ಅಯೋಧ್ಯೆಯ ಇತಿಹಾಸದಲ್ಲಿ ಇವರೂ ಶಾಶ್ವತ


Team Udayavani, Aug 5, 2020, 7:35 AM IST

Ayodhya 4

ಅಯೋಧ್ಯೆ: ಹಲವು ಶತಮಾನಗಳ ಬಳಿಕ ರಾಮನಿಗೆ ದೇವಾಲಯವನ್ನು ನಿರ್ಮಿಸಲಾಗುತ್ತಿದೆ.

ಭೂಮಿ ಪೂಜೆಗೆ ಮೊದಲು ಅಯೋಧ್ಯೆಯಲ್ಲಿ ದೀಪಾವಳಿಯ ವಾತಾವರಣ ಮನೆಮಾಡಿದೆ.

ಮನೆ ಮನೆಗೆ ತೆರಳಿ ಭಜನೆಗಳನ್ನು ಹಾಡಲಾಗುತ್ತಿದೆ. ದೀಪಗಳನ್ನು ಬೆಳಗಿಸಲಾಗುತ್ತಿದೆ.

ನಾಳೆ ಭೂಮಿ ಪೂಜೆಯ ದಿನದಂದು ಅಯೋಧ್ಯೆಯಲ್ಲಿ 55 ಸಾವಿರ ಕೆ.ಜಿ. ತುಪ್ಪದಿಂದ ತಯಾರಿಸಿದ 14 ಲಕ್ಷ ಲ್ಯಾಡಸ್‌ ಗ್ರಾಂ. ಹಿಟ್ಟನ್ನು ವಿತರಿಸಲು ಸಿದ್ಧತೆ ನಡೆಸಲಾಗುತ್ತಿದೆ.

ಇಲ್ಲಿ ಕೆಲವು ಕಥೆಗಳನ್ನು ನೀಡಲಾಗಿದೆ. ಇವುಗಳು ಅಲ್ಲಿನ ಜನರು ಬದುಕಿದ ಬಗೆಯಾಗಿದೆ. ಅಯೋಧ್ಯೆಯ ತೀರ್ಪು ಬಂದು ಕೆಲವು ತಿಂಗಳಾದರೂ ಅಲ್ಲಿ ರಾಮನ ಪ್ರತಿಷ್ಠಾಪನೆಗಾಗಿ ಇವರು ಅವಿರತವಾಗಿ ದುಡಿಯುತ್ತಾ ಇದ್ದಾರೆ.

3 ದಶಕಗಳಿಂದ ಕಲ್ಲು ಕೆತ್ತನೆ
ವಿಶ್ವ ಹಿಂದೂ ಪರಿಷತ್ತಿನ ಕಾರ್ಯಾಗಾರವು ಅಯೋಧ್ಯೆಯ ಕರಸೇವಕಪುರಂನಿಂದ ಆಣತಿ ದೂರದಲ್ಲಿದೆ. 30 ವರ್ಷಗಳಿಂದ ರಾಮ ದೇವಾಲಯದ ಕಲ್ಲಿನ ಕೆಲಸ ನಡೆಯುತ್ತಿದ್ದ ಸ್ಥಳ ಇದಾಗಿದೆ. ಇನ್ನೂ ಅಯೋಧ್ಯೆಯಲ್ಲಿ ಮಂದಿರ ನಿರ್ಮಾಣದ ನಿರ್ಧಾರವಾಗುವ ಮೊದಲೇ ನೂರಾರು ಜನರು ಪ್ರತಿದಿನ ಈ ಕಾರ್ಯಾಗಾರಕ್ಕೆ ಕಲ್ಲುಗಳನ್ನು ಕೆತ್ತುತ್ತಿದ್ದರು. ಅವರ ಎಲ್ಲರ ಶ್ರಮವಾಗಿ 3-4 ವರ್ಷದಲ್ಲಿ ಅಯೋಧ್ಯೆಯಲ್ಲಿ ಭವ್ಯ ಮಂದಿರ ಎದ್ದು ನಿಲ್ಲಲಿದೆ.

