Ram Temple: ಶ್ರೀರಾಮನ ಟ್ಯಾಟೋ ಬಿಡಿಸುವ ಅಭಿಯಾನಕ್ಕೆ ಚಾಲನೆ
ಆಸಕ್ತರು ಬಂದು ಉಚಿತವಾಗಿ ಟ್ಯಾಟೋ ತೆಗೆಸಿಕೊಳ್ಳಬಹುದು
Team Udayavani, Jan 16, 2024, 4:15 PM IST
ಉದಯವಾಣಿ ಸಮಾಚಾರ
ಬೆಳಗಾವಿ: ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಉದ್ಘಾಟನೆ ಹಿನ್ನೆಲೆಯಲ್ಲಿ ದಕ್ಷಿಣ ಮತಕ್ಷೇತ್ರದ ಶಾಸಕ ಅಭಯ ಪಾಟೀಲ ಅವರು ರಾಮ ಭಕ್ತರ ಕೈ ಮೇಲೆ ಉಚಿತವಾಗಿ ರಾಮನ ಪ್ರತಿಮೆ, ಜೈ ಶ್ರೀರಾಮ ಟ್ಯಾಟೋ(ಹಚ್ಚೆ) ತೆಗೆಯುವ ಅಭಿಯಾನಕ್ಕೆ ಚಾಲನೆ ನೀಡಿದರು.
ನಗರದ ಹಳೆ ಪಿ. . ರಸ್ತೆಯ ಅಭಯ ಪಾಟೀಲ ಅವರ ಕಚೇರಿ ಆವರಣದಲ್ಲಿ ಸೋಮವಾರ ಮೊದಲ ದಿನ ಸಾಂಕೇತಿಕವಾಗಿ ಸುಮಾರು 90ಕ್ಕೂ ಹೆಚ್ಚು ಜನರಿಗೆ ಟ್ಯಾಟೋ ತೆಗೆಯಲಾಯಿತು.
ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಶಾಸಕ ಅಭಯ ಪಾಟೀಲ, 500 ವರ್ಷಗಳ ನಂತರ ಶ್ರೀ ರಾಮ ಮಂದಿರ ಉದ್ಘಾಟನೆ ಆಗುತ್ತಿದೆ. ಈಗ ದೇಶದೆಲ್ಲೆಡೆ ರಾಮಮಯವಾಗುತ್ತಿದ್ದು, ಈ ಶುಭ ದಿನ ಇತಿಹಾಸದಲ್ಲಿ ಅಚ್ಚಳಿಯದೇ ಉಳಿದುಕೊಳ್ಳಲಿದೆ.
ಹೀಗಾಗಿ ಬೆಳಗಾವಿಯಲ್ಲಿ ಜ. 21ರ ವರೆಗೂ ರಾಮ ಭಕ್ತರ ಕೈ ಮೇಲೆ ಟ್ಯಾಟೋ(ಹಚ್ಚೆ) ಬಿಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳ ಲಾಗಿದೆ. ಆಸಕ್ತರು ಬಂದು ಉಚಿತವಾಗಿ ಟ್ಯಾಟೋ ತೆಗೆಸಿಕೊಳ್ಳಬಹುದು ಎಂದು ಹೇಳಿದರು.
ಸುಮಾರು 10 ಸಾವಿರ ಜನರಿಗೆ ಟ್ಯಾಟೋ ಹಾಕಿಸುವ ಗುರಿ ಹೊಂದಲಾಗಿದೆ. ಜ. 21ರ ವರೆಗೆ ಆಸಕ್ತರು ಬಂದು ಟ್ಯಾಟೋ ಹಾಕಿಸಿಕೊಳ್ಳಬೇಕು. ಈಗಾಗಲೇ 3 ಸಾವಿರ ಜನರು ಟ್ಯಾಟೋ ತೆಗೆಸಿಕೊಳ್ಳಲು ಹೆಸರು ನೋಂದಾಯಿಸಿದ್ದಾರೆ. 30ರಿಂದ 40 ಜನ ಟ್ಯಾಟೋ ತೆಗೆಯುವವರನ್ನು ನಿಯೋಜಿಸಲಾಗಿದೆ ಎಂದರು. ಈಗ ಸಾಂಕೇತಿಕವಾಗಿ ಈ ಅಭಿಯಾನಕ್ಕೆ ಚಾಲನೆ ನೀಡಲಾಗಿದ್ದು, ಜ. 17ರಿಂದ ನಗರದ ವಿವಿಧ ಕಡೆಗಳಲ್ಲಿ ಟ್ಯಾಟೋ ತೆಗೆಯಲಾಗುವುದು.
ಆರ್‌ಪಿಡಿ ಕಾಲೇಜು, ಗೋಗಟೆ ಕಾಲೇಜು ಬಳಿ, ಹರಿ ಮಂದಿರ ಹತ್ತಿರ ಟ್ಯಾಟೋ ತೆಗೆಯಲಾಗುವುದು. ಹೊರ ರಾಜ್ಯದಿಂದಲೂ ಯುವಕ- ಯುವತಿಯರು ಹೆಸರು ನೋಂದಾ ಯಿಸುತ್ತಿದ್ದಾರೆ. ಹೆಣ್ಣು ಮಕ್ಕಳಿಗೆ ವಿಶೇಷ ಸೌಲಭ್ಯ ಒದಗಿಸಲಾ ಗಿದ್ದು, ಮಹಿಳೆಯರೇ ಟ್ಯಾಟೋ ತೆಗೆಯಲಿ ದ್ದಾರೆ ಎಂದರು. ಇಡೀ ದೇಶವೇ ಎದುರು ನೋಡುತ್ತಿರುವ ಶ್ರೀ ರಾಮ
ಮಂದಿರ ನಿರ್ಮಾಣದ ಕ್ಷಣವನ್ನು ವಿಶೇಷ ಹಾಗೂ ವಿನೂತನವಾಗಿ ಸಂಭ್ರಮಿಸಬೇಕು ಎಂಬ ಉದ್ದೇಶದಿಂದ ಶಾಶ್ವತವಾಗಿ ಉಳಿಯುವ ಈ ಟ್ಯಾಟೋ ಬಿಡಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belgavi; ವೇಶ್ಯಾವಾಟಿಕೆ ಆರೋಪ: ತಾಯಿ, ಮಗಳನ್ನು ರಸ್ತೆಗೆ ಎಳೆದು ಹಲ್ಲೆ!
Belagavi: ವಿವಾಹಿತ ಮಹಿಳೆ ಮತ್ತು ತಾಯಿಯ ಸೀರೆ ಬಿಚ್ಚಿ ಹಲ್ಲೆ ನಡೆಸಿದ ನೆರೆಹೊರೆಯವರು!
ಬೆಳಗಾವಿ: ಮಾನವ ಕಳ್ಳ ಸಾಗಾಣಿಕೆ-ಜೀತ ಪದ್ಧತಿ ದೊಡ್ಡ ಸಮಸ್ಯೆ
Belagavi: ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಸ್ಥಿತಿ ಬರಲಿದೆ: ಈರಣ್ಣ ಕಡಾಡಿ
Belagavi: ಎಸ್‌ಡಿಎ ರುದ್ರಣ್ಣ ಕೇಸ್: ಮೂವರು ಆರೋಪಿಗಳಿಗೆ ನಿರೀಕ್ಷಣಾ ಜಾಮೀನು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.