Sri Rama ಆದರ್ಶ, ತ್ಯಾಗದ ಪ್ರತಿರೂಪ: ಡಾ| ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ


Team Udayavani, Jan 13, 2024, 6:15 AM IST

1-sddsa

ಕಳೆದ ಹಲವು ಶತಮಾನಗಳಿಂದ ಕೋಟ್ಯಂತರ ಭಕ್ತರ ನಿರೀಕ್ಷೆಯಾಗಿದ್ದ ಶ್ರೀ ರಾಮನು ಜನಿಸಿದ ಸ್ಥಳದಲ್ಲಿಯೇ ಶ್ರೀ ರಾಮ ಮಂದಿರ ನಿರ್ಮಾಣವಾಗಬೇಕು ಎಂಬ ಅಭೀಪ್ಸೆಯು ಸಾಕಾರವಾಗುತ್ತಿರುವ ಅಮೃತ ಘಳಿಗೆಯಲ್ಲಿ ನಾವಿದ್ದೇವೆ. ಅಯೋಧ್ಯೆಯಲ್ಲಿ 2020ರ ಆಗಸ್ಟ್‌ 5ರಂದು ದೇಶದ ಗಣ್ಯ ಮಾನ್ಯರು, ಸಾಧು, ಸತು³ರುಷರು, ಮಠಾಧೀಶರ ದಿವ್ಯ ಸಾನ್ನಿಧ್ಯದಲ್ಲಿ ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿ ಶ್ರೀ ರಾಮನ ದೇಗುಲಕ್ಕೆ ರಜತ ಇಟ್ಟಿಗೆಗಳನ್ನಿಟ್ಟು ಶಿಲಾನ್ಯಾಸ ನೆರವೇರಿಸಿದ್ದು ಐತಿಹಾಸಿಕ ದಿನವಾಗಿತ್ತು. ಆ ಶುಭ ಸಂದರ್ಭದಲ್ಲಿ ನಾವೂ ಸಹ ಉಪಸ್ಥಿತರಿದ್ದು ಸಾಕ್ಷೀಕರಿಸಿದ್ದು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಸದ್ಭಕ್ತರಿಗೆಲ್ಲ ಹೆಮ್ಮೆಯ ವಿಷಯವಾಗಿತ್ತು. ಅಂತೆಯೇ ಮಂದಿರ ಲೋಕಾರ್ಪಣೆಯ ಈ ಶುಭ ಸಂದರ್ಭವೂ ಕೂಡ. ಶ್ರೀರಾಮನನ್ನು ಶ್ರದ್ಧಾಭಕ್ತಿಯಿಂದ ಅರ್ಚಿಸುವ ಭಾರತೀಯರಿಗೆ 2024ರ ಜನವರಿ 22 ಅವಿಸ್ಮರಣೀಯ ದಿನವಾಗಿದೆ.
ಮರ್ಯಾದಾ ಪುರುಷೋತ್ತಮ ಶ್ರೀರಾಮ, ರಾಮ ರಾಜ್ಯದ ಹರಿಕಾರ. ಇಂದಿಗೂ ಆತ ಭಾರತವಷ್ಟೇ ಅಲ್ಲ ಸುತ್ತಮುತ್ತಲಿನ ಅನೇಕ ದೇಶಗಳಿಗೆ ಆದರ್ಶ, ಆದರಣೀಯ. ಪ್ರಜಾಕಲ್ಯಾಣಕ್ಕಾಗಿ ಸದಾ ಸ್ಪಂದಿಸುತ್ತಿದ್ದ ರಾಜಾರಾಮ ಎಂದಿಗೂ ಜೀವಂತ! ಶ್ರೀರಾಮ ದೇವಪುರುಷ ಮಾತ್ರವಲ್ಲ, ಒಬ್ಬ ಉತ್ತಮ ಆಡಳಿತಗಾರನೂ ಹೌದು. ಆಡಳಿತಗಾರನಿಗೆ ಇರಬೇಕಾದ ಸರ್ವಗುಣ ಸಂಪನ್ನನಾಗಿದ್ದ. ಹೆತ್ತವರಿಗೆ ಸತು³ತ್ರ ನಾಗಿದ್ದರೆ ಪ್ರಜೆಗಳಿಗೆ ಆದರ್ಶ ಪುರುಷೋತ್ತಮನಾಗಿದ್ದ.

