Ayodhya: ಪ್ರಾಣ ಪ್ರತಿಷ್ಠಾಪನೆಯೊಂದಿಗೆ 11ದಿನಗಳ ವಿಶೇಷ ವ್ರತ ಅಂತ್ಯಗೊಳಿಸಿದ ಪ್ರಧಾನಿ ಮೋದಿ
Team Udayavani, Jan 22, 2024, 2:53 PM IST
ಅಯೋಧ್ಯೆ: ಹಲವು ಶತಮಾನಗಳ ಕಾಯುವಿಕೆ, ತಪಸ್ಸಿಗೆ ಇಂದು ಫಲ ಸಿಕ್ಕಿತು. ಇದರೊಂದಿಗೆ ಭವ್ಯವಾದ ಶ್ರೀರಾಮಮಂದಿರವು ರಾಮನ ಜನ್ಮಭೂಮಿಯಲ್ಲಿ ಉದ್ಘಾಟನೆಗೊಂಡಿತು. ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಕೆತ್ತಿರುವ 51 ಇಂಚಿನ ಬಾಲರಾಮನ ವಿಗ್ರಹಕ್ಕೆ ಪ್ರಾಣಪ್ರತಿಷ್ಠಾಪನೆ ನೆರವೇರಿತು ಇದರೊಂದಿಗೆ ಮಂದಿರದ ಉದ್ಘಾಟನೆಯೂ ನಡೆಯಲಿದೆ.
ಪ್ರಾಣ ಪ್ರತಿಷ್ಠಾ ಸಮಾರಂಭವನ್ನು ಪೂರ್ಣಗೊಳಿಸಿದ ನಂತರ, ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ 11 ದಿನಗಳ ಉಪವಾಸವನ್ನು ಸಹ ಕೊನೆಗೊಳಿಸಿದರು. ಗೌರವಾನ್ವಿತ ಸಂತ ಸ್ವಾಮಿ ಗೋವಿಂದ್ ದೇವ್ ಅವರು ಪ್ರಧಾನಿ ಅವರಿಗೆ ಚರಣಾಮೃತವನ್ನು ಕುಡಿಸುವ ಮೂಲಕ ಹನ್ನೊಂದು ದಿನಗಳ ಕಾಲ ಆಚರಣೆ ಮಾಡಿದ್ದ ವೃತವನ್ನು ಕೊನೆಗೊಳಿಸಿದರು.
ಇದಕ್ಕೂ ಮುನ್ನ ತಮ್ಮ ಭಾಷಣದ ವೇಳೆ ಭಾವುಕರಾಗಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕೊಂಡಾಡಿದ ಸಂತರು, ಛತ್ರಪತಿ ಶಿವಾಜಿ ಮಹಾರಾಜರ ನಂತರ ಕಠೋರ ತಪಸ್ಸಿಗೆ ಹೆದರದ ಇಂತಹ ರಾಜ ದೇಶಕ್ಕೆ ಸಿಕ್ಕಿದ್ದಾರೆ ಎಂದು ಹೇಳಿದರು.
