಲಿರುವ ಸಂಸ್ಥೆಗಳಿಗೆ ಅರ್ಧ ದಿನ ರಜೆ ಘೋಷಿಸಿದೆ. ಇದಲ್ಲದೇ, ಸಾರ್ವಜನಿಕ ವಲಯದ ಬ್ಯಾಂಕುಗಳು, ವಿಮಾ ಕಂಪನಿಗಳು, ಹಣಕಾಸು ಸಂಸ್ಥೆಗಳು ಮತ್ತು ಪ್ರಾದೇಶಿಕ ಗ್ರಾಮೀಣ ಬ್ಯಾಂಕು ಗಳಿಗೆ ಅರ್ಧ ದಿನ ರಜೆ ಇರಲಿದೆ. ದೇಶದ ಎಲ್ಲ ದೇಗುಲಗಳೂ “ರಾಮೋತ್ಸವ’ಕ್ಕೆ ಸಜ್ಜಾಗಿದ್ದು, ವಿಶೇಷ ಪೂಜಾ ಕೈಂಕರ್ಯಗಳಿಗೆ ಸಿದ್ಧತೆ ನಡೆಸಿವೆ. ಭಾರತವಷ್ಟೇ ಅಲ್ಲದೆ, ವಾಷಿಂಗ್ಟನ್‌ನಿಂದ ಪ್ಯಾರಿಸ್‌ವರೆಗೆ ಜಗತ್ತಿನ ಮೂಲೆ ಮೂಲೆಗಳಲ್ಲೂ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ಆರೋಗ್ಯ ತುರ್ತು ಪರಿಸ್ಥಿತಿ

ಪ್ರಸ್ತುತ ಉತ್ತರ ಪ್ರದೇಶದಲ್ಲಿ ವಿಪರೀತ ಚಳಿಯಿದೆ. ಅಲ್ಲಿಗೆ ಬರುವ ಗಣ್ಯರು, ಭಕ್ತಾದಿಗಳಿಗೆ ಯಾವುದೇ ಆರೋಗ್ಯ ಸಮಸ್ಯೆ ಎದುರಾದರೂ ತಕ್ಷಣವೇ ಸ್ಪಂದಿಸುವಂತೆ ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ. ನಗರದ ಸ್ಥಳೀಯ ಆಸ್ಪತ್ರೆಗಳು, ಜಿಲ್ಲಾ ಆಸ್ಪತೆಗಳು ಹಾಗೂ ವೈದ್ಯಕೀಯ ಕಾಲೇಜು ಗಳಲ್ಲಿ ತುರ್ತು ಸ್ಥಿತಿಗೆಂದೇ ಹಾಸಿಗೆಗಳನ್ನು ಮೀಸಲಿಡಲಾಗಿದೆ.

ಬಳೆಗಳಿಂದ ಹಿಡಿದು ಸಿಹಿತಿನಿಸಿನವರೆಗೆ

ಶ್ರೀರಾಮ ಚಿತ್ರವುಳ್ಳ ಬಳೆಗಳಿಂದ ಹಿಡಿದು 56 ಬಗೆಯ ಪೇಠಾ, 500 ಕೆ.ಜಿ. ತೂಕದ ನಗಾರಿ, “ಒನವಿಲ್ಲು’ ಬಿಲ್ಲು, ಅಕ್ಕಿ, ಲಡ್ಡು, ತರಕಾರಿಗಳು, ವಿಶೇಷ ಸುಗಂಧದ್ರವ್ಯಗಳು, 500 ಕೆ.ಜಿ. ಕುಂಕುಮ, ಹೂವುಗಳವರೆಗೆ ದೇಶದ ಮೂಲೆ ಮೂಲೆಗಳಿಂದ ಬಗೆ ಬಗೆಯ ಉಡುಗೊರೆಗಳು ರಾಮಜನ್ಮಭೂಮಿಯನ್ನು ತಲುಪಿವೆ. ಇದಲ್ಲದೇ, 108 ಅಡಿ ಉದ್ದದ ಅಗರಬತ್ತಿ, 2100 ಕೆಜಿ ತೂಕದ ಗಂಟೆ, 1,100 ಕೆ.ಜಿ. ತೂಕದ ಬೃಹತ್‌ ದೀಪ, ಚಿನ್ನದ ಪಾದುಕೆ, 10 ಅಡಿ ಎತ್ತರದ ಬೀಗ ಮತ್ತು ಕೀಲಿಕೈ, ಗಡಿಯಾರಗಳನ್ನೂ ರಾಮ ದೇಗುಲ ನಿರ್ವಹಣಾ ಸಮಿತಿ ಸ್ವೀಕರಿಸಿದೆ. ಸೀತೆಯ ತವರಾದ ನೇಪಾಳದ ಜನಕಪುರದಿಂದ 3 ಸಾವಿರಕ್ಕೂ ಹೆಚ್ಚು ಉಡುಗೊರೆಗಳು ಬಂದಿವೆ. ಶ್ರೀಲಂಕಾದ ನಿಯೋಗವು ಅಶೋಕ ವಾಟಿಕಾದಿಂದ ವಿಶೇಷ ಉಡುಗೊರೆಯೊಂದನ್ನು ಹೊತ್ತು ತಂದಿದೆ.

