ಬೃಹತ್‌ ಬದಲಾವಣೆಗೆ ಮುನ್ನುಡಿ ಬರೆದಿತ್ತು ರಥಯಾತ್ರೆ

Team Udayavani, Oct 1, 2020, 5:58 AM IST

ಬೃಹತ್‌ ಬದಲಾವಣೆಗೆ ಮುನ್ನುಡಿ ಬರೆದಿತ್ತು ರಥಯಾತ್ರೆ

1990ರ ಸೆಪ್ಟಂಬರ್‌-ಅಕ್ಟೋಬರ್‌ನಲ್ಲಿ ಗುಜರಾತ್‌ನ ಸೋಮನಾ ಥಪುರದ ಜ್ಯೋತಿರ್ಲಿಂಗ ದೇಗುಲದಿಂದ ಆರಂಭವಾಗಿ, ಅಯೋಧ್ಯೆಯಲ್ಲಿ ಮುಗಿದ ರಥಯಾತ್ರೆಯ ನೇತೃತ್ವ ವಹಿಸಿದ್ದು ಆಗಿನ ಬಿಜೆಪಿ ಅಧ್ಯಕ್ಷ ಲಾಲ್‌ಕೃಷ್ಣ ಆಡ್ವಾಣಿ. ಅಯೋಧ್ಯೆಯಲ್ಲಿ ರಾಮನ ದೇಗುಲ ನಿರ್ಮಾಣವಾಗಬೇಕು ಎಂಬುದು ವಿಶ್ವ ಹಿಂದೂ ಪರಿಷತ್‌ ಸೇರಿದಂತೆ ದೇಶದ ಅನೇಕ ಹಿಂದೂ ಸಂಘಟನೆಗಳ ಆಶಯವಾಗಿತ್ತು. ಅದಕ್ಕೆ ರಾಜಕೀಯ ಅಭಿಯಾನದ ಸ್ಪರ್ಶ ಕೊಟ್ಟಿದ್ದು ಬಿಜೆಪಿ.

ದಿನಕ್ಕೆ ಸರಾಸರಿ 300 ಕಿ.ಮೀ. ಸಾಗುತ್ತಿತ್ತು ರಥಯಾತ್ರೆ. ಆ ದೈನಂದಿನ ವ್ಯಾಪ್ತಿಯಲ್ಲಿ ಬರುವ ಎಲ್ಲ ಪ್ರಮುಖ ಪಟ್ಟಣಗಳಲ್ಲಿ ಆಡ್ವಾಣಿಯವರು ಬಹಿರಂಗ ಸಮಾವೇಶ ನಡೆಸುತ್ತಿದ್ದರು. ಸಮಾರಂಭಕ್ಕೆ ಆಗಮಿಸುವ ಬೃಹತ್‌ ಜನಸ್ತೋಮಕ್ಕೆ ಕರಪತ್ರಗಳನ್ನು ವಿತರಿಸಲಾಗುತ್ತಿತ್ತು. ಅಯೋಧ್ಯೆಯಲ್ಲಿ ಕಟ್ಟಲು ಉದ್ದೇಶಿಸಿದ್ದ ರಾಮ ಮಂದಿರದ ವಿನ್ಯಾಸದ ಚಿತ್ರಗಳನ್ನು ಸಭಿಕರಿಗೆ ಹಂಚಲಾಗುತ್ತಿತ್ತು.

