![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Jan 10, 2024, 6:15 AM IST
ಲಕ್ನೋ: ಅಯೋಧ್ಯೆಯ ಶ್ರೀರಾಮ ಮಂದಿರ ನಿರ್ಮಾಣವನ್ನು ಇಡೀ ವಿಶ್ವ ಬೆರಗುಕಣ್ಣಿನಲ್ಲಿ ನೋಡುತ್ತಿರುವಂತೆಯೇ, ಮಂದಿರದ ವಾಸ್ತುಶಿಲ್ಪ ವೈಶಿಷ್ಟ್ಯಕ್ಕೆ ಮತ್ತೂಂದು ಗರಿ ಮೂಡಿಸುವ ದೇಶದ ಅತೀ ಎತ್ತರದ ಗರುಡಗಂಬ ಮಂಗ ಳ ವಾ ರ ಅಯೋಧ್ಯೆ ತಲುಪಿದೆ.
44 ಅಡಿ ಎತ್ತರ ಹಾಗೂ 5,500 ಕೆ.ಜಿ. ತೂಕ ವಿರುವ ಈ ಗರುಡಗಂಬವನ್ನು ಸಂಪೂರ್ಣ ಹಿತ್ತಾಳೆಯಿಂದ ನಿರ್ಮಿಸಲಾಗಿದ್ದು, ಗುಜರಾತ್‌ನ ಅಹ್ಮದಾಬಾದ್‌ನ ಶ್ರೀ ಅಂಬಿಕಾ ಎಂಜಿನಿ ಯರಿಂಗ್ ವರ್ಕ್ಸ್ ಸಂಸ್ಥೆಯು ಈ ಧ್ವಜದಂಡವನ್ನು ಅಭಿವೃದ್ಧಿಪಡಿಸಿದೆ. ಪ್ರಾಚೀನ ಹಿಂದೂ ಧರ್ಮ ಗ್ರಂಥಗಳಲ್ಲಿ ಉಲ್ಲೇಖವಾಗಿರುವಂಥ ಶಿಲಾ ಶಾಸ್ತ್ರದ ಪ್ರಕಾರವೇ ಗರುಡಗಂಬವನ್ನು ಕೆತ್ತನೆ ಮಾಡಲಾ ಗಿದ್ದು, ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರು ಗರುಡಗಂಬವನ್ನು ಜ.5ರಂದು ಅನಾವರಣಗೊಳಿಸಿದ್ದರು. ಇದೀಗ 450 ಕೆ.ಜಿ. ತೂಕದ ವಿಶೇಷ ರಥವೊಂದರಲ್ಲಿ ಗುಜರಾತ್‌ನಿಂದ ಅಯೋಧ್ಯೆಗೆ ರಥವನ್ನು ತಲುಪಿಸಲಾಗಿದೆ ಎಂದು ಮಂದಿರ ಟ್ರಸ್ಟ್‌ನ ಅಧಿಕಾರಿಗಳು ತಿಳಿಸಿದ್ದಾರೆ.
ಮೋದಿಯಿಂದ ಧ್ವಜಾರೋಹಣ
ಜ.22ರಂದು ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆ ನೆರವೇರಿದ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರೇ ಗರುಡಗಂಬಕ್ಕೆ ಕೇಸರಿ ಧ್ವಜವನ್ನು ಆರೋಹಣ ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಏನಿದು ಧ್ವಜದಂಡ?
ದೇಗುಲಗಳ ಮುಂದೆ ಗರ್ಭಗುಡಿಗೆ ನೇರವಾಗಿ ನಿರ್ಮಿಸುವ ಸ್ತಂಭವೇ ಧ್ವಜದಂಡ. ಭೂಮಿ ಮತ್ತು ಸ್ವರ್ಗದ ನಡುವಿನ ಸಂಕೇತವಾಗಿರುವ ಈ ಸ್ತಂಭವು ದೇಗುಲ ಇರುವವರೆಗೂ ಶಾಶ್ವತವಾಗಿರಲಿದೆ. ವಿಶೇಷವಾಗಿ ರಾಮ ಮಂದಿರದಲ್ಲಿ ಸ್ಥಾಪನೆಗೊಳ್ಳಲಿರುವ ಧ್ವಜದಂಡವು ಭಾರತದಲ್ಲೇ ಅತಿ ಎತ್ತರದ ಧ್ವಜಸ್ತಂಭವಾಗಿದೆ. 44 ಅಡಿ ಎತ್ತ ರ, 9.5 ಇಂಚು ವ್ಯಾಸ, 5,500 ಕೆ.ಜಿ. ತೂಕ ಇದರ ವೈಶಿಷ್ಟ್ಯ.
ಶೀಘ್ರ ಅಯೋಧ್ಯೆಗೆ ಹೆಲಿಕಾಪ್ಟರ್ ಸೇವೆ
ರಾಮ ಮಂದಿರ ಉದ್ಘಾಟನೆಗೆ ಆಗಮಿಸುತ್ತಿರುವ ಭಕ್ತಾದಿಗಳ ಪ್ರಯಾಣವನ್ನು ಸುಗಮವಾಗಿಸುವ ನಿಟ್ಟಿನಲ್ಲಿ ಅಯೋಧ್ಯೆಯಲ್ಲಿ ಹೆಲಿಕಾಪ್ಟರ್ ಸೇವೆ ಗಳನ್ನು ಶೀಘ್ರವೇ ಆರಂಭಿಸಲಾಗುವುದು ಎಂದು ಉತ್ತರ ಪ್ರದೇಶ ಸಂಸ್ಕೃತಿ ಸಚಿವ ಜೈವೀರ್ ಸಿಂಗ್ ಹೇಳಿದ್ದಾರೆ. ಈಗಾಗಲೇ ವಿಮಾನ ಸೇವೆಗಳು ಲಭ್ಯವಿದೆ ಅದರ ಜತೆಗೆ ಕಾಪ್ಟರ್‌ಗಳನ್ನೂ ಪರಿಚಯಿ ಸಲಾಗುತ್ತದೆ ಎಂದಿದ್ದಾರೆ. ಜತೆಗೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವುದನ್ನು ಗಮನದಲ್ಲಿರಿ ಸಿಕೊಂಡು ರೈಲ್ವೇ ಸೇವೆಯನ್ನೂ ವಿಸ್ತರಿಸಿ ಹೆಚ್ಚಿನ ರೈಲುಗಳ ನಿಯೋಜನೆಗೂ ಯೋಜಿಸಲಾಗಿದೆ ಎಂದಿದ್ದಾರೆ.
ಜ.17ರ ರಾಮಲಲ್ಲಾ ನಗರಯಾತ್ರೆ ರದ್ದು: ದೇವಳದ ಆವರಣದಲ್ಲಷ್ಟೇ ಮೆರವಣಿಗೆ
ರಾಮಲಲ್ಲಾನ ವಿಗ್ರಹವನ್ನು ಅಯೋಧ್ಯೆಯ ನಗರಪೂರ್ತಿ ಮೆರವಣಿಗೆ ಮಾಡಲು ಯೋಜಿಸಿದ್ದ ನಗರಯಾತ್ರೆ ಸಮಾರಂಭವನ್ನು ಭದ್ರತಾ ಕಾರಣಗಳ ಹಿನ್ನೆಲೆಯಲ್ಲಿ ಕೈ ಬಿಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಜ.22ರ ಪ್ರಾಣಪ್ರತಿಷ್ಠೆ ಸಮಾರಂಭಕ್ಕೂ ಮುನ್ನ ಪ್ರತಿಷ್ಠಾಪನೆ ವಿಗ್ರಹ ಅಂತಿಮ ಗೊಳಿಸಿ ಕರ್ಮ ಕುಟೀರ ಶಾಸ್ತ್ರವನ್ನು ಜ.16ಕ್ಕೆ ಮುಕ್ತಾಯಗೊಳಿಸಲಾಗುತ್ತದೆ. ಆ ಬಳಿಕ ಜ.17ರಿಂದ ಅಯೋಧ್ಯಾ ನಗರದಲ್ಲಿ ರಾಮಲಲ್ಲಾನ ಮೆರವಣಿಗೆ ನಡೆಸಲು ನಗರಯಾತ್ರೆ ಯೋಜಿಸಲಾಗಿತ್ತು. ಆದರೆ ಅಂದು ಜನಸಂಖ್ಯೆ ಹೆಚ್ಚಿರುವುದನ್ನು ಪರಿಗಣಿಸಿ ಅದನ್ನು ರದ್ದುಗೊಳಿಸಿ, ಮಂದಿರದ ಸಂಕೀರ್ಣದ ಒಳಗೇ ಮೆರವಣಿಗೆ ಆಯೋಜಿಸಲಾಗಿದೆ ಎಂದು ಮೂಲಗಳು ಹೇಳಿವೆ.
ಪ್ರವಾಸಿಗರ ಅನುಕೂಲಕ್ಕೆ ಹೊಸ ನಕ್ಷೆ
ಲಕ್ನೋ: ಮಂದಿರ ಉದ್ಘಾಟನೆ ಹಿನ್ನೆಲೆಯಲ್ಲಿ ದೇಶ ವಿದೇಶಗಳಿಂದಲೂ ಅಯೋಧ್ಯೆಗೆ ತೆರಳಲು ಜನರು ಸಿದ್ಧತೆ ನಡೆಸುತ್ತಿರುವ ನಡುವೆಯೇ ಯಾತ್ರಾರ್ಥಿಗಳ ಪ್ರಯಾಣಕ್ಕೆ ಅನುಕೂಲವಾಗುವಂತೆ ನೂತನ ಅಯೋಧ್ಯೆ ನಕ್ಷೆಯನ್ನು ರಚಿಸಲಾಗಿದೆ. ಜೆನೆಸಿಸ್ ಇಂಟರ್‌ನ್ಯಾಶನಲ್ ಸಂಸ್ಥೆ ಅಭಿವೃದ್ಧಿಪಡಿಸಿರುವ ಮೂರು ಆಯಾಮದ ನಕ್ಷೆಯನ್ನು ಅಂತಿಮ ಗೊಳಿಸಲಾಗಿದೆ. ರಸ್ತೆಗಳ ಬಗ್ಗೆ ಮಾತ್ರವಲ್ಲದೇ, ಅಯೋಧ್ಯೆಯ ಎಲ್ಲ ಕಟ್ಟಡ ಗಳ ಬಗ್ಗೆಯೂ ನಿಖರ ಮಾಹಿತಿಯನ್ನು ಈ ನಕ್ಷೆ ಹೊಂದಿದ್ದು, ಹೊಟೇಲ್‌ಗಳು, ಇ ವಾಹನಗಳ ಬಗ್ಗೆ ಮಾಹಿತಿ ಜತೆಗೆ ಭದ್ರತಾ ನಿರ್ವಹಣೆ, ತುರ್ತು ಪರಿಸ್ಥಿತಿ ಪ್ರತಿಕ್ರಿಯೆ ಮಾಹಿತಿಯನ್ನೂ ಒದಗಿಸಲಿದೆ. ಅಯೋಧ್ಯಾ ಅಭಿವೃದ್ಧಿ ಪ್ರಾಧಿಕಾರ ಬಿಡುಗಡೆಗೊಳಿಸಲು ಯೋಜಿಸಿರುವ ಅಪ್ಲಿಕೇಶನ್‌ನಲ್ಲೇ ಈ ನಕ್ಷೆಯೂ ದೊರೆಯುವ ನಿರೀಕ್ಷೆ ಇದೆ ಎನ್ನಲಾಗಿದೆ.
ಹರಿಹರನ್ ರಾಮಭಜನೆಗೆ ಪ್ರಧಾನಿ ಮೋದಿ ಶ್ಲಾಘನೆ
ಖ್ಯಾತ ಸಂಗೀತ ಸಂಯೋಜಕ, ಗಾಯಕ ಹರಿಹರನ್ ಅವರು ಹಾಡಿರುವ ರಾಮಭಜನೆಯನ್ನು ಪ್ರಧಾನಿ ನರೇಂದ್ರ ಮೋದಿ ಎಕ್ಸ್ ನಲ್ಲಿ ಹಂಚಿಕೊಂಡಿದ್ದು, ಭಾವ ಪೂರ್ಣ ಭಕ್ತಿ ಗೀತೆಯನ್ನು ಕೇಳಿ ಆನಂದಿಸುವಂತೆ ನೆಟ್ಟಿಗರಿಗೆ ಕರೆ ನೀಡಿದ್ದಾರೆ. ಹಾಡಿನ ಲಿಂಕ್ ಹಂಚಿಕೊಂಡಿರುವ ಪ್ರಧಾನಿ, ಹರಿಹರನ್ ಅವರ ಈ ಸುಮಧುರ ಗೀತೆಯು ಕೇಳುಗರನ್ನು ರಾಮನ ಭಕ್ತಿಯಲ್ಲಿ ಮುಳುಗಿಸಲಿದೆ ಎಂದು ಶ್ಲಾಘಿಸಿದ್ದಾರೆ. ಇದಕ್ಕೂ ಮುನ್ನ ಗುಜರಾತಿ ಹಾಡುಗಾತಿ ಗೀತಾ ರಾಬರಿ ಅವರ ರಾಮ ಭಜನೆ ಯನ್ನೂ ಮೋದಿ ಹಂಚಿಕೊಂಡಿದ್ದರು. ಈ ಮೂಲಕ ದೇಶವಾಸಿಗಳು ರಾಮನನ್ನು ಆರಾಧಿಸುತ್ತಿರುವ ಪರಿ ಬಗ್ಗೆ ಸಂತಸ ವ್ಯಕ್ತಪಡಿಸಿದ್ದರು.
ಜ.22ಕ್ಕೆ ಉ.ಪ್ರ. ಶಾಲಾ ಕಾಲೇಜುಗಳಿಗೆ ರಜೆ
ಲಕ್ನೋ: ರಾಮ ಮಂದಿರ ಉದ್ಘಾಟನೆ ದಿನ ಉತ್ತರ ಪ್ರದೇಶದಾದ್ಯಂತ ಎಲ್ಲ ಶಾಲಾ ಕಾಲೇಜುಗಳಿಗೆ ರಜೆ ನೀಡುವಂತೆ ಸರಕಾರ ಆದೇಶಿಸಿದೆ. ಅಲ್ಲದೆ ಮದ್ಯ ಮಾರಾಟವನ್ನೂ ನಿಷೇಧಿಸಲು ಪ್ರಸ್ತಾವಿಸಲಾಗಿದೆ. ಈಗಾಗಲೇ ಜ.22 ರಂದು ಮಾಂಸ ಮಾರಾಟ ನಿಷೇಧಿ ಸಲಾಗಿದೆ. ಅದರ ಬೆನ್ನಲ್ಲೇ ಮದ್ಯ ಮಾರಾಟ ನಿಷೇಧಿಸಲು ಸರಕಾರ ಯೋಜಿಸಿದೆ.
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
You seem to have an Ad Blocker on.
To continue reading, please turn it off or whitelist Udayavani.