BBK11: ಮನೆಯವರ ಸಲಹೆ – ಸಂದೇಶ ಕೇಳಿ ಸ್ಪರ್ಧಿಗಳಿಗೆ ಹೊಸ ಉತ್ಸಾಹ ತುಂಬಿದ ಬಿಗ್ ಬಾಸ್
Team Udayavani, Nov 2, 2024, 7:50 AM IST
ಬೆಂಗಳೂರು: ಬಿಗ್ ಬಾಸ್ ಮನೆಯಲ್ಲಿ ತಾಳ್ಮೆಯ ಆಟ ನಡೆಯುತ್ತಿದೆ. ಯಾರು ತಾಳ್ಮೆಯಿಂದ ಇರುತ್ತಾರೋ ಅವರಿಗೆ ಅವರ ಮನೆಯವರಿಂದ ಸಂದೇಶ ಬರಲಿದೆ.
ಈ ಚಟುವಟಿಕೆಯಲ್ಲಿ ಧನರಾಜ್ ಅವರು ಏಕಾಗ್ರತೆಯನ್ನು ಕಳೆದುಕೊಂಡಿದ್ದು, ಮನೆಯವರಿಂದ ಬರುವ ಸಂದೇಶವನ್ನು ಕಳೆದುಕೊಂಡು ಕಣ್ಣೀರಿಟ್ಟಿದ್ದಾರೆ.
ಮಾಸ್ಕ್ ಹಾಕಿಕೊಂಡು ದೊಡ್ಮನೆಯೊಳಗೆ ಬರುವ ಜನ ಸ್ಪರ್ಧಿಗಳ ಏಕಾಗ್ರತೆಗೆ ಭಂಗ ತರುವ ಪ್ರಯತ್ನ ಮಾಡಿದ್ದಾರೆ.
ಗೌತಮಿ ಅವರಿಗೆ ಮನೆಯವರ ಪತ್ರ ಬಂದಿದ್ದು, ಅದನ್ನು ಓದಿ ಗೌತಮಿ ಭಾವುಕರಾಗಿದ್ದಾರೆ. ಹನುಮಂತು, ಚೈತ್ರಾ, ಮಾನಸ ಅವರಿಗೆ ಯಾವುದೇ ಸಂದೇಶ ಬಂದಿಲ್ಲ.
ಧರ್ಮ ಕೀರ್ತಿರಾಜ್, ಶಿಶಿರ್, ಮೋಕ್ಷಿತಾ, ಮಂಜು, ತಿವಿಕ್ರಮ್, ಭವ್ಯ ಕೂಡ ಮನೆಯವರ ಪತ್ರವನ್ನು ಓದಿದ್ದಾರೆ. ಮೊದಲ ವಾರ ಬಿಗ್ ಬಾಸ್ ಮನೆಯಿಂದ ಆಚೆ ಬಂದ ಯುಮನಾ ಅವರು ಸರ್ಪ್ರೈಸ್ ಆಗಿ ಬಿಗ್ ಬಾಸ್ ಮನೆಗೆ ಬಂದು ಕೆಲ ಕಾಲ ಮನೆಯವರೊಂದಿಗೆ ಕಾಲ ಕಳೆದಿದ್ದಾರೆ.
ಅಪ್ಪ – ಅಮ್ಮನನ್ನು ಕಳೆದುಕೊಂಡಿರುವ ಐಶ್ವರ್ಯಾ ಅವರಿಗೆ ಬಿಗ್ ಬಾಸ್ ತಮ್ಮ ಮನದಾಳದಿಂದ ಪತ್ರ ಬರೆದಿದ್ದು, ನೀವು ನಮ್ಮ ಮನೆಯ ಸದಸ್ಯೆ, ನಿಮ್ಮೊಂದಿಗೆ ನಾವೆಲ್ಲರೂ ಇದ್ದೇವೆ ಎಂದು ಧೈರ್ಯ ತುಂಬಿದ್ದಾರೆ.
ಮನೆಯವರ ಸಂದೇಶ – ಸಲಹೆ ಕೇಳಿದ ದೊಡ್ಮನೆ ಸ್ಪರ್ಧಿಗಳಿಗೆ ಬಿಗ್ ಬಾಸ್ ಉತ್ಸಾಹ ತುಂಬಿದೆ. ಇಷ್ಟು ದಿನ ಮೋಟಿವೇಷನ್ ಗಾಗಿ ಕಾಯುತ್ತಿದ್ದ ಮನೆಮಂದಿಗೆ ಮನೆಯವರ ಪತ್ರ- ಧ್ವನಿಯಿಂದಾಗಿ ಆಟಕ್ಕೆ ಹೊಸ ಹುಮ್ಮಸ್ಸು ನೀಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BBK11: ಮಾನಸ ಭಾರೀ ಸೌಂಡ್ ಮಾತ್ರ, ಬಳಿಕ ಠುಸ್ ಬಾಂ*ಬ್ ಎಂದ ಹನುಮಂತು!
BBK11: ಬಿಗ್ ಬಾಸ್ ಮನೆಯಲ್ಲಿ ಅಸಲಿ ಆಟ ಶುರು ಮಾಡಿದ ಹನುಮಂತು: 2ನೇ ಬಾರಿ ಕ್ಯಾಪ್ಟನ್
BBK11: 11 ವರ್ಷದ ಬಿಗ್ಬಾಸ್ ಜರ್ನಿಯಲ್ಲಿ ಕಿಚ್ಚ ಗೈರಾಗಿದ್ದು ಎಷ್ಟು ಬಾರಿ, ಯಾಕೆ?
BBK11: ಯಾರದೋ ಮನೆಯಲ್ಲಿ ಪಾತ್ರೆ ತಿಕ್ಕುತ್ತಿದ್ದೆ.. ದೊಡ್ಮನೆಯಲ್ಲಿ ಕಣ್ಣೀರಿಟ್ಟ ಚೈತ್ರಾ
BBK11: ನಾಲ್ಕನೇ ವಾರದಲ್ಲಿ ಬಿಗ್ ಬಾಸ್ ಮನೆಯಿಂದ ಆಚೆ ಬರುವುದು ಯಾರು?
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.