ಅಡೆ-ತಡೆಗಳು: ಆಡ್ವಾಣಿ ರಥಯಾತ್ರೆಯನ್ನು ಶುರು ಮಾಡುವ ಸುದ್ದಿ ಹೊರಬೀಳುತ್ತಲೇ ಎಡಪಕ್ಷಗಳ ನಾಯಕರ ಕಣ್ಣುಗಳು ಕೆಂಪಾಗಿದ್ದವು. ಹಾಗಾಗಿ, ಸೋಮನಾಥಪುರದಿಂದ ದಿಲ್ಲಿಗೆ ಆಗಮಿಸುವ ಮಾರ್ಗ ಮಧ್ಯೆ ಆಯಾ ರಾಜ್ಯಗಳಲ್ಲಿ ರಥಯಾತ್ರೆ ವಿರುದ್ಧ ಪ್ರತಿಭಟನೆಗಳು, ಅಲ್ಲಲ್ಲಿ ಹಿಂಸಾಚಾರಗಳು ನಡೆದವು. ಇದರ ಆಧಾರದಲ್ಲಿ, ರಥಯಾತ್ರೆ ದಿಲ್ಲಿಗೆ ಆಗಮಿಸುತ್ತಲೇ ಆಡ್ವಾಣಿಯವರನ್ನು ಪೊಲೀಸರು ವಶಕ್ಕೆ ಪಡೆದು, ರಥಯಾತ್ರೆಗೆ ಬ್ರೇಕ್‌ ಹಾಕಲು ಆಗಿನ ಪ್ರಧಾನಿ ವಿ.ಪಿ. ಸಿಂಗ್‌ ನೇತೃತ್ವದ ಸರಕಾರ ಮನಸ್ಸು ಮಾಡಿತ್ತು. ಸರಕಾರದ ಇಚ್ಛೆ ಅರಿತ ಆಡ್ವಾಣಿ, ರಥಯಾತ್ರೆ ದಿಲ್ಲಿಗೆ ಬರುತ್ತಲೇ ಕೆಲವು ದಿನಗಳ ಕಾಲ ಅದನ್ನು ಸ್ಥಗಿತಗೊಳಿ ಸಿಬಿಟ್ಟರು. ಅದರಿಂದ ಆಡ್ವಾಣಿಯವರ ಬಂಧನವೂ ಆಗಲಿಲ್ಲ!

ಮತ್ತೆ ಯಾತ್ರೆ, ಮತ್ತೆ ಗಲಾಟೆ: ಪರಿಸ್ಥಿತಿ ಸುಧಾರಿಸಿದ ಅನಂತರ, ಆಡ್ವಾಣಿಯವರು, ಈ ಯಾತ್ರೆಯನ್ನು ಬಿಹಾರದಿಂದ ಮತ್ತೆ ಶುರು ಮಾಡಲು ನಿರ್ಧರಿಸಿದರು. ಅದಕ್ಕೆ ಸಿದ್ಧತೆಗಳೂ ಆರಂಭಗೊಂಡವು. ಆಡ್ವಾಣಿ ಅವಿಭಜಿತ ಬಿಹಾರದ ಧನಬಾದ್‌ಗೆ ತಲುಪಿ, ಯಾತ್ರೆ ಚಾಲನೆಗೊಳಿಸಿದರು. ಇದನ್ನು ತಡೆಯಲು ಬಿಹಾರದಲ್ಲಿ ಅಧಿಕಾರದಲ್ಲಿ ಇದ್ದ ಲಾಲು ಸರಕಾರ ಆಡ್ವಾಣಿ, ವಿಎಚ್‌ಪಿ ನಾಯಕ ಅಶೋಕ್‌ ಸಿಂಘಾಲ್‌ ಇತರರನ್ನೂ ಕೆಲವು ಸಮಯ ಗೃಹಬಂಧನದಲ್ಲಿಟ್ಟಿತು.

ಆನಂತರ ಬೇಗನೇ ರಥಯಾತ್ರೆಯು ಬಿಜೆಪಿಯೇ ಅಧಿಕಾರದಲ್ಲಿದ್ದ ಉತ್ತರ ಪ್ರದೇಶಕ್ಕೆ ಲಗ್ಗೆಯಿಟ್ಟಿತು. ರಥಯಾತ್ರೆ ಮುಂದುವರಿದಂತೆಲ್ಲ ದೇಶದ ಅಲ್ಲಲ್ಲಿ ಗಲಭೆಗಳು ನಡೆದವು. ಜೈಪುರ, ಜೋಧಪುರ, ಅಹ್ಮದಾಬಾದ್‌, ಬರೋಡಾ, ಹೈದರಾಬಾದ್‌ನಲ್ಲಿ ಗಲಭೆಗಳಾದವು. ಆ ಘಟನೆಗಳಲ್ಲಿ ನೂರಾರು ಹಿಂದೂಗಳು, ಮುಸಲ್ಮಾನರು ಸಾವನ್ನಪ್ಪಬೇಕಾ ಯಿತು. ಹೆಚ್ಚಿನ ಗಲಭೆಗಳು ಅಯೋಧ್ಯೆಯಿರುವ ಉತ್ತರ ಪ್ರದೇಶದಲ್ಲೇ ನಡೆದವು. ಆದರೆ, ಇದ್ಯಾವುದೂ ರಥಯಾತ್ರೆಯ ವೇಗಕ್ಕೆ ತಡೆ ಮಾಡಲಿಲ್ಲ. ರಥಯಾತ್ರೆ ಅಯೋಧ್ಯೆಯವರೆಗೆ ಸಾಗಿತು.

