Chinese ಜಾನಪದದಲ್ಲಿಯೂ ರಾಮಾಯಣ ಜನಪ್ರಿಯ

ಬೌದ್ಧರು ರಾಮಾಯಣವನ್ನು ಚೀನದಲ್ಲಿ ಪರಿಚಯಿಸಿದರು. ಇಲ್ಲಿ...

Team Udayavani, Jan 15, 2024, 6:40 AM IST

1-sadasdsds

ಕ್ರಿ.ಶ. ಮೊದಲ ಶತಮಾನದಲ್ಲಿ ಬೌದ್ಧರು ರಾಮಾಯಣವನ್ನು ಚೀನದಲ್ಲಿ ಪರಿಚಯಿಸಿದರು. ಇಲ್ಲಿ ರಾಮನನ್ನು ಲೋಮೋ, ಭರತನನ್ನು ಪೊಲೊಟೋ, ಲಕ್ಷ್ಮಣನನ್ನು ಲೋಮನ್‌ ಎಂದು ಕರೆಯಲಾಗುತ್ತದೆ. ಪೂರ್ವ ರಾಷ್ಟ್ರಗಳಲ್ಲಿ ಹಿಂದೂ ಹಾಗೂ ಬೌದ್ಧ ಧರ್ಮಗಳ ಪರಿಚಯದ ಆರಂಭಿಕ ಸಮಯದಲ್ಲೇ ರಾಮಾಯಣವು ಪ್ರಸರಣವಾಯಿತು. ಜಾತಕ ಕಥೆಗಳಲ್ಲಿನ ರಾಜ ದಶರಥ, ಕೋತಿಗಳ ರಾಜ ಹಾಗೂ ಶಂಬೂಕ ಎಂಬ ಮೂರು ಕಥೆಗಳು ಚೀನದಲ್ಲಿ ರಾಮಾಯಣ ಪರಿಚಿತವಾಗುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಿವೆ. ಬೌದ್ಧ ಶೈಲಿಯಲ್ಲಿ ರಾಮಾಯಣವನ್ನು ನಿರೂಪಿಸಲಾಗಿದೆ.

