Shri Ram Mandir ಸೌಹಾರ್ದ,ರಾಷ್ಟ್ರೀಯತೆಯ ಪ್ರತೀಕ: ಭಕ್ತಸಾಗರದ ಕೊರಗು ನಿವಾರಣೆ
Team Udayavani, Jan 22, 2024, 5:30 AM IST
ವಿಶ್ವದ ಪಾರಂಪರಿಕ ನಗರಿ ಅಯೋಧ್ಯೆಯಲ್ಲಿ ಶ್ರೀರಾಮನ ಜನ್ಮಭೂಮಿಯಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಶ್ರೀರಾಮ ಮಂದಿರದಲ್ಲಿ ಶ್ರೀರಾಮ ಲಲ್ಲಾನ ಪ್ರಾಣಪ್ರತಿಷ್ಠೆ ಜ. 22ರ ಸೋಮವಾರ ನಡೆಯಲಿದೆ. ಈ ಮೂಲಕ ಜಗತ್ತಿನ ಕೋಟ್ಯಂತರ ಜನರ ಐದು ಶತಮಾನಗಳ ಕನಸು ನನಸಾಗುತ್ತಿದೆ. ರಾಮಭಕ್ತರ ಬಲು ನಿರೀಕ್ಷೆಯ ಅಪೇಕ್ಷೆಯೊಂದು ಈಡೇರುತ್ತಿರುವ ಪರ್ವಕಾಲ ಇದಾಗಿದೆ. ಶ್ರೀರಾಮನ ಜನ್ಮಸ್ಥಳದಲ್ಲಿ ಆತನಿಗೊಂದು ಭವ್ಯ ದೇಗುಲವಿಲ್ಲ ಎಂಬ ಭಕ್ತಸಾಗರದ ಕೊರಗು ನಿವಾರಣೆಯಾಗಿ ನಿರ್ಮಾಣಗೊಂಡಿರುವ ಭವ್ಯ ವಾದ, ಬೃಹತ್ ದೇಗುಲದಲ್ಲಿ ಬಾಲರಾಮ ಪ್ರತಿಷ್ಠೆಗೊಳ್ಳುತ್ತಿದ್ದಾನೆ. ಈ ಸುಂದರ, ಐತಿಹಾಸಿಕ ಕ್ಷಣಗಳನ್ನು ಕಣ್ತುಂಬಿಕೊಳ್ಳಲು ಕೇವಲ ಭಾರತ ಮಾತ್ರವಲ್ಲದೆ ಇಡೀ ವಿಶ್ವವೇ ಅಯೋಧ್ಯೆಯತ್ತ ದೃಷ್ಟಿ ಹರಿಸಿದೆ. ಸಹಜವಾಗಿಯೇ ಜಗತ್ತಿನಾದ್ಯಂತದ ಭಕ್ತರು ಮತ್ತು ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿದೆ.
ಶ್ರೀರಾಮ ಕೇವಲ ಪುರಾಣ ಪಾತ್ರಕ್ಕಷ್ಟೇ ಸೀಮಿತವಾಗಿರದೆ ಇಡೀ ಸಮಾಜಕ್ಕೆ ಓರ್ವ ಆದರ್ಶಪುರುಷನಾಗಿ ಬೆಳೆದು ನಿಂತಿದ್ದಾನೆ. ಈ ಭರತಖಂಡದಲ್ಲಿ, ವಿಶ್ವದ ಕೋಟ್ಯಂತರ ಭಕ್ತರ, ಅನುಯಾಯಿಗಳ ಪಾಲಿಗೆ ಆರಾಧ್ಯದೇವತೆಯಾಗಿ ತಲೆತಲಾಂತರಗಳಿಂದ ಜನ ಮಾನಸದಲ್ಲಿ ಅಚ್ಚಳಿಯದೆ ಶ್ರೀರಾಮ ಉಳಿದಿ ದ್ದಾನೆಂದರೆ ಆತ ಮಾನುಷಭಾ ವದಲ್ಲಿರುವ ದೈವತ್ವ ಎಂದರೆ ಅದು ಅತಿಶ ಯೋ ಕ್ತಿಯಲ್ಲ. ಇಂತಹ ಮರ್ಯಾದಾ ಪುರುಷೋತ್ತಮನ ಜನ್ಮಸ್ಥಾನದಲ್ಲಿ ಆತನಿಗೊಂದು ಸದೃಢ ದೇವಾಲಯ ನಿರ್ಮಾಣವಾಗಬೇಕೆಂಬ ಶತಮಾನಗಳ ಹೋರಾಟದ ಫಲಶ್ರುತಿಯಾಗಿ ಸುಂದರ ಮಂದಿರ ತಲೆ ಎತ್ತಿ ನಿಂತಿದೆ. ಚರಿತ್ರೆಯ ಪ್ರಮಾದಗಳನ್ನು ಸರಿಪಡಿಸುವ ಕಾರ್ಯವಾಗಿದೆ. ಶ್ರೀರಾಮನ ಜೀವನಗಾಥೆಯನ್ನು ನಾವು ಸಂಪೂರ್ಣವಾಗಿ ಮನನ ಮಾಡಿಕೊಂಡದ್ದೇ ಆದಲ್ಲಿ ಶ್ರೀರಾಮನ ಪಾಲಿಗೆ ಇದು ಅಸಹಜವೇನಲ್ಲ. ಆತ ತನ್ನ ಜೀವನದುದ್ದಕ್ಕೂ ಸಾಕಷ್ಟು ಸಂಕಷ್ಟ, ಸಮಸ್ಯೆ, ಪರೀಕ್ಷೆ, ಸವಾಲುಗಳನ್ನು ಎದುರಿಸಿಕೊಂಡೇ ಬಂದವನು. ಅದೇ ದೃಷ್ಟಿಕೋನದಲ್ಲಿ ನೋಡುವುದಾದರೆ ಇದು ಕೂಡ ಶ್ರೀರಾಮನ ಶಕ್ತಿಯನ್ನು ಮತ್ತೂಮ್ಮೆ ಸಾಬೀತುಪಡಿಸಿದಂತಾಗಿದೆ. ತನ್ಮೂಲಕ ಶ್ರೀರಾಮನ ಮತ್ತೂಂದು ವನವಾಸವೂ ಅಂತ್ಯಗೊಂಡು, ಪುರುಷೋತ್ತಮನ ಪುನರಾಗಮನಕ್ಕೆ ಅಯೋಧ್ಯೆ ಮಾತ್ರವಲ್ಲ ಇಡೀ ವಿಶ್ವವೇ ಸಾಕ್ಷಿಯಾ ಗುತ್ತಲಿದೆ.
ಅಯೋಧ್ಯೆಯಲ್ಲಿ ನಿರ್ಮಾಣಗೊಂಡಿರುವ ರಾಮ ಮಂದಿರ ಕೇವಲ ಸನಾತನ ಧರ್ಮೀಯರ ನಂಬಿಕೆ, ಭಕ್ತಿಗಷ್ಟೇ ಸೀಮಿತವಾಗಿರದೆ, ಸಮಸ್ತ ಭರತ ಕೋಟಿಯ ರಾಷ್ಟ್ರಭಕ್ತಿಯ, ರಾಷ್ಟ್ರೀಯತೆಯ ಸಂಕೇತವೂ ಹೌದು. ಶ್ರೀರಾಮ ಸಂಯಮ, ಧರ್ಮನಿಷ್ಠೆ, ವೀರತ್ವ, ಸಭ್ಯತೆ, ಮಾನವೀಯತೆ, ಸಚ್ಚಾರಿತ್ರ್ಯ, ಕರುಣಾಮಯಿ…ಹೀಗೆ ಸಕಲ ಗುಣ ಸಂಪನ್ನ. ಈ ಕಾರಣದಿಂದಾಗಿಯೇ ಆತ ಧರ್ಮಾತೀತ, ದೇಶಾತೀತ, ಕಾಲಾತೀತ ಆದರ್ಶ ಪುರುಷ. ಈ ಕಾರಣಕ್ಕಾಗಿ ರಾಮ ಮಂದಿರ ದೇಶಗಳ ಗಡಿಯ ಎಲ್ಲೆಯನ್ನು ಮೀರಿ ವಿಶ್ವಾದ್ಯಂತದ ಜನರ ಗಮನವನ್ನು ಸೆಳೆದಿದೆ. ಜನ್ಮಸ್ಥಳದಲ್ಲಿ ಶ್ರೀರಾಮನ ದೇಗುಲ ನಿರ್ಮಾಣಗೊಂಡು ಶ್ರೀರಾಮ ಅಲ್ಲಿ ನೆಲೆಯಾಗುತ್ತಿದ್ದಾನೆ. ಇಲ್ಲಿಗೆ ನಮ್ಮನ್ನಾಳುವವರು, ಧರ್ಮ ಸಂಸ್ಥಾಪಕರು, ಶ್ರೀರಾಮ ಭಕ್ತರು ವಿರಮಿಸುವಂತಿಲ್ಲ. ಶ್ರೀರಾಮ ಪ್ರತಿಯೊಂದು ಸಂಕಷ್ಟ, ಸವಾಲುಗಳನ್ನು ಎದುರಿಸಿದ ಬಳಿಕ ಆ ನೆಲದಲ್ಲಿ ಶಾಂತಿಯನ್ನು ಪುನರ್ ಸ್ಥಾಪಿಸಿದ್ದೇ ಅಲ್ಲದೆ ಮಾದರಿ ಆಡಳಿತ ವ್ಯವಸ್ಥೆಯನ್ನು ಜಾರಿಗೊಳಿಸಿದ್ದನು. ಇಂತ ಹುದೇ ರಾಮರಾಜ್ಯವನ್ನು ಕಾಣುವ ಸೌಭಾಗ್ಯ ಈ ದೇಶವಾಸಿಗಳದ್ದಾಗಬೇಕು. ಈ ದಿಸೆಯಲ್ಲಿ ಇಡೀ ವ್ಯವಸ್ಥೆ ಒಗ್ಗೂಡಿ ಕಾರ್ಯೋನ್ಮುಖವಾಗಬೇಕು. ಶ್ರೀರಾಮನ ಭವ್ಯ ದೇಗುಲ ರಾಷ್ಟ್ರೀಯತೆ, ಸೌಹಾರ್ದತೆಯ ಪ್ರತೀಕವಾಗಿ ಮುಂದಿನ ದಿನಗಳಲ್ಲಿ ಪ್ರಜ್ವಲಿಸಲಿ ಎಂಬುದು ದೇಶವಾಸಿಗಳ ಸದಾಶಯ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ayodhya: ಪೇಜಾವರ ಶ್ರೀಗಳ ನೇತೃತ್ವದಲ್ಲಿ ಇಂದು ನಡೆದ ಮಂಡಲೋತ್ಸವ
Ayodhya: ವ್ಯಾಟಿಕನ್, ಮೆಕ್ಕಾ ಮೀರಿಸಲಿದೆ- ವರ್ಷಕ್ಕೆ ಐದು ಕೋಟಿ ಭಕ್ತರು ಭೇಟಿ ನಿರೀಕ್ಷೆ
Ayodhya: ಅಯೋಧ್ಯೆಯಲ್ಲಿ ಕರ್ನಾಟಕ ಸರಕಾರದಿಂದ ಅತಿಥಿಗೃಹ ?
Ayodhya: ಭೇಟಿ ಬಗ್ಗೆ ಹತ್ತು ದಿನ ಮೊದಲೇ ತಿಳಿಸಿ: ವಿವಿಐಪಿಗಳಿಗೆ ಯೋಗಿ ಸರಕಾರದ ಕೋರಿಕೆ
Ram Mandir: ಭಕ್ತ ಪ್ರವಾಹ- ರಾಮನ ದರ್ಶನ ಸಮಯ ವಿಸ್ತರಣೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Mangaluru: ಕ್ರಿಸ್ಮಸ್ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು
Health: ಶೀಘ್ರ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Harapanahalli: ಪ್ರತಿಷ್ಠೆಯ ಕಣವಾದ ಬಿ90 ಸೊಸೈಟಿ ಚುನಾವಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.