ತಂದೆಯ ವಚನ ಪಾಲಿಸಲು ನಗು ನಗುತ್ತಲೇ ಹದಿನಾಲ್ಕು ವರ್ಷ ವನವಾಸಕ್ಕೆ ತೆರಳಿದ ರಾಮ ತನ್ನ ಸಹೋದರ ಭರತನಿಗೆ ರಾಜ್ಯಭಾರ ಮಾಡಲು ತುಂಬು ಹೃದಯದಿಂದ ಹರಸಿದ್ದ. ಈ ದೇವಪುರುಷನಿಗೆ ಹಣ, ಅಂತಸ್ತು-ಆಸ್ತಿಪಾಸ್ತಿಗಳ ವ್ಯಾಮೋಹ ಇರಲಿಲ್ಲ. ಯುದ್ಧದಲ್ಲಿ ಶ್ರೀರಾಮನು ರಾವಣನನ್ನು ವಧಿಸಿದ ಮೇಲೆ ರಾವಣನ ರಾಜ್ಯದ ಅಪಾರ ಸಂಪತ್ತನ್ನು ನೋಡಿ ಲಕ್ಷ್ಮಣ ಮೈ ಮರೆಯುತ್ತಾನೆ. ಆಗ ರಾಮ ಹೇಳುತ್ತಾನೆ-“ಸಹೋದರ ಇದು ನಮ್ಮ ನೆಲೆಯಲ್ಲ. ನಮ್ಮ ತಾಯ್ನಾಡು ಅಯೋಧ್ಯೆ. ಮೇಲಾಗಿ ಈ ಸಂಪತ್ತು ನಮ್ಮದಲ್ಲ. ಇದರ ವ್ಯಾಮೋಹ ಅತ್ಯಂತ ಅಪಾಯಕಾರಿ. ಸಂಪತ್ತಿನ ಬೆನ್ನು ಬಿದ್ದವ ಅಮಾನುಷನಾಗುತ್ತಾನೆ. ಇದರ ನಿಜವಾದ ಹಕ್ಕುದಾರ ವಿಭೀಷಣ……’ ಎಂದು ಹೇಳಿ ರಾವಣನ ತಮ್ಮ ವಿಭೀಷಣನಿಗೆ ಪಟ್ಟ ಕಟ್ಟಿ ತಾನು ಅಯೋಧ್ಯೆಗೆ ಮರಳುತ್ತಾನೆ.
ಶ್ರೀರಾಮನ ಆಡಳಿತದ ಕಾಲದಲ್ಲಿ ಹೊಡೆದಾಟ, ಬಡಿದಾಟ, ರಕ್ತಪಾತಗಳ ಭಯವಿರಲಿಲ್ಲ. ಶಾಂತಿ, ಸಹಬಾಳ್ವೆ, ನ್ಯಾಯಪರಿಪಾಲನೆ, ಸಂಪತ್ತು, ಅಭಿವೃದ್ಧಿ, ಸಮೃದ್ಧಿಯಾಗಿದ್ದವು. ಪ್ರಜೆಗಳು ಸುಖ, ಶಾಂತಿ, ನೆಮ್ಮದಿ, ಸಂತೃಪ್ತಿಗಳಿಂದ ಇದ್ದು ಸದಾ ಪ್ರಸನ್ನವದನರಾಗಿದ್ದರು. ಜನರು ಸತ್ಯಸಂಧರಾಗಿದ್ದರಿಂದ ಅಲ್ಲಿ ಅನೃತಕ್ಕೆ ಸ್ಥಾನವಿರಲಿಲ್ಲ. ಎಲ್ಲರೂ ಸುಖ- ಸಮೃದ್ಧಿಯಿಂದ ಇದ್ದುದರಿಂದ ಎಲ್ಲಿಯೂ ದುಃಖದ ಛಾಯೆ ಕಾಣುತ್ತಿರಲಿಲ್ಲ. ಶಾಂತಿಪ್ರಿಯರಾಗಿದ್ದ ಜನರು ಶಾಂತಿ ಮತ್ತು ಸಾಮರಸ್ಯದ ಬದುಕು ಬಾಳುತ್ತಿದ್ದರು. ಪಿತೃವಾಕ್ಯ ಪಾಲನೆಗಾಗಿ ಹದಿನಾಲ್ಕು ವರ್ಷ ವನವಾಸಕ್ಕೆ ಹೊರಟ ಶ್ರೀರಾಮನ ಬೆಂಗಾವಲಾಗಿ ಸಹೋದರ ಲಕ್ಷ್ಮಣನೂ ಹೊರಡುತ್ತಾನೆ. ಲಕ್ಷ್ಮಣನು ಅದೇ ಆಗ ಮದುವೆಯಾದ ತನ್ನ ಹೆಂಡತಿಯನ್ನು ಹೆತ್ತವರ ಸೇವೆಗಾಗಿ ಬಿಟ್ಟು ಹೋಗುತ್ತಾನೆ. ಭರತ ತಾಯಿ ಮಾಡಿದ ತಪ್ಪನ್ನು ತಾನು ಸರಿಪಡಿಸಲು ಮುಂದಾಗುತ್ತಾನೆ. ಅಣ್ಣನನ್ನು ಕರೆ ತರಲು ಅರಣ್ಯಕ್ಕೆ ಧಾವಿಸುತ್ತಾನೆ. ಆದರೆ ತಂದೆಯ ವಚನ ಪಾಲನೆಯ ನಿರ್ಧಾರದಿಂದ ಹಿಂದೆ ಸರಿಯದ ರಾಮನ ಪಾದುಕೆಗಳನ್ನು ತನ್ನ ತಲೆಯ ಮೇಲೆ ಹೊತ್ತು ತಂದು ಅವುಗಳನ್ನು ಗದ್ದುಗೆಯ ಮೇಲಿಟ್ಟು ರಾಮನ ಹೆಸರಿನಲ್ಲಿ ರಾಜ್ಯಭಾರ ಮಾಡುತ್ತಾನೆ. ಇಂತಹ ಆದರ್ಶವನ್ನು ನಾವು ಶ್ರೀರಾಮ ಮತ್ತು ಅವನ ಸಹೋದರರಲ್ಲಿ ಮಾತ್ರ ಕಾಣಲು ಸಾಧ್ಯ. ಇದು ನಮ್ಮ ಪುಣ್ಯಭೂಮಿ ಭಾರತದ ಸಂಸ್ಕೃತಿ, ಪರಂಪರೆ.