ಚೀನದಲ್ಲಿ ಕಂಡುಬಂದ ಮೊದಲ ರಾಮಾಯಣದ ಕಥೆಯಲ್ಲಿ ಶ್ರೀರಾಮನ 14 ವರ್ಷಗಳ ವನವಾಸವನ್ನು ಹೊರತುಪಡಿಸಿ, ಉಳಿದೆಲ್ಲವೂ ಭಾರತದ ರಾಮಯಾಣವನ್ನೇ ಹೋಲುತ್ತದೆ. ಕ್ರಿ.ಶ.472 ಹಾಗೂ 251ರಲ್ಲಿ ಅನುವಾದಿತ ದಶರಥ ಜಾತಕ ಹಾಗೂ ಅನಾಮಿಕ ರಾಜನ ಕಥೆಯಲ್ಲಿ ರಾವಣನನ್ನು ನಾಗರ ರಾಜ ಎಂದು ಕರೆಯಲಾಗಿದೆ. ದಶರಥ ಜಾತಕವು ವಾಲ್ಮೀಕಿಯ ಸಂಸ್ಕೃತ ಶ್ಲೋಕದ ಪಾಲಿ ಭಾಷೆಯ ಅನುವಾದವನ್ನು ಒಳಗೊಂಡಿದೆ. ರಾಮನ ಕುರಿತಾದ ವಿವಿಧ ಜಾತಕ ಕಥೆಗಳು ಚೀನದಲ್ಲಿ ಜನಪ್ರಿಯತೆ ಯನ್ನು ಹೊಂದಿವೆ. ಬೌದ್ಧ ಗ್ರಂಥವಾದ ಲಿಉಡೂ ಜೀ ಜಿಂಗ್‌ನಲ್ಲಿ ಚೀನದಲ್ಲಿನ ಅತ್ಯಂತ ಪ್ರಾಚೀನ ರಾಮಾಯಣದ ಒಕ್ಕಣೆ ಕಂಡು ಬರುತ್ತದೆ. 16ನೇ ಶತಮಾನದಲ್ಲಿ ಬರೆದ ಗ್ರಂಥದಲ್ಲಿ ಕೋತಿಗಳ ರಾಜ, ಸುನ್‌ ವುಕೊಂಗ್‌ (ಹನುಮಾನ್‌) ನ ಉಲ್ಲೇಖವೂ ಇದೆ.
ಕ್ರಿ.ಶ. 9 ನೇ ಶತಮಾನದಲ್ಲಿ ಥೈಲ್ಯಾಂಡ್‌, ಮ್ಯಾನ್ಮಾರ್‌, ಜಾವಾ ಹಾಗೂ ಇತರ ದೇಶ ಗಳಲ್ಲಿನ ಸಾಹಿತ್ಯಕಾರರು ರಾಮಾಯಣವನ್ನು ಅಯಾ ದೇಶಗಳ ಭಾಷೆಗಳಲ್ಲಿ ಅನುವಾದಿಸಲು ಆರಂಭಿಸಿದ್ದರು. ಇದೇ ಸಮಯದಲ್ಲಿ ಅತೀ ವೇಗವಾಗಿ ಇದು ದಕ್ಷಿಣ ಹಾಗೂ ನೈಋತ್ಯ ಚೀನದ ಪ್ರದೇಶಗಳಿಗೆ ತಲುಪಿತು. ಚೀನದ ದಾಈ ಸಮುದಾಯವು ಜಾನಪದ ಸಂಪ್ರದಾಯದಲ್ಲಿ ರಾಮಾಯಣವನ್ನು ಪ್ರಪ್ರಥಮವಾಗಿ ಅಳವಡಿಸಿ ಕೊಂಡಿತ್ತು. ಬಳಿಕ ರಾಮಾಯಣವು ಚೀನದ ವಿವಿಧ ಪ್ರದೇಶಗಳಲ್ಲಿ ಪ್ರಚುರ ಗೊಂಡಿತು. ಚೀನದ ಯುನ್ನಾನ್‌ ಪ್ರಾಂತದಲ್ಲಿ ರಾಮಾಯಣವನ್ನು ಲಂಗಾ ಸಿಪ ಹೋರ ಎಂದು ಕರೆಯಲಾಗುತ್ತದೆ. ಇದು ಸಂಸ್ಕೃತ ಹಾಗೂ ಪಾಲಿ ಭಾಷೆಯಿಂದ ಹೆಚ್ಚಿನ ಭಾಗಗಳನ್ನು ಅಳವಡಿಸಿಕೊಂಡಿದೆ. ಯುನ್ನಾನ್‌ನ ನೈಋತ್ಯ ಭಾಗದಲ್ಲಿರುವ ದಾಈ ಸಮುದಾಯದಲ್ಲಿ ರಾಮಾಯಣವು ಲಂಕಾದ ಹತ್ತು ತಲೆಗಳು ಎಂದು ಪ್ರಚಲಿತವಾಗಿದೆ. ಇಲ್ಲಿಂದಲೇ ಈ ಕಥೆಯು ಬೌದ್ಧ ಧರ್ಮದ ಮೂಲಕ ಟಿಬೆಟ್‌ ಹಾಗೂ ಮಂಗೋಲಿಯಾದಲ್ಲೂ ಕೆಲವು ಬದಲಾವಣೆಗಳೊಂದಿಗೆ ಪರಿಚಯವಾಯಿತು. ಇದರ ಪ್ರಕಾರ ವನವಾಸದಲ್ಲಿ ರಾಮನ ಜತೆಗೆ ಲಕ್ಷಣನ ಬದಲು ಭರತನು ಹೋಗುತ್ತಾನೆ.

1950 ಹಾಗೂ 1962ರಲ್ಲಿ ಚೀನದಲ್ಲಿ ರಾಮಾಯಣವನ್ನು ಸಂಪೂರ್ಣವಾಗಿ ಅನುವಾದಿ ಸಲಾಯಿತು. ಆದರೆ ಇಂಗ್ಲಿಷ್‌ ಭಾಷೆಯ ಆವೃತ್ತಿಯಿಂದ ಇದನ್ನು ಅನುವಾದಿಸಲಾಗಿತ್ತು. ಆ ಬಳಿಕ 1984ರಲ್ಲಿ ಜೀ ಜಿಯಾನಲಿನ ಎಂಬ ಚೀನದ ವಿದ್ವಾಂಸ ಮೂಲ ಸಂಸ್ಕೃತ ರಾಮಾಯಣವನ್ನು ಚೀನದ ಭಾಷೆಗೆ ಸಂಪೂರ್ಣವಾಗಿ ಅನುವಾದಿಸಿ ದವರಲ್ಲಿ ಮೊದಲಿಗರಾಗಿದ್ದು, 8 ಆವೃತ್ತಿಗಳಲ್ಲಿ ಕೃತಿಯನ್ನು ಹೊರತಂದಿದ್ದರು. ಭಾರತೀಯ ಶಾಸ್ತ್ರಕ್ಕೆ ಇವರು ನೀಡಿದ ಅಪೂರ್ವ ಕೊಡುಗೆಯನ್ನು ಗುರುತಿಸಿ ಭಾರತ ಸರಕಾರವು 2008ರಲ್ಲಿ ಅವರಿಗೆ ಪದ್ಮಭೂಷಣದ ಪುರಸ್ಕಾರವನ್ನು ನೀಡಿತ್ತು.