ಮಂದಿರ ಉದ್ಘಾಟನೆಗೆ 7 ಸಾವಿರಕ್ಕೂ ಅಧಿಕ ಆಹ್ವಾನಿತರು
ಮಂದಿರ ಲೋಕಾರ್ಪಣೆಯ ಆಹ್ವಾನಿತರ ದೊಡ್ಡ ಪಟ್ಟಿಯಲ್ಲಿ 7 ಸಾವಿರಕ್ಕೂ ಅಧಿಕ ಗಣ್ಯರಿದ್ದಾರೆ. ಈ ಪೈಕಿ ಗಣ್ಯಾತಿಗಣ್ಯ 506 ಮಂದಿಯನ್ನು “ಎ’ ಗುಂಪಿಗೆ ಸೇರಿಸಲಾಗಿದೆ. ರಾಮಜನ್ಮಭೂಮಿಯಲ್ಲಿ ಮಂದಿರ ನಿರ್ಮಾಣಕ್ಕಾಗಿ ಹೋರಾಡಿದವರ ಕುಟುಂಬಗಳಿಗೂ ಆಹ್ವಾನ ನೀಡಲಾಗಿದೆ. ಬಾಲಿವುಡ್‌ ಸೂಪರ್‌ಸ್ಟಾರ್‌ ಅಮಿತಾಭ್‌ ಬಚ್ಚನ್‌, ಉದ್ಯಮಿಗಳಾದ ಮುಕೇಶ್‌ ಅಂಬಾನಿ, ಗೌತಮ್‌ ಅದಾನಿ, ಕ್ರೀಡಾ ದಿಗ್ಗಜ ಸಚಿನ್‌ ತೆಂಡುಲ್ಕರ್‌ರಂಥ ಗಣ್ಯರು ಮಂದಿರ ಲೋಕಾರ್ಪಣೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಇವರಲ್ಲದೇ, ಪಟ್ಟಿಯಲ್ಲೇ ಇಲ್ಲದ ಅನೇಕ ರಾಮಭಕ್ತರು ಕಾಲ್ನಡಿಗೆ ಮೂಲಕ, ಸೈಕಲ್‌ ತುಳಿಯುತ್ತಾ, ಸ್ಕೇಟಿಂಗ್‌ ಮಾಡುತ್ತಾ ಅಯೋಧ್ಯೆಯನ್ನು ತಲುಪಿದ್ದಾರೆ.