ಶ್ರೀರಾಮನು ಇಡೀ ದೇಶದಲ್ಲಿ ತನ್ನ ಛಾಪನ್ನು ಮೂಡಿಸಿದ್ದಾನೆ. ಶ್ರೀರಾಮಮಂದಿರ ನಿರ್ಮಾಣವು ಭಾರತಕ್ಕೆ ಸುವರ್ಣಪರ್ವವನ್ನು ತಂದಿದೆ. ರಾಮಮಂದಿರ ನಿರ್ಮಾಣ ಕೋಟ್ಯಂತರ ಭಾರತೀಯರ ಕನಸಾಗಿತ್ತು. ಅದಕ್ಕಾಗಿ ಹಲವಾರು ರಾಮ ಭಕ್ತರು ತ್ಯಾಗ ಬಲಿದಾನವನ್ನು ಮಾಡಿ ದ್ದಾರೆ. ಅಸಂಖ್ಯಾತ ಭಾರತೀಯರು ಶತ ಶತಮಾನಗಳಿಂದ ಚಾತಕಪಕ್ಷಿಯಂತೆ ನಿರೀಕ್ಷಿಸುತ್ತಿದ್ದರು. ಅನೇಕ ವರ್ಷಗಳಿಂದ ವಸ್ತ್ರಕುಟೀರದಲ್ಲಿ ಪ್ರತಿಷ್ಠಾಪಿಸಿದ್ದ ರಾಮಲಲ್ಲಾ ಇನ್ನು ಮುಂದೆ ಭವ್ಯ ಮಂದಿರದಲ್ಲಿ ವಿರಾಜಮಾನನಾಗಿ ಇಡೀ ವಿಶ್ವವನ್ನು ಆಶೀರ್ವದಿಸಲಿರುವುದು ಭಾರತೀಯರೆಲ್ಲರಿಗೂ ಸಂತಸ ವನ್ನುಂಟು ಮಾಡಿದೆ.