ಅಗಸ್ತ್ಯರು ಬೋಧಿಸಿದ ಆದಿತ್ಯಹೃದಯವನ್ನು ಪಠಿಸಿದ ಮೇಲೆ ರಾಮನಿಂದ ರಾವಣನ ಹತ್ಯೆ
ಶ್ರೀರಾಮ-ರಾವಣರ ನಡುವಿನ ಯುದ್ಧ ತಾರಕಕ್ಕೇರಿತ್ತು. ರಾವಣನನ್ನು ಏನೇ ಮಾಡಿದರೂ ಮಣಿಸಲು ಆಗುತ್ತಿರಲಿಲ್ಲ. ರಾಮಸೇನೆ ಹತಾಶೆಗೊಂಡಿತ್ತು. ಆ ಸಂದರ್ಭದಲ್ಲಿ ಯುದ್ಧರಂಗಕ್ಕೆ ಆಗಮಿಸಿದ ಅಗಸ್ತ್ಯ ಮಹರ್ಷಿಗಳು, ಶ್ರೀರಾಮನಿಗೆ ಆದಿತ್ಯಹೃದಯ ಮಂತ್ರವನ್ನು ಉಪದೇಶಿಸುತ್ತಾರೆ. ಆದಿತ್ಯಹೃದಯ ಸೂರ್ಯನನ್ನು ಆರಾಧಿಸುವ ಮಂತ್ರಗಳನ್ನೊಳಗೊಂಡಿದೆ. ಅದನ್ನು ಪಠಿಸಿ ಸೂರ್ಯನನ್ನು ಆರಾಧಿಸಿದ ನಂತರ, ಶ್ರೀರಾಮ, ರಾವಣನನ್ನು ಸಂಹರಿಸುತ್ತಾನೆ. ವಿಶ್ವಾದ್ಯಂತ ಕೋಟ್ಯಂತರ ಮಂದಿ ಪಠಿಸುವ ಆದಿತ್ಯಹೃದಯದ ಮೂಲವೂ ರಾಮಾಯಣ ಎನ್ನುವುದು ಈ ಕೃತಿಯ ಮಹತ್ವವನ್ನು ತೋರುತ್ತದೆ.

ಟಾಪ್ ನ್ಯೂಸ್

1-pk

Karnataka;ಕಾರ್ಪೊರೇಟ್ ಸಂಸ್ಥೆಗಳಿಂದ 100 ಇಂಜಿನಿಯರಿಂಗ್ ಕಾಲೇಜುಗಳ ದತ್ತು

vij

Politics: ಬೆಳಗಾವಿ ಅಧಿವೇಶನವೇ ಸಿಎಂ ಸಿದ್ದರಾಮಯ್ಯರ ಕೊನೆಯ ಅಧಿವೇಶನ: ವಿಜಯೇಂದ್ರ

Terror 2

Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 38 ಬ*ಲಿ

IFFI Goa: ಸಿನಿಮಾ ಸಾಯುವುದಿಲ್ಲ, ಕಲೆಯೂ ಅಷ್ಟೇ,…ಆದರೆ ನಾವು ಉಳಿಸಿಕೊಳ್ಳಬೇಕಷ್ಟೇ !

IFFI Goa: ಸಿನಿಮಾ ಸಾಯುವುದಿಲ್ಲ, ಕಲೆಯೂ ಅಷ್ಟೇ,…ಆದರೆ ನಾವು ಉಳಿಸಿಕೊಳ್ಳಬೇಕಷ್ಟೇ !

Border Gavaskar Trophy: India ready for Kangaroo Challenge; What is the team’s strength?

Border Gavaskar Trophy: ಕಾಂಗರೂ ಚಾಲೆಂಜ್‌ ಗೆ ಅಣಿಯಾದ ಭಾರತ; ಹೇಗಿದೆ ತಂಡದ ಬಲಾಬಲ

Kollywood: ʼಅಮರನ್‌ʼ ಚಿತ್ರತಂಡದಿಂದ 1 ಕೋಟಿ ರೂ. ಪರಿಹಾರ ಕೇಳಿದ ವಿದ್ಯಾರ್ಥಿ; ಕಾರಣವೇನು?