ಕೆತ್ತನೆ ಕಾರ್ಯದಲ್ಲಿ ತೊಡಗಿದ ಎರಡು ಕೈಗಳ ಪರಿಚಯ ಇಲ್ಲಿದೆ. 80 ವರ್ಷ ವಯಸ್ಸಿನ ಆನು ಸೊಂಪೂರ ಎಂಬವರು ಅವರಲ್ಲಿ ಒಬ್ಬರು. ಅವರು 50 ವರ್ಷದವರಾಗಿದ್ದಾಗ ಅಯೋಧ್ಯೆಗೆ ಬಂದವರು. ಇಲ್ಲಿಗೆ ಬೆಉವ ಮೊದಲು ಅಹಮದಾಬಾದ್‌ನಲ್ಲಿ ದೇವಾಲಯವನ್ನು ನಿರ್ಮಿಸುತ್ತಿದ್ದರು. 1990ರ ಸೆಪ್ಟೆಂಬರ್‌ನಲ್ಲಿ ರಾಮ ಮಂದಿರದ ಶಿಲೆಗಳ ಕೆತ್ತನೆ ಕಾರ್ಯವನ್ನು ಮಾಡುತ್ತಿದ್ದಾರೆ. ಮಿರ್ಜಾಪುರ ಮೂಲದ ಜಂಗೂರ್‌ ಎಂಬವರೂ ಕೆಲಸ ಮಾಡುತ್ತಾರೆ. ಅವರಿಗೆ 50 ವರ್ಷ. ಅವರು 2001ರಿಂದ ಇಲ್ಲಿ ಕಲ್ಲು ಕೆತ್ತನೆ ಕೆಲಸ ಮಾಡುತ್ತಿದ್ದಾರೆ. ವಿಶೇಷ ಎಂದರೆ ಅವರ ಮಗನೂ ಇಲ್ಲಿ ಕಲ್ಲಿನ ಕೆತ್ತನೆಯಲ್ಲಿ ನಿರತನಾಗಿದ್ದಾನೆ.

5 ತಲೆಮಾರಿನ ಸೇವೆ ಇದು
ರಾಮ ಮಂದಿರದ ಹೋರಾಟಗಾರ ಜತೆ ಒಂದು ಕುಟುಂಬ ತನ್ನನ್ನು ಮಂದಿರಕ್ಕಾಗಿ ಅರ್ಪಿಸಿದೆ. ಮುನ್ನಾ ಮಾಲಿ ಎಂಬವರು ಅಯೋಧ್ಯೆಯಲ್ಲಿ ಪುಟ್ಟ ಅಂಗಡಿಯೊಂದನ್ನು ನಡೆಸುತ್ತಾರೆ. ಇದು ರಾಮ್‌ ಜನ್ಮಭೂಮಿಯ ಪಕ್ಕದಲ್ಲಿರುವ ಡೋರಾಹಿ ಕುನ್ವಾ ಮೊಹಲ್ಲಾದ ಬೀದಿಯಲ್ಲಿದೆ. ಅಲ್ಲಿ ಮುನ್ನಾ ಮಾಲಿ ಅವರ ತಾಯಿ ಮತ್ತು ಸಹೋದರಿಗೆ ಹೂವಿನ ಮಾಲೆ ಮಾಡಿ ಅದನ್ನು ಮಾರಾಟ ಮಾಡುತ್ತಾರೆ. ಅವರ ಕುಟಂಬ ರಾಮನಿಗೆ ಹೂವಿನ ಮಾಲೆಯನ್ನು ಹಾಕುತ್ತಾ ಬಂದಿದ್ದಾರೆ.