ಪುಣ್ಯಭೂಮಿ ಭಾರತ ಹಲವು ಸಾಧು ಸಂತರು, ಮಹಾ ತ್ಮರು ಬಾಳಿ ತಮ್ಮ ದಿವ್ಯ ಮಾರ್ಗದರ್ಶನದಲ್ಲಿ ಮುನ್ನಡೆಸಿದ ಪವಿತ್ರ ಭೂಮಿ. ಈ ಪುಣ್ಯಭೂಮಿಯ ಮಹತ್ತನ್ನು ಸಾರಿದ ವರಲ್ಲಿ ಮರ್ಯಾದ ಪುರುಷೋತ್ತಮ ಶ್ರೀರಾಮಚಂದ್ರ ಅಗ್ರಸ್ಥಾನ ಪಡೆದಿದ್ದಾನೆ. ಶ್ರೀರಾಮಚಂದ್ರ ಮತ್ತು ಮಾತೆ ಜಾನಕಿಯರ ಜೀವನ ಆದರ್ಶಪ್ರಾಯ ವಾದುದು. ಇಂತಹ ಶ್ರೀರಾಮಚಂದ್ರ ಪ್ರಭುವಿಗೆ ಅವನ ಜನ್ಮಭೂಮಿ ಅಯೋಧ್ಯೆಯಲ್ಲಿ ದೇವಾಲಯ ನಿರ್ಮಿಸಲು ನಮಗೆ ಐದು ಶತಮಾನಗಳಷ್ಟು ಕಾಲ ಬೇಕಾಯಿತು ಎಂಬುದು ವಿಷಾದದ ಸಂಗತಿ.

ಸತತವಾಗಿ ಐದುನೂರು ವರ್ಷಗಳ ಕಾಲ ರಾಮನ ದೇಗುಲ ನಿರ್ಮಾಣದ ಹೋರಾಟದಲ್ಲಿ ಸಾಧು ಸಂತರು, ಸನ್ಯಾಸಿಗಳು, ಧರ್ಮಾಚಾರ್ಯರು, ರಾಜ ಮಹಾರಾಜರು ಮುಂತಾದ ದೇಶದ ಪ್ರತೀ ಪ್ರಜೆಯೂ ಕೈಜೋಡಿಸಿರುವುದು ಸ್ಮರಣೀಯ. ಪ್ರಸ್ತುತ ಭಾರತೀಯರೆಲ್ಲರೂ ಶ್ರೀರಾಮ ಮಂದಿರ ಲೋಕಾರ್ಪ ಣೆಯ ಸಂತಸದ ಕ್ಷಣವನ್ನು ಸಂಭ್ರಮಿಸುತ್ತಿದ್ದಾರೆ. ಜೈ ಶ್ರೀರಾಮ್‌ ಎಂಬ ಉದ್ಘೋಷದೊಡನೆ ರಾಮನನ್ನು ಸ್ತುತಿಸಿ ಪುಳಕಿತರಾಗುತ್ತಿದ್ದಾರೆ. ಶ್ರೀರಾಮ ಮಂದಿರ ರ್ಮಾಣಕ್ಕೆ ಕಾರಣರಾದ ಎಲ್ಲರಿಗೂ ಧನ್ಯವಾದ ಅರ್ಪಿಸೋಣ. ಶ್ರೀರಾಮನ ದರ್ಶನ ಮಾಡುವುದು ಮಾತ್ರವಲ್ಲ, ನಮ್ಮ ಮಕ್ಕಳಿಗೆ ಶ್ರೀರಾಮನ ಮುಖಾಂತರ ಧರ್ಮವನ್ನು, ನೈತಿಕತೆಯನ್ನು, ನೀತಿಯನ್ನು ಹಾಗೂ ಒಟ್ಟು ಬದುಕನ್ನು ಕಟ್ಟಿಕೊಡುವ ಪರಿಯನ್ನು ಹೇಳಿಕೊಡೋಣ. ಶ್ರೀರಾಮನ ಆದರ್ಶವನ್ನು ನಮ್ಮೆಲ್ಲರ ಬದುಕಿನಲ್ಲಿ ಅಳವಡಿಸಿಕೊಂಡು ಸನ್ಮಾರ್ಗದಲ್ಲಿ ಮುನ್ನಡೆಯೋಣ. ಜೈ ಶ್ರೀಗುರುದೇವ್‌.