ಟಾಪ್ ನ್ಯೂಸ್

1-loka

Kalaburagi;ಅಂಗನವಾಡಿ ಸಹಾಯಕಿ ಹುದ್ದೆಗೂ ಲಂಚ: ಇಬ್ಬರು ಲೋಕಾ ಬಲೆಗೆ

Farmers Protest: ರೈತ ದಲ್ಲೇವಾಲ್‌ ಚಿಕಿತ್ಸೆ ವಿಚಾರದಲ್ಲಿ ಪಂಜಾಬ್‌ನ ನಡೆಗೆ ಸುಪ್ರೀಂ ಗರಂ

Farmers Protest: ರೈತ ದಲ್ಲೇವಾಲ್‌ ಚಿಕಿತ್ಸೆ ವಿಚಾರದಲ್ಲಿ ಪಂಜಾಬ್‌ನ ನಡೆಗೆ ಸುಪ್ರೀಂ ಗರಂ

1-DYSP

ಮಧುಗಿರಿ: ಕಚೇರಿಯಲ್ಲೇ DYSP ರಾಸಲೀಲೆ!!: ವಿಡಿಯೋ ಸೆರೆ

2024ರಲ್ಲಿ ಆಟೋ ಮೊಬೈಲ್‌ ಕ್ಷೇತ್ರಕ್ಕೆ ಲಾಭ: ದಾಖಲೆ ಮಾರಾಟ

2024ರಲ್ಲಿ ಆಟೋ ಮೊಬೈಲ್‌ ಕ್ಷೇತ್ರಕ್ಕೆ ಲಾಭ: ದಾಖಲೆ ಮಾರಾಟ

CT Ravi ಪರ ಪ್ರತಿಭಟನೆ: 30 ಕ್ಕೂ ಹೆಚ್ಚು ಮಂದಿಗೆ ನೋಟಿಸ್‌

CT Ravi ಪರ ಪ್ರತಿಭಟನೆ: 30 ಕ್ಕೂ ಹೆಚ್ಚು ಮಂದಿಗೆ ನೋಟಿಸ್‌

Bihar ಸ್ಪರ್ಧಾತ್ಮಕ ಪರೀಕ್ಷೆ ರದ್ದುಆಗ್ರಹಿಸಿ ಪ್ರಶಾಂತ್‌ ಕಿಶೋರ್‌ ನಿರಶನ

Bihar ಸ್ಪರ್ಧಾತ್ಮಕ ಪರೀಕ್ಷೆ ರದ್ದುಆಗ್ರಹಿಸಿ ಪ್ರಶಾಂತ್‌ ಕಿಶೋರ್‌ ನಿರಶನ

RBI: 2000ರೂ. ಮುಖಬೆಲೆಯ 6,691 ಕೋಟಿಯ ನೋಟು ವಾಪಸಾಗಿಲ್ಲ

RBI: 2000ರೂ. ಮುಖಬೆಲೆಯ 6,691 ಕೋಟಿಯ ನೋಟು ವಾಪಸಾಗಿಲ್ಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ayodhya: ಪೇಜಾವರ ಶ್ರೀಗಳ ನೇತೃತ್ವದಲ್ಲಿ ಇಂದು ನಡೆದ ಮಂಡಲೋತ್ಸವ

Ayodhya: ಪೇಜಾವರ ಶ್ರೀಗಳ ನೇತೃತ್ವದಲ್ಲಿ ಇಂದು ನಡೆದ ಮಂಡಲೋತ್ಸವ

ram mandir imp

Ayodhya: ವ್ಯಾಟಿಕನ್‌, ಮೆಕ್ಕಾ ಮೀರಿಸಲಿದೆ- ವರ್ಷಕ್ಕೆ ಐದು ಕೋಟಿ ಭಕ್ತರು ಭೇಟಿ ನಿರೀಕ್ಷೆ

ram mandir 2

Ayodhya: ಅಯೋಧ್ಯೆಯಲ್ಲಿ ಕರ್ನಾಟಕ ಸರಕಾರದಿಂದ ಅತಿಥಿಗೃಹ ?

yogi ram mandir

Ayodhya: ಭೇಟಿ ಬಗ್ಗೆ ಹತ್ತು ದಿನ ಮೊದಲೇ ತಿಳಿಸಿ: ವಿವಿಐಪಿಗಳಿಗೆ ಯೋಗಿ ಸರಕಾರದ ಕೋರಿಕೆ

ram mandir 2

Ram Mandir: ಭಕ್ತ ಪ್ರವಾಹ- ರಾಮನ ದರ್ಶನ ಸಮಯ ವಿಸ್ತರಣೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

4

Kaup: ರಿಕ್ಷಾ ಚಾಲಕ ನೇಣಿಗೆ ಶರಣು

12

Mangaluru: ರಸ್ತೆ ಬದಿಯ ವಿದ್ಯುತ್‌ ಕಂಬಕ್ಕೆ ಗುದ್ದಿದ ಕಾರು

5

Karkala: ಜಾಗದ ವಿಚಾರ; ಮಹಿಳೆಗೆ ಹಲ್ಲೆ; ಪ್ರಕರಣ ದಾಖಲು

1-loka

Kalaburagi;ಅಂಗನವಾಡಿ ಸಹಾಯಕಿ ಹುದ್ದೆಗೂ ಲಂಚ: ಇಬ್ಬರು ಲೋಕಾ ಬಲೆಗೆ

complaint

Manipal: ಅಪರಿಚಿತ ವ್ಯಕ್ತಿಗಳಿಂದ ಬೆದರಿಕೆ; ದೂರು ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.