ಆಡ್ವಾಣಿ, ಜೋಷಿ ಹಾಗೂ ಇತರರ ವಿರುದ್ಧ ಆರೋಪ…
ಡಿಸೆಂಬರ್‌ 6, 1992: ಅಯೋಧ್ಯೆಯಲ್ಲಿ ಸಾಗರೋಪಾದಿಯಲ್ಲಿ ಜನ ನೆರೆದಿದ್ದರು. ಆ ವೇಳೆ ನೋಡನೋಡುತ್ತಿದ್ದಂತೆಯೇ ಉದ್ರಿಕ್ತ ಗುಂಪು ವಿವಾದಿತ ಕಟ್ಟಡ ಬಾಬರಿ ಮಸೀದಿಯನ್ನು ಧ್ವಂಸಮಾಡಿಬಿಟ್ಟಿತು.

ಈ ವಿಚಾರವಾಗಿ ಎರಡು ಎಫ್ಐಆರ್‌ ದಾಖಲಾದವು.

ಎಫ್ಐಆರ್‌ ನಂಬರ್‌ 197(ಮಸೀದಿ ಧ್ವಂಸ)- ಲಕ್ಷಾಂತರ ಕರಸೇವಕರ ವಿರುದ್ಧ ಕೇಸ್‌

ಎಫ್ಐಆರ್‌ ನಂಬರ್‌ 198(ಕ್ರಿಮಿನಲ್‌ ಸಂಚು)-ಆಡ್ವಾಣಿ, ಮುರಳಿ ಮನೋಹರ ಜೋಷಿ, ಅಶೋಕ್‌ ಸಿಂಘಾಲ್‌, ಬಾಳಾ ಠಾಕ್ರೆ, ಉಮಾ ಭಾರತಿ ಸೇರಿದಂತೆ ಇತರೆ 49 ಪ್ರಮುಖರ ವಿರುದ್ಧ ದೂರು ದಾಖಲು.

ಅಕ್ಟೋಬರ್‌ 8, 1993: ಎರಡೂ ಪ್ರಕರಣಗಳನ್ನೂ ಒಂದಾಗಿಸಿ ವಿಚಾರಣೆ ನಡೆಸಬೇಕೆಂದು ಉತ್ತರ ಪ್ರದೇಶ ಸರಕಾರದಿಂದ ನೋಟಿಫಿಕೇಷನ್‌ ಜಾರಿ.

ಅಕ್ಟೋಬರ್‌ 10, 1993: ಇವೆರಡೂ ಪ್ರಕರಣಗಳನ್ನು ಬೆಸೆದ ಸಿಬಿಐ, ಆಡ್ವಾಣಿ, ಬಿಜೆಪಿಯ ಇತರ ನಾಯಕರು ಸೇರಿದಂತೆ 13 ಜನರ ಮೇಲೆ ಪಿತೂರಿಯ ಆರೋಪ ಹೊರಿಸಿ ಚಾರ್ಜ್‌ ಶೀಟ್‌ ಸಿದ್ಧಪಡಿಸಿತು. ಲಕ್ನೋ ಕೋರ್ಟ್‌, ಈ ಪ್ರಕರಣಗಳಿಗೆ ಕ್ರಿಮಿನಲ್‌ ಸಂಚು ಎಂಬ ಆರೋಪವನ್ನು ಸೇರಿಸಿತು.