“ಮೂರು ತಲೆಮಾರುಗಳಿಂದ ನಾವು ರಾಮ್‌ಲಲ್ಲಾಗೆ ಹೂ ಮಾಲೆಗಳನ್ನು ಹಾಕುತ್ತಾ ಬಂದಿದ್ದೇವೆ’ ಎಂದು ಮುನ್ನಾ ಮಾಲಿಯ ತಾಯಿ ಸುಕೃತಿ ದೇವಿ ಹೆಮ್ಮೆಯಿಂದ ಹೇಳುತ್ತಾರೆ. ಈ ಮೊದಲು ನಮ್ಮ ಮಾವ ಈ ಕೆಲಸವನ್ನು ಮಾಡುತ್ತಿದ್ದರು. ಆದರೆ ಅವರು ನಿಧನರಾದ ಬಳಿಕ ಮುನ್ನಾ ಈ ಕೆಲಸವನ್ನು ವಹಿಸಿಕೊಂಡರು. ಪ್ರತಿದಿನ ಬೆಳಗ್ಗೆ 10 ಗಂಟೆಗೆ ಇಪ್ಪತ್ತು ಮಾಲೆಗಳನ್ನು ದೇವಸ್ಥಾನಕ್ಕೆ ಕಳುಹಿಸಲಾಗುತ್ತದೆ.

ಮತ್ತೂಂದು ಉದಾಹರಣೆ ಇದೆ. ಅದು ಇಲ್ಲಿನ ಜೈನ ದೇವಾಲಯದ ಬಳಿ ಪಾನ್‌ ಅಂಗಡಿಯೊಂದರದು. ಇದನ್ನು ದೀಪಕ್‌ ಚೌರಾಸಿಯಾ ಎಂಬವರು ನಡೆಸುತ್ತಿದ್ದಾರೆ. ಅವರ ತಂದೆ ಖುಷಿಗಾಗಿ ದೇವಾಲಯಕ್ಕೆ ವೀಳ್ಯದ ಎಲೆಗಳನ್ನು ನೀಡುತ್ತಿದ್ದರಂತೆ. ಬಳಿಕ ಈ ಸಂಪ್ರದಾಯ ಮುಂದುವರಿದೆ. ದೀಪಕ್‌ ಚೌರಾಸಿಯಾ ಅವರ ತಂದೆ ಕಾಲಾಧಿನರಾದ ಬಳಿಕ ಈ ಜವಾಬ್ದಾರಿ ಮಗನ ಮೇಲೆ ಬಿದ್ದಿದೆ. ಬೆಳಗ್ಗೆ 8.30ರಿಂದ 9 ಗಂಟೆಯ ಮಧ್ಯೆ ದೇವರಿಗೆ 20 ಸಿಹಿ ಪಾನ್‌ ತಯಾರಿಸುತ್ತಾರೆ. ಬಳಿಕ 10.30ರ ಸುಮಾರಿಗೆ ಅವನ್ನು ದೇವಸ್ಥಾನಕ್ಕೆ ತಲುಪಿಸುತ್ತಾರಂತೆ.

ನಮಗೆ ಸಿಕ್ಕ ಭೂಮಿಯಲ್ಲಿ ಶಾಲೆ ಅಥವಾ ಆಸ್ಪತ್ರೆ ನಿರ್ಮಿಸಿ
ಮಸೀದಿ ನಿರ್ಮಾಣಕ್ಕಾಗಿ ಸುನ್ನಿ ವಕ್ಫ್ ಮಂಡಳಿಗೆ ದೊರೆತ ಜಮೀನು ಕೃಷಿ ಇಲಾಖೆಯ ಫಾರ್ಮ್ ಹೌಸ್‌ಗೆ ಸೇರಿದೆ. ಅಲ್ಲಿ ಭತ್ತದ ಬೆಳೆಯಲಾಗುತ್ತದೆ. ಆ ಹೊಲದಲ್ಲಿ ಕೃಷಿ ಮಾಡುವ ಕೆಲವು ಕಾರ್ಮಿಕರಿದ್ದಾರೆ. ಸುಪ್ರೀಂ ಕೋರ್ಟ್‌ ಆದೇಶದ ಅನಂತರ ಉತ್ತರ ಪ್ರದೇಶ ಮಸೀದಿಗೆ ಸುನ್ನಿ ವಕ್ಫ್ ಮಂಡಳಿಗೆ ನೀಡಿದೆ. ಈ ಭೂಮಿ ಧನ್ನಿಪುರ ಗ್ರಾಮದಲ್ಲಿ ಬರುತ್ತದೆ. ಅಲ್ಲಿನ ಸ್ಥಳೀಯರೊಬ್ಬರು ಇಲ್ಲಿ ಅನೇಕ ಮಸೀದಿಗಳು ಸಾಕಷ್ಟು ಸಂಖ್ಯೆಯಲ್ಲಿವೆ. ಆದರೆ ಮಕ್ಕಳಿಗೆ ಉತ್ತಮ ಆಸ್ಪತ್ರೆ ಅಥವಾ ಶಾಲೆ ಇಲ್ಲ. ನಮಗೆ ಮಸೀದಿಗಿಂತ ಇಲ್ಲಿ ಶಿಕ್ಷಣ ಹಾಗೂ ಆರೋಗ್ಯದ ಅಭಾವ ಇದೆ ಎನ್ನುತ್ತಾರೆ ಎಂದು ದೈನಿಕ್‌ ಬಾಸ್ಕರ್‌ ವರದಿ ಮಾಡಿದೆ.

