ಜಗತ್ತಿನ ಅದ್ಭುತಗಳ ನಾಚಿಸುವಂತೆ ಶ್ರೀರಾಮಮಂದಿರ ನಿರ್ಮಾಣ!
3 ಮಹಡಿ, ಮ್ಯೂಸಿಯಂ, ರಾಮಕಥೆ ಸಾರುವ ಉದ್ಯಾನ ; 27 ಮರಗಳ "ನಕ್ಷತ್ರವಾಟಿಕಾ' ಸೃಷ್ಟಿ
Team Udayavani, Jul 23, 2020, 10:34 AM IST
ಸಾಂದರ್ಭಿಕ ಚಿತ್ರ
ಅಯೋಧ್ಯೆ: ಸರಯೂ ನದಿಯ ತಟದಲ್ಲಿ ಎದ್ದುನಿಲ್ಲಲಿರುವ ಭವ್ಯ ರಾಮಮಂದಿರದ ಚೆಲುವು ಜಗದ ಅದ್ಭುತಗಳನ್ನೂ ನಾಚಿಸಲಿದೆ. ಮೂರು ಮಹಡಿ, ಮ್ಯೂಸಿಯಂ, ನಕ್ಷತ್ರ ವಾಟಿಕಾ, ರಾಮ್‌ಕಥಾಪುಂಜ್ ಉದ್ಯಾನ! ಹೀಗೆ ಹಲವು ಸೌಂದರ್ಯರಾಶಿಗಳೊಂದಿಗೆ ಸಹಸ್ರ ಪುಣ್ಯಧಾಮ ಅಯೋಧ್ಯೆ ಮೈದಳೆಯಲಿದೆ. ಉದ್ದೇಶಿತ ರಾಮಮಂದಿರ 10 ಎಕರೆ ಪ್ರದೇಶದ ಕಲಾಸೃಷ್ಟಿಯಾಗಿದ್ದು, ಉಳಿದ 57 ಎಕರೆಯಲ್ಲಿ ರಾಮ ದೇಗುಲದ ಸಂಕೀರ್ಣ ನಿರ್ಮಾಣಗೊಳ್ಳಲಿದೆ. ದೇಗುಲ
ಸಂಕೀರ್ಣದಲ್ಲಿ ರಚನೆಗೊಳ್ಳುವ “ನಕ್ಷತ್ರ ವಾಟಿಕಾ’ ಭಕ್ತಿಲೋಕವನ್ನು ಧರೆಗಿಳಿಸಲಿದೆ.
ಏನಿದು ನಕ್ಷತ್ರವಾಟಿಕಾ?: ಇದು ಹಿಂದೂಗಳು ನಂಬಿಕೆಯ 27 ನಕ್ಷತ್ರಗಳನ್ನು ಪ್ರತಿನಿಧಿಸುವ ಮರಗಳ ಸಮೂಹ. ಜನರು ತಮ್ಮ ಜನ್ಮನಕ್ಷತ್ರಗಳಿಗೆ ಅನುಗುಣವಾಗಿ ಆಯಾ ಮರದ ಕೆಳಗೆ ಕುಳಿತು ಶ್ರೀರಾಮನಿಗೆ ಪ್ರಾರ್ಥನೆ ಸಲ್ಲಿಸಬಹುದು. ಅಲ್ಲದೆ, ವಾಲ್ಮೀಕಿ ರಾಮಾಯಣದಲ್ಲಿ ಉಲ್ಲೇಖವಾದ ಮರಗಳನ್ನೂ ಇದರ ಸಮೀಪವೇ ನೆಡಲು ರಾಮಜನ್ಮಭೂಮಿ ಟ್ರಸ್ಟ್ ಮುಂದಾಗಿದೆ.
ರಾಮಧ್ಯಾನದ ಉದ್ಯಾನ: ರಾಮ ದೇಗುಲ ಆವರಣದ ಸಮೀಪದಲ್ಲೇ ಶ್ರೀರಾಮನ ಬದುಕಿನ ಕಥೆ ಸಾರುವ ರಾಮ್‌ಕಥಾ ಕುಂಜ್ ಪಾರ್ಕ್ ರೂಪುತಳೆಯಲಿದೆ.
ಇದರ ಪಕ್ಕದಲ್ಲೇ ಉತ್ಖನನ ವೇಳೆ ದೊರೆತ ಶಿಲ್ಪಾ ಕೃತಿಗಳನ್ನು ಒಳಗೊಂಡ ಮ್ಯೂಸಿಯಂ ಸೃಷ್ಟಿಯಾಗಲಿದೆ. ಗೋಶಾಲೆ, ಧರ್ಮಶಾಲೆಯಿಂದ ರಾಮ ಜನ್ಮಭೂಮಿ ಕಳೆಗಟ್ಟಲಿದೆ. ಆಗಸ್ಟ್ 5ರ ಭೂಮಿಪೂಜೆಯ ನಂತರ ದೇಗುಲ ಸಂಕೀರ್ಣದಲ್ಲಿ ಶೇಷಾವತಾರ ಸನ್ನಿಧಾನವನ್ನು ತಾತ್ಕಾಲಿಕವಾಗಿ ನಿರ್ಮಿಸಲು ಟ್ರಸ್ಟ್ ಯೋಜಿಸಿ
ಅಡಿಪಾಯದಲ್ಲಿ ದೇಗುಲ ವಿವರ
ರಾಮಮಂದಿರದ ಭೂಮಿ ಪೂಜೆಗೆ ತಾಮ್ರಫಲಕವನ್ನು ಸಿದ್ಧಪಡಿಸಲಾಗುತ್ತಿದೆ. ದೇಗುಲದ ಹೆಸರು, ಸ್ಥಳ, ನಕ್ಷತ್ರರಾಶಿ, ಕಾಲವನ್ನು ಸಂಸ್ಕೃತ ಭಾಷೆಯಲ್ಲಿ
ತಾಮ್ರದ ಫಲಕದ ಮೇಲೆ ಬರೆದು ಅಡಿಪಾಯದಲ್ಲಿ ಸ್ಥಾಪಿಸಲಾಗುತ್ತದೆ.