ಸಂತ ಸ್ವಾಮಿ ಗೋವಿಂದ್ ದೇವ್ ಅವರು ರಾಮ್ ಲಲ್ಲಾ ಪ್ರಾಣ ಪ್ರತಿಷ್ಠಾ ನಂತರ ವೇದಿಕೆಯಿಂದ ಪ್ರಧಾನ ಮಂತ್ರಿಗೆ ಕೃತಜ್ಞತೆ ಸಲ್ಲಿಸಿದರು. ಪ್ರಾಣ ಪ್ರತಿಷ್ಠಾಪನೆಯ ಹಿನ್ನೆಲೆಯಲ್ಲಿ ಪ್ರಧಾನಿ ಅವರಿಗೆ ಮೂರು ದಿನ ಉಪವಾಸ ಮಾಡಬೇಕು ಎಂದು ಹೇಳಿದ್ದೆವು ಆದರೆ ನಮ್ಮ ಪ್ರಧಾನಿ 11 ದಿನ ಉಪವಾಸ ಮಾಡಿದರು. ನಾವು ಒಂದು ಹೊತ್ತಿನ ಊಟ ಮಾಡೋಣ ಎಂದು ಕೇಳಿದಾಗ ಅವರು ಆಹಾರ ತ್ಯಜಿಸಿ ಹಣ್ಣುಗಳನ್ನೇ ತಿಂದರು. ನಾವು ಅವರಿಗೆ ಒಂದು ಹೊದಿಕೆಯೊಂದಿಗೆ ಮಲಗಲು ಹೇಳಿದೆವು ಆದ್ದರಿಂದ ಅವರು ಇಡೀ ಆಚರಣೆಯ ಸಮಯದಲ್ಲಿ ಅದೇ ಹೊದಿಕೆಯಲ್ಲಿ ಮಲಗಲು ವಾಗ್ದಾನ ಮಾಡಿದರು. ಇಲ್ಲಿನ ಚಳಿಯನ್ನೂ ಲೆಕ್ಕಿಸದೆ ಕಠಿಣ ವೃತವನ್ನು ಆಚರಿಸುವ ಮೂಲಕ ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡರು ಎಂದು ಹೇಳಿದರು.
ಈ ಸಂದರ್ಭದಲ್ಲಿ ನಾನು ಶಿವಾಜಿ ಮಹಾರಾಜರನ್ನು ಉಲ್ಲೇಖಿಸಲು ಬಯಸುತ್ತೇನೆ ಎಂದು ಹೇಳಿದ ಅವರು ಭಾರತದ ಶ್ರೇಷ್ಠ ಸಂಪ್ರದಾಯದಲ್ಲಿ ಶಿವಾಜಿ ಮಹಾರಾಜರಂತಹ ರಾಜ ಇರಲಿಲ್ಲ ಎಂದು ಪೂಜ್ಯ ಸಂತರು ಹೇಳಿದರು. ಈಗ ನಮಗೆ ನರೇಂದ್ರ ಮೋದಿಯ ರೂಪದಲ್ಲಿ ಅಂತಹ ರಾಜ ಸಿಕ್ಕಿದ್ದಾರೆ ಎಂದು ಹೇಳಿದರು.
#WATCH | PM Narendra Modi breaks his fast after the ‘Pran Pratishtha’ ceremony at the Shri Ram Janmaboomi Temple in Ayodhya. #RamMandirPranPrathistha pic.twitter.com/Zng1IHJ2FJ
— ANI (@ANI) January 22, 2024
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ
Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು
Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!
Mohali: ನಾಲ್ಕಂತಸ್ತಿನ ಕಟ್ಟಡ ಕುಸಿದು 20 ವರ್ಷದ ಯುವತಿ ಸಾವು
Ayyappa Temple: ಶಬರಿಮಲೆಗೆ ಭಕ್ತರ ಪ್ರವಾಹ: ಸ್ಪಾಟ್ ಬುಕ್ಕಿಂಗ್ ತಾತ್ಕಾಲಿಕ ರದ್ದು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Harapanahalli: ಪ್ರತಿಷ್ಠೆಯ ಕಣವಾದ ಬಿ90 ಸೊಸೈಟಿ ಚುನಾವಣೆ
Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ
Hysteroscopy: ಸಂತಾನಹೀನತೆಯ ಪತ್ತೆ ಮತ್ತು ಚಿಕಿತ್ಸೆಗೆ ಒಂದು ಅತ್ಯವಶ್ಯಕ ಕಾರ್ಯವಿಧಾನ
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬಗ್ಗೆ ಅವಹೇಳನಕಾರಿ ಪದಬಳಕೆ: ಪ್ರಸಾದ್ ರಾಜ್ ಕಾಂಚನ್ ಖಂಡನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.