ಮೇ 4, 2001: ರಾಯ್‌ಬರೇಲಿಯ ವಿಶೇಷ ನ್ಯಾಯಾಲಯವು ಎಫ್ಐಆರ್‌ ನಂ 197 ಹಾಗೂ 198 ಅನ್ನು ಪ್ರತ್ಯೇಕಿಸಬೇಕೆಂದು ಆದೇಶ ನೀಡಿತು. ಅಲ್ಲದೇ ಎಲ್‌.ಕೆ.ಆಡ್ವಾಣಿ, ಕಲ್ಯಾಣ್‌ ಸಿಂಗ್‌ ಒಳಗೊಂಡು 13 ನಾಯಕರ ವಿರುದ್ಧ ದಾಖಲಾಗಿದ್ದ ಚಾರ್ಜ್‌ಶೀಟ್‌ ಅನ್ನು ರದ್ದುಗೊಳಿಸಿತು.

2003: ಸಿಬಿಐ ಪೂರಕ ಚಾರ್ಜ್‌ಶೀಟ್‌ ಸಲ್ಲಿಸಿತು. ಆದರೆ ಆಡ್ವಾಣಿ ವಿರುದ್ಧ ಸೂಕ್ತ ಸಾಕ್ಷ್ಯಾಧಾರಗಳಿಲ್ಲ ಎಂದು ರಾಯ್‌ಬರೇಲಿ ಕೋರ್ಟ್‌ ತೀರ್ಪು ನೀಡಿತು. ಪ್ರಕರಣದಲ್ಲಿ ಉ.ಪ್ರದೇಶ ಹೈಕೋರ್ಟ್‌ ಪ್ರವೇಶ. ಪಿತೂರಿ ಆರೋಪಗಳನ್ನು ಕೈಬಿಟ್ಟು, ವಿಚಾರಣೆ ಆರಂಭ.

ಜೂನ್‌ 2009: ಬಾಬರಿ ಮಸೀದಿ ನೆಲಕ್ಕುರುಳಿದ 17 ವರ್ಷ ಗಳ ಅನಂತರ ತನಿಖಾ ವರದಿ ಸಲ್ಲಿಸಿದ ಲೆಬ್ರಹಾನ್‌ ಸಮಿತಿ.
ಮೇ 20, 2010: ಆಡ್ವಾಣಿಯವರನ್ನು “ಕ್ರಿಮಿನಲ್‌ ಸಂಚಿನ’ ಆರೋಪದಿಂದ ಮುಕ್ತಗೊಳಿಸಿ, 2001ರ ರಾಯ್‌ಬರೇಲಿ ವಿಶೇಷ ನ್ಯಾಯಾಲಯದ ತೀರ್ಪನ್ನು ಎತ್ತಿಹಿಡಿದ ಹೈಕೋರ್ಟ್‌. ಪ್ರಕರಣದ ವಿಚಾರಣೆಯನ್ನು ರಾಯ್‌ಬರೇಲಿಯ ವಿಶೇಷ ನ್ಯಾಯಾಲಯದಲ್ಲೇ ಪ್ರತ್ಯೇಕವಾಗಿ ನಡೆಸಬೇಕೆಂದು ಆದೇಶ.

ಫೆಬ್ರವಲಿ 2011: ಕ್ರಿಮಿನಲ್‌ ಪಿತೂರಿಯ ವಿಚಾರವನ್ನು ಪುನರುಜ್ಜೀವಗೊಳಿಸಬೇಕೆಂದು ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ ಸಿಬಿಐ.

ಏಪ್ರಿಲ್‌ 19, 2017: 2010ರಲ್ಲಿ ಹೈಕೋರ್ಟ್‌ ನೀಡಿದ್ದ ಆದೇಶವನ್ನು ರದ್ದುಗೊಳಿಸಿದ ಸುಪ್ರೀಂ ಕೋರ್ಟ್‌ ಆಡ್ವಾಣಿ, ಜೋಶಿ ಸೇರಿದಂತೆ ಇತರ 12 ಜನರ ಮೇಲೆ ಕ್ರಿಮಿನಲ್‌ ಪಿತೂರಿಯ ಆರೋಪಿಗಳನ್ನಾಗಿಸಿತು. ಇದಷ್ಟೇ ಅಲ್ಲದೆ,
ಎಫ್ಐಆರ್‌ 197 ಮತ್ತು 198ನ್ನು ಲಕ್ನೋದಲ್ಲಿನ ಸಿಬಿಐ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಬೇಕೆಂದೂ ಹಾಗೂ ಎರಡು ವರ್ಷದಲ್ಲಿ ವಿಚಾರಣೆ ಪೂರ್ಣಗೊಳ್ಳಬೇಕೆಂದು ಆದೇಶ ನೀಡಿತು.

