ನಾಳೆ ಅಯೋಧ್ಯೆಯಲ್ಲಿ ಏನೇನಿರಲಿದೆ? ಭದ್ರತೆ ಹೇಗಿದೆ ಗೊತ್ತಾ?
Team Udayavani, Aug 4, 2020, 8:37 PM IST
ಅಯೋಧ್ಯೆ: ಬುಧವಾರ ಭೂಮಿ ಪೂಜೆ ನೆರವೇರಲಿರುವ ಅಯೋಧ್ಯೆ ನಗರಿ ಶೃಂಗಾರಗೊಂಡಿದೆ.
ರಾಮ ದೇವಾಲಯದ ನಿರ್ಮಾಣಕ್ಕಾಗಿ ನಡೆಯುತ್ತಿರುವ ಮೂರು ದಿನಗಳ ಆಚರಣೆಯ ಭಾಗವಾಗಿ ಎರಡನೇ ದಿನವಾದ ಮಂಗಳವಾರ, ರಾಮಾರ್ಚ ಪೂಜೆ ನಡೆಯಿತು.
ಕಾಶಿ ಮತ್ತು ಅಯೋಧ್ಯೆಯ 9 ವೇದಾಚಾರ್ಯರು ಪೂಜೆ ನೆರವೇರಿಸಿದರು.
ಅಶೋಕ್ ಸಿಂಘಾಲ್ ಅವರ ಆಪ್ತ ಮಹೇಶ್ ಬಲ್ಚಂದಾನಿ ಮತ್ತು ಅವರ ಪತ್ನಿ ಸುನೀತಾ ಬಾಲ್ಚಂದಾನಿ ಅವರು ಪೂಜೆಯ ಸಂದರ್ಭ ಉಪಸ್ಥಿತರಿದ್ದರು.
ಪಾರಿಜಾತದ ಗಿಡ ನಡೆಲಿರುವ ಪ್ರಧಾನಿ
ನಾಳೆ ಪ್ರಧಾನಿ ನರೇಂದ್ರ ಮೋದಿ ಅಯೋಧ್ಯೆ ತಲುಪಲಿದ್ದಾರೆ. ಭೂಮಿ ಪೂಜೆಯ ಸಮಯದಲ್ಲಿ ಅವರು 40 ಕೆಜಿ ಬೆಳ್ಳಿ ಇಟ್ಟಿಗೆಯನ್ನು ರಾಮ್ ದೇವಾಲಯದ ಅಡಿಪಾಯದಲ್ಲಿ ಹಾಕಲಿದ್ದಾರೆ. ಬಳಿಕ ದೇಗುಲದ ಆವರಣದಲ್ಲಿ ಪಾರಿಜಾತದ ಗಿಡವನ್ನು ನೆಡಲಿದ್ದಾರೆ. ಈ ಪೂಜೆಯ ಮೊದಲು ಮೋದಿ ಹನುಮಾನ್ ಗರ್ಹಿಗೆ ತೆರಳಿ ದರ್ಶನ ಪಡೆಯಲಿದ್ದಾರೆ. ಇದೇ ಸಂದರ್ಭ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಅವರು ಅಯೋಧ್ಯೆಯನ್ನು ತಲುಪಲಿದ್ದಾರೆ. ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮೋದಿಯವರೊಂದಿಗೆ ವೇದಿಕೆ ಹಂಚಿಕೊಳ್ಳಲಿದ್ದಾರೆ.
3 ಗಂಟೆಗಳನ್ನು ಕಳೆಯಲಿರುವ ಮೋದಿ
ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ಮಧ್ಯಾಹ್ನ 12: 30ಕ್ಕೆ ಭೂಮಿ ಪೂಜೆ ನೆರವೇರಿಸಲಿದ್ದಾರೆ. ಇದು 10 ನಿಮಿಷಗಳ ಕಾಲ ಇರಲಿದೆ. 3 ಗಂಟೆಗಳ ಕಾಲ ಪ್ರಧಾನಿಗಳು ಅಯೋಧ್ಯೆಯಲ್ಲೇ ಇರಲಿದ್ದಾರೆ. ಕಾರ್ಯಕ್ರಮದ ನೇರ ಪ್ರಸಾರಕ್ಕಾಗಿ 48ಕ್ಕೂ ಹೆಚ್ಚು ಹೈಟೆಕ್ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಈ ಕ್ಯಾಮೆರಾಗಳು ದೂರದರ್ಶನ ಮತ್ತು ಎಎನ್‌ಐ ನ್ಯೂಸ್ ಏಜೆನ್ಸಿಯಿಂದ ಆಗಮಿಸಿವೆ. ಅಯೋಧ್ಯೆಯಲ್ಲಿ ನಡೆಯಲಿರುವ ದೀಪೋತ್ಸವ ಮತ್ತು ಇತರ ಕಾರ್ಯಕ್ರಮಗಳಿಗಾಗಿ ಚಾನೆಲ್‌ಗಳ ಒಬಿ ವ್ಯಾನ್ ಮೂರು ದಿನಗಳಿಂದ ರಾಮ್ ಕಿ ಪೌರಿಯಲ್ಲೇ ಇವೆ.