ಸಿಂಘಲ್ ಆಶಯದಂತೆ ಸಂಗಮದ ನೀರು, ಮೃತ್ತಿಕ
ಗಂಗಾ, ಯಮುನಾ ಮತ್ತು ಪೌರಾಣಿಕ ಸರಸ್ವತಿ ನದಿಯ ಸಂಗಮ ಕ್ಷೇತ್ರದಿಂದ ಪವಿತ್ರ ಮಣ್ಣು, ನೀರನ್ನು ರಾಮಮಂದಿರದ ಭೂಮಿಪೂಜೆಗೆ ಬಳಸಲಾಗುತ್ತದೆ. ವಿಹಿಂಪ ಮಾಜಿ ಅಧ್ಯಕ್ಷ, ದಿ. ಅಶೋಕ್ ಸಿಂಘಲ್ ಆಶಯದಂತೆ ಈ ಕಾರ್ಯ ನೆರವೇರಲಿದೆ. ಭೂಮಿ ಪೂಜೆ ದಿನದಂದು ಎಲ್ಲ ಹಿಂದೂ ಮನೆಗಳಲ್ಲಿ ದೀಪ ಬೆಳಗಿಸುವ ಕಾರ್ಯಕ್ರಮವನ್ನು ವಿಹಿಂಪ ಆಯೋಜಿಸಿದೆ. ದೇಶದ ಎಲ್ಲ ದೇವಾಲಯ, ಮಠಗಳಲ್ಲಿ ವಿಶೇಷ ಪೂಜೆಗಳು ನೆರವೇರಲಿವೆ ಎಂದು ವಿಹಿಂಪ ವಕ್ತಾರ ಅಶ್ವನಿ ಮಿಶ್ರಾ ಹೇಳಿದ್ದಾರೆ.
ಫಾಲ್ಗು ನದಿ ಮರಳು
ಭೂಮಿಪೂಜೆಗೆ ಬಿಹಾರದ ಫಾಲ್ಗು ನದಿಯ ಮರಳನ್ನು ಬಳಸಲು ಟ್ರಸ್ಟ್ ನಿರ್ಧರಿಸಿದೆ. ಫಾಲ್ಗು ಹಿಂದೂಗಳ ಪಾಲಿಗೆ ಪವಿತ್ರ ನದಿ. ಭಗವಾನ್ ಶ್ರೀರಾಮನು ಸೀತೆ, ಲಕ್ಷ್ಮಣರೊಂದಿಗೆ ಇದೇ ನದಿಯ ದಡದಲ್ಲಿ ದಶರಥನಿಗೆ ಪಿಂಡಪ್ರದಾನ ನೆರವೇರಿಸಿದ್ದ ಎಂದು ರಾಮಾಯಣ ಹೇಳುತ್ತದೆ. ಈಗಲೂ ಈ ತಾಣ ಪಿಂಡಪ್ರದಾನಕ್ಕೆ
ಹೆಸರುವಾಸಿ. ಅಲ್ಲದೆ, ಏಳು ಸಮುದ್ರಗಳು ಹಾಗೂ ದೇಶದ ಪ್ರಮುಖ ಧಾರ್ಮಿಕ ನದಿಗಳ ನೀರನ್ನು ಭೂಮಿಪೂಜೆಗೆ ಬಳಸಲು ನಿರ್ಧರಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Parliament; ಪ್ರಿಯಾಂಕಾ ಗಾಂಧಿ- ರಾಹುಲ್ ಜತೆ ಸೇರಿ ಬಿಜೆಪಿ ನಿದ್ದೆಗೆಡಿಸುತ್ತಾರೆ :ಪೈಲಟ್
Goa ಕರಾವಳಿಯಲ್ಲಿ ನೌಕಾಪಡೆಯ ಸಬ್ ಮರೈನ್ ಗೆ ಡಿಕ್ಕಿ ಹೊಡೆದ ಬೋಟ್-ಇಬ್ಬರು ನಾಪತ್ತೆ!
Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
MUST WATCH
ಹೊಸ ಸೇರ್ಪಡೆ
IFFI 2024: ಇದು ಕನ್ನಡದಲ್ಲೇ ಸಿನಿಮಾಗಳನ್ನು ಮಾಡುವ ಕಾಲ: ಚಿದಾನಂದ ಎಸ್. ನಾಯಕ್
School; ಮೊಟ್ಟೆ-ಬಾಳೆಹಣ್ಣು ವಿತರಣಾ ಜವಾಬ್ದಾರಿಯಿಂದ ಶಿಕ್ಷಕರ ಬಿಡುಗಡೆಗೊಳಿಸಿ
Shimoga: ಅರಣ್ಯ ಇಲಾಖೆ ಜತೆ ಸೇರಿ ಕಾಡಾನೆಗಳನ್ನು ಓಡಿಸಿದ ಜನ
ಬೆಳಗಾವಿ-ಐಫೋನ್‌ಗಾಗಿ ನಡೆಯಿತಾ ಯುವಕನ ಹತ್ಯೆ? ಪೊಲೀಸರಿಂದ ತೀವ್ರ ತನಿಖೆ
IPL: ಇನ್ನು ಮೂರು ಸೀಸನ್ ಐಪಿಎಲ್ ಗೆ ಈ ದೇಶಗಳ ಆಟಗಾರರು ಸಂಪೂರ್ಣ ಲಭ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.