ಮೇ 21, 2017: ಸುಪ್ರೀಂ ಕೋರ್ಟ್‌ ಆದೇಶದ ಪ್ರಕಾರ ವಿಚಾರಣೆ ಕೈಗೆತ್ತಿಕೊಂಡ ವಿಶೇಷ ಸಿಬಿಐ ನ್ಯಾಯಾಲಯ. ಜಾಮೀನು ಪಡೆಯಲು ಆರೋಪಿಗಳೆಲ್ಲರೂ ನ್ಯಾಯಾಲಯಕ್ಕೆ ಹಾಜರು. ಎರಡು ವರ್ಷವಾದರೂ ಮುಗಿಯದ ವಿಚಾರಣೆ.

ಮೇ 8, 2020: ಹೊಸ ಡೆಡ್‌ಲೈನ್‌ ನಿಗದಿ ಪಡಿಸಿದ ಸುಪ್ರೀಂ ಕೋರ್ಟ್‌. ಆಗಸ್ಟ್‌ 31, 2020ರ ವೇಳೆಗೆ ವಿಚಾರಣೆ ಪೂರ್ಣಗೊಳಿಸುವಂತೆ ಆದೇಶ. ಕೋವಿಡ್‌-19 ಕಾರಣದಿಂದ ಮತ್ತೆ ಒಂದು ತಿಂಗಳು(ಸೆಪ್ಟrಂಬರ್‌ 30) ಡೆಡ್‌ಲೈನ್‌ ಮುಂದೂಡಿಕೆ.

ಸೆಪ್ಟಂಬರ್‌ 1, 2020: ಪ್ರಕರಣದಲ್ಲಿ ಕೊನೆಯ ವಾದವನ್ನು ಆಲಿಸಿದ ಸಿಬಿಐ ವಿಶೇಷ ನ್ಯಾಯಾಲಯ.

ಸೆಪ್ಟೆಂಬರ್‌ 30, 2020: ಲಕ್ನೋ ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಎಸ್‌.ಕೆ. ಯಾದವ್‌ರಿಂದ ಅಯೋಧ್ಯೆಯ ವಿವಾದಿತ ಕಟ್ಟಡ ಧ್ವಂಸ ಪ್ರಕರಣದ ಅಂತಿಮ ತೀರ್ಪು ಪ್ರಕಟ.

ಪ್ರಮುಖ ಆರೋಪಿಗಳಾಗಿದ್ದ ಬಿಜೆಪಿಯ ಹಿರಿಯ ಮುಖಂಡ ಎಲ್‌.ಕೆ. ಆಡ್ವಾಣಿ, ಮುರಳಿ ಮನೋಹರ ಜೋಷಿ, ಉಮಾಭಾರತಿ ಸೇರಿದಂತೆ ಎಲ್ಲ ಆರೋಪಿಗಳು ನಿರ್ದೋಷಿಗಳೆಂದು ತೀರ್ಪು.