Kollywood: ʼಅಮರನ್‌ʼ ಚಿತ್ರತಂಡದಿಂದ 1 ಕೋಟಿ ರೂ. ಪರಿಹಾರ ಕೇಳಿದ ವಿದ್ಯಾರ್ಥಿ; ಕಾರಣವೇನು?

isrel netanyahu

Netanyahu ವಿರುದ್ಧ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದಿಂದ ಬಂಧನ ವಾರಂಟ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ayodhya: ಪೇಜಾವರ ಶ್ರೀಗಳ ನೇತೃತ್ವದಲ್ಲಿ ಇಂದು ನಡೆದ ಮಂಡಲೋತ್ಸವ

Ayodhya: ಪೇಜಾವರ ಶ್ರೀಗಳ ನೇತೃತ್ವದಲ್ಲಿ ಇಂದು ನಡೆದ ಮಂಡಲೋತ್ಸವ

ram mandir imp

Ayodhya: ವ್ಯಾಟಿಕನ್‌, ಮೆಕ್ಕಾ ಮೀರಿಸಲಿದೆ- ವರ್ಷಕ್ಕೆ ಐದು ಕೋಟಿ ಭಕ್ತರು ಭೇಟಿ ನಿರೀಕ್ಷೆ

ram mandir 2

Ayodhya: ಅಯೋಧ್ಯೆಯಲ್ಲಿ ಕರ್ನಾಟಕ ಸರಕಾರದಿಂದ ಅತಿಥಿಗೃಹ ?

yogi ram mandir

Ayodhya: ಭೇಟಿ ಬಗ್ಗೆ ಹತ್ತು ದಿನ ಮೊದಲೇ ತಿಳಿಸಿ: ವಿವಿಐಪಿಗಳಿಗೆ ಯೋಗಿ ಸರಕಾರದ ಕೋರಿಕೆ

ram mandir 2

Ram Mandir: ಭಕ್ತ ಪ್ರವಾಹ- ರಾಮನ ದರ್ಶನ ಸಮಯ ವಿಸ್ತರಣೆ

MUST WATCH

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

udayavani youtube

ಶರಣಾಗತಿಗೆ ಸೂಚಿಸಿದರೂ ಸ್ಪಂದಿಸಿಲ್ಲ, ಗುಂಡಿನ ಚಕಮಕಿಯಲ್ಲಿ ಮೋಸ್ಟ್ ವಾಂಟೆಡ್‌ ನಕ್ಸಲ್ ಸಾವು

ಹೊಸ ಸೇರ್ಪಡೆ

1-pk

Karnataka;ಕಾರ್ಪೊರೇಟ್ ಸಂಸ್ಥೆಗಳಿಂದ 100 ಇಂಜಿನಿಯರಿಂಗ್ ಕಾಲೇಜುಗಳ ದತ್ತು

vij

Politics: ಬೆಳಗಾವಿ ಅಧಿವೇಶನವೇ ಸಿಎಂ ಸಿದ್ದರಾಮಯ್ಯರ ಕೊನೆಯ ಅಧಿವೇಶನ: ವಿಜಯೇಂದ್ರ

Belagavi: Let there be a full discussion of issues in the plenary session: Dr. Prabhakar Kore

Belagavi: ಪೂರ್ಣಾವಧಿ ಅಧಿವೇಶನದಲ್ಲಿ ಸಮಸ್ಯೆಗಳ ಪೂರ್ಣ ಚರ್ಚೆಯಾಗಲಿ: ಡಾ.ಪ್ರಭಾಕರ್‌ ಕೋರೆ

Terror 2

Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 38 ಬ*ಲಿ

IFFI Goa: ಸಿನಿಮಾ ಸಾಯುವುದಿಲ್ಲ, ಕಲೆಯೂ ಅಷ್ಟೇ,…ಆದರೆ ನಾವು ಉಳಿಸಿಕೊಳ್ಳಬೇಕಷ್ಟೇ !

IFFI Goa: ಸಿನಿಮಾ ಸಾಯುವುದಿಲ್ಲ, ಕಲೆಯೂ ಅಷ್ಟೇ,…ಆದರೆ ನಾವು ಉಳಿಸಿಕೊಳ್ಳಬೇಕಷ್ಟೇ !

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.