ಲಡ್ಡು ತಯಾರಿಗೆ ಬೆಂಗಳೂರಿನ ತುಪ್ಪ!
Team Udayavani, Aug 6, 2020, 6:40 AM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಅಯೋಧ್ಯೆ: ರಾಮಮಂದಿರದ ಭೂಮಿಪೂಜೆ ನೆರವೇರಿದ ಸಂಭ್ರಮವನ್ನು ಆಚರಿಸುವ ಸಲುವಾಗಿ ಪಟ್ನಾ ಮೂಲದ ಮಹಾವೀರ ಮಂದಿರ ಟ್ರಸ್ಟ್ ಬರೋಬ್ಬರಿ 1.25 ಲಕ್ಷ ರಘುಪತಿ ಲಡ್ಡುಗಳನ್ನು ವಿತರಿಸಿದೆ.
ವಿಶೇಷವೆಂದರೆ, ಈ ಲಡ್ಡುಗಳನ್ನು ತಯಾರಿಸಲು ಬೆಂಗಳೂರಿನಿಂದ ತರಿಸಲಾದ ಶುದ್ಧ ತುಪ್ಪವನ್ನು ಬಳಸಲಾಗಿತ್ತು.
ದೇಶದ ವಿವಿಧ ಮೂಲೆಗಳಿಂದ ಸಾಮಗ್ರಿಗಳನ್ನು ತರಿಸಿ ಲಡ್ಡುಗಳನ್ನು ಸಿದ್ಧಪಡಿಸಲಾಗಿತ್ತು.
ಬೆಂಗಳೂರಿನ ಶುದ್ಧ ತುಪ್ಪ, ಕಾಶ್ಮೀರದ ಪುಲ್ವಾಮಾ ದಿಂದ ಕೇಸರಿ, ಕೇರಳದಿಂದ ಗೋಡಂಬಿ, ಪಟ್ನಾದಿಂದ ಒಣದ್ರಾಕ್ಷಿ, ಸಕ್ಕರೆ ಮತ್ತು ಏಲಕ್ಕಿಯನ್ನು ತರಿಸಿ ಈ ವಿಶೇಷ ಲಡ್ಡು ತಯಾರಿಸಲಾಗಿತ್ತು.
ಇನ್ನೂ ವಿಶೇಷವೆಂದರೆ, ಲಡ್ಡು ಮಾಡಲು ಬಳಸಿದ ಕಡಲೆಹಿಟ್ಟನ್ನು ದೂರದ ಆಸ್ಟ್ರೇಲಿಯಾದಿಂದ ತರಿಸಲಾಗಿತ್ತು. ಒಟ್ಟು 1.25 ಲಕ್ಷ ಲಡ್ಡುಗಳ ಪೈಕಿ 51,000 ಲಡ್ಡುಗಳನ್ನು ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ಗೆ ಹಸ್ತಾಂತರಿಸಲಾಗಿದೆ.
ಉಳಿದ ಲಡ್ಡುಗಳನ್ನು ಬಿಹಾರದ ಸೀತಾಮಡಿ ಹಾಗೂ ಶ್ರೀರಾಮನಿಗೆ ಸಂಬಂಧಿಸಿದ 25 ಯಾತ್ರಾ ಸ್ಥಳಗಳಿಗೆ ನೀಡಲಾಗಿದೆ. ಜತೆಗೆ, ಬಿಹಾರದಲ್ಲಿನ ರಾಮಭಕ್ತರಿಗೆ ವಿತರಿಸಲಾಗಿದೆ ಎಂದು ಟ್ರಸ್ಟ್ ತಿಳಿಸಿದೆ.
ರಂಗೋಲಿ ಬಿಡಿಸಿದ ಸಚಿವೆ ನಿರ್ಮಲಾ
In many homes, a rangoli/kolam is made afresh each day with rice powder. This, today, in the little temple at my place. #Ayodhya #AyodhyaBhoomipoojan @ShriRamTeerth pic.twitter.com/GsphTU9dGs
— Nirmala Sitharaman (@nsitharaman) August 5, 2020
ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಭೂಮಿ ಪೂಜೆ ಪ್ರಯುಕ್ತ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ತಮ್ಮ ಮನೆಯಲ್ಲಿ ರಂಗೋಲಿ ಬಿಡಿಸಿ ಗಮನ ಸೆಳೆದಿದ್ದಾರೆ. ರಂಗೋಲಿ ಚಿತ್ರವನ್ನು ಟ್ವೀಟ್‌ನಲ್ಲಿ ಹಂಚಿಕೊಂಡಿರುವ ಅವರು, ‘ಬಹುತೇಕ ಮನೆಗಳಲ್ಲಿ ಅಕ್ಕಿ ಹಿಟ್ಟಿನ ಮೂಲಕ ಪ್ರತಿ ದಿನವೂ ತಾಜಾ ರಂಗೋಲಿ ಬಿಡಿಸಲಾಗುತ್ತದೆ. ಇಂದು, ನನ್ನ ಮನೆಯ ಪುಟ್ಟ ದೇಗುಲದಲ್ಲಿ ಬಿಡಿಸಿದ ರಂಗೋಲಿ ಇದು’ ಎಂದು ತಿಳಿಸಿದ್ದಾರೆ. ಸಂಸ್ಕೃತದಲ್ಲಿ ಶ್ರೀ ರಾಮ್ ಜಯಂ ಎಂದು ರಂಗೋಲಿಯಲ್ಲಿ ಬರೆದಿದ್ದಾರೆ.