ಟಾಪ್ ನ್ಯೂಸ್

Gold Scam; ಪವಿತ್ರಾ ಸ್ನೇಹಿತೆ ಜತೆಗೆ ಕಾಣಿಸಿಕೊಂಡ ಚಿನ್ನ ವಂಚನೆ ಕೇಸ್‌ ಆರೋಪಿ ಶ್ವೇತಾ

Gold Scam; ಪವಿತ್ರಾ ಸ್ನೇಹಿತೆ ಜತೆಗೆ ಕಾಣಿಸಿಕೊಂಡ ಚಿನ್ನ ವಂಚನೆ ಕೇಸ್‌ ಆರೋಪಿ ಶ್ವೇತಾ

Video: ತನ್ನ ಮನೆಯ ಮುಂದೆಯೇ ಚಾಟಿಯಿಂದ ಹೊಡೆದುಕೊಂಡ ಕೆ.ಅಣ್ಣಾಮಲೈ…

Video: ತನ್ನ ಮನೆಯ ಮುಂದೆಯೇ ತನ್ನನ್ನು ಚಾಟಿಯಿಂದ ಹೊಡೆದುಕೊಂಡ ಅಣ್ಣಾಮಲೈ…

Madhya Pradesh Education Minister’s substitute statement sparks political storm

Substitutes: ರಾಜಕೀಯ ಬಿರುಗಾಳಿ ಎಬ್ಬಿಸಿದ ಮಧ್ಯಪ್ರದೇಶ ಶಿಕ್ಷಣ ಸಚಿವರ ಬದಲಿ ಹೇಳಿಕೆ

ಆನಂದಪುರ: ಬೆಳ್ಳಂಬೆಳಗ್ಗೆ ತೋಟಕ್ಕೆ ಕಾಡಾನೆಗಳ ಲಗ್ಗೆ… ಗ್ರಾಮಸ್ಥರಲ್ಲಿ ಆತಂಕ

ಆನಂದಪುರ: ಬೆಳ್ಳಂಬೆಳಗ್ಗೆ ತೋಟಕ್ಕೆ ಕಾಡಾನೆಗಳ ಲಗ್ಗೆ… ಗ್ರಾಮಸ್ಥರಲ್ಲಿ ಆತಂಕ

ಕೋಳಿ ಅಂಕಕ್ಕೆ ಪೊಲೀಸ್‌ ದಾಳಿ: ಗುರಿಕಾರರಿಂದ ವ್ಯಾಘ್ರ ಚಾಮುಂಡಿ ದೈವಕ್ಕೆ ಮೊರೆ

ಕೋಳಿ ಅಂಕಕ್ಕೆ ಪೊಲೀಸ್‌ ದಾಳಿ: ಗುರಿಕಾರರಿಂದ ವ್ಯಾಘ್ರ ಚಾಮುಂಡಿ ದೈವಕ್ಕೆ ಮೊರೆ

National Mourning: Postponement of Mangaluru Beach Festival

National Mourning: ಮಂಗಳೂರಿನ ಬೀಚ್‌ ಉತ್ಸವ ಮುಂದೂಡಿಕೆ

Clown Kohli: ವಿರಾಟ್‌ ಕೊಹ್ಲಿಗೆ ಅವಮಾನ ಮಾಡಿದ ಆಸೀಸ್‌ ಮಾಧ್ಯಮಗಳು!

Clown Kohli: ವಿರಾಟ್‌ ಕೊಹ್ಲಿಗೆ ಅವಮಾನ ಮಾಡಿದ ಆಸೀಸ್‌ ಮಾಧ್ಯಮಗಳು!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Video: ತನ್ನ ಮನೆಯ ಮುಂದೆಯೇ ಚಾಟಿಯಿಂದ ಹೊಡೆದುಕೊಂಡ ಕೆ.ಅಣ್ಣಾಮಲೈ…