 ಡಾ| ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಪೀಠಾಧ್ಯಕ್ಷರು, ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠ

ಟಾಪ್ ನ್ಯೂಸ್

Stories: ಹಾಡಿನಂಥ ಕಾಡುವಂಥ ಕಥೆಗಳು

Stories: ಹಾಡಿನಂಥ ಕಾಡುವಂಥ ಕಥೆಗಳು

Pushpa-2: ಸಂಕ್ರಾಂತಿಗೆ ಓಟಿಟಿಗೆ ಬರುತ್ತಾ ʼಪುಷ್ಪ-2ʼ?: ಸ್ಪಷ್ಟನೆ ನೀಡಿದ ನಿರ್ಮಾಣ ಸಂಸ್ಥೆ

Pushpa-2: ಸಂಕ್ರಾಂತಿಗೆ ಓಟಿಟಿಗೆ ಬರುತ್ತಾ ʼಪುಷ್ಪ-2ʼ?: ಸ್ಪಷ್ಟನೆ ನೀಡಿದ ನಿರ್ಮಾಣ ಸಂಸ್ಥೆ

Bengaluru: ಚಿನ್ನದಂಗಡಿಯಲ್ಲಿ 3 ಕೆಜಿ ಚಿನ್ನ ದೋಚಿದ ಮಹಿಳೆ

Bengaluru: ಚಿನ್ನದಂಗಡಿಯಲ್ಲಿ 3 ಕೆಜಿ ಚಿನ್ನ ದೋಚಿದ ಮಹಿಳೆ

Expensive wedding: ಭಾರತದ ಅದ್ಧೂರಿ ಮದುವೆ ಮೇಲೆ ಈಗ ಐಟಿ ಕಣ್ಣು!

Expensive wedding: ಭಾರತದ ಅದ್ಧೂರಿ ಮದುವೆ ಮೇಲೆ ಈಗ ಐಟಿ ಕಣ್ಣು!