ಫೋಟೋ ಟ್ವೀಟ್ ಮಾಡಿದ ಪ್ರಸಾದ್
Original document of the Constitution of India has a beautiful sketch of Lord Ram, Mata Sita and Laxman returning to Ayodhya after defeating Ravan.
This is available at the beginning of the chapter related to Fundamental Rights.
Felt like sharing this with you all.#JaiShriRam pic.twitter.com/jCV9d8GWTO— Ravi Shankar Prasad (@rsprasad) August 5, 2020
ಭೂಮಿ ಪೂಜೆ ನೆರವೇರಿಸುವ ಕೆಲವೇ ಗಂಟೆಗಳ ಮುನ್ನ ಕೇಂದ್ರ ಕಾನೂನು ಸಚಿವರಾದ ರವಿಶಂಕರ್ ಪ್ರಸಾದ್, ಸಂವಿಧಾನದ ಮೂಲ ಪ್ರತಿಯಲ್ಲಿರುವ ರಾಮ, ಸೀತೆ, ಲಕ್ಷ್ಮಣರ ಚಿತ್ರವನ್ನು ಟ್ವಿಟರ್‌ನಲ್ಲಿ ಹಾಕಿದ್ದಾರೆ. ಈ ಚಿತ್ರ, ಲಂಕೆಯನ್ನು ಜಯಿಸಿದ ಅನಂತರ ಶ್ರೀರಾಮ, ಸೀತಾ ಮಾತೆ ಹಾಗೂ ಲಕ್ಷ್ಮಣರು ವಿಜಯ ದುಂಧುಬಿಯ ಜತೆಗೆ ಅಯೋಧ್ಯೆಗೆ ಹಿಂದಿರುಗಿರುವುದನ್ನು ತೋರಿಸುತ್ತದೆ. ಸಂವಿಧಾನದ ಮೂಲ ಪ್ರತಿಯಲ್ಲಿನ ಮೂಲಭೂತ ಹಕ್ಕುಗಳ ಅಧ್ಯಾಯದ ಮೊದಲ ಪುಟದಲ್ಲಿ ಇದನ್ನು ಮುದ್ರಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ayodhya: ಪೇಜಾವರ ಶ್ರೀಗಳ ನೇತೃತ್ವದಲ್ಲಿ ಇಂದು ನಡೆದ ಮಂಡಲೋತ್ಸವ
Ayodhya: ವ್ಯಾಟಿಕನ್, ಮೆಕ್ಕಾ ಮೀರಿಸಲಿದೆ- ವರ್ಷಕ್ಕೆ ಐದು ಕೋಟಿ ಭಕ್ತರು ಭೇಟಿ ನಿರೀಕ್ಷೆ
Ayodhya: ಅಯೋಧ್ಯೆಯಲ್ಲಿ ಕರ್ನಾಟಕ ಸರಕಾರದಿಂದ ಅತಿಥಿಗೃಹ ?
Ayodhya: ಭೇಟಿ ಬಗ್ಗೆ ಹತ್ತು ದಿನ ಮೊದಲೇ ತಿಳಿಸಿ: ವಿವಿಐಪಿಗಳಿಗೆ ಯೋಗಿ ಸರಕಾರದ ಕೋರಿಕೆ
Ram Mandir: ಭಕ್ತ ಪ್ರವಾಹ- ರಾಮನ ದರ್ಶನ ಸಮಯ ವಿಸ್ತರಣೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Tollywood: ಹೊಸ ವರ್ಷಕ್ಕೆ ಟಾಲಿವುಡ್‌ನಲ್ಲಿ ಸಾಲು ಸಾಲು ಹಳೆ ಸಿನಿಮಾಗಳು ರೀ- ರಿಲೀಸ್
Kambala: ಡಿ.28-29ರಂದು 8ನೇ ವರ್ಷದ ‘ಮಂಗಳೂರು ಕಂಬಳ’: ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ
Bidar; ಖರ್ಗೆ ಆಪ್ತನಿಂದ ವಂಚನೆ, ಕೊಲೆ ಬೆದರಿಕೆ; ಪತ್ರ ಬರೆದಿಟ್ಟು ಗುತ್ತಿಗೆದಾರ ಆತ್ಮಹತ್ಯೆ
Ullala: ಗ್ಯಾಸ್ ಸಿಲಿಂಡರ್ ಸ್ಫೋ*ಟ ಪ್ರಕರಣ: ಸಾವಿನ ಸಂಖ್ಯೆ 2ಕ್ಕೆ ಏರಿಕೆ
Actress: ರೊಮ್ಯಾನ್ಸ್ ಮಾಡಿಕೊಂಡು ಇರುತ್ತೇನೆ ಮದುವೆ ಆಗೋದೆ ಇಲ್ಲ ಎಂದ ನಟಿ ಶ್ರುತಿ ಹಾಸನ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.