Video: ತನ್ನ ಮನೆಯ ಮುಂದೆಯೇ ತನ್ನನ್ನು ಚಾಟಿಯಿಂದ ಹೊಡೆದುಕೊಂಡ ಅಣ್ಣಾಮಲೈ…

Madhya Pradesh Education Minister’s substitute statement sparks political storm

Substitutes: ರಾಜಕೀಯ ಬಿರುಗಾಳಿ ಎಬ್ಬಿಸಿದ ಮಧ್ಯಪ್ರದೇಶ ಶಿಕ್ಷಣ ಸಚಿವರ ಬದಲಿ ಹೇಳಿಕೆ

ಮಾರ್ಗದರ್ಶಕರನ್ನು ಕಳೆದುಕೊಂಡುಕೊಂಡಿದ್ದೇವೆ… ಮನಮೋಹನ್ ಸಿಂಗ್ ನಿಧನಕ್ಕೆ ರಾಹುಲ್ ಸಂತಾಪ

ನನ್ನ ಮಾರ್ಗದರ್ಶಕರನ್ನು ಕಳೆದುಕೊಂಡಿದ್ದೇನೆ… ಮಾಜಿ ಪ್ರಧಾನಿ ನಿಧನಕ್ಕೆ ರಾಹುಲ್ ಸಂತಾಪ

Patna: “ರಘುಪತಿ ರಾಘವ’ ಭಜನೆ ಹಾಡಿದ ಗಾಯಕಿ ವಿರುದ್ಧ ಪ್ರತಿಭಟನೆ: ಹಾಡುಗಾರ್ತಿ ಕ್ಷಮೆ

Patna: “ರಘುಪತಿ ರಾಘವ’ ಭಜನೆ ಹಾಡಿದ ಗಾಯಕಿ ವಿರುದ್ಧ ಪ್ರತಿಭಟನೆ: ಹಾಡುಗಾರ್ತಿ ಕ್ಷಮೆ

Canada: ಮಾನವ ಕಳ್ಳಸಾಗಣೆಯಲ್ಲಿ ಕೆನಡಾದ 260 ಕಾಲೇಜು! ವಿದ್ಯಾರ್ಥಿ ವೀಸಾ ಮೂಲಕ ಆಮಿಷ

Canada: ಮಾನವ ಕಳ್ಳಸಾಗಣೆಯಲ್ಲಿ ಕೆನಡಾದ 260 ಕಾಲೇಜು! ವಿದ್ಯಾರ್ಥಿ ವೀಸಾ ಮೂಲಕ ಆಮಿಷ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Gold Scam; ಪವಿತ್ರಾ ಸ್ನೇಹಿತೆ ಜತೆಗೆ ಕಾಣಿಸಿಕೊಂಡ ಚಿನ್ನ ವಂಚನೆ ಕೇಸ್‌ ಆರೋಪಿ ಶ್ವೇತಾ

Gold Scam; ಪವಿತ್ರಾ ಸ್ನೇಹಿತೆ ಜತೆಗೆ ಕಾಣಿಸಿಕೊಂಡ ಚಿನ್ನ ವಂಚನೆ ಕೇಸ್‌ ಆರೋಪಿ ಶ್ವೇತಾ

Video: ತನ್ನ ಮನೆಯ ಮುಂದೆಯೇ ಚಾಟಿಯಿಂದ ಹೊಡೆದುಕೊಂಡ ಕೆ.ಅಣ್ಣಾಮಲೈ…

Video: ತನ್ನ ಮನೆಯ ಮುಂದೆಯೇ ತನ್ನನ್ನು ಚಾಟಿಯಿಂದ ಹೊಡೆದುಕೊಂಡ ಅಣ್ಣಾಮಲೈ…

Madhya Pradesh Education Minister’s substitute statement sparks political storm

Substitutes: ರಾಜಕೀಯ ಬಿರುಗಾಳಿ ಎಬ್ಬಿಸಿದ ಮಧ್ಯಪ್ರದೇಶ ಶಿಕ್ಷಣ ಸಚಿವರ ಬದಲಿ ಹೇಳಿಕೆ

Ex PM:ಪ್ರಚಾರದಿಂದ ದೂರ- ದೇಶ ಕಂಡ ಸರಳ, ಸಜ್ಜನಿಕೆಯ ಮೊದಲ ಆರ್ಥಿಕ ತಜ್ಞ ಪ್ರಧಾನಿ

Ex PM:ಪ್ರಚಾರದಿಂದ ದೂರ- ದೇಶ ಕಂಡ ಸರಳ, ಸಜ್ಜನಿಕೆಯ ಮೊದಲ ಆರ್ಥಿಕ ತಜ್ಞ ಪ್ರಧಾನಿ

ಆನಂದಪುರ: ಬೆಳ್ಳಂಬೆಳಗ್ಗೆ ತೋಟಕ್ಕೆ ಕಾಡಾನೆಗಳ ಲಗ್ಗೆ… ಗ್ರಾಮಸ್ಥರಲ್ಲಿ ಆತಂಕ

ಆನಂದಪುರ: ಬೆಳ್ಳಂಬೆಳಗ್ಗೆ ತೋಟಕ್ಕೆ ಕಾಡಾನೆಗಳ ಲಗ್ಗೆ… ಗ್ರಾಮಸ್ಥರಲ್ಲಿ ಆತಂಕ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.