ರಾಜನಾಥ್ ಮತ್ತು ಕಲ್ಯಾಣ್ ಸಿಂಗ್ ಇಲ್ಲ
ಸಮಾರಂಭಕ್ಕೆ ಶ್ರೀರಾಮ್ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ದೇಶದ ಎಲ್ಲ ಸಂಪ್ರದಾಯಗಳ ಸಂತರು ಮತ್ತು ಇತರ ಜನರು ಸೇರಿದಂತೆ 175 ಮಂದಿಯನ್ನು ಆಹ್ವಾನಿಸಿದೆ. ಕೊರೊನಾ ಹಿನ್ನೆಲೆಯಲ್ಲಿ ಅಯೋಧ್ಯೆಗೆ ಭೇಟಿ ನೀಡುವ ಕಾರ್ಯಕ್ರಮವನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಮಾಜಿ ಮುಖ್ಯಮಂತ್ರಿ ಕಲ್ಯಾಣ್ ಸಿಂಗ್ ರದ್ದುಪಡಿಸಿದ್ದಾರೆ. ಆದರೆ ಹಿರಿಯ ನಾಯಕರಾದ ಎಲ್. ಕೆ.ಅಡ್ವಾಣಿ ಮತ್ತು ಮುರಳಿ ಮನೋಹರ್ ಜೋಶಿ ಅವರು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಸೇರಿಕೊಳ್ಳಲಿದ್ದಾರೆ.
ಎಸ್ಪಿಜಿಗೆ ಭದ್ರತಾ ವ್ಯವಸ್ಥೆಯ ಹೊಣೆ
ಅಯೋಧ್ಯೆಯ ರಾಮ ದೇವಸ್ಥಾನದ ಭೂಮಿ ಪೂಜೆಗೆ ಎಲ್ಲ ಸಿದ್ಧತೆಗಳು ಪೂರ್ಣಗೊಂಡಿವೆ. ಬುಧವಾರದ ಎಲ್ಲ ಕಾರ್ಯಗಳು ಯಶಸ್ವಿಯಾಗಿ ನೆರವೇರಲು ಬಿಗಿ ಭದ್ರತೆಯನ್ನು ವಹಿಸಿಕೊಳ್ಳಲಾಗಿದೆ. ಎಸ್ಪಿಜಿ ಭದ್ರತೆಯ ಹೊಣೆ ವಹಿಸಿಕೊಂಡಿದೆ. ನಗರಗಳಿಗೆ ಹೊರಗಿನವರು ಪ್ರವೇಶಿಸುವುದನ್ನು ತಡೆಯಲಾಗಿದ್ದು, ಸ್ಥಳೀಯರು ಗುರುತಿನ ಚೀಟಿ ಇಟ್ಟುಕೊಂಡು ಸಂಚರಿಸಬೇಕಾಗಿದೆ. ಬಿಜೆಪಿಯ ಹಿರಿಯ ನಾಯಕಿ ಉಮಾ ಭಾರತಿ, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಬುಧವಾರ ಸಂಜೆ ಅಯೋಧ್ಯೆ ತಲುಪಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ayodhya: ಪೇಜಾವರ ಶ್ರೀಗಳ ನೇತೃತ್ವದಲ್ಲಿ ಇಂದು ನಡೆದ ಮಂಡಲೋತ್ಸವ
Ayodhya: ವ್ಯಾಟಿಕನ್, ಮೆಕ್ಕಾ ಮೀರಿಸಲಿದೆ- ವರ್ಷಕ್ಕೆ ಐದು ಕೋಟಿ ಭಕ್ತರು ಭೇಟಿ ನಿರೀಕ್ಷೆ
Ayodhya: ಅಯೋಧ್ಯೆಯಲ್ಲಿ ಕರ್ನಾಟಕ ಸರಕಾರದಿಂದ ಅತಿಥಿಗೃಹ ?
Ayodhya: ಭೇಟಿ ಬಗ್ಗೆ ಹತ್ತು ದಿನ ಮೊದಲೇ ತಿಳಿಸಿ: ವಿವಿಐಪಿಗಳಿಗೆ ಯೋಗಿ ಸರಕಾರದ ಕೋರಿಕೆ
Ram Mandir: ಭಕ್ತ ಪ್ರವಾಹ- ರಾಮನ ದರ್ಶನ ಸಮಯ ವಿಸ್ತರಣೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.