T20 Asia Cup: ಬಾಂಗ್ಲಾ ವಿರುದ್ದ ಅಂಡರ್‌ 19 ವನಿತಾ ಏಷ್ಯಾಕಪ್‌ ಚಾಂಪಿಯನ್‌ ಆದ ಭಾರತ

T20 Asia Cup: ಬಾಂಗ್ಲಾ ವಿರುದ್ದ ಅಂಡರ್‌ 19 ವನಿತಾ ಏಷ್ಯಾಕಪ್‌ ಚಾಂಪಿಯನ್‌ ಆದ ಭಾರತ

BBK11: ವೀಕ್ಷಕರಿಗೆ ಸರ್ಪ್ರೈಸ್;‌ ಮತ್ತೆ‌ ಬಿಗ್ ಬಾಸ್‌ಗೆ ಗೋಲ್ಡ್‌ ಸುರೇಶ್

BBK11: ವೀಕ್ಷಕರಿಗೆ ಸರ್ಪ್ರೈಸ್;‌ ಮತ್ತೆ‌ ಬಿಗ್ ಬಾಸ್‌ಗೆ ಗೋಲ್ಡ್‌ ಸುರೇಶ್

BGT 2024: Team India faces injury problems ahead of Melbourne match

BGT 2024: ಮೆಲ್ಬೋರ್ನ್‌ ಪಂದ್ಯಕ್ಕೂ ಟೀಂ ಇಂಡಿಯಾಗೆ ಗಾಯಾಳುಗಳ ಸಮಸ್ಯೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ayodhya: ಪೇಜಾವರ ಶ್ರೀಗಳ ನೇತೃತ್ವದಲ್ಲಿ ಇಂದು ನಡೆದ ಮಂಡಲೋತ್ಸವ

Ayodhya: ಪೇಜಾವರ ಶ್ರೀಗಳ ನೇತೃತ್ವದಲ್ಲಿ ಇಂದು ನಡೆದ ಮಂಡಲೋತ್ಸವ

ram mandir imp

Ayodhya: ವ್ಯಾಟಿಕನ್‌, ಮೆಕ್ಕಾ ಮೀರಿಸಲಿದೆ- ವರ್ಷಕ್ಕೆ ಐದು ಕೋಟಿ ಭಕ್ತರು ಭೇಟಿ ನಿರೀಕ್ಷೆ

ram mandir 2

Ayodhya: ಅಯೋಧ್ಯೆಯಲ್ಲಿ ಕರ್ನಾಟಕ ಸರಕಾರದಿಂದ ಅತಿಥಿಗೃಹ ?

yogi ram mandir

Ayodhya: ಭೇಟಿ ಬಗ್ಗೆ ಹತ್ತು ದಿನ ಮೊದಲೇ ತಿಳಿಸಿ: ವಿವಿಐಪಿಗಳಿಗೆ ಯೋಗಿ ಸರಕಾರದ ಕೋರಿಕೆ

ram mandir 2

Ram Mandir: ಭಕ್ತ ಪ್ರವಾಹ- ರಾಮನ ದರ್ಶನ ಸಮಯ ವಿಸ್ತರಣೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Stories: ಹಾಡಿನಂಥ ಕಾಡುವಂಥ ಕಥೆಗಳು

Stories: ಹಾಡಿನಂಥ ಕಾಡುವಂಥ ಕಥೆಗಳು

Pushpa-2: ಸಂಕ್ರಾಂತಿಗೆ ಓಟಿಟಿಗೆ ಬರುತ್ತಾ ʼಪುಷ್ಪ-2ʼ?: ಸ್ಪಷ್ಟನೆ ನೀಡಿದ ನಿರ್ಮಾಣ ಸಂಸ್ಥೆ

Pushpa-2: ಸಂಕ್ರಾಂತಿಗೆ ಓಟಿಟಿಗೆ ಬರುತ್ತಾ ʼಪುಷ್ಪ-2ʼ?: ಸ್ಪಷ್ಟನೆ ನೀಡಿದ ನಿರ್ಮಾಣ ಸಂಸ್ಥೆ

Tragic: ಗಂಡನ ಮೇಲೆ ಅನುಮಾನ: ಹೆಂಡತಿ ನೇಣಿಗೆ ಶರಣು

Tragic: ಗಂಡನ ಮೇಲೆ ಅನುಮಾನ: ಹೆಂಡತಿ ನೇಣಿಗೆ ಶರಣು

4

Bengaluru: ಹಫ್ತಾ ನೀಡಲು ವ್ಯಾಪಾರಿಗೆ ಜೈಲಿನಿಂದಲೇ ಧಮ್ಕಿ!

Bengaluru: ಚಿನ್ನದಂಗಡಿಯಲ್ಲಿ 3 ಕೆಜಿ ಚಿನ್ನ ದೋಚಿದ ಮಹಿಳೆ

Bengaluru: ಚಿನ್ನದಂಗಡಿಯಲ್ಲಿ 3 ಕೆಜಿ ಚಿನ್ನ ದೋಚಿದ ಮಹಿಳೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.