ಟಾಪ್ ನ್ಯೂಸ್

1-deee

Allu Arjun ನಿವಾಸದಲ್ಲಿ ದಾಂಧಲೆ!; 8 ಮಂದಿ ಬಂಧನ: ಕೃತ್ಯ ಎಸಗಿದ್ದು ಯಾರು?

sullia

Davanagere: ವೃದ್ಧೆ ಮೇಲೆ ಅತ್ಯಾ*ಚಾರ; ಯುವಕನಿಗೆ 10 ವರ್ಷ ಕಠಿಣ ಶಿಕ್ಷೆ

Baduta-Mandya

Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!

1-women

ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90

Kuwait-PM

Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ

police crime

Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ

Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!

Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ayodhya: ಪೇಜಾವರ ಶ್ರೀಗಳ ನೇತೃತ್ವದಲ್ಲಿ ಇಂದು ನಡೆದ ಮಂಡಲೋತ್ಸವ

Ayodhya: ಪೇಜಾವರ ಶ್ರೀಗಳ ನೇತೃತ್ವದಲ್ಲಿ ಇಂದು ನಡೆದ ಮಂಡಲೋತ್ಸವ

ram mandir imp

Ayodhya: ವ್ಯಾಟಿಕನ್‌, ಮೆಕ್ಕಾ ಮೀರಿಸಲಿದೆ- ವರ್ಷಕ್ಕೆ ಐದು ಕೋಟಿ ಭಕ್ತರು ಭೇಟಿ ನಿರೀಕ್ಷೆ

ram mandir 2

Ayodhya: ಅಯೋಧ್ಯೆಯಲ್ಲಿ ಕರ್ನಾಟಕ ಸರಕಾರದಿಂದ ಅತಿಥಿಗೃಹ ?

yogi ram mandir

Ayodhya: ಭೇಟಿ ಬಗ್ಗೆ ಹತ್ತು ದಿನ ಮೊದಲೇ ತಿಳಿಸಿ: ವಿವಿಐಪಿಗಳಿಗೆ ಯೋಗಿ ಸರಕಾರದ ಕೋರಿಕೆ

ram mandir 2

Ram Mandir: ಭಕ್ತ ಪ್ರವಾಹ- ರಾಮನ ದರ್ಶನ ಸಮಯ ವಿಸ್ತರಣೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-deee

Allu Arjun ನಿವಾಸದಲ್ಲಿ ದಾಂಧಲೆ!; 8 ಮಂದಿ ಬಂಧನ: ಕೃತ್ಯ ಎಸಗಿದ್ದು ಯಾರು?

4

Karkala: ಅಸ್ವಸ್ಥಗೊಂಡು ವ್ಯಕ್ತಿ ಸಾವು

sullia

Davanagere: ವೃದ್ಧೆ ಮೇಲೆ ಅತ್ಯಾ*ಚಾರ; ಯುವಕನಿಗೆ 10 ವರ್ಷ ಕಠಿಣ ಶಿಕ್ಷೆ

1-vasu

Vasundhara Raje ಬೆಂಗಾವಲು ವಾಹನ ಪಲ್ಟಿ; ನಾಲ್ವರು ಪೊಲೀಸರಿಗೆ ಗಾಯ

Baduta